All posts by nagaraj11081993

ನಿಲ್ಲದ ಮಾನವ-ಆನೆ ಸಂಘರ್ಷ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ, ಭುಗಿಲೆದ್ದ ಆಕ್ರೋಶ – Kannada News | Kodagu Tragedy: Wild Elephant Kills PUC Student; Human Elephant Conflict Escalates

ಕೊಡಗು, ಮಾರ್ಚ್​​ 01: ಆ ವಿದ್ಯಾರ್ಥಿನಿ ಈಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದಳು. ಇನ್ನೆರಡು ತಿಂಗಳು ರಜೆಯನ್ನ ಆರಾಮವಾಗಿ ಕಳೆಯುವ ಆಸೆಯಲ್ಲಿದ್ದಳು. ನಿನ್ನೆ ಕೂಡ ಅಪ್ಪ-ಅಮ್ಮನ ಜೊತೆಗೆ ಬೇಗ ಮನೆ ಸೇರುವ ಆಸೆಯಲ್ಲಿದ್ದಳು. ಆದರೆ ಕಾಡಾನೆ (Elephant) ರೂಪದಲ್ಲಿ ಬಂದ ಯಮರಾಯ ಆ ಮುಗ್ಧ ಯುವತಿಯನ್ನ ಬಲಿ (death) ಪಡೆದಿದೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಘಟನೆ ನಡೆದಿದೆ.

ಕ್ಷಣಾರ್ಧದಲ್ಲಿ ವಿದ್ಯಾರ್ಥಿನಿಯ ಜೀವ ತೆಗೆದ ಕಾಡಾನೆ

ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ದಾರುಣ ಬಲಿಯಾಗಿದ್ದಾಳೆ. ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ನಿನ್ನೆ ಸಂಜೆ ನಡೆದ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಪೂಜ್ಯ ಸಾವನ್ನಪ್ಪಿದ್ದಾಳೆ. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದಿದ್ದೇ ತಡ ಅಷ್ಟರಲ್ಲಿ ಕತ್ತಲಿನಲ್ಲಿ ಹಿಂಬಂದಿಯಿಂದ ದಾಳಿ ನಡೆಸಿದ ಕಾಡಾನೆ, ಪೂಜ್ಯಳ ದೇಹವನ್ನ ತುಳಿದು ಸ್ಥಳದಲ್ಲೇ ಸಾಯಿಸಿದೆ. ಮಗಳ ಕಿರುಚಾಟ ಕಂಡು ತಾಯಿ ಎಷ್ಟೇ ಬೊಬ್ಬೆ ಹೊಡೆದರೂ ಪ್ರಯೋಜನವಾಗಿಲ್ಲ, ಕ್ಷಣಾರ್ಧದಲ್ಲಿ ಕಾಡಾನೆ ವಿದ್ಯಾರ್ಥಿನಿಯ ಜೀವ ತೆಗೆದಿದೆ.

ಇದನ್ನೂ ಓದಿ: ವಿರಾಜಪೇಟೆ: ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!

ಪತ್ನಿ ಮತ್ತು ಮಗಳನ್ನ ಬೈಕ್​ನಿಂದ ಇಳಿಸಿ ಬೈಕ್​ ನಿಲ್ಲಿಸಲು ಸ್ವಲ್ಪ ದೂರು ಹೋಗಿದ್ದ ತಂದೆ ಚಂಗಪ್ಪ ಅವರಿಗೆ ಪತ್ನಿ ಮತ್ತು ಮಗಳ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಅನಾಹುತ ನಡೆದು ಹೋಗಿತ್ತು. ಮಗಳ ರಕ್ತಸಿಕ್ತ ದೇಹವನ್ನ ಅಪ್ಪಿಕೊಂಡು ಪತ್ನಿ ದೇವಕಿ ರೋಧಿಸುತ್ತಿದ್ದರು. ಈ ಭಾಗದಲ್ಲಿ ಈ ಒಂಟಿ ಆನೆ ನಿರಂತರವಾಗಿ ಓಡಾಡುತ್ತಿದೆ. ಜನರು ಕಾಡಾನೆಯಿಂದ ಈ ಹಿಂದೆಯೂ ಬಹಳಷ್ಟು ಬಾರಿ ತಪ್ಪಿಸಿಕೊಂಡಿದ್ದರು. ಆದರೆ ಇಂದು ಪೂಜ್ಯಳ ಅದೃಷ್ಟ ಸರಿ ಇರಲಿಲ್ಲ.

ಸರ್ಕಾರದಿಂದ 20 ಲಕ್ಷ ರೂ ಪರಿಹಾರ 

ಮಡಿಕೇರಿ ಡಿಎಫ್​ಒ ಅಭಿಷೇಕ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಕಾಡಾನೆಯನ್ನ ಸೆರೆ ಹಿಡಿಯಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮೃತಳ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರೂ ಪರಿಹಾರ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನ ಸಾಯುವುದೇ ಕಾಡು ಪ್ರಾಣಿ ದಾಳಿಯಿಂದ!

