All posts by nagaraj11081993

Viral Video: ಇಂಥ ತಾಯಿಯೂ ಇರ್ತಾರಾ! ಮಗನಿಗಿಂತ ಸೀರೆಯೇ ಹೆಚ್ಚಾಯ್ತಾ? – Kannada News | Mother ties her Son from 8th floor for Saree Viral Video Sparks Child Safety Debate

ನವದೆಹಲಿ, ಫೆಬ್ರವರಿ 23: ನೂರಾರು ರೂಪಾಯಿ ಬೆಲೆಯ ಸೀರೆ ಕೆಳಗೆ ಬಿದ್ದಿದ್ದಕ್ಕೆ ತಾಯಿಯೊಬ್ಬಳು ತನ್ನ ಮಗನ ಪ್ರಾಣವನ್ನೇ ಪಣಕ್ಕಿಟ್ಟಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿದೆ. ಅಪಾರ್ಟ್​​ಮೆಂಟ್​​ನ 8ನೇ ಮಹಡಿಯಲ್ಲಿ ವಾಸಿಸುತ್ತಿದ್ದ ಮಹಿಳೆ ತನ್ನ ಬಾಲ್ಕನಿಯಿಂದ 7ನೇ ಮಹಡಿಯ ಬಾಲ್ಕನಿಗೆ ಬಿದ್ದಿದ್ದ ತನ್ನ ಸೀರೆಯನ್ನು ಪಡೆಯಲು ತನ್ನ ಮಗನಿಗೆ ಸೀರೆಯನ್ನು ಕಟ್ಟಿ ಕೆಳಗೆ ನೇತಾಡಿಸಿದ್ದಾಳೆ. ಆ ಬಾಲಕ ಆ ಸೀರೆಯನ್ನು ಹಿಡಿದುಕೊಂಡು ಕೆಳಗಿನ ಬಾಲ್ಕನಿಗೆ ಹೋಗಿ ಅಲ್ಲಿ ಬಿದ್ದಿದ್ದ ಅಮ್ಮನ ಸೀರೆಯನ್ನು ತೆಗೆದುಕೊಂಡು ಮತ್ತೆ ಸೀರೆಯಲ್ಲಿ ನೇತಾಡುತ್ತಾ ಮೇಲೆ ಬಂದಿದ್ದಾನೆ. ಅಪ್ಪಿತಪ್ಪಿ ಆ ಮಗುವೇನಾದರೂ ಕೈ ಜಾರಿ ಕೆಳಗೆ ಬಿದ್ದಿದ್ದರೆ ಬದುಕುವ ಸಾಧ್ಯತೆಯಂತೂ ಇರಲೇಇಲ್ಲ ಬಿಡಿ. ಹೀಗಾಗಿ, ಆ ತಾಯಿಗೆ ತನ್ನ ಮಗನ ಪ್ರಾಣಕ್ಕಿಂತ ಸೀರೆಯೇ ಮುಖ್ಯವಾಯಿತಾ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಈ ಘಟನೆಯನ್ನು ಎದುರಿನ ಅಪಾರ್ಟ್​ಮೆಂಟ್​ ನಿವಾಸಿಗಳು ಮೊಬೈಲಿನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಒಡಿಶಾದ ನವವಧು ಕಿಡ್ನಾಪ್​ ಪ್ರಕರಣಕ್ಕೆ ಹೊಸ ತಿರುವು; ಪ್ರಿಯಕರನ ಜೊತೆ ಸೇರಿ ಮಾಡಿದ ಪ್ಲಾನ್ ಅಂತಿಂಥದ್ದಲ್ಲ! – Kannada News | Odisha Bride Stages her Own Kidnapping plan With Lover help Hours After Wedding

ಭುವನೇಶ್ವರ, ಫೆಬ್ರವರಿ 23: ಒಡಿಶಾದ ಸುವರ್ಣಪುರ ಜಿಲ್ಲೆಯಲ್ಲಿ ಇಂದು ಮದುಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಕಾರಿಗೆ ಅಡ್ಡಹಾಕಿದ ಅಪರಿಚಿತರು ನವವಧುವನ್ನು ಕಿಡ್ನಾಪ್ (Kidnap) ಮಾಡಿದ್ದು ಪೊಲೀಸರಿಗೆ ತಲೆನೋವಿನ ಕೇಸಾಗಿತ್ತು. ಇದೀಗ ತನಿಖೆಯ ಬಳಿಕ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ನವವಿವಾಹಿತ ವಧು ತನ್ನ ಪ್ರಿಯಕರನೊಂದಿಗೆ ಸೇರಿ ತನ್ನನ್ನು ತಾನೇ ‘ಅಪಹರಣ’ ಮಾಡುವ ನಾಟಕವನ್ನು ಆಡಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಬೋಲಂಗೀರ್ ಜಿಲ್ಲೆಯ ಹರಿಬಂಧು ಪಟೇಲ್ ಅಲಿಯಾಸ್ ರಿಂಕು ಎಂಬ ಯುವಕನು ಬೌಧ್ ಜಿಲ್ಲೆಯ ರಶ್ಮಿ ಎಂಬ ಯುವತಿಯನ್ನು ಮದುವೆಯಾಗಿದ್ದನು. ಅವರ ದಿಬ್ಬಣದ ಕಾರು ಹುಡುಗನ ಮನೆಯತ್ತ ಹೋಗುವಾಗ ಆಕೆಯನ್ನು ಕಿಡ್ನಾಪ್ ಮಾಡಲಾಗಿತ್ತು. ಮದುವೆಯ ನಂತರ ದಂಪತಿಗಳು ಕಾರಿನಲ್ಲಿ ವರನ ಮನೆಗೆ ಹಿಂತಿರುಗುತ್ತಿದ್ದಾಗ, ತರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವರ ಕಾರನ್ನು ಮತ್ತೊಂದು ಬಿಳಿ ಕಾರು ಅಡ್ಡಗಟ್ಟಿತ್ತು. ಬಳಿಕ ಆ ವಧುವನ್ನು ಕಿಡ್ನಾಪ್ ಮಾಡಲಾಗಿತ್ತು.

