All posts by nagaraj11081993

ಕೆಲವು ಗೊಂದಲಗಳ ಮಧ್ಯೆಯೂ ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರಿಂದ ಅಂಗೀಕಾರ – Kannada News | Karnataka Governor Thawar Chand Gehlot signed To SC Internal Reservation Bill 2025

ಬೆಂಗಳೂರು, (ಫೆಬ್ರವರಿ 26): ಹಲವು ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025 ( SC Internal Reservation Bill 2025) ಕೊನೆಗೂ ರಾಜ್ಯಪಾಲರು ಅಂಗೀಕರಿಸಿದ್ದಾರೆ. ಕೆಲವು ಗೊಂದಲಗಳ ಮಧ್ಯೆಯೂ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ (Thawar Chand Gehlot ), ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ ಸಹಿ ಹಾಕಿದ್ದಾರೆ. ಮೀಸಲಾತಿ ವಿಚಾರದಲ್ಲಿ ಒಳ ಪಂಗಡಗಳ ನಡುವೆ ಗೊಂದಲ ಏರ್ಪಟ್ಟಿದ್ದರಿಂದ ವಿಧೇಯಕಕ್ಕೆ ಸಹಿ ಹಾಕದೆ ಪೆಂಡಿಂಗ್ ಇಟ್ಟಿದ್ದರು. ಆದ್ರೆ, ಇಂದು (ಫೆಬ್ರವರಿ 26) ದಲಿತ ಸಮುದಾಯದ ಸಚಿವರು ರಾಜ್ಯಪಾಲರನ್ನು ಭೇಟಿ ಮಾಡಿ, ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿ ವಿಧೇಯಕಕ್ಕೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರು ಪರಿಶಿಷ್ಟ ಜಾತಿಗಳ ಮೀಸಲಾತಿ ವಿಧೇಯಕಕ್ಕೆ ಅನುಮೋದನೆ ನೀಡಿದ್ದಾರೆ.

ಒಳಮೀಸಲಾತಿ ವಿಧೇಯಕವನ್ನ ವಾಪಸ್ ಕಳುಹಿಸಿದ ರಾಜ್ಯಪಾಲರು

ಕರ್ನಾಟಕ ಅನುಸೂಚಿತ ಜಾತಿಗಳ ಉಪವರ್ಗೀಕರಣ ವಿಧೇಯಕಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಅಂಕಿತ ಹಾಕಲು ನಿರಾಕರಿಸಿದ್ದು, ಹಲವು ಸ್ಪಷ್ಟನೆಗಳನ್ನು ಕೋರಿ ವಿಧೇಯಕವನ್ನು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಇದರಿಂದಾಗಿ ರಾಜ್ಯ ಸರ್ಕಾರದ ಒಳಮೀಸಲಾತಿ ಜಾರಿಯ ಆಶಯಕ್ಕೆ ತಾತ್ಕಾಲಿಕ ಧಕ್ಕೆ ಉಂಟಾಗಿತ್ತು. ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಶಿಫಾರಸ್ಸಿನಂತೆ ಶೇ. 6, 6 ಮತ್ತು 5ರ ಅನುಪಾತದಲ್ಲಿ ಕೋಟಾ ನಿಗದಿಪಡಿಸಲಾಗಿತ್ತು, ಆದರೆ ರಾಜ್ಯಪಾಲರು ಜನವರಿ 9 ರಂದೇ ಈ ಫೈಲ್ ವಾಪಸ್ ಕಳುಹಿಸಿದ್ದರು.

ಇದನ್ನೂ ಓದಿ: ದಲಿತ ಸಮುದಾಯಕ್ಕೆ ಗುಡ್​ ನ್ಯೂಸ್: ಒಳ‌ ಮೀಸಲಾತಿ ಫೈನಲ್​, 3 ದಶಕಗಳ ಬೇಡಿಕೆ ಈಡೇರಿಕೆ

ಸಿಎಂ ಸಭೆ ಬಳಿಕ ರಾಜ್ಯಪಾಲರನ್ನ ಭೇಟಿ ಮಾಡಿದ ಸಚಿವರು

ಇದೇ ಮಾರ್ಚ್ 6ರರಂದು ರಾಜ್ಯ ಬಜೆಟ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು (ಫೆಬ್ರವರಿ 26) ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಚಿವರ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದಲ್ಲಿ ಬಾಕಿ ಇರುವ ಸರ್ಕಾರಿ ಹುದ್ದೆಗಳ ಭರ್ತಿ ಹಾಗೂ ಒಳಮೀಸಲಾತಿ ಜಾರಿ ಕುರಿತು ಗಂಭೀರ ಚರ್ಚೆ ನಡೆಸಲಾಯಿತು. ಒಳಮೀಸಲಾತಿ ವಿಧೇಯಕಕ್ಕೆ ರಾಜಭವನದಲ್ಲಿ ತಡೆ ಉಂಟಾಗಿರುವ ಬಗ್ಗೆ ಚರ್ಚೆ ನಡೆದಿದ್ದು, ಅಂತಿಮವಾಗಿ ಒಳಮೀಸಲಾತಿ ವಿಧೇಯಕಕ್ಕೆ ಕೂಡಲೇ ಅಂಕಿತ ಹಾಕುವಂತೆ ಕೋರಲು ರಾಜ್ಯಪಾಲರ ಬಳಿ ಸಚಿವರ ನಿಯೋಗ ತೆರಳಲು ನಿರ್ಧರಿಸಲಾಯ್ತು, ಅದರಂತೆ ಪರಿಶಿಷ್ಟ ಜಾತಿ ಸಮಯದಾಯದ ಸಚಿವರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಖಾಲಿ ಹುದ್ದೆ ನೇಮಕಾತಿಗೆ ತೊಂದರೆಯಾಗುತ್ತಿದೆ. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿರುವ ಬಗ್ಗೆಯೂ ಪ್ರಸ್ತಾಪಿಸಿ ಒಳಮೀಸಲಾತಿ ವಿಧೇಯಕಕ್ಕೆ ಸಹಿ ಹಾಕುವಂತೆ ಮಾನವಿ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯಪಾಲರು, ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕಕ್ಕೆ-2025 ಸಹಿ ಹಾಕಿದ್ದಾರೆ.