ಕಾಡಾನೆಗಳು ಮಾನವರು ವಾಸಿಸುವ ಪ್ರದೇಶಗಳತ್ತ ಬಾರದಂತೆ ತಡೆಯಲು ವೈಜ್ಞಾನಿಕ ಕ್ರಮ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಇಂತಹ ಅನ್ಯಾಯದ ಸಾವುಗಳು ಮುಂದುವರಿಯುತ್ತವೆ. ಒಟ್ಟಾರೆ ಕಾಡು ನಾಡು ಸಂಘರ್ಷದಲ್ಲಿ ಅಮಾಯಕ ವಿದ್ಯಾರ್ಥಿನಿ ಬಲಿಯಾಗಿದ್ದು ಮಾತ್ರ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

185 ರನ್‌ಗಳಿಂದ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ; ಹೀಲಿಗೆ ಸ್ಮರಣೀಯ ವಿದಾಯ – Kannada News | India Women’s ODI Series Loss: Australia Sweeps 3 0, Healy Bids Farewell with 158

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಶ್ವ ಚಾಂಪಿಯನ್ ಭಾರತೀಯ ಮಹಿಳಾ ತಂಡ ಹೀನಾಯವಾಗಿ ಸೋತಿದೆ. ಇಡೀ ಸರಣಿಯಲ್ಲಿ ಪಾರುಪತ್ಯ ಸಾಧಿಸಿದ ಆತಿಥೇಯ ಆಸ್ಟ್ರೇಲಿಯಾ, ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಮಾರ್ಚ್ 1 ರ ಭಾನುವಾರ ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 409 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 224 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು 185 ರನ್‌ಗಳ ಬೃಹತ್ ಅಂತರದಿಂದ ಸೋತಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾದ ನಾಯಕಿ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಅಲಿಸಾ ಹೀಲಿ ತಮ್ಮ ಏಕದಿನ ವೃತ್ತಿಜೀವನಕ್ಕೆ ವಿದಾಯ ಹೇಳಿದರು.

ಹೀಲಿ-ಮೂನಿ ಸ್ಫೋಟಕ ಶತಕ

ಸರಣಿ ಆರಂಭವಾಗುವ ಮೊದಲೇ, ಅಲಿಸಾ ಹೀಲಿ ಇದು ತಮ್ಮ ಕೊನೆಯ ಸರಣಿ ಎಂದು ಘೋಷಿಸಿದ್ದರು. ಅದರಂತೆ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ಸಂಚಲನ ಮೂಡಿಸಿದ ಹೀಲಿ ತಮ್ಮ ತಂಡಕ್ಕೆ ತ್ವರಿತ ಆರಂಭವನ್ನು ನೀಡಿದರು. ಹೀಲಿ ಅಬ್ಬರದ ಪರಿಣಾಮದಿಂದಾಗಿ ಆಸೀಸ್ ತಂಡ 16 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ಇದೇ ವೇಳೆ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹೀಲಿ, 79 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಶತಕ ಪೂರೈಸಿದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಹೀಲಿ ಕೇವಲ 98 ಎಸೆತಗಳಲ್ಲಿ 158 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಹೀಲಿ ಅವರ ಈ ಇನ್ನಿಂಗ್ಸ್‌ನಲ್ಲಿ 27 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು.

ಹೀಲಿ ಜೊತೆಗೆ ಬೆತ್ ಮೂನಿ ಕೂಡ ಅದ್ಭುತ ಶತಕ ಬಾರಿಸಿ ತಂಡವನ್ನು 400 ರನ್​ಗಳ ಗಡಿ ದಾಟಿಸಿದರು. ಮೂನಿ 106 ರನ್ ಗಳಿಸಿ ಅಜೇಯರಾಗಿ ಉಳಿದರೆ, ಜಾರ್ಜಿಯಾ ವಾಲ್ ಕೂಡ 62 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ನಿಕೋಲಾ ಕ್ಯಾರಿ ಕೇವಲ 15 ಎಸೆತಗಳಲ್ಲಿ 34 ರನ್ ಬಾರಿಸಿದರು. ಭಾರತದ ಪರ ಸ್ನೇಹ್ ರಾಣಾ 10 ಓವರ್‌ಗಳಲ್ಲಿ 66 ರನ್‌ ನೀಡಿ 2 ವಿಕೆಟ್‌ಗಳನ್ನು ಕಬಳಿಸಿದರು.

ಸತತ 3ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ

ಈ ಗುರಿ ಭಾರತ ತಂಡಕ್ಕೆ ಎಂದಿಗೂ ಸುಲಭವಾಗಿರಲಿಲ್ಲ, ಆದರೆ ಈ ಗುರಿಯನ್ನು ಬೆನ್ನಟ್ಟುವಲ್ಲಿ ಅವರಿಗಿದ್ದ ಯಾವುದೇ ಭರವಸೆ ಎರಡನೇ ಓವರ್‌ನಲ್ಲಿ ಸ್ಮೃತಿ ಮಂಧಾನ ಖಾತೆ ತೆರೆಯದೆಯೇ ಔಟಾದಾಗ ಮಾಯವಾಯಿತು. ನಂತರ ಪ್ರತೀಕಾ ರಾವಲ್ ಮತ್ತು ಜೆಮಿಮಾ ರೊಡ್ರಿಗಸ್ ಆಕ್ರಮಣಕಾರಿ ಜೊತೆಯಾಟವನ್ನು ರೂಪಿಸಿದರು. ಆದರೆ ಪ್ರತೀಕಾ ಔಟಾದ ನಂತರ ತಂಡದ ವಿಕೆಟ್‌ಗಳು ನಿಯಮಿತ ಅಂತರದಲ್ಲಿ ಪತನಗೊಂಡವು. ಅಂತಿಮವಾಗಿ ಹಾಲಿ ಏಕದಿನ ಚಾಂಪಿಯನ್ ಟೀಂ ಇಂಡಿಯಾ 45.1 ಓವರ್‌ಗಳಲ್ಲಿ ಕೇವಲ 224 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ನಾಯಕಿ ಹೀಲಿಗೆ ಸ್ಮರಣೀಯ ವಿದಾಯ ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಫಾರೂಕ್ ಸನದಿ ಕೊಲೆ ರಹಸ್ಯ ಬಯಲು: ಪ್ರೇಯಸಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಹತ್ಯೆಗೈದ ಪ್ರಿಯಕರ – Kannada News | Big Twist To Gadag faruq sanadi Murder Case: Man murder For engagement with His Girl

