All posts by nagaraj11081993

VIDEO: ಬ್ಯಾಟರ್​ ಸಿಕ್ಸ್ ಬಾರಿಸದೇ ಸಿಕ್ಸರ್..!

ಸಿಕ್ಸ್ ಬಾರಿಸದೇ ಸಿಕ್ಸ್​ ಆದರೆ ಹೇಗಿರುತ್ತೆ? ಇಂತಹದೊಂದು ಅಪರೂಪದ ಸಿಕ್ಸರ್​ಗೆ ಆಸ್ಟ್ರೇಲಿಯಾದ ಒನ್​ ಡೇ ಕಪ್ ಟೂರ್ನಿ ಸಾಕ್ಷಿಯಾಗಿದೆ.  ಫೆಬ್ರವರಿ 21, 2026 ರಂದು ನಡೆದ ಈ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಹಾಗೂ ವಿಕ್ಟೋರಿಯಾ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾದ ಓಪನರ್ ಸ್ಯಾಮ್ ಫ್ಯಾನಿಂಗ್  ಬಾಲ್ ಬಿಡಲು ಹೋಗಿ ಅಚ್ಚರಿಯ ರೀತಿಯಲ್ಲಿ ಸಿಕ್ಸರ್ ಬಾರಿಸಿದ್ದಾರೆ.

ಅನಿರೀಕ್ಷಿತಯಾಗಿ ಎದುರಾದ ಶಾರ್ಟ್ ಬಾಲ್ ಅನ್ನು ಆಡಬಾರದೆಂದು ನಿರ್ಧರಿಸಿದ ಫ್ಯಾನಿಂಗ್, ಬ್ಯಾಟ್ ಅನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದರು. ಈ ವೇಳೆ ಚೆಂಡು ಅಂದುಕೊಂಡಿದ್ದಕ್ಕಿಂತ ಹೆಚ್ಚು ಎತ್ತರಕ್ಕೆ ಬೌನ್ಸ್ ಆಗಿ, ಅವರು ಹಿಂದಕ್ಕೆ ಸರಿಸುತ್ತಿದ್ದ ಬ್ಯಾಟ್‌ನ ಮೇಲ್ಭಾಗಕ್ಕೆಬಡಿಯಿತು.

ಬ್ಯಾಟ್‌ಗೆ ತಗುಲಿದ ವೇಗಕ್ಕೆ ಚೆಂಡು ನೇರವಾಗಿ ವಿಕೆಟ್ ಕೀಪರ್ ತಲೆಯ ಮೇಲಿಂದ ಹಾರಿ ಬೌಂಡರಿ ಗೆರೆ ದಾಟಿ ಸಿಕ್ಸರ್ ಆಯಿತು.
ಕ್ರಿಕೆಟ್ ಲೋಕದಲ್ಲಿ ಶಾರ್ಟ್ ಬಾಲ್ ಅನ್ನು ಲೀವ್ ಮಾಡುವಾಗ ಸಿಕ್ಸರ್ ಹೋಗುವುದು ಅತ್ಯಂತ ವಿರಳ. ಹೀಗಾಗಿ ಈ ಸಿಕ್ಸರ್​ ಅನ್ನು ಕಮೆಂಟೇಟರ್‌ಗಳು  ಕ್ರಿಕೆಟ್ ಇತಿಹಾಸದ “ಅತ್ಯಂತ ಅದೃಷ್ಟದ ಸಿಕ್ಸರ್” ಎಂದು ಕರೆದಿದ್ದಾರೆ.

 

Source link

‘ಉಂಡಾಡಿ ಗುಂಡ’ ನಾಟಕಕ್ಕೆ 80 ವರ್ಷ: ಕಲಾದ್ಯುತಿ ಪ್ರೊಡಕ್ಷನ್ ಹೌಸ್ ವತಿಯಿಂದ ಪ್ರದರ್ಶನ – Kannada News | Sihi Kahi Chandru to act in Undaadi Gunda drama by Parvathavani

ನಾಟಕ ರಚನೆಕಾರರಾಗಿ, ನಿರ್ದೇಶಕರಾಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಪರ್ವತವಾಣಿ (Parvathavani) ಅವರ ಕೊಡುಗೆ ಅಪಾರ. ಡಾ. ರಾಜ್​ಕುಮಾರ್ ನಾಯಕರಾಗಿದ್ದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಚಿತ್ರದಲ್ಲಿ ನಟಿಸುವ ಮೂಲಕವೂ ಅವರು ಮನೆ ಮಾತಾಗಿದ್ದರು. ಪರ್ವತವಾಣಿ ಅವರು ರಚಿಸಿದ್ದ ಹಾಸ್ಯ ನಾಟಕ ‘ಉಂಡಾಡಿ ಗುಂಡ’ (Undaadi Gunda) ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು.

‘ಉಂಡಾಡಿ ಗುಂಡ’ ನಾಟಕ ರಚನೆಗೆ ಇದೀಗ ಎಂಬತ್ತು ವರ್ಷ ತುಂಬಿದೆ. ಈ ಸಂದರ್ಭದಲ್ಲಿ, ಪರ್ವತವಾಣಿ ಅವರಿಗೆ ಗೌರವ ಸಲ್ಲಿಸಲು ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ಮುಂತಾಗಿದೆ. ಸಂಸ್ಥೆಯ ಈ ಆಶಯಕ್ಕೆ ಖುದ್ದು ಪರ್ವತವಾಣಿಯವರ ಮೊಮ್ಮಗ ಶರತ್ ಪರ್ವತವಾಣಿ ಜೊತೆಯಾಗಿದ್ದಾರೆ. ತಾತ ಬರೆದಿದ್ದ ಪ್ರಸಿದ್ಧ ನಾಟಕವನ್ನು ಮೊಮ್ಮಗ ಶರತ್ ನಿರ್ದೇಶನ ಮಾಡಲಿದ್ದಾರೆ.

ಸಂಜಯ್ ಧ್ರುವ ಅವರು ಇತ್ತೀಚಿನ ವರ್ಷಗಳಲ್ಲಿ ಜಾಹೀರಾತು ಏಜೆನ್ಸಿಯ ಮೂಲಕ ಪರಿಚಿತರಾಗಿದ್ದಾರೆ. ವಿಭಿನ್ನವಾದ ರೂಪುರೇಷೆಗಳೊಂದಿಗೆ ಅವರು ಈಗ ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ಸಂಸ್ಥೆಯನ್ನು ಶುರು ಮಾಡಿದ್ದಾರೆ. ನೃತ್ಯ, ನಾಟಕ ಸೇರಿದಂತೆ ಪ್ರದರ್ಶನ ಕಲೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವುದು, ಹೊಸತನದ ಕಾರ್ಯಕ್ರಮಗಳನ್ನು ಆಯೋಜಿಸುವ ಗುರಿಯೊಂದಿಗೆ ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಪರ್ವತವಾಣಿ ಬರೆದ ‘ಉಂಡಾಡಿ ಗುಂಡ’ ನಾಟಕ ಪ್ರದರ್ಶನದ ಮೂಲಕವೇ ‘ಕಲಾದ್ಯುತಿ ಪ್ರೊಡಕ್ಷನ್ ಹೌಸ್’ ತನ್ನ ಮೊದಲ ಹೆಜ್ಜೆಯನ್ನು ಇಡುತ್ತಿದೆ.

