All posts by nagaraj11081993

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ?

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆ ಮತ್ತೆ ಮುಂದಕ್ಕೆ?

‘ಆರ್​​ಆರ್​​ಆರ್’ ಸಿನಿಮಾದ ಬಳಿಕ ರಾಮ್ ಚರಣ್ (Ram Charan) ನಟನೆಯ ಸತತ ಎರಡು ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಫ್ಲಾಪ್ ಆಗಿವೆ. ‘ಗೇಮ್ ಚೇಂಜರ್’ ಮತ್ತು ‘ಆಚಾರ್ಯ’ ಎರಡೂ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಇದೀಗ ರಾಮ್ ಚರಣ್ ಅವರು ಗೆಲುವಿನ ಹುಡುಕಾಟದಲ್ಲಿದ್ದಾರೆ. ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾ ಬಹುತೇಕ ಮುಗಿಸಿದ್ದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 30 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ನಿರ್ಮಾಪಕರೊಬ್ಬರು ಸಿನಿಮಾದ ಬಿಡುಗಡೆ ಮತ್ತೆ ಮುಂದೂಡಲ್ಪಟ್ಟಿರುವ ಬಗ್ಗೆ ಸುಳಿವು ನೀಡಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಅಸಲಿಗೆ ‘ಪೆದ್ದಿ’ ಸಿನಿಮಾ ಮಾರ್ಚ್ 27ರಂದೇ ಬಿಡುಗಡೆ ಆಗಬೇಕಿತ್ತು. ಆದರೆ ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 26ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಣೆ ಆಗಿತ್ತು. ಹಾಗಾಗಿ ಸಿನಿಮಾದ ಬಿಡುಗಡೆಯನ್ನು ಏಪ್ರಿಲ್ 30ಕ್ಕೆ ಮುಂದೂಡಲಾಯ್ತು. ಆದರೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಯ್ತು. ಆದರೆ ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಈಗ ಏಪ್ರಿಲ್ 30ರ ಬದಲಾಗಿ ಜೂನ್​​ನಲ್ಲಿ ಆಗಲಿದೆ ಎನ್ನಲಾಗುತ್ತಿದೆ.

ಈ ಸುದ್ದಿ ಹರಡಲು ಮುಖ್ಯ ಕಾರಣ ನಿರ್ಮಾಪಕ ಎಸ್​​ಕೆನ್. ಇತ್ತೀಚೆಗೆ ಅವರು ‘ಚೆನ್ನೈ ಲವ್​​ಸ್ಟೋರಿ’ ಹೆಸರಿನ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ತಮ್ಮ ‘ಚೆನ್ನೈ ಲವ್​​ಸ್ಟೋರಿ’ ಸಿನಿಮಾ ಬಗ್ಗೆ ಮಾತನಾಡುತ್ತಾ, ನಾವು ಮೊದಲಿಗೆ ಸಿನಿಮಾವನ್ನು ಜೂನ್ 26ಕ್ಕೆ ಬಿಡುಗಡೆ ಮಾಡೋಣ ಎಂದುಕೊಂಡಿದ್ದೆವು, ಆದರೆ ಆಗ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಕೆಲವರು ಮಾಹಿತಿ ನೀಡಿದರು. ಹೀಗಾಗಿ ಸಿನಿಮಾದ ಬಿಡುಗಡೆಯನ್ನು ನಾವು ಬದಲಾಯಿಸಿಕೊಂಡೆವು’ ಎಂದಿದ್ದರು.

