‘ನನ್ನ ಪತಿ, ವಿಸ್ಟರ್ ವಿಜಯ್ ದೇವರಕೊಂಡ ಅವರನ್ನು ನಾನು ನಿಮಗೆ ಪರಿಚಯಿಸುತ್ತಿದ್ದೇನೆ. ನಿಜವಾದ ಪ್ರೀತಿ ಎಂದರೆ ಏನು ಅಂತ ಕಲಿಸಿದ ವ್ಯಕ್ತಿ. ನೆಮ್ಮದಿಯಿಂದ ಇರುವುದು ಅಂದ್ರೆ ಹೇಗಿರುತ್ತದೆ ಎಂಬುದನ್ನು ಕಲಿಸಿದ ವ್ಯಕ್ತಿ. ದೊಡ್ಡ ಕನಸು ಕಾಣುವುದನ್ನು ಕಲಿಸಿದ ವ್ಯಕ್ತಿ’ ಎಂದು ರಶ್ಮಿಕಾ ಅವರು ಪತಿಯ ಗುಣಗಾನ ಮಾಡಿದ್ದಾರೆ.
‘ಯಾರೂ ನೋಡುತ್ತಿಲ್ಲ ಎಂಬಂತೆ ನಾನು ಕುಣಿಯುವುದನ್ನು ಎಂದಿಗೂ ತಡೆಯದ ವ್ಯಕ್ತಿ. ಸ್ನೇಹಿತರ ಜೊತೆ ಪ್ರಯಾಣ ಮಾಡುವುದು ಎಂದಿಗೂ ಅತ್ಯುತ್ತಮ ಸಂಗತಿ ಎಂಬುದನ್ನು ತೋರಿಸಿದ ವ್ಯಕ್ತಿ. ನಾನು ಈ ವ್ಯಕ್ತಿಯ ಕುರಿತು ಒಂದು ಪುಸ್ತಕವನ್ನೇ ಬರೆಯಬಹುದು’ ಎಂದು ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ವ್ಯಕ್ತಿತ್ವದ ಬಗ್ಗೆ ವಿವರಣೆ ನೀಡಿದ್ದಾರೆ.
‘ನಾನು ಯಾವಾಗಲೂ ಕನಸು ಕಂಡಿದ್ದ ಮಹಿಳೆಯಾಗಿದ್ದೇನೆ, ಏಕೆಂದರೆ ನೀನು ಅವಳನ್ನು ಇಂದಿನ ಸ್ಥಿತಿಗೆ ತಂದಿರುವೆ. ನಾನು ನಿಜವಾಗಿಯೂ ಧನ್ಯಳು. ನಿನ್ನ ಬಗ್ಗೆ ನನಗೆ ಇರುವ ಫೀಲಿಂಗ್ಸ್ ವಿವರಿಸಲು ನನಗೆ ಪದಗಳೇ ಸಾಲುವುದಿಲ್ಲ. ಅದನ್ನು ನಾನು ನಿನಗೆ ಈಗಾಗಲೇ ಹೇಳಿದ್ದೇನೆ’ ಎಂದು ರಶ್ಮಿಕಾ ಮಂದಣ್ಣ ಭಾವುಕವಾಗಿ ಈ ಸಾಲುಗಳನ್ನು ಪೋಸ್ಟ್ ಮಾಡಿದ್ದಾರೆ.
‘ನನ್ನ ಸಾಧನೆ, ಕಷ್ಟಗಳು, ಖುಷಿ, ದುಃಖ, ಬದುಕು ಎಲ್ಲದಕ್ಕೂ ಈಗ ಒಂದು ಅರ್ಥ ಬಂದಿದೆ. ಯಾಕೆಂದರೆ, ಈಗ ನಾನು ನಿನ್ನನ್ನು ಪಡೆದಿರುವೆ. ಇದನ್ನೆಲ್ಲ ನೀನು ನೋಡುತ್ತಿರುವೆ. ಇದರ ಭಾಗವಾಗಿರುವೆ. ನಿನ್ನ ಹೆಂಡತಿಯಾಗಿದ್ದಕ್ಕೆ ನನಗೆ ಬಹಳ ಸಂತೋಷ ಆಗುತ್ತಿದೆ. ಇದು ಪಾರ್ಟಿ ಮಾಡುವ ಸಮಯ’ ಎನ್ನುವ ಮೂಲಕ ರಶ್ಮಿಕಾ ಸಂತಸ ವ್ಯಕ್ತಪಡಿಸಿದ್ದಾರೆ.
‘ಅತ್ಯುತ್ತಮವಾದ ಬದುಕನ್ನು ಜೊತೆಯಾಗಿ ನಡೆಸೋಣ. ಐ ಲವ್ ಯೂ’ ಎನ್ನುವ ಮೂಲಕ ರಶ್ಮಿಕಾ ಮಂದಣ್ಣ ಅವರು ಈ ಬರಹ ಪೂರ್ಣಗೊಳಿಸಿದ್ದಾರೆ. ಹಾಗೆಯೇ ವಿಜಯ್ ದೇವರಕೊಂಡ ಕೂಡ ತಮ್ಮ ಬಾಳಿನಲ್ಲಿ ರಶ್ಮಿಕಾ ಮಂದಣ್ಣ ಎಷ್ಟು ಮುಖ್ಯವಾದ ವ್ಯಕ್ತಿ ಎಂಬುದನ್ನು ಅವರ ಪೋಸ್ಟ್ ಮೂಲಕ ವಿವರಿಸಿದ್ದಾರೆ. ಅದು ಸಹ ವೈರಲ್ ಆಗಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಶ್ಮಿಕಾ ಮಂದಣ್ಣ ಅವರು ಖ್ಯಾತಿ ಪಡೆದಿದ್ದಾರೆ. ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ವಿಜಯ್ ದೇವರಕೊಂಡ ಕೂಡ ತೆಲುಗು ಮತ್ತು ಬಾಲಿವುಡ್ನಲ್ಲಿ ಫೇಮಸ್ ಆಗಿದ್ದಾರೆ. ಮದುವೆಯ ಫೋಟೋಗಳಿಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.