ಇದನ್ನೂ ಓದಿ: ನಾಟಕ ಪ್ರದರ್ಶನ, ಕಿಡಿಗೇಡಿಗಳ ಸಂದೇಶಕ್ಕೆ ಕಿವಿಗೊಡದಂತೆ ಸಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಮನವಿ

ಫೆಬ್ರವರಿ 24ರಂದು ರಂಗಶಂಕರದಲ್ಲಿ ‘ಉಂಡಾಡಿ ಗುಂಡ’ ನಾಟಕ ಪ್ರದರ್ಶನಗೊಳ್ಳಲಿದೆ. ನಂತರ ಫೆಬ್ರವರಿ 27ರಂದು ಯುವಪಥ ಜಯನಗರದಲ್ಲಿ, ಮಾರ್ಚ್ 7ರಂದು ಬಿಪಿ ವಾಡಿಯಾ ಸಭಾಂಗಣದಲ್ಲಿ ಮತ್ತು ಮಾರ್ಚ್ 14ರಂದು KEA ಪ್ರಭಾತ್ ಬಸವೇಶ್ವರನಗರದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಫೆಬ್ರವರಿ 24, ಮಾರ್ಚ್7 ಹಾಗೂ ಮಾರ್ಚ್ 14ರಂದು ನಡೆಯಲಿರುವ ಪ್ರದರ್ಶನಗಳಲ್ಲಿ ಜನಪ್ರಿಯ ನಟ ಸಿಹಿಕಹಿ ಚಂದ್ರು ಅವರು ಅಭಿನಯಿಸಲಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ! ಕೊನೆಗೂ ಸೆರೆ ಸಿಕ್ತು ಕಿಲ್ಲರ್ ಕಾಡಾನೆ – Kannada News | Chikkamagaluru Elephant Attack: Second Worker Killed in Coffee Estate; Elephant Captured

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ!

ಚಿಕ್ಕಮಗಳೂರು, ಫೆಬ್ರವರಿ 22: ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯಲ್ಲಿ ಕಾಫಿ ತೋಟದಲ್ಲಿ (Chikkamagaluru) ಕೆಲಸ ಮಾಡುತ್ತಿದ್ದ ಕಾರ್ಮಿಕ ಆನೆ ದಾಳಿಗೆ ಬಲಿಯಾದ ಬೆನ್ನಲ್ಲೇ ಅದೇ ಕಾಫಿತೋಟದಲ್ಲಿ ಕಾಡಾನೆ ದಾಳಿಗೆ ಇನ್ನೊಂದು ಜೀವ ಬಲಿಯಾಗಿದೆ. ಹೊಸಪೇಟೆ ಮೂಲದ ಬೋರಮ್ಮ (34) ಕಾಡಾನೆ ದಾಳಿಯಲ್ಲಿ ಮೃತಪಟ್ಟ ಕಾರ್ಮಿಕ ಮಹಿಳೆ. ಈ ಘಟನೆಯ ಬಳಿಕ ವೇಗದಿಂದ ಸಾಗಿದ ಆನೆ ಸೆರೆ ಕಾರ್ಯಾಚರಣೆಯು ಇದೀಗ ಯಶಸ್ವಿಯಾಗಿದೆ.

ಏಳು ದಿನಗಳಲ್ಲೇ ಎರಡನೇ ಬಲಿ

ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದೇ ತೋಟದಲ್ಲಿ ಕಳೆದ ಏಳು ದಿನಗಳ ಹಿಂದೆ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಎಂಬವರು ಕೂಡ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಏಳು ದಿನಗಳ ಅಂತರದಲ್ಲಿ ಎರಡನೇ ಬಲಿ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಕಾರ್ಯಾಚರಣೆ ಯಶಸ್ವಿ

ಏಳು ಕುಮ್ಕಿ ಆನೆಗಳು ಹಾಗೂ ಸುಮಾರು 75 ಸಿಬ್ಬಂದಿಗಳ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಹಿಳೆಗೆ ದಾಳಿ ನಡೆಸಿದ ಸ್ಥಳದಿಂದ ಅಲ್ಪ ದೂರದಲ್ಲಿರುವ ಕಾಫಿ ತೋಟದಲ್ಲಿ ಕಾಡಾನೆಯನ್ನು ಪತ್ತೆ ಮಾಡಲಾಯಿತು. ಸೂಕ್ತ ಸಮಯದಲ್ಲಿ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಅಚೇತನಗೊಳಿಸಿ, ಬಳಿಕ ಕುಮ್ಕಿ ಆನೆಗಳ ಸಹಾಯದಿಂದ ಕಾಡಾನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದು ಸೆರೆ ಹಿಡಿಯಲಾಗಿದೆ.

ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳಬಾರದು ಎಂದು ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಸೂಚನೆ ನೀಡಿದ್ದರೂ, ಜೀವನೋಪಾಯದ ಅನಿವಾರ್ಯತೆಯಿಂದ ಕಾರ್ಮಿಕರು ತೋಟಗಳಿಗೆ ತೆರಳುತ್ತಿರುವುದು ದುರಂತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕ ಸಾವು!

ಗ್ರಾಮಸ್ಥರ ಆಕ್ರೋಶ

ಈ ಮಧ್ಯೆ ಮಹಿಳೆಯ ಮೃತದೇಹವನ್ನು ಸಾಗಿಸುತ್ತಿದ್ದ ವಾಹನವನ್ನು ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಗ್ರಾಮದಲ್ಲಿ ಸ್ಥಳೀಯರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆ ನಡೆಸಿದ ನೂರಾರು ಗ್ರಾಮಸ್ಥರು ಪೀಡಿತ ಕುಟುಂಬಕ್ಕೆ ಸಮರ್ಪಕ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Daily Devotional: ಕೋಪದಲ್ಲಿರುವಾಗ ಮನುಷ್ಯ ತೆಗೆದುಕೊಳ್ಳಬಾರದ ಮೂರು ನಿರ್ಧಾರಗಳಿವು

ಕೋಪದ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಮೂರು ನಿರ್ಧಾರಗಳನ್ನು ಬಹಳ ವಿಶೇಷವಾಗಿ ಪರಿಗಣಿಸಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ನಮಗೆ ಪ್ರಥಮ ಶತ್ರು ಯಾರೋ ಬೇರೆಯವರಲ್ಲ, ನಮ್ಮ ಕೋಪವೇ. ಭಗವದ್ಗೀತೆಯಲ್ಲೂ ಸಹ, ವ್ಯಕ್ತಿಯು ಏನು ತಂದಿದ್ದಾನೆ ಮತ್ತು ಏನು ಮಾಡುತ್ತಿದ್ದಾನೆ ಎಂಬುದರ ಬಗ್ಗೆ ಹೇಳುತ್ತದೆ. ಹಾಗಾಗಿ, ಕೋಪದ ಸ್ಥಿತಿಯಲ್ಲಿ ಯಾವುದೇ ಮೂರು ಪ್ರಮುಖ ವಿಷಯಗಳ ಮೇಲೆ ಒತ್ತನ್ನು ನೀಡುವುದು ಸಾಧ್ಯವಿಲ್ಲ.

