Headlines

nagaraj11081993

ವಿದ್ಯುತ್​ ಬಿಲ್ ಪಾವತಿಸದಷ್ಟು ಬಡವಾಯ್ತಾ ಬೀದರ್​​​​​​ ಬ್ರಿಮ್ಸ್ ಆಸ್ಪತ್ರೆ? ಬಾಕಿ ಮೊತ್ತ ಕೇಳಿದ್ರೆ ಶಾಕ್​​​ ಆಗ್ತೀರಾ – Kannada News | Bidar BRIMS Hospital Owes GESCOM 1.70 Cr Electricity Bill: Public Outcry

ಬೀದರ್​​, ಫೆಬ್ರವರಿ 25: ಜನಸಾಮಾನ್ಯರು ಕರೆಂಟ್ ಬಿಲ್ (Current Bill) ಕಟ್ಟುವುದು ತಡವಾದರೆ ಕನೆಕ್ಷನ್ ಕಟ್ ಮಾಡಲಾಗುತ್ತದೆ. ಆದರೆ ಬೀದರ್​ನ ಬ್ರಿಮ್ಸ್ ಆಸ್ಪತ್ರೆ 1.70 ಕೋಟಿ ರೂ ಜೆಸ್ಕಾಂಗೆ ಹಣ ಕಟ್ಟಿಲ್ಲ. ಹಣ ಕಟ್ಟಿ ಅಂತಾ ನೋಟಿಸ್ ಮೇಲೆ ನೋಟಿಸ್ ಕೊಟ್ಟರು ಬ್ರಿಮ್ಸ್ ಆಡಳಿತ ಮಂಡಳಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಜೆಸ್ಕಾಂ ಇಲಾಖೆಯ ಈ ತಾರತಮ್ಯ ನೀತಿಗೆ ಗಡೀ ಜಿಲ್ಲೆಯ ಬೀದರ್​ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. 1 ಕೋಟಿ 70 ಲಕ್ಷ 80 ಸಾವಿರ ರೂ ಬಿಲ್…

Read More

ರಶ್ಮಿಕಾ, ವಿಜಯ್ ಮದುವೆ: ಹಳದಿ ಶಾಸ್ತ್ರ ಆರಂಭ; ಫೋಟೋ ಹಂಚಿಕೊಂಡ ಆಶಿಕಾ – Kannada News | Rashmika Mandanna Vijay Deverakonda haldi ceremony begins Ashika Ranganath shares photo

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರ ಮದುವೆ ಶಾಸ್ತ್ರಗಳು ಆರಂಭ ಆಗಿವೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಈ ವಿವಾಹದಲ್ಲಿ ಭಾಗಿ ಆಗಿದ್ದಾರೆ. ಮದುವೆಗೂ ಮುನ್ನ ಅನೇಕ ಶಾಸ್ತ್ರಗಳನ್ನು ಮಾಡಲಾಗಿದೆ. ಬುಧವಾರ (ಫೆಬ್ರವರಿ 25) ಹಳದಿ ಶಾಸ್ತ್ರ ಮಾಡಲಾಗುತ್ತಿದೆ. ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ (Rashmika Mandanna), ಆಶಿಕಾ ರಂಗನಾಥ್ ಅವರು ಹಳದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹಳ ಅದ್ದೂರಿಯಾಗಿ ವಿರೋಶ್ ಮದುವೆ ನಡೆಯುತ್ತಿದೆ. ಕನ್ನಡ ಚಿತ್ರರಂಗದ ಕೆಲವೇ…

Read More

Lunar Eclipse 2026: ಮಾ.03 ಚಂದ್ರಗ್ರಹಣ; ಕರ್ಕಾಟಕ ರಾಶಿ ಮೇಲೆ ಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Lunar Eclipse 2026: Astrological Predictions for Cancer Zodiac Sign by Dr. Basavaraj Guruji