ಗದಗ, (ಮಾರ್ಚ್ 01): ಜಿಲ್ಲೆಯ ಲಕ್ಷ್ಮೇಶ್ವರ ಹೊರವಲಯದ ಜಮೀನಲ್ಲಿ ಯುವಕ ಫಾರೂಕ್ ಸನದಿ (faruq sanadi Murder Case) ಎನ್ನುವಾತನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದು, ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಿಶ್ವಿತಾರ್ಥ ಮಾಡಿಕೊಂಡಿದ್ದ ಹುಡುಗಿ ಪ್ರಿಯಕರನೇ ಫಾರೂಕ್ ಸನದಿಯನ್ನು ಕೊಲೆ ಮಾಡಿರುವುದು ಎಂದು ಗೊತ್ತಾಗಿದೆ. ಪ್ರಿಯಕರ ದಾವಲಸಾಬ್ ಹಾಗೂ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಹತ್ಯೆ ನಡೆದ 24 ಗಂಟೆಯಲ್ಲಿ ನಾಲ್ಕು ಜನರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಪೊಲೀಸರು ತಮ್ಮದೇ ಶೈಲಿಯಲ್ಲಿ ಹಂತಕರನ್ನು ವಿಚಾರಣೆಗೊಳಪಡಿಸಿದಾಗ ತನ್ನ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಫಾರೂಕ್ ಸನದಿ ಕೊಲೆ ಮಾಡಿದ್ದಾಗಿ ದಾವಲಸಾಬ್ ಬಾಯ್ಬಿಟ್ಟಿದ್ದಾನೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ಶಿಗ್ಲಿ ಗ್ರಾಮದ ನಿವಾಸಿಯಾದ‌ 25 ವರ್ಷದ ಫಾರೂಕ್ ಸನದಿ ಎನ್ನುವಾತ ಮೂರು ತಿಂಗಳ ಹಿಂದೆ ಯುವತಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆದ್ರೆ ಯುವತಿ ಹಾಗೂ ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ನಿವಾಸಿಯಾದ ದಾವಲಸಾಬ್ ಮಕಂದಾರ್ ಲವ್ ಮಾಡುತ್ತಿದ್ದಳು. ಹೀಗಾಗಿ ದಾವಲಸಾಬ್, ನಿಶ್ವಿತಾರ್ಥ ಮಾಡಿಕೊಡಿದ್ದ ಫಾರೂಕ್ ಸನದಿಯನ್ನು ಮಾತನಾಡಲೆಂದು ಜಮೀನಿಗೆ ಕರೆಯಿಸಿಕೊಂಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿದೆ. ಬಳಿಕ ಗಲಾಟ ವಿಕೋಪಕ್ಕೆ ತಿರುಗಿದ್ದು, ಇದೇ ಕೋಪದಲ್ಲಿ ಕೊಡಲಿಯಿಂದ ಫಾರೂಕ್ ಸವದಿಯನ್ನು ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದರು.

ಇದನ್ನೂ ಓದಿ: ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು

ಘಟನೆ ಹಿನ್ನೆಲೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಜಮೀನುವೊಂದರಲ್ಲಿ ನಿನ್ನೆ (ಫೆಬ್ರವರಿ 28) ಫಾರೂಕ್ ಸನದಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಕತ್ತು ಕೊಯ್ದು ಬಳಿಕ ಹತ್ಯೆ ಮಾಡಿದ್ದರು. ಕೊಲೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್ರು ಹಂತಕರ ಸುಳಿವಿಗಾಗಿ ತೀವ್ರ ಶೋಧ ನಡೆಸಿದ್ದರು. ಸ್ಥಳಕ್ಕೆ ಗದಗ ಎಸ್ಪಿ ರೋಹನ‌್ ಜಗದೀಶ್, ಡಿವೈಎಸ್ಪಿ ಮುರ್ತುಜ ಖಾದ್ರಿ ಸೇರಿ ಅಧಿಕಾರಿಗಳು ದೌಡಾಯಿಸಿ ಹಂತಕರ ಪತ್ತೆಗೆ ತಂಡಗಳು ರಚನೆ ಮಾಡಿದ್ದರು. ಬಳಿಕ ಪೊಲೀಸರು ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಿ ಅಂತಿಮವಾಗಿ ಘಟನೆ ನಡೆದ 24 ಗಂಟೆಗಳಲ್ಲಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮದುವೆಯಾಗಿ ಸುಂದರ ಜೀವನ ಮಾಡಬೇಕು ಎಂದು ಕನಸು ಕಂಡಿದ್ದ ಫಾರೂಕ್ ಸಾವಿನ ಮನೆ ಸೇರಿದ್ದಾನೆ. ಏನು ತಪ್ಪು ಮಾಡದ ಯುವಕ ಹತ್ಯೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿಯಲ್ಲಿ ಆಯಿಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ; ತೈಲ ಹಡಗಿನಲ್ಲಿದ್ದರು 15 ಮಂದಿ ಭಾರತೀಯರು – Kannada News | Oil tanker with 15 Indian crew members attacked at Strait of Hormuz

ಮಸ್ಕಟ್, ಮಾರ್ಚ್ 1: ಓಮನ್​ನ ಡುಕಮ್ ಬಂದರಿನ (Duqm Port) ಮೇಲೆ ಇರಾನ್​ನ ಡ್ರೋನ್ ದಾಳಿ ನಡೆದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಸಾಗಿ ಹೋಗುತ್ತಿದ್ದ ತೈಲ ಹಡಗೊಂದರ ಮೇಲೆ ದಾಳಿಯಾದ ಘಟನೆ ವರದಿಯಾಗಿದೆ. ಆಗ್ನೇಯ ಏಷ್ಯನ್ ದೇಶವಾದ ಪಲಾವ್​ಗೆ ಸೇರಿದ ಆಯಿಲ್ ಟ್ಯಾಂಕರ್ ಓಮನ್​ ಮುಸಂದಮ್ ಬಳಿ ಕಿರಿದಾದ ಸಮುದ್ರ ಮಾರ್ಗದಲ್ಲಿ ಸಾಗುತ್ತಿದ್ದಾಗ ಈ ದಾಳಿಯಾಗಿದೆ. ಆದರೆ, ಅದರ ಮೇಲೆ ಇರಾನ್ ದಾಳಿ ಮಾಡಿದ್ದಾ ಎಂಬುದು ಖಚಿತವಿಲ್ಲ.

ಪಲಾವ್ ಬಾವುಟವಿದ್ದ ಮತ್ತು ಸ್ಕೈಲೈಟ್ ಹೆಸರಿನ ಈ ಆಯಿಲ್ ಟ್ಯಾಂಕರ್​ನಲ್ಲಿ 20 ಮಂದಿ ಸಿಬ್ಬಂದಿ ಇದ್ದು, ಅವರಲ್ಲಿ 15 ಮಂದಿ ಭಾರತೀಯರೇ ಇದ್ದಾರೆ. ಇನ್ನೈದು ಮಂದಿ ಇರಾನೀಯರೇ ಆಗಿದ್ದಾರೆ. ಮುಸನ್​ಡಮ್​ನ ಖಸಬ್ ಪೋರ್ಟ್​ನಿಂದ ಐದು ನಾಟಿಕಲ್ ಮೈಲಿಯ ದೂರದಲ್ಲಿ ಈ ದಾಳಿಯಾಗಿದ್ದು, ಓಮನ್ ಪಡೆಗಳು ಕೂಡಲೇ ಆ ಹಡಗು ಹಾಗೂ ಸಿಬ್ಬಂದಿಯನ್ನು ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿ ಪೈಕಿ ನಾಲ್ವರಿಗೆ ವಿವಿಧ ತೀವ್ರತೆಯ ಗಾಯಗಳಾಗಿರುವುದು ಗೊತ್ತಾಗಿದೆ. ಅವರಿಗೆ ಚಿಕಿತ್ಸೆ ಕೊಡಲಾಗುತ್ತಿದೆ.

ಇದನ್ನೂ ಓದಿ: ಆಯತುಲ್ಲಾ ಖಮೇನಿ ಮೇಲೆ ದಾಳಿಗೆ ಶನಿವಾರ ಬೆಳಗಿನ ಸಮಯ ಆರಿಸಿದ್ದು ಯಾಕೆ? ಬೇರೆ ಇದ್ದ ಪ್ಲಾನ್ ಬದಲಾಗಿದ್ದು ಯಾಕೆ?

ಕುತೂಹಲ ಎಂದರೆ, ಇರಾನ್ ಮತ್ತು ಅಮೆರಿಕದ ನಡುವೆ ಚಕಮಕಿ ಶುರುವಾದ ಬಳಿಕ ಓಮನ್ ಬಳಿ ದಾಳಿಯಾಗಿದ್ದು ಇದೇ ಮೊದಲು. ಇತರ ಗಲ್ಫ್ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ, ಕತಾರ್, ಕುವೇತ್ ಮೇಲೆ ಇರಾನ್ ಪ್ರತಿದಾಳಿ ನಡೆಸುತ್ತಾ ಬಂದಿದೆಯಾದರೂ ಓಮನ್ ಅನ್ನು ಗುರಿ ಮಾಡಿದ್ದು ಇದೇ ಮೊದಲು. ಆದರೆ, ಓಮನ್​ನ ಮುಖ್ಯ ಭಾಗದ ಮೇಲೆ ಯಾವುದೇ ದಾಳಿಯಾಗಿಲ್ಲ.