ಭಾರತದ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದಲ್ಲಿ, ಪಿತಾಮಹರು ಅನೇಕ ಸಮಸ್ಯೆಗಳಿಗೆ, ವಾಸ್ತವವಾಗಿ ಎಲ್ಲಾ ಸಮಸ್ಯೆಗಳಿಗೆ ಕೋಪವೇ ಕಾರಣ ಎಂದು ಹೇಳಿದ್ದಾರೆ. ಒಬ್ಬ ವ್ಯಕ್ತಿ ವಿಜಯಿಯಾಗಲು ಲಕ್ಷ್ಮೀ ಕಟಾಕ್ಷ ಮಾತ್ರವಲ್ಲ, ಸಹನೆ ಮತ್ತು ತಾಳ್ಮೆ ಕೂಡ ಅತಿ ಮುಖ್ಯ. ಲಕ್ಷ್ಮಿಯು ಸಹನೆ ಮತ್ತು ತಾಳ್ಮೆಯಲ್ಲಿ ನೆಲೆಸಿದ್ದಾಳೆ. ಕೋಪದಲ್ಲಿ ತೆಗೆದುಕೊಂಡ ಯಾವುದೇ ತೀರ್ಮಾನವು ಶುಭಕರವಲ್ಲ. ಗೌರವದ ವಿಚಾರದಲ್ಲಿ, ಬೇರೆಯವರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು, ಅಥವಾ ದಾನ ಮಾಡುವ ಸಮಯದಲ್ಲಿ ಕೋಪದಿಂದ ಹಣವನ್ನು ನೀಡುವುದು ಮಹಾಪಾಪ ಮತ್ತು ಮಹಾಶಾಪಕ್ಕೆ ಸಮಾನ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಇದಲ್ಲದೆ, ಕೋಪದಲ್ಲಿ ನಾಯಿಯಂತಹ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆಸುವುದು, ಅಥವಾ ಆಹಾರ ದಾನ ಮಾಡುವಾಗ ಅಥವಾ ಆಹಾರ ಸಿದ್ಧಪಡಿಸುವಾಗ ಕೋಪ ಮಾಡಿಕೊಳ್ಳುವುದು ಜೀವನವನ್ನು ಕಷ್ಟಕರವಾಗಿಸುತ್ತದೆ. ಪಶುಪಕ್ಷಿಗಳ ಬಗ್ಗೆ ಕಾಳಜಿ, ಸಂಭಾಷಣೆಯ ಶೈಲಿ – ಎಲ್ಲದಕ್ಕೂ ಕೋಪವು ನಿರ್ಣಾಯಕವಾಗಿದೆ. ಕೋಪದಿಂದ ಜೀವನವು ಯಶಸ್ಸು, ಕೀರ್ತಿಯನ್ನು ಪಡೆಯಬಹುದು ಅಥವಾ ಸಂಪೂರ್ಣವಾಗಿ ನಾಶವಾಗಬಹುದು ಎಂದು ಗುರೂಜಿ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದುವೇ ಟೀಮ್ ಇಂಡಿಯಾದ ಅತೀ ದೊಡ್ಡ ವೀಕ್​ನೆಸ್​​! – Kannada News | India’s scoring rate very low against the off spin In T20 World Cup 2026

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನಲ್ಲಿ ಇಂದು (ಫೆ.22) ಭಾರತ ತಂಡ ಸೌತ್ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಸೌತ್ ಆಫ್ರಿಕಾ ತಂಡದ ಕೋಚ್ ಶುಕ್ರಿ ಕಾನ್ರಾಡ್ ಅಹಮದಾಬಾದ್​ನಲ್ಲಿ ಭಾರತ ತಂಡದ ಬಂಡವಾಳ ಬಯಲು ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಇಲ್ಲಿ ಟೀಮ್ ಇಂಡಿಯಾದ ‘ಬಂಡವಾಳ’ ಏನು ಹುಡುಕಾಡಿದರೆ ಸಿಗುವ ಉತ್ತರ ಅತೀ ದೊಡ್ಡ ವೀಕ್​ವೆಸ್​.

ಹೌದು, ಟಿ20 ವಿಶ್ವಕಪ್​ನ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ 4 ಪಂದ್ಯಗಳಲ್ಲೂ ಜಯ ಸಾಧಿಸಿದೆ. ಇದಾಗ್ಯೂ ಭಾರತೀಯ ಬ್ಯಾಟರ್​ಗಳು  ಆಫ್-ಸ್ಪಿನ್ನರ್‌ಗಳನ್ನು ಎದುರಿಸಲು ಪರದಾಡುತ್ತಿರುವುದು ಅಂಕಿಅಂಶಗಳಿಂದ ಬಹಿರಂಗವಾಗಿದೆ. ಇದನ್ನೇ ಶುಕ್ರಿ ಕಾನ್ರಾಡ್ ಕೂಡ ಬಂಡವಾಳ ಬಯಲು ಮಾಡುತ್ತೇವೆ ಎಂದಿರಬಹುದು.

ಏಕೆಂದರೆ ಕಳೆದ 4 ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್​ಗಳು ಆಫ್ ಸ್ಪಿನ್ನರ್​ಗಳ ವಿರುದ್ಧ ಪ್ರತಿ ಓವರ್​ಗೆ 7 ಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಅದರಲ್ಲೂ ಟಾಪ್ ಆರ್ಡರ್ ಬ್ಯಾಟರ್​ಗಳು ಆಫ್ ಸ್ಪಿನ್ನರ್​ಗಳಿಗೆ ವಿಕೆಟ್ ಒಪ್ಪಿಸಿರುವುದು ಚಿಂತೆಗೆ ಕಾರಣವಾಗಿದೆ.

  • ಕಡಿಮೆ ರನ್ ರೇಟ್: ಆಫ್-ಸ್ಪಿನ್ ವಿರುದ್ಧ ಭಾರತೀಯ ಬ್ಯಾಟರ್​ಗಳ ರನ್ ರೇಟ್ ಪ್ರತಿ ಓವರ್‌ಗೆ ಕೇವಲ 6.23 ಮಾತ್ರ. ಅದು ಕೂಡ ಯುಎಸ್​ಎ, ನೆದರ್​​ಲೆಂಡ್ಸ್ ಮತ್ತು ನಮೀಬಿಯ ವಿರುದ್ಧ ಕಣಕ್ಕಿಳಿದು ಎಂಬುದು ಇಲ್ಲಿ ಉಲ್ಲೇಖಾರ್ಹ.
  • ವಿಕೆಟ್ ಪತನ: ಕಳೆದ 4 ಪಂದ್ಯಗಳಲ್ಲಿ ಭಾರತ ಕಳೆದುಕೊಂಡ ಒಟ್ಟು 31 ವಿಕೆಟ್‌ಗಳಲ್ಲಿ 11 ವಿಕೆಟ್‌ಗಳು ಆಫ್-ಸ್ಪಿನ್ನರ್‌ಗಳ ಪಾಲಾಗಿವೆ.
  • ಕಡಿಮೆ ಸರಾಸರಿ: ಆಫ್-ಸ್ಪಿನ್ ಎದುರು ಭಾರತೀಯ ಬ್ಯಾಟರ್‌ಗಳ ಸರಾಸರಿ ಕೇವಲ 13.25 ರನ್ ಮಾತ್ರ.

