ಅನ್ಯಕೋಮಿನ ಯುವಕನಿಂದ ಚಾಕು ಇರಿತ: ಸಿಡಿದೆದ್ದ ಹಿಂದೂ ಸಂಘಟನೆಗಳು, ಚಿತ್ರದುರ್ಗ ರಣಾಂಗಣ – Kannada News | Hindu Protests Erupt After Mobile Shop Owner Stabbed Over Screen Guard Dispute In Chitradruga
ಚಿತ್ರದುರ್ಗ, ಫೆಬ್ರವರಿ 25): ಮೊಬೈಲ್ ಸ್ಕ್ರೀನ್ ಗಾರ್ಡ್ ವಿಚಾರವಾಗಿ ಮೊಬೈಲ್ ಅಂಗಡಿ (Mobile Shop) ಮಾಲೀಕ ಹಾಗೂ ಅನ್ಯಕೋಮಿನ ಯುವಕನ ನಡೆದ ಗಲಾಟೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಕೊನೆಗೆ ಯುವಕ, ಮೊಬೈಲ್ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದಿದ್ದಾನೆ. ಈ ಘಟನೆ ಚಿತ್ರದುರ್ಗ (Chitradruga) ನಗರದ ಸಂತೆ ಮೈದಾನ ಬಳಿ ನಡೆದಿದೆ. 100 ರೂ. ಹೆಚ್ಚುವರಿ ಹಣ ಕೇಳಿದ್ದಕ್ಕೆ ಸಿಟ್ಟಾದ ಯುವಕ, ಅಂಗಡಿ ಮಾಲೀಕ ವಿಕ್ರಮ್ ಚೌದ್ರಿಗೆ ಚಾಕು ಇರಿದಿದ್ದಾನೆ. ಯುವಕ ಚಾಕು ಇರಿಯುತ್ತಿರುವ ದೃಶ್ಯ ಸಿಸಿಟಿವಿ…