ಇದನ್ನೂ ಓದಿ: ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ ಮಹಿಳೆ, ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ!

ತನ್ನ ಹೆಂಡತಿಯನ್ನು ಕಿಡ್ನಾಪ್ ಮಾಡಲಾಗಿದೆ ಎಂದು ವರ ಹರಿಬಂಧು ಪಟೇಲ್ ನೀಡಿದ ದೂರಿನ ಪ್ರಕಾರ, ಗನ್ ಹಿಡಿದುಕೊಂಡಿದ್ದ ವಧುವಿನ ಮಾಜಿ ಪ್ರಿಯಕರ ಮತ್ತು ಆತನ ಸಹಚರರು ಬಲವಂತವಾಗಿ ಆಕೆಯನ್ನು ಕಾರಿನೊಳಗೆ ಹಾಕಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪೊಲೀಸರು ತನಿಖೆ ನಡೆಸಿದಾಗ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ತಾಂತ್ರಿಕ ತನಿಖೆ ಮತ್ತು ವಿಚಾರಣೆಯ ಸಂದರ್ಭದಲ್ಲಿ, ಈ ಸಂಪೂರ್ಣ ಅಪಹರಣದ ಪ್ಲಾನ್ ಅನ್ನು ವಧು ರಶ್ಮಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ರೂಪಿಸಿದ್ದಳು ಎಂಬುದು ಬಯಲಾಗಿದೆ.

ಇದನ್ನೂ ಓದಿ: 6 ವರ್ಷದಿಂದ ಒಂದೇ ರೂಮಿನಲ್ಲಿದ್ದು ಈಗ ನಾನು ಬೇಡ ಅಂತಿದ್ದಾಳೆ: ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಿಯಕರ

ವಧು ಸ್ವಇಚ್ಛೆಯಿಂದಲೇ ತನ್ನ ಪ್ರಿಯಕರನೊಂದಿಗೆ ಹೋಗಿದ್ದಾಳೆ, ಅಲ್ಲಿ ಯಾವುದೇ ಅಪಹರಣ ನಡೆದಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮದುವೆಯಾದ ಕೆಲವೇ ಗಂಟೆಗಳ ನಂತರ, ವಧು ತನ್ನ ಪ್ರಿಯಕರನಿಗೆ ಕರೆ ಮಾಡಿ ಈ ಸಿನಿಮೀಯ ಅಪಹರಣವನ್ನು ಪ್ಲಾನ್ ಮಾಡಿದ್ದಳು. ಪೊಲೀಸ್ ತನಿಖೆಯ ವೇಳೆ ಈ ಅಪಹರಣವು ವಧು ರಶ್ಮಿ ಅವರೇ ತನ್ನ ಪ್ರಿಯಕರನೊಂದಿಗೆ ಸೇರಿ ನಡೆಸಿದ ಹೈಡ್ರಾಮಾ ಎಂಬುದು ಬೆಳಕಿಗೆ ಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್​ಕುಮಾರ್ ಫುಲ್ ಖುಷ್ – Kannada News | Yuva Rajkumar reaction after her father Raghavendra Rajkumar gets honorary doctorate in Mantralaya

ಮಂತ್ರಾಲಯದಲ್ಲಿ ನಡೆದ ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ನಟ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರಿಗೆ ಗೌರವ ಡಾಕ್ಟರೇಟ್ ಪದವಿ ಪದಾನ ಮಾಡಲಾಗಿದೆ. ಈ ಬಗ್ಗೆ ಅವರ ಪುತ್ರ ಯುವ ರಾಜ್​ಕುಮಾರ್ ಮಾತನಾಡಿದ್ದಾರೆ. ‘ಇದಕ್ಕಿಂತ ಇನ್ನೇನೂ ಸಂತೋಷ ಇಲ್ಲ. ನಮ್ಮ ತಾತ ಮಂತ್ರಾಲಯ ಮಹಾತ್ಮೆ ಸಿನಿಮಾ ಮಾಡುವಾಗ ನಮ್ಮ ತಂದೆ ಹುಟ್ಟಿದ್ದು. ಅದಕ್ಕೆ ಅವರಿಗೆ ರಾಘವೇಂದ್ರ ಅಂತ ಹೆಸರು ಇಟ್ಟಿದ್ದು. ಇಂದು ಇಲ್ಲಿ ರಾಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಸಿಗುತ್ತಿರುವುದು ಬಹಳ ಸಂತೋಷದ ವಿಷಯ. ರಾಯರ ಬಗ್ಗೆ ನಮ್ಮ ತಾತ ಅದ್ಭುತವಾದ ಸಿನಿಮಾ ಮಾಡಿದ್ದಾರೆ. ನಾವು ಈ ರೀತಿ ಮಾಡಲು ಸಾಧ್ಯವಿಲ್ಲ. ಇಂದು ನಮ್ಮ ಕುಟುಂಬದವರು ಇಲ್ಲಿಗೆ ಬಂದಿದ್ದೇವೆ. ತುಂಬ ಖುಷಿ ಆಗಿದೆ’ ಎಂದು ಯುವ ರಾಜ್​ಕುಮಾರ್ (Yuva Rajkumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ತುಮಕೂರು ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ – Kannada News | Tumakuru jewellery shop robbery: SP reveals the thrill of catching the thieves