ವೈಫಲ್ಯಕ್ಕೆ ಪ್ರಮುಖ ಕಾರಣಗಳು:

  • ಎಡಗೈ ಬ್ಯಾಟರ್‌ಗಳ ಪ್ರಾಬಲ್ಯ: ಭಾರತದ ಅಗ್ರ ಕ್ರಮಾಂಕದಲ್ಲಿ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರಂತಹ ಎಡಗೈ ಬ್ಯಾಟರ್‌ಗಳಿದ್ದಾರೆ. ಚೆಂಡು ಎಡಗೈ ಬ್ಯಾಟರ್‌ಗಳಿಂದ ದೂರ ತಿರುಗುವುದರಿಂದ, ಆಫ್-ಸ್ಪಿನ್ನರ್‌ಗಳು ಅವರಿಗೆ ಮಾರಕವಾಗುತ್ತಿದ್ದಾರೆ.
  • ಸ್ಟ್ರೈಕ್ ರೊಟೇಷನ್ ಕೊರತೆ: ಮಧ್ಯಮ ಓವರ್‌ಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ತೆಗೆದುಕೊಳ್ಳುವಲ್ಲಿ ಬ್ಯಾಟರ್‌ಗಳು ವಿಫಲರಾಗುತ್ತಿದ್ದಾರೆ. ಇದರಿಂದ ಒತ್ತಡ ಹೆಚ್ಚಾಗಿ ದೊಡ್ಡ ಹೊಡೆತಕ್ಕೆ ಹೋಗಿ ವಿಕೆಟ್ ಒಪ್ಪಿಸುತ್ತಿದ್ದಾರೆ.
  • ತಾಂತ್ರಿಕ ದೋಷ: ಸುನಿಲ್ ಗವಾಸ್ಕರ್ ಅವರಂತಹ ತಜ್ಞರ ಪ್ರಕಾರ, ಇಂದಿನ ಬ್ಯಾಟರ್‌ಗಳು ಪವರ್-ಹಿಟ್ಟಿಂಗ್‌ಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ, ಸಾಂಪ್ರದಾಯಿಕವಾಗಿ ಸ್ಪಿನ್ ಆಡುವ ಕಲೆ (ಪಾದಗಳ ಚಲನೆ) ಕಡಿಮೆಯಾಗುತ್ತಿದೆ.

ಆಫ್​ ಸ್ಪಿನ್ನರ್​ಗಳ ಮಿಂಚಿಂಗ್:

  • ನಮೀಬಿಯ ವಿರುದ್ಧ: ಗೆರ್ಹಾರ್ಡ್ ಎರಾಸ್ಮಸ್ 4 ವಿಕೆಟ್ ಪಡೆದು ಭಾರತದ ಬ್ಯಾಟಿಂಗ್ ಲೈನ್-ಅಪ್ ಅನ್ನು ನಡುಗಿಸಿದ್ದರು.
  • ಪಾಕಿಸ್ತಾನ್ ವಿರುದ್ಧ: ಪಾಕ್ ತಂಡದ ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಸೈಮ್ ಅಯ್ಯೂಬ್​ಗೆ ಟೀಮ್ ಇಂಡಿಯಾದ ಮೂರು ಬ್ಯಾಟರ್​ಗಳು ವಿಕೆಟ್ ಒಪ್ಪಿಸಿದ್ದರು. ಅಲ್ಲದೆ ಸೈಮ್ 4 ಓವರ್​ಗಳಲ್ಲಿ ನೀಡಿದ್ದು ಕೇವಲ 25 ರನ್​ಗಳು ಮಾತ್ರ.
  • ನೆದರ್​ಲೆಂಡ್ಸ್​ ವಿರುದ್ಧ: ಆರ್ಯನ್ ದತ್ ಅವರು ಪವರ್‌ಪ್ಲೇನಲ್ಲಿಯೇ ಅಭಿಷೇಕ್ ಶರ್ಮಾ ಮತ್ತು ಇಶಾನ್ ಕಿಶನ್ ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್​ಗೆ 12 ತಂಡಗಳು ಆಯ್ಕೆ

ಸೌತ್ ಆಫ್ರಿಕಾ ಆಫ್ ಸ್ಪಿನ್ನರ್ಸ್​:

ಟೀಮ್ ಇಂಡಿಯಾ ವಿರುದ್ಧ ಸೌತ್ ಆಫ್ರಿಕಾ ತಂಡದ ನಾಯಕ ಐಡನ್ ಮಾರ್ಕ್ರಾಮ್ ಆಫ್ ಸ್ಪಿನ್ ಅಸ್ತ್ರ ಪ್ರಯೋಗಿಸುವ ಸಾಧ್ಯತೆಯಿದೆ. ಏಕೆಂದರೆ ಖುದ್ದು ಮಾರ್ಕ್ರಾಮ್ ಆಫ್ ಸ್ಪಿನ್ ಬೌಲರ್. ಇನ್ನು ಟ್ರಿಸ್ಟನ್ ಸ್ಟಬ್ಸ್ ಕೂಡ ಆಫ್ ಸ್ಪಿನ್ ಎಸೆಯಬಲ್ಲರು. ಇದರ ಜೊತೆಗೆ ಎಡಗೈ ಆರ್ಥೋಡಾಕ್ಸ್ ಸ್ಪಿನ್ನರ್ ಆಗಿ ಕೇಶವ್ ಮಹಾರಾಜ್ ಕೂಡ ಇರಲಿದ್ದಾರೆ. ಹೀಗಾಗಿ ಅಹಮದಾಬಾದ್​ನಲ್ಲಿ ಭಾರತೀಯ ಬ್ಯಾಟರ್​ಗಳು ಮತ್ತು ಸೌತ್ ಆಫ್ರಿಕಾ ಬೌಲರ್​ಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದು.

Source link

ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿ: ಐವರು ಸ್ಥಳದಲ್ಲೇ ಸಾವು, ಮೂವರು ಗಂಭೀರ – Kannada News | Odisha Police Van Accident: 5 Dead in Jharsuguda Truck Collision

ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿImage Credit source: Google

ಝಾರ್ಸುಗುಡಾ, ಫೆಬ್ರವರಿ 22: ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿಯಾಗಿ ಐವರು ದುರ್ಮರಣ ಹೊಂದಿರುವ ಘಟನೆ ಒಡಿಶಾದ ಝಾರ್ಸುಗುಡಾ ಬಳಿ ರಾಷ್ಟ್ರೀಯ ಹೆದ್ದಾರಿ 49ರಲ್ಲಿ ನಡೆದಿದೆ. ಟ್ರಕ್ ಮತ್ತು ಪೊಲೀಸ್​ ವ್ಯಾನ್ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದ್ದು, ಐವರು ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಪಿಆರ್ ಸಿಬ್ಬಂದಿಗಳಾದ ಕಾಶಿರಾಮ್ ಭೋಯಿ ಮತ್ತು ದೇವದತ್ತ ಸಾ, ಡ್ರಿಲ್ ಸಬ್-ಇನ್ಸ್‌ಪೆಕ್ಟರ್ ನಿರಂಜನ್ ಕುಜುರ್, ಎಪಿಆರ್ ಹವೀಲ್ದಾರ್ ಲಿಂಗರಾಜ್ ಧುರೂವಾ ಹಾಗೂ ಹೋಮ್ ಗಾರ್ಡ್ ಭಕ್ತಬಂಧು ಮಿರ್ಧಾ ಮೃತ ದುರ್ದೈವಿಗಳಾಗಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪೊಲೀಸ್ ವಾಹನವು ಎದುರಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್​​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಬೊಲೆರೊ ವಾಹನ ಸಂಪೂರ್ಣ ಜಖಂ ಆಗಿರುವ ಪರಿಣಾಮ ಐವರು ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು  ಸಿಬ್ಬಂದಿಗಳು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ರಕ್ಷಿಸಿ ಝಾರ್ಸುಗುಡಾ ಜಿಲ್ಲಾ ಮುಖ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಮೂಲಗಳ ಪ್ರಕಾರ, ಅವರ ಸ್ಥಿತಿಯೂ ಗಂಭೀರವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಚಾಕೋಲೇಟ್ ಆಸೆ ತೋರಿಸಿ ರೈಲ್ವೆ ಸ್ಟೇಷನ್​​ನಲ್ಲೇ 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