ಹಾರ್ಮುಜ್ ಜಲಸಂಧಿ ಅಥವಾ ಸಮುದ್ರ ಮಾರ್ಗ ಬಹಳ ಕಿರಿದಾಗಿರುವ ಹಾದಿ. ಪರ್ಷಿಯಲ್ ಕೊಲ್ಲಿಯಿಂದ ಆರಂಭವಾಗಿ ಓಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರವನ್ನು ಇದು ಹಾದು ಹೋಗುತ್ತದೆ. ಇದು ಪ್ರಮುಖ ತೈಲ ಹಡಗುಗಳ ಸಾಗಣೆ ಮಾರ್ಗವಾಗಿದೆ. ಬಹಳ ಕಿರಿದಾದ್ದರಿಂದ ಸೂಕ್ಷ್ಮವೆಂದೂ ಪರಿಗಣಿಸಲಾಗಿದೆ.

ಇದನ್ನೂ ಓದಿ: ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?

ಜಗತ್ತಿನ ಐದನೇ ಒಂದು ಭಾಗದ ತೈಲ ಪೂರೈಕೆಗೆ ಬೇಕಾಗುವ ಸರಕು ಹಾರ್ಮುಜ್ ಸ್ಟ್ರೇಟ್ ಮೂಲಕವೇ ಸಾಗುತ್ತದೆ. ಹೀಗಾಗಿ, ಬಹಳ ಮಹತ್ವದ ಜಲಸಂಧಿ ಇದು. ಈ ಜಲಸಂಧಿಯ ಹೆಚ್ಚಿನ ನಿಯಂತ್ರಣವು ಇರಾನ್ ಮತ್ತು ಓಮನ್​ಗೆ ಇದೆ. ಯುಎಇ ಕೂಡ ಇದೇ ಜಲಸಂಧಿಯ ಒಂದು ಬದಿಯಲ್ಲಿ ಇದೆ.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

CBSE Exams Postponed: ಇರಾನ್-ಇಸ್ರೇಲ್ ಸಂಘರ್ಷ; ಈ ರಾಷ್ಟ್ರಗಳಲ್ಲಿ CBSE 10, 12 ನೇ ತರಗತಿ ಪರೀಕ್ಷೆ ಮುಂದೂಡಿಕೆ – Kannada News | CBSE Exams Postponed in Middle East Amid Iran Israel Tensions, 10th and 12th Boards

ಇರಾನ್ ಮತ್ತು ಇಸ್ರೇಲ್ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ನಡೆಯಬೇಕಿದ್ದ ಸಿಬಿಎಸ್‌ಇ (Central Board of Secondary Education) 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿರುವ ಸಿಬಿಎಸ್‌ಇ ಮಂಡಳಿ, ಗಲ್ಫ್ ದೇಶಗಳಲ್ಲಿ ಪರೀಕ್ಷೆ ಬರೆಯಲಿದ್ದ ಸಾವಿರಾರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ನಾಳೆಯಿಂದ(ಮಾರ್ಚ್ 2)  ಆರಂಭವಾಗಬೇಕಿದ್ದ ಪರೀಕ್ಷೆಗಳು ಮಧ್ಯಪ್ರಾಚ್ಯದ ಇರಾನ್, ಬಹ್ರೇನ್, ಕುವೈತ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಓಮನ್, ಕತಾರ್ ಈ ಏಳು ಪ್ರಮುಖ ದೇಶಗಳಲ್ಲಿ ಮುಂದೂಡಲಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕವೇ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

ಅಧಿಕೃತ ಪ್ರಕಟಣೆಯಲ್ಲಿ, “ವಿದ್ಯಾರ್ಥಿಗಳ ಸುರಕ್ಷತೆಯೇ ನಮಗೆ ಅತ್ಯಂತ ಮುಖ್ಯ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಾರ್ಚ್ 2ರ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು” ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ; ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್!

ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳು ಅಥವಾ ನಕಲಿ ಸುತ್ತೋಲೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಂಡಳಿ ಮನವಿ ಮಾಡಿದೆ. ಪರೀಕ್ಷೆಗಳ ಕುರಿತು ನಿಖರ ಮತ್ತು ಅಧಿಕೃತ ಮಾಹಿತಿಗಾಗಿ ಕೇವಲ ಸಿಬಿಎಸ್‌ಇ ಅಧಿಕೃತ ವೆಬ್‌ಸೈಟ್ cbse.gov.in ಅನ್ನು ಮಾತ್ರ ಪರಿಶೀಲಿಸುವಂತೆ ಸೂಚಿಸಲಾಗಿದೆ. ಈ ನಿರ್ಧಾರವು ತಾತ್ಕಾಲಿಕವಾದದ್ದಾಗಿದ್ದು, ಪರಿಸ್ಥಿತಿ ಸಾಮಾನ್ಯಗೊಂಡ ಬಳಿಕ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ: 

Source link

ಭೀಕರ ಅಪಘಾತ : ದೇವರ ದರ್ಶನಕ್ಕೆ ಹೋಗಿ ಬರುತ್ತಿದ್ದ ನವದಂಪತಿ ಸ್ಥಳದಲ್ಲೇ ಸಾವು – Kannada News | A Haveri based Newly Married Couple Dies In Road Accident in nh 48 Kadadahalli