ಇದನ್ನೂ ಓದಿ;ಚಿರಂಜೀವಿ, ರಾಮ್ ಚರಣ್ ಮನೆಯಲ್ಲಿ ಹೀಗಿತ್ತು ರಾಮ ನವಮಿ

ಎಸ್​​ಕೆಎನ್ ಅವರ ಈ ಮಾತುಗಳು ರಾಮ್ ಚರಣ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ‘ಪೆದ್ದಿ’ ಸಿನಿಮಾದ ಬಿಡುಗಡೆ ಜೂನ್ ತಿಂಗಳಲ್ಲಿ ಆಗಲಿದೆಯೇ ಎಂಬ ಅನುಮಾನ ಮೂಡಿಸಿದೆ. ಇತ್ತೀಚೆಗಷ್ಟೆ ‘ಪೆದ್ದಿ’ ಸಿನಿಮಾದ ಚಿತ್ರೀಕರಣದ ವೇಳೆ ರಾಮ್ ಚರಣ್ ಗೆ ಗಾಯ ಸಹ ಆಗಿದ್ದು, ಸಣ್ಣ ಆಪರೇಷನ್ ಸಹ ಆಗಿದೆ. ಇದರಿಂದ ಚಿತ್ರೀಕರಣ ತಡವಾಗಿ ಸಿನಿಮಾದ ಬಿಡುಗಡೆ ಏಪ್ರಿಲ್​​ನಿಂದ ಜೂನ್​​ಗೆ ವರ್ಗಾವಣೆ ಆಗಿರಬಹುದು ಎಂಬ ಅನುಮಾನ ಮೂಡಿದೆ. ಚಿತ್ರತಂಡದವರು ಸಹ ಯಾವುದೇ ಸ್ಪಷ್ಟನೆ, ಹೇಳಿಕೆ ನೀಡದೇ ಇರುವುದು ರಿಲೀಸ್ ಮುಂದೂಡಿಕೆ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

‘ಪೆದ್ದಿ’ ಸಿನಿಮಾ ಗ್ರಾಮೀಣ ಆಕ್ಷನ್ ಕತೆಯನ್ನು ಹೊಂದಿದೆ. ಸಿನಿಮಾದ ನಾಯಕ ರಾಮ್ ಚರಣ್ ಕ್ರಿಕೆಟ್ ಆಟಗಾರ ಮತ್ತು ಕುಸ್ತಿ ಪೈಲ್ವಾನನ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರು ನಾಯಕನ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಯನ್ ಹಾಗೂ ಕುಟುಂಬದ ಜೊತೆ ಸಮ್ಮರ್ ವೆಕೇಶನ್ ತೆರಳಿದ ಮೇಘನಾ ರಾಜ್

Source link

ಪಾಕಿಸ್ತಾನ್ ವೇಗಿ ನಸೀಮ್ ಶಾಗೆ 2 ಕೋಟಿ ರೂ. ದಂಡ..!

ಪಾಕಿಸ್ತಾನದ ವೇಗಿ ನಸೀಮ್ ಶಾ (Naseem Shah) ಅವರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ (PCB) ಸುಮಾರು 2 ಕೋಟಿ ರೂಪಾಯಿ (PKR) ಭಾರಿ ದಂಡ ವಿಧಿಸಿದೆ. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಇದು ಒಬ್ಬ ಆಟಗಾರನಿಗೆ ವಿಧಿಸಲಾದ ಅತಿ ದೊಡ್ಡ ಮೊತ್ತದ ದಂಡ ಎಂಬುದು ವಿಶೇಷ.

ದಂಡ ವಿಧಿಸಲು ಕಾರಣವೇನು?

ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಝ್ ಅವರನ್ನು ಟೀಕಿಸಿ ನಸೀಮ್ ಶಾ ಅವರ ಎಕ್ಸ್ (ಟ್ವಿಟರ್) ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.

ಪಾಕಿಸ್ತಾನ್ ಸೂಪರ್ ಲೀಗ್​ನ (PSL 2026) ಪಂದ್ಯವೊಂದರ ವೇಳೆ ಮರಿಯಮ್ ನವಾಝ್ ಅವರಿಗೆ ನೀಡಲಾಗಿದ್ದ ವಿಶೇಷ ಗೌರವವನ್ನು ಪ್ರಶ್ನಿಸಿ, “ಅವರನ್ನು ಲಾರ್ಡ್ಸ್ ಮೈದಾನದ ರಾಣಿಯಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ?” ಎಂದು ವ್ಯಂಗ್ಯವಾಡಿದ್ದರು.

ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದ ಈ ಪೋಸ್ಟ್ ವಿವಾದಕ್ಕೆ ಕಾರಣಗಾಗುತ್ತಿದ್ದಂತೆ ನಸೀಮ್ ಶಾ ಅದನ್ನು ಡಿಲೀಟ್ ಮಾಡಿದ್ದರು. ಅಲ್ಲದೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂದು ಅವರು ಸ್ಪಷ್ಟನೆ ನೀಡಿದ್ದರು.

ಪಿಸಿಬಿ ಕ್ರಮ:

ನಸೀಮ್ ಶಾ ಅವರ ‘ಹ್ಯಾಕಿಂಗ್’ ವಾದವನ್ನು ತಳ್ಳಿಹಾಕಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ, ಇದು ಕೇಂದ್ರ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿದೆ.