ಟ್ರಕ್​​ ಚಾಲಕ ವಶಕ್ಕೆ

ಝಾರ್ಸುಗುಡಾ ಜಿಲ್ಲಾ ಪೊಲೀಸ್ ಅಧೀಕ್ಷಕ (ಎಸ್‌ಪಿ) ಗುಂಡಾಲ ರಾಘವೇಂದ್ರ ರೆಡ್ಡಿ ಅವರ ಮಾಹಿತಿ ಪ್ರಕಾರ, ಈ ಅಪಘಾತವು ಬೆಳಗಿನ ಜಾವ ಝಾರ್ಸುಗುಡಾ ಸದರ್ ಪೊಲೀಸ್ ಠಾಣೆ ಎದುರಲ್ಲೇ ಸಂಭವಿಸಿದೆ. ನಿಯಮಿತ ಪೆಟ್ರೋಲ್ ಕರ್ತವ್ಯದಲ್ಲಿದ್ದ ಪೊಲೀಸ್ ವಾಹನಕ್ಕೆ ಎದುರು ದಿಕ್ಕಿನಿಂದ ಅತಿವೇಗದಲ್ಲಿ ಬರುತ್ತಿದ್ದ ಟ್ರಕ್​​ ಡಿಕ್ಕಿ ಹೊಡೆದಿದೆ. ಪೊಲೀಸರು ಟ್ರಕ್​​ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಅಪಘಾತಕ್ಕೆ ನಿಖರ ಕಾರಣ ಏನೆಂಬೆದು ತನಿಖೆ ಬಳಿಕ ಇನ್ನಷ್ಟೇ ಗೊತ್ತಾಗಬೇಕಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕರ್ತವ್ಯ ನಿರ್ವಹಿಸುವಾಗಲೇ ಪೊಲೀಸ್​​ ಸಿಬ್ಬಂದಿ ಜೀವ ಕಳೆದುಕೊಂಡ ಹಿನ್ನೆಲೆ ಜಾರ್ಸುಗುಡಾದಾದ್ಯಂತ ಶೋಕದ ವಾತಾವರಣ ನಿರ್ಮಾಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:22 am, Sun, 22 February 26

Source link

World Thinking Day 2026: ಹೆಣ್ಣುಮಕ್ಕಳ ಜೀವನವನ್ನು ಸುಧಾರಿಸಲು ಸಂಕಲ್ಪ ಮಾಡುವ ದಿನವಿದು – Kannada News | World Thinking Day 2026: Know the purpose behind celebrating World Thinking Day

ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್‌ ವತಿಯಿಂದ ಪ್ರತಿವರ್ಷ ಫೆಬ್ರವರಿ 22 ರಂದು ಆಚರಿಸಲ್ಪಡುವ ವಿಶ್ವ ಚಿಂತನಾ ದಿನವು (World Thinking Day) ವಿಶ್ವಾದ್ಯಂತ ಹುಡುಗಿಯರ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ಲಿಂಗ ಸಮಾನತೆಯನ್ನು ಉತ್ತೇಜಿಸುವ, ಯುವತಿಯರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಪ್ರಪಂಚದಾದ್ಯಂತ ಮಹಿಳೆಯರು ಮತ್ತು ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ. ವಿಶ್ವ ಚಿಂತನಾ ದಿನವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಅದು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಬಯಸುವ ಲಕ್ಷಾಂತರ ಹುಡುಗಿಯರ ಧ್ವನಿಯಾಗಿದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವೇನು ಎಂಬುದನ್ನು ತಿಳೀಯೋಣ ಬನ್ನಿ.

ವಿಶ್ವ ಚಿಂತನಾ ದಿನದ ಇತಿಹಾಸವೇನು?

ಹುಡುಗಿಯರು ಮತ್ತು ಯುವಕರಲ್ಲಿ ನಾಯಕತ್ವ, ಏಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವ ಉದ್ದೇಶದಿಂದ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ ಸಂಘ (WAGGGS) 1926 ರಿಂದ ವಿಶ್ವ ಚಿಂತನಾ ದಿನವನ್ನು ಆಚರಿಸುತ್ತಿದೆ. 1926 ರಲ್ಲಿ ನಡೆದ ನಾಲ್ಕನೇ ಗರ್ಲ್ ಸ್ಕೌಟ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಈ ವಿಶ್ವ ಚಿಂತನಾ ದಿನದ ಕುರಿತು ಪ್ರಸ್ತಾನೆ ಮಾಡಲಾಯಿತು. ಫೆಬ್ರವರಿ 22 ರಂದು ಚಿಂತನಾ ದಿನವನ್ನು ಆಚರಿಸಲು ಒಪ್ಪಿಗೆ ದೊರೆಯಿತು. ಹೀಗಾಗಿ ವರ್ಲ್ಡ್ ಅಸೋಸಿಯೇಷನ್ ​​ಆಫ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್ (WAGGGS) ಪ್ರತಿ ವರ್ಷ ಫೆಬ್ರವರಿ 22 ರಂದು ವಿಶ್ವ ಚಿಂತನಾ ದಿನವನ್ನು ಆಚರಿಸಲಾಗುತ್ತದೆ. ಬಾಯ್ ಸ್ಕೌಟ್ಸ್ ಆಫ್ ಅಮೇರಿಕಾವನ್ನು ಸ್ಥಾಪಿಸಿದ ರಾಬರ್ಟ್ ಬೇಡೆನ್-ಪೊವೆಲ್ ಅವರ ಜನ್ಮದಿನ ಕೂಡ ಹೌದು. ಅವರ ಜನ್ಮದಿನವನ್ನು ನೆನಪಿಸುವ ಮೂಲಕ ವಿಶ್ವ ಚಿಂತನಾ ದಿನ ಮತ್ತು ವಿಶ್ವ ಸ್ಕೌಟ್ ದಿನವನ್ನಾಗಿ ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಮಾತೃಭಾಷಾ ದಿನವನ್ನು ಆಚರಿಸುವುದೇಕೇ ಗೊತ್ತಾ?

ವಿಶ್ವ ಚಿಂತನಾ ದಿನದ ಮಹತ್ವವೇನು?