ಹಾವೇರಿ, (ಮಾರ್ಚ್ 01): ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ (New Couple) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಕಾರ್ತಿಕ್ ಹೂಗಾರ(34), ಐಶ್ವರ್ಯಾ(30) ಮೃತ ದುರ್ದೈವಿಗಳು. ಕಾರ್ತಿಕ್​, ಐಶ್ವರ್ಯಾ 15 ದಿನಗಳಿಂದ ಅಷ್ಟೇ ಮದುವೆಯಾಗಿದ್ದು, ಹೊಸ ಸಂಸಾರ ಪ್ರಾರಂಭಿಸುವ ಮುನ್ನ ದೇವರ ದರ್ಶನಕ್ಕೆ ಹೋಗಿ ಒಳ್ಳೇದು ಮಾಡಪ್ಪ ಎಂದು ಬೇಡಿಕೊಂಡು ಊರಿಗೆ ವಾಪಸ್ ಆಗುತ್ತಿದ್ದರು. ಆದ್ರೆ, ವಿಧಿ ಅರ್ಧ ದಾರಿಯಲ್ಲೇ ನವದಂಪತಿಯನ್ನು ಬಲಿ ಪಡದುಕೊಂಡಿದೆ.

ಹಾವೇರಿ ನಗರದ ನಿವಾಸಿಯಾಗಿರುವ ಕಾರ್ತಿಕ್ ಹೂಗಾರ ಹಾಗೂ ಐಶ್ವರ್ಯಾ 15 ದಿನದ ಹಿಂದೆ ಹೊಸ ಬಾಳಿಗೆ ಕಾಲಿಟ್ಟಿದ್ದು, ಹೊಸತರಲ್ಲಿ ದೇವರ ಆಶೀರ್ವಾದ ಇರಲಿ ಎಂದು ದೇವಸ್ಥಾನಕ್ಕೆ ಹೋಗಿದ್ದರು. ಆದ್ರೆ, ನಿನ್ನೆ (ಫೆಬ್ರವರಿ 28) ದೇವರ ದರ್ಶನಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮದುವೆಯಾಗಿ ಕೇವಲ 15 ದಿನಗಳು ಆಗಿತ್ತು ಅಷ್ಟೇ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಚರಣೆ ನಡೆಸಿ ಕಾರಿನಿಂದ ಮೃತದೇಹ ಹೊರಕ್ಕೆ ತೆಗೆದಿದ್ದಾರೆ.

ಇದನ್ನೂ ನೋಡಿ: Lunar Eclipse: ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!

ಜೋಡಿ KA-63 M-0522 ವ್ಯಾಗನಾರ್ ಕಾರಿನಲ್ಲಿ ಹುಬ್ಬಳ್ಳಿ ಕಡೆಯಿಂದ ಶಿಗ್ಗಾಂವಿ ಕಡೆಗೆ ತೆರಳುತ್ತಿದ್ದು, ಈ ವೇಳೆ ಕಾರು ವೇಗವಾಗಿ ಹೋಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನು ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಕಾರಿನಲ್ಲಿದ್ದ ಇನ್ನಿಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ರವಾನೆ ಮಾಡಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೊಂದೆಡೆ ಇತ್ತ ಎರಡೂ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

DHFWS Recruitment 2026: ರಾಯಚೂರು DHFWSನಲ್ಲಿ ಆರೋಗ್ಯ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು – Kannada News | Raichur DHFWS Recruitment 2026: Junior Female Health Assistant Jobs – Apply Online Now!

ರಾಯಚೂರು ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವೊಂದು ಬಂದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ರಾಯಚೂರು ಅಧಿಕೃತ ಅಧಿಸೂಚನೆಯ ಮೂಲಕ ಜೂನಿಯರ್ ಮಹಿಳಾ ಆರೋಗ್ಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ವೃತ್ತಿಜೀವನ ರೂಪಿಸಬೇಕೆಂದು ಬಯಸುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಮಾರ್ಚ್ 11 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

  • ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ (DHFWS) ರಾಯಚೂರು
  • ಹುದ್ದೆಗಳ ಸಂಖ್ಯೆ: 20
  • ಉದ್ಯೋಗ ಸ್ಥಳ: ರಾಯಚೂರು
  • ಹುದ್ದೆಯ ಹೆಸರು: ಜೂನಿಯರ್ ಮಹಿಳಾ ಆರೋಗ್ಯ ಸಹಾಯಕಿ
  • ಮಾಸಿಕ ವೇತನ: 15,397 ರೂ.

ಶೈಕ್ಷಣಿಕ ಅರ್ಹತೆ:

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ, 12ನೇ ತರಗತಿ ಹಾಗೂ ಸಂಬಂಧಿತ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:

ಗರಿಷ್ಠ ವಯಸ್ಸು 40 ವರ್ಷಗಳಾಗಿದ್ದು, ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯಿಸಲಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಅರ್ಜಿಸಲ್ಲಿಸುವ ವಿಧಾನ:

ಮೊದಲಿಗೆ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ. ಶೈಕ್ಷಣಿಕ ಪ್ರಮಾಣಪತ್ರಗಳು, ಗುರುತಿನ ಚೀಟಿ, ವಯಸ್ಸಿನ ದೃಢೀಕರಣ ದಾಖಲೆಗಳು, ಅನುಭವ ಪ್ರಮಾಣಪತ್ರಗಳು ಹಾಗೂ ಇತ್ತೀಚಿನ ಫೋಟೋ ಸ್ಕ್ಯಾನ್ ಪ್ರತಿಗಳನ್ನು ಸಿದ್ಧವಾಗಿಡಿ.

