All posts by nagaraj11081993

ವ್ಹೀಲ್‌ ಚೇರ್‌ನಲ್ಲಿದ್ದ ವೃದ್ಧ ಪತಿ ಎದುರೇ ಪತ್ನಿಯ ಕೊಲೆ: ಚಿನ್ನಾಭರಣ ದೋಚಿ ಎಸ್ಕೇಪ್​​ – Kannada News | Nelamangala Horror: Woman Murdered for Gold in Front of Paralyzed Husband

ನೆಲಮಂಗಲ, ಫೆಬ್ರವರಿ 19: ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ವ್ಹೀಲ್‌ ಚೇರ್‌ನಲ್ಲಿದ್ದ ವೃದ್ಧ ಪತಿ ಎದುರೇ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿರುವ ಆಘಾತಕಾರಿ ಘಟನೆ ನೆಲಮಂಗಲದ ಪೇಟೆ ಬೀದಿಯಲ್ಲಿ ನಡೆದಿದೆ. ಶೋಭಾ (60) ಮೃತ ಮಹಿಳೆಯಾಗಿದ್ದು, ಆರೋಪಿಗಾಗಿ ಪೊಲೀಸರ ಶೋಧ ಮುಂದುವರಿದಿದೆ. ಮೇಲಿಂದ ಮೇಲೆ ನಡೆಯುತ್ತಿರುವ ಚಿನ್ನಾಭರಣ ದರೋಡೆ ಪ್ರಕರಣ ಈಗ ಕೊಲೆ ಹಂತಕ್ಕೂ ಹೋಗಿರೋದು ಸ್ಥಳೀಯರ ನಿದ್ದೆಗೆಡಿಸಿದೆ.

ಬರ್ಬರವಾಗಿ ಕೊಲೆಯಾಗಿರುವ ಮಹಿಳೆ ಶೋಭಾ ನೆಲಮಂಗಲದ ಪೇಟೆ ಬೀದಿಯಲ್ಲಿ ತಮ್ಮ ಪತಿಯೊಂದಿಗೆ ವಾಸವಾಗಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಪತಿಯೂ 12 ವರ್ಷಗಳ ಹಿಂದೆ ಬ್ರೈನ್​​ ಸ್ಟ್ರೋಕ್​​ ಆಗಿ ಹಾಸಿಗೆ ಹಿಡಿದ್ದ ಕಾರಣ ಇವರೇ ಮನೆಗೆ ಆಧಾರವಾಗಿದ್ದರು. ಅನಾರೋಗ್ಯ ಪೀಡಿತ ಪತಿಯನ್ನು ಮಗುವಿನಂತೆ ಆರೈಕೆ ಮಾಡುವ ಜೊತೆಗೆ ಸುತ್ತಮುತ್ತಲಿನ ನಿವಾಸಿಗಳ ಜೊತೆಗೂ ಅನ್ಯೋನ್ಯವಾಗಿದ್ದರು. ಇನ್ನು ಇವರದ್ದು ಶ್ರೀಮಂತ ಕುಟುಂಬ ಎನ್ನಲಾಗಿದ್ದು, ಶೋಭಾ ಅವರ ಪತಿಗೆ ಫಿಸಿಯೋಥೆರಪಿ ಮಾಡಲು ಪ್ರತಿದಿನ ವೈದ್ಯರು ಮನೆಗೆ ಬರುತ್ತಿದ್ದರು. ಎಂದಿನಂತೆ ನಿನ್ನೆಯೂ ಅವರು ಬಂದ ವೇಳೆ ಕೊಲೆ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಮರ್ಯಾದಾ ಹತ್ಯೆ ಯತ್ನ; ಅದೃಷ್ಟವಶಾತ್ 4 ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರು

ಮಾಹಿತಿಗಳ ಪ್ರಕಾರ ಮಧ್ಯಾಹ್ನ 4 ಗಂಟೆ ಸರಿಸುಮಾರಿಗೆ ಪೇಟೆ ಬೀದಿಯಿಂದ ಮನೆಗೆ ಬಂದಿದ್ದ ಶೋಭಾರನ್ನು ಆರೋಪಿ ಹಿಂಬಾಲಿಸಿದ್ದಾನೆ. ಇವರ ಮೈಮೇಲಿದ್ದ ಸುಮಾರು 100 ಗ್ರಾಂಗಳಿಗೂ ಹೆಚ್ಚು ತೂಕದ ಒಡವೆ ಆರೋಪಿ ಕಣ್ಣಿಗೆ ಬಿದ್ದಿದೆ. ಹೀಗಾಗಿ ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿ, ತನ್ನ ಬಳಿಯಿದ್ದ ಚಾಕುವಿನಿಂದ ಶೋಭಾರ ಕತ್ತು ಸೀಳಿದ್ದಾನೆ. ಆತನ ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಬಳಿಕ ಶೋಭಾರ ಮೈಮೇಲಿದ್ದ ಚಿನ್ನಾಭರಣವನ್ನು ಆರೋಪಿ ದೋಚಿ ಎಸ್ಕೇಪ್​​ ಆಗಿದ್ದಾನೆ. ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲಿಸರು ಸೇರಿದ್ದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

ವರದಿ: ಮಂಜುನಾಥ್​, ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹುಚ್ಚು ಪ್ರೀತಿ ಹಾಗೂ ಅನುಮಾನ; ಮಾಜಿ ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿದ ಮೃಣಾಲ್ ಠಾಕೂರ್ – Kannada News | Mrunal Thakur’s Candid Revelation: Ex Boyfriend’s Insecurity During ‘Super 30’ and Marriage Rumors

ಮೃಣಾಲ್ ಠಾಕೂರ್ (Mrunal Thakur) ಅವರು ಎಲ್ಲ ವಿಷಯಗಳನ್ನು ಓಪನ್ ಆಗಿ ಮಾತನಾಡಲು ಬಯಸುತ್ತಾರೆ. ಯಾವುದೇ ಮುಚ್ಚುಮರೆ ಇಲ್ಲದೆ ಅವರು ತಮ್ಮ ಬಗ್ಗೆ ಕೇಳಿ ಬರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡುತ್ತಾರೆ. ಈಗ ಅವರು ತಮ್ಮ ಮುಂದಿನ ಸಿನಿಮಾ ‘ದೋ ದೀವಾನೆ ಶೆಹರ್ ಮೇ’ ಚಿತ್ರದ ಪ್ರಚಾರದ ವೇಳೆ ತಮ್ಮ ಮಾಜಿ ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ. ಆತ ಅಕ್ಷರಶಃ ಹುಚ್ಚನಂತೆ ನಡೆದುಕೊಳ್ಳುತ್ತಿದ್ದ ಎಂದು ವಿವರಿಸಿದ್ದಾರೆ.