ಈ ವಿಧೇಯಕಕ್ಕೆ ವಿರೋಧ

ಒಳಮೀಸಲಿಗೆ ಸಂಬಂಧಿಸಿದ ಪರಿಶಿಷ್ಟ ಜಾತಿಗಳ (ಉಪ ವರ್ಗೀಕರಣ) ವಿಧೇಯಕ-2025 ಅನ್ನು ರಾಜ್ಯಪಾಲರು ತಿರಸ್ಕರಿಸಬೇಕು ಎನ್ನುವ ಆಗ್ರಹಗಳು ಕೇಳಿಬಂದಿದ್ದವು. ಒಳಮೀಸಲಾತಿ ಬಿಟ್ಟು ಹಳೆಯ ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಮತ್ತು ರೋಸ್ಟರ್ ಬಿಂದುವಿನಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಅದನ್ನು ಸರಿಪಡಿಸಬೇಕು. ಅಲ್ಲಿಯವರೆಗೂ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಬಾರದು ಎಂದು ಆಗ್ರಹಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:24 pm, Thu, 26 February 26

Source link

ಕೋಟ್ಯಂತರ ರೂ ನಷ್ಟದಲ್ಲಿ ಹುಬ್ಬಳ್ಳಿ ಹೆಸ್ಕಾಂ: ಗ್ರಾಹಕರಿಗೆ ಹೊಡೆಯುತ್ತಾ ಕರೆಂಟ್​ ಶಾಕ್​? – Kannada News | Hubballi KERC Meeting: Public Outrage Over HESCOM Services and 188 Cr Loss Claim

ಹುಬ್ಬಳ್ಳಿ, ಫೆಬ್ರವರಿ 26: ಜನರಿಂದ ತಪ್ಪದೇ ವಿದ್ಯುತ್ ಬಿಲ್ ವಸೂಲಿ ಮಾಡುವ ಹೆಸ್ಕಾಂ (HESCOM), ಅದಕ್ಕೆ ಸರಿಯಾಗಿ ಸೇವೆಯನ್ನು ಮಾತ್ರ ನೀಡುತ್ತಿಲ್ಲ. ಇದೀಗ ಹೆಸ್ಕಾಂ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷ ಆದಾಯಕ್ಕಿಂತ ವೆಚ್ಚ ಹೆಚ್ಚಾಗಿದ್ದು, ಅದನ್ನು ಸರಿದೂಗಿಸಲು ಅವಕಾಶ ನೀಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಹೆಸ್ಕಾಂ ವಿರುದ್ದ ಆಯೋಗದ ಮುಂದೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಜನರ ಮೇಲೆ ನಷ್ಟದ ಹೊರೆಯನ್ನು ಹಾಕಬಾರದು ಅಂತ ಆಗ್ರಹಿಸಿದರು.

ಆರ್ಥಿಕ ನಷ್ಟದಲ್ಲಿ ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ

ಹುಬ್ಬಳ್ಳಿ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ, ಧಾರವಾಡ, ಹಾವೇರಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಏಳು ಜಿಲ್ಲೆಯ ಜನರು, ಕೈಗಾರಿಕೆಗಳು, ಐಪಿ ಸೆಟ್​ಗಳಿಗೆ ವಿದ್ಯುತ್ ಸರಬರಾಜು ಮಾಡುವ ಕಂಪನಿ, ವಿದ್ಯುತ್ ನೀಡಿದ್ದಕ್ಕೆ ಪ್ರತಿಯಾಗಿ ಬಿಲ್​ನ್ನು ವಸೂಲಿ ಮಾಡುತ್ತದೆ. ಆದರೂ ಕೂಡ ಸಂಸ್ಥೆಗೆ 2024-25 ರ ಸಾಲಿನಲ್ಲಿ 188 ಕೋಟಿ ರೂ ಆದಾಯ ಕೊರತೆಯಾಗಿದೆಯಂತೆ. ಈ ಹಿಂದೆ ಅದನ್ನು 604 ಕೋಟಿ ರೂ ಆದಾಯ ಕೊರತೆ ಅಂತ ಹೇಳಿದ್ದ ಹೆಸ್ಕಾಂ, ಅದರಲ್ಲಿ ಕೆಲವನ್ನು ತಗೆದು 188 ಕೋಟಿ ರೂಪಾಯಿಗೆ ತಂದು ನಿಲ್ಲಿಸಿದೆ.

ಇದನ್ನೂ ಓದಿ: ಕಚೇರಿ ಬದಲು ಡಾಬಾದಲ್ಲಿ ಕೆಲಸ, ಎಣ್ಣೆ ಪಾರ್ಟಿ ಮಾಡುತ್ತಲೇ ಕಡತ ನಿರ್ವಹಣೆ! ಬೆಸ್ಕಾಂ ಅಧಿಕಾರಿಗಳ ವಿಡಿಯೋ ವೈರಲ್

ಆರ್ಥಿಕ ನಷ್ಟವನ್ನು ಸರಿದೂಗಿಸಲು ಅವಕಾಶ ನೀಡಬೇಕು ಅಂತ ಹೆಸ್ಕಾಂ, ಕೆಲ ದಿನಗಳ ಹಿಂದೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿರುವ ಹೆಸ್ಕಾಂ ಕಚೇರಿಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ ಆಯೋಗದ ಅಧ್ಯಕ್ಷ ಪಿ ರವಿಕುಮಾರ್, ಜನರ ಅಭಿಪ್ರಾಯ ಸಂಗ್ರಹಿಸಿದರು. ಈ ಸಮಯದಲ್ಲಿ ಹೆಸ್ಕಾಂ ವಿರುದ್ದ ಏಳು ಜಿಲ್ಲೆಗಳಿಂದ ಬಂದಿದ್ದ ಅನೇಕರು ಆಕ್ರೋಶ ವ್ಯಕ್ತಪಡಿಸಿದರು. ಒಂದಡೆ ಹೆಸ್ಕಾಂ ಬೇಕಾಬಿಟ್ಟಿ ವೆಚ್ಚಗಳನ್ನು ಮಾಡುತ್ತಿದೆ. ಕಾಮಗಾರಿಗಳಲ್ಲಿ ಹಗರಣಗಳನ್ನು ಮಾಡುತ್ತಿದೆ. ಬರಬೇಕಾದ ಬಿಲ್​ನ್ನು ಸರಿಯಾಗಿ ವಸೂಲಿ ಮಾಡುತ್ತಿಲ್ಲ. ಅಧಿಕಾರಿಗಳು ತಾವು ಪ್ರಮಾಣಿಕವಾಗಿ ಮಾಡಬೇಕಾದ ಕೆಲಸವನ್ನು ಮಾಡದೇ, ಸಂಸ್ಥೆಗೆ ನಷ್ಟವನ್ನುಂಟು ಮಾಡುತ್ತಿದ್ದು, ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಅಂತ ಅರವಿಂದ್ ಪೈ ಎನ್ನುವವರು ಆಗ್ರಹಿಸಿದರು.

ಸಭೆಯಲ್ಲಿ ಹೆಸ್ಕಾಂನ ಅನೇಕ ಹಗರಣಗಳು, ಅಕ್ರಮ ಕೆಲಸಗಳನ್ನು ವಿವಿಧ ಜಿಲ್ಲೆಯಿಂದ ಬಂದಿದ್ದ ಗ್ರಾಹಕರು ಆಯೋಗದ ಅಧ್ಯಕ್ಷರಿಗೆ ಮಾಹಿತಿ ನೀಡಿದರು. ಮತ್ತೊಂದಡೆ ಸರಿಯಾಗಿ ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸದೇ ಇರೋದಕ್ಕೆ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಬಿಲ್ ಪಡೆಯುವ ಹೆಸ್ಕಾಂ, ಸೇವೆಯನ್ನು ಮಾತ್ರ ಸರಿಯಾಗಿ ನೀಡುತ್ತಿಲ್ಲ ಅಂತ ಹರಿಹಾಯ್ದರು. ರೈತರ ಪಂಪಸೆಟ್​ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಇರೋದು, ಟ್ರಾನ್ಸಪಾರ್ಮ್​ಗಳು ಸುಟ್ಟಾಗ ಅವುಗಳನ್ನು ಬೇಗನೆ ರಿಪೇರಿ ಮಾಡದೇ ನೀಡದೇ ಇರೋದು ಸೇರಿದಂತೆ ಅನೇಕ ದೂರುಗಳನ್ನು ರೈತರು ಮತ್ತು ಸಾರ್ವಜನಿಕರು ಆಯೋಗದ ಮುಂದೆ ಪ್ರಸ್ತಾಪಿಸಿದರು.

