All posts by nagaraj11081993

ಯುವಕನನ್ನ ಹತ್ಯೆಗೈದು ಹೈವೇನಲ್ಲಿ ಶವ ಬಿಸಾಡಿದ ದುಷ್ಕರ್ಮಿಗಳು: ಸಾಕ್ಷ್ಯನಾಶಕ್ಕೆ ಮಾಡಿದ್ದೇನು ಗೊತ್ತಾ? – Kannada News | Hubballi: young man Brutaly murder; The perpetrators threw the body on the road

ಹುಬ್ಬಳ್ಳಿ, ಫೆಬ್ರವರಿ 25: ಯುವಕನ್ನು ಬರ್ಬರವಾಗಿ ಹತ್ಯೆಗೈದ (murder) ದುಷ್ಕರ್ಮಿಗಳ ಗ್ಯಾಂಗ್ ಶವವನ್ನ ರಸ್ತೆಯಲ್ಲಿ ಎಸೆದು ಹೋಗಿರುವಂತಹ ಘಟನೆ ಹುಬ್ಬಳ್ಳಿಯ (Hubballi) ಗದಗ ರಸ್ತೆಯಲ್ಲಿರುವ ಐಟಿಸಿ ಗೋದಾಮಿನ ಬಳಿ ಕೃತ್ಯ ನಡೆದಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿ ಮಂಜುನಾಥ ಗಾಣಿಗೇರ(29) ಕೊಲೆಯಾದ ಯುವಕ. ಸದ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಕ್ಷ್ಯನಾಶಕ್ಕೆ ಮಾಡಿದ್ದೇನು ಗೊತ್ತಾ?

ಮಂಜುನಾಥ ಗಾಣಿಗೇರ ಕೊಲೆಗೆ ಸದ್ಯ ನಿಖರ ಮಾಹಿತಿ ತಿಳಿದುಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವ ಎಸೆದು ಹೋಗಿರುವ ದುಷ್ಕರ್ಮಿಗಳು, ಬೇರೆಡೆ ಕೊಂದು ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಶವ ಸಾಗಣೆ ಮಾಡಿದ್ದಾರೆ.

ಇದನ್ನೂ ಓದಿ: ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಗೆ ಕಂಡದ್ದು ಮಹಿಳೆಯ ಶವ: ಡಿಸಿಪಿ ಹೇಳಿದ್ದೇನು?

ಇನ್ನು ರಸ್ತೆಯಲ್ಲಿ ಹೋಗುತ್ತಿದ್ದವರು ಶವ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಶವವನ್ನು ಸ್ಥಳಾಂತರ ಮಾಡಲಾಗಿದೆ.

ವಿಷಪ್ರಾಶನದಿಂದ ಆಸ್ಪತ್ರೆ ಸೇರಿದ್ದ ಮಹಿಳೆ ಹಸೀನಾ ಬೇಗಂ ಸಾವು

ವಿಷಪ್ರಾಶನದಿಂದ ಆಸ್ಪತ್ರೆ ಸೇರಿದ್ದ ಮಹಿಳೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹಸೀನಾ ಬೇಗಂ ಮೃತ ಮಹಿಳೆ. ಗದಗ ಜಿಲ್ಲೆಯ ಮುಳಗುಂದ ಪಟ್ಟಣದ ನಿವಾಸಿ. ಖಾಸಗಿ ಬ್ಯಾಂಕ್ ಮ್ಯಾನೇಜರ್ ಶ್ಯಾಮಸುಂದರ್ ಬದಾಮಿ ವಿರುದ್ಧ ಸಂಬಂಧಿಕರು ವಿಷಪ್ರಾಶನ ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಥಳಿಸಿದ ಪ್ರಕರಣ; ಯುವತಿಗೆ ಲವ್​ ಮ್ಯಾರೇಜ್ ಮಾಡಿಸಿದ್ದಕ್ಕೆ ನಡೀತಾ ಹಲ್ಲೆ?

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 7 ವರ್ಷದ ಹಿಂದೆ ಪತಿ, ಮಗನ ಜೊತೆ ಹುಬ್ಬಳ್ಳಿಗೆ ಬಂದಿದ್ದ ಹಸೀನಾಗೆ ಶ್ಯಾಮಸುಂದರ್ ಬ್ಯಾಂಕ್​ನಲ್ಲಿ ಹೌಸ್​​ ಕೀಪಿಂಗ್ ಕೆಲಸ ನೀಡಿದ್ದರು. ಇದೇ ನೆಪದಲ್ಲಿ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸ್ತಿದ್ದ. 4 ದಿನಗಳ ಹಿಂದೆ ಹಸೀನಾ ಬೇಗಂ ಮನೆಗೆ ಬಂದಿದ್ದ ಶ್ಯಾಮಸುಂದರ್, ಲೈಂಗಿಕವಾಗಿ ಬಳಸಿಕೊಂಡು, ಹಲ್ಲೆ ನಡೆಸಿ ವಿಷ ಕುಡಿಸಿ ಹೋಗಿದ್ದ ಆರೋಪ ಕೇಳಿಬಂದಿತ್ತು. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 4 ದಿನಗಳಿಂದ ಹಸೀನಾಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ನೆಹರೂ, ಇಂದಿರಾ ಕಾಲದಲ್ಲಿ ವಿದೇಶೀ ಗುಪ್ತಚರರ ಕೈಲಿತ್ತು ಭಾರತ’: ಕಾಂಗ್ರೆಸ್​ಗೆ ಬಿಜೆಪಿ ತಿರುಗೇಟು; ಸುಧಾಂಶು ತ್ರಿವೇದಿ ಸರಣಿ ಟ್ವೀಟ್ – Kannada News | India was allegedly compromised and sold to US and Soviet’s spies, says Sudhanshu Trivedi

ನವದೆಹಲಿ, ಫೆಬ್ರುವರಿ 25: ಜವಾಹಾರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ ಆಡಳಿತದ ವೇಳೆ ಭಾರತದ ಪೂರ್ಣ ನಿಯಂತ್ರಣವು ಅಮೆರಿಕ ಹಾಗೂ ರಷ್ಯನ್ ಗುಪ್ತಚರ ಸಂಸ್ಥೆಗಳ ಕೈಯಲ್ಲಿತ್ತು. ವಿದೇಶೀ ಬೇಹುಗಾರರಿಗೆ ದೇಶವನ್ನೇ ಮಾರಿಬಿಟ್ಟಿದ್ದರು ಎಂದು ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಮಾಡಿಕೊಂಡು ಭಾರತದ ಹಿತಾಸಕ್ತಿಯನ್ನು ಬಲಿಕೊಡಲಾಗಿದೆ. ಅಮೆರಿಕಕ್ಕೆ ಪ್ರಧಾನಿಗಳು ಶರಣಾಗಿದ್ದಾರೆ. ಒಪ್ಪಂದದ ಮೂಲಕ ಭಾರತೀಯ ರೈತರಿಗೆ ಮರಣ ಶಾಸನ ಬರೆದಿದ್ದಾರೆ ಎಂದು ರಾಹುಲ್ ಗಾಂಧಿ ಬಾರಿ ಬಾರಿ ಮಾಡುತ್ತಿರುವ ಆರೋಪಗಳಿಗೆ ಬಿಜೆಪಿ ವಕ್ತಾರರು ತಿರುಗೇಟು ಕೊಟ್ಟಂತಿದೆ.