ತುಮಕೂರು, ಫೆಬ್ರವರಿ 23: ಜಿಲ್ಲೆಯ ಬೆಂಚೆಗೇಟ್ ಗ್ರಾಮದಲ್ಲಿ ಜಗದಂಬಾ ಜ್ಯುವೆಲರಿ ಶಾಪ್‌ನಲ್ಲಿ ನಡೆದ ಚಿನ್ನಾಭರಣ ದರೋಡೆಯ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ, ಮೂವರು ಅಪರಿಚಿತ ವ್ಯಕ್ತಿಗಳು ಅಂಗಡಿಗೆ ನುಗ್ಗಿ, ಅಲ್ಲಿದ್ದ ಯುವಕ ಮತ್ತು ಅಜ್ಜಿ ಮೇಲೆ ಮೆಣಸಿನಕಾಯಿ ಪುಡಿ ಎರಚಿ, ಚಿನ್ನ, ರೋಲ್ಡ್ ಗೋಲ್ಡ್ ಮತ್ತು ಬೆಳ್ಳಿಯ ಆಭರಣಗಳನ್ನು ದೋಚಿ ವಾಹನದಲ್ಲಿ ಪರಾರಿಯಾಗಿದ್ದರು. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​​ಪಿ ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ: ಎಳನೀರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ – Kannada News | Bengaluru Heat: Tender Coconut Demand Soars, Prices Spike Early

ಬೆಂಗಳೂರು, ಫೆಬ್ರವರಿ 23: ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಬಿಸಿಲಿನ ಪ್ರಮಾಣ (summer heat) ಹೆಚ್ಚಾಗಿದ್ದು, ಜನರು ಕಲ್ಲಂಗಡಿ ಹಾಗೂ ಎಳನೀರು (Tender coconut) ಮೊರೆ‌ ಹೋಗುತ್ತಿದ್ದಾರೆ. ಕಲ್ಲಂಗಡಿ ಹಾಗೂ ಎಳನೀರಿಗೆ ಸದ್ಯ ಭಾರೀ ಡಿಮ್ಯಾಂಡ್​ ಇದೆ. ಆದರೆ ಜನರು ಖರೀದಿ ಮಾಡುವುದಕ್ಕೆ ಹಿಂದುಮುಂದು ನೋಡುವಂತಹ ಪರಿಸ್ಥಿತಿ ಉಂಟಾಗಿದೆ. ಹಾಗಾದರೆ ಕಲ್ಲಂಗಡಿ, ಎಳನೀರು ವ್ಯಾಪಾರ ಹೇಗಿದೆ ತಿಳಿಯಿರಿ.

ಈ ಬಾರಿಯ ಬಿಸಿಲಿನ ಪ್ರಮಾಣ ಜೋರಾಗಿಯೇ ಇದೆ. ಸಾಮಾನ್ಯವಾಗಿ ಮಾರ್ಚ್‌ನಲ್ಲಿ‌ ಆರಂಭವಾಗುವ ಬಿಸಿಲಿನ ಝಳ ಈ ಬಾರಿ ಫೆಬ್ರವರಿಯಲ್ಲೇ ಶುರುವಾಗಿದ್ದು, ಪ್ರಮುಖವಾಗಿ ಬೆಂಗಳೂರಿನಲ್ಲಿ ಸುಡುಬಿಸಿಲಿಗೆ ಜನರು ರೋಸಿಹೋಗಿದ್ದಾರೆ.

ಇದನ್ನೂ ಓದಿ: ಬೇಸಿಗೆ ಅಂತ ಕಲ್ಲಂಗಡಿ, ಐಸ್ ಕ್ರೀಂ ತಿನ್ನುವ ಮುನ್ನ ಬಿ ಕೇರ್​ಫುಲ್ ಎಂದ ಆರೋಗ್ಯ ಇಲಾಖೆ: ಏಕೆ?

ಈಗಾಗಲೇ ಬೆಂಗಳೂರಿನಲ್ಲಿ 32 ರಿಂದ 33 ಡಿಗ್ರಿವರೆಗೂ ಉಷ್ಣಾಂಶ ದಾಖಲಾಗುತ್ತಿದೆ. ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ರಾಜ್ಯದಲ್ಲಿ ಸೂರ್ಯ ನೆತ್ತಿಯ ಮೇಲೆ ಕುಳಿತಿದ್ದಾನೆ. ಸದ್ಯ ಬಿಸಿಲಿನ ಪ್ರಮಾಣ ಹೆಚ್ಚಾದ ಬೆನ್ನಲ್ಲೇ ಜನರು ಕಲ್ಲಂಗಡಿ ಹಾಗೂ ಎಳನೀರಿನ ಮೊರೆ ಹೋಗಿದ್ದಾರೆ. ಸಾಮಾನ್ಯವಾಗಿ 40 ರಿಂದ 50 ರೂ.ಗೆ ಸಿಗುತ್ತಿದ್ದ ಎಳನೀರು ಇದೀಗ 70 ರಿಂದ 80 ರೂ.ಗೆ ಮಾರಾಟವಾಗುತ್ತಿದೆ. ಜೊತೆಗೆ ಕೆ.ಜಿಗೆ 20 ರೂಪಾಯಿಗೆ ಕಲ್ಲಂಗಡಿ ಹಣ್ಣು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇಷ್ಟೇ ಅಲ್ಲದೇ ಬೇಸಿಗೆ ಆರಂಭಕ್ಕೂ ಮುನ್ನವೇ ಬೆಲೆ ದುಪ್ಪಟ್ಟಾಗಿರುವುದರಿಂದ ಮುಂದೆ ಇನ್ನಷ್ಟು ದರ ಹೆಚ್ಚಳವಾಹಬಹುದೆಂಬ ಆತಂಕ ಗ್ರಾಹಕರನ್ನು ಕಾಡಲಾರಂಭಿಸಿದೆ.