  • ವಿಶ್ವ ಚಿಂತನಾ ದಿನವು ಹುಡುಗಿಯರಿಗೆ ಸಮಾನತೆ, ಸಬಲೀಕರಣ ಮತ್ತು ನಾಯಕತ್ವದ ಮಹತ್ವದ ಬಗ್ಗೆ ಶಿಕ್ಷಣ ನೀಡಲು ಒಂದು ಪ್ರಮುಖ ಅವಕಾಶವಾಗಿದೆ.
  • ಈ ದಿನವು ಪ್ರಪಂಚದಾದ್ಯಂತದ ಹುಡುಗಿಯರು ಒಂದಾಗಲು ಮತ್ತು ಪರಸ್ಪರ ಬೆಂಬಲಿಸಲು ಅವಕಾಶವನ್ನು ಒದಗಿಸುತ್ತದೆ.
  • ಈ ದಿನವು ಹುಡುಗಿಯರು ಜಾಗತಿಕ ನಾಗರಿಕರಾಗಲು ಮತ್ತು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಪ್ರೇರೇಪಿಸುತ್ತದೆ.
  • ಪ್ರಪಂಚದಾದ್ಯಂತದ ಗರ್ಲ್ ಗೈಡ್‌ಗಳು ಮತ್ತು ಸ್ಕೌಟ್‌ಗಳಲ್ಲಿ ಸ್ನೇಹ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.
  • ಸಂಪನ್ಮೂಲಗಳು ಸೀಮಿತವಾಗಿರುವ ದೇಶಗಳಲ್ಲಿ ಹುಡುಗಿಯರಿಗೆ ಸಹಾಯ ಮಾಡಲು ಈ ದಿನದಂದು ವಿಶ್ವಾದ್ಯಂತ ನಿಧಿಸಂಗ್ರಹ ಅಭಿಯಾನಗಳನ್ನು ಸಹ ನಡೆಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:16 am, Sun, 22 February 26

Source link

70ನೇ ಫಿಲ್ಮ್​ಫೇರ್ ಪ್ರಶಸ್ತಿ: ಕನ್ನಡದಲ್ಲಿ ಅವಾರ್ಡ್ ಗೆದ್ದವರ ಪಟ್ಟಿ ಇಲ್ಲಿದೆ.. – Kannada News | 70th Filmfare Awards South Kannada Winners full List Best Actor Best Film

ಕೇರಳದ ಕೊಚ್ಚಿಯಲ್ಲಿ ‘70ನೇ ಫಿಲ್ಮ್​​ಫೇರ್ ಪ್ರಶಸ್ತಿ’ (70th Filmfare Awards South) ಪ್ರದಾನ ಸಮಾರಂಭ ನಡೆದಿದೆ. 2024ರಲ್ಲಿ ತೆರೆಕಂಡ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಝಗಮಗಿಸುವ ವೇದಿಕೆಯಲ್ಲಿ ಅವಾರ್ಡ್ ಫಂಕ್ಷನ್ ನಡೆಯಿತು. ‘ಕೋಳಿ ಎಸ್ರು’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ (Akshatha Pandavapura) ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ‘ಬಘೀರ’ ಸಿನಿಮಾದ ನಟನೆಗಾಗಿ ಶ್ರೀಮುರಳಿ (Sri Murali) ಅವರಿಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ನೀಡಲಾಯಿತು.

‘ಕೆರೆಬೇಟೆ’ ಸಿನಿಮಾದಲ್ಲಿನ ನಟನೆಗಾಗಿ ಗೌರಿಶಂಕರ್ ಅವರು ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ) ಪ್ರಶಸ್ತಿ ಪಡೆದುಕೊಂಡರು. ಅಂಕಿತಾ ಅಮರ್ ಅವರಿಗೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕಾಗಿ ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ) ಪ್ರಶಸ್ತಿ ಸಿಕ್ಕಿದೆ. ‘ಬ್ಲಿಂಕ್’ ಚಿತ್ರಕ್ಕಾಗಿ ಗೋಪಾಲಕೃಷ್ಣ ದೇಶಪಾಂಡೆ ಅವರು ಅತ್ಯುತ್ತಮ ಪೋಷಕ ನಟ ಪಶಸ್ತಿ ಪಡೆದರು. ‘ಭೀಮ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಪ್ರಿಯಾ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸಿಕ್ಕಿದೆ.

70ನೇ ಫಿಲ್ಮ್ ಫೇರ್ ಪ್ರಶಸ್ತಿ ಪಡೆದವರ ಪಟ್ಟಿ:
ಅತ್ಯುತ್ತಮ ಸಿನಿಮಾ: ಶಾಖಾಹಾರಿ (ನಿರ್ದೇಶನ: ಸಂದೀಪ್ ಸುಂಕದ್)
ಅತ್ಯುತ್ತಮ ನಿರ್ದೇಶಕ: ಪೃಥ್ವಿ ಕೋಣನೂರು (ಹದಿನೇಳೆಂಟು)
ಅತ್ಯುತ್ತಮ ನಿನಿಮಾ: ವಿಮರ್ಶಕರ ಆಯ್ಕೆ- ಬ್ಲಿಂಕ್ (ನಿರ್ದೇಶನ: ಶ್ರೀನಿಧಿ ಬೆಂಗಳೂರು)
ಅತ್ಯುತ್ತಮ ಸಂಗೀತ: ಅರ್ಜುನ್ ಜನ್ಯ (ಕೃಷ್ಣಂ ಪ್ರಣಯ ಸಖಿ)

ಅತ್ಯುತ್ತಮ ಹೊಸ ನಟಿ: ಬಿಂಧು ಶಿವರಾಮ್ (ಕೆರೆಬೇಟೆ)
ಅತ್ಯುತ್ತಮ ಹೊಸ ನಟ: ಸಮರ್​ಜಿತ್ ಲಂಕೇಶ್ (ಗೌರಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ: ಶ್ರುತಿ ಪ್ರಹ್ಲಾದ (ಹಿತ್ತಲಕ ಕರಿಬ್ಯಾಡ)
ಅತ್ಯುತ್ತಮ ಹಿನ್ನೆಲೆ ಗಾಯಕ: ಜಸ್ಕರಣ್ ಸಿಂಗ್ (ದ್ವಾಪರ ದಾಟುತ)
ಅತ್ಯುತ್ತಮ ಗೀತರಚನೆ: ನಾಗೇಂದ್ರ ಪ್ರಸಾದ್ (ದ್ವಾಪರ ದಾಟುತ)

ಇದನ್ನೂ ಓದಿ: ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಅಕ್ಷತಾ ಪಾಂಡವಪುರ ಹೊಸ ಸಿನಿಮಾ

ಅತ್ಯುತ್ತಮ ನಟ: ಶ್ರೀಮುರಳಿ (ಬಘೀರ)
ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ (ಕೋಳಿ ಎಸ್ರು)
ಅತ್ಯುತ್ತಮ ಪೋಷಕ ನಟಿ: ಪ್ರಿಯಾ (ಭೀಮ)
ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ (ಬ್ಲಿಂಕ್)
ಅತ್ಯುತ್ತಮ ನಟ: ವಿಮರ್ಶಕರ ಆಯ್ಕೆ- ಗೌರಿಶಂಕರ್ (ಕೆರೆಬೇಟೆ)
ಅತ್ಯುತ್ತಮ ನಟಿ: ವಿಮರ್ಶಕರ ಆಯ್ಕೆ- ಅಂಕಿರಾ ಅಮರ್ (ಇಬ್ಬನಿ ತಬ್ಬಿದ ಇಳೆಯಲಿ)

