Ranji Trophy 2025-26: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್ ಪಂದ್ಯ; ರಾಜ್ ನಗರ ಸ್ಟೇಡಿಯಂ ಬಗ್ಗೆ ನಿಮಗೆಷ್ಟು ಗೊತ್ತು? – Kannada News | Historic Ranji Final in Hubballi: KSCA Stadium Prepares for Karnataka vs Jammu and Kashmir Battle
ರಣಜಿ ಫೈನಲ್ ಪಂದ್ಯಕ್ಕೆ ನಡೆಯುತ್ತಿರುವ ತಯಾರಿImage Credit source: Tv9 Kannada ಹುಬ್ಬಳ್ಳಿ, ಫೆಬ್ರವರಿ 20: ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವೆ ರಣಜಿ ಪೈನಲ್ ಪಂದ್ಯ ರಾಜ್ಯದಲ್ಲಿ ನಡೆಯಲಿದ್ದು, ಫೆ. 24ರಂದು ಹುಬ್ಬಳ್ಳಿ ನಗರದ ರಾಜ್ ನಗರದಲ್ಲಿರೋ KSCA ಮೈದಾನದಲ್ಲಿ ಉಭಯ ತಂಡಗಳು ಸೆಣೆಸಾಡಲಿವೆ. ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಮಾದರಿಯಲ್ಲೇ ಹುಬ್ಬಳ್ಳಿ ನಗರದ ರಾಜ್ ನಗರದಲ್ಲಿ ಕೆಎಸ್ಸಿಎ ಅಂತಾರಾಷ್ಟ್ರೀಯ ಮಟ್ಟದ ಸ್ಟೇಡಿಯಂ ಹೊಂದಿದ್ದು, 2012ರಲ್ಲಿ ಇದರ ಉದ್ಘಾಟನೆ ಆಗಿದೆ. ಜಹೀರ್ ಖಾನ್, ಚೇತೇಶ್ವರ ಪೂಜಾರ್…