ವಿದ್ಯುತ್ ಬಿಲ್ ಹೆಚ್ಚಳಕ್ಕೆ ಮಾಡುತ್ತಿರುವ ಸಭೆ ಅಲ್ಲ: ಅಧ್ಯಕ್ಷ ಪಿ ರವಿಕುಮಾರ್

ಇನ್ನು ಹೆಸ್ಕಾಂ ಹೊರೆಯನ್ನು ಯಾವುದೇ ಕಾರಣಕ್ಕೂ ಗ್ರಾಹಕರ ಮೇಲೆ ಹಾಕಬಾರದು ಅಂತ ಸಭೆಯಲ್ಲಿ ಭಾಗಿಯಾಗಿದ್ದವರು ಆಗ್ರಹಿಸಿದರು. ಈ ಬಗ್ಗೆ ಮಾತನಾಡಿದ ಆಯೋಗದ ಅಧ್ಯಕ್ಷ ಪಿ ರವಿಕುಮಾರ್, ಇಂದಿನ ಸಭೆ ವಿದ್ಯುತ್ ಬಿಲ್ ಹೆಚ್ಚಳಕ್ಕೆ ಮಾಡುತ್ತಿರುವ ಸಭೆ ಅಲ್ಲ. ಈಗಾಗಲೇ ಕಳೆದ ವರ್ಷ ಬೆಲೆ ಹೆಚ್ಚಳ ಮಾಡಿರೋದರಿಂದ ಮತ್ತೆ ವಿದ್ಯುತ್ ಬಿಲ್ ಹೆಚ್ಚಳ ಮಾಡಲ್ಲ. ಆದರೆ ಹೆಸ್ಕಾಂ ಆರ್ಥಿಕ ನಷ್ಟವನ್ನು ಸರಿದೂಗಿಸಲು ಆಯೋಗಕ್ಕೆ ಮನವಿ ಮಾಡಿದೆ. ಈ ಬಗ್ಗೆ ಸಾರ್ವಜನಿಕರ ವಿಚಾರಗಳನ್ನು ಆಲಿಸಿ ಸರ್ಕಾರಕ್ಕೆ ವರದಿ ನೀಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವಿದ್ಯುತ್ ದರ ಏರಿಕೆ ವದಂತಿ ಬಗ್ಗೆ ಬೆಸ್ಕಾಂ ಎಂಡಿ ಸ್ಪಷ್ಟನೆ

ಒಂದೆಡೆ ಹೆಸ್ಕಾಂಗೆ ಆದಾಯ ಬರುತ್ತಿದ್ದರೂ ಬರುತ್ತಿರುವ ಆದಾಯದಲ್ಲಿ ದೊಡ್ಡ ಮಟ್ಟದಲ್ಲಿ ಸೋರಿಕೆ ಆಗುತ್ತಿದೆ. ಜೊತೆಗೆ ಅನೇಕ ಹಗರಣಗಳು ಹೆಸ್ಕಾಂ ಆರ್ಥಿಕ ಸ್ಥಿತಿಯನ್ನು ಹಾಳು ಮಾಡುತ್ತಿವೆ. ಹೀಗಾಗಿ ಅಧಿಕಾರದಲ್ಲಿರುವವರು ಹೆಸ್ಕಾಂನಲ್ಲಿ ಆಗುತ್ತಿರುವ ಅವ್ಯವಹಾರ, ಅಕ್ರಮಗಳನ್ನು ತಡೆದರೆ ಸಂಸ್ಥೆ ನಷ್ಟದಿಂದ ಲಾಭದ ಹಳಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಹೆಸ್ಕಾಂ ಮತ್ತು ಇಂದನ ಇಲಾಖೆ ಚಿಂತಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Optical Illusion: ಈ ಚಿತ್ರದಲ್ಲಿರುವ ಮೀನನ್ನು ಹುಡುಕಿದ್ರೆ ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ – Kannada News | Optical Illusion: Spot a fish hiding in this picture within 25 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಒಗಟಿನ ಚಿತ್ರಗಳು ಸಖತ್‌ ಟ್ರೆಂಡ್ ಆಗುತ್ತಿದೆ. ಆದರೆ ಈ ಒಗಟಿನ ಚಿತ್ರಗಳನ್ನು ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಬಿಡಿಸಲು ಸಾಧ್ಯ. ಈ ಚಿತ್ರಗಳು ಮೆದುಳಿಗೆ ವ್ಯಾಯಾಮ ನೀಡುವುದರ ಜೊತೆಗೆ ನಿಮ್ಮ ಬುದ್ಧಿವಂತಿಕೆಗೆ ಸವಾಲೆಸಗುತ್ತದೆ. ಅಂತಹದ್ದೊದು ಇಲ್ಯೂಷನ್‌ ಚಿತ್ರ ಇದೀಗ ವೈರಲ್‌ ಆಗಿದೆ. ಈ ಚಿತ್ರದಲ್ಲಿ ಮೀನೊಂದು ಇದ್ದು, ನೀವು ಆ ಜಲಚರ ಜೀವಿಯನ್ನು ಹುಡುಕಿ ಜಾಣರು ಎನಿಸಿಕೊಳ್ಳಿ.

ಈ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು?

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಸುಲಭವಾಗಿ ಕಾಣುತ್ತವೆ. ಆದರೆ ಅಷ್ಟೇ ಟ್ರಿಕ್ಕಿಯಾಗಿದೆ. ಈ ಚಿತ್ರದಲ್ಲಿ ಮರದ ಮೇಲೆ ಮಲಗಿರುವ ಚಿರತೆ ನಿಮ್ಮ ಕಣ್ಣಿಗೆ ಕಾಣಿಸುತ್ತೀರಬಹುದು. ಅದೇ ಮರದಲ್ಲಿ ಮೀನೊಂದು ಅಡಗಿ ಕುಳಿತಿದೆ. ನೀವು 25 ಸೆಕೆಂಡುಗಳಲ್ಲಿ ಮೀನು ಹುಡುಕಬೇಕು. ಬಹಳ ಎಚ್ಚರಿಕೆಯಿಂದ ಚಿತ್ರ ನೋಡಿ ಮೀನು ಹುಡುಕಲು ಪ್ರಯತ್ನಿಸಿ.

ಇದನ್ನೂ ಓದಿ: ಈ ಚಿತ್ರದಲ್ಲಿದೆ ಮನೆಯ ಮುದ್ದಿನ ಶ್ವಾನ, 7 ಸೆಕೆಂಡುಗಳಲ್ಲಿ ಕಂಡು ಹಿಡಿಯಬಲ್ಲಿರಾ

ಮೀನು ನಿಮ್ಮ ಕಣ್ಣಿಗೆ ಕಾಣಿಸಿತೇ?