ಇನ್ನು ಹವಾಮಾನ ವೈಪರೀತ್ಯದಿಂದ ಅನೇಕ ಭಾಗಗಳಲ್ಲಿ ರೋಗಳಿಂದ ಎಳನೀರು ಇಳುವರಿ ಕಡಿಮೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಸಿಗುವ ಹೆಚ್ಚಿನ ಎಳನೀರು ಮಂಡ್ಯ, ಚಾಮರಾಜನಗರ, ಮದ್ದೂರು, ಮಳವಳ್ಳಿ, ರಾಮನಗರ, ಹಾಸನ ಮತ್ತು ತುಮಕೂರಿನಿಂದ ಬರುತ್ತದೆ. ಸೀಸನ್ ಆಗಿರುವುದರಿಂದ 50 ರಿಂದ 55 ರೂ.ಗೆ ಸಿಕ್ಕರೆ ಸ್ವಾಭಾವಿಕವಾಗಿ ದರ ಏರಿಕೆಯಾಗುತ್ತದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಮಕ್ಕಳು, ಪೌಷ್ಟಿಕಾಂಶ ಕೊರತೆಯಿಂದ ಬಳಲುವವರು ಅತ್ಯಗತ್ಯ ಎಳನೀರನ್ನು ಬಳಸುವುದರಿಂದ ಎಳೆನೀರಿನ ದರ ದುಪಟ್ಟಾಗಿದೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಆರೋಗ್ಯ ಇಲಾಖೆ: ಉಚಿತ ಸ್ಕ್ಯಾನಿಂಗ್‌ಗೆ ಪರ್ಯಾಯ ವ್ಯವಸ್ಥೆ

ಒಟ್ಟಿನಲ್ಲಿ ಬಿಸಿಲಿನ ಝಳ ಜೋರಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಎಳೆನೀರಿನ ಬೆಲೆ ದುಪಟ್ಟಾಗಿರುವುದು ಜನಸಾಮಾನ್ಯರು ಕುಡಿಯಲು ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಣಜಿ ಟ್ರೋಫಿ ಫೈನಲ್: ಕರ್ನಾಟಕದ ಬ್ಯಾಟಿಂಗ್, ಬೌಲಿಂಗ್ ಸ್ಟ್ರೆಂತ್ ತಿಳಿಸಿದ ವಿನಯ್ ಕುಮಾರ್ – Kannada News | Karnataka’s batting depth gives it edge over Jammu And Kashmir in Ranji Trophy final: Vinay Kumar

ಹುಬ್ಬಳ್ಳಿ, (ಫೆಬ್ರವರಿ 23): ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ (Ranji Trophy Final) ಪಂದ್ಯ ನಡೆಯುತ್ತಿದೆ. ಕರ್ನಾಟಕ (Karnataka Team) ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವಿನ ಫೈನಲ್ ಪಂದ್ಯ ನಾಳೆ (ಫೆಬ್ರವರಿ 24) ಆರಂಭವಾಗಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ವಾಣಿಜ್ಯ ನಗರಿ ಸಾಕ್ಷಿಯಾಗಲಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕೆವಲ ಹುಬ್ಬಳ್ಳಿ ಮಾತ್ರವಲ್ಲದೇ ಉತ್ತರ ಕರ್ನಾಟಕ ಜನತೆ ಕಾತುರದಿಂದ ಕಾಯುತ್ತಿದೆ. ಇನ್ನೊಂದೆಡೆ ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ಕರ್ನಾಟಕದ ಸ್ಟ್ರೆಂತ್ ಹೇಗಿದೆ?  ಬ್ಯಾಟಿಂಗ್ ಮತ್ತು ಬೌಲಿಂಗ್ ಹೇಗಿದೆ  ಎನ್ನುವುದನ್ನು ಮಾಜಿ ಆಟಗಾರ ಆರ್ ವಿನಯ್ ಕುಮಾರ್ ಅವರು ವಿವರಿಸಿದ್ದಾರೆ ಕೇಳಿ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್: ಉತ್ತರ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬ, ಟಿಕೆಟ್ ದರ ಎಷ್ಟು?