ಎಕ್ಸ್​ನಲ್ಲಿ ಸರಣಿ ಪೋಸ್ಟ್​ಗಳನ್ನು ಹಾಕಿರುವ ಸುಧಾಂಶು ತ್ರಿವೇದಿ, ನೆಹರೂ, ಇಂದಿರಾ ಕಾಲದಲ್ಲಿ ದೇಶದ ಭದ್ರತೆಯನ್ನು ಅದೆಷ್ಟರಮಟ್ಟಿಗೆ ರಾಜಿ ಮಾಡಿಕೊಳ್ಳಲಾಗಿತ್ತು ಎನ್ನುವ ವಿವರವನ್ನು ಬಿಚ್ಚಿಟ್ಟಿದ್ದಾರೆ.

ಭಾರತ ಆಲಿಪ್ತ ನೀತಿ ಹೊಂದಿದ್ದರೂ ಅಮೆರಿಕದ ಸಿಐಎ ಹಾಗೂ ಸೋವಿಯತ್​ನ ಕೆಜಿಬಿ ನಿಯಂತ್ರಣದಲ್ಲಿ ವ್ಯವಸ್ಥೆ ಇತ್ತು. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿರಲಿಲ್ಲ, ಶರಣಾಗತಿಯಾಗಿತ್ತು ಎಂದು ಬಿಜೆಪಿ ವಕ್ತಾರರು ತಮ್ಮ ಏಳು ಟ್ವೀಟ್​ಗಳ ಸರಣಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ನ್ಯಾಯಾಂಗಕ್ಕೆ ಕಳಂಕ ತರಲು ಬಿಡುವುದಿಲ್ಲ: ಶಾಲಾ ಪಠ್ಯದಲ್ಲಿ ನ್ಯಾಯಾಂಗ ಭ್ರಷ್ಟಾಚಾರ ಅಧ್ಯಾಯ ಕುರಿತು ಸುಪ್ರೀಂ ಗರಂ

‘ನೆಹರೂ ಅವರ ಪ್ರಧಾನಿ ಕಾರ್ಯಾಲಯವು ಸಿಐಎ ಪಾಲಿಗೆ ಓಪನ್ ಬುಕ್ ಆಗಿತ್ತು. ಅವರ ವಿಶೇಷ ಸಹಾಯಕರಾದ ಎಂ.ಒ. ಮಥಾಯ್ ಅವರು ಅಮೆರಿಕದ ಆಸ್ತಿಯಾಗಿದ್ದರು. ಪ್ರತಿಯೊಂದು ದಾಖಲೆಯನ್ನೂ ಲ್ಯಾಂಗ್ಲೇಗೆ (ಸಿಐಎ ಮುಖ್ಯ ಕಚೇರಿ) ನಕಲು ಮಾಡಿ ಕಳುಹಿಸಲಾಗುತ್ತಿತ್ತು. ಭಾರತದ ಯಾವುದೇ ದಾಖಲೆ ಬೇಕೆಂದರೂ ತೆಗೆಯಬಲ್ಲೆವು ಎಂದು ಅಮೆರಿಕದ ರಾಜತಾಂತ್ರಿಕರು ಹೇಳಿಕೊಳ್ಳುತ್ತಿದ್ದುಂಟು. ಭಾರತದ ಹೃದಯಭಾಗವೇ ಅಮೆರಿಕದ ಆಸ್ತಿಯಾಗಿತ್ತು’ ಎಂದು ಡಾ| ಸುಧಾಂಶು ತ್ರಿವೇದಿ ತಿಳಿಸಿದ್ದಾರೆ.

ಅಮೆರಿಕದವು ನೆಹರೂ ಪ್ರಧಾನಿ ಕಾರ್ಯಾಲಯದ ಮೇಲೆ ಕಣ್ಣಿಟ್ಟಿದ್ದರೆ, ರಷ್ಯಾದವರೇನು ಹಿಂದುಳಿದಿರಲಿಲ್ಲ. ರಷ್ಯಾದ ಕೆಜಿಬಿ (ಗುಪ್ತಚರ ಏಜೆನ್ಸಿ) ಭಾರತೀಯ ಸರ್ಕಾರದ ಪ್ರತಿಯೊಂದು ವಿಭಾಗದಲ್ಲೂ ಜನರನ್ನು ಇಟ್ಟಿತ್ತು. ಟ್ರೇಡ್ ಮಿಷನ್, ಸಾಂಸ್ಕೃತಿಕ ಸಂಬಂಧ ಇವೆಲ್ಲವೂ ಹೊರಗೆ ಕಾಣಿಸಲು ಇದ್ದ ಮುಖವಾಡ. ರಷ್ಯಾಗೆ ಬೇಹುಗಾರರು ಬೇಕಿರಲಿಲ್ಲ. ಇಡೀ ಸಿಸ್ಟಂ ಅನ್ನೇ ಅವರು ಕೊಂಡುಕೊಂಡಿದ್ದರು ಎಂದು ಬಿಜೆಪಿ ವಕ್ತಾರರು ಆಪಾದಿಸಿದ್ದಾರೆ.

ಇಂದಿರಾ ಅವಧಿಯಲ್ಲಿ ಸಿಐಎ ಪ್ರತೀ ಮೂಲೆಯನ್ನೂ ಹೊಕ್ಕಿತ್ತು. ಸಿಐಎಯಿಂದ ಹಣ ಪಡೆಯುತ್ತಿದ್ದರು. ಕಾಂಗ್ರೆಸ್ಸಿಗೆ ಕೋಟಿಗಟ್ಟಲೆ ಹಣ ಹರಿದು ಹೋಗುತ್ತಿತ್ತು. ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಇಂದಿರಾ ಗಾಂಧಿಗೆ ಒಂದು ಬಂಡಲ್ ಹೋಗಿ ತಲುಪಿತ್ತು. ವಿದೇಶೀ ಲಂಚಕ್ಕಾಗಿ ದೇಶವನ್ನು ಮಾರಿದ್ದರು ಎಂದು ರಾಜ್ಯಸಭಾ ಸಂಸದರೂ ಆಗಿರುವ ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಎಂಟನೇ ತರಗತಿಯ ಹೊಸ ಪಠ್ಯದಲ್ಲಿ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ

1976ರಲ್ಲಿ ಸೋವಿಯತ್​ಗೆ ಸಹಾಯವಾಗುವಂತೆ ರುಬಲ್ ಎದುರು ರುಪಾಯಿ ಮೌಲ್ಯವನ್ನು ಬದಲಿಸಿದ್ದರು ಇಂದಿರಾ ಗಾಂಧಿ. ಇದು ನೆಹರೂ ಹಾಗೂ ಇಂದಿರಾ ಆಡಳಿತದಲ್ಲಿ ದೇಶದ ಹಿತಾಸಕ್ತಿ ಬಲಿಕೊಟ್ಟ ಕಥೆ ಎಂದು ಡಾ. ಸುಧಾಂಶು ತ್ರಿವೇದಿ ವಿವರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲೂ ನಡೆಯಲಿದೆ ವಿಜಯ್-ರಶ್ಮಿಕಾ ಆರತಕ್ಷತೆ: ಎಲ್ಲಿ? ಯಾವಾಗ? – Kannada News | Vijay Deverakonda and Rashmika Mandanna’s reception will be held in Virajpete also

