ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ ರೈಸಿಂಗ್ ಸ್ಟಾರ್ಸ್ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಎ ತಂಡ ಫೈನಲ್ಗೇರಿದೆ. ಟೆರ್ಡ್‌ಥೈ ಕ್ರಿಕೆಟ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ವಿರುದ್ಧ ಟಾಸ್ ಗೆದ್ದ ಶ್ರೀಲಂಕಾ ಎ ತಂಡವು ಮೊದಲು ಬ್ಯಾಟಿಂಗ್ ಮಾಡಿದ್ದರು.
ಆದರೆ ನಾಯಕಿ ರಾಧಾ ಯಾದವ್ ಅವರ ಸ್ಪಿನ್ ಮೋಡಿಗೆ ತತ್ತರಿಸಿದ ಶ್ರೀಲಂಕಾ ಎ ತಂಡವು 19.4 ಓವರ್ಗಳಲ್ಲಿ 118 ರನ್ಗಳಿಸಿ ಆಲೌಟ್ ಆಯಿತು. ಈ ಗುರಿಯನ್ನು ಟೀಮ್ ಇಂಡಿಯಾ 13.3 ಓವರ್ಗಳಲ್ಲಿ ಚೇಸ್ ಮಾಡಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಭಾರತ ಎ ತಂಡವು ಫೈನಲ್ಗೇರಿದ್ದು, ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ್ ಎ ತಂಡವನ್ನು ಎದುರಿಸಲಿದೆ.
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಟೀಸರ್ ನಿನ್ನೆಯಷ್ಟೆ (ಫೆಬ್ರವರಿ 20) ಬಿಡುಗಡೆ ಆಗಿದೆ. ಭಾರತ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ ‘ಟಾಕ್ಸಿಕ್’ ನಿನ್ನೆ ಬೆಳಿಗ್ಗೆ 9:30ಕ್ಕೆ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ ಬಿಡುಗಡೆ ಆಗಿ 24 ಗಂಟೆಗಳಾಗಿವೆ. ಈ ಅವಧಿಯಲ್ಲಿ ದಾಖಲೆ ಮೊತ್ತದ ಜನ ಸಿನಿಮಾದ ಟೀಸರ್ ವೀಕ್ಷಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೇವಲ 24 ಗಂಟೆಗಳಲ್ಲಿ ಸುಮಾರು ಐದು ಕೋಟಿ ವೀವ್ಸ್ ಗಳಿಸಿಕೊಂಡಿದೆ.
1:55 ನಿಮಿಷದ ಟೀಸರ್ ಅನ್ನು ನಿನ್ನೆ ‘ಟಾಕ್ಸಿಕ್’ ಚಿತ್ರತಂಡ ಬಿಡುಗಡೆ ಮಾಡಿತ್ತು. ಟೀಸರ್, ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಯ್ತು. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಟೀಸರ್ಗೆ ಭರಪೂರ ಮೆಚ್ಚುಗೆಗಳು ವ್ಯಕ್ತವಾಗಿವೆ. ಟೀಸರ್ ಬಿಡುಗಡೆ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಟಾಕ್ಸಿಕ್’ನ ಕನ್ನಡದ ಟೀಸರ್ ಬಿಡುಗಡೆ ಆದ 24 ಗಂಟೆಗಳಲ್ಲಿ 74,19,923 ವೀವ್ಸ್ ಪಡೆದುಕೊಂಡಿದೆ. ಕನ್ನಡದ ಟೀಸರ್ಗಳ ಮಟ್ಟಿಗೆ ಇದೊಂದು ಹೊಸ ದಾಖಲೆಯೇ ಆಗಿದೆ. ಇನ್ನು ಇದೇ ಸಿನಿಮಾದ ತಮಿಳು ಟೀಸರ್ ಅದೇ ಅವಧಿಯಲ್ಲಿ 54.31 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಇನ್ನು ಮಲಯಾಳಂ ಟೀಸರ್ 27.63 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ಅತಿ ಹೆಚ್ಚು ವೀವ್ಸ್ ಪಡೆದುಕೊಂಡಿರುವುದು ‘ಟಾಕ್ಸಿಕ್’ ಸಿನಿಮಾದ ಹಿಂದಿ ಟೀಸರ್. ಕೇವಲ 24 ಗಂಟೆಯಲ್ಲಿ 2.19 ಕೋಟಿಗೂ ಹೆಚ್ಚು ಜನ ‘ಟಾಕ್ಸಿಕ್’ ಸಿನಿಮಾದ ಹಿಂದಿ ಟೀಸರ್ ಅನ್ನು ವೀಕ್ಷಿಸಿದ್ದಾರೆ. ಎರಡನೇ ಸ್ಥಾನ ತೆಲುಗು ಟೀಸರ್ಗೆ. ‘ಟಾಕ್ಸಿಕ್’ ಸಿನಿಮಾದ ತೆಲುಗು ಟೀಸರ್ ಅನ್ನು ಕೇವಲ 24 ಗಂಟೆಯಲ್ಲಿ 1.10 ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಲ್ಲಿಗೆ ಒಟ್ಟು ಸುಮಾರು 5 ಕೋಟಿ ಬಾರಿ ಟೀಸರ್ ವೀಕ್ಷಣೆ ಕಂಡಿದೆ.
‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅವರುಗಳು ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾಕ್ಕೆ ಕೆವಿಎನ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ಸ್ ಬಂಡವಾಳ ಹೂಡಿದೆ.