Source link

ರಾಹುಲ್ ಗಾಂಧಿ ನಾಯಕನ ಸ್ಥಾನ ತ್ಯಾಗ ಮಾಡಬೇಕು; AIUDF ನಾಯಕ ರಫೀಕುಲ್ ಇಸ್ಲಾಂ ಪ್ರತಿಕ್ರಿಯೆ – Kannada News | AIUDF leader Rafiqul Islam says Congress needs to make a sacrifice to wipe out BJP

ಗುವಾಹಟಿ, ಫೆಬ್ರವರಿ 23: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ (Mani Shankar Aiyar) ಇಂದು ರಾಹುಲ್ ಗಾಂಧಿ ಇಂಡಿಯ ಬ್ಲಾಕ್ ನಾಯಕನ ಸ್ಥಾನದಿಂದ ಕೆಳಗೆ ಇಳಿಯಬೇಕೆಂದು ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ AIUDF ನಾಯಕ ರಫೀಕುಲ್ ಇಸ್ಲಾಂ, “ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಗಳನ್ನು ರಾಹುಲ್ ಗಾಂಧಿ ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆಂದು ನನಗೆ ತಿಳಿದಿಲ್ಲ. ಅವರು ತುಂಬಾ ಪ್ರಬುದ್ಧರಾಗಿದ್ದಾರೆ. ರಾಹುಲ್ ಗಾಂಧಿ ಇಂಡಿಯ ಬ್ಲಾಕ್‌ನ ಅಧ್ಯಕ್ಷರಾಗಿದ್ದರೆ ಮತ್ತು ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿದರೆ ಇತರೆ ಮಿತ್ರಪಕ್ಷಗಳು ಅವರನ್ನು ಬೆಂಬಲಿಸುತ್ತಾರೆಯೇ? ಈಗ ವರ್ಷಗಳೇ ಕಳೆದಿವೆ. ನಿಧಾನವಾಗಿ, ಇಂಡಿಯ ಬ್ಲಾಕ್ ಮೂಲೆಗುಂಪಾಗಿ ಬಿಜೆಪಿ ಆಡಳಿತವನ್ನು ಮುಂದುವರಿಸುತ್ತದೆ. ಆದ್ದರಿಂದ, ಮಣಿಶಂಕರ್ ಅಯ್ಯರ್ ಹೇಳಿದ್ದು ಸರಿ. ಕಾಂಗ್ರೆಸ್ ಅದರಲ್ಲೂ ವಿಶೇಷವಾಗಿ ರಾಹುಲ್ ಗಾಂಧಿ ಇತರರನ್ನು ಮುಂದಕ್ಕೆ ಬಿಟ್ಟು ಬಿಜೆಪಿಯನ್ನು ಅಳಿಸಿ ಹಾಕಬೇಕು. ಇದಕ್ಕೆ ಕಾಂಗ್ರೆಸ್ ತ್ಯಾಗ ಮಾಡಬೇಕಾಗಿದೆ. ರಾಹುಲ್ ಗಾಂಧಿಯನ್ನು ಅವರನ್ನು ಬೆಂಬಲಿಸಲು ಯಾರೂ ಇರುವುದಿಲ್ಲ. ಮಮತಾ ದೀದಿ, ಕೇಜ್ರಿವಾಲ್, ಅಖಿಲೇಶ್, ಸ್ಟಾಲಿನ್ ಇರುವುದಿಲ್ಲ. ಕೇವಲ 100 ಸ್ಥಾನಗಳಿಂದ ಸರ್ಕಾರ ರಚನೆಯಾಗಲು ಸಾಧ್ಯವಿಲ್ಲ. ಮಣಿಶಂಕರ್ ಅಯ್ಯರ್ ಹೇಳಿದ್ದು ಸರಿ ಎಂದು ನಾನು ಭಾವಿಸುತ್ತೇನೆ. ಅಖಿಲೇಶ್ ಯಾದವ್, ಕೇಜ್ರಿವಾಲ್, ಸ್ಟಾಲಿನ್ ಮತ್ತು ತೇಜಸ್ವಿ ಯಾದವ್‌ರಂತಹ ಜನರಿಗೆ ಮೈತ್ರಿಕೂಟದ ನಾಯಕನ ಸ್ಥಾನ ನೀಡಬೇಕು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುರುವೈಭವೋತ್ಸವ ವೇದಿಕೆಯಲ್ಲಿ ಗೌರವ ಡಾಕ್ಟರೇಟ್ ಪಡೆದ ರಾಘವೇಂದ್ರ ರಾಜ್​ಕುಮಾರ್ – Kannada News | Raghavendra Rajkumar awarded honorary doctorate by Yoga Samskrutham University in Mantralaya

ಮಂತ್ರಾಲಯದಲ್ಲಿ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ಇದೇ ಉತ್ಸವದ ವೇದಿಕೆಯಲ್ಲಿ ಹಲವು ಗಣ್ಯರಿಗೆ ಸನ್ಮಾನ ಮಾಡಲಾಗಿದೆ. ನಟ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗಿದೆ. ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದೇ ವೇಳೆ ರಾಘವೇಂದ್ರ ರಾಜ್​ಕುಮಾರ್ ಅವರಿಗೆ ರಾಯರ ಅನುಗೃಹ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಯಿತು. ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್​​ಕುಮಾರ್ ಅವರು ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು.

ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ರಾಘವೇಂದ್ರ ರಾಜ್​ಕುಮಾರ್ ಅವರು ಮಾತನಾಡಿದರು. ಡಾಕ್ಟರೇಟ್ ಪದವಿ ಸಿಕ್ಕಿದ್ದು ಪುಣ್ಯ. ಅದನ್ನ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುವೆ. ನಾನು ಹುಟ್ಟಿದಾಗ ತಂದೆ ಅವರು ಮಂತ್ರಾಲಯ ಸಿನಿಮಾ ಮಾಡುತ್ತಿದ್ದರು. ಆಗ ನನಗೆ ರಾಘವೇಂದ್ರ ಅಂತ ನನಗೆ ಹೆಸರು ಇಟ್ಟಿದ್ರು. ಅದು ರಾಘವೇಂದ್ರ ರಾಜ್​ಕುಮಾರ್ ಆಗಿ ಬೆಳೆದು ಬಂದಿದೆ’ ಎಂದು ಅವರು ಹೇಳಿದರು.