ನೀವು ಏಕಾಗ್ರತೆಯಿಂದ ಈ ಒಗಟು ಬಿಡಿಸಿದ್ದೀರಿ ಎಂದಾದರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ಹ್ಯಾಟ್ಸ್ ಆಫ್ ಹೇಳುತ್ತೇವೆ. ಒಂದು ವೇಳೆ ಮೀನು ಹುಡುಕಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಮೀನು ಎಲ್ಲಿದೆ ಎಂದು ನಾವು ಗುರುತಿಸಿದ್ದೇವೆ. ಮೀನು ನಿಮ್ಮ ಕಣ್ಣಿಗೆ ಕಾಣಿಸಿತು ಎಂದು ನಾವು ಭಾವಿಸುತ್ತೇ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈಲು ಹತ್ತುವಾಗ ಕಾಲು ಜಾರಿ ಬಿದ್ದ ವೃದ್ಧನ ಜೀವ ಉಳಿಸಿದ ಮಹಿಳಾ ಕಾನ್​ಸ್ಟೆಬಲ್ – Kannada News | Operation Jivan Raksha RPF woman constable rescued passenger who slipped into the gap while trying to board Train

ನವದೆಹಲಿ, ಫೆಬ್ರವರಿ 26: ಕೆಲವೊಮ್ಮೆ ದೇವರು ಯಾವ ರೂಪದಲ್ಲಿ ಬಂದು ನಮಗೆ ಸಹಾಯ ಮಾಡುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ರೈಲ್ವೆ ಇಲಾಖೆಯ (Railway Department) ಮಹಿಳಾ ಕಾನ್ಸ್​ಟೆಬಲ್ ಒಬ್ಬರು 75 ವರ್ಷದ ವೃದ್ಧನ ಪಾಲಿಗೆ ದೇವರಾಗಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತ ಕೂಡಲೆ ಕೆಳಗೆ ಇಳಿದಿದ್ದ 75 ವರ್ಷದ ಪ್ರಯಾಣಿಕ ಅಂಗಡಿಯಲ್ಲಿ ಏನೋ ತೆಗೆದುಕೊಳ್ಳುತ್ತಿದ್ದಾಗ ರೈಲು ಹೊರಟಾಗಿತ್ತು. ತಕ್ಷಣ ಓಡಿಹೋಗಿ ಚಲಿಸುತ್ತಿದ್ದ ರೈಲನ್ನು ಹತ್ತಿಕೊಳ್ಳುವಾಗ ಆಯತಪ್ಪಿ ರೈಲು ಹಾಗೂ ಪ್ಲಾಟ್​ಫಾರ್ಮ್ ನಡುವೆ ಇರುವ ಅಂತರದೊಳಗೆ ಸಿಲುಕಿಕೊಂಡಿದ್ದರು. ಅಷ್ಟರಲ್ಲೇ ಓಡೋಡಿ ಬಂದ ಆರ್‌ಪಿಎಫ್ ಮಹಿಳಾ ಕಾನ್‌ಸ್ಟೆಬಲ್ ರಮಾ ಶರ್ಮಾ ಆ ವ್ಯಕ್ತಿಯನ್ನು ಎಳೆದು ಪ್ಲಾಟ್‌ಫಾರ್ಮ್ ಮೇಲೆ ಹಾಕಿದರು. ಆಕೆ ಬರುವುದು ಚೂರು ತಡವಾಗಿದ್ದರೂ ಆ ವ್ಯಕ್ತಿಯ ಕಾಲು ತುಂಡಾಗಬಹುದಿತ್ತು ಅಥವಾ ಪ್ರಾಣವೇ ಹೋಗಬಹುದಿತ್ತು. ಆಕೆಯ ಸಮಯಪ್ರಜ್ಞೆಯ ಈ ದೃಶ್ಯ ರೈಲು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ರೈಲ್ವೆ ಇಲಾಖೆ ಇದನ್ನು ತನ್ನ ಎಕ್ಸ್​ ಪೇಜಿನಲ್ಲಿ ಹಂಚಿಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರಿಗೆ ಗುಡ್​​ನ್ಯೂಸ್​​: ನಮ್ಮ ಮೆಟ್ರೋ ಯೆಲ್ಲೋ ಲೈನ್​​ನಲ್ಲಿ ನಾಳೆಯಿಂದ 8ನೇ ರೈಲು ಸಂಚಾರ – Kannada News | Namma Metro Yellow Line to Get 8th Train from February 27

ಯೆಲ್ಲೋ ಲೈನ್​​ ಮೆಟ್ರೋImage Credit source: Google

ಬೆಂಗಳೂರು, ಫೆಬ್ರವರಿ 26: ಪಿಂಕ್ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚರಿಸಲಿರುವ ಬಿಇಎಂಎಲ್ ಸಂಸ್ಥೆ ತಯಾರಿಸಿದ ಮೂರನೇ ಡ್ರೈವರ್​ಲೆಸ್​ ರೈಲಿನ ಸೆಟ್ ಯಶಸ್ವಿಯಾಗಿ ಕೊತ್ತನೂರು ಡಿಪೋವನ್ನು ತಲುಪಿರುವ ಸುದ್ದಿಯ ನಡುವೆ ಬಿಎಂಆರ್​​ಸಿಎಲ್​​ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್​​ನ್ಯೂಸ್​​ ಕೊಟ್ಟಿದೆ. ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ನಾಳೆಯಿಂದ 8ನೇ ರೈಲು ಸಂಚಾರ ಮಾಡಲಿದೆ ಎಂದು ಪ್ರಕಟಣೆ  ತಿಳಿಸಿದೆ.

ಪ್ರಕಟಣೆಯಲ್ಲಿ ಏನಿದೆ?

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು 2026ರ ಫೆಬ್ರವರಿ 27ರಿಂದ ಹಳದಿ ಮಾರ್ಗದಲ್ಲಿ 8ನೇ ರೈಲನ್ನು ಪ್ರಯಾಣಿಕರ ಸೇವೆಗೆ ಒದಗಿಸುತ್ತಿದೆ. ಹೆಚ್ಚುವರಿ ರೈಲು ಸೇರ್ಪಡೆಯೊಂದಿಗೆ, ಸೋಮವಾರದಿಂದ ಶನಿವಾರದವರೆಗೆ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯ ವೇಳೆಯಲ್ಲಿ 10 ನಿಮಿಷಗಳ ಬದಲಿಗೆ 9 ನಿಮಿಷಗಳ ಅಂತರದಲ್ಲಿ ಹಾಗೂ ನಾನ್-ಪೀಕ್ ಅವಧಿಯಲ್ಲಿ 18 ನಿಮಿಷಗಳ ಬದಲಿಗೆ 14 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ. ಭಾನುವಾರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲಾ ದಿನಗಳಲ್ಲಿ ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ಟರ್ಮಿನಲ್‌ ನಿಲ್ದಾಣಗಳಿಂದ ಹೊರಡುವ ಮೊದಲ ಮತ್ತು ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್​​ಸಿಎಲ್​​ ತಿಳಿಸಿದೆ.