ಬೆಳಗಾವಿ, ಫೆಬ್ರವರಿ 21: ಬೆಳಗಾವಿಯಲ್ಲಿ (Belagavi) ಮಹಿಳಾ ಅಧಿಕಾರಿಯ ಮನೆಯಲ್ಲಿ ಹಿಡನ್ ಕ್ಯಾಮರಾ ಅಳವಡಿಸಿ ಖಾಸಗಿ ವಿಡಿಯೋಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ಮತ್ತೊಂದು ಕರಾಳ ಮುಖ ಇದೀಗ ಬಯಲಾಗಿದೆ. ಪ್ರಕರಣ ಸಂಬಂಧ ಬಂಧಿತ ನಕಲಿ ಪತ್ರಕರ್ತರ ಮೊಬೈಲ್‌ಗಳನ್ನು ಪರಿಶೀಲಿಸಿದ ವೇಳೆ 100ಕ್ಕೂ ಹೆಚ್ಚು ಬೆತ್ತಲೆ ಹಾಗೂ ಖಾಸಗಿ ವಿಡಿಯೋಗಳು ಪತ್ತೆಯಾಗಿರುವುದು ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಈ ಹಿಂದೆ ಮಹಿಳಾ ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮರಾ ಇಟ್ಟು ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು 50 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಹಣ ಕೊಡದಿದ್ದರೆ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಬಂಧಿತರಾದ ಸಮೀರ್ ಶೇಖ್, ಅಬ್ದುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಅವರನ್ನು ಪೊಲೀಸರು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಬ್ಬ ಅಧಿಕಾರಿಯ ಖಾಸಗಿ ವಿಡಿಯೋ ಪತ್ತೆ
ಮಾಳಮಾರುತಿ ಠಾಣೆ ಪೊಲೀಸರು ಮೊಬೈಲ್ ಡೇಟಾ ರೀಟ್ರೀವ್ ಮಾಡುವ ವೇಳೆ ಮತ್ತೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಖಾಸಗಿ ವಿಡಿಯೋ ಕೂಡ ಪತ್ತೆಯಾಗಿದೆ. ಆ ಅಧಿಕಾರಿಯ ಮನೆಯಲ್ಲಿ ಕೂಡ ಹಿಡನ್ ಕ್ಯಾಮರಾ ಅಳವಡಿಸಿ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡಿರುವುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಣ ನೀಡದಿದ್ದರೆ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಲಕ್ಷಾಂತರ ರೂ. ವಸೂಲಿ ಮಾಡಿರುವ ಆರೋಪವೂ ಕೇಳಿಬಂದಿದೆ.
ಮೊಬೈಲ್‌ಗಳಲ್ಲಿ ಪತ್ತೆಯಾದ ವಿಡಿಯೋಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ಮತ್ತೆ ಕಸ್ಟಡಿಗೆ ಪಡೆದು ವಿಚಾರಣೆ ತೀವ್ರಗೊಳಿಸಲಾಗಿದೆ. ಗ್ಯಾಂಗ್ ಇನ್ನಷ್ಟು ಅಧಿಕಾರಿಗಳು ಅಥವಾ ಗಣ್ಯರನ್ನು ಟಾರ್ಗೆಟ್ ಮಾಡಿದ್ದಾರೆಯೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ.
ಈ ಪ್ರಕರಣ ಬೆಳಗಾವಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಅಧಿಕಾರಿಗಳ ಭದ್ರತೆ ಹಾಗೂ ಖಾಸಗಿತನದ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆ ಸೇರಿದಂತೆ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಲಾಗಿದ್ದು, ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆರೋಪಿಗಳು ಸಿಕ್ಕಿಬಿದ್ದಿದ್ಹೇಗೆ?
ಮಹಿಳಾ ಅಧಿಕಾರಿಯೊಬ್ಬರ ಮನೆಯ ಲೈಟ್ ಬಲ್ಬ್ ಹೋಲ್ಡರ್‌ಗಳಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದ ಆರೋಪಿಗಳು, ಖಾಸಗಿ ದೃಶ್ಯಗಳನ್ನು ಸೆರೆಹಿಡಿದಿದ್ದರು. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸಿ 50 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಹಿಳಾ ಅಧಿಕಾರಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಪೊಲೀಸ್ ಆಯುಕ್ತರ ಸೂಚನೆಯಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಫೆಬ್ರವರಿ 6 ರಂದು ಮೂವರನ್ನು ಬಂಧಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಅಂತಾರಾಷ್ಟ್ರೀಯ ಮಾತೃಭಾಷಾ ದಿನImage Credit source: Pinterest
ಮಾತೃ ಭಾಷೆ (Mother Language) ಕೇವಲ ಸಂವಹನ ಸಾಧನವಲ್ಲ, ಅದು ಸಂಸ್ಕೃತಿ ಭಾವನೆಗಳ ಪ್ರತೀಕವಾಗಿದೆ. ಈ ಪ್ರಪಂಚದಾದ್ಯಂತ ಹಲವು ಭಾಷೆಗಳಿದ್ದು, ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನ ಭಾಷೆಗಳನ್ನು ಮಾತನಾಡಲಾಗುತ್ತದೆ. ಆದರೆ ಇಂದು ಇಂಗ್ಲಿಷ್ ಭಾಷೆಗೆ ಮಾತ್ರ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಯುನೆಸ್ಕೋ ಪ್ರಕಾರ, ವಿಶ್ವಾದ್ಯಂತ ಸುಮಾರು 7,000 ಭಾಷೆಗಳಿದ್ದು, ಔಪಚಾರಿಕ ಶಿಕ್ಷಣದಲ್ಲಿ ಕೇವಲ 351 ಭಾಷೆಗಳನ್ನು ಮಾತ್ರ ಬಳಸಲಾಗುತ್ತದೆ. ಇನ್ನೂ ಜಾಗತೀಕರಣ, ನಗರೀಕರಣ ಮತ್ತು ಬದಲಾಗುತ್ತಿರುವ ಸಾಮಾಜಿಕ ರಚನೆಗಳಿಂದಾಗಿ, ಹೆಚ್ಚಿನ ಸಂಖ್ಯೆಯ ಭಾಷೆಗಳು ಅಳಿವಿನಂಚಿಗೆ ಸಾಗುತ್ತಿವೆ. ಹಾಗಾಗಿ ತಾಯ್ನುಡಿಯನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಫೆಬ್ರವರಿ 21 ರಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಇತಿಹಾಸವೇನು?
ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ನವೆಂಬರ್ 1999 ರಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ (UNESCO) ಸಾಮಾನ್ಯ ಸಭೆಯು ಘೋಷಿಸಿತು. ಬಾಂಗ್ಲಾದೇಶದ ಮಾತೃಭಾಷೆ ಬಂಗಾಳಿಯನ್ನು ಆಡಳಿತ ಭಾಷೆಯನ್ನಾಗಿ ಮಡಬೇಕೆಂದು ತಮ್ಮ ಪ್ರಾಣವನ್ನು ಮುಡಿಪಾಗಿಟ್ಟ ವಿದ್ಯಾರ್ಥಿಗಳ ನೆನಪಿಗಾಗಿ ಈ ದಿನದ ಆಚರಣೆ ಪ್ರಾರಂಭವಾಯಿತು.
ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನು ಏಕೆ ಆಚರಿಸಲಾಗುತ್ತದೆ?
ಅಂತಾರಾಷ್ಟ್ರೀಯ ಮಾತೃಭಾಷಾ ದಿನದ ಕಲ್ಪನೆಯು ಫೆಬ್ರವರಿ 21, 1952 ರಂದು ಬಂಗಾಳಿ ಭಾಷೆಯ ಮಾನ್ಯತೆಗಾಗಿ ನಡೆದ ಹೋರಾಟದಿಂದ ಹುಟ್ಟಿಕೊಂಡಿತು. ಬಾಂಗ್ಲಾದೇಶಿಗಳ ಹೋರಾಟವನ್ನು ಗುರುತಿಸಿ, ಭಾಷಾ ವೈವಿಧ್ಯತೆ ಮತ್ತು ಬಹುಭಾಷಾವಾದವನ್ನು ಉತ್ತೇಜಿಸಲು ಯುನೆಸ್ಕೋ 1999 ರಲ್ಲಿ ಫೆಬ್ರವರಿ 21 ಅನ್ನು ಅಂತರರಾಷ್ಟ್ರೀಯ ಮಾತೃಭಾಷಾ ದಿನವೆಂದು ಘೋಷಿಸಿತು. ವಿಶ್ವಸಂಸ್ಥೆಯು 2002 ರಲ್ಲಿ ಇದನ್ನು ಅನುಮೋದಿಸಿತು. ಅಂದಿನಿಂದ ಈ ವಿಶೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಪ್ರಭಾಸ್(Prabhas), ನಿರ್ದೇಶಕರುಗಳ ನೆಚ್ಚಿನ ನಟ. ಭಾರತದ ಹಲವು ಟಾಪ್ ನಿರ್ದೇಶಕರುಗಳು ಸಹ ಪ್ರಭಾಸ್ ಜೊತೆಗೆ ಕೆಲಸ ಮಾಡಲು ಕಾತರರಾಗಿ ಕಾಯುತ್ತಿದ್ದಾರೆ. ರಾಜಮೌಳಿ ಅಂಥಹಾ ಟಾಪ್ ನಿರ್ದೇಶಕರಿಗೂ ಪ್ರಭಾಸ್ ಮೇಲೆ ವಿಪರೀತ ಪ್ರೀತಿ, ಪ್ರಭಾಸ್ ಜೊತೆಗೆ ಮೂರು-ಮೂರು ಸಿನಿಮಾಗಳನ್ನು ರಾಜಮೌಳಿ ಮಾತನಾಡಿದ್ದಾರೆ. ಎಲ್ಲರನ್ನೂ ಪ್ರೀತಿಯಿಂದ ಡಾರ್ಲಿಂಗ್ ಎಂದು ಕರೆಯುವ ರಾಜಮೌಳಿ, ಇದೀಗ ತಮ್ಮ ನೆಚ್ಚಿನ ನಿರ್ದೇಶಕನ ಬಗ್ಗೆ ಮಾತನಾಡಿದ್ದಾರೆ. ಮಾತ್ರವಲ್ಲದೆ ತಮಗೆ ಯಾವ ರೀತಿಯ ಸಿನಿಮಾಗಳು ಹೆಚ್ಚು ಇಷ್ಟ ಎಂಬುದನ್ನು ಸಹ ಅವರು ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್, ಆಕ್ಷನ್ ಮತ್ತು ಮಾಸ್ ಸಿನಿಮಾಗಳ ಸಂಕೇತವೇ ಆಗಿಬಿಟ್ಟಿದ್ದಾರೆ. ‘ಬಾಹುಬಲಿ’ಯಿಂದ ಹಿಡಿದು ಇತ್ತೀಚಿನ ‘ಸಲಾರ್’, ‘ರಾಜಾಸಾಬ್’ ವರೆಗೆ ಪ್ರಭಾಸ್ ಬೆಳ್ಳಿತೆರೆಯ ಮೇಲೆ ಅಬ್ಬರಿಸಿದ್ದೇ ಹೆಚ್ಚು. ಆಕ್ಷನ್ ಹೀರೋ ಎನಿಸಿಕೊಂಡಿರುವ ಪ್ರಭಾಸ್ಗೆ ವೈಯಕ್ತಿಕವಾಗಿ ಯಾವ ರೀತಿಯ ಸಿನಿಮಾಗಳು ಇಷ್ಟ? ಅವರ ಫೇವರೆಟ್ ನಿರ್ದೇಶಕರು ಯಾರು? ಈ ಬಗ್ಗೆ ಪ್ರಭಾಸ್ ಇತ್ತೀಚೆಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತೆಲುಗಿನ ‘ಕಪಲ್ ಫ್ರೆಂಡ್ಲಿ’ ಹೆಸರಿನ ಸಿನಿಮಾದ ಪ್ರಚಾರಕ್ಕಾಗಿ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ವಿಷಯಗಳನ್ನು ಪ್ರಭಾಸ್ ಹಂಚಿಕೊಂಡಿದ್ದಾರೆ.
