Video: ಗೊಂಬೆಯೇ ಈ ಕೋತಿ ಮರಿಯ ಕುಟುಂಬ, ಬೇರೆ ಕೋತಿಗಳು ಕೊಡುವ ಕಾಟ ನೋಡಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ – Kannada News | Viral Lonely Monkey Faces Another Beating, Sparks Online Outrage
ಜಪಾನ್, ಫೆಬ್ರವರಿ 20: ಒಂಟಿ ಕೋತಿ ಮರಿಯೊಂದು ಮೃಗಾಲಯದಲ್ಲಿ ಪಡುತ್ತಿರುವ ಪಾಡು ಯಾರಿಗೂ ಬೇಡ, ಅದಕ್ಕೆ ಒಂದು ಗೊಂಬೆಯೇ ತನ್ನ ಕುಟುಂಬ. ಆದರೆ ಅಲ್ಲಿರುವ ಬೇರೆ ಕೋತಿಗಳು ಆ ಕೋತಿಯನ್ನು ನೆಮ್ಮದಿಯಾಗಿರಲು ಬಿಡುತ್ತಿಲ್ಲ. ಜಪಾನ್ನ ಇಚಿಕಾವಾ ಸಿಟಿ ಮೃಗಾಲಯದ ವಿಡಿಯೋಗಳು ಕಣ್ಣೀರು ತರಿಸುವಂತಿವೆ. ಆ ಮರಿಗೆ ದೊಡ್ಡ ಕೋತಿಗಳು ಹಲ್ಲೆ ನಡೆಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಆ ಮರಿಗೆ ಹುಟ್ಟಿನಿಂದಲೇ ತಾಯಿ ಜತೆ ಸಂಪರ್ಕ ಇರಲಿಲ್ಲ, ಈ ಮರಿಯನ್ನು ಬೇರೆ ಮಂಗಗಳನ್ನು ತಮ್ಮೊಟ್ಟಿಗೆ ಸೇರಿಸಿಕೊಳ್ಳಲು ಸಿದ್ಧವಿರಲಿಲ್ಲ. ಆ ಸಮಯದಲ್ಲಿ…