‘ನನಗೆ ಈಗ ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ. ಇದರಿಂದ ಜವಾಬ್ದಾರಿ, ಭಯ ಜಾಸ್ತಿ ಆಗ್ತಿದೆ. ಏನು ಸಾಧನೆ ಮಾಡದೇ ಇರುವವನಿಗೆ ಯಾಕೆ ಕೊಟ್ಟರು ಎನಿಸುತ್ತದೆ. ದೇವರ ಆಶೀರ್ವಾದದಿಂದ ಬಂದಿದೆ. ಇನ್ಮೇಲೆ ನಾನು ಸಮಾಜ ಸೇವೆ ಮಾಡಿಕೊಂಡು ಜನರ ಜೊತೆ ಬೆರೆತು ಕೆಲಸ ಮಾಡುತ್ತೇನೆ. ತಂದೆ-ತಾಯಿ ಆಶೀರ್ವಾದ ಮಾಡಿ ಈ ಗೌರವ ಕೊಡಿಸಿರೋ ಥರ ಆಗಿದೆ. ಇದನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುತ್ತಿದ್ದೇನೆ’ ಎಂದು ರಾಘವೇಂದ್ರ ರಾಜ್​ಕುಮಾರ್ ಅವರು ಹೇಳಿದರು.

ಸೆಲ್ಫಿಗಾಗಿ ಫ್ಯಾನ್ಸ್ ತಳ್ಳಾಟ: ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವ ರಾಜ್​ಕುಮಾರ್ ಮತ್ತು ವಿನಯ್ ರಾಜ್​ಕುಮಾರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಕಾರು ಹತ್ತಲು ಬಿಡದೇ ಸೆಲ್ಫಿಗಾಗಿ ನೂಕಾಟ, ತಳ್ಳಾಟ ನಡೆಯಿತು. ಕೊನೆಗೂ ಅಭಿಮಾನಿಗಳಿಗೆ ಸೆಲ್ಫಿ ನೀಡಿ ಅವರಿಬ್ಬರು ತೆರಳಿದರು.

ಇದನ್ನೂ ಓದಿ: ಎದೆಯೊಳಗಿದ್ದ ಅಪ್ಪುವನ್ನು ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡ ರಾಘವೇಂದ್ರ ರಾಜ್​ಕುಮಾರ್

ರಾಘವೇಂದ್ರ ರಾಜ್​ಕುಮಾರ್ ಅವರಿಗೆ ಈಗ 60 ವರ್ಷ ವಯಸ್ಸು. 1988ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಜನರನ್ನು ರಂಜಿಸಿದ್ದಾರೆ. ನಿರ್ಮಾಪಕನಾಗಿ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2004ರ ಬಳಿಕ ಸತತ 15 ವರ್ಷಗಳ ಕಾಲ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಸೆಂಬರ್ ತ್ರೈಮಾಸಿಕ ವರದಿ ಬಿಡುಗಡೆ ನಂತರ ಪತಂಜಲಿ ಷೇರುಗಳಿಗೆ ಬೇಡಿಕೆ; ಹೂಡಿಕೆದಾರರಿಗೆ ಭರ್ಜರಿ ಲಾಭ – Kannada News | Patajali Foods investors gain a lot after company’s December end quarterly report release

ಪತಂಜಲಿ ಫುಡ್ಸ್ ಲಿಮಿಟೆಡ್‌ನ (Patanjali Foods) ಮೂರನೇ ತ್ರೈಮಾಸಿಕದ ಫಲಿತಾಂಶ ಪ್ರಕಟಗೊಂಡ ಬಳಿಕ ಅದರ ಷೇರುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇವತ್ತು ಸೋಮವಾರ ಅದರ ಷೇರುಬೆಲೆ 3 ರೂ ಕಡಿಮೆಗೊಂಡು 531 ರೂಗೆ ಇಳಿದಿದೆ. ಆದರೆ, ಅದಕ್ಕೂ ಹಿಂದಿನ ಏಳು ಟ್ರೇಡಿಂಗ್ ದಿನಗಳಲ್ಲಿ ಷೇರುಬೆಲೆಯಲ್ಲಿ ಶೇ. 2.50ರಷ್ಟು ಏರಿಕೆ ಇತ್ತು. ಇದರಿಂದಾಗಿ ಅದರ ಮಾರುಕಟ್ಟೆ ಬಂಡವಾಳ 58,000 ಕೋಟಿ ರೂ ಗಡಿ ದಾಟಿತ್ತು. ಹೂಡಿಕೆದಾರರಿಗೆ 1,500 ಕೋಟಿ ರೂ ಲಾಭ ತಂದುಕೊಟ್ಟಿದೆ. ಕಂಪನಿಯ ತ್ರೈಮಾಸಿಕ ವರದಿ (Quarterly results) ಬಹಳ ಗಮನ ಸೆಳೆದಿದೆ. ಅದರ ಲಾಭವು ಹಿಂದಿನ ವರ್ಷದಕ್ಕೆ ಹೋಲಿಸಿದರೆ ಶೇ. 60ರಷ್ಟು ಹೆಚ್ಚಿದೆ. ಅದರ ಆದಾಯವೂ ಕೂಡ ಹೆಚ್ಚಿದೆ.

ಕಂಪನಿ ಷೇರುಗಳಲ್ಲಿ ಉತ್ತಮ ಏರಿಕೆ

ಪತಂಜಲಿ ಫುಡ್ಸ್ ಸಂಸ್ಥೆಯ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಫೆಬ್ರವರಿ 11 ರಂದು ಪ್ರಕಟಿಸಲಾಯಿತು. ಅಂದಿನಿಂದ, ಕಂಪನಿಯ ಷೇರುಗಳು 2.50% ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಬಿಎಸ್‌ಇ ದತ್ತಾಂಶದ ಪ್ರಕಾರ, ಫೆಬ್ರವರಿ 11 ರಂದು ಷೇರು ಮಾರುಕಟ್ಟೆ ಮುಕ್ತಾಯಗೊಂಡಾಗ, ಕಂಪನಿಯ ಷೇರುಗಳು ಬಿಎಸ್‌ಇಯಲ್ಲಿ 522 ರೂ ಇತ್ತು. ಫೆಬ್ರವರಿ 20 ರಂದು, ಕಂಪನಿಯ ಷೇರುಗಳು 535.55 ರೂ.ಗಳಿಗೆ ಮುಕ್ತಾಯಗೊಂಡವು. ಅಂದರೆ, ಕಂಪನಿಯ ಷೇರುಗಳು ಅಂದಿನಿಂದ 13.55 ರೂ. ಅಥವಾ 2.59% ರಷ್ಟು ಏರಿಕೆ ಕಂಡಿವೆ. ಇವತ್ತು 3 ರೂ ಕಡಿಮೆ ಆಗಿರುವುದನ್ನು ಪರಿಗಣಿಸಿದರೆ, ಫೆಬ್ರುವರಿ 13ರಿಂದ ಈಚೆಗೆ ಇದರ ಷೇರು ಬೆಲೆ 10.55 ರೂನಷ್ಟು ಏರಿಕೆ ಆಗಿದೆ. ಇದೂ ಕೂಡ ಗಮನಾರ್ಹ ಅಂಶವೆನಿಸುತ್ತದೆ.

ಪತಂಜಲಿ ಕಂಪನಿಯ ಮೌಲ್ಯ 1500 ಕೋಟಿ ರೂ ಹೆಚ್ಚಳ

ಪತಂಜಲಿ ಷೇರುಗಳ ಈ ಏರಿಕೆಯು ಅದರ ಮೌಲ್ಯದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು ₹1,500 ಕೋಟಿಗಳಷ್ಟು ಹೆಚ್ಚಾಗಿದೆ ಎಂದು ಡೇಟಾ ತೋರಿಸುತ್ತದೆ. ಬಿಎಸ್‌ಇ ದತ್ತಾಂಶದ ಪ್ರಕಾರ, ಫೆಬ್ರವರಿ 11 ರಂದು ಷೇರು ಮಾರುಕಟ್ಟೆ ಮುಕ್ತಾಯಗೊಂಡಾಗ, ಕಂಪನಿಯ ಮಾರುಕಟ್ಟೆ ಬಂಡವಾಳ ₹56,789.32 ಕೋಟಿಗಳಷ್ಟಿತ್ತು. ಫೆಬ್ರುವರಿ 20, ಶುಕ್ರವಾರ ಅದು ₹58,263.45 ಕೋಟಿಗಳಿಗೆ ಏರಿದೆ. ಇದರ ಮಾರುಕಟ್ಟೆ ಬಂಡವಾಳದಲ್ಲಿ ಈ ಏಳು ದಿನಗಳಲ್ಲಿ ಏರಿಕೆ ಆಗಿದ್ದು 1,474.13 ಕೋಟಿ ರೂನಷ್ಟು. ಇವತ್ತು ಸೋಮವಾರ ಪತಂಜಲಿ ಫುಡ್ಸ್ ಮಾರುಕಟ್ಟೆ ಬಂಡವಾಳ 57,654 ಕೋಟಿ ರೂ ಮುಟ್ಟಿದೆ.

ಇದನ್ನೂ ಓದಿ: ಡಿಸೆಂಬರ್ ತ್ರೈಮಾಸಿಕ ವರದಿ: ಪತಂಜಲಿ ಫುಡ್ಸ್ ಭರ್ಜರಿ ಆದಾಯ ಮತ್ತು ಲಾಭ ದಾಖಲು; ಹೂಡಿಕೆದಾರರಿಗೂ ಲಾಭ