ಪ್ರಭಾಸ್ ಸದ್ಯ ಸರಣಿ ಆಕ್ಷನ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ, ಅವರ ಮನಸ್ಸಿಗೆ ಹತ್ತಿರವಾದದ್ದು ಮಾತ್ರ ಪ್ರೇಮಕಥೆಗಳಂತೆ. ‘ನನಗೆ ರೊಮ್ಯಾಂಟಿಕ್ ಲವ್ ಸ್ಟೋರಿಗಳೆಂದರೆ ಬಹಳ ಇಷ್ಟ’ ಎಂದು ಪ್ರಭಾಸ್ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಲೆಜೆಂಡರಿ ನಿರ್ದೇಶಕ ಮಣಿರತ್ನಂ ಅವರ ‘ಗೀತಾಂಜಲಿ’ ಸಿನಿಮಾ ತಮ್ಮ ಆಲ್‌ಟೈಮ್ ಫೇವರೆಟ್ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ತೆರೆಯ ಮೇಲೆ ಮಚ್ಚು, ಗನ್ನು ಹಿಡಿದು ಎದುರಾಳಿಗಳ ರುಂಡ ಕತ್ತರಿಸುವ ಪ್ರಭಾಸ್ ಒಳಗೊಬ್ಬ ಮೃದು ಸ್ವಭಾವದ ರೊಮ್ಯಾಂಟಿಕ್ ಹೀರೋ ಇದ್ದಾನೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಇನ್ನು ಪ್ರಭಾಸ್ ತಮ್ಮ ಇಷ್ಟದ ನಿರ್ದೇಶಕರುಗಳಲ್ಲಿ ಒಬ್ಬ ನಿರ್ದೇಶಕರ ಬಗ್ಗೆ ವಿಶೇಷವಾಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ ಅದುವೇ ನಿರ್ದೇಶಕ ಪುರಿ ಜಗನ್ನಾಥ್. ಅವರ ಬಗ್ಗೆ ಪ್ರಭಾಸ್ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ‘ಪುರಿ ಜಗನ್ನಾಥ್ ಅವರಂತೆ ಹೀರೊ ಪಾತ್ರವನ್ನು ಕಲ್ಪಿಸಿಕೊಳ್ಳುವ ಮತ್ತು ಬರೆಯುವ ನಿರ್ದೇಶಕರು ಭಾರತೀಯ ಚಿತ್ರರಂಗದಲ್ಲೇ ವಿರಳ. ನನ್ನ ವೃತ್ತಿಜೀವನದಲ್ಲಿ ‘ಬುಜ್ಜಿಗಾಡು’ ಮತ್ತು ‘ಏಕ್ ನಿರಂಜನ್’ ಚಿತ್ರಗಳಲ್ಲಿನ ಪಾತ್ರಗಳು ನನಗೆ ಬಹಳ ಇಷ್ಟ, ‘ಬುಜ್ಜಿಗಾಡು’ ನಾಯಕನ ಪಾತ್ರ ಕೇಳಿದಾಗಲಂತೂ ನಾನು ಥ್ರಿಲ್ ಆಗಿಬಿಟ್ಟಿದ್ದೆ. ಪುರಿ ಜಗನ್ನಾಥ್ ಅವರಂತೆ ಹೀರೋಗಳ ಪಾತ್ರವನ್ನು ಬರೆಯುವವರು ಯಾರೂ ಇಲ್ಲ, ಅದು ಅವರಿಗೆ ವಿಶೇಷವಾಗಿ ಒಲಿದಿರುವ ಕಲೆ ಎಂದು ಅವರು ಹೇಳಿದ್ದಾರೆ. ಪುರಿ ಅವರ ‘ಬುಜ್ಜಿಗಾಡು’ ಪಾತ್ರವನ್ನು ಮಾಡುವಾಗ ಆರಂಭದಲ್ಲಿ ತಮಗೆ ಭಯವಿತ್ತು, ಆದರೆ ಆ ಪಾತ್ರದ ಮ್ಯಾನರಿಸಂಗಳು ಅದ್ಭುತವಾಗಿದ್ದವು ಎಂದು ಪ್ರಭಾಸ್ ನೆನಪಿಸಿಕೊಂಡಿದ್ದಾರೆ.
ಸದ್ಯ ಪ್ರಭಾಸ್ ಹನು ರಾಘವಪುಡಿ ನಿರ್ದೇಶನದ ‘ಫೌಜಿ’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಯುದ್ಧದ ಹಿನ್ನೆಲೆಯುಳ್ಳ ಒಂದು ಸುಂದರ ಪ್ರೇಮಕಥೆಯಾಗಿದ್ದು, ಪ್ರಭಾಸ್ ಇದರಲ್ಲಿ ಸೈನಿಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಸಂದೀಪ್ ರೆಡ್ಡಿ ವಂಗಾ ಅವರ ‘ಸ್ಪಿರಿಟ್’ ಚಿತ್ರದ ಮೇಲೆಯೂ ದೊಡ್ಡ ನಿರೀಕ್ಷೆಯಿದೆ. ಅದಾದ ಬಳಿಕ ‘ಕಲ್ಕಿ 2’, ‘ಸಲಾರ್ 2’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.
T20 World Cup 2026: ಟಿ20 ವಿಶ್ವಕಪ್‌ನ ಮೊದಲ ಸುತ್ತಿನಲ್ಲಿ 4 ಪಂದ್ಯಗಳಲ್ಲೂ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಸೂಪರ್-8 ಹಂತಕ್ಕೇರಿದೆ. ಸೂಪರ್-8 ಸುತ್ತಿನಲ್ಲಿ ಭಾರತ ತಂಡವು ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್ಗೆ ಪ್ರವೇಶಿಸಲಿದೆ. ಆದರೆ ದ್ವಿತೀಯ ಸುತ್ತಿನಲ್ಲಿ ಗೆದ್ದು ಭಾರತ ತಂಡ ಸೆಮಿಫೈನಲ್ಗೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ ಪಾಕಿಸ್ತಾನ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮಿರ್.
ಭಾರತ ತಂಡ 2026ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ತಲುಪುವುದಿಲ್ಲ ಎಂದು ಮೊಹಮ್ಮದ್ ಅಮಿರ್ ಭವಿಷ್ಯ ನುಡಿದಿದ್ದಾರೆ. ಭಾರತ ತಂಡ ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದಿದ್ದರೂ, ಸೂಪರ್ 8 ಹಂತದಲ್ಲಿ ಹೊರಬೀಳಲಿದೆ. ಏಕೆಂದರೆ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸುತ್ತಿದೆ. ಹೀಗಾಗಿ ಅವರು ಸೆಮಿಫೈನಲ್ಗೆ ಪ್ರವೇಶಿಸುವುದಿಲ್ಲ ಎಂದಿದ್ದಾರೆ.