ಇದನ್ನೂ ಓದಿ: ಪಿಂಕ್ ಲೈನ್ ಮೆಟ್ರೋ; ಕೋತ್ತನೂರು ಡಿಪೋಗೆ ಮೂರನೇ ರೈಲು ಸೆಟ್ ಆಗಮನ

2025ರ ಆಗಸ್ಟ್ 10ರಂದು ಯೆಲ್ಲೋ ಲೈನ್​​ ಉದ್ಘಾಟನೆಯಾಗಿದ್ದು, ಆಗಸ್ಟ್​​ 11ರಿಂದ ವಾಣಿಜ್ಯ ಸಂಚಾರವನ್ನು ಈ ಮಾರ್ಗದಲ್ಲಿ ನಮ್ಮ ಮೆಟ್ರೋ ಆರಂಭಿಸಿತ್ತು. 19.15 ಕಿಮೀ ವಿಸ್ತೀರ್ಣವಿರುವ ಈ ಮಾರ್ಗದಲ್ಲಿ ಸದ್ಯ 7 ಮೆಟ್ರೋ ರೈಲುಗಳು ಮಾತ್ರ ಸಂಚಾರ ನಡೆಸುತ್ತಿದ್ದು, 8ನೇ ರೈಲಿನ ಸೇರ್ಪಡೆಯಿಂದ ರೈಲುಗಳ ಸಂಚಾರದ ನಡುವಿನ ಸಮಯ ಮಾತ್ರವಲ್ಲದೆ, ಪ್ರಯಾಣಿಕರ ದಟ್ಟಣೆಯೂ ಇಳಿಕೆಯಾಗುವ ನಿರೀಕ್ಷೆ ಇದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಯ ಮೊದಲ ಫೋಟೋ ವೈರಲ್ – Kannada News | Rashmika Mandanna and Vijay Deverakonda share the first photo of their marriage

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರು ಮದುವೆ ಆಗಿದ್ದಾರೆ. ಫೆಬ್ರವರಿ 26ರಂದು ಅದ್ದೂರಿಯಾಗಿ ವಿವಾಹ ನಡೆದಿದೆ. ಮದುವೆ ಫೋಟೋ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗಾಗಿ ರಶ್ಮಿಕಾ (Rashmika Mandanna) ಮತ್ತು ವಿಜಯ್ ಮೊದಲ ಪೋಸ್ಟ್ ಮಾಡಿದ್ದಾರೆ. ತಮ್ಮ ಮದುವೆಯ ಸುಂದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿರೋಶ್ ವಿವಾಹದ ಫೋಟೋಗಳು (Virosh Marriage Photo) ಕ್ಷಣಾರ್ಧದಲ್ಲಿ ವೈರಲ್ ಆಗಿವೆ. ಸತಿ-ಪತಿ ಆಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ತೆಲುಗು ಸಂಪ್ರದಾಯದಂತೆ ವಿರೋಶ್ ಮದುವೆ ನಡೆದಿದೆ. ಈ ಮದುವೆಗೆ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಂದಾಜು 100 ಮಂದಿ ಮಾತ್ರ ಈ ಮದುವೆಗೆ ಹಾಜರಿ ಹಾಕಿದ್ದಾರೆ ಎನ್ನಲಾಗಿದೆ. ತೀರಾ ಇತ್ತೀಚಿನ ದಿನಗಳ ತನಕ ಮದುವೆ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಈಗ ಫೋಟೋ ಶೇರ್ ಮಾಡಿದ್ದಾರೆ.

ಹಲವು ವರ್ಷಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಡೇಟಿಂಗ್ ಮಾಡುತ್ತಿದ್ದರು. ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಅವರ ನಡುವೆ ಪ್ರೀತಿ ಚಿಗುರಿತ್ತು. ಆ ಬಗ್ಗೆ ಇಡೀ ಜಗತ್ತಿಗೆ ಅನುಮಾನ ಇದ್ದರೂ ಕೂಡ ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಆಮದು ನಿಷೇಧಿಸಿದ ಸೌದಿ – Kannada News | Saudi Arabia bans poultry meat and eggs import from India and 39 other countries

ರಿಯಾಧ್, ಫೆಬ್ರುವರಿ 26: ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ (Poultry meat and eggs) ಆಮದು ಮಾಡಿಕೊಳ್ಳುವುದನ್ನು ಸೌದಿ ಆಡಳಿತ (Saudi Arabia) ನಿಷೇಧಿಸಿದೆ. ಹಕ್ಕು ಜ್ವರ ಮತ್ತಿತರ ಪ್ರಾಣಿಜನ್ಯ ಕಾಯಿಲೆಗಳು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸೌದಿಯ ಆಹಾರ ಪ್ರಾಧಿಕಾರವಾದ ಎಸ್​ಎಫ್​ಡಿಎ ಈ ನಿಷೇಧ ಕ್ರಮ ಜರುಗಿಸಿದೆ.

‘ಸ್ಥಳೀಯ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಿಸುವ ಗುರಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಎಸ್​ಎಫ್​ಡಿಎ ಹೇಳಿಕೆ ನೀಡಿದೆ.

ಭಾರತವಲ್ಲದೆ, ಚೀನಾ, ಬಾಂಗ್ಲಾದೇಶ, ಇಂಡೋನೇಷ್ಯ, ಇರಾನ್, ಯುಕೆ ಮತ್ತಿತರ ದೇಶಗಳಿಂದ ಪೂರೈಕೆಯಾಗುವ ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ಸೌದಿ ಪ್ರವೇಶ ಸಿಗುವುದಿಲ್ಲ.

ಇದನ್ನೂ ಓದಿ: ಭಾರತ-ಇಸ್ರೇಲ್ ನಡುವೆ ಹಲವು ಒಪ್ಪಂದಗಳಿಗೆ ಸಹಿ; ಶೀಘ್ರದಲ್ಲೇ ಎಫ್​ಟಿಎ ಏರ್ಪಡುವ ಸಾಧ್ಯತೆ

ಜಾಗತಿಕವಾಗಿ ಹಕ್ಕಿ ಜ್ವರ ಇತ್ಯಾದಿ ಪ್ರಾಣಿಜನ್ಯ ರೋಗಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. 40 ದೇಶಗಳ ಈ ಆಮದುಗಳ ಮೇಲೆ ಪೂರ್ಣ ನಿಷೇಧ ಹಾಕಲಾಗಿದ್ದರೆ, ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್ ಮೊದಲಾದ 16 ದೇಶಗಳ ಮೇಲೆ ಪಾಕ್ಷಿಕವಾದ ನಿರ್ಬಂಧಗಳನ್ನು ತರಲಾಗಿದೆ. ಅಂದರೆ, ಈ ದೇಶಗಳಲ್ಲಿರುವ ನಿರ್ದಿಷ್ಟ ಪ್ರದೇಶಗಳಿಂದ ಬರುವ ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ನಿಷೇಧ ಇರುತ್ತದೆ.