2019ರಲ್ಲಿ ಮೃಣಾಲ್ ಠಾಕೂರ್ ನಟನೆಯ ‘ಸೂಪರ್ 30’ ಹೆಸರಿನ ಸಿನಿಮಾ ಬಂತು. ಹೃತಿಕ್ ರೋಷನ್ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಶೂಟಿಂಗ್ ಸಮಯದಲ್ಲಿ ಮೃಣಾಲ್ ಬಾಯ್​ಫ್ರೆಂಡ್ ನಡೆದುಕೊಳ್ಳುತ್ತಿದ್ದ ರೀತಿ ಅವರಿಗೆ ಶಾಕಿಂಗ್ ಎಂದೆನಿಸುತ್ತಿತ್ತು.

‘ನನ್ನ ಮಾಜಿಬಾಯ್​​ಫ್ರೆಂಡ್ ವಿದೇಶಿಗ ಆಗಿದ್ದ. ನಾನು ಹೃತಿಕ್ ರೋಷನ್ ಅವರಂತಹ ಸುಂದರ ಹೀರೋ ಜೊತೆ ಸುತ್ತಾಡುತ್ತಿದ್ದೇನೆ ಮತ್ತು ಶೂಟಿಂಗ್ ಮಾಡುತ್ತಿದ್ದೇನೆ ಎಂಬುದು ಆತನ ಭಾವನೆ ಆಗಿತ್ತು. ಹೀಗಾಗಿ, ಆತ ಜಿಮ್​​ನಲ್ಲಿ ವರ್ಕೌಟ್ ಮಾಡಲು ಆರಂಭಿಸಿದ. 15-17 ಕೆಜಿ ತೂಕ ಇಳಿಸಿಕೊಂಡ. ಮಸಲ್​​ಗಳು ಬೆಳೆದವು. ಕಟ್ಟುಮಸ್ತಾಗಿ ಕಾಣಿಸಿಕೊಂಡ’ ಎಂದು ಮೃಣಾಲ್ ಹಳೆಯ ದಿನಗಳನ್ನು ನೆನಪಿಸಿಕೊಂಡರು.

‘ಒಂದು ಹಂತದ ಬಳಿಕ ಆತ ಜಿಮ್ ಹೋಗೋದನ್ನೇ ಬಿಟ್ಟ. ಮನೆಯಲ್ಲಿ ಕುಳಿತು ತಿನ್ನುತ್ತಿದ್ದ. ಆತ 20 ಕೆಜಿ ಹೆಚ್ಚಿಸಿಕೊಂಡ. ಕೇಳಿದರೆ ಸುಸ್ತಾಗಿದೆ ಎನ್ನುತ್ತಿದ್ದ. ನಾನು ಅವನ ಬಳಿ ತೂಕ ಇಳಿಸಿಕೋ ಎಂದು ಯಾವಾಗಲೂ ಹೇಳಿಲ್ಲ. ನಾನು ಬೇರೆಯವರ ಜೊತೆ ಸುತ್ತಾಡುತ್ತೇನೆ ಎಂಬ ಅಭದ್ರತಾ ಭಾವನೆ ಆತನದ್ದಾಗಿತ್ತು’ ಎಂದು ಅವರು ಹೇಳಿದ್ದಾರೆ.

ಇನ್ನು ಮದುವೆ ವಿಷಯದಲ್ಲಿ ಮಾತನಾಡಿದ್ದ ಮೃಣಾಲ್ ಠಾಕೂರ್, ‘ನನ್ನ ಮದುವೆ ಫೆಬ್ರವರಿ 14ಕ್ಕೆ ಅಲ್ಲ, ಏಪ್ರಿಲ್ 1ರಂದು. ಅಂದು ಮೂರ್ಖರ ದಿನ ಅಲ್ಲವೇ’ ಎಂದು ಕೇಳಿದ್ದರು. ಈ ಮೂಲಕ ವದಂತಿಗಳು ಅವರ ಅಭಿಮಾನಿಗಳನ್ನು ಮೂರ್ಖರನ್ನಾಗಿ ಮಾಡಿದೆ ಎಂದು ಸ್ಪಷ್ಟವಾಗಿ ಹೇಳಿದರು.

ಇದನ್ನೂ ಓದಿ: ಧನುಶ್ ಜೊತೆ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ ಮೃಣಾಲ್ ಠಾಕೂರ್

ಮೃಣಾಲ್ ಠಾಕೂರ್ ಅವರು ‘ಸೀತಾ ರಾಮಂ’ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಅಂದಕ್ಕೆ ಎಲ್ಲರೂ ಮನಸೋತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಈ ಜಿಲ್ಲೆಗಳಲ್ಲಿ ಶಾಖದ ತೀವ್ರತೆ ಹೆಚ್ಚಾಗಲಿದೆ, ದೇಹದ ಚರ್ಮದ ಬಗ್ಗೆ ಇರಲಿ ಎಚ್ಚರ – Kannada News | Karnataka Braces for Early Summer; Kalaburagi Crosses 37°C, No Rain

ಬೆಂಗಳೂರು, ಫೆ. 19: ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ (Karnataka weather) ಇಂದು (ಫೆ.19) ಭಾರೀ ಬಿಸಿಲಿನ ವಾತಾವರಣ ಇರಲಿದೆ. ಈ ಬಗ್ಗೆ ಹವಾಮಾನ ಇಲಾಖೆ ವರದಿಯನ್ನು ನೀಡಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿದಿದ್ದು, ಗರಿಷ್ಠ ತಾಪಮಾನದಲ್ಲಿ ಏರಿಕೆಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಆಕಾಶವು ಭಾಗಶಃ ಮೋಡದಿಂದ ಕೂಡಿರಲಿದ್ದು, ಬೆಳಿಗ್ಗೆ ಮಂಜು ಮುಸುಕಿದ ವಾತಾವರಣವಿತ್ತು. ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 18°C ಆಸುಪಾಸಿನಲ್ಲಿರಲಿದೆ ಎಂದು ಇಲಾಖೆ ಹೇಳಿದೆ.