ಕೊಡಗಿನ ಹುಡುಗಿ ರಶ್ಮಿಕಾ (Rashmika Mandanna) ಮತ್ತು ತೆಲಂಗಾಣದ ಯುವಕ ವಿಜಯ್ ದೇವರಕೊಂಡ ವಿವಾಹ ನಾಳೆ (ಫೆಬ್ರವರಿ 26) ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಮದುವೆ ಕಾರ್ಯ ಆರಂಭವಾಗಿ ಈಗಾಗಲೇ ವಾರವಾಗುತ್ತಾ ಬಂದಿದೆ. ರಶ್ಮಿಕಾ ಮತ್ತು ವಿಜಯ್ ಅವರ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಮತ್ತು ಅತ್ಯಾಪ್ತ ಸಂಬಂಧಿಗಳು ಈಗಾಗಲೇ ಉದಯಪುರದ ಅರಮನೆಯಂಥಹ ರೆಸಾರ್ಟ್ ತಲುಪಿದ್ದು ಮದುವೆ ಕಾರ್ಯದಲ್ಲಿ ಭಾಗಿ ಆಗಿದ್ದಾರೆ. ಮದುವೆಗೆ ಕೆಲವು ಆಪ್ತರನ್ನಷ್ಟೆ ಆಹ್ವಾನಿಸಲಾಗಿದೆ. ಆದರೆ ಮಾರ್ಚ್ 4 ರಂದು ಅದ್ಧೂರಿಯಾಗಿ ರಿಸೆಪ್ಷನ್ ಆಯೋಜಿಸಲಾಗಿದ್ದು, ಗೆಳೆಯರು, ಸಿನಿಮಾ ಮತ್ತು ರಾಜಕೀಯ ಗಣ್ಯರನ್ನು ಆರತಕ್ಷತೆಗೆ ಆಹ್ವಾನಿಸಲಾಗಿದೆ.

ಕೊಡಗಿನವರು, ಕನ್ನಡ ಚಿತ್ರರಂಗದಿಂದ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳು, ಹಿತೈಷಿಗಳು ಇದ್ದಾರೆ ಆದರೆ ರಶ್ಮಿಕಾ ಅವರ ಮದುವೆ ಸಂಭ್ರಮ ಹೈದರಾಬಾದ್​​ನಲ್ಲಿ ಮಾತ್ರವೇ ಆಯೋಜಿಸಲಾಗಿರುವುದು ಅವರ ಕರ್ನಾಟಕದ ಹಿತೈಷಿಗಳಿಗೆ ತುಸು ಅಸಮಾಧಾನ ಮೂಡಿಸಿದೆ. ಆದರೆ ಇದೀಗ ಹೊರಬಿದ್ದಿರುವ ಸುದ್ದಿಯ ಪ್ರಕಾರ, ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಆರತಕ್ಷತೆ ಕರ್ನಾಟಕದಲ್ಲಿಯೂ ನಡೆಯಲಿದೆ.

ಕೊಡಗು ಜಿಲ್ಲೆ ವಿರಾಜಪೇಟೆಯ ಕದಲೂರು ಗ್ರಾಮದ ರಶ್ಮಿಕಾ ಮಂದಣ್ಣ ಅವರಿಗೆ ಕೊಡಗು, ವಿರಾಜಪೇಟೆ ಹಾಗೂ ಸುತ್ತ-ಮುತ್ತ ಸಾಕಷ್ಟು ಸಂಬಂಧಿಗಳಿದ್ದಾರೆ. ಅಲ್ಲದೆ ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ಅವರು ಕೊಡಗು-ವಿರಾಜಪೇಟೆ ಭಾಗದ ಬಹಳ ಪ್ರಭಾವಿ ಉದ್ಯಮಿ, ಸಹಜವಾಗಿಯೇ ಅವರದ್ದು ಬಹುದೊಡ್ಡ ಗೆಳೆಯರ ಬಳಗ. ಮದನ್ ಅವರು ವಿರಾಜಪೇಟೆಯಲ್ಲಿ ತಮ್ಮದೇ ಆದ ಐಶಾರಾಮಿ ಮದುವೆ ಕಲ್ಯಾಣ ಮಂಟಪವನ್ನು ಸಹ ಹೊಂದಿದ್ದಾರೆ. ಇದೀಗ ತಮ್ಮ ಮಗಳು ಮತ್ತು ಅಳಿಯನ ಆರತಕ್ಷತೆಯನ್ನು ತಮ್ಮದೇ ಕಲ್ಯಾಣ ಮಂಟಪದಲ್ಲಿ ಆಯೋಜಿಸುವ ಉದ್ದೇಶವನ್ನು ಮದನ್ ಮಂದಣ್ಣ ಹೊಂದಿದ್ದು, ಅದಕ್ಕಾಗಿ ಯೋಜನೆ ಸಹ ಹಾಕಿಕೊಂಡಿದ್ದಾರೆ.

ಇದನ್ನೂ ಓದಿ:ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಸಿಕ್ಕಿದೆ ರಶ್ಮಿಕಾ-ವಿಜಯ್ ಮದುವೆ ಆಹ್ವಾನ?

ಈಗ ಉದಯಪುರದಲ್ಲಿ ನಡೆಯುತ್ತಿರುವ ಮದುವೆಗೆ ಕುಟುಂಬ ವರ್ಗದವರು ಮತ್ತು ಅತ್ಯಾಪ್ತ ಸ್ನೇಹಿತರನ್ನಷ್ಟೆ ಆಹ್ವಾನಿಸಲಾಗಿದೆ. ಮಾರ್ಚ್ 04 ರಂದು ನಡೆಯುವ ಆರತಕ್ಷತೆಗೆ ಸಿನಿಮಾ ಮತ್ತು ರಾಜಕೀಯ ಗಣ್ಯರು ಆಗಮಿಸುವ ಕಾರಣ ಅಲ್ಲಿಯೂ ಸಹ ಯಾರಿಗೂ ಪ್ರವೇಶ ಇಲ್ಲ. ಹಾಗಾಗಿ ಸಂಬಂಧಿಗಳು ಮತ್ತು ಕೊಡಗು-ವಿರಾಜಪೇಟೆಯ ಗೆಳೆಯರು, ಹಿತೈಷಿಗಳಿಗಾಗಿ ಎಂದೇ ಆರತಕ್ಷತೆ ಅಥವಾ ಔತಣಕೂಟವನ್ನು ಆಯೋಜಿಸಲು ರಶ್ಮಿಕಾ ಅವರ ತಂದೆ ಮದನ್ ಮಂದಣ್ಣ ನಿರ್ಧರಿಸಿದ್ದಾರಂತೆ.

ಮೂಲಗಳ ಪ್ರಕಾರ, ರಶ್ಮಿಕಾರ ಅವರ ಸಂಬಂಧಿಗಳು, ಅವರ ಕುಟುಂಬದ ಸ್ನೇಹಿತರಿಗಾಗಿ ವಿರಾಜಪೇಟೆಯ ತಮ್ಮದೇ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ ತಿಂಗಳಲ್ಲಿ ಔತಣಕೂಟ ಆಯೋಜಿಸಲಾಗುತ್ತಿದೆಯಂತೆ. ಮಾರ್ಚ್ 4 ರಂದು ಹೈದರಾಬಾದ್​​ನಲ್ಲಿ ಆರತಕ್ಷತೆ ಮುಗಿಸಿಕೊಂಡು ವಿಜಯ್ ಮತ್ತು ರಶ್ಮಿಕಾ ಅವರು ಹನಿಮೂನ್​​ಗಾಗಿ ವಿದೇಶಕ್ಕೆ ತೆರಳಲಿದ್ದು, ಅವರು ಹನಿಮೂನ್​​ನಿಂದ ವಾಪಸ್ ಬಂದ ಬಳಿಕ ವಿರಾಜಪೇಟೆಯಲ್ಲಿ ಆರತಕ್ಷತೆ ಆಯೋಜನೆ ಮಾಡಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಅತ್ಯಾಚಾರ ಆರೋಪಿ ಜೊತೆ ನೋರಾ ಫತೇಹಿ ಡೇಟಿಂಗ್? – Kannada News | Nora Fatehi Achraf Hakimi dating rumors, Who is this Achrag Hakimi

ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಯಾವಾಗಲೂ ತನ್ನ ಖಾಸಗಿ ಜೀವನವನ್ನು ರಹಸ್ಯವಾಗಿಡುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ, ನಟಿಯ ಹೆಸರು ಜನಪ್ರಿಯ ಫುಟ್ಬಾಲ್ ಆಟಗಾರ ಅಶ್ರಫ್ ಹಕಿಮಿಯೊಂದಿಗೆ ತಳುಕು ಹಾಕಿಕೊಂಡಿದೆ. ನಟಿ ಇತ್ತೀಚೆಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಬಂದು ಮೊರಾಕೊ ರಾಷ್ಟ್ರೀಯ ಫುಟ್ಬಾಲ್ ತಂಡ ಬೆಂಬಲಿಸಿದಾಗ ಅಶ್ರಫ್ ಮತ್ತು ನೋರಾ ಅವರ ಸಂಬಂಧದ ಬಗ್ಗೆ ಚರ್ಚೆ ನಡೆದವು. ಹಾಗಾದರೆ ಅಶ್ರಫ್ ನಿಜವಾಗಿಯೂ ಯಾರು? ಅತ್ಯಂತ ಆಘಾತಕಾರಿ ವಿಷಯವೆಂದರೆ ಅಶ್ರಫ್ ವಿರುದ್ಧ ಅತ್ಯಾಚಾರದಂತಹ ಗಂಭೀರ ಆರೋಪಗಳಿವೆ. ಅವರ ಖಾಸಗಿ ಜೀವನವೂ ವಿವಾದಾತ್ಮಕವಾಗಿಯೇ ಉಳಿದಿದೆ.

ಅಶ್ರಫ್ ಹಕಿಮಿ ಅವರ ಪೋಷಕರು ಮೊರೊಕನ್ ಅರಬ್ ಮೂಲದವರು. ಅದಕ್ಕಾಗಿಯೇ ಹಕಿಮಿ ಕೂಡ ಮೊರೊಕನ್ ತಂಡವನ್ನು ಆಯ್ಕೆ ಮಾಡಿಕೊಂಡರು. ಅವರಿಗೆ ಪ್ರಸ್ತುತ 27 ವರ್ಷ. ಅವರು ಫುಟ್ಬಾಲ್ ತಂಡದ ನಾಯಕ. ಅಶ್ರಫ್ 2020ರಲ್ಲಿ ಸ್ಪ್ಯಾನಿಷ್ ನಟಿ ಹಿಬಾ ಅಬೌಕ್ ಅವರನ್ನು ವಿವಾಹವಾದರು. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ. ಆದರೆ ಅಶ್ರಫ್ ಮತ್ತು ಹಿಬಾ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅಂತಿಮವಾಗಿ, ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದರು. 2023ರಲ್ಲಿ, ಅಶ್ರಫ್ ಮತ್ತು ಹಿಬಾ ಅಧಿಕೃತವಾಗಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ಆಘಾತಕಾರಿ ಸತ್ಯವೆಂದರೆ ಅಶ್ರಫ್ ಯಾಚಿ ಕೂಡ ಅತ್ಯಾಚಾರದ ಆರೋಪ ಎದುರಿಸುತ್ತಿದ್ದಾರೆ . ಈ ಪ್ರಕರಣವು 2023ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದು ಪ್ರಸ್ತುತ, ಈ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ ಮಾಡುವ ಉದ್ದೇಶದಿಂದ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ ಎಂದು ಅಶ್ರಫ್ ಹಕಿಮಿ ಹೇಳಿಕೊಂಡಿದ್ದಾರೆ. ಅವರು ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಮದುವೆ ಸಿಂಗಾರಗೊಂಡ ಕೊಡಗಿನ ಮನೆ: ವಿಡಿಯೋ ನೋಡಿ

ನೋರಾ ಫತೇಹಿ ಅವರ ಹೆಸರು ಈ ಹಿಂದೆ ಹಲವು ಸೆಲೆಬ್ರಿಟಿಗಳೊಂದಿಗೆ ಹಲವು ಬಾರಿ ತಳುಕು ಹಾಕಿಕೊಂಡಿತ್ತು. ಆದರೆ ಈಗ ನಟಿಯ ಹೆಸರು ಅಶ್ರಫ್ ಹಕಿಮಿ ಅವರೊಂದಿಗೆ ತಳುಕು ಹಾಕಿಕೊಂಡಿದ್ದು, ಚರ್ಚೆಗೆ ಕಾರಣವಾಗಿದೆ. ಪ್ರಸ್ತುತ, ಸಾಮಾಜಿಕ ಮಾಧ್ಯಮ ಮತ್ತು ಅಭಿಮಾನಿಗಳು ನೋರಾ ಅವರ ವೈಯಕ್ತಿಕ ಜೀವನದ ಬಗ್ಗೆ ಚರ್ಚಿಸುತ್ತಿದ್ದಾರೆ.

ನೋರಾ ತಮ್ಮ ಖಾಸಗಿ ಜೀವನದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ನಟಿ ಸಾಮಾಜಿಕ ಮಾಧ್ಯಮದಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ನೋರಾ ಅವರ ಅಭಿಮಾನಿಗಳ ಸಂಖ್ಯೆಯೂ ತುಂಬಾ ದೊಡ್ಡದಾಗಿದೆ. ನಟಿ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Indian Railways Recruitment: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ಭಾರತೀಯ ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ – Kannada News | Indian Railways New Recruitment: 20,000 Backlog and 33,000 ALP/Group D Posts!

ಭಾರತೀಯ ರೈಲ್ವೆಯಲ್ಲಿ ಮೀಸಲು ವರ್ಗದ ಹುದ್ದೆಗಳಿಗೆ ಸಂಬಂಧಿಸಿದಂತೆ ಒಂದು ಪ್ರಮುಖ ವರದಿ ಹೊರಬಿದ್ದಿದೆ. ಕಳೆದ ವರ್ಷ ಸಾವಿರಾರು ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಹುದ್ದೆಗಳು ಭರ್ತಿಯಾಗದೆ ಉಳಿದಿದ್ದು, ನೇಮಕಾತಿ ಪ್ರಕ್ರಿಯೆ ಅಪೂರ್ಣವಾಗಿತ್ತು. ಈ ಬಾಕಿ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ಈಗ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಹೆಚ್ಚುವರಿಯಾಗಿ, ಸಾವಿರಾರು ಸಹಾಯಕ ಲೋಕೋ ಪೈಲಟ್ (ಎಎಲ್‌ಪಿ) ಮತ್ತು ಗ್ರೂಪ್ ಡಿ ಹುದ್ದೆಗಳಿಗೆ ನೇಮಕಾತಿಯನ್ನು ಘೋಷಿಸಲಾಗಿದ್ದು, ಇದು ಯುವಜನರಿಗೆ ಸರ್ಕಾರಿ ಉದ್ಯೋಗಗಳನ್ನು ಪಡೆಯಲು ಮಹತ್ವದ ಅವಕಾಶವನ್ನು ಒದಗಿಸುತ್ತಿದೆ.

ರೈಲ್ವೆ ಬಿಡುಗಡೆ ಮಾಡಿದ ಬ್ಯಾಕ್‌ಲಾಗ್ ವರದಿಯ ಪ್ರಕಾರ, 2025 ರಲ್ಲಿ ಒಟ್ಟು 38,005 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು, ಆದರೆ ಈ ಹುದ್ದೆಗಳಲ್ಲಿ ಕೇವಲ 18,121 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಇದರರ್ಥ 19,884 ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳಿಗೆ ನೇಮಕಾತಿ ಇಲ್ಲದಿರುವುದಕ್ಕೆ ಪ್ರಾಥಮಿಕ ಕಾರಣ ಅರ್ಹ ಅಭ್ಯರ್ಥಿಗಳ ಕೊರತೆ. ಈ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರದಲ್ಲೇ ಹೊಸ ಆಯ್ಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಮೀಸಲು ವಿಭಾಗದಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ:

ವರದಿಯ ಪ್ರಕಾರ, ಅತಿ ಹೆಚ್ಚು ಖಾಲಿ ಹುದ್ದೆಗಳು, 6,640, ಪರಿಶಿಷ್ಟ ಜಾತಿ (SC) ವರ್ಗಕ್ಕೆ ಸೇರಿವೆ. ಇದಲ್ಲದೆ, ಇತರ ಹಿಂದುಳಿದ ವರ್ಗಗಳಿಗೆ (OBC) 6,459 ಮತ್ತು ಪರಿಶಿಷ್ಟ ಪಂಗಡಗಳಿಗೆ (ST) 5,730 ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾಗಿರುವ ಹಲವಾರು ಹುದ್ದೆಗಳು ಸಹ ಖಾಲಿಯಾಗಿವೆ. ಮುಂಬರುವ ನೇಮಕಾತಿಗಳಲ್ಲಿ ಈ ಬ್ಯಾಕ್‌ಲಾಗ್ ಹುದ್ದೆಗಳಿಗೆ ಆದ್ಯತೆ ನೀಡಲಾಗುವುದು ಎಂದು ರೈಲ್ವೆ ಭರವಸೆ ನೀಡಿದೆ.

ಇದನ್ನೂ ಓದಿ: ನಿರುದ್ಯೋಗಿಗಳಿಗೆ ಗುಡ್​ನ್ಯೂಸ್​​; ನಿಮ್ಮದೇ ಜಿಲ್ಲೆಯ ಆಧಾರ್ ಕೇಂದ್ರಗಳಲ್ಲಿ ಉದ್ಯೋಗವಕಾಶ

ಸಹಾಯಕ ಲೋಕೋ ಪೈಲಟ್ ಹುದ್ದೆಗಳ 11,127 ಹುದ್ದೆಗಳಿಗೆ ನೇಮಕಾತಿ:

ರೈಲ್ವೆ ಸಚಿವಾಲಯವು 2026 ರಲ್ಲಿ 11,127 ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗೆ ನೇಮಕಾತಿಗೆ ಅನುಮೋದನೆ ನೀಡಿದೆ. ರೈಲ್ವೆ ಮಂಡಳಿಯು ವಲಯವಾರು ಖಾಲಿ ಹುದ್ದೆಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಉತ್ತರ ಮಧ್ಯ ರೈಲ್ವೆ 457 ಹುದ್ದೆಗಳನ್ನು ಭರ್ತಿ ಮಾಡಲಿದೆ, ಆದರೆ ಮುಜಫರ್ಪುರ, ಪಾಟ್ನಾ ಮತ್ತು ರಾಂಚಿ ಪ್ರದೇಶಗಳು ಸರಿಸುಮಾರು 700 ಹುದ್ದೆಗಳನ್ನು ಭರ್ತಿ ಮಾಡಲಿವೆ. ಪೂರ್ವ ಕರಾವಳಿ ರೈಲ್ವೆ ಅತಿ ಹೆಚ್ಚು 1,625 ಹುದ್ದೆಗಳನ್ನು ಭರ್ತಿ ಮಾಡಲಿದೆ ಮತ್ತು ಈಶಾನ್ಯ ರೈಲ್ವೆ ಕನಿಷ್ಠ 105 ಹುದ್ದೆಗಳನ್ನು ಭರ್ತಿ ಮಾಡಲಿದೆ. ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಒಂಬತ್ತು ರೈಲ್ವೆ ನೇಮಕಾತಿ ಮಂಡಳಿಗಳಿಗೆ ವಹಿಸಲಾಗಿದೆ.

21,997 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ:

ರೈಲ್ವೆಯಲ್ಲಿ 21,997 ಗ್ರೂಪ್ ಡಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಜನವರಿ 31ರಿಂದ ಪ್ರಾರಂಭವಾಗಿದ್ದು, 10 ನೇ ತರಗತಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾರ್ಚ್ 2, 2026 ರವರೆಗೆ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವನ್ನು ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 4 ಆಗಿದ್ದು, ಅರ್ಜಿಯಲ್ಲಿ ತಿದ್ದುಪಡಿಗಳನ್ನು ಮಾಡಲು ಅವಕಾಶ ಮಾರ್ಚ್ 5 ಮತ್ತು 14ರ ನಡುವೆ ಲಭ್ಯವಿರುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಗೆ ಕಂಡದ್ದು ಮಹಿಳೆಯ ಶವ: ಡಿಸಿಪಿ ಹೇಳಿದ್ದೇನು? – Kannada News | Devanahalli: unidentified woman Dead Body found in roadside drain

ದೇವನಹಳ್ಳಿ, ಫೆಬ್ರವರಿ 25: ರಸ್ತೆ ಬದಿಯ ಚರಂಡಿಯಲ್ಲಿ ಕತ್ತು ಕೊಯ್ದು ಸುಟ್ಟು ಹಾಕಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ (40) ಶವ (dead body) ಪತ್ತೆ ಆಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ (Devanahalli) ಪಟ್ಟಣದ ಸ್ವರ್ಣಾರ್ಧಿ ಹೋಟೆಲ್ ಬಳಿ ಚರಂಡಿಯಲ್ಲಿ ನಡೆದಿದೆ. ಹಂತಕರು ಬೇರೆಡೆ ಕೊಂದು ರಾತ್ರಿ ವೇಳೆ ಶವ ತಂದು ಬಿಸಾಕಿದ್ದು, ನಾಲ್ಕೈದು ದಿನಗಳ ಹಿಂದೆ ಮಹಿಳೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗ್ಗೆ ಮೂತ್ರ ವಿಸರ್ಜನೆಗೆ ಹೋಗಿದ್ದ ವ್ಯಕ್ತಿಯ ಕಣ್ಣಿಗೆ ಶವ ಕಾಣಿಸಿದೆ. ಕೂಡಲೇ ದೇವನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೋಕೋ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ ಸದ್ಯ ಮೃತದೇಹವನ್ನು ದೇವನಹಳ್ಳಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್ ಹೇಳಿದ್ದಿಷ್ಟು 

ಘಟನೆ ಬಗ್ಗೆ  ಟಿವಿ9ಗೆ ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದು, ಅಪರಿಚಿತ ಹೆಣ್ಣು ಮಗಳ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೊಲೆ ಮಾಡಿ ಬಿಸಾಕಿದ್ದಾರೆ. ಡ್ರೈನೆಜ್​ನಲ್ಲಿ ಚಾಕುನಿಂದ ಇರಿದು ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸುಮಾರು 30 ರಿಂದ 35 ವರ್ಷದ ಮಹಿಳೆ ಇರಬಹುದು ಎಂದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯ ಕೊಲೆ: ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತೇ? ಆಘಾತಕಾರಿ ಮಾಹಿತಿ ಬಯಲು

ಒಂದೆರಡು ದಿನದ ಹಿಂದೆ ಕೊಲೆ ಮಾಡಿರಬಹುದು. ಕೊಲೆ ಯಾರು ಮಾಡಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಸುತ್ತಾಮುತ್ತ ಸಿಸಿ ಕ್ಯಾಮರಾಗಳು ಇವೆ. ಎಲ್ಲವನ್ನೂ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುತ್ತೇವೆ ಎಂದು ಈಶಾನ್ಯ ವಿಭಾಗ ಡಿಸಿಪಿ ಮಿಥುನ್ ಕುಮಾರ್ ಹೇಳಿದ್ದಾರೆ.

ಮರಕ್ಕೆ ಬುಲೆಟ್ ಬೈಕ್ ಡಿಕ್ಕಿ: ಇಬ್ಬರು ಸವಾರರ ಸಾವು

ಮರಕ್ಕೆ ಬುಲೆಟ್ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್​ನ ಉನ್ನಿಕೃಷ್ಣನ್ ಜಂಕ್ಷನ್​​ನಲ್ಲಿ ನಡೆದಿದೆ. ಕಿರಣ್(25) ಮತ್ತು ಯಶವಂತ್(25) ಮೃತರು. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಲ್ಯಾಣ ಮಂಟಪದಲ್ಲೇ ಹೃದಯಾಘಾತದಿಂದ ಕುಸಿದುಬಿದ್ದು ಫೋಟೊಗ್ರಾಫರ್ ಸಾವು!

ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್​ನಲ್ಲಿ ಮೂವರು ಯುವಕರು ತೆರಳುತ್ತಿದ್ದರು. ಈ ವೇಳೆ ಮರಕ್ಕೆ ಬೈಕ್ ಡಿಕ್ಕಿಯಾಗಿ ಪಲ್ಟಿ ಹೊಡೆದಿದ್ದು, ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಯಶವಂತ್ ಸಾವನ್ನಪ್ಪಿದ್ದಾರೆ. ಗೌತಮ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮೊಬೈಲ್‌ ನೋಡುತ್ತಾ ಊಟ ಮಾಡಿದರೆ ಏನಾಗುತ್ತದೆ ಗೊತ್ತಾ? – Kannada News | What are the problems caused by using your phone while eating?

ಊಟ ಮಾಡುವಾಗ ಗಮನ ಆಹಾರದ ಮೇಲೆ ಇರಬೇಕು, ಊಟವನ್ನು ಆನಂದಿಸಿ ನಿಧಾನವಾಗಿ ತಿನ್ನಬೇಕು ಇದರಿಂದ ಆರೋಗ್ಯವೂ (health) ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುತ್ತದೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಇದೇ ರೀತಿ ಊಟ ಮಾಡ್ತಿದ್ರು. ಆದ್ರೆ ಇಂದು ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಬಹುತೇಕ ಎಲ್ಲರೂ ಊಟ ಮಾಡುವಾಗ ಟಿವಿ, ಮೊಬೈಲ್‌ ನೋಡೇ ನೋಡುತ್ತಾರೆ. ಹೀಗೆ ಮೊಬೈಲ್‌ ನೋಡುತ್ತಾ ಊಟ ಮಾಡುವ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದಂತೆ. ನೀವು ಕೂಡ ಇದೇ ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌, ವಿಡಿಯೋ ಸ್ಕ್ರೋಲ್‌ ಮಾಡುತ್ತಾ ಊಟ ಮಾಡ್ತೀರಾ? ಈ ಅಭ್ಯಾಸ ನಿಮ್ಮ ಮೇಲೆ ಏನೆಲ್ಲಾ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಪ್ಪದೆ ತಿಳಿಯಿರಿ.

ಊಟ ಮಾಡುವಾಗ ಮೊಬೈಲ್‌ ನೋಡುವುದರಿಂದ ಏನಾಗುತ್ತದೆ?

ಬೊಜ್ಜು ಹೆಚ್ಚಾಗಬಹುದು: ಊಟ ಮಾಡುವಾಗ ಟಿವಿ ನೋಡುವುದು ಅಥವಾ ಮೊಬೈಲ್ ಫೋನ್ ನೋಡುವುದರಿಂದ ನಮ್ಮ ಆಹಾರದಿಂದ ಗಮನ ಬೇರೆಡೆಗೆ ಸೆಳೆಯುತ್ತದೆ. ನಾವು ಅತಿಯಾಗಿ ತಿನ್ನುತ್ತೇವೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ನಂತರ ಬೊಜ್ಜಿನ ಸಮಸ್ಯೆಗೆ ಕಾರಣವಾಗುತ್ತದೆ.

ಜೀರ್ಣಕಾರಿ ಸಮಸ್ಯೆಗಳು: ಟಿವಿ ನೋಡುತ್ತಾ ಅಥವಾ ಮೊಬೈಲ್ ಫೋನ್ ಬಳಸುತ್ತಾ ಊಟ ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗಬಹುದು. ಆಹಾರವನ್ನು ಸರಿಯಾಗಿ ಅಗಿಯದೇ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯದೆ ಮಲಬದ್ಧತೆ, ಹೊಟ್ಟೆ ನೋವು ಮತ್ತು ಅಜೀರ್ಣದಂತಹ ಸಮಸ್ಯೆಗಳು ಉದ್ಭವಿಸುತ್ತದೆ.

ಮಧುಮೇಹದ ಅಪಾಯ: ಊಟ ಮಾಡುವಾಗ ಮೊಬೈಲ್‌ ಫೋನ್ ಬಳಸುವುದರಿಂದ ಮಧುಮೇಹ ಬರುವ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಏಕೆಂದರೆ ಟಿವಿ ನೋಡುತ್ತಾ ಅಥವಾ ಮೊಬೈಲ್ ಫೋನ್ ನೋಡುತ್ತಾ ಊಟ ಮಾಡುವುದರಿಂದ ಚಯಾಪಚಯ ಕ್ರಿಯೆ ನಿಧಾನವಾಗುತ್ತದೆ, ಆಹಾರದ ಸರಿಯಾದ ಸಂಸ್ಕರಣೆಯನ್ನು ತಡೆಯುತ್ತದೆ ಮತ್ತು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಏನಾಗುತ್ತೆ ಗೊತ್ತಾ?

 ಊಟ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ:

  • ಊಟ ಮಾಡುವಾಗ, ನೀವು ಟಿವಿ ಅಥವಾ ಫೋನ್ ಬಳಸದಂತೆ ಎಚ್ಚರಿಕೆ ವಹಿಸಬೇಕು.
  • ಊಟ ಮಾಡುವಾಗ, ಆಹಾರದ ಮೇಲೆ ಮಾತ್ರ ಗಮನಹರಿಸಿ, ಮಾತನಾಡುವುದು ಅಥವಾ ಫೋನ್‌ ನೋಡುವುದು ಮಾಡಬೇಡಿ.
  • ಆಹಾರವನ್ನು ನಿಧಾನಕ್ಕೆ ಅಗಿದು ತಿನ್ನಿ. ಇದು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಊಟದ ನಂತರ ತಕ್ಷಣ ನೀರು ಕುಡಿಯಬೇಡಿ. ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಾಂಧಿ, ನೆಹರು ಬಗ್ಗೆ ವಿವಾದಾತ್ಮಕ ಭಾಷಣ: ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​ಗೆ ಶಾಕ್​​ ಕೊಟ್ಟ ಖಾಕಿ – Kannada News | Controversial Remarks on Gandhi Nehru: Yatnal Faces Police Case for Hate Speech

ಯಾದಗಿರಿ, ಫೆಬ್ರವರಿ 25: ಗಾಂಧಿ, ನೆಹರು ಬಗ್ಗೆ ಅವಹೇಳನಕಾರಿ, ದ್ವೇಷ ಭಾಷಣ ಆರೋಪ ಹಿನ್ನೆಲೆ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​​​ ವಿರುದ್ಧ ಗುರುಮಠಕಲ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆ.21ರಂದು ಯಾದಗಿರಿ ಜಿಲ್ಲೆ ಗುರುಮಠಕಲ್ ಪಟ್ಟಣದಲ್ಲಿ ನಡೆದಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಯತ್ನಾಳ್​​, ಗಾಂಧಿ ಮತ್ತು ನೆಹರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹೀಗಾಗಿ ಬಿಜೆಪಿ ಉಚ್ಛಾಟಿತ ಶಾಸಕನ ವಿರುದ್ಧ ಬಿಎನ್‌ಎಸ್ 196, 299, 302, 352, 353 ಅಡಿ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿದ್ದಾರೆ.

ಯತ್ನಾಳ್​​ ಏನು ಹೇಳಿದ್ದರು?

ಗಾಂಧೀಜಿಯನ್ನ ಭಾರತದ ರಾಷ್ಟ್ರಪಿತ ಎಂದು, ಜವಾಹರ ಲಾಲ್ ನೆಹರುರನ್ನು ಮೊದಲ ಪ್ರಧಾನಿ ಎಂದು ನಾನು ಒಪ್ಪಿಕೊಳ್ಳಲ್ಲ. ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಕಾಶ್ಮೀರಕ್ಕೆ 370 ಕೊಟ್ಟಿದ್ದು ಯಾಕೆಂದ್ರೆ ಫಾರೂಕ್ ಅಬ್ದುಲ್ಲಾ ಜೊತೆ ನೆಹರುಗೆ ಲಿಂಕ್ ಇತ್ತು. ಇವರೆಲ್ಲರೂ ದೇಶದ ಸ್ವಾತಂತ್ರ್ಯಕ್ಕಾಗಿ ಉಪವಾಸ ಮಾಡುತ್ತಿರಲಿಲ್ಲ. ಕೋಲ್ಕತ್ತಾದಿಂದ 555 ಸಿಗರೇಟ್ ತರಿಸಿಕೊಂಡು ಸೇದುತ್ತಿದ್ದರು. ಗಾಂಧಿ ಚರಕ ತಿರುಗಿಸಿದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತಾ? ಹಾಗಿದ್ರೆ ನಾನು ಚರಕ ತಿರುಗಿಸುತ್ತೇನೆ, ನಾಳೆ ರಾಜ್ಯದ ಸಿಎಂ ಆಗ್ತೀನಾ? ಎಂದು ಯತ್ನಾಳ್​​ ಪ್ರಶ್ನಿಸಿದ್ದರು. ಅಲ್ಲದೆ ಭಾರತದಲ್ಲಿರುವ ಮುಸ್ಲಿಮರು ಒಂದೇ ಮಾತರಂ ಹೇಳಬೇಕು. ಇಲ್ಲದಿದ್ದರೆ ಗಾಂಧಿ ಕೊಟ್ಟ ಪಾಕಿಸ್ತಾನಕ್ಕೆ ಹೋಗಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:  ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ನೆಹರು ಮೊದಲ ಪ್ರಧಾನಿಯಲ್ಲ; ಶಾಸಕ ಯತ್ನಾಳ್​ ವಿವಾದಾತ್ಮಕ ಹೇಳಿಕೆ ವೈರಲ್

ಅಲ್ಲದೆ, ಲವ್ ಜಿಹಾದ್ ಕುರಿತು ಉಲ್ಲೇಖಿಸಿ, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ. ಈ ಭಾಷಣವು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಮುದಾಯಗಳ ನಡುವೆ ಅಶಾಂತಿ ಉಂಟುಮಾಡುವ ಉದ್ದೇಶದಿಂದ ಮಾತನಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಪೊಲೀಸರು ಯತ್ನಾಳ್​​ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವಾಚಾಳಿ ವಂಶಿ, ನಾಚಿಕೆ ಕೃಷ್ಣನ ಕಥೆಯಿರುವ ಹೊಸ ಧಾರಾವಾಹಿ ‘ಕೃಷ್ಣವಂಶಿ’ – Kannada News | Udaya Tv new serial Krishna Vamshi to go on air from 2nd March

ಕನ್ನಡ ಕಿರುತೆರೆ ಸೀರಿಯಲ್ ಕ್ಷೇತ್ರದಲ್ಲಿ ‘ಉದಯ ಟಿವಿ’ (Udaya Tv) ಪರಂಪರೆ ದೊಡ್ಡದು. ಹೊಸ ಥರದ ಕೌಟುಂಬಿಕ ಕಥೆಗಳಿಂದ ನೋಡುಗರ ಮನ ಗೆಲ್ಲುತ್ತಿರುವ ಉದಯ ವಾಹಿನಿ ಈಗ ಹೊಸ ಧಾರಾವಾಹಿ ‘ಕೃಷ್ಣವಂಶಿ’ ಮೂಲಕ ಮತ್ತೊಂದು ಭಾವನಾತ್ಮಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯಲು ಸಜ್ಜಾಗಿದೆ. ಮಾರ್ಚ್ 2ರಿಂದ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಪ್ರಸಾರ ಆರಂಭಿಸಲಿರುವ ‘ಕೃಷ್ಣವಂಶಿ’ (Krishna Vamshi) ಧಾರಾವಾಹಿಯು ಒಂದು ವಿಶೇಷವಾದ ಕಥೆಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ಆ ಬಗ್ಗೆ ಉಯಯ ವಾಹಿನಿ ಮಾಹಿತಿ ಹಂಚಿಕೊಂಡಿದೆ.

ನಾಚಿಕೆ ಸ್ವಭಾವದ ಹುಡುಗ ಕೃಷ್ಣ, ವಾಚಾಳಿ ಹುಡುಗಿ ವಂಶಿಯ ಮಧ್ಯೆ ಅರಳುವ ಪ್ರೀತಿಯ ಕಥಾಹಂದರ ಈ ಧಾರಾವಾಹಿಯಲ್ಲಿ ಇದೆ. ಒಳ್ಳೆಯ ಹುಡುಗಿ ವಂಶಿ ಮಾತಿನ ಮಲ್ಲಿ. ನಾಚಿಕೆ ಹುಡುಗ ಕೃಷ್ಣ ಹೆಚ್ಚು ಓದಿದವನಲ್ಲ. ಅಣ್ಣನ ಹೊಟೇಲ್‌ ನಡೆಸುತ್ತಿರುತ್ತಾನೆ. ವಂಶಿಗೆ ಕೃಷ್ಣನ ನಾಚಿಕೆ ಸ್ವಭಾವವೇ ಇಷ್ಟವಾಗುತ್ತದೆ. ಕೃಷ್ಣನಿಗೂ ನಾಚಿಕೆಯ ನಡುವೆ ಪ್ರೀತಿ ಅರಳುತ್ತದೆ. ಇಬ್ಬರ ಪ್ರೀತಿಗೆ ಅನೇಕ ಸಲ ಅಗ್ನಿಪರೀಕ್ಷೆ ಎದುರಾಗುತ್ತದೆ. ಅಲ್ಲಿಂದ ಕಥೆ ಆರಂಭ.

