ಪ್ರತಿಯೊಬ್ಬರೂ ಸಹ ಈ ಸಮಾಜದಲ್ಲಿ ಗೌರವವನ್ನು (respect) ಗಳಿಸಬೇಕು, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಬಯಸುತ್ತಾರೆ. ಈ ಗೌರವವನ್ನು ಗಳಿಸುವುದು ಎಷ್ಟು ಕಷ್ಟವೋ ಅದನ್ನು ಕಾಪಾಡಿಕೊಳ್ಳುವುದು ಸಹ ಅಷ್ಟೇ ಕಷ್ಟ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಇಷ್ಟು ಮಾತ್ರವಲ್ಲ ಕೆಲವೊಂದು ಅಭ್ಯಾಸಗಳ ಕಾರಣದಿಂದ ಗಳಿಸಿದ ಗೌರವವೆಲ್ಲಾ ಹಾಳಾಗಿಬಿಡುತ್ತದೆ ಎಂದಿದ್ದಾರೆ. ಕೆಲವೊಮ್ಮೆ ಕೆಲವರು ತಮ್ಮದೇ ಆದ ಕೆಲವು ಕೆಟ್ಟ ಅಭ್ಯಾಸಗಳಿಂದಾಗಿ ಸಮಾಜದಲ್ಲಿ ತಮ್ಮ ಗೌರವ, ವ್ಯಕ್ತಿತ್ವವನ್ನು ಕಳೆದುಕೊಳ್ಳುತ್ತಾರಂತೆ. ಹಾಗಿದ್ರೆ ಯಾವ ಅಭ್ಯಾಸಗಳು ಗೌರವವನ್ನು ಹಾಳು ಮಾಡುತ್ತದೆ ಎಂಬುದನ್ನು ನೋಡೋಣ ಬನ್ನಿ.
ಸಮಾಜದಲ್ಲಿ ಗೌರವವನ್ನು ಹಾಳು ಮಾಡುವ ಅಭ್ಯಾಸಗಳಿವು:
ಅತಿಯಾಗಿ ಮಾತನಾಡುವ ಅಭ್ಯಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಎಲ್ಲೆಡೆ ಯೋಚಿಸದೆ ಮಾತನಾಡುವ ಯಾರಾದರೂ ಸಮಾಜದಲ್ಲಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾರೆ. ಹೆಚ್ಚು ಮಾತನಾಡುವವರು ತಮ್ಮ ವೈಯಕ್ತಿಕ ವಿಷಯಗಳು, ಯೋಜನೆ ಮತ್ತು ದೌರ್ಬಲ್ಯಗಳನ್ನು ಇತರರಿಗೆ ಬಹಿರಂಗಪಡಿಸುತ್ತಾರೆ. ಸಮಾಜವು ಅಂತಹ ಜನರನ್ನು ಎಂದಿಗೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಹಿತಮಿತವಾಗಿ ಬುದ್ಧಿವಂತಿಕೆಯಿಂದ ಮಾತನಾಡುವವರು ಬುದ್ಧಿವಂತರು, ಅಂತಹವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವಿರುತ್ತದೆ.
ಎಲ್ಲರನ್ನೂ ಮೆಚ್ಚಿಸಲು ಪ್ರಯತ್ನಿಸುವ ಅಭ್ಯಾಸ: ಕೆಲವು ಜನರು ಯಾವಾಗಲೂ ಇತರರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುತ್ತಾರೆ. ಅಂತಹ ವ್ಯಕ್ತಿಗಳು ತಮ್ಮ ಸ್ವಂತ ಆಲೋಚನೆ ಮತ್ತು ಸ್ವಾಭಿಮಾನವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ. ಇಂತಹವರಿಗೆ ಯಾವುದೇ ಗೌರವ ಸಹ ಇರುವುದಿಲ್ಲ. ಸಮಾಜದಲ್ಲಿ ನೀವು ಗೌರವಾನ್ವಿತರಾಗಲು ಬಯಸಿದರೆ, ನಿಮ್ಮ ಮಿತಿಗಳನ್ನು ನಿಗದಿಪಡಿಸುವುದು ಮತ್ತು ಯಾವುದೇ ತಪ್ಪನ್ನು ಭಯವಿಲ್ಲದೆ ವಿರೋಧಿಸುವುದು ಬಹಳ ಮುಖ್ಯವಾಗುತ್ತದೆ.
ಇದನ್ನೂ ಓದಿ: ಶ್… ನಿಮ್ಮ ಈ ಸೀಕ್ರೆಟ್‌ಗಳನ್ನು ಯಾರೊಂದಿಗೂ ಶೇರ್ ಮಾಡಬೇಡಿ
ಕೆಟ್ಟವರ ಸಹವಾಸ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿ ಒಳ್ಳೆಯವನೋ, ಕೆಟ್ಟವನೋ ಎಂಬುದನ್ನು ಆತನ ಸಹವಾಸ ಮತ್ತು ಸ್ನೇಹಿತರಿಂದಲೂ ನಿರ್ಧಾರವಾಗುತ್ತದೆ. ಒಬ್ಬ ವ್ಯಕ್ತಿಯು ನಕಾರಾತ್ಮಕ ಅಥವಾ ಕೆಟ್ಟ ಸ್ವಭಾವದ ಜನರೊಂದಿಗಿನ ಸಹವಾಸದಲ್ಲಿದ್ದರೆ ಕ್ರಮೇಣ ಆತನ ವ್ಯಕ್ತಿತ್ವ, ಗೌರವವೂ ಹಾಳಾಗುತ್ತದೆ. ಹಾಗಾಗಿ ಯಾವಾಗಲೂ ಒಳ್ಳೆಯವರ ಸಹವಾಸವನ್ನು ಮಾಡಬೇಕು. ಇದಲ್ಲದೆ ಕೆಟ್ಟ ಚಟಗಳು ಕೂಡ ವ್ಯಕ್ತಿಯ ಗೌರವವನ್ನು ಹಾಳು ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