ಪತಂಜಲಿ 60% ಲಾಭ ಹೆಚ್ಚಳ

ಅಡುಗೆ ಎಣ್ಣೆ ಸೇರಿದಂತೆ ಹಲವು ಎಫ್​ಎಂಸಿಜಿ ಉತ್ಪನ್ನಗಳನ್ನು ಮಾರುವ ಪತಂಜಲಿ ಫುಡ್ಸ್ ಸಂಸ್ಥೆ ಡಿಸೆಂಬರ್ ಕ್ವಾರ್ಟರ್​ನಲ್ಲಿ ಮಾಡಿರುವ ನಿವ್ವಳ ಲಾಭ 593.33 ಕೋಟಿ ರೂ ಆಗಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ. 60ರಷ್ಟು ಹೆಚ್ಚಳ ಆಗಿದೆ. ಕಳೆದ ವರ್ಷದ ಡಿಸೆಂಬರ್ ಕ್ವಾರ್ಟರ್​ನಲ್ಲಿ ಅದಕ್ಕೆ ಸಿಕ್ಕ ನಿವ್ವಳ ಲಾಭ ₹370.88 ಕೋಟಿ ಇತ್ತು. ಕಂಪನಿ ಸಲ್ಲಿಸಿದ ರೆಗ್ಯುಲೇಟರಿ ಫೈಲಿಂಗ್ಸ್ ಪ್ರಕಾರ, ತ್ರೈಮಾಸಿಕದ ಒಟ್ಟು ಆದಾಯ ₹10,541.12 ಕೋಟಿಗಳಿಗೆ ಏರಿದೆ. ಇದು ಹಿಂದಿನ ವರ್ಷ ₹9,020.38 ಕೋಟಿಗಳಷ್ಟಿತ್ತು. ಅಡುಗೆ ಎಣ್ಣೆಯ ಜೊತೆಗೆ, ಪತಂಜಲಿ ಫುಡ್ಸ್ ಇತರ ಆಹಾರ ಮತ್ತು ಗ್ರಾಹಕ ಸರಕುಗಳನ್ನು ಸಹ ಮಾರಾಟ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಫೆ. 26ರಂದು ಭಾರತಕ್ಕೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಭೇಟಿ – Kannada News | Canada PM Mark Carney to visit India on February 26 on Indo Pacific tour

ನವದೆಹಲಿ, ಫೆಬ್ರವರಿ 23: ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಫೆಬ್ರವರಿ 26ರಿಂದ ಮಾರ್ಚ್ 7ರವರೆಗೆ ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್‌ಗೆ ಪ್ರಯಾಣಿಸಲಿದ್ದಾರೆ. ಅವರ ಭೇಟಿಯ ಸಮಯದಲ್ಲಿ ವ್ಯಾಪಾರ, ಇಂಧನ, ತಂತ್ರಜ್ಞಾನ ಮತ್ತು ರಕ್ಷಣೆಯ ವ್ಯವಹಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಕೆನಡಾ ಸರ್ಕಾರದ ಹೇಳಿಕೆ ತಿಳಿಸಿದೆ. “ಪ್ರಧಾನಿ ಕಾರ್ನಿ ಮೊದಲು ಮುಂಬೈಗೆ ಭೇಟಿ ನೀಡಲಿದ್ದಾರೆ, ನಂತರ ನವದೆಹಲಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು (PM Modi) ಭೇಟಿ ಮಾಡಲಿದ್ದಾರೆ.

ಉಭಯ ನಾಯಕರು ಕೆನಡಾ-ಭಾರತದ ಸಂಬಂಧವನ್ನು ಗಟ್ಟಿಗೊಳಿಸುವ ಮತ್ತು ವಿಸ್ತರಿಸುವತ್ತ ಗಮನಹರಿಸಲಿದ್ದಾರೆ. ವ್ಯಾಪಾರ, ಇಂಧನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI), ಪ್ರತಿಭೆ, ಸಂಸ್ಕೃತಿ ಮತ್ತು ರಕ್ಷಣೆಯಲ್ಲಿ ಮಹತ್ವಾಕಾಂಕ್ಷೆಯ ಹೊಸ ಪಾಲುದಾರಿಕೆಗಳೊಂದಿಗೆ ಈ ಭೇಟಿಯ ಚರ್ಚೆ ನಡೆಯಲಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ಜಸ್ಟಿನ್ ಟ್ರುಡೊ ನಂತರ ಅಧಿಕಾರ ವಹಿಸಿಕೊಂಡ ನಂತರ ಕಾರ್ನಿ ಅವರ ಭಾರತಕ್ಕೆ ಇದು ಮೊದಲ ಭೇಟಿಯಾಗಿದೆ. 2024ರಲ್ಲಿ ಭಾರತವು ಕೆನಡಾದ 7ನೇ ಅತಿದೊಡ್ಡ ಸರಕು ಮತ್ತು ಸೇವೆಗಳ ವ್ಯಾಪಾರ ಪಾಲುದಾರರಾಗಿದ್ದು, ಇದರಲ್ಲಿ ಕೆನಡಾ ಸರ್ಕಾರದ ಪ್ರಕಾರ 2 ದೇಶಗಳ ನಡುವಿನ ದ್ವಿಮುಖ ವ್ಯಾಪಾರವು ಸುಮಾರು 31 ಶತಕೋಟಿ ಡಾಲರ್‌ಗಳಷ್ಟಿತ್ತು. 2025ರ G20 ನಾಯಕರ ಶೃಂಗಸಭೆಯ ಸಂದರ್ಭದಲ್ಲಿ, ನವದೆಹಲಿ ಮತ್ತು ಒಟ್ಟಾವಾ ಮಹತ್ವಾಕಾಂಕ್ಷೆಯ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವಾದ CEPAಗಾಗಿ ಔಪಚಾರಿಕವಾಗಿ ಮಾತುಕತೆಗಳನ್ನು ಪ್ರಾರಂಭಿಸಲು ಒಪ್ಪಿಕೊಂಡವು. ಇದು 2030ರ ವೇಳೆಗೆ ಎರಡೂ ರಾಷ್ಟ್ರಗಳ ನಡುವಿನ ದ್ವಿಮುಖ ವ್ಯಾಪಾರವನ್ನು 70 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link