ಇದರ ಜೊತೆಗೆ ತಂದೆಯ ಮಮತೆಯ ಕಥೆ ಕೂಡ ಇದೆ. ತಂದೆ ದೊರೆಸ್ವಾಮಿಗೆ ತನ್ನ ಮಗಳು ವಂಶಿಯೇ ಪ್ರಪಂಚ. ಮಗಳು ಮದುವೆಯಾಗಿ ದೂರ ಹೋಗುವ ಕಲ್ಪನೆಯೇ ಅವರಿಗೆ ಅಸಹನೀಯ. ಮನೆ ಅಳಿಯನಾಗಲು ಒಪ್ಪುವಂಥ ಹುಡುಗನನ್ನೇ ಮಗಳು ಮದುವೆಯಾಗಲಿ ಎಂಬ ಆಸೆ ಅವರದ್ದು. ಆದರೆ ವಂಶಿಯ ಕನಸು ಬೇರೆ ದಿಕ್ಕಿನಲ್ಲಿ ಸಾಗುತ್ತದೆ.

ವಂಶಿ ಪ್ರೀತಿಯಿಂದ ಕೂಡಿದ ಅವಿಭಕ್ತ ಕುಟುಂಬದಲ್ಲಿ ಅಪ್ಪನ ಮನೆಯವರೆಲ್ಲರ ಜೊತೆ ಗಂಡನ ಮನೆಯಲ್ಲಿ ಒಟ್ಟಿಗೇ ಬದುಕುವ ಕನಸು ಹೊತ್ತಿದ್ದಾಳೆ. ಅವಳ ಆಶಯ ಮತ್ತು ಪ್ರೀತಿ ಒಟ್ಟೊಟ್ಟಿಗೆ ಸಾಗಲು ಕಷ್ಟಪಡಬೇಕಿದೆ. ವಂಶಿ ಕನಸು ನನಸಾಗುತ್ತಾ? ಕೃಷ್ಣ ಮತ್ತು ವಂಶಿಯರ ಪ್ರೀತಿ ಯಶಸ್ವಿಯಾಗುತ್ತಾ ಎನ್ನುವುದೇ ಮುಂದಿನ ಕಥಾಹಂದರ ಎಂದು ಉದಯ ವಾಹಿನಿ ತಿಳಿಸಿದೆ.

ಇದನ್ನೂ ಓದಿ: 35 ವರ್ಷಗಳ ಹಿಂದಿನ ಉಪೇಂದ್ರ ಧಾರಾವಾಹಿಯ ಕ್ಲಿಪ್ ವೈರಲ್; ಆಗ ಉಪ್ಪಿ ಹೇಗಿದ್ರು ನೋಡಿ

ನಾಯಕ ಕೃಷ್ಣನ ಪಾತ್ರದಲ್ಲಿ ರೋಹನ್ ಎ. ಅಭಿನಯಿಸುತ್ತಿದ್ದಾರೆ. ನಾಯಕಿ ವಂಶಿ ಪಾತ್ರವನ್ನು ಶಾರದಾ ಪುಂಡಿ ಮಾಡುತ್ತಿದ್ದಾರೆ. ಗಿರಿಜಾ ಲೋಕೇಶ್, ಹಂಸ, ವಿಜಯ್, ಹನುಮಂತೇಗೌಡ, ರಜಿನಿ ಟಿ.ಡಿ, ಸಿದ್ದಾರ್ಥ್ ಮಾಧ್ಯಮಿಕ, ಸಿಂಧೂ ಪಿ, ಸಂದೀಪ್ ಎಸ್.ಆರ್, ಪುಷ್ಪ ಅನಿಲ್‌ ಕುಮಾರ್, ಸುಕೃತಾ ನಾಗ್ ಮತ್ತಿತರರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಾಗಲಕೋಟೆ: ಕಲ್ಲು ತೂರಾಟದ ಕಾವು ಆರುವ ಮುನ್ನವೇ ಜಾಲತಾಣದಲ್ಲಿ ಮುಸ್ಲಿಂ ಯುವಕರಿಂದ ವಿವಾದಾತ್ಮಕ ಪೋಸ್ಟ್ – Kannada News | Bagalkot Tension: Controversial Social Media Post by Youth Surfaces Amid Ongoing Stone Pelting Probe

ಮುಸ್ಲಿಂ ಯುವಕರ ವಿವಾದಾತ್ಮಕ ಪೋಸ್ಟ್ ಸ್ಕ್ರೀನ್​ಶಾಟ್Image Credit source: tv9

ಬಾಗಲಕೋಟೆ, ಫೆಬ್ರವರಿ 25: ಬಾಗಲಕೋಟೆ (Bagalkot) ನಗರದಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲೆಸೆತ ಪ್ರಕರಣದ ಕಾವು ಆರುವ ಮುನ್ನವೇ ಸಾಮಾಜಿಕ ಜಾಲತಾಣ ಪೋಸ್ಟ್​ನಿಂದಾಗಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಕೆಲವು ಮುಸ್ಲಿಂ ಯುವಕರು ಪಂಕಾ ಮಸೀದಿಯ ಭಾವಚಿತ್ರ ಹಾಗೂ ವಿಡಿಯೋವನ್ನು ಹಂಚಿಕೊಂಡು ಪ್ರಚೋದನಕಾರಿ ಪೋಸ್ಟ್ ಮಾಡಿರುವುದು ಗಮನಸೆಳೆದಿದೆ. ‘15 ನಿಮಿಷ ಪೊಲೀಸರು ಸುಮ್ಮನಿರಲಿ, ಇಸ್ಲಾಂ ಪವರ್ ತೋರಿಸುತ್ತೇವೆ’ ಎಂಬ ಅರ್ಥದ ಹೇಳಿಕೆಯನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ಕೆಲವು ವರ್ಷಗಳ ಹಿಂದೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ನಾಯಕ ಅಕ್ಬರುದ್ದಿನ್ ಓವೈಸಿ ನೀಡಿದ್ದ ವಿವಾದಾತ್ಮಕ ಭಾಷಣವನ್ನು ನೆನಪಿಸುವಂತಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ಬಗ್ಗೆ ಪೊಲೀಸರು ಗಮನ ಹರಿಸಿದ್ದು, ಕಾನೂನು ಕ್ರಮದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಚೋದನಕಾರಿ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಜವಾಬ್ದಾರಿಯುತವಾಗಿ ವರ್ತಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಬಾಗಲಕೋಟೆ ಗಲಭೆ ಹಿನ್ನೆಲೆ

ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಬಾಗಲಕೋಟೆಯಲ್ಲಿ ಫೆಬ್ರವರಿ 19ರ ರಾತ್ರಿ 10ಗಂಟೆ ವೇಳೆ ಶಿವಾಜಿ ಭಾವಚಿತ್ರ ಮೆರವಣಿಗೆ ಮಾಡಲಾಗಿತ್ತು. ಆಗ ಮೆರವಣಿಗೆ ಮೇಲೆ ಕಲ್ಲುಗಳು ಹಾಗೂ ಚಪ್ಪಲಿ ತೂರಲಾಗಿತ್ತು. ಇದು ಹಿಂದೂ ಕಾರ್ಯಕರ್ತರನ್ನು ಕೆರಳಿಸಿದ್ದಲ್ಲದೆ, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಮಾಡಿತ್ತು. ನಂತರ ಕಲ್ಲು ತೂರಾಟ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ: ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು

ಘಟನೆಯು ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ. ಸದ್ಯ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹಿಂದೂ ಸಮುದಾಯವು ಫೆಬ್ರವರಿ 26 ರಂದು ದೊಡ್ಡ ಮಟ್ಟದ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link