ಕಲಬುರಗಿ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಗರಿಷ್ಠ ತಾಪಮಾನವು 35°C ನಿಂದ 37°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಹವಾಮಾನವು ಸಾಮಾನ್ಯವಾಗಿದ್ದು, ತೇವಾಂಶ (Humidity) ಹೆಚ್ಚಿರಲಿದೆ. ಗರಿಷ್ಠ ತಾಪಮಾನ 34°C ಇರಲಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಹವಾಮಾನವು ಹಿತಕರವಾಗಿದ್ದರೂ, ಮಧ್ಯಾಹ್ನದ ವೇಳೆ ಬಿಸಿಲು ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ.

ಜಿಲ್ಲೆ ಗರಿಷ್ಠ ತಾಪಮಾನ ಕನಿಷ್ಠ ತಾಪಮಾನ ಹವಾಮಾನದ ಸ್ಥಿತಿ
ಬೆಂಗಳೂರು ನಗರ 32°C 18°C ಶುಭ್ರ ಆಕಾಶ, ಮಧ್ಯಾಹ್ನ ಬಿಸಿಲು ಹೆಚ್ಚಿರಲಿದೆ.
ಮೈಸೂರು 33°C 19°C ಒಣ ಹವಾಮಾನ,  ಮಳೆಯ ಮುನ್ಸೂಚನೆ ಇಲ್ಲ.
ಕಲಬುರಗಿ 38°C 22°C ತೀವ್ರ ಬಿಸಿಲು, ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ತಾಪಮಾನ.
ಮಂಗಳೂರು 34°C 24°C ಸೆಖೆ ಮತ್ತು ತೇವಾಂಶ ಭರಿತ ವಾತಾವರಣ.
ಬೆಳಗಾವಿ 34°C 17°C ಹಗಲು ಬಿಸಿಲು, ರಾತ್ರಿ ಮತ್ತು ಮುಂಜಾನೆ ತಂಪು.
ಶಿವಮೊಗ್ಗ 35°C 18°C ಮಲೆನಾಡು ಭಾಗದಲ್ಲಿ ತಾಪಮಾನ ಏರಿಕೆ ಕಂಡುಬಂದಿದೆ.
ಬಳ್ಳಾರಿ 37°C 21°C ತೀವ್ರ ಶಾಖದ ಅಲೆಗಳ ಮುನ್ಸೂಚನೆ.

ಮಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 31°C ಮತ್ತು ಕನಿಷ್ಠ 24°C ಇರಲಿದೆ. ಆಕಾಶವು ಶುಭ್ರವಾಗಿದ್ದು, ತೇವಾಂಶದ ಮಟ್ಟ ಶೇ. 74 ರಷ್ಟಿರುತ್ತದೆ. ಬಿಸಿಲಿನ ತೀವ್ರತೆ ಹೆಚ್ಚಿರಲಿದೆ. ಉಡುಪಿಯ ಹವಾಮಾನವು ಕೂಡ ಮಂಗಳೂರಿನಂತೆಯೇ ಇರಲಿದ್ದು, ಗರಿಷ್ಠ ತಾಪಮಾನ 31°C ಮತ್ತು ಕನಿಷ್ಠ 23°C ದಾಖಲಾಗಲಿದೆ. ಸಮುದ್ರ ತೀರದ ಭಾಗದಲ್ಲಿ ಸೆಖೆ ಹೆಚ್ಚಿರಬಹುದು. ಮಲೆನಾಡಿನ ಈ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 29°C ಮತ್ತು ಕನಿಷ್ಠ 17°C ಇರಲಿದೆ. ಮುಂಜಾನೆ ಚಳಿ ಇದ್ದರೂ, ಹಗಲಿನಲ್ಲಿ ಹಿತಕರವಾದ ಬಿಸಿಲಿರುತ್ತದೆ. ಹಾಸನದಲ್ಲಿ ಇಂದು ಗರಿಷ್ಠ 30°C ಮತ್ತು ಕನಿಷ್ಠ 17°C ತಾಪಮಾನವಿರಲಿದೆ. ಒಣ ಹವಾಮಾನ ಮುಂದುವರಿಯಲಿದ್ದು, ಮಳೆಯ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾತ್ರಿ 11 ಆದ್ರೂ ನಿದ್ದೆ ಬರಲ್ವಾ? ಹಾಗಿದ್ರೆ ಡಯಟ್, ವ್ಯಾಯಾಮ ಏನು ಮಾಡ್ಬೇಡಿ ಎಲ್ಲಾ ವ್ಯರ್ಥ!

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಬೇಸಿಗೆಯ ಬಿಸಿಲು ಈಗಲೇ ಪ್ರಾರಂಭವಾಗಿದ್ದು, ಇದು ಇನ್ನು ಹೆಚ್ಚಾಗಲಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಮತ್ತು ಬಳ್ಳಾರಿ ಭಾಗದಲ್ಲಿ ಗರಿಷ್ಠ ತಾಪಮಾನ 32°C ನಿಂದ 34°C ವರೆಗೆ ಇರಲಿದೆ. ಕಲಬುರಗಿ ಮತ್ತು ರಾಯಚೂರು ಭಾಗದಲ್ಲಿ ತಾಪಮಾನವು 37°C ದಾಟುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಉತ್ತರ ಒಳನಾಡಿನಲ್ಲಿ ಒಣ ಹವಾಮಾನವಿದ್ದು, ಶಾಖದ ತೀವ್ರತೆ ಹೆಚ್ಚಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ಮಕ್ಕಳು ಮಾತನಾಡುವಾಗ ತೊದಲುತ್ತಿದ್ರೆ ಜ್ಯೋತಿಷ್ಯ ಪ್ರಕಾರ ಇದೇ ಕಾರಣ – Kannada News | Addressing Childrens Speech Challenges: Insights from Astrology and Traditional Practices