ಅಧಿಕೃತ ಲಿಂಕ್ ಮೂಲಕ ಆನ್‌ಲೈನ್ ಅರ್ಜಿ ನಮೂನೆಯನ್ನು ತೆರೆದು, ಅಗತ್ಯ ವಿವರಗಳನ್ನು ಸರಿಯಾಗಿ ನಮೂದಿಸಿ ಹಾಗೂ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಕೊನೆಯಲ್ಲಿ ‘apply’ ಬಟನ್ ಒತ್ತಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಭವಿಷ್ಯ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆಯನ್ನು ಕ್ಯಾಪ್ಚರ್​ ಮಾಡಿ ಇಟ್ಟುಕೊಳ್ಳಿ. ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಇರುವ ಮಹಿಳೆಯರಿಗೆ ಇದು ಒಳ್ಳೆಯ ಅವಕಾಶವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:50 pm, Sun, 1 March 26

Source link

ಸೆಮಿಫೈನಲ್​ ರೇಸ್​ನಿಂದ ಹೊರಬಿದ್ದ ಪಾಕಿಸ್ತಾನಕ್ಕೆ ಸಿಗಲಿದೆ ದೊಡ್ಡ ಮೊತ್ತದ ಬಹುಮಾನ

Source link

ಹೋದ ಜೀವ ವಾಪಸ್‌ ಕೊಡ್ತೀರಾ? ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ – Kannada News | Bagalkote: KS Eshwarappa Sparks on CM Siddaramaiah at Hindu Samavesha

ಬಾಗಲಕೋಟೆ, ಮಾರ್ಚ್​​ 01: ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್​ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮಾಡಿದ್ದಾರೆ. ಮಸೀದಿಗಳಿಂದ ಕಲ್ಲು ತೂರಾಟ ನಡೆದರೆ ಅವುಗಳನ್ನು ಸೀಜ್ ಮಾಡಿ, ಮುಲ್ಲಾನನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇಲ್ಲದಿದ್ದರೆ, ಬಾಬರಿ ಮಸೀದಿ ಧ್ವಂಸವಾದಂತೆ ಕರ್ನಾಟಕದಲ್ಲಿಯೂ ಹಲವು ಮಸೀದಿಗಳು ಧ್ವಂಸವಾಗುವ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜಾಗತಿಕ ಫ್ಯಾಷನ್ ವೇದಿಕೆಯಲ್ಲಿ ಮಿಂಚಿದ ಶ್ರೀಲೀಲಾ: ವಿದೇಶಿ ಬ್ರ್ಯಾಂಡಿಗೆ ರಾಯಭಾರಿ – Kannada News | Sreeleela in Milan fashion week, She replaced Rashmika as Onitsuka Tiger brand ambassador

ಬೆಂಗಳೂರಿನ ಚೆಲುವೆ ನಟಿ ಶ್ರೀಲೀಲಾ (Sreeleela), ಸ್ಯಾಂಡಲ್​​ವುಡ್, ಟಾಲಿವುಡ್ ಬಳಿಕ ಈಗ ಬಾಲಿವುಡ್ ಮತ್ತು ಕಾಲಿವುಡ್​​ಗಳಲ್ಲಿ ಸಖತ್ ಹೆಸರು ಮಾಡುತ್ತಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಲ್ಲಿಯೂ ಬ್ಯುಸಿ ಆಗಿದ್ದ ಈ ಚೆಲುವೆ ಇದೀಗ ಫ್ಯಾಷನ್ ಲೋಕಕ್ಕೂ ಕಾಲಿರಿಸಿದ್ದಾರೆ. ಹಿಂದೆಲ್ಲ ಕೆಲ ಸಣ್ಣ-ಪುಟ್ಟ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದ ಶ್ರೀಲೀಲಾ ಇದೀಗ ವಿಶ್ವ ಪ್ರಸಿದ್ಧ ಫ್ಯಾಷನ್ ಶೋ ಆಗಿರುವ ಮಿಲಾನ್ ಫ್ಯಾಷನ್ ವೀಕ್​​​ನ ವೇದಿಕೆಯ ಮೇಲೆ ಬೆಕ್ಕಿನ ನಡಿಗೆ ನಡೆದಿದ್ದಾರೆ.