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಕೇತುಗ್ರಸ್ತ ಚಂದ್ರಗ್ರಹಣ ಕರ್ಕಾಟಕ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಚಂದ್ರಗ್ರಹಣವು ಕರ್ಕಾಟಕ ರಾಶಿಯವರಿಗೆ ಎರಡನೇ ಮನೆಯಲ್ಲಿ, ಅಂದರೆ ಧನ, ವಾಕ್ ಮತ್ತು ಕುಟುಂಬ ಸ್ಥಾನದಲ್ಲಿ ಪ್ರಭಾವ ಬೀರಲಿದೆ. ಪುನರ್ವಸು, ಪುಷ್ಯ ಮತ್ತು ಆಶ್ಲೇಷ ನಕ್ಷತ್ರದಡಿಯಲ್ಲಿ ಬರುವ ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ನಿರ್ಲಕ್ಷ್ಯದಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಎಚ್ಚರ ವಹಿಸುವುದು ಅಗತ್ಯ…

Read More

Ranji Trophy Final: 1 ಶತಕ, 5 ಅರ್ಧಶತಕ; 2ನೇ ದಿನವೂ ಜೆಕೆ ತಂಡದ್ದೇ ಮೇಲುಗೈ – Kannada News | Ranji Final Day 2: Jammu and Kashmir Dominates Karnataka with 527/6 in Hubballi

ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್‌ನಲ್ಲಿ (Ranji Trophy Final) ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರ (Karnataka vs J&K) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು ಮತ್ತು ಕಾಶ್ಮೀರ ತಂಡ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 527 ರನ್ ಕಲೆಹಾಕಿದೆ. ಆದಾಗ್ಯೂ ಮಂದ ಬೆಳಕಿನಿಂದಾಗಿ ಎರಡನೇ ದಿನದಾಟವನ್ನು ಬೇಗನೇ ಅಂತ್ಯಗೊಳಿಸಲಾಯಿತು. ಆಟವನ್ನು ನಿಲ್ಲಿಸಿದಾಗ ಜೆಕೆ ತಂಡದ ಪರ ಸಾಹಿಲ್ ಲೋತ್ರಾ ಅಜೇಯ 57 ರನ್…

Read More

ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್​ಟಿಸಿ ಬಸ್​ನಲ್ಲಿ ಮಾರಾಮಾರಿ: ಮೂವರಿಗೆ ಗಾಯ – Kannada News | KSRTC Bus Fight: Groundnut Shells Spark Brawl Between Passengers and Conductor in Chamarajanagar

ಚಾಮರಾಜನಗರ, ಫೆಬ್ರವರಿ 25: ಕಡಲೆಕಾಯಿ ಸಿಪ್ಪೆ ವಿಚಾರಕ್ಕೆ ಕೆಎಸ್ಆರ್​ಟಿಸಿ ಬಸ್​ನಲ್ಲಿ ಮಾರಾಮಾರಿ ನಡೆದಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸರಗೂರು ಬಳಿ ನಡೆದಿದೆ. ಕೊಳ್ಳೇಗಾಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್​​ನಲ್ಲಿ ಪ್ರಯಾಣಿಕರು ಕಡಲೆಕಾಯಿ ಸಿಪ್ಪೆಯನ್ನು ಬಿಸಾಡಿದ್ದಾರೆ. ಇದನ್ನ ನಿರ್ವಾಹಕ ಪ್ರಶ್ನಿಸಿದ ವೇಳೆ ಮಾತಿಗೆ ಮಾತು ಬೆಳೆದ ಪರಿಣಾಮ, ಸರಗೂರು ಬೈಪಾಸ್ ಬಳಿ ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ಬಡಿದಾಟವೇ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದ ಪರಿಣಾಮ ಚಾಮರಾಜನಗರದ ಪ್ರಯಾಣಿಕರಾದ ಫಯಾಜ್ ಅಹ್ಮದ್ ಮತ್ತು ಶಾರಾನ್, ನಿರ್ವಾಹಕ…

Read More

ಹೊರದೇಶಕ್ಕೆ ಹೋದ ವಿದ್ಯಾರ್ಥಿಗಳು ಹೆಚ್ಚು ಖಿನ್ನತೆಗೆ ಒಳಗಾಗುವುದು ಯಾಕೆ? ಇದರಿಂದ ಹೊರಬರುವುದು ಹೇಗೆ? ಇಲ್ಲಿದೆ ಡಾ. ಕೃತಿಶ್ರೀ ಸಲಹೆ – Kannada News | Mental Health Tips for Overseas Students by Dr. Kritishree

Mental Health Tips for Overseas Students by Dr. Kritishree ಅಮೆರಿಕದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿಯ ಸಾವು ನಮ್ಮ ಮನಸ್ಸಿನಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟುಹಾಕುವುದು ಸಹಜ. ಎಷ್ಟೇ ಮೇಧಾವಿಯಾಗಿದ್ದರೂ ತನ್ನದಲ್ಲದ, ತನ್ನವರಿಲ್ಲದ ಪ್ರದೇಶದಲ್ಲಿ ವಾಸ ಮಾಡುವುದು ಸುಲಭವಲ್ಲ. ಆದರೆ ಕನಸನ್ನು ನನಸಾಗಿಸಿಕೊಳ್ಳುವ ಹಂಬಲ ಎಷ್ಟೇ ಕಷ್ಟವಿದ್ದರೂ ನಿಭಾಯಿಸುವ ಹಂತಕ್ಕೆ ಹೋಗಿಬಿಡುತ್ತವೆ. ಆದರೆ ಎಲ್ಲರಿಗೂ ಹೀಗಾಗುವುದಿಲ್ಲ. ಅದರಲ್ಲಿಯೂ ಸಾಕೇತ್ ಶ್ರೀನಿವಾಸಯ್ಯ ಸಾವು ವಿದೇಶಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಹಾಗಾಗಿ ಬೇರೆ ಬೇರೆ…

Read More

ICC T20 Rankings: ಹ್ಯಾಟ್ರಿಕ್ ಸೊನ್ನೆಯ ನಡುವೆಯೂ ಅಭಿಷೇಕ್ ಅಗ್ರಸ್ಥಾನಕ್ಕಿಲ್ಲ ಭಂಗ

ಟೀಂ ಇಂಡಿಯಾದ ಸ್ಟಾರ್ ಓಪನರ್ ಅಭಿಷೇಕ್ ಶರ್ಮಾಗೆ 2026 ರ ಟಿ20 ವಿಶ್ವಕಪ್ ದುಃಸ್ವಪ್ನಕ್ಕಿಂತ ಕಡಿಮೆ ಇಲ್ಲ. ಏಕೆಂದರೆ ಆಡಿರುವ 4 ಪಂದ್ಯಗಳಲ್ಲಿ ಅಭಿಷೇಕ್ ಖಾತೆ ತೆರೆದಿರುವುದು ಏಕೈಕ ಪಂದ್ಯದಲ್ಲಿ ಮಾತ್ರ. ಅಂದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಅಭಿಷೇಕ್ ಸೊನ್ನೆ ಸುತ್ತಿದ್ದಾರೆ. ಆದಾಗ್ಯೂ ಐಸಿಸಿ ಟಿ20 ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್​ನಲ್ಲಿ ಅಭಿಷೇಕ್ ಸ್ಥಾನಕ್ಕೆ ಯಾವುದೇ ಕುತ್ತು ಬಂದಿಲ್ಲ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭರ್ಜರಿ ಫಾರ್ಮ್​ನಲ್ಲಿದ್ದ ಅಭಿಷೇಕ್ ಐಸಿಸಿ ಟಿ20 ಬ್ಯಾಟ್ಸ್‌ಮನ್​ಗಳ ರ್ಯಾಂಕಿಂಗ್​ನಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲಿ…

Read More

ರಾಯರಲ್ಲಿ ತಾಯಿ ಹರಕೆ; ರಿಷಬ್ ಶೆಟ್ಟಿ ಜನಿಸಿದ್ದೇ ಗುರುವಾರ: ಅಚ್ಚರಿಯ ವಿಷಯ ತಿಳಿಸಿದ ನಟ – Kannada News | Jai Hanuman actor Rishab Shetty talks about Raghavendra Swamy

ಮಂತ್ರಾಲಯದಲ್ಲಿ ರಾಯರ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಜಗ್ಗೇಶ್ (Jaggesh), ರಿಷಬ್ ಶೆಟ್ಟಿ ಮುಂತಾದವರು ಭಾಗಿ ಆಗಿದ್ದಾರೆ. ಈ ವೇದಿಕೆಯಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡಿದರು. ರಾಯರಲ್ಲಿ ತಾಯಿ ಹರಕೆ ಕಟ್ಟಿಕೊಂಡಿದ್ದರಿಂದ ತಾವು ಗುರುವಾರವೇ ಜನಿಸಿದ್ದು ಎಂದು ರಿಷಬ್ ಶೆಟ್ಟಿ ಅವರು ಹೇಳಿದರು. ‘ಇದು ನಾನು ಎಲ್ಲಿಯೂ ಹಂಚಿಕೊಳ್ಳದೇ ಇರುವ ವಿಚಾರ. ಆಗ ನಾನು ಹುಟ್ಟಿರಲಿಲ್ಲ. ನಮ್ಮ ಮನೆ ತುಂಬಾ ಕಷ್ಟದಲ್ಲಿ ಇದ್ದಂತಹ ಕಾಲ ಅದು. ಮಗ ಹುಟ್ಟಲಿ, ಅವನು ಹುಟ್ಟಿದ ಮೇಲೆ ಒಳ್ಳೆಯದಾಗಲಿ ಅಂತ ರಾಯರಲ್ಲಿ…

Read More

ಇಡೀ ನೆಹರು-ಗಾಂಧಿ ಕುಟುಂಬವೇ ದೇಶದ ಹಿತಾಸಕ್ತಿಯೊಂದಿಗೆ ರಾಜಿ ಮಾಡಿಕೊಂಡಿದೆ; ಪಿಯೂಷ್ ಗೋಯಲ್ ಆರೋಪ – Kannada News | Whole Nehru Gandhi family always compromised national interest alleges Piyush Goyal

ನವದೆಹಲಿ, ಫೆಬ್ರವರಿ 25: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ವಿಷಯದಲ್ಲಿ ಪ್ರಧಾನಿ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ (Rahul Gandhi) ಆರೋಪಕ್ಕೆ ಪ್ರತಿಯಾಗಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಗಾಂಧಿ-ನೆಹರು ಕುಟುಂಬ ವಿವಿಧ ಹಂತಗಳಲ್ಲಿ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ಪದೇ ಪದೇ ರಾಜಿ ಮಾಡಿಕೊಂಡಿದೆ ಎಂದು ಗೋಯಲ್ ಆರೋಪಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಕೆಲವು ದಿನಗಳ ನಂತರ ಕೇಂದ್ರ…

Read More

ಹಣ್ಣುಗಳಿಗೆ ಇಲಿ ಪಾಷಾಣ ಸವರುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ವ್ಯಾಪಾರಿ – Kannada News | Food Safety Crisis: Malad Vendor Poisons Fruits with Ratol; Public Outrage in Mumbai

ಮುಂಬೈ: ಮುಂಬೈನ ಮಾಲಾಡ್ ಪ್ರದೇಶದಲ್ಲಿ ನಡುರಸ್ತೆಯಲ್ಲೇ ಹಣ್ಣುಗಳ ವ್ಯಾಪಾರಿಯೊಬ್ಬರು ಹಣ್ಣುಗಳಿಗೆ ‘ರಾಟೋಲ್’ (Ratol) ಎಂಬ ಇಲಿ ಪಾಷಾಣವನ್ನು ಸವರುತ್ತಿದ್ದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ಕೃತ್ಯವನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವ್ಯಾಪಾರಿಯು ತನ್ನ ಹಣ್ಣಿನ ತಳ್ಳುಗಾಡಿಯ ಮೇಲೆ ಹಣ್ಣುಗಳನ್ನು ಜೋಡಿಸುವ ಮೊದಲು ಅವುಗಳಿಗೆ ಇಲಿ ಪಾಷಾಣವನ್ನು ಹಚ್ಚುತ್ತಿರುವುದು ಕಂಡುಬಂದಿದೆ. ಸಾಮಾನ್ಯವಾಗಿ ಹಣ್ಣುಗಳಿಗೆ ಇಲಿಗಳು ಬರದಂತೆ ತಡೆಯಲು ಇಂತಹ ಅಪಾಯಕಾರಿ ಕೆಲಸ ಮಾಡುತ್ತಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಮನುಷ್ಯರು ಸೇವಿಸುವ…

Read More