ಅನುಮೋದಿತ ವಿಧಾನಗಳನ್ನು ಅನುಸರಿಸುವ ಉತ್ಪನ್ನಗಳಿಗೆ ತಡೆ ಇಲ್ಲ…

ವೈರಸ್​ಗಳನ್ನು ಹರಡದಂತೆ ನಿಯಂತ್ರಿಸಬಲ್ಲ ಹೀಟ್ ಟ್ರೀಟ್ಮೆಂಟ್ ಮತ್ತಿತರ ಅನುಮೋದಿತ ವಿಧಾನಗಳನ್ನು ಬಳಸುವಂತಹ ಪೌಲ್ಟ್ರಿ ಫಾರ್ಮ್​ಗಳಲ್ಲಿ ತಯಾರಾದ ಕೋಳಿ ಮಾಂಸ, ಮೊಟ್ಟೆ ಮತ್ತಿತರ ಉತ್ಪನ್ನಗಳಿಗೆ ನಿಷೇಧ ಇರುವುದಿಲ್ಲ. ಈ ರೀತಿಯ ಪೌಲ್ಟ್ರಿ ಫಾರ್ಮ್​ಗಳು ತಮ್ಮ ದೇಶದ ಪ್ರಾಧಿಕಾರಗಳಿಂದ ಮಾನ್ಯಗೊಂಡಿರಬೇಕು. ಎಲ್ಲಾ ಆರೋಗ್ಯ ನಿಯಮಾವಳಿಗಳನ್ನು ಪಾಲಿಸಿರಬೇಕು ಎನ್ನುವ ನಿಯಮ ಇದೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಗೆ 7 ವರ್ಷ; 22ನೇ ಕಂತಿನ ಹಣ ಸದ್ಯದಲ್ಲೇ

ಸೌದಿ ನಿಷೇಧದಿಂದ ಭಾರತಕ್ಕೆಷ್ಟು ನಷ್ಟ?

ಭಾರತದಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಸೌದಿ ಅರೇಬಿಯಾಗೆ ಬಹಳ ಹೆಚ್ಚು ರಫ್ತಾಗುವುದಿಲ್ಲ. ಡೈರಿ ಉತ್ಪನ್ನಗಳು, ಮೊಟ್ಟೆ, ಜೇನು ಮತ್ತಿತರ ಉತ್ಪನ್ನಗಳು 2024ರಲ್ಲಿ ಭಾರತದಿಂದ ಸೌದಿಗೆ ರಫ್ತಾಗಿದ್ದು 64 ಮಿಲಿಯನ್ ಡಾಲರ್. ಅಂದರೆ ಸುಮಾರು 500 ಕೋಟಿ ರೂ. ಇದರಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯ ರಫ್ತು ಪ್ರಮಾಣ ಇನ್ನೂ ಕಡಿಮೆ. ಹೀಗಾಗಿ, ಸೌದಿಯ ಈ ನಿಷೇಧ ಕ್ರಮದಿಂದ ಭಾರತಕ್ಕೆ ಕೆಲವೇ ಕೋಟಿ ರೂನಷ್ಟು ರಫ್ತು ಅವಕಾಶ ಕೈತಪ್ಪಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IND vs ZIM: ನಿರ್ಣಾಯಕ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ – Kannada News | India vs Zimbabwe T20 WC Super 8: Chennai Showdown! Toss, Squads and Semifinal Quest

ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ 2026 ರ ಟಿ20 ವಿಶ್ವಕಪ್​ನ ಸೂಪರ್ 8 ಸುತ್ತಿನಲ್ಲಿ ಆತಿಥೇಯ ಟೀಂ ಇಂಡಿಯಾ ಹಾಗೂ ಜಿಂಬಾಬ್ವೆ ತಂಡಗಳು ಮುಖಾಮುಖಿಯಾಗಿವೆ. ಇದು ಭಾರತದಲ್ಲಿ ಟೀಂ ಇಂಡಿಯಾ ವಿರುದ್ಧ ಜಿಂಬಾಬ್ವೆಯ ಮೊದಲ ಟಿ20 ಪಂದ್ಯವಾಗಿದೆ. ಸೂಪರ್ 8 ಸುತ್ತಿನಲ್ಲಿ ಎರಡೂ ತಂಡಗಳಿಗೆ ಇದು ಎರಡನೇ ಪಂದ್ಯವಾಗಿದ್ದು, ಉಭಯ ತಂಡಗಳು ಆಡಿರುವ ಮೊದಲ ಪಂದ್ಯದಲ್ಲಿ ಸೋತಿವೆ. ಹೀಗಾಗಿ ಸೆಮಿಫೈನಲ್ ಕನಸು ಜೀವಂತವಾಗಿರಬೇಕೆಂದರೆ, ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಅವಶ್ಯಕವಾಗಿದೆ. ಅದರಲ್ಲೂ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ತವರಿನಲ್ಲಿ ತನ್ನ ಪ್ರತಿಷ್ಠೆ ಉಳಿಸಿಕೊಳ್ಳಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

ಟಾಸ್ ಗೆದ್ದ ಜಿಂಬಾಬ್ವೆ

ಇನ್ನು ಈ ನಿರ್ಣಾಯಕ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಜಾ ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಜೊತೆಗೆ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದ್ದು, ಜಿಂಬಾಬ್ವೆ ತಂಡದಲ್ಲಿ ಒಂದು ಬದಲಾವಣೆಯಾಗಿದ್ದರೆ, ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳಾಗಿವೆ. ಇಂದಿನ ಪಂದ್ಯದಿಂದ ರಿಂಕು ಸಿಂಗ್ ಹಾಗೂ ವಾಷಿಂಗ್ಟನ್ ಸುಂದರ್ ಹೊರಗುಳಿದಿದ್ದರೆ, ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ಆಡುತ್ತಿದ್ದಾರೆ.

ಮುಖಾಮುಖಿ ದಾಖಲೆ

ಇದು ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಜಿಂಬಾಬ್ವೆಯ ಎರಡನೇ ಮುಖಾಮುಖಿಯಾಗಲಿದೆ. 2022 ರ ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಮೆಲ್ಬೋರ್ನ್‌ನಲ್ಲಿ ನಡೆದ ಆ ಪಂದ್ಯವನ್ನು ಭಾರತ 71 ರನ್‌ಗಳಿಂದ ಗೆದ್ದುಕೊಂಡಿತ್ತು. ಆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 25 ಎಸೆತಗಳಲ್ಲಿ 61 ರನ್ ಬಾರಿಸಿದ್ದರು. ಹಾಗೆಯೇ ಜಿಂಬಾಬ್ವೆ ತಂಡವು ಭಾರತದ ವಿರುದ್ಧ ಭಾರತದ ನೆಲದಲ್ಲಿ 24 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19 ಏಕದಿನ ಪಂದ್ಯಗಳು ಮತ್ತು ಐದು ಟೆಸ್ಟ್ ಪಂದ್ಯಗಳು ಸೇರಿವೆ.

ಉಭಯ ತಂಡಗಳು

ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ಜಿಂಬಾಬ್ವೆ ತಂಡ: ತಡಿವಾನಾಶೆ ಮಾರುಮಣಿ (ವಿಕೆಟ್‌ಕೀಪರ್), ಬ್ರಿಯಾನ್ ಬೆನೆಟ್, ಡಿಯೋನ್ ಮೈಯರ್ಸ್, ರಿಯಾನ್ ಬರ್ಲ್, ಸಿಕಂದರ್ ರಜಾ (ನಾಯಕ), ಟೋನಿ ಮುನ್ಯೊಂಗಾ, ತಶಿಂಗಾ ಮುಸೆಕಿವಾ, ಬ್ರಾಡ್ ಇವಾನ್ಸ್, ಟಿನೊಟೆಂಡಾ ಮಪೋಸಾ, ಬ್ಲೆಸಿಂಗ್ ಮುಜರಬಾನಿ, ರಿಚರ್ಡ್ ನಾಗರವಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:49 pm, Thu, 26 February 26

Source link

ಮಲೆನಾಡಿಗರ ದಶಕಗಳ ಕನಸು ನನಸು ಮಾಡಿದ ಕೇಂದ್ರ ಸರ್ಕಾರ – Kannada News | Akashavani Bhadravati FM Upgraded to 10kW: Malenadu Radio Dream Realized in Shivamogga

ಶಿವಮೊಗ್ಗ, ಫೆಬ್ರವರಿ 26: ಆಕಾಶವಾಣಿ ಭದ್ರಾವತಿ ಕೇಂದ್ರದ ಎಫ್​ಎಂ (FM) ಪ್ರಸಾರ ಕೇಂದ್ರ ಮೇಲ್ದರ್ಜೆಗೇರಿಸಲಾಗಿದೆ. 10 ಕಿಲೋವ್ಯಾಟ್ ಎಫ್​ಎಂ ಟ್ರಾನ್ಸ್‌ಮೀಟರ್ ಲೋಕಾರ್ಪಣೆಗೊಳಿಸಿರುವುದು ದಶಕಗಳ ಕನಸು ನನಸಾದಂತಾಗಿದೆ. ಮಲೆನಾಡು ಎಫ್​​ಎಂ ಎಂದೇ ಖ್ಯಾತಿ ಪಡೆದಿದ್ದ ಆಕಾಶವಾಣಿ ಭದ್ರಾವತಿ ಕೇಂದ್ರ 1 ಕಿಲೋವ್ಯಾಟ್‌ದಿಂದ 10 ಕಿಲೋವ್ಯಾಟ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿರುವ ಈ ಎಫ್​ಎಂ ಕೇಂದ್ರದ ಬಾನುಲಿ ಈಗ ಎಲ್ಲೆಡೆ ಕನ್ನಡಿರಿಗೆ ಪಸರಿಸುವಂತಾಗಿದೆ.

10 ಕಿಲೋವ್ಯಾಟ್ ಎಫ್.ಎಂ. ಟ್ರಾನ್ಸ್‌ಮೀಟರ್ ಲೋಕಾರ್ಪಣೆ

ಮಲೆನಾಡಿಗರ ಬಹು ದಶಕಗಳ ಕನಸು ನನಸಾದಂತಾಗಿದೆ. ಭದ್ರಾವತಿ ಆಕಾಶವಾಣಿ ಭದ್ರಾವತಿ ರೇಡಿಯೋ ಬಾನುಲಿ ಈಗ ಎಲ್ಲೆಡೆ ಪಸರಿಸುವಂತಾಗಿದೆ. ಇದು ಮಲೆನಾಡಿನ ರೇಡಿಯೋ ಕೇಳುಗರಿಗೆ ಹರ್ಷವನ್ನುಂಟು ಮಾಡಿದೆ. ಅದರಂತೆ ಇಂದು 10 ಕಿಲೋವ್ಯಾಟ್ ಎಫ್.ಎಂ. ಟ್ರಾನ್ಸ್‌ಮೀಟರ್ ಲೋಕಾರ್ಪಣೆ ಮಾಡಲಾಯಿತು.

ಇದನ್ನೂ ಓದಿ: ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಆತಂಕ

ಶಿವಮೊಗ್ಗದ ವಿದ್ಯಾನಗರದಲ್ಲಿರುವ ನೂತನ ಎಫ್.ಎಂ. ಕೇಂದ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಸಂಸದೀಯ ಸಚಿವ ಡಾ. ಎಲ್ ಮುರುಗನ್ ಲೋಕಾರ್ಪಣೆಗೊಳಿಸಿದರು. ಮಲೆನಾಡು ಎಫ್‌.ಎಂ. ಎಂದೇ ಖ್ಯಾತಿ ಪಡೆದಿದ್ದ ಆಕಾಶವಾಣಿ ಭದ್ರಾವತಿ ಕೇಂದ್ರ ಈಗ 1 ಕಿಲೋವ್ಯಾಟ್‌ದಿಂದ 10 ಕಿಲೋವ್ಯಾಟ್ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದ್ದು, ಶಿವಮೊಗ್ಗದಲ್ಲಿ ಡಿ.ಡಿ. ಚಂದನದ ಟವರ್​ನ್ನು ಇದೀಗ ಎಫ್.ಎಂ. ಕೇಂದ್ರಕ್ಕೆ ಬಳಸಿಕೊಂಡು ಮೇಲ್ದರ್ಜೆಗೇರಿಸಲಾಗಿದೆ.

ಅಲ್ಲದೇ, ಶಿವಮೊಗ್ಗದ ಪಾರ್ಕ್​ಗಳಲ್ಲಿ ಎಫ್.ಎಂ. ರೇಡಿಯೋ ಅಳವಡಿಕೆ ಕಾರ್ಯ ಪೈಲೆಟ್ ಪ್ರಾಜೆಕ್ಟ್ ಆಗಿ ತೆಗೆದುಕೊಳ್ಳಲಾಗುವುದೆಂದು ಕೇಂದ್ರ ಸಚಿವರು ಘೋಷಣೆ ಮಾಡಿದ್ದು, ಶಿವಮೊಗ್ಗ ಬಳಿಕ ಇಡೀ ದೇಶದಲ್ಲಿ ಈ ಯೋಜನೆ ಅಳವಡಿಸಲಾಗುವುದು. ನಮ್ಮ ಇಲಾಖೆ ಮೂಲಕವೇ ಪಾರ್ಕ್​ಗಳಲ್ಲಿ ಎಫ್.ಎಂ. ರೇಡಿಯೋ ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿವರು ಘೋಷಿಸಿದ್ದಾರೆ.

ಎಲ್ಲೆಲ್ಲಿ ಪ್ರಸಾರ?

ಅದರಂತೆ, ಎಫ್.ಎಂ. ಪ್ರಸಾರ ಕೇಂದ್ರ ಮೇಲ್ದರ್ಜೆಗೇರಿಸುವುದರಿಂದ ಪ್ರಯೋಜನ ಮತ್ತು ಅನುಕೂಲಗಳು ಬಹಳಷ್ಟಿದ್ದು, ಪ್ರಸ್ತುತ ಭದ್ರಾವತಿಯಲ್ಲಿ ಇರುವ 1 ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ. ಟ್ರಾನ್ಸ್​ಮೀಟರ್ ವ್ಯಾಪ್ತಿ 100 ಮೀಟರ್ ಇದ್ದು, ನೂತನ ಅಧಿಕ ಸಾಮರ್ಥ್ಯದ ಟ್ರಾನ್ಸ್​ಮೀಟರ್ ಅಳವಡಿಕೆಯಿಂದ ವ್ಯಾಪ್ತಿ 150 ಮೀಟರ್ ಎತ್ತರದಲ್ಲಿ ಬರುತ್ತದೆ. ಅಂದರೆ ಪ್ರಸಾರ ಸಾಮರ್ಥ್ಯ 10 ಪಟ್ಟು ಹೆಚ್ಚಾಗಲಿದೆ. ಈಗ ಪ್ರಸಾರವಾಗುತ್ತಿರುವ ವ್ಯಾಪ್ತಿಯು ಶಿವಮೊಗ್ಗ, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಇನ್ನು ಮುಂದೆ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗ, ಚಿತ್ರದುರ್ಗ ವ್ಯಾಪ್ತಿ ಮತ್ತು ಹಾಸನ, ಉಡುಪಿ, ಉತ್ತರ ಕನ್ನಡ ಹಾಗೂ ತುಮಕೂರು ಜಿಲ್ಲೆಯ ಕೆಲ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೂಡ ಪ್ರಸಾರ ಲಭ್ಯವಾಗಲಿದೆ.