ಇತ್ತೀಚೆಗೆ ಇಟಲಿಯ ಮಿಲಾನ್‌ನಲ್ಲಿ ನಡೆದ ಪ್ರತಿಷ್ಠಿತ ‘ಮಿಲಾನ್ ಫ್ಯಾಶನ್ ವೀಕ್’ನಲ್ಲಿ ಪಾಲ್ಗೊಂಡು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಜಪಾನ್‌ನ ಪ್ರಸಿದ್ಧ ಬ್ರ್ಯಾಂಡ್ ‘ಒನಿಟ್ಸುಕಾ ಟೈಗರ್’ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಲೀಲಾ ವಿಭಿನ್ನ ಹಾಗೂ ಸ್ಟೈಲಿಶ್ ಉಡುಪಿನಲ್ಲಿ ಮಿಂಚಿದರು. ಕಪ್ಪು ಬಣ್ಣದ ಶಾರ್ಟ್ ಡ್ರೆಸ್ ಹಾಗೂ ಕಿತ್ತಳೆ ಬಣ್ಣದ ಓವರ್‌ಕೋಟ್ ಧರಿಸಿ ಸಖತ್ ಬೋಲ್ಡ್ ಆಗಿ ಪೋಸ್ ನೀಡಿದ್ದ ಶ್ರೀಲೀಲಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮಿಲಾನ್‌ನ ಐತಿಹಾಸಿಕ ಬೀದಿಗಳನ್ನು ತಮ್ಮ ಫ್ಯಾಶನ್ ರನ್‌ವೇ ಆಗಿ ಬಳಸಿಕೊಂಡ ನಟಿ, ಸೌತ್ ಸಿನಿಮಾರಂಗದ ಗ್ಲಾಮರ್ ಅನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ಈ ಹಿಂದೆ ‘ಒನಿಟ್ಸುಕಾ ಟೈಗರ್’ ಬ್ರ್ಯಾಂಡ್‌ನ ಭಾರತೀಯ ರಾಯಭಾರಿಯಾಗಿ ಕನ್ನಡದವರೇ ಆಗಿರುವ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಮಿಲಾನ್‌ನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿರುವುದು, ರಶ್ಮಿಕಾ ಅವರ ಸ್ಥಾನವನ್ನು ಶ್ರೀಲೀಲಾ ಪಡೆದಿದ್ದಾರೆಯೇ ಎಂಬ ಅನುಮಾನ ಮೂಡಿಸಿದೆ. ಹಲವು ವರದಿಗಳ ಪ್ರಕಾರ, ಬ್ರ್ಯಾಂಡ್ ತನ್ನ ಪ್ರಚಾರಕ್ಕಾಗಿ ಹೊಸ ಮುಖವನ್ನು ಪರಿಚಯಿಸಲು ಶ್ರೀಲೀಲಾ ಅವರನ್ನು ಆರಿಸಿಕೊಂಡಿದೆ ಎನ್ನಲಾಗುತ್ತಿದೆ. ಇದರಿಂದಾಗಿ ರಶ್ಮಿಕಾ ಮತ್ತು ಶ್ರೀಲೀಲಾ ನಡುವೆ ವೃತ್ತಿಪರ ಪೈಪೋಟಿ ಜೋರಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:ವೈದ್ಯೆಯಾಗಿ ಪ್ರತಿಜ್ಞೆ ಸ್ವೀಕರಿಸಿದ ನಟಿ ಶ್ರೀಲೀಲಾ: ವಿಡಿಯೋ

ಕೇವಲ ಫ್ಯಾಶನ್ ಲೋಕದಲ್ಲಷ್ಟೇ ಅಲ್ಲದೆ, ಸಿನಿಮಾರಂಗದಲ್ಲೂ ಶ್ರೀಲೀಲಾ ಭರ್ಜರಿ ಯಶಸ್ಸು ಕಾಣುತ್ತಿದ್ದಾರೆ. ಸದ್ಯ ಅವರು ಪವನ್ ಕಲ್ಯಾಣ್ ಅಭಿನಯದ ಹೈ-ವೋಲ್ಟೇಜ್ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಹಾಡುಗಳು ಈಗಾಗಲೇ ದೊಡ್ಡ ಹಿಟ್ ಆಗಿದ್ದು, ಶ್ರೀಲೀಲಾ ಅವರ ನೃತ್ಯ ಮತ್ತು ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಿನಿಮಾನಲ್ಲಿಯೂ ಅವರು ರಶ್ಮಿಕಾಗೆ ಸಖತ್ ಪೈಪೋಟಿಯನ್ನೇ ನೀಡುತ್ತಿದ್ದಾರೆ. ರಶ್ಮಿಕಾ ಬೇಡಿಕೆಯಲ್ಲಿದ್ದ ಟಾಲಿವುಡ್​​ ಮತ್ತು ಬಾಲಿವುಡ್ ಎರಡರಲ್ಲೂ ಶ್ರೀಲೀಲಾ ಮುನ್ನುಗ್ಗುತ್ತಿದ್ದು, ರಶ್ಮಿಕಾರ ಅವಕಾಶಗಳನ್ನೂ ಕಸಿದುಕೊಳ್ಳುತ್ತಿದ್ದಾರೆ. ಇದೀಗ ಫ್ಯಾಷನ್ ಬ್ರ್ಯಾಂಡ್​ ಅನ್ನೂ ಕಸಿದುಕೊಂಡಿದ್ದಾರೆ.

ಶ್ರೀಲೀಲಾ ಪ್ರಸ್ತುತ ‘ಉಸ್ತಾದ್ ಭಗತ್ ಸಿಂಗ್’, ಬಾಲಿವುಡ್​​ನ ‘ಆಶಿಖಿ 3’, ಸೈಫ್ ಅಲಿ ಖಾನ್ ಪುತ್ರನ ಜೊತೆಗೆ ಹೊಸ ಸಿನಿಮಾ, ರಣ್ವೀರ್ ಸಿಂಗ್ ಜೊತೆಗೆ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ತಮಿಳಿನಲ್ಲಿ ಸಾಯಿ ಪಲ್ಲವಿ ಜೊತೆಗೆ ಒಂದು ಸಿನಿಮಾ ಮತ್ತು ಡ್ರ್ಯಾಗನ್ ನಾಯಕ ಪ್ರದೀಪ್ ಅವರ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link