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಹಾರದಲ್ಲಿ ಕರ್ನಾಟಕದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಕೇಸ್​​ಗೆ ಟ್ವಿಸ್ಟ್​​: ಮೃತರ ಸಂಬಂಧಿ ಹೇಳಿದ್ದೇನು? – Kannada News | Tumakuru Family Suicide in Bihar: Shocking Information Revealed by Relatives

ಮೃತರಿಗೆ ಅಂತಿಮ ವಿಧಿ ವಿಧಾನ ಪೂಜೆImage Credit source: Tv9 Kannada

ತುಮಕೂರು, ಫೆಬ್ರವರಿ 22: ಮೊಬೈಲ್​​ ಗೀಳಿಗೆ ಬಿದ್ದಿದ್ದ ಅಳಿಯ ಅಮೋಘ ಕೀರ್ತಿ ಕೊಲೆ ಬಳಿಕ ನೊಂದು ಬಿಹಾರದ ರಾಜಗಿರಿಯಲ್ಲಿ ಆರೋಪಿ ನಾಗಪ್ರಸಾದ್ ಸೇರಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​​ ಸಿಕ್ಕಿದೆ. ನಾಲ್ವರ ಆತ್ಮಹತ್ಯೆ ಬಗ್ಗೆ ಮೃತರ ಸಂಬಂಧಿ ಸ್ಯಾಮ್ ಟಿವಿ9ಗೆ ಮಾಹಿತಿ ನೀಡಿದ್ದು, ಸಾಯುವ ಬಗ್ಗೆ ಇವರು ದೇವಾಲಯದಲ್ಲಿ ನಿರ್ಧರಿಸಿಯೇ ಬಂದಿದ್ದರು. ಆತ್ಮಹತ್ಯೆ ಬಳಿಕ ಅಂತ್ಯಕ್ರಿಯೆ ಮಾಡಲೆಂದೇ ಒಂದು ಲಕ್ಷದ ಹದಿನೇಳು ಸಾವಿರ ಹಣ ಬೆಡ್ ಮೇಲೆ ಕಾಣುವಂತೆ ಇಟ್ಟು, ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವಿಚಾರವೀಗ ಬಹಿರಂಗವಾಗಿದೆ.

ಇನ್ನು ರಾಜಗಿರಿ ಮಂದಿರದಲ್ಲಿ ಈ ನಾಲ್ವರು ತಂಗಿದ್ದ ಕೊಣೆಯಲ್ಲಿ ನಗದು,  50 ಗ್ರಾಂ ಚಿನ್ನಾಭರಣವಷ್ಟೇ ಅಲ್ಲದೆ ನಿದ್ರೆ ಮಾತ್ರೆಯೂ ಪತ್ತೆಯಾಗಿತ್ತು. ನೇಣು ಬಿಗಿದ ಸ್ಥಿತಿಯಲ್ಲಿದ್ದ ನಾಲ್ವರಲ್ಲಿ ಸುಮಂಗಲ, ಶಿಲ್ಪ ಮತ್ತು ಶೃತ ಬಾಯಿಗೆ ಟೇಪ್ ಹಾಕಲಾಗಿತ್ತು. ಆದರೆ ನಾಗಪ್ರಸಾದ್ ಬಾಯಲ್ಲಿ ಮಾತ್ರ ಟೇಪ್ ಇರಲಿಲ್ಲ. ಹೀಗಾಗಿ ಮೊದಲು ಎಲ್ಲರನ್ನು ಆತ್ಮಹತ್ಯೆಗೆ ದೂಡಿ ಬಳಿಕ ನಾಗಪ್ರಸಾದ್ ಪ್ರಾಣ ಬಿಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಮಸ್ಯೆಯಾದಾಗ ನಮ್ಮನ್ನು ಸಂಪರ್ಕಿಸಬಹುದಿತ್ತು. ಖಿನ್ನತೆಯಾದಾಗ ಆತ್ಮಹತ್ತೆಯೇ ದಾರಿಯಲ್ಲ. ನಮ್ಮ ಜೊತೆ ಅವರು ಮಾತನಾಡಬಹುದಿತ್ತು ಎಂದು ಟಿವಿ9 ಎದುರು ಸ್ಯಾಮ್ ಕಣ್ಣೀರು ಹಾಕಿದ್ಧಾರೆ.

ಇದನ್ನೂ ಓದಿ: ಫ್ರೀಫೈರ್​​ಗೆ ಅಡಿಕ್ಟ್ ಆಗಿದ್ದ ಅಕ್ಕನ ಮಗನನ್ನೇ ಕೊಂದಿದ್ದ ಮಾವ ಸೇರಿ ಕುಟುಂಬದ ನಾಲ್ವರು ಬಿಹಾರದಲ್ಲಿ ಆತ್ಮಹತ್ಯೆಗೆ ಶರಣು!

ತುಮಕೂರಿನಲ್ಲಿ ಮೃತರಿಗೆ ಅಂತಿಮ ವಿಧಿವಿಧಾನದ ಪೂಜೆ

ಮೃತ ಕುಟುಂಬ ಜೈನ ಸಮುದಾಯಕ್ಕೆ ಸೇರಿರುವ ಹಿನ್ನೆಲೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಜೈನ ಮಂದಿರಲ್ಲಿ ಅಂತಿಮ ವಿಧಿವಿಧಾನ ಪೂಜೆಗಳನ್ನು ನಡೆಸಲಾಗಿದೆ. ಈ ವೇಳೆ ಮಾವನಿಂದ ಕೊಲೆಯಾದ ಅಮೋಘ ಕೀರ್ತಿಗೂ ಸಂಬಂಧಿಕರು ಪೂಜೆ ಸಲ್ಲಿಸಿದ್ದಾರೆ. ಸುಮಂಗಲ, ನಾಗಪ್ರಸಾದ್, ಶಿಲ್ಪ ಹಾಗೂ ಶೃತ ಶವಗಳು ರಾಜಗಿರಿಯ ಜೈನ ಮಂದಿರದ ಕೊಠಡಿಯಲ್ಲಿ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ಕರ್ನಾಟಕಕ್ಕೆ ಶವಗಳನ್ನು ತರಲಾಗದ ಕಾರಣ ಸಹೋದರ ಸಂಬಂಧಿ ಅವನ್ನು ಅಲ್ಲೇ ದಫನ್ ಮಾಡಿದ್ದರು. ಈ ಹಿನ್ನೆಲೆ ನೂರಾರು ಸಂಬಂಧಿಕರ ಸಮ್ಮುಖದಲ್ಲಿ ಶ್ರೀ ಆದಿಮಾಥ ಸ್ವಾಮಿಗೆ 108 ಕಲಶಾಭಿಷೇಕ ಪೂಜೆ ಮುಖಾಂತರ ಅಂತಿಮ ವಿಧಿ ವಿಧಾನದ ಪೂಜೆ ಸಲ್ಲಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೆಟ್ ರನ್ ರೇಟ್ ಸಮಗೊಂಡರೆ ಸೆಮಿಫೈನಲ್​ಗೇರುವುದು ಯಾರು? – Kannada News | What will happen if the net run rate of two teams is tied in t20 World Cup 2026?