ಪಾಕಿಸ್ತಾನ್ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ, ಉಳಿದೆಲ್ಲಾ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ಲೈನಪ್ ಕುಸಿದಿದೆ. ಅದರಲ್ಲೂ ಟೀಮ್ ಇಂಡಿಯಾ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮೂರು ಪಂದ್ಯಗಳಲ್ಲೂ ಸೊನ್ನೆಗೆ ಔಟಾಗಿದ್ದಾರೆ. ಅಷ್ಟೇ ಅಲ್ಲದೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ಕೂಡ ಸ್ಥಿರ ಪ್ರದರ್ಶನ ಮೂಡಿಬಂದಿಲ್ಲ.
ಇಂತಹ ಬ್ಯಾಟಿಂಗ್ ಲೈನಪ್ ಇಟ್ಟುಕೊಂಡು ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲುವುದು ಅಷ್ಟು ಸುಲಭವಲ್ಲ. ಏಕೆಂದರೆ ಈ ಎರಡು ತಂಡಗಳು ಮೊದಲ ಸುತ್ತಿನಲ್ಲಿ ಸಾಂಘಿಕ ಪ್ರದರ್ಶನ ನೀಡಿದ್ದಾರೆ. ಇದೇ ಪ್ರದರ್ಶನವನ್ನು ಟೀಮ್ ಇಂಡಿಯಾ ವಿರುದ್ಧ ಕೂಡ ಮುಂದುವರೆಸಲಿದೆ ಎಂದು ಅಮಿರ್ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಪ್ರಕಾರ, ಗ್ರೂಪ್-ಎ ಯಿಂದ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಲಿದೆ. ಟೀಮ್ ಇಂಡಿಯಾದ ಟಿ20 ವಿಶ್ವಕಪ್ ಅಭಿಯಾನ ದ್ವಿತೀಯ ಸುತ್ತಿನಲ್ಲೇ ಮುಗಿಯಲಿದೆ ಎಂದು ಮೊಹಮ್ಮದ್ ಅಮಿರ್ ಭವಿಷ್ಯ ನುಡಿದಿದ್ದಾರೆ.
T20 World Cup 2026: ಟಿ20 ವಿಶ್ವಕಪ್‌ನ ಮೊದಲ ಸುತ್ತಿನ ಪಂದ್ಯಗಳು ಪೂರ್ಣಗೊಂಡಿದೆ. ಲೀಗ್ ಹಂತದಲ್ಲಿ ಕಣಕ್ಕಿಳಿದ 20 ತಂಡಗಳಲ್ಲಿ 12 ಟೀಮ್ಗಳು ಮೊದಲ ಸುತ್ತಿನಲ್ಲೇ ನಿರ್ಗಮಿಸಿದೆ. ಇನ್ನುಳಿದ 8 ತಂಡಗಳು ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿವೆ.
ಸೂಪರ್-8 ಸುತ್ತಿನ ಗ್ರೂಪ್-ಎ ನಲ್ಲಿ ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಗಳು ಕಾಣಿಸಿಕೊಂಡಿವೆ. ಈ ತಂಡಗಳು ತಲಾ 3 ಪಂದ್ಯಗಳನ್ನಾಡಲಿದೆ. ಅಂದರೆ ಭಾರತ ತಂಡವು ಉಳಿದ ಮೂರು ತಂಡಗಳ ವಿರುದ್ಧ ಒಂದೊಂದು ಪಂದ್ಯಗಳನ್ನು ಆಡಲಿದೆ.
ಇನ್ನು ಗ್ರೂಪ್-ಬಿ ನಲ್ಲಿ ಕಾಣಿಸಿಕೊಂಡಿರುವುದು ನ್ಯೂಝಿಲೆಂಡ್, ಇಂಗ್ಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ. ಈ ತಂಡಗಳು ಕೂಡ ತಲಾ ಮೂರು ಪಂದ್ಯಗಳನ್ನಾಡಲಿದೆ. ಈ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ಜರುಗಲಿದೆ. ಅತ್ತ ಗ್ರೂಪ್-ಎ ನಲ್ಲಿರುವ ತಂಡಗಳ ಪಂದ್ಯಗಳಿಗೆ ಭಾರತ ಆತಿಥ್ಯವಹಿಸಲಿದೆ.
ವಿಶೇಷ ಎಂದರೆ ಗ್ರೂಪ್-ಎ ನಲ್ಲಿ ಸ್ಥಾನ ಪಡೆದಿರುವ 4 ತಂಡಗಳು ಒಂದೇ ಒಂದು ಸೋಲು ಕಾಣದೇ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಅಂದರೆ ಭಾರತ, ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಮೊದಲ ಸುತ್ತಿನಲ್ಲಿ ಒಂದೇ ಒಂದು ಮ್ಯಾಚ್ ಸೋತಿಲ್ಲ. ಇದೀಗ ಸೋಲಿಲ್ಲದ ಸರದಾರರಾಗಿ ದ್ವಿತೀಯ ಸುತ್ತಿಗೆ ಪ್ರವೇಶಿಸಿರುವ ಈ ಎಲ್ಲಾ ತಂಡಗಳು ಗ್ರೂಪ್-ಎ ನಲ್ಲೇ ಕಾಣಿಸಿಕೊಂಡಿದೆ.
ಹೀಗಾಗಿ ದ್ವಿತೀಯ ಸುತ್ತಿನಲ್ಲಿ ಗ್ರೂಪ್-ಎ ನಲ್ಲಿರುವ ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಅತ್ತ ಗ್ರೂಪ್-ಬಿ ನಲ್ಲೂ ಬಲಿಷ್ಠ ತಂಡಗಳೇ ಕಾಣಿಸಿಕೊಂಡಿದೆ. ಹೀಗಾಗಿ ಸೂಪರ್-8 ಸುತ್ತಿನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಈ ರೋಚಕ ಹೋರಾಟದ ಮೂಲಕ ಸೆಮಿಫೈನಲ್ಗೇರುವ 4 ತಂಡಗಳಾವುವು ಎಂಬುದನ್ನು ಕಾದು ನೋಡೋಣ.
