IND vs ZIM: ಟಿ20 ವಿಶ್ವಕಪ್ನಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ – Kannada News | Abhishek Sharma T20 WC 2026 Comeback: Half Century vs Zimbabwe Marks Form Return
2026 ರ ಟಿ20 ವಿಶ್ವಕಪ್‌ನ ಮೊದಲ ಮೂರು ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್ ಶರ್ಮಾ ಎಂಟು ಎಸೆತಗಳನ್ನು ಎದುರಿಸಿ ಒಂದೇ ಒಂದು ರನ್ ಗಳಿಸಲು ವಿಫಲರಾದರು. ಯುಎಸ್ಎ ವಿರುದ್ಧದ ಮೊದಲ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದ ಅಭಿಷೇಕ್, ಪಾಕಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ, ನಾಲ್ಕು ಎಸೆತಗಳನ್ನು ಎದುರಿಸಿ ರನ್ ಗಳಿಸಲು ವಿಫಲರಾಗಿದ್ದರು. ನೆದರ್ಲ್ಯಾಂಡ್ಸ್ ವಿರುದ್ಧದ ಮೂರನೇ ಪಂದ್ಯದಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿ ನಿರಾಶೆ ಮೂಡಿಸಿದ್ದರು. Source link