ಅಲ್ಲದೆ ಯುವ ವೇಗಿಯನ್ನು ಎರಡು ವರ್ಷಗಳ ಕಾಲ ನಿಷೇಧಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಹಸ್ತಕ್ಷೇಪದಿಂದಾಗಿ ಕೇವಲ ಆರ್ಥಿಕ ದಂಡಕ್ಕೆ ಸೀಮಿತಗೊಳಿಸಲಾಯಿತು.

ಅದರಂತೆ ಇದೀಗ ನಸೀಮ್ ಶಾಗೆ ಬರೋಬ್ಬರಿ 2 ಕೋಟಿ ರೂ. (PKR) ದಂಡ ವಿಧಿಸಲಾಗಿದೆ. ಇನ್ನು ತಾನು ಮಾಡಿರುವ ಪ್ರಮಾದಕ್ಕೆ ಪಾಕ್ ವೇಗಿ, ಮಂಡಳಿಯ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ಮ್ಯಾನೇಜರ್​ಗೆ ಗೇಟ್ ಪಾಸ್:

ಈ ಘಟನೆಯ ನಂತರ ನಸೀಮ್ ಶಾ ಅವರು ತಮ್ಮ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಪಿಸಿಬಿ ಕೂಡ ಆ ಮ್ಯಾನೇಜರ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದೆ.

ಇದನ್ನೂ ಓದಿ: 19 ವರ್ಷಗಳಲ್ಲೇ ಮೊದಲ ಬಾರಿ… CSK ಪಾಲಿಗೆ ಇದು ಅಂತಿಂಥ ಸೋಲಲ್ಲ!

ಸದ್ಯ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ತೊಡಗಿಸಿಕೊಂಡಿರುವ ನಸೀಮ್ ಶಾ ರಾವಲ್ಪಿಂಡಿಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಪಿಂಡಿಸ್ ಫ್ರಾಂಚೈಸಿ ಪರ ಕಣಕ್ಕಿಳಿಯುತ್ತಿರುವ ನಸೀಮ್​ಗೆ ಈ ಬಾರಿ ಸಿಗುವ ವೇತನ 8.65 ಕೋಟಿ ರೂ. (PKR). ಇದರಲ್ಲಿ ಇದೀಗ 2 ಕೋಟಿ ರೂ. ದಂಡ ಪಾವತಿಸಬೇಕಾಗಿ ಬಂದಿದೆ.

 

Source link

ದೇವನಹಳ್ಳಿ ಹೆದ್ದಾರಿಯಲ್ಲಿ ಹೊತ್ತಿ ಉರಿದ ಕಾರು: ಚಲಿಸುತ್ತಿದ್ದ ವಾಹನದಲ್ಲಿ ದಿಢೀರ್ ಬೆಂಕಿ, ಪ್ರಯಾಣಿಕರು ಪಾರು!

ದೇವನಹಳ್ಳಿ,ಮಾ.31: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೊರವಲಯದ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಮಂಗಳವಾರ (ಮಾ.31) ನಡೆದಿದೆ. ಕಾರು ಹೆದ್ದಾರಿಯಲ್ಲಿ ವೇ ಗವಾಗಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಕಾರಿನ ಚಾಲಕ ಮತ್ತು ಪ್ರಯಾಣಿಕರು ಹೆದ್ದಾರಿ ಮಧ್ಯೆಯೇ ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ. ಅವರು ಇಳಿಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಕಾರಿನಾದ್ಯಂತ ಆವರಿಸಿದ್ದು, ನೋಡ ನೋಡುತ್ತಿದ್ದಂತೆ ಇಡೀ ಕಾರು ಬೆಂಕಿಗಾಹುತಿಯಾಗಿದೆ. ಇನ್ನು ಇದನ್ನು ಗಮನಿಸಿದ ಕಾರು ಚಾಲಕ ಕೆಳಗಿಳಿದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ತೆಲಂಗಾಣದ ಯುವ ದಂಪತಿ ಸಾವು; ಪತಿಯ ಶವ ಕಂಡು 17ನೇ ಮಹಡಿಯಿಂದ ಜಿಗಿದ ಪತ್ನಿ!

ಬೆಂಗಳೂರು, ಮಾರ್ಚ್​ 31: ಕೌಟುಂಬಿಕ ಕಲಹದ ಹಿನ್ನೆಲೆ ತೆಲಂಗಾಣ ಮೂಲದ ಯುವ ಐಟಿ ದಂಪತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪತಿಯ ಆತ್ಮಹತ್ಯೆ ನಂತರ ಪತ್ನಿ ಸಹ 17ನೇ ಮಹಡಿಯಿಂದ ಜಿಗಿದು ಮೃತಪಟ್ಟಿದ್ದಾರೆ.

ಮಾನಸಿಕ ಒತ್ತಡದಿಂದ ಬಳಲುತ್ತಿದ್ದ ದಂಪತಿ

ತೆಲಂಗಾಣದ ಸಿದ್ದಿಪೇಟ ಮೂಲದ 32 ವರ್ಷದ ಭಾನು ಚಂದರ್ ರೆಡ್ಡಿ ಕುಂಟಾ ತಮ್ಮ ನಿವಾಸದ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಬಿಬಿ ಶಾಜಿಯಾ ಸಿರಾಜ್ (31) ಪತಿಯ ಶವವನ್ನು ಕಂಡು ಆಘಾತಕ್ಕೊಳಗಾಗಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಂಪತಿ ಖಾಸಗಿ ಕಂಪನಿಗಳಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದರು. ದಂಪತಿಯ ನಡುವೆ ಆಗಾಗ್ಗೆ ಕಲಹಗಳು ನಡೆಯುತ್ತಿದ್ದವು ಎಂದು ತಿಳಿದುಬಂದಿದೆ. ಇತ್ತೀಚೆಗೆ ಕೂಡ ಇಬ್ಬರ ನಡುವೆ ಜಗಳ ನಡೆದಿದ್ದು, ಮಾನಸಿಕ ಒತ್ತಡ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.

ಪೋಸ್ಟ್‌ಮಾರ್ಟಂ ವರದಿ ಬಂದ ಮೇಲೆ ಕಾರಣ ಬಯಲು

ಸೋಮವಾರ ಪತ್ನಿ ಮನೆಯಲ್ಲಿ ಇಲ್ಲದ ವೇಳೆ ಭಾನು ಚಂದ್ರ ರೆಡ್ಡಿ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ನಂತರ ಮನೆಗೆ ಬಂದ ಶಾಜಿಯಾ ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಗಮನಿಸಿದ್ದು, ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗದ ಕಾರಣ ಭದ್ರತಾ ಸಿಬ್ಬಂದಿ ಹಾಗೂ ನೆರೆಹೊರೆಯವರ ಸಹಾಯ ಕೇಳಿದ್ದಾರೆ.

ಇದನ್ನೂ ಓದಿ ಕ್ರೀಡಾಂಗಣ ಮಾತ್ರವಲ್ಲದೆ ಮೆಟ್ರೋ, ಬಸ್ ನಿಲ್ದಾಣಗಳಲ್ಲೂ ಮೊಬೈಲ್ ಕಳ್ಳತನ! 21 ಫೋನ್​ಗಳನ್ನು ವಶಕ್ಕೆ ಪಡೆದ ಪೊಲೀಸರು

ಬಾಗಿಲು ಬಲವಂತವಾಗಿ ತೆರೆಯುತ್ತಿದ್ದಂತೆ ಭಾನು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ದೃಶ್ಯದಿಂದ ಬೆಚ್ಚಿಬಿದ್ದ ಶಾಜಿಯಾ ಕೆಲವೇ ನಿಮಿಷಗಳಲ್ಲಿ ಅದೇ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕುಟುಂಬದವರ ದೂರಿನ ಆಧಾರದ ಮೇಲೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಲಾಗಿದೆ. ದಂಪತಿಯ ಸಾವಿಗೆ ಕಾರಣವೇನು ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದಂಪತಿಯ ಸಾವಿಗೆ ನಿಖರ ಕಾರಣ ಏನು ಎಂಬುದು ಪೋಸ್ಟ್‌ಮಾರ್ಟಂ ವರದಿ ಬಳಿಕ ತಿಳಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

April Festival List 2026: ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ಹಬ್ಬ ಹರಿದಿನಗಳನ್ನು ಎಲ್ಲರೂ ಸಂಭ್ರಮಿಸುವವರೇ. ಈ ಹಿಂದೂ ಧರ್ಮದಲ್ಲಿ ವರ್ಷಪೂರ್ತಿ ವಿವಿಧ ಹಬ್ಬಗಳು (festivals), ಆಚರಣೆಗಳಿವೆ. ಏಪ್ರಿಲ್ ತಿಂಗಳಲ್ಲಿ ಹಲವು ಹಬ್ಬಗಳಿವೆ. ನಾವೀಗ ವರ್ಷದ ಮೂರನೇ ತಿಂಗಳಾದ ಮಾರ್ಚ್ ಕಳೆದು ಏಪ್ರಿಲ್ ತಿಂಗಳಿಗೆ ಕಾಲಿಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅದಕ್ಕೂ ಮುನ್ನ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳು, ವ್ರತಾಚರಣೆಗಳ ಬಗ್ಗೆ  ನೀವು ತಿಳಿದುಕೊಳ್ಳಿ.

ಏಪ್ರಿಲ್ ತಿಂಗಳಲ್ಲಿ ಆಚರಿಸುವ ಹಬ್ಬಗಳ ಪಟ್ಟಿ ಇಲ್ಲಿದೆ;

  • ಏಪ್ರಿಲ್ 02 – ಹನುಮಜಯಂತಿ
  • ಏಪ್ರಿಲ್ 02 – ಪೂರ್ಣಿಮಾ
  • ಏಪ್ರಿಲ್ 03- ಗುಡ್ ಫ್ರೈಡೇ
  • ಏಪ್ರಿಲ್ 03- ಚೈತ್ರ ಕೃಷ್ಣ ಪಕ್ಷ
  • ಏಪ್ರಿಲ್ 04 – ಈಸ್ಟರ್ ಶನಿವಾರ
  • ಏಪ್ರಿಲ್ 05 – ಸಂಕಷ್ಟಹರ ಚತುರ್ಥಿ
  • ಏಪ್ರಿಲ್ 11 – ವೃಷಭ ಜಯಂತಿ
  • ಏಪ್ರಿಲ್ 13 – ವಲ್ಲಭಾಚಾರ್ಯ ಜಯಂತಿ
  • ಏಪ್ರಿಲ್ 13 – ಸರ್ವೈಕಾದಶಿ ವರೂಥಿನಿ
  • ಏಪ್ರಿಲ್ 14 – ಮೇಷ ಸಂಕ್ರಮಣ
  • ಏಪ್ರಿಲ್ 15 – ಸೌರಯುಗಾದಿ (ವಿಷು)
  • ಏಪ್ರಿಲ್ 15 – ಪ್ರದೋಷ
  • ಏಪ್ರಿಲ್ 15 – ಮಾಸ ಶಿವರಾತ್ರಿ
  • ಏಪ್ರಿಲ್ 17 – ಅಮಾವಾಸ್ಯಾ
  • ಏಪ್ರಿಲ್ 18 – ವೈಶಾಖ ಶುಕ್ಲಪಕ್ಷ
  • ಏಪ್ರಿಲ್ 19 – ಪರಶುರಾಮ ಜಯಂತಿ
  • ಏಪ್ರಿಲ್ 20 – ಬಸವೇಶ್ವರ ಜಯಂತಿ
  • ಏಪ್ರಿಲ್ 20 – ಅಕ್ಷಯ ತೃತೀಯ
  • ಏಪ್ರಿಲ್ 21- ಶಂಕರಾಚಾರ್ಯ ಜಯಂತಿ
  • ಏಪ್ರಿಲ್ 21 – ವಿಜಯ ಧ್ವಜಾಚಾರ್ಯ ಪುಣ್ಯತಿಥಿ
  • ಏಪ್ರಿಲ್ 22 – ರಾಮಾನುಜಾಚಾರ್ಯ ಜಯಂತಿ
  • ಏಪ್ರಿಲ್ 23 – ಗಂಗೋತ್ಪತ್ತಿ
  • ಏಪ್ರಿಲ್ 27 – ಮಹಾನಕ್ಷತ್ರ ಭರಣಿ
  • ಏಪ್ರಿಲ್ 27 – ಸರ್ವೈಕಾದಶಿ ಮೋಹಿನಿ
  • ಏಪ್ರಿಲ್ 28 – ವೇದ ವ್ಯಾಸ ಜಯಂತಿ
  • ಏಪ್ರಿಲ್ 28 – ಪ್ರದೋಷ
  • ಏಪ್ರಿಲ್ 30 – ನರಸಿಂಹ ಜಯಂತಿ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

19 ವರ್ಷಗಳಲ್ಲೇ ಮೊದಲ ಬಾರಿ… CSK ಪಾಲಿಗೆ ಇದು ಅಂತಿಂಥ ಸೋಲಲ್ಲ!

Source link

KHPT Recruitment 2026: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​​ನಲ್ಲಿ ನೇಮಕಾತಿ; ಪದವೀಧರರು ಅರ್ಹರು

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT) ಅಧಿಕೃತ ಅಧಿಸೂಚನೆಯ ಮೂಲಕ ವಿವಿಧ ಉದ್ಯೋಗಾವಕಾಶಗಳನ್ನು ಘೋಷಿಸಿದೆ. ರಾಜ್ಯದ ಚಾಮರಾಜನಗರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲು ಒಟ್ಟು 18 ಕ್ಷೇತ್ರ ತನಿಖಾಧಿಕಾರಿ (Field Investigator) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಕೂಡಲೇ ಅರ್ಜಿ ಸಲ್ಲಿಸುವುದು ಅಗತ್ಯ. ಏಕೆಂದರೆ ಇಂದೇ (ಮಾರ್ಚ್ 31) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆಯ ಮಾನದಂಡಗಳ ಪ್ರಕಾರ ಆಕರ್ಷಕ ವೇತನವನ್ನು ನೀಡಲಾಗುವುದು. ವಯೋಮಿತಿಯಲ್ಲಿನ ಸಡಿಲಿಕೆಯು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್‌ನ ನಿಯಮಾವಳಿಗಳಿಗೆ ಅನುಗುಣವಾಗಿರಲಿದೆ. ವಿಶೇಷವೆಂದರೆ, ಈ ನೇಮಕಾತಿ ಪ್ರಕ್ರಿಯೆಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ, ಇದು ಎಲ್ಲಾ ವರ್ಗದ ಅರ್ಹ ಅಭ್ಯರ್ಥಿಗಳಿಗೆ ಮುಕ್ತವಾಗಿ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ನೇಮಕಾತಿ ಪ್ರಕ್ರಿಯೆಯು ಪ್ರಮುಖವಾಗಿ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನದ ಆಧಾರದ ಮೇಲೆ ನಡೆಯಲಿದೆ. ಆಸಕ್ತರು ಮೊದಲು ಅಧಿಕೃತ ಅಧಿಸೂಚನೆಯನ್ನು ಕೂಲಂಕಷವಾಗಿ ಓದಿ, ತಾವು ಅರ್ಹತಾ ಮಾನದಂಡಗಳನ್ನು ಪೂರೈಸುತ್ತೇವೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

ಅರ್ಜಿ ಸಲ್ಲಿಸಲು ಇಚ್ಛಿಸುವವರು ಕೆಎಚ್‌ಪಿಟಿ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ, ಸ್ಕ್ಯಾನ್ ಮಾಡಿದ ದಾಖಲೆಗಳು ಮತ್ತು ಇತ್ತೀಚಿನ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಅರ್ಜಿ ಸಲ್ಲಿಸಿದ ನಂತರ, ಮುಂದಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ಸ್ವೀಕೃತಿ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳುವುದು ಸೂಕ್ತ. ನೆನಪಿಡಿ, ಇಂದೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ, ಹಾಗಾಗಿ ವಿಳಂಬ ಮಾಡದೆ ತಕ್ಷಣವೇ ಅರ್ಜಿ ಸಲ್ಲಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

3 ಮದುವೆ, ಸಾಕಷ್ಟು ಅಫೇರ್: ಮೇಕಪ್ ಆರ್ಟಿಸ್ಟ್​​ ನವರಂಗಿ ಆಟಕ್ಕೆ ಉದ್ಯಮಿಯ ಬಲಿ?

ಮಂಗಳೂರು, ಮಾರ್ಚ್​​ 31: ಮದುವೆಯಾದ ಒಂದೇ ತಿಂಗಳಿಗೆ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯ ಕಾರ್ಕಳದಲ್ಲಿ ನಡೆದಿತ್ತು. ಈ ಪ್ರಕರಣಕ್ಕೀಗ ಸ್ಫೋಟಕ ತಿರುವು ಸಿಕ್ಕಿದ್ದು ಪತ್ನಿ ಸೌಮ್ಯಾಳ ನವರಂಗಿ ಆಟವೇ ಸುದೀಪ್ ಸಾವಿಗೆ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಯ ಸರಣಿ ಮ್ಯಾರೇಜ್ ಕಹಾನಿ ಬಯಲಾಗಿತ್ತು. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್​​ ಪತ್ನಿ ಹಣ ಒಡವೆ ಕಿತ್ತುಕೊಂಡಿದ್ದಾಳೆ, ತುಂಬಾ ಟಾರ್ಚರ್ ಕೊಡುತ್ತಿದ್ದಾಳೆ ಎಂದು ಅಲವತ್ತುಕೊಂಡಿದ್ದರು ಎನ್ನಲಾಗಿದೆ.

ಪತಿ ಸುದೀಪ್​​ ತನ್ನ ತಂದೆ-ತಾಯಿ ಬಳಿ ಬಂದಿರುವ ವಿಷಯ ತಿಳಿದ ಸೌಮ್ಯಾ ಸ್ಕೂಟಿಯಲ್ಲೇ ನೂರು ಕಿಲೋಮೀಟರ್ ಪ್ರಯಾಣ ಮಾಡಿ ಬಂದಿದ್ದಳು. ನೆಲ್ಯಾಡಿಯಲ್ಲಿ ತಾಯಿ ಜೊತೆ ಕಾರಿನಲ್ಲಿ ತರೆಳುತ್ತಿದ್ದ ಸುದೀಪ್​​ರನ್ನು ಅಡ್ಡಗಟ್ಟಿ, ಗ್ರಾಮಸ್ಥರ ಎದುರು ಗಲಾಟೆ ಮಾಡಿದ್ದಳು ಬಳಿಕ ಪತಿ ಕಾರು ಹತ್ತಿದ್ದ ಈಕೆ ಅರ್ಧ ದಾರಿಯಲ್ಲೇ ತಾಯಿಯನ್ನು ಇಳಿಸುವಂತೆ ಹಿಂಸಿಸಿದ್ದಳು. ಆಕೆಯ ಕಾಟ ತಾಳಲಾರದೆ ಸುದೀಪ್​​ ರಾತ್ರಿ ವೇಳೆ ತಾಯಿಯನ್ನು ರಸ್ತೆಯಲ್ಲಿ ಇಳಿಸಿ ಪತ್ನಿ ಮನೆಗೆ ತೆರಳಿದ್ದರು. ಈ ವಿಚಾರವಾಗಿ ಅವರು ಬಹಳ ನೊಂದಿದ್ದರು ಎಂಬ ವಿಚಾರವೀಗ ಬಯಲಾಗಿದೆ.

ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ; ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ಇನ್ನು ಸಾಮಾಜಿಕ ಜಾಲತಾಣದ ಮೂಲಕ ಸುದೀಪ್​​ಗೆ ಸೌಮ್ಯಾ ಪರಿಚಯ ಆಗಿತ್ತು. ಇವರಿಬ್ಬರೂ ಮದುವೆಯ ಬಗ್ಗೆ ನಿರ್ಧರಿಸಿದಾಗ ಅವಸರ ಮಾಡಬೇಡ. ತಾಳ್ಮೆಯಿಂದಿರು, ಎಲ್ಲಾ ವಿಚಾರಿಸಿ ಮದುವೆ ಮಾಡುತ್ತೇವೆ ಎಂದು ಪೋಷಕರು ಹೇಳಿದ್ದರು. ಹೀಗಿದ್ದರೂ ಆತುರಕ್ಕೆ ಬಿದ್ದ ಸುದೀಪ್​​ ಪೋಷಕರಿಗೆ ತಿಳಿಸದೆ ಫೆ.16ಕ್ಕೆ ದೇವಸ್ಥಾನದಲ್ಲಿ ಮದುವೆಯಾಗಿದ್ದರೆ, ಫೆ.17ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್​​ ಪೋಷಕರು, ಆಕೆಗೆ ಇದು ಮೂರನೇ ಮದುವೆ ಅಂತಾ ನಮಗೆ ಗೊತ್ತಿರಲಿಲ್ಲ. ಮಾ.16ಕ್ಕೆ ಮಗ ಮನೆಗೆ ಬಂದು ಆಕೆಯ ಟಾರ್ಚರ್ ಬಗ್ಗೆ ಹೇಳಿಕೊಂಡಿದ್ದ. ಮಾ.17ಕ್ಕೆ ನೆಲ್ಯಾಡಿಯಲ್ಲಿ ಬಂದು ಗಲಾಟೆ ಮಾಡಿ ಸುದೀಪ್​​ನ ಆಕೆ ಕರೆದುಕೊಂಡು ಹೋಗಿದ್ದಳು. ಬಳಿಕ ಅಲ್ಲಿ ಏನಾಯ್ತು ಗೊತ್ತಿಲ್ಲ. ಮಾ.22ಕ್ಕೆ ಆತ ಆಸ್ಪತ್ರೆಯಲ್ಲಿರೋದು ನಮಗೆ ತಿಳಿಯಿತು. ಆಸ್ಪತ್ರೆಗೆ ಹೋಗಿ ಕೇಳಿದಾಗ ಫುಡ್ ಪಾಯಿಸನ್, ಜಾಂಡೀಸ್ ಅಂತಾ ಕತೆ ಹೇಳಿದ್ರು. ಇದ್ರಲ್ಲಿ ಕೊಲೆ ಸಂಶಯ ಇರೋದ್ರಿಂದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದವರು ಕಣ್ಣೀರು ಹಾಕಿದ್ದಾರೆ.

ಇನ್ನು ಸೌಮ್ಯ ಶೆಟ್ಟಿಯ ವಿಷವರ್ತುಲದಲ್ಲಿ ಸಿಲುಕಿ ಹೈರಾಣಾಗಿ ಹೊರಬಂದಿದ್ದ ಕಲಾವಿದ, ದೈವದ ಆರಾಧಕ ವೇಣು ಶೆಟ್ಟಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಕೆಯಿಂದ ಬಹಳ ಟಾರ್ಚರ್ ಅನುಭವಿಸಿ ಊರು ಬಿಟ್ಟು ಹೋಗಿದ್ದೆ. ಆಕೆಯ ಜೊತೆಗಿನ ಮದುವೆ ಕ್ಯಾನ್ಸಲ್ ಮಾಡಿದ್ರಿಂದ ಇನ್ನಿಲ್ಲದ ರೀತಿಯಲ್ಲಿ ಕಿರುಕುಳ ಅನುಭವಿಸಿದ್ದು, ಜೀವನದಲ್ಲಿ ಮದುವೆಯೇ ಬೇಡ ಎಂದು ನಿರ್ಧರಿಸಿದ್ದೇನೆ. ಸೈಕಾಲಜಿ ಓದಿದ್ದರೂ ಆಕೆಯ ಕಾಟಕ್ಕೆ ಮಾನಸಿಕವಾಗಿ ಕುಗ್ಗಿದ್ದೆ ಎಂದು ಹೇಳುವ ಮೂಲಕ ಸೌಮ್ಯಾಳ ನಿಜ ರೂಪವನ್ನು ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಯಮನನ್ನೇ ಯಾಮಾರಿಸಿ ಸಾವು ಗೆದ್ದ ಅಣ್ಣ-ತಂಗಿ

ಮುಜಾಫರ್​ನಗರ, ಮಾರ್ಚ್​ 31: ಮುಜಾಫರ್​ನಗರದಲ್ಲಿ ನಡೆದ ಅಪಘಾತವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಮರಳು ತುಂಬಿದ್ದ ಟ್ರಕ್ ಒಂದು ಅಣ್ಣ ತಂಗಿ ಹೋಗುತ್ತಿದ್ದ ಬೈಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ, ಸವಾರ ನಿಯಂತ್ರಣ ತಪ್ಪಿ ತಂಗಿ ಜತೆ ನಡು ರಸ್ತೆಗೆ ಬಿದ್ದಿದ್ದಾರೆ. ಆಗ ಟ್ರಕ್ ಬೈಕ್ ಮೇಲೆ ಹರಿದಿದೆ. ಅವರಿಬ್ಬರು ಬೈಕ್ ಬಿಟ್ಟು ರಸ್ತೆಗೆ ಬಿದ್ದ ಪರಿಣಾಮ ಸ್ವಲ್ಪದರಲ್ಲೇ ಅಪಘಾತ ತಪ್ಪಿದೆ. ಕೆಲವು ದಿನಗಳ ಹಿಂದೆ ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ನ್ಯೂ ಮಂಡಿ ಕೊತ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಸಹರಾನ್‌ಪುರದಿಂದ ಬರುತ್ತಿದ್ದ ನಿಯಂತ್ರಣ ತಪ್ಪಿದ ಟ್ರಕ್ ಎರಡು ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಬೈಕ್ ಮೇಲೆ ಹರಿದಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link