ಮೈಸೂರು, ಫೆಬ್ರವರಿ 21: ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು (CCB Police) ವಶಕ್ಕೆ ಪಡೆದುಕೊಂಡು, ಸತತ 17 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್, ತಮ್ಮ ವಿರುದ್ಧ ಸ್ನೇಹಮಯಿ ಕೃಷ್ಣ ನಕಲಿ ಆಡಿಯೋ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ ಎಂದು ಸಿಸಿಬಿಗೆ ನೀಡಿದ ದೂರಿನ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸ್ನೇಹಮಯಿ ಕೃಷ್ಣ ಅವರು ಕೋರ್ಟ್‌ಗೆ ಪ್ರಮುಖ ಆಡಿಯೋ ಮತ್ತು ದಾಖಲೆಗಳನ್ನು ಸಲ್ಲಿಸಲು ಸಿದ್ಧವಾಗಿದ್ದ ಸಮಯದಲ್ಲಿಯೇ ಬಂಧನವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಏನಿದು ಪ್ರಕರಣ? ಸ್ನೇಹಮಯಿ ಬಂಧನವಾಗಿದ್ದೇಕೆ?
ಸ್ನೇಹಮಯಿ ಕೃಷ್ಣ ಮೂರು ಪ್ರಮುಖ ಆರೋಪಗಳನ್ನು ಮಾಡಿದ್ದರು. ಮೊದಲನೆಯದಾಗಿ, ಮುಡಾ ಮಾಜಿ ಆಯುಕ್ತ ನಟೇಶ್ ಬಡ್ತಿ ಪಡೆಯಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ 1.60 ಕೋಟಿ ರೂಪಾಯಿ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಣವನ್ನು ಸಾಗಿಸಲಾಯಿತು ಎನ್ನಲಾದ ಕಾರಿನ ಭಾವಚಿತ್ರವನ್ನೂ ಅವರು ಬಿಡುಗಡೆ ಮಾಡಿದ್ದರು. ಎರಡನೆಯದಾಗಿ, ಡಿ.ಬಿ. ನಟೇಶ್ ಅವರು ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು. ಕೇವಲ ಆರು ಸೆಕೆಂಡ್‌ಗಳ ‘ಟ್ರೈಲರ್’ ಬಿಡುಗಡೆ ಮಾಡಿದ್ದೇನೆ ಎಂದಿದ್ದ ಅವರು, ಪೂರ್ಣ ಆಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದರು. ಈ ಆಡಿಯೋದಲ್ಲಿ ನಟೇಶ್ ಅವರು ಹೇಗಾದರೂ ಮಾಡಿ ಸ್ನೇಹಮಯಿ ಕೃಷ್ಣ ಅವರನ್ನು ಸಂಪರ್ಕಕ್ಕೆ ತೆಗೆದುಕೊಳ್ಳುವಂತೆ ವ್ಯಕ್ತಿಯೊಬ್ಬರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಮೂರನೆಯದಾಗಿ, ಲೋಕಾಯುಕ್ತದಲ್ಲಿ ಮುಡಾ ಪ್ರಕರಣದ ತನಿಖೆ ನಡೆಯುತ್ತಿದ್ದರೂ, ಹಿಂದಿನ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ, ನಟೇಶ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಟೇಶ್ ಲೋಕಾಯುಕ್ತರಿಗೂ ಲಂಚ ನೀಡಿದ್ದಾರೆ ಎಂದು ಆರೋಪಿಸಿ, ಕೈಬರಹದ ದಾಖಲೆಯೊಂದನ್ನು ಸ್ನೇಹಮಯಿ ಕೃಷ್ಣ ಬಿಡುಗಡೆ ಮಾಡಿದ್ದರು.
ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಲು ಸಿದ್ಧರಾಗಿದ್ದ ಸ್ನೇಹಮಯಿ ಕೃಷ್ಣ
ಈ ಆರೋಪಗಳಿಗೆ ಸಂಬಂಧಿಸಿದಂತೆ, ಸ್ನೇಹಮಯಿ ಕೃಷ್ಣ ಅವರು ಜನಪ್ರತಿನಿಧಿಗಳ ಕೋರ್ಟ್‌ಗೆ ಆಡಿಯೋ ಹಾಗೂ ಇತರ ದಾಖಲಾತಿಗಳನ್ನು ಸಲ್ಲಿಸಲು ನಿನ್ನೆ ಅಂದರೆ 20ನೇ ತಾರೀಖು ಸಿದ್ಧರಾಗಿದ್ದರು. ಆದರೆ, ಕೋರ್ಟ್‌ಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸುವ ಮುನ್ನವೇ ಅವರನ್ನು ಬಂಧಿಸಲಾಯಿತು. ಇದು ‘ನಟೇಶ್ರ ಆಡಿಯೋ ಕೋರ್ಟ್‌ಗೆ ತಲುಪುತ್ತದೆ ಎಂಬ ಭಯವಾ ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದ ನಂತರ, ಮೈಸೂರಿನಲ್ಲಿರುವ ಅವರ ಎರಡು ಮನೆಗಳಲ್ಲಿ ಸಿಸಿಬಿ ಪೊಲೀಸರು ಶೋಧ ನಡೆಸಿದ್ದಾರೆ. ಮಧ್ಯಾಹ್ನದಿಂದ ರಾತ್ರಿಯವರೆಗೆ ನಡೆದ ಈ ಶೋಧ ಕಾರ್ಯದಲ್ಲಿ ಒಂದು ಪೆನ್ ಡ್ರೈವ್, ಐಫೋನ್, ಸ್ವಿಚ್ ಆಫ್ ಆಗಿದ್ದ ಒಂದು ಫೋನ್, ಹಾರ್ಡ್ ಡಿಸ್ಕ್ ಮತ್ತು ಮೆಮೊರಿ ಕಾರ್ಡ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ನೇಹಮಯಿ ಕೃಷ್ಣ ಅವರು ವಿಚಾರಣೆ ವೇಳೆ ತಮ್ಮ ಆರೋಪಗಳನ್ನು ಸಮರ್ಥಿಸಿಕೊಳ್ಳುತ್ತಿದ್ದು, ನಟೇಶ್ ಅವರದ್ದೇ ಆಡಿಯೋ ಎಂದು ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾರೆ. ವಿಚಾರಣೆ ಪೂರ್ಣಗೊಂಡ ನಂತರ ಅವರಿಗೆ ಸ್ಟೇಷನ್ ಬೇಲ್ ಸಿಗುವ ಸಾಧ್ಯತೆಯಿದ್ದು, ಇಲ್ಲವೇ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಕೇಳುವ ಸಾಧ್ಯತೆಗಳೂ ಇವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ದಕ್ಷಿಣ ಭಾರತದ ಚಿತ್ರರಂಗದ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಅವರುಗಳು ಮದುವೆ ಆಗುತ್ತಿದ್ದಾರೆ. ಫೆಬ್ರವರಿ 26ರಂದು ನಡೆಯಲಿದೆ. ಮದುವೆಯನ್ನು ಬಹಳ ಗುಟ್ಟಾಗಿ ಮಾಡಿಕೊಳ್ಳಲು ಈ ಜೋಡಿ ಇಚ್ಛಿಸಿತ್ತು. ಹಾಗಾಗಿ ಮದುವೆಯ ಸ್ಥಳ, ದಿನಾಂಕಗಳನ್ನು ಗುಟ್ಟಾಗಿ ಇರಿಸಿತ್ತು. ಆದರೆ ಇವರ ಮದುವೆಯ ಬಗ್ಗೆ ದಿನಕ್ಕೊಂದು ವಿಷಯಗಳು ಲೀಕ್ ಆಗುತ್ತಲೇ ಇವೆ. ಇದೀಗ ಮದುವೆ ದಿನ ಭದ್ರತೆ ಸಮಸ್ಯೆ ಆಗಬಹುದೆಂಬ ಭೀತಿಯಲ್ಲಿ ರಶ್ಮಿಕಾ ಮತ್ತು ವಿಜಯ್ ಇದ್ದು, ಇದೇ ಕಾರಣಕ್ಕೆ ವಿದೇಶದಿಂದ ಭದ್ರತಾ ಸಿಬ್ಬಂದಿಯನ್ನು ವಿಶೇಷ ಭದ್ರತೆಗಾಗಿ ಕರೆಸಿಕೊಂಡಿದೆ ಈ ಜೋಡಿ.
ತಮ್ಮ ಖಾಸಗಿ ಜೀವನದ ಬಗ್ಗೆ ಸದಾ ಮೌನವಾಗಿರುತ್ತಿದ್ದ ಈ ಜೋಡಿ, ಮದುವೆಯ ವಿಚಾರದಲ್ಲೂ ಅಷ್ಟೇ ಗೌಪ್ಯತೆ ಬಯಸಿತ್ತು. ಆದರೆ ಇತ್ತೀಚೆಗೆ ಇವರ ಮದುವೆಯ ಆಮಂತ್ರಣ ಪತ್ರಿಕೆ ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಮದುವೆಯ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿ ಸೋರಿಕೆಯಾಗಿದ್ದರಿಂದ ಕಳವಳಗೊಂಡಿರುವ ತಾರಾ ಜೋಡಿ, ಈಗ ವಿದೇಶಿ ಭದ್ರತಾ ಸಂಸ್ಥೆಯೊಂದನ್ನು ನೇಮಿಸಿಕೊಂಡಿದೆ. ರಾಜಸ್ಥಾನದ ಉದಯಪುರದಲ್ಲಿ ನಡೆಯಲಿರುವ ಈ ಮದುವೆಗೆ ಯಾವುದೇ ಅಡೆತಡೆ ಉಂಟಾಗಬಾರದು, ಅಭಿಮಾನಿಗಳಿಂದ ತೊಂದರೆ ಆಗಬಾರದು ಎಂಬುದು ಇವರ ಉದ್ದೇಶ.
ವರದಿಗಳ ಪ್ರಕಾರ, ಮದುವೆಯ ಆವರಣದಲ್ಲಿ ಯಾರೂ ಮೊಬೈಲ್ ಫೋನ್ ಬಳಸುವಂತಿಲ್ಲ ಎಂಬ ‘ನೋ ಫೋನ್ ಪಾಲಿಸಿ’ಯನ್ನು ಜಾರಿಗೆ ತರಲಾಗಿದೆ. ಕೇವಲ ಆಯ್ದ ಆಪ್ತರು ಮತ್ತು ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಮದುವೆಯ ಕೆಲಸ ಕಾರ್ಯಗಳಲ್ಲಿ ತೊಡಗಿರುವ ಸಿಬ್ಬಂದಿಗಳೊಂದಿಗೆ ಗೌಪ್ಯತೆಯ ಒಪ್ಪಂದಕ್ಕೆ (NDA) ಸಹಿ ಹಾಕಿಸಿಕೊಳ್ಳಲಾಗಿದೆ. ಸ್ಥಳೀಯ ಪೊಲೀಸರ ಜೊತೆಗೆ ವಿದೇಶಿ ಭದ್ರತಾ ಸಿಬ್ಬಂದಿಗಳು ಕಣ್ಗಾವಲು ಇರಿಸಲಿದ್ದಾರೆ.
ಫೆಬ್ರವರಿ 26 ರಂದು ಉದಯಪುರದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಶಾಸ್ತ್ರಗಳು ನೆರವೇರಲಿದ್ದು, ಬಳಿಕ ಮಾರ್ಚ್ 4 ರಂದು ಹೈದರಾಬಾದ್ ತಾಜ್ ಕೃಷ್ಣನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಮತ್ತು ಸ್ನೇಹಿತರಿಗಾಗಿ ಅದ್ದೂರಿ ರಿಸೆಪ್ಷನ್ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತೆಲುಗು ಚಿತ್ರರಂಗದ ಗಣ್ಯರ ಜೊತೆಗೆ ಬಾಲಿವುಡ್ನ ಚಿತ್ರರಂಗದವರು ಮತ್ತು ಆಂಧ್ರ, ತೆಲಂಗಾಣದ ರಾಜಕಾರಣಿಗಳು ಸಹ ಭಾಗಿ ಆಗಲಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದ ಈ ಜೋಡಿ, ಈಗ ನಿಜ ಜೀವನದಲ್ಲೂ ಒಂದಾಗುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ತಂದಿದೆ.