ಇದನ್ನೂ ಓದಿ: ಬೀದಿ ನಾಯಿಗಳ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಜನ: ಒಂದೇ ದಿನ 36ಕ್ಕೂ ಅಧಿಕ ಮಂದಿ ಮೇಲೆ ದಾಳಿ

ಒಟ್ಟಾರೆ ಎಫ್.ಎಂ. ಪ್ರಸಾರ ಸೇವೆ ಆರಂಭದಿಂದ ಸಾಮಾನ್ಯ ಕೀಪ್ಯಾಡ್ ಸೇರಿದಂತೆ ಅಂಡ್ರಾಯ್ಡ್ ಮೊಬೈಲ್​​ನಲ್ಲೂ ನ್ಯೂಸ್ ಆನ್ ಏರ್‌ಆಪ್‌ನಲ್ಲಿ ಜಗತ್ತಿನಾದ್ಯಂತ ಕೇಳಬಹುದಾಗಿದೆ. ಇದಲ್ಲದೆ ಕಾರ್ ರೇಡಿಯೋದಲ್ಲಿ ಸುತ್ತಮುತ್ತಲಿನ 80-100 ಕಿಲೋಮೀಟರ್​ವರೆಗೆ ಪ್ರಸಾರದ ವ್ಯಾಪ್ತಿ ಲಭ್ಯವಾಗಿರುವುದು ಮಲೆನಾಡಿಗರಿಗೆ ಸಂತಸದ ವಿಷಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಿಮಾನ ಪ್ರಯಾಣಿಕರಿಗೆ ಒಳ್ಳೆ ಸುದ್ದಿ; ಟಿಕೆಟ್ ಮರುಪಾವತಿಯ ನಿಯಮದಲ್ಲಿ ಮಹತ್ವದ ಬದಲಾವಣೆ – Kannada News | Good news for flyers DGCAs Big Relief For Passengers new norms for ticket refund Check details

ನವದೆಹಲಿ, ಫೆಬ್ರವರಿ 26: ವಿಮಾನ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಭಾರತದ ವಾಯುಯಾನ ನಿಯಂತ್ರಕ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನ ಟಿಕೆಟ್ ಮರುಪಾವತಿಯ ಮಾನದಂಡಗಳನ್ನು ಪರಿಷ್ಕರಿಸಿದೆ. ಈ ಹೊಸ ಬದಲಾವಣೆಯಿಂದ ರದ್ದತಿ ಮತ್ತು ವಿಮಾನದ ವೇಳಾಪಟ್ಟಿಗಳಲ್ಲಿನ ಬದಲಾವಣೆಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಹೊಸ ನಿಯಮದ ಪ್ರಕಾರ ಪ್ರಯಾಣಿಕರು ಬುಕಿಂಗ್ (Flight Booking) ಮಾಡಿದ 48 ಗಂಟೆಗಳ ಒಳಗೆ ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಅವರು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಿಲ್ಲ. ವಿಮಾನಯಾನ ಸಂಸ್ಥೆಗಳು 14 ಕೆಲಸದ ದಿನಗಳಲ್ಲಿ ಮರುಪಾವತಿಯನ್ನು ಪೂರ್ಣಗೊಳಿಸಬೇಕು. ಟಿಕೆಟ್‌ಗಳನ್ನು ಬುಕ್ ಮಾಡಿದ 24 ಗಂಟೆಗಳ ಒಳಗೆ ಸರಳವಾದ ಹೆಸರು ತಿದ್ದುಪಡಿಗಳಿದ್ದರೆ ಅದಕ್ಕೆ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನದ ಅಡಚಣೆಯಿಂದ ಭಾರತೀಯ ವಾಯುಯಾನ ವಲಯವು ತೊಂದರೆಗೊಳಗಾದಾಗ ಈ ರೀತಿ ಟಿಕೆಟ್ ರದ್ದತಿ, ಟಿಕೆಟ್ ಹೆಸರು ಬದಲಾವಣೆ, ದಿನಾಂಕ ಬದಲಾವಣೆಯ ಸಮಸ್ಯೆಗಳು ಬಹಳ ತೀವ್ರಗೊಂಡವು. ಇದೀಗ ಇವುಗಳಿಗೆ ಪ್ರಯಾಣಿಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಇದನ್ನೂ ಓದಿ: ಚೆನ್ನೈ ವಿಮಾನ ನಿಲ್ದಾಣದಲ್ಲಿ 5 ಗಂಟೆಗೂ ಹೆಚ್ಚು ಕಾಲ ಇಂಡಿಗೋ ವಿಮಾನದೊಳಗೆ ಸಿಲುಕಿಕೊಂಡ ಪ್ರಯಾಣಿಕರು

ಇನ್ಮುಂದೆ, ಪ್ರಯಾಣಿಕರು 48 ಗಂಟೆಗಳ ನಂತರ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ ಅಥವಾ ಬದಲಾಯಿಸಿದರೆ ಅವರು ಯಾವುದೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅವರು ವಿಮಾನಯಾನ ಸಂಸ್ಥೆಗಳೊಂದಿಗೆ ನೇರವಾಗಿ ಟಿಕೆಟ್‌ಗಳನ್ನು ಬುಕ್ ಮಾಡಿದರೂ ಸಹ ಕೆಲವು ಷರತ್ತುಗಳನ್ನು ಹೊರತುಪಡಿಸಿ ರದ್ದತಿಯ ಸಮಯದಲ್ಲಿ ಅವರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಅಲ್ಲದೆ, ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಪ್ರಯಾಣಿಕರು ಹೆಚ್ಚುವರಿ ಶುಲ್ಕಗಳಿಲ್ಲದೆ ಹೆಸರಿನಲ್ಲಿ ಕಾಗುಣಿತ ದೋಷ ಅಥವಾ ಇತ್ಯಾದಿ ಸಣ್ಣಪುಟ್ಟ ತಪ್ಪನ್ನು ವಿಮಾನಯಾನ ಸಂಸ್ಥೆಗಳು ಸರಿಪಡಿಸಲಿವೆ. ಆದರೆ, ಇದು ವಿಮಾನಯಾನ ಸಂಸ್ಥೆಯ ಸ್ವಂತ ವೆಬ್‌ಸೈಟ್‌ನಲ್ಲಿ ಮಾಡಿದ ಬುಕಿಂಗ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಪ್ರಯಾಣಿಕರು ಟ್ರಾವೆಲ್ ಏಜೆಂಟ್‌ಗಳು ಅಥವಾ ಮೂರನೇ ವ್ಯಕ್ತಿಯ ಪೋರ್ಟಲ್‌ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಿದರೆ ಅದಕ್ಕೆ ಈ ನಿಯಮ ಅನವಯವಾಗುವುದಿಲ್ಲ. ಆದರೂ ವಿಮಾನಯಾನ ಸಂಸ್ಥೆಗಳು 14 ಕೆಲಸದ ದಿನಗಳಲ್ಲಿ ಮರುಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link