ಬೆಂಗಳೂರು, ಫೆ.19: ಮಕ್ಕಳು ಮಾತನಾಡುವಾಗ ತೊದಲುತ್ತಿದ್ದರೆ ಅಥವಾ ಮಾತು ತಡವಾಗಿದ್ದರೆ ಪೋಷಕರಿಗೆ ಇದು ಸಾಮಾನ್ಯ ಆತಂಕ. ವೈದ್ಯಕೀಯವಾಗಿ ಯಾವುದೇ ಗಂಭೀರ ಸಮಸ್ಯೆ ಇಲ್ಲದಿದ್ದರೂ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಇದಕ್ಕೆ ಕೆಲವು ಪರಿಹಾರಗಳಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ಬುದ್ಧಿಶಕ್ತಿಗೆ ಮತ್ತು ಶುಕ್ರ ಗ್ರಹವು ಮಾತು ಹಾಗೂ ಕಂಠಕ್ಕೆ ಕಾರಕರು. ಇವುಗಳ ಅನುಗ್ರಹ ಮಾತಿನ ಬೆಳವಣಿಗೆಗೆ ಮುಖ್ಯ. ಮಕ್ಕಳ ಕೊಠಡಿಯಲ್ಲಿ ಹಸಿರು ಬಣ್ಣ ಹೆಚ್ಚಾಗಿ ಇರುವಂತೆ ನೋಡಿಕೊಳ್ಳುವುದು, ಅಂದರೆ ವಾಲ್‌ಪೇಪರ್ ಅಥವಾ ಗೋಡೆಗೆ ತಿಳಿ ಹಸಿರು ಬಣ್ಣ ಬಳಸುವುದು ಉತ್ತಮ. ಪ್ರತಿ ಬುಧವಾರ ನೆನೆಸಿದ ಹೆಸರು ಕಾಳನ್ನು ಮಕ್ಕಳಿಗೆ ದಾನ ಮಾಡಿಸುವುದು ಮಂಗಳಕರ. ವಾಕ್ಚಾತುರ್ಯದ ದೇವತೆಯಾದ ಸರಸ್ವತಿಯ ಆಶೀರ್ವಾದ ಪಡೆಯಲು, ಗುರುಗಳ ಕೈಯಿಂದ ಗುರುವಾರದಂದು ಬೆಳ್ಳಿಯ ಕಡ್ಡಿಯಿಂದ ನಾಲಿಗೆಯ ಮೇಲೆ ಐಂ ಬೀಜಾಕ್ಷರವನ್ನು ಬರೆಸುವುದು ಒಂದು ಸಂಪ್ರದಾಯ. ಗಾಯತ್ರಿ ಮಂತ್ರವನ್ನು ಮನೆಯಲ್ಲಿ ಪಠಿಸುವುದು ಅಥವಾ ಕೇಳಿಸುವುದು ಮಗುವಿನ ಬುದ್ಧಿಶಕ್ತಿ ಮತ್ತು ಮಾತಿನ ಸಾಮರ್ಥ್ಯವನ್ನು ವೃದ್ಧಿಸುತ್ತದೆ. ಹಯಗ್ರೀವ ಸ್ತೋತ್ರ ಪಠಣ ಮತ್ತು ದಕ್ಷಿಣಾಮೂರ್ತಿ ದರ್ಶನವೂ ಸಹ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಬಲಮುರಿ ಶಂಖದಿಂದ ಜೇನುತುಪ್ಪವನ್ನು ಮಗುವಿನ ನಾಲಿಗೆಗೆ ಸ್ಪರ್ಶಿಸುವುದು ಸಹ ಶುಭ ಫಲಿತಾಂಶ ನೀಡುತ್ತದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hassan: ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಕಾರು – Kannada News | Drunk Driver Loses Control, Car Crashes Into House in Yalagunda Village, Hasan

ಹಾಸನ, ಫೆಬ್ರವರಿ 19: ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಕಾರು ನೇರವಾಗಿ ರಸ್ತೆ ಬದಿಯ ಮನೆಗೆ ನುಗ್ಗಿರುವ ಘಟನೆ ಹಾಸನ ಜಿಲ್ಲೆಯ ಯಲಗುಂದ ಗ್ರಾಮದಲ್ಲಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿದ್ದರೆ, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗ್ತಿದ್ದು, ಕಾರಲ್ಲಿದ್ದವರು ಪುರದಮ್ಮ ದೇವಸ್ಥಾನದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದರು ಎನ್ನಲಾಗಿದೆ. ಕಾರು ಗುದ್ದಿದ ರಭಸಕ್ಕೆ ಮನೆಗೆ ತೀವ್ರ ಹಾನಿಯಾಗಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

 Daily Horoscope: ಇಂದು ರಾಶಿಯವರಿಗೆ ದೊಡ್ಡ ಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ

ಬೆಂಗಳೂರು, ಫೆ.19:  ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಇಂದಿನ (ಫೆ.19) ದ್ವಾದಶ ರಾಶಿಗಳ ಫಲಾಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದ ಶುಕ್ಲಪಕ್ಷದ ಬಿದಿಗೆ ತಿಥಿ, ಪೂರ್ವಾಭಾದ್ರ ನಕ್ಷತ್ರದಿಂದ ಕೂಡಿರುವ ವಿಶೇಷ ದಿನವಾಗಿದೆ. ರವಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, ಇದು ಹಲವು ರಾಶಿಗಳಿಗೆ ಶುಭ ಫಲ ನೀಡಲಿದೆ. ಮೇಷ ರಾಶಿಗೆ ಜವಾಬ್ದಾರಿಗಳು ಹೆಚ್ಚಾದರೂ, ಉದ್ಯೋಗದಲ್ಲಿ ಶುಭವಾಗಲಿದೆ. ವೃಷಭ ರಾಶಿಯವರು ಹಣ ಗಳಿಕೆಯಲ್ಲಿ ಆಸಕ್ತಿ ತೋರಲಿದ್ದು, ಹಳೆಯ ಬಾಕಿ ವಸೂಲಿಯಾಗಲಿದೆ. ಮಿಥುನ ರಾಶಿಯವರಿಗೆ ಹಳೆಯ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ. ಕರ್ಕಾಟಕ ರಾಶಿಯವರಿಗೆ ಮಾತು ಮತ್ತು ಹಣಕಾಸಿನ ವಿಷಯದಲ್ಲಿ ಶುಭವಾಗಲಿದೆ. ಸಿಂಹ ರಾಶಿಯವರ ಆತ್ಮವಿಶ್ವಾಸ ಗಟ್ಟಿಯಾಗಿದ್ದು, ಕಾರ್ಯಗಳಲ್ಲಿ ಯಶಸ್ಸು ಸಾಧಿಸುವರು. ಕನ್ಯಾ ರಾಶಿಯವರಿಗೆ ಆಕಸ್ಮಿಕ ಧನಯೋಗ ಮತ್ತು ಕಾರ್ಯಸಿದ್ಧಿ ಲಭಿಸಲಿದೆ. ತುಲಾ ರಾಶಿಯವರಿಗೆ ಹೊಸ ಅವಕಾಶಗಳು ಒದಗಿ ಬರಲಿದ್ದು, ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವೃಶ್ಚಿಕ ರಾಶಿಯವರಿಗೆ ಆಕಸ್ಮಿಕ ಧನಯೋಗ ಮತ್ತು ಅವಿವಾಹಿತರಿಗೆ ಶುಭ ಸಮಾಚಾರವಿದೆ. ಧನುಸ್ಸು ರಾಶಿಯವರಿಗೆ ಬಿಡುವಿಲ್ಲದ ಕೆಲಸ ಮತ್ತು ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಯೋಗವಿದೆ. ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಪ್ರಮೋಷನ್ ಲಭಿಸಲಿದೆ. ಕುಂಭ ರಾಶಿಯವರಿಗೆ ತಂದೆ-ತಾಯಿಗಳ ಆರೋಗ್ಯದ ಬಗ್ಗೆ ಚಿಂತೆ ಕಾಡಬಹುದು, ಆದರೆ ಸಂಧ್ಯಾಕಾಲದಲ್ಲಿ ಶುಭ ಸುದ್ದಿ ದೊರೆಯಲಿದೆ. ಮೀನ ರಾಶಿಯವರಿಗೆ ಹೂಡಿಕೆಯಿಂದ ಲಾಭ ಮತ್ತು ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಬಣ್ಣ, ಸಂಖ್ಯೆ ಹಾಗೂ ವಿಶೇಷ ಮಂತ್ರಗಳನ್ನು ಸೂಚಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಸಂಗಾತಿಯ ಬಗ್ಗೆ ಅಪಾರ್ಥ ತಿಳಿದುಕೊಳ್ಳುವರು… – Kannada News | Horoscope 19 Thursday 2026; Dina Rashi Bhavishya Today, Checkout the details here

ಮೇಷ ರಾಶಿ:

ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು. ಅಧ್ಯಾತ್ಮದಿಂದ ಆತ್ಮಬಲದ ವೃದ್ಧಿ. ಮನೆಯ ವಿಷಮ ಸ್ಥಿತಿಯನ್ನು ನಿಭಾಯಿಸುವಿರಿ. ಸಂಗಾತಿಗೆ ನಿಮ್ಮ ವಾಸ್ತವದ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಧಾರ್ಮಿಕ ಶ್ರದ್ಧೆಯಿಂದ ಅನುಕೂಲತೆ ಇರಲಿದೆ. ಮಿತ್ರರ ಧನಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿನೀತ ವೇಷವೇ ನಿಮಗೆ ಶೋಭೆ.

ವೃಷಭ ರಾಶಿ:

ಯಾರ ಕಣ್ತಪ್ಪಿಸಿಯೂ ನೀವು ವ್ಯವಹಾರವನ್ನು ಮಾಡಲಾಗದು. ಮಾತಿನಲ್ಲಿ ಮೃದುತ್ವವನ್ನು ಇತರರಿಗೂ ಇಷ್ತವಾದೀತು. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಇರುವರು. ಅಪರಿಚಿತರ ಜೊತೆ ಸಲುಗೆಯ ವ್ಯವಹಾರವು ಬೇಡ. ಸಂಗಾತಿಯ ಮಾತು ನಿಮಗೆ ಇಷ್ಟವಾಗದು. ಆದರೆ ನೇರವಾಗಿ ಹೇಳಲು ಧೈರ್ಯ ಸಾಲದು.

ಮಿಥುನ ರಾಶಿ:

ಮಕ್ಕಳು ಹೇಳಿದ್ದನ್ನು ನೀಡುವಿರಿ. ಮಕ್ಕಳ ದುರ್ಬಲ ಮನಸ್ಸಿಗೆ ಸರಿಯಾದ ಮಾರ್ಗದರ್ಶನ ಬೆಂಬಲದ ಅಗತ್ಯವಿದೆ. ಹೊಸ ಉದ್ಯಮದ ಸಲುವಾಗಿ ಉದ್ಯಮಿಗಳನ್ನು ಭೇಟಿ ಮಾಡುವಿರಿ. ಸಾಲವನ್ನು ಮಾಡಬೇಕಾಗಿಬರಬಹುದು. ಅತಿಯಾದ ಆನಂದದ ಮಧ್ಯದಲ್ಲಿ ದುಃಖವೂ ಇದೆ. ಕಛೇರಿಯ ಒತ್ತಡದಿಂದ ವಿರಾಮವನ್ನು ಪಡೆದು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಉದ್ಯೋಗದ ನಿಮಿತ್ತ ಅನಿವಾರ್ಯವಾಗಿ ಓಡಾಟ ಮಾಡುವ ಸಂದರ್ಭವು ಬರಬಹುದು.

ಕರ್ಕಾಟಕ ರಾಶಿ:

ಯಾರದೋ ತಪ್ಪಿನಿಂದ ಅಕಸ್ಮಾತ್ ಆಗಿ ವಾಹನದಿಂದ ಬೀಳುವ ಸಾಧ್ಯತೆ. ಅಧಿಕಾರದ ಆಮಿಷಕ್ಕೆ ಬಲಿಯಾಗಬಹುದು. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಸಂಗಾತಿಯಿಂದ ಹಣವನ್ನು ಕೇಳಿಪಡೆಯುವಿರಿ. ಪಾಲುದಾರಿಕೆಯಿಂದ ನಿಮಗೆ ಉಪಯೋಗವಾಗಲಿದೆ. ಆರ್ಥಿಕತೆಯ ತೊಂದರೆಯಿಂದ ನಿಮ್ಮ ಕೆಲವು ವಸ್ತುಗಳನ್ನು ಮಾರಾಟ ಮಾಡುವಿರಿ. ನಿಮ್ಮ ಅಪ್ರಾಮಣಿಕತೆಯು ಕೆಲವರಿಗೆ ಗೊತ್ತಾಗಬಹುದು.

ಸಿಂಹ ರಾಶಿ:

ಗೌರವವಿಲ್ಲದೆ ಕಡೆ ಹೋಗಲು ನೀವು ಬಯಸುವುದಿಲ್ಲ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ನಿಗದಿತ ಸಮಯಕ್ಕೆ ಕೆಲಸವಾಗದೇ ಇರುವ ಕಾರಣ ಕೆಲಸವನ್ನು ಕೊಟ್ಟವರು ನಿಮ್ಮ ಮೇಲೆ ಮುನಿಸಿಕೊಂಡಾರು. ನಿಮ್ಮ ಸಂಗಾತಿಯ ಮಾತುಗಳಿಗೆ ಪ್ರಾಮುಖ್ಯತೆ ನೀಡಿ. ನಿಮ್ಮ ಕಾರಣದಿಂದಲೇ ನೊಂದಿರಲೂ ಸಾಕು. ಆಲಸ್ಯದ ಕಾರಣ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗುವುದು. ವ್ಯಾಪಾರವನ್ನು ಹೆಚ್ಚಿನ ಆದಾಯ ಬರುವಂತೆ ಮಾಡಿಕೊಳ್ಳುವಿರಿ.

ಕನ್ಯಾ ರಾಶಿ:

ಅಶಿಸ್ತಿನಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕಾರ್ಯದಲ್ಲಿ ನೀವು ತೊಡಗಿಗೊಳ್ಳಿ. ಹಣಕಾಸಿನ ಅನುಕೂಲತೆಗಳನ್ನು ನೋಡಿ ಮಾತುಕೊಡಿ. ಖಾಲಿ ಇರುವುದು ಬೇಡ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ಪುಣ್ಯ ಸ್ಥಳಗಳ ದರ್ಶನದಿಂದ ಮನಸ್ಸಿಗೆ ಸಮಾಧಾನ. ಸಹೋದ್ಯೋಗಿಯ ಅಸಹಕಾರದಿಂದ ಅವರ ಮೇಲೆ ದ್ವೇಷ. ಆಕಸ್ಮಿಕವಾಗಿ ನಿಮಗೆ ಧನನಷ್ಟವಾಗಲಿದ್ದು ಚಿಂತೆ ಕಾಡುವುದು. ನಿಮ್ಮ ಸಣ್ಣ ತಪ್ಪೂ ಅಪಹಾಸ್ಯಕ್ಕೀಡಾಗುವುದು.

ತುಲಾ ರಾಶಿ:

ವ್ಯಾಪಾರಸ್ಥರು ಹೊಸತನ್ನು ಮಾಡಲು ಇಚ್ಛಿಸುವಿರಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಇಂದು ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ವಿವಾಹವಾದರೂ ಭವಿಷ್ಯದ ಬಗ್ಗೆ ನಕಾರಾತ್ಮಕ ಆಲೋಚನೆಯು ಇರಲಿದೆ. ನಿಮಗೆ ಅಭದ್ರತೆಯು ಕಾಡಬಹುದು. ಮಕ್ಕಳ ಸಂತೋಷದಲ್ಲಿ ನೆಮ್ಮದಿ ಇರಲಿದೆ. ನಿಮ್ಮ ಗೌಪ್ಯ ಸಂಗತಿಗಳು ಹಂಚಿಕೆಯಾಗುವುದು.

ವೃಶ್ಚಿಕ ರಾಶಿ:

ಬಹಳ ದಿನಗಳಿಂದ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಸಣ್ಣ ವ್ಯಾಪಾರಿಗಳು ವ್ಯವಹಾರ ಹೆಚ್ಚಳದ ಬಗ್ಗೆ ಗಮನಹರಿಸಬೇಕು. ಸೌಂದರ್ಯದ ವಿಚಾರದಲ್ಲಿ ಅಸೂಯೆ ತಲೆ ಹಾಕುವುದು. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಧಾರ್ಮಿಕ ಆಚರಣೆಯಲ್ಲಿ ವಿಶ್ವಾಸವು ಕಡಿಮೆಯಾಗಲಿದೆ. ನೀವು ಬಿಟ್ಟರೂ ಸ್ನೇಹಿತರು ನಿಮ್ಮನ್ನು ಬಿಡಲಾರರು. ಸಂಗಾತಿಯು ನಿಮ್ಮನಡೆಯನ್ನು ಅನುಮಾನಸಿಬಹುದು.

ಧನು ರಾಶಿ:

ಅಪಮಾನದಿಂದ ದುರ್ಬಲರಾಗುವ ಸಾಧ್ಯತೆ ಇದೆ. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ದಾಂಪತ್ಯದಲ್ಲಿ ಪರಸ್ಪರ ವಿರೋಧವು ಬರುವಹಾಗಿದ್ದರೂ ಸದ್ಭಾವವನ್ನು ಇಟ್ಟುಕೊಳ್ಳುವುದು ಮುಖ್ಯವಾಗುದು. ಅನಿರೀಕ್ಷಿತ ದೂರಪ್ರಯಾಣದಿಂದ ಖರ್ಚು. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ. ಸ್ತ್ರೀಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ಕುಟುಂಬದಿಂದ ಅನಾದರಕ್ಕೆ ಒಳಗಾಗುವಿರಿ. ಆಕಸ್ಮಿಕ ಧನಲಾಭವು ನಿಮಗೆ ಆಶ್ಚರ್ಯ ಉಂಟಾಗಬಹುದು.

ಮಕರ ರಾಶಿ:

ಆರ್ಥಿಕತೆಗೆ ಸಂಬಂಧಿಸಿದಂತೆ ಮೈಯೆಲ್ಲ ಕಣ್ಣಾಗಬೇಕಾಗುವುದು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವಿರಿ. ಸಹೋದ್ಯೋಗಿಗಳ ಜೊತೆ ವಿವಾದವಾಗಬಹುದು. ಪಾಲುದಾರಿಕೆಯಲ್ಲಿ ರಾಜಕೀಯ ಸೇರುವುದು. ಸ್ತ್ರೀಯರಿಗೆ ಪ್ರಯಾಣದಿಂದ ತೊಂದರೆ. ಯಾರದೋ ಪ್ರಭಾವವನ್ನು ಬಳಸಿ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ವ್ಯವಹಾರದಲ್ಲಿ ಮುಗ್ಗರಿಸುವ ಸಂದರ್ಭವು ಬರಬಹುದು. ನಿಮ್ಮ ಮಾತಿನಲ್ಲಿ ಉದ್ಧಟತನ ಕಾಣಿಸುವುದು. ಏನಾದರೂ ಹೇಳಿ ತಪ್ಪಿಸಿಕೊಳ್ಳುವಿರಿ‌.

ಕುಂಭ ರಾಶಿ:

ಹುಮ್ಮನಸ್ಸಿನಿಂದ ಕೆಲವು ಕೆಲಸಗಳನ್ನು ಪೂರ್ಣಗೊಳಿಸಲು ಬಯಸಿ, ಅನಂತರ ಕೆಲವು ಸವಾಲುಗಳನ್ನು ಅನುಭವಿಸುತ್ತಾರೆ. ಅಧಿಕ ಹೂಡಿಕೆಯನ್ನು ಎಲ್ಲಿಯೋ ಮಾಡಿ ನಷ್ಟ ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಮಾಡಬೇಕು ಎನಿಸಿದ್ದನ್ನು ಹೇಳಿಯೇ ತೀರುವಿರಿ. ನಿಯಮ ಭಂಗದಿಂದ ದಂಡ ಬೀಳುವುದು. ಸ್ನೇಹಿತರು ನಿಮ್ಮನ್ನು ದೂರವಿಟ್ಟಾರು. ಸಂಗಾತಿಯ ಅನಾದರವು ನಿಮ್ಮನ್ನು ಬಹಳ ಕಾಡಬಹುದು.

ಮೀನ ರಾಶಿ:

ನೌಕರರು ಇಂದು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳುವರು. ನಿಮ್ಮ ವಾದವು ವಿಷಯಾಧಾರಿತವಾಗಿರಲಿ, ವ್ಯಕ್ತಿಗತವಾಗುವುದು ಬೇಡ. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ಗ್ರಾಹಕರಿಗೆ ನಿಮ್ಮ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಅಪಘಾತದಿಂದ ಉಂಟಾದ ನೋವಿನಿಂದ ನಿಧಾನವಾಗಿ ಆಚೆ ಬರಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಧನಿಷ್ಠಾ, ವಾರ : ಗುರು, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 29 pm, ಇಂದಿನ ಶುಭಾಶುಭ ಕಾಲ : ರಾಹು 14:06 – 15:34, ಯಮಗಂಡ ಕಾಲ 06:47 – 08:15, ಗುಳಿಕ ಕಾಲ 09:43 – 11:11

-ಲೋಹಿತ ಹೆಬ್ಬಾರ್ – 8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 19ರ ದಿನಭವಿಷ್ಯ

ಲಕ್ಷ್ಮೀನರಸಿಂಹ ದೇವಾಲಯಕ್ಕೆ ತೆರಳಿ ತುಳಸಿ ಮಾಲೆಯನ್ನು ಸಮರ್ಪಣೆ ಮಾಡಿ. ಇದರಿಂದಾಗಿ ನಿಮ್ಮನ್ನು ಕಾಡುತ್ತಿರುವ ಆತಂಕ, ಹಿಂಜರಿಕೆ ಹಾಗೂ ಮಾನಸಿಕ ಕ್ಲೇಶ ದೂರವಾಗುತ್ತದೆ. ಯಾವುದೇ ಕೆಲಸವನ್ನು ಮಾಡಬೇಕೋ ಬೇಡವೋ ಎಂಬ ದ್ವಂದ್ವ ಇದ್ದಲ್ಲಿ ಸ್ಪಷ್ಟತೆ ಸಿಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಸಮಯದೊಳಗೆ ಪೂರ್ಣಗೊಳಿಸಬೇಕಾದ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿ ಮುಗಿಸಿ. ಇನ್ನು ನೀವೇನಾದರೂ ಹಣ್ಣು- ಹೂವು, ತರಕಾರಿ ಇಂಥವುಗಳ ವ್ಯಾಪಾರವನ್ನು ಮಾಡುವವರಾದರೆ ಹೊಸದಾಗಿ ಹೂಡಿಕೆ ಮಾಡುವ ಕಡೆಗೆ ಆದ್ಯತೆಯನ್ನು ನೀಡಲಿದ್ದೀರಿ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ವಿಚಾರ ಪ್ರಸ್ತಾವ ಮಾಡುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಚಾಲಕ ವೃತ್ತಿಯಲ್ಲಿ ಇರುವಂಥವರಿಗೆ ಒತ್ತಡದ ದಿನ ಇದಾಗಿರುತ್ತದೆ. ನೀವು ಓಡಿಸುವ ವಾಹನದ ಸರ್ವೀಸ್ ಆಗಿದೆಯಾ, ಅದು ಎಲ್ಲ ರೀತಿಯಲ್ಲೂ ಉತ್ತಮವಾದ ಸ್ಥಿತಿಯಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಕ್ಷೇಮ. ಈ ದಿನ ಸಾಧ್ಯವಾದಲ್ಲಿ ಹನುಮಂತ ದೇವರ ದೇವಾಲಯಕ್ಕೆ ತೆರಳಿ ದರ್ಶನವನ್ನು ಪಡೆಯಿರಿ. ಬ್ಯಾಂಕ್ ಉದ್ಯೋಗಿಗಳಿಗೆ ಟಾರ್ಗೆಟ್ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಸ್ನೇಹಿತರಿಗೆ ಕೊಟ್ಟ ಮಾತಿನಂತೆಯೇ ನಡೆದುಕೊಳ್ಳುವುದು ಈ ದಿನ ನಿಮಗೆ ಆದ್ಯತೆಯಾಗಲಿದೆ. ಕಟ್ಟಡ ನಿರ್ಮಾಣ, ರಿನೋವೇಷನ್ ಇಂಥದ್ದನ್ನು ಮಾಡಿಸುತ್ತಾ ಇರುವವರಿಗೆ ಏಕ ಕಾಲಕ್ಕೆ ಹಲವು ಕೆಲಸಗಳು ಹುಡುಕಿಕೊಂಡು ಬರಲಿವೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಆಪ್ತರಾದವರು ಕೆಲಸ ಬಿಡುವ ತೀರ್ಮಾನ ಮಾಡುವ ಸಾಧ್ಯತೆ ಇದೆ. ಉದ್ಯೋಗಸ್ಥರಿಗೆ ನಿಮ್ಮ ಮೇಲೆ ಸಂಸ್ಥೆಗೆ ವಿಪರೀತ ನಿರೀಕ್ಷೆ ಇದೆ ಎಂಬುದು ಗಮನಕ್ಕೆ ಬರಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ; ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 19ರ ದಿನಭವಿಷ್ಯ

ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆದು ಬಿಳಿ ಹೂವಿನಿಂದ ಕಟ್ಟಿದ ಮಾಲೆಯನ್ನು ದೇವಿಗೆ ಅರ್ಪಿಸುವುದರಿಂದ ದೀರ್ಘ ಕಾಲದಿಂದ ಬಾಕಿ ಉಳಿದ ಕೆಲಸ- ಕಾರ್ಯಗಳು ಪೂರ್ಣಗೊಳ್ಳಲಿವೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗಲಿದೆ.

 

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಚಿನ್ನದ ಬಾಂಡ್ ಅಥವಾ ಇಟಿಎಫ್ ನಲ್ಲಿ ಈಗಾಗಲೇ ಹಣ ಹಾಕಿದ್ದೀರಿ ಅಂತಾದಲ್ಲಿ ಅದನ್ನು ಹಿಂತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮೂಡಲಿದೆ. ಮನೆಯಲ್ಲಿ ಮಾಡಿಸಬೇಕಾದ ಕೆಲಸಗಳು ಇದ್ದಲ್ಲಿ ಅದರ ಬಗ್ಗೆ ಸಂಬಂಧಪಟ್ಟವರನ್ನು ಕರೆಸಿ ಮಾತುಕತೆ ಆಡಲು ಮುಂದಾಗುತ್ತೀರಿ. ಅದೇ ರೀತಿ ಮನೆಯಲ್ಲಿ ಇರುವಂಥ ಹಾಗೂ ಸದ್ಯಕ್ಕೆ ಬಳಕೆ ಮಾಡದಿರುವಂಥ ಕೆಲವು ವಸ್ತುಗಳ ಮಾರಾಟ ಮಾಡುವ ಯೋಗ ಸಹ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ವಿದೇಶದಲ್ಲಿ ವ್ಯಾಸಂಗ/ ಉದ್ಯೋಗ ಮಾಡಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಹೋಟೆಲ್ ಉದ್ಯಮವನ್ನು ನಡೆಸುತ್ತಿರುವವರಿಗೆ ವಿಸ್ತರಣೆ ಬಗ್ಗೆ ಆಲೋಚನೆ ಬರಲಿದೆ. ಇನ್ನು ಇದಕ್ಕಾಗಿಯೇ ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಇಲ್ಲಿಯವರೆಗೆ ನಾನಾ ಕಾರಣಗಳಿಂದ ವಿಳಂಬ ಆಗುತ್ತಿರುವ ಪ್ರಕ್ರಿಯೆಗೆ ವೇಗ ದೊರೆಯಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹೊಸ ಕಾರು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರು ಅಲ್ಲಿಂದ ಮುಂದಿನ ಹಂತಕ್ಕೆ ಉದ್ದೇಶವನ್ನು ಒಯ್ಯುವ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸುವವರು ಖರ್ಚಿನ ಮೇಲೆ ಹತೋಟಿ ಇರಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಿಮಗೆ ಅಗತ್ಯ ಇಲ್ಲದ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರು ಹಳೇ ಆಸ್ತಿ ವ್ಯಾಜ್ಯಗಳು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುವುದಿಲ್ಲ ಎಂಬುದು ಖಚಿತವಾಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 19ರ ದಿನಭವಿಷ್ಯ

ಮೂರು ಅಥವಾ ಐವರು ಮುತ್ತೈದೆಯರಿಗೆ ಈ ದಿನ ಸಂಜೆಯ ವೇಳೆ ಅರಿಶಿನ- ಕುಂಕುಮ, ಕುಪ್ಪಸದ ಕಣದೊಂದಿಗೆ ನೀಡಿ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂಬ ಪ್ರಯತ್ನದಲ್ಲಿ ಇದ್ದಲ್ಲಿ, ಸಾಲ ತೀರಿಸುವ ಪ್ರಯತ್ನ ಮಾಡುತ್ತಿದ್ದಲ್ಲಿ ಶುಭ ಬೆಳವಣಿಗೆಗಳು ಆಗಲಿವೆ.

 

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಜೊತೆಯಲ್ಲಿ ಇರುವ ಕುಟುಂಬ ಸದಸ್ಯರು ಅಥವಾ ಸಹೋದ್ಯೋಗಿಗಳು ಏನು ಆಲೋಚನೆ ಮಾಡುತ್ತಾರೆ ಹಾಗೂ ಆಯಾ ಸನ್ನಿವೇಶಕ್ಕೆ ತಕ್ಕಂತೆ ನಿರ್ಧಾರ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದಲ್ಲಿ ಆದಾಯ ಹೆಚ್ಚಳ ಆಗಲಿದೆ. ಹೊಸದಾದ ಆದಾಯ ಮೂಲಗಳು ತೆರೆದುಕೊಳ್ಳಲಿವೆ. ಶ್ವಾಸಕೋಶದ ಸಮಸ್ಯೆ ಇರುವವರು ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮನೆ ಅಥವಾ ಜಮೀನಿಗೆ ಸಂಬಂಧಿಸಿದ ಕಾಗದಪತ್ರ/ದಾಖಲೆಗಳನ್ನು ಹೊಂದಿಸಿಕೊಳ್ಳುತ್ತಾ ಇದ್ದಲ್ಲಿ ನಿಮಗೆ ಮತ್ತೊಬ್ಬರ ಸಹಾಯದಿಂದ ದೊರೆಯಲಿದೆ. ಹಳೇ ಪರಿಚಯದ ವ್ಯಕ್ತಿಯೊಬ್ಬರು ಈ ಹಿಂದೆ ನೀವು ಮಾಡಿಕೊಟ್ಟ ಕೆಲಸಕ್ಕೆ ಪ್ರತಿಯಾಗಿ ಉಡುಗೊರೆ ಅಥವಾ ಹಣವನ್ನು ನೀಡಬಹುದು. ಟೈಲ್ಸ್- ಗ್ರಾನೈಟ್ ಹಾಕುವಂಥ ಕೆಲಸ ಮಾಡುವವರಿಗೆ ದೊಡ್ಡ ಮಟ್ಟದ ಕೆಲಸವೊಂದು ಹುಡುಕಿಕೊಂಡು ಬರುವ ಯೋಗ ಇದ್ದು, ಆದಾಯವೂ ಜಾಸ್ತಿಯಾಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಗಳಿಗೆ ಸ್ವಲ್ಪ ಮುಂಚಿತವಾಗಿಯೇ ಬಂದು ಸಹಾಯ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು. ಇನ್ನು ಮನೆಗೆ ಟೀವಿ, ಸ್ಪೀಕರ್ ಈ ರೀತಿಯಾದದ್ದನ್ನು ಖರೀದಿಸಬೇಕು ಎಂದು ತೀರ್ಮಾನವನ್ನು ಮಾಡಲಿದ್ದೀರಿ. ಅಧ್ಯಾತ್ಮ ವಿಚಾರಗಳಲ್ಲಿಯೂ ತೊಡಗಿಕೊಳ್ಳುವ ಯೋಗ ಬರಲಿದೆ. ಅಧ್ಯಾತ್ಮ ಕಾರ್ಯಕ್ರಮಗಳಿಗೆ ದೇಣಿಗೆ ಕೇಳಿಕೊಂಡು ಬಂದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು/ ನಿಮ್ಮಿಂದ ಸಾಧ್ಯವಾದದ್ದನ್ನು ನೀಡಿ.

ಲೇಖನ- ಸ್ವಾತಿ ಎನ್.ಕೆ.

 

Source link