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗಿದೆ. ಕೊಲಂಬೊದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯವನ್ನು ರದ್ದು ಮಾಡಲಾಗಿದೆ. ಇನ್ನು ಪಂದ್ಯ ರದ್ದಾಗಿರುವ ಕಾರಣ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗಿದೆ.

ಇತ್ತ ಉಭಯ ತಂಡಗಳು ಒಂದೊಂದು ಅಂಕ ಪಡೆದಿರುವ ಕಾರಣ ಮುಂದಿನ ಎರಡು ಮ್ಯಾಚ್​ಗಳಲ್ಲಿ ಗೆಲ್ಲುವ ಮೂಲಕ ಸೆಮಿಫೈನಲ್​ಗೇರಬಹುದು. ಒಂದು ವೇಳೆ ಗ್ರೂಪ್ ಮುಂದಿನ ಪಂದ್ಯಗಳು ಕೂಡ ಮಳೆಗೆ ಆಹುತಿಯಾಗಿ ಎಲ್ಲಾ ತಂಡಗಳು ಸಮವಾದ ಅಂಕಳನ್ನು ಪಡೆದರೆ ಯಾರಿಗೆ ಚಾನ್ಸ್ ಎಂಬ ಪ್ರಶ್ನೆ ಮೂಡುವುದು ಸಹಜ.

ಈ ಪ್ರಶ್ನೆಗೆ ಸಾಮಾನ್ಯವಾಗಿ ಸಿಗುವ ಉತ್ತರ ನೆಟ್ ರನ್ ರೇಟ್. ಅಂದರೆ ಅಂಕ ಪಟ್ಟಿಯಲ್ಲಿ ಎರಡಕ್ಕಿಂತ ಹೆಚ್ಚಿನ ತಂಡಗಳು ಸಮನಾದ ಅಂಕಗಳನ್ನು ಪಡೆದುಕೊಂಡಿದ್ದರೆ ಯಾವ ತಂಡ ಹೆಚ್ಚಿನ ನೆಟ್ ರನ್ ರೇಟ್ ಹೊಂದಿರುತ್ತವೆಯೋ ಆ ತಂಡವು ಮುಂದಿನ ಹಂತಕ್ಕೇರಲಿದೆ.  ಒಂದು ವೇಳೆ ಅಂಕಗಳೊಂದಿಗೆ ನೆಟ್ ರನ್ ರೇಟ್ ಕೂಡ ಸಮವಾಗಿದ್ದರೆ? ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ…

  • ಗೆಲುವಿನ ಲೆಕ್ಕಾಚಾರ: ಪಾಯಿಂಟ್ಸ್ ಮತ್ತು ನೆಟ್ ರನ್ ರೇಟ್ ಎರಡೂ ಸಮವಾಗಿದ್ದಾಗ, ಟೂರ್ನಮೆಂಟ್‌ನಲ್ಲಿ ಯಾರು ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೋ ಆ ತಂಡಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.
  • ಹೆಡ್-ಟು-ಹೆಡ್: ಟೂರ್ನಿಯಲ್ಲಿ ಉಭಯ ತಂಡಗಳ ಗೆಲುವು ಕೂಡ ಸಮನಾಗಿದ್ದರೆ, ಟೈ ಆಗಿರುವ ಆ ಎರಡು ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ಮುಖಾಮುಖಿಯಾದಾಗ ಯಾರು ಹೆಚ್ಚು ಗೆದ್ದಿದ್ದರು ಎಂಬುದನ್ನು ನೋಡಲಾಗುತ್ತದೆ. ಹೀಗೆ ಪರಸ್ಪರ ಮುಖಾಮುಖಿಯಲ್ಲಿ ಹೆಚ್ಚು ಗೆದ್ದಿರುವ ತಂಡ ಮುಂದಿನ ಹಂತಕ್ಕೇರುತ್ತದೆ.
  • ಐಸಿಸಿ ಶ್ರೇಯಾಂಕ: ಅಂತರಾಷ್ಟ್ರೀಯ ಪಂದ್ಯಗಳಲ್ಲಿ (ವಿಶ್ವಕಪ್‌ನಂತಹ ಟೂರ್ನಿಗಳಲ್ಲಿ), ಎಲ್ಲವೂ ಸಮನಾದಾಗ ಪಂದ್ಯಾವಳಿ ಆರಂಭಕ್ಕೂ ಮೊದಲು ಇದ್ದ ICC ಟೀಮ್ ರ‍್ಯಾಂಕಿಂಗ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂದರೆ ಗೆಲುವು, ನೆಟ್ ರನ್ ರೇಟ್, ಹೆಡ್ ಟು ಹೆಡ್ ಎಲ್ಲವೂ ಸಮವಾಗಿದ್ದರೆ ಈ ವೇಳೆ ಈ ಐಸಿಸಿ ರ್ಯಾಂಕಿಂಗ್​ನಲ್ಲಿ ಯಾವ ತಂಡ ಮೇಲಿರುತ್ತದೆಯೋ ಆ ತಂಡ ಮುಂದಿನ ಹಂತಕ್ಕೇರಲಿದೆ.
  • ಹೆಚ್ಚು ವಿಕೆಟ್ ಲೆಕ್ಕಾಚಾರ: ಕೆಲವು ಟೂರ್ನಿಗಳಲ್ಲಿ (ಉದಾಹರಣೆಗೆ IPL), ಮೇಲಿನ ಹಂತಗಳಲ್ಲೂ ಫಲಿತಾಂಶ ಸಿಗದಿದ್ದರೆ, ಇಡೀ ಟೂರ್ನಿಯಲ್ಲಿ ಯಾವ ತಂಡ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದೆ ಎಂದು ನೋಡಲಾಗುತ್ತದೆ. ಈ ಮೂಲಕ ಮುಂದಿನ ಹಂತಕ್ಕೇರುವುದನ್ನು ನಿರ್ಧರಿಸಲಾಗುತ್ತದೆ.

ಅಂದರೆ ಐಸಿಸಿ ಟೂರ್ನಿಗಳಲ್ಲಿ ಪಾಯಿಂಟ್ಸ್, ಗೆಲುವು, ನೆಟ್ ರನ್ ರೇಟ್, ಹೆಡ್ ಟು ಹೆಡ್ ಎಲ್ಲವೂ ಸಮವಾಗಿದ್ದರೂ ತಂಡಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲು ಕೊನೆಗೆ ಐಸಿಸಿ ತಂಡಗಳ ರ್ಯಾಂಕಿಂಗ್ ಅನ್ನು ಬಳಸಲಾಗುತ್ತದೆ. ಹೀಗಾಗಿ ಪ್ರಸ್ತುತ ಟೂರ್ನಿಯಲ್ಲಿ ತಂಡಗಳ ಅಂಕಗಳು, ಗೆಲುವು, ನೆಟ್ ರನ್​ ರೇಟ್ ಎಲ್ಲವೂ ಸಮವಾದರೂ ಸೂಪರ್-8 ಸುತ್ತಿನಿಂದ 4 ತಂಡಗಳು ಮುಂದಿನ ಹಂತಕ್ಕೇರುವುದು ಖಚಿತ.

Source link