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಟೀಸರ್ ಸಖತ್ ಮಾಸ್ ಆಗಿದ್ದು, ಟೀಸರ್ನಲ್ಲಿಯೇ ಸಾಕಷ್ಟು ಟ್ವಿಸ್ಟುಗಳನ್ನು ಸಹ ನೀಡಲಾಗಿದೆ. ಟೀಸರ್ನಲ್ಲಿ ಯಶ್ ಎರಡು ಭಿನ್ನ ಲುಕ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತುಸು ವಯಸ್ಸಾದ ಪಾತ್ರದ ಜೊತೆಗೆ ಯಂಗ್ ಯಶ್ ಸಹ ಟೀಸರ್ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಖತ್ ಕುತೂಹಲ ಮೂಡಿಸಿದೆ. ಯಂಗ್ ಲುಕ್ನಲ್ಲಿರುವ ಯಶ್, ಕೆಲವರನ್ನು ಅಮಾನುಶವಾಗಿ ಕೊಲ್ಲುವ ದೃಶ್ಯಗಳ ಜೊತೆಗೆ ಕುಡಿದು ಡ್ಯಾನ್ಸ್ ಮಾಡುವ ದೃಶ್ಯಗಳು ಟೀಸರ್ನಲ್ಲಿವೆ. ಆದರೆ ಈ ಟೀಸರ್ ಬಿಡುಗಡೆ ಆದ ಬೆನ್ನಲ್ಲೆ ಯಶ್ ಅವರ ಕಾಲೇಜು ದಿನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಯಶ್ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು. ಆಗಿನಿಂದಲೇ ಅವರು ನಾಟಕ, ಡ್ಯಾನ್ಸುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಸಹಪಾಠಿಗಳನ್ನು ರಂಜಿಸುತ್ತಿದ್ದರು. ಇದೀಗ ‘ಟಾಕ್ಸಿಕ್’ ಟೀಸರ್ ಬಿಡುಗಡೆ ಆದ ಬಳಿಕ ಯಶ್ ಅವರು ವಿದ್ಯಾರ್ಥಿಯಾಗಿದ್ದಾಗ ಮಹಾರಾಜ ಕಾಲೇಜಿನಲ್ಲಿ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದಕ್ಕೆ ಕಾರಣವೂ ಇದೆ.
‘ಟಾಕ್ಸಿಕ್’ ಟೀಸರ್ನ ಕೊನೆಯಲ್ಲಿ ಯಶ್ ಅವರ ಯಂಗ್ ಲುಕ್ ತೋರಿಸಿದಾಗ ಯಶ್ ಕೆಲವು ಡ್ಯಾನ್ಸ್ ಸ್ಟೆಪ್ ಹಾಕುತ್ತಾರೆ ಅದರಲ್ಲಿ ಮೊದಲೆಯದ್ದು ಕೈಯನ್ನು ಅಲೆಗಳಂತೆ ಸ್ವಿಂಗ್ ಮಾಡುವ ಡ್ಯಾನ್ಸ್ ಸ್ಟೆಪ್ಪು. ಅಸಲಿಗೆ ಅದೇ ಸ್ಟೆಪ್ಪನ್ನು ಅವರು ದಶಕಗಳ ಹಿಂದೆ ತಮ್ಮ ಕಾಲೇಜು ಕಾರ್ಯಕ್ರಮದಲ್ಲಿ ಹಾಕಿದ್ದರು. ಈಗ ಯಥಾವತ್ತು ಅದೇ ಸ್ಟೆಪ್ಪನ್ನು ಯಶ್ ತಮ್ಮ ಸಿನಿಮಾನಲ್ಲಿಯೂ ಬಳಸಿಕೊಂಡಿದ್ದಾರೆ. ಆ ಮೂಲಕ ತಮ್ಮದೇ ಯೌವ್ವನದ ದಿನಗಳನ್ನು ಯಶ್ ಮರಳಿ ತಂದಿದ್ದಾರೆ.
ಇದೀಗ ಯಶ್ ಅವರ ಡ್ಯಾನ್ಸ್ ವಿಡಿಯೋ ಹಾಗೂ ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಮಾಡಿರುವ ಡ್ಯಾನ್ಸ್ನ ವಿಡಿಯೋಗಳನ್ನು ಕೊಲ್ಯಾಜ್ ಮಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಯಶ್ ದಶಕಗಳ ಕಾಲ ಹಿಂದಕ್ಕೆ ಹೋಗಿದ್ದಾರೆ. ಯಶ್ ಮತ್ತೆ ಯಂಗ್ ಆಗಿದ್ದಾರೆ ಎಂದೆಲ್ಲ ಕಮೆಂಟುಗಳನ್ನು ನೆಟ್ಟಿಗರು ಹರಿಬಿಡುತ್ತಿದ್ದಾರೆ.
ಮಹಾರಾಜ ಕಾಲೇಜಿನಲ್ಲಿ ಓದಿದ ಯಶ್ ಬಹಳ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಬಹಳ ಸಕ್ರಿಯವಾಗಿ ಭಾಗವಹಿಸುತ್ತಿದ್ದ ವಿದ್ಯಾರ್ಥಿ ಆಗಿದ್ದರು. ಆದರೆ ಅವರೇ ಹೇಳಿಕೊಂಡಿದ್ದಂತೆ ಬಹಳ ತರ್ಲೆ ವಿದ್ಯಾರ್ಥಿಯೂ ಆಗಿದ್ದರಂತೆ. ಒಮ್ಮೆಯಂತೂ ತಮ್ಮ ಗೆಳೆಯನ ಮಾತು ಕೇಳಿ ನಟಿ ನಿಧಿ ಸುಬ್ಬಯ್ಯ ಅವರ ಮನೆಯ ಕಿಟಕಿ ಗಾಜುಗಳನ್ನು ಒಡೆದಿದ್ದರಂತೆ. ಅಂದಹಾಗೆ ‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದು, ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದೆ.