ಬೆಂಗಳೂರು, ಫೆಬ್ರವರಿ 18: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆಯ ಆಯಸ್ಸು ಎಷ್ಟು ವರ್ಷ ಅದನ್ನು ತಿಳಿದುಕೊಳ್ಳುವುದು ಹೇಗೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸಾಮಾನ್ಯವಾಗಿ ಮನೆ ಕಟ್ಟುವಾಗ ನಾವು ಜಾತಕ, ವಾಸ್ತುಪುರುಷನ ಸ್ಥಿತಿ ಮತ್ತು ಎಂಟು ಆಯಗಳಾದ ಧ್ವಜಾಯ, ಧೂಮ್ರಾಯ, ಕಾಕಾಯ, ಸಿಂಹಾಯ, ವೃಷಭಾಯ, ಗಜಾಯ, ಖರಾಯ ಇವುಗಳನ್ನು ಪರಿಗಣಿಸುತ್ತೇವೆ. ಆದರೆ, ಇವುಗಳ ಆಧಾರದ ಮೇಲೆ ಮಾತ್ರ ಮನೆಯ ನಿಜವಾದ ಆಯಸ್ಸನ್ನು ನಿರ್ಧರಿಸುವುದು ಕಷ್ಟ ಎಂದು ವಿವರಿಸಲಾಗಿದೆ.
ಮನೆಯ ದೀರ್ಘಾಯುಷ್ಯಕ್ಕೆ ಪ್ರಮುಖವಾಗಿ ಮನೆ ನಿರ್ಮಾಣವನ್ನು ಪ್ರಾರಂಭಿಸುವಾಗ ಗ್ರಹಗಳ ಗೋಚರವನ್ನು ಪರಿಗಣಿಸಬೇಕು. ಗ್ರಹಗಳ ಪ್ರಭಾವವು ಮನೆಯ ಆಯಸ್ಸನ್ನು ನಿರ್ಧರಿಸುತ್ತದೆ. ನೂರಾರು ವರ್ಷಗಳಷ್ಟು ಹಳೆಯದಾದ ಮನೆಗಳು ಇಂದಿಗೂ ಭದ್ರವಾಗಿರುವುದಕ್ಕೆ ಇದೇ ಕಾರಣ. ಅಪಾರ್ಟ್‌ಮೆಂಟ್‌ಗಳಿಗೆ ವೈಯಕ್ತಿಕ ಫ್ಲ್ಯಾಟ್‌ನ ಆಯಸ್ಸು ಹೇಳುವುದು ಕಷ್ಟ. ಜ್ಯೋತಿಷ್ಯದ ಪ್ರಕಾರ, ಲಗ್ನದಲ್ಲಿ ಬುಧನಿದ್ದರೆ 50 ವರ್ಷ, ಲಗ್ನದಿಂದ ನಾಲ್ಕರಲ್ಲಿ ಗುರು ಮತ್ತು 11ರಲ್ಲಿ ಚಂದ್ರನಿದ್ದರೆ 80 ವರ್ಷ, ಲಗ್ನದಲ್ಲಿ ಗುರು, ನಾಲ್ಕರಲ್ಲಿ ಶುಕ್ರ ಮತ್ತು ಆರರಲ್ಲಿ ರವಿ ಇದ್ದರೆ 120 ವರ್ಷದ ಪೂರ್ಣಾಯುಸ್ಸು ಇರುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.
ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರುImage Credit source: tv9
ಬೆಂಗಳೂರು, ಫೆಬ್ರವರಿ 18: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ನಾಯಕತ್ವ ಬದಲಾವಣೆ ಎಂಬ ಚರ್ಚೆಯೇ ಗೊಂದಲದ ಗೂಡಾಗಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ (Siddaramaiah) ಆಪ್ತ ಬಣದ ಬಹುಪಾಲು ಶಾಸಕರು (Congress MLAs) ವಿದೇಶಿ ಪ್ರವಾಸಕ್ಕೆ ತೆರಳಿದ್ದಾರೆ. ಮೊದಲು ಸರ್ಕಾರಿ ಪ್ರಾಯೋಜಿತ ಎಂಬ ಅರ್ಥದಲ್ಲಿ ಹೊರಬಿದ್ದಿದ್ದ ಈ ಟೂರ್ ವಿಚಾರ, ಈಗ ಖಾಸಗಿ ಟ್ರಿಪ್ ಎಂಬುದು ಗೊತ್ತಾಗಿದೆ. ಮಂಗಳವಾರ ಮಧ್ಯರಾತ್ರಿ 12.20ರ ವಿಮಾನದಲ್ಲಿ 11 ಶಾಸಕರು, ಎಂಎಲ್ಸಿಗಳು ವಿದೇಶಕ್ಕೆ ಹಾರಿದ್ದಾರೆ.
ವಿದೇಶಕ್ಕೆ ತೆರಳಿದ ಕಾಂಗ್ರೆಸ್ ಶಾಸಕರು ಯಾರೆಲ್ಲ?
ದೇವೇಂದ್ರಪ್ಪ, ಜಗಳೂರು ಶಾಸಕ
ಹೆಚ್.ಡಿ ತಮ್ಮಯ್ಯ, ಚಿಕ್ಕಮಗಳೂರು ಶಾಸಕ
ಹಂಪನಗೌಡ ಬಾದರ್ಲಿ, ಸಿಂಧನೂರು ಶಾಸಕ
ಪುಟ್ಟರಂಗಶೆಟ್ಟಿ, ಚಾಮರಾಜನಗರ ಶಾಸಕ
ಬಿ.ಎಂ ನಾಗರಾಜ್, ಸಿರಗುಪ್ಪ ಶಾಸಕ
ಯಶವಂತರಾಯಗೌಡ ಪಾಟೀಲ, ಇಂಡಿ ಶಾಸಕ
ಎಸ್.ಎಸ್. ಮಲ್ಲಿಕಾರ್ಜುನ್, ಸಚಿವ
ಶರಣಗೌಡ ಬಯ್ಯಾಪುರ, ಎಂಎಲ್ಸಿ
ವಸಂತ್ ಕುಮಾರ್, ಎಂಎಲ್ಸಿ
ನಾಗರಾಜ್ ಯಾದವ್, ಎಂಎಲ್ಸಿ
ಡಾ. ಡಿ. ತಿಮಯ್ಯ, ಎಂಎಲ್ಸಿ
ಮಲೇಷಿಯನ್ ಏರ್‌ಲೈನ್ಸ್‌ನ MH 193 ವಿಮಾನದಲ್ಲಿ ಶಾಸಕರು ತೆರಳಿದ್ದಾರೆ. ಆಸ್ಟ್ರೇಲಿಯಾಗೆ ನೇರ ವಿಮಾನ ಇಲ್ಲದ ಕಾರಣ ಟ್ರಾನ್ಸಿಟ್ ಫ್ಲೈಟ್ ಮೂಲಕ ತೆರಳಲು ಪ್ಲ್ಯಾನ್ ಮಾಡಿದ್ದಾರೆ. ಬೆಂಗಳೂರಿನಿಂದ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ತೆರಳುವ ಶಾಸಕರು, ಅಲ್ಲಿಂದ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸುತ್ತಾರೆ.
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಹೋಗುವ ಶಾಸಕರು ಮಾರ್ಚ್ 1ರವರೆಗೆ ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ. ವಿಚಾರ ಎಂದರೆ, ಆರಂಭದಲ್ಲಿ 35 ಶಾಸಕರು ಸಿದ್ಧರಾಗಿದ್ದರು. ಬಳಿಕ ಶಾಸಕರ ಸಂಖ್ಯೆ 21ಕ್ಕೆ ಇಳಿದಿತ್ತು. ಆದರೆ ರಾತ್ರಿಯಾಗ್ತಿದ್ದಂತೆಯೇ 11 ಶಾಸಕರು ಮಾತ್ರ ವಿದೇಶಕ್ಕೆ ಹಾರಿದ್ದಾರೆ.
ಮತ್ತೊಂದೆಡೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಪತ್ನಿ ಹಾಗೂ ಸಂಬಂಧಿಕರ ಜೊತೆಗೆ ಕೊಲಂಬಿಯಾಗೆ ತೆರಳಿದ್ದಾರೆ. ಮಂಗಳವಾರ ಬೆಳಗ್ಗೆ 7 ಸ್ನೇಹಿತರು, ಸಂಬಂಧಿಕರು, ಪತ್ನಿ ಜತೆ ಎಸ್ಎಸ್ ಮಲ್ಲಿಕಾರ್ಜುನ ಕೆಂಪೇಗೌಡ ಏರ್ಪೋರ್ಟ್ನಿಂದ ಥೈಲ್ಯಾಂಡ್ನ ಪುಕೆಟ್ ನಗರಕ್ಕೆ ತೆರದ್ದು, ಅಲ್ಲಿಂದ ದಕ್ಷಿಣ ಅಮೆರಿಕಾದ ಕೊಲಂಬಿಯಾಗೆ ಪ್ರಯಾಣ ಬೆಳೆಸಿದ್ದಾರೆ.
ಶಾಸಕರು ವಿದೇಶಕ್ಕೆ ತೆರಳುವ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಮಾಹಿತಿ ನೀಡಿದ್ದಾರೆ. ಅವರು ಏನೇ ಮಾಹಿತಿ ನೀಡಿದರೂ, ಖಾಸಗಿ ಟೂರ್ ಈಗ ಪೊಲಿಟಿಕಲ್ ಟೂರ್ ಎನ್ನುವ ರೀತಿಯ ಬಿಂಬಿತವಾಗಿದೆ. ಯಾಕೆಂದರೆ, ಶಾಸಕರೆಲ್ಲ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲೇ ಪ್ರವಾಸ ಹೊರಟಿದ್ದಾರೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್, ನಾನು ವಿದೇಶಕ್ಕೆ ಹೋಗುತ್ತಿಲ್ಲ ಎಂದಿದ್ದಾರೆ. ಶಾಸಕರನ್ನು ವಿದೇಶಕ್ಕೆ ಕಳುಹಿಸಲು ನಾನೇನು ಸಿಎಂ ಆಗಬೇಕಾ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ, ಸಿಎಂ ಕುರ್ಚಿ ಉಳಿಸಿಕೊಳ್ಳುವವರು ಫಾರಿನ್‌ಗೆ ಕಳುಹಿಸುತ್ತಿದ್ದಾರಾ ಎಂಬ ಪ್ರಶ್ನೆಗೆ ‘ಗೊತ್ತಿಲ್ಲ’ ಎಂದು ನುಣುಚಿಕೊಂಡಿದ್ದಾರೆ.
ಶಾಸಕರ ವಿದೇಶ ಪ್ರವಾಸದ ಬಗ್ಗೆ ಯಾರ್ಯಾರು ಏನಂದರು?
ಶಾಸಕರ ವಿದೇಶ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್, ಯಾರು ಸ್ಪಾನ್ಸರ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ, ಸಚಿವ ದಿನೇಶ್ ಗುಂಡೂರಾವ್, ಸ್ಪಾನ್ಸರ್ ಎಂಬುದು ಊಹಾಪೋಹ ಎಂದಿದ್ದಾರೆ.
ಇನ್ನು ಶಾಸಕ ಶಿವಗಂಗಾ ಬಸವರಾಜ್, ಶಾಸಕರ ವಿದೇಶಿ ಪ್ರವಾಸಕ್ಕೆ ನನ್ನ ಆಕ್ಷೇಪ ಇಲ್ಲ ಎನ್ನುತ್ತಲೇ, ಬಜೆಟ್ ಸಮಯದಲ್ಲಿ ಹೋಗುವುದು ಸೂಕ್ತ ಅಲ್ಲ ಎಂದಿದ್ದಾರೆ. ಮತ್ತೊಂದೆಡೆ ಯತೀಂದ್ರ ಸಿದ್ದರಾಮಯ್ಯ, ಹೋಗುವವರಿಗೆ ಬೇಡ ಎನ್ನಲು ಆಗಲ್ಲ ಎಂದಿದ್ದಾರೆ.
ಶಾಸಕ ಇಕ್ಬಾಲ್ ಹುಸೇನ್, ರಾಮನಗರವೇ ನನ್ನ ಪಾಲಿನ ಫಾರಿನ್ ಎಂದಿದ್ದು, ಕೆಎನ್ ರಾಜಣ್ಣ ಲೋಕೋ ಭಿನ್ನ ರುಚಿಃ ಅಂತಾ ವಿಭಿನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ನಾಯಕತ್ವ ಎಂಬ ಬೆಂಕಿಯಲ್ಲಿ ಧಗಧಗಿಸುತ್ತಿರುವ ಕಾಂಗ್ರೆಸ್‌ನಲ್ಲಿ ಈಗ ಶಾಸಕರ ಫಾರಿನ್ ಟ್ರಿಪ್ ಬೇರೆಯದ್ದೇ ಗಾಳಿ ಬೀಸುವಂತೆ ಮಾಡಿದೆ. ಗೊಂದಲಕ್ಕೆ ತೆರೆ ಎಳೆಯಬೇಕಿದ್ದ ಹೈಕಮಾಂಡ್, ಸ್ಥಳೀಯ ಸಮಸ್ಯೆ ಎಂದು ಕೈತೊಳೆದುಕೊಂಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬಾಲಿವುಡ್ ಅಲ್ಲಿ ಪಿಆರ್ ತಂತ್ರಗಳು ಹೆಚ್ಚು ಕೆಲಸ ಮಾಡುತ್ತವೆ. ಕೆಲವು ಸಿನಿಮಾ ಹಿಟ್ ಅಥವಾ ಫ್ಲಾಪ್ನ ನಿರ್ಧಾರ ಮಾಡೋದು ಇವರೇ. ಆದರೆ, ಈಗ ಆಡಿಯನ್ಸ್ ಬದಲಾಗಿದ್ದಾರೆ. ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ಸ್ಪಷ್ಟವಾಗಿ ಕಂಡು ಹಿಡಿಯುತ್ತಿದ್ದಾರೆ. ಇದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ಬಾಲಿವುಡ್ ಅಲ್ಲಿ ಪಿಆರ್ ಟೆಕ್ನಿಕ್ ಮೂಲಕ ಗೆಲ್ಲುವ ಪ್ರಯತ್ನವನ್ನು ‘ಓ ರೋಮಿಯೋ’ ಸಿನಿಮಾ ಮಾಡಿತ್ತು. ಆದರೆ, ಈ ತಂತ್ರಕ್ಕೆ ಬ್ರೇಕ್ ಬಿದ್ದಿದೆ. ಈ ಸಿನಿಮಾ ಹೀನಾಯವಾಗಿ ಸೋಲುವ ಸೂಚನೆ ಸಿಕ್ಕಿದೆ.
‘ಓ ರೋಮಿಯೋ’ ಚಿತ್ರದಲ್ಲಿ ಶಾಹಿದ್ ಕಪೂರ್, ತೃಪ್ತಿ ದಿಮ್ರಿ ಮೊದಲಾದವರು ನಟಿಸಿದ್ದಾರೆ. ಫೆಬ್ರವರಿ 13ರಂದು ಸಿನಿಮಾ ರಿಲೀಸ್ ಆಯಿತು. ಈ ಚಿತ್ರವನ್ನು ನೋಡಿದ ಅನೇಕ ವಿಮರ್ಶಕರು ಹಾಡಿ ಹೊಗಳಿದರು. ‘ಸಿನಿಮಾ ಅದ್ಭುತವಾಗಿದೆ, ಮತ್ತೊಂದು ಅನಿಮಲ್ ರೀತಿಯಲ್ಲಿ ಸಿನಿಮಾ ಇದೆ’ ಎಂದೆಲ್ಲ ವಿಮರ್ಶೆ ಕೊಟ್ಟರು. ಮೊದಲ ದಿನ ಈ ಚಿತ್ರ 8.5 ಕೋಟಿ ರೂಪಾಯಿ ಗಳಿಕೆ ಮಾಡಿತು.
ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಎರಡನೇ ದಿನ ಪ್ರೇಕ್ಷಕರು ಥಿಯೇಟರ್ಗೆ ತೆರಳಿದರು. ಇದರಿಂದ ಸಿನಿಮಾ 12.65 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಭಾನುವಾರ ಕೂಡ ಸಿನಿಮಾ ಒಳ್ಳೆಯ ಗಳಿಕೆ ಮಾಡಿತು. ಚಿತ್ರದ ಒಟ್ಟಾರೆ ಕಲೆಕ್ಷನ್ 32 ಕೋಟಿ ರೂಪಾಯಿ ಆಗಿದೆ.
ಆ ಬಳಿಕ ಗೊತ್ತಾಯ್ತು ನೋಡಿ ಸಿನಿಮಾದ ನಿಜವಾದ ಬಣ್ಣ. ಒಳ್ಳೆಯ ವಿಮರ್ಶೆ ಸಿಕ್ಕಿದೆ ಎಂದು ಥಿಯೇಟರ್ಗೆ ತೆರಳಿದ ಅನೇಕರು ಸಿಟ್ಟಲ್ಲಿ ಮರಳಿದ್ದಾರೆ. ‘ಇದು ಮೀಶೋ ಅನಿಮಲ್’ ಎಂದು ಹೇಳಿದ್ದಾರೆ. ಚಿತ್ರದಲ್ಲಿ ತುಂಬಾನೇ ಹಿಂಸೆ ಇದೆ ಎಂದು ಹೇಳಿದ್ದಾರೆ. ಸಿನಿಮಾ ಸದ್ಯ ಸೋಲಿನ ಹಾದಿಯಲ್ಲಿ ಸಾಗುತ್ತಿದೆ. ಇದು ಪಿಆರ್ ತಂತ್ರ ಎಂದು ಅನೇಕರು ಆರೋಪಿಸಿದ್ದಾರೆ.
ಐಎಂಡಿಬಿಯಲ್ಲಿ ಚಿತ್ರಕ್ಕೆ 6.4 ರೇಟಿಂಗ್ ಸಿಕ್ಕಿದೆ. ಬುಕ್ ಮೈ ಶೋನಲ್ಲಿ ನೆಗೆಟಿವ್ ವಿಮರ್ಶೆ ಸಿಗುತ್ತಿದ್ದಂತೆ ಕೋರ್ಟ್ನಿಂದ ಆದೇಶ ತಂದ ನಿರ್ಮಾಣ ಸಂಸ್ಥೆ ರೇಟಿಂಗ್ ನೀಡುವ ಆಯ್ಕೆಯನ್ನೇ ನಿಷ್ಕ್ರಿಯ ಗೊಳಿಸಿದೆ.
ವೇದಾಂಗಗಳಲ್ಲಿ ಒಂದಾದ ಖಗೋಳ ಶಾಸ್ತ್ರದ ಪ್ರಕಾರ ಗ್ರಹಗಳು ನಿರ್ದಿಷ್ಟ ಸ್ಥಾನಗಳಲ್ಲಿ ಒಂದಾದಾಗ ಯೋಗಗಳು ಸೃಷ್ಟಿಯಾಗುತ್ತವೆ. ಕುಂಭ ಹಾಗೂ ಮಕರದಲ್ಲಿ ಉಂಟಾದ ಗ್ರಹಗಳ ಸಂಯೋಗದಿಂದ ಶಶ, ಗಜಕೇಸರಿ, ಶಶಿಮಂಗಳ, ಬುಧಾದಿತ್ಯ, ಧನ, ಬಲ, ಪಾಶ ಯೋಗಗಳು ಸಂಭವಿಸಲಿವೆ. ಪ್ರತಿಯೊಂದು ಯೋಗಕ್ಕೂ ಆಯಾ ರಾಶಿಯ ಅಧಿಪತಿ ಮತ್ತು ಗ್ರಹಗಳ ಮೈತ್ರಿಯ ಆಧಾರದ ಮೇಲೆ ಫಲಗಳು ಬದಲಾಗುತ್ತವೆ.
ಶಶ ಮಹಾಪುರುಷ ಯೋಗ
ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಕುಂಭ ರಾಶಿಯವರಿಗೆ ಶನಿಯು ಮಿತ್ರ ಅಥವಾ ಸ್ವಕ್ಷೇತ್ರಾಧಿಪತಿಯಾಗಿರುವುದರಿಂದ, ಜೀವನದಲ್ಲಿ ಸ್ಥಿರತೆ, ಅಪಾರವಾದ ಆಸ್ತಿ-ಪಾಸ್ತಿ, ಸಮಾಜದಲ್ಲಿ ಉನ್ನತ ಗೌರವ ಮತ್ತು ದೀರ್ಘಾಯುಷ್ಯವನ್ನು ನೀಡುತ್ತಾನೆ. ಇವರು ಮಾಡುವ ಕೆಲಸದಲ್ಲಿ ನಿಧಾನವಾದರೂ ಶಾಶ್ವತವಾದ ಯಶಸ್ಸು ಸಿಗುತ್ತದೆ.
ಮೇಷ, ಸಿಂಹ, ವೃಶ್ಚಿಕ ರಾಶಿಯವರಿಗೆ ಶನಿಯು ಅಧಿಪತಿಗೆ ಶತ್ರುವಾಗಿರುವುದರಿಂದ, ಜೀವನದಲ್ಲಿ ಅತಿಯಾದ ಶ್ರಮ, ಕೆಲಸದಲ್ಲಿ ವಿಳಂಬ ಮತ್ತು ಮಾನಸಿಕ ಒತ್ತಡವನ್ನು ತರಬಹುದು. ಆದರೆ ಶಿಸ್ತನ್ನು ಕಲಿಸುತ್ತಾನೆ.
ಕರ್ಕಾಟಕ, ಧನು, ಮೀನ ರಾಶಿಯವರಿಗೆ ಮಧ್ಯಮ ಫಲ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ, ಆದರೆ ಕೌಟುಂಬಿಕ ಜವಾಬ್ದಾರಿಗಳು ಹೊರೆಯೆನಿಸಬಹುದು.
ಗಜಕೇಸರಿ ಯೋಗ
ಮೇಷ, ಕರ್ಕಾಟಕ, ಸಿಂಹ, ವೃಶ್ಚಿಕ, ಧನು, ಮೀನ ರಾಶಿಯವರಿಗೆ ಇದು ಅತ್ಯಂತ ಶುಭದಾಯಕ. ಸಮಾಜದಲ್ಲಿ ನಾಯಕತ್ವ, ರಾಜಕೀಯ ಯಶಸ್ಸು, ಸಕಲ ಸುಖ-ಭೋಗಗಳು ಮತ್ತು ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಇವರ ಮಾತು ಮಂತ್ರದಂತೆ ಕೆಲಸ ಮಾಡುತ್ತದೆ.
ವೃಷಭ, ತುಲಾ, ಮಕರ, ಕುಂಭದವರಿಗೆ ಮಧ್ಯಮ ಫಲ. ಹಣಕಾಸಿನ ಹರಿವು ಚೆನ್ನಾಗಿರುತ್ತದೆ, ಆದರೆ ಅದೃಷ್ಟಕ್ಕಿಂತ ಹೆಚ್ಚಾಗಿ ಸ್ವಂತ ಶ್ರಮದಿಂದಲೇ ಯಶಸ್ಸು ಕಾಣಬೇಕಾಗುತ್ತದೆ.
ಮಿಥುನ, ಕನ್ಯಾವರಾಶಿಯವರಿಗೆ ಜ್ಞಾನ ಮತ್ತು ವಿದ್ಯಾಭ್ಯಾಸದಲ್ಲಿ ಉನ್ನತ ಪ್ರಗತಿ ಇರುತ್ತದೆ. ಆದರೆ ಅತಿಯಾದ ಆಲೋಚನೆಯಿಂದ ಮಾನಸಿಕ ಶಾಂತಿ ಸ್ವಲ್ಪ ಕಡಿಮೆ ಇರಬಹುದು.
ಶಶಿ-ಮಂಗಳ ಯೋಗ
ಮೇಷ, ವೃಶ್ಚಿಕ, ಕರ್ಕಾಟಕ, ಧನು ರಾಶಿಯವರಿಗೆ ಹಣದ ಹರಿವು ನಿರಂತರವಾಗಿರುತ್ತದೆ. ರಿಯಲ್ ಎಸ್ಟೇಟ್ ಅಥವಾ ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಭಾರಿ ಲಾಭವಾಗುತ್ತದೆ. ಇವರು ಅತೀ ಸಣ್ಣ ವಯಸ್ಸಿನಲ್ಲೇ ಶ್ರೀಮಂತರಾಗುವ ಯೋಗವಿರುತ್ತದೆ.
ವೃಷಭ, ಮಿಥುನ, ಕನ್ಯಾ, ತುಲಾ ರಾಶಿವರಿಗೆ ಮಿಶ್ರ ಫಲ. ಹಣ ಬಂದರೂ ಅಷ್ಟೇ ವೇಗವಾಗಿ ಖರ್ಚಾಗುತ್ತದೆ. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ.
ಸಿಂಹ, ಮಕರ, ಕುಂಭದವರಿಗೆ ಮಧ್ಯಮ ಫಲ. ಸಾಹಸಮಯ ಕೆಲಸಗಳಿಂದ ಧನಲಾಭವಾಗುತ್ತದೆ. ಸೋದರರಿಂದ ಬೆಂಬಲ ಸಿಗಲಿದೆ.
ಬುಧ-ಆದಿತ್ಯ ಯೋಗ
ಮಿಥುನ, ಕನ್ಯಾ, ಸಿಂಹ, ಮೇಷ ರಾಶಿಯವರು ಅದ್ಭುತ ಬುದ್ಧಿವಂತರು. ಗಣಿತ, ವಿಜ್ಞಾನ, ಬರವಣಿಗೆ ಅಥವಾ ಸಂವಹನ ಕ್ಷೇತ್ರದಲ್ಲಿ ಜಗತ್ಪ್ರಸಿದ್ಧರಾಗುತ್ತಾರೆ. ಸರ್ಕಾರಿ ಉದ್ಯೋಗ ಅಥವಾ ಉನ್ನತ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆಯುತ್ತಾರೆ.
ಕರ್ಕಾಟಕ, ವೃಶ್ಚಿಕ, ಧನು, ಮೀನ ರಾಶಿಯವರಿಗೆ ಜ್ಞಾನ ಹೆಚ್ಚಿದ್ದರೂ ಅದನ್ನು ಪ್ರಾಯೋಗಿಕವಾಗಿ ಬಳಸುವಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಬಹುದು.
ಧನ ಯೋಗ
ವೃಷಭ, ತುಲಾ, ಮಕರ, ಕುಂಭ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಹೆಚ್ಚು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಲೇ ಇರುತ್ತದೆ. ಐಷಾರಾಮಿ ಜೀವನ ನಡೆಸುತ್ತಾರೆ.
ಮೇಷ, ಸಿಂಹ, ವೃಶ್ಚಿಕ, ಧನು ರಾಶಿಯವರಿಗೆ ಕಠಿಣ ಪರಿಶ್ರಮದಿಂದ ಶೂನ್ಯದಿಂದ ಸಾಮ್ರಾಜ್ಯ ಕಟ್ಟುತ್ತಾರೆ. ಇವರಿಗೆ ಹಣದ ಕೊರತೆ ಎಂದಿಗೂ ಎದುರಾಗುವುದಿಲ್ಲ.
ಮಿಥುನ, ಕನ್ಯಾ, ಕರ್ಕಾಟಕ, ಮೀನ ರಾಶಿಯವರಿಗೆ ಮಧ್ಯಮ ಫಲ. ಬಂದ ಹಣವನ್ನು ಉಳಿಸುವುದು ಇವರಿಗೆ ಸವಾಲಿನ ಕೆಲಸವಾಗಬಹುದು.
ಬಲ ಯೋಗ
ಮೇಷ, ವೃಶ್ಚಿಕ, ಮಕರ, ಸಿಂಹ: ಈ ರಾಶಿಯವರು ಮಹಾನ್ ಸಾಹಸಿಗಳು. ಸೈನ್ಯ, ಪೊಲೀಸ್ ಅಥವಾ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡುತ್ತಾರೆ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಇವರು ಎದೆಗುಂದುವುದಿಲ್ಲ.
ಕನ್ಯಾ, ಮಿಥುನ, ತುಲಾ ರಾಶಿಯಬರು ದೈಹಿಕ ಬಲಕ್ಕಿಂತ ಬುದ್ಧಿಬಲವನ್ನು ಹೆಚ್ಚು ಬಳಸುತ್ತಾರೆ. ವಿರೋಧಿಗಳನ್ನು ತಂತ್ರದಿಂದ ಸೋಲಿಸುತ್ತಾರೆ.
ಉಳಿದ ರಾಶಿಯವರಿಗೆ ಸಾಧಾರಣ ಫಲ. ಜೀವನದಲ್ಲಿ ಬರುವ ಸಣ್ಣಪುಟ್ಟ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುತ್ತಾರೆ.
ಪಾಶ ಯೋಗ :
ಎಲ್ಲ ದ್ವಾದಶ ರಾಶಿಗಳಿಗೂ ಈ ಯೋಗವು ವ್ಯಕ್ತಿಯನ್ನು ಏಕಾಂಗಿಯಾಗಲು ಬಿಡುವುದಿಲ್ಲ. ಸದಾ ಜನರ ನಡುವೆ ಇರುತ್ತಾರೆ. ಇವರಿಗೆ ಮಿತ್ರರ ಮತ್ತು ಹಿತೈಷಿಗಳ ದೊಡ್ಡ ಬಳಗವೇ ಸೃಷ್ಟಿಯಾಗಿರುತ್ತದೆ.
ಶುಭ ಫಲ: ರಾಜಕೀಯ ಅಥವಾ ಸಮಾಜ ಸೇವೆಯಲ್ಲಿರುವವರಿಗೆ ಇದು ಅತ್ಯುತ್ತಮ ಯೋಗ. ಇವರು ಮಾಡುವ ಕೆಲಸಕ್ಕೆ ಸಮಾಜದ ಮನ್ನಣೆ ಬೇಗನೆ ಸಿಗುತ್ತದೆ.
ಅಶುಭ ಫಲ: ಹನ್ನೆರಡು ರಾಶ್ಯಾಧಿಪತಿಗಳಲ್ಲಿ ಒಬ್ಬರು ನೀಚನಾಗಿದ್ದರೂ ಅಥವಾ ನೀಚ ಗಾಮಿಯಾಗಿದ್ದರೂ ಪರಾವಲಂಬನೆ ಜಾಸ್ತಿಯಾಗಿ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗಬಹುದು.
ಈ ಏಳು ಯೋಗಗಳು ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಭಾಗ್ಯಶಾಲಿಯನ್ನಾಗಿ ಮಾಡುತ್ತವೆ. ಈ ಕುಂಡಲಿಯಲ್ಲಿ ಶನಿ ಮತ್ತು ಗುರು ಬಲವಾಗಿರುವುದರಿಂದ ಕುಂಭ, ಮಕರ, ಧನು ಮತ್ತು ಮೀನ ರಾಶಿಯವರಿಗೆ ಈ ಅವಧಿಯಲ್ಲಿ ಹೆಚ್ಚಿನ ಶುಭ ಫಲಗಳು ದೊರೆಯಲಿವೆ.
ಬರಬೇಕಾದ ಹಣದ ಚಿಂತೆ ಬಹಳ ಕಾಡಬಹುದು. ದೊಡ್ಡ ವಿಚಾರವನ್ನು ಸಣ್ಣದಾಗಿ ಮಾಡಿ, ಯಾರಿಗೂ ಗೊತ್ತಾಗದಂತೆ ಮಾಡುವಿರಿ. ಯಾರೂ ನಿಮ್ಮ ಬಗ್ಗೆ ಹೇಳದಿದ್ದಾಗ ಆತ್ಮ ಪ್ರಶಂಸೆಯನ್ನು ಮಾಡಿಕೊಳ್ಳುವಿರಿ. ಗೌಪ್ಯತೆಯ ವಿಚಾರದಲ್ಲಿ ವರ್ತನೆಯು ಎಲ್ಲರೂ ಮೆಚ್ಚುವಂಥದ್ದಾಗಿರಲಿದೆ. ನಿಮ್ಮ ಬಗ್ಗೆ ನಿಮಗೇ ಬೇಕೆಂದು ಏನಾದರೂ ಹೇಳಿಯಾರು. ಕೃತಜ್ಞತೆಯನ್ನು ನೀವು ರೂಢಿಸಿಕೊಳ್ಳಬೇಕಾಗುವುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.
ವೃಷಭ ರಾಶಿ:
ಸದುಪಯೋಗವಾಗುವಂತಹ ಕೆಲಸದ ಕಡೆ ಗಮನವಿರಲಿ. ಸರಕಿನ ಆಮದು ಮಾಡಿಕೊಳ್ಳಲು ತೊಂದರೆ. ಸುಲಭದ ಕಾರ್ಯವನ್ನು ಸಂಕೀರ್ಣ ಮಾಡಿಕೊಂಡು ಚಿಂತಿಸುವಿರಿ. ಖರೀದಿಯ ವಸ್ತುಗಳು ಕಳೆದುಹೋಗುವ ಸಂಭವವಿದೆ. ಎಲ್ಲರ ಜೊತೆ ಬೆರೆಯುವ ಅವಕಾಶಗಳು ಇಂದು ಕಡಿಮೆ ಇರಲಿದೆ. ಸ್ವತಂತ್ರವಾಗಿ ಬದುಕಬೇಕು ಎಂಬ ಇಚ್ಛೆಯು ಜಾಗರೂಕವಾಗಲಿದೆ. ಪರೋಪಕಾರಕ್ಕೆ ಪ್ರತ್ಯುಪಕಾರದ ಚಿಂತನೆ ಇರಲಿ. ಬೆನ್ನು ನೋವಿನಿಂದ ನಿಮಗೆ ಕಷ್ಟವಾದೀತು.
ಮಿಥುನ ರಾಶಿ:
ಲೆಕ್ಕಪತ್ರದ ವಿಚಾರದಲ್ಲಿ ನಿರ್ದಿಷ್ಟತೆಯನ್ನು ಅಪೇಕ್ಷಿಸುವಿರಿ. ಸಂಗಾತಿಯ ಜೊತೆಗಿನ ವೈಮನಸ್ಯವು ದೂರಾಗಿ ಸಂತೋಷವು ಇಂದು ನೆಲೆಸುವುದು. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣ ಇರಲಿದೆ. ನಿಮ್ಮಿಂದ ನೌಕರರಿಗೆ ಭಡ್ತಿ ಸಿಗಲಿದೆ. ಅಸಾಧ್ಯವಾದ ಕಾರ್ಯವನ್ನು ಮಾಡಿ ಸಮಯವನ್ನು ವ್ಯರ್ಥ ಮಾಡುವುದು ಬೇಡ. ಶರೀರಪೀಡೆಯನ್ನು ನೀವು ಅನುಭವಿಸುವುದು ಕಷ್ಡವಾಗಬಹುದು. ಸಂಗಾತಿಯ ಸ್ವಭಾವವು ಇಂದು ಸ್ಪಷ್ಟವಾಗಿ ತಿಳಿಯಿತು ಎಂದು ಅಂದುಕೊಂಡಿರುವಿರಿ.
ಕರ್ಕಾಟಕ ರಾಶಿ:
ಸಂಗಾತಿಗೆ ಉದ್ಯೋಗವನ್ನು ಕೊಡಿಸಲು ಓಡಾಟ ಮಾಡುವಿರಿ. ಅರ್ಧಬಲದಷ್ಟು ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬಳಿಯೇ ಎಲ್ಲವೂ ಇದ್ದರೂ ಇನ್ನೊಬ್ಬರ ಸ್ವತ್ತಿಗೆ ಕಣ್ಣು ಹಾಕುವಿರಿ. ಪ್ರಭಾವೀ ವ್ಯಕ್ತಿಗಳ ಸಂಪರ್ಕವನ್ನೂ ಮಾಡುವಿರಿ. ನೀವಿಲ್ಲದವರಲ್ಲಿ ನಿಮ್ಮನ್ನು ಹುಡುಕುವ ಪ್ರಯತ್ನ ವ್ಯರ್ಥ. ಉದ್ಯೋಗದಲ್ಲಿ ನೀವು ಜಾಣತನವನ್ನು ತೋರಿಸುವ ಅವಶ್ಯಕತೆ ಇಲ್ಲ. ಆಸಕ್ತಿ ಇಲ್ಲದಿದ್ದರೂ ಕೆಲಸವನ್ನು ಅನಿವಾರ್ಯವಾಗಿ ಮಾಡಬೇಕಾಗುವುದು.
ಸಿಂಹ ರಾಶಿ:
ಧನಾತ್ಮಕ ಆಲೋಚನೆಗೆ ಸ್ಪಂದನೆ ಸಿಗಲಿದೆ. ಕಛೇರಿಯ ಕಿರಿಕಿರಿಯಿಂದ ಮನೆಯಲ್ಲಿಯೂ ನಿಮಗೆ ನೆಮ್ಮದಿ ಸಿಗದು. ಖುಷಿಯ ವಾತಾವರಣವಿದ್ದರೂ ನಿಮಗೆ ನಿಮ್ಮದೇ ಚಿಂತೆ ಕಾಡಬಹುದು. ಹಳೆಯ ಸ್ನೇಹಿತರನ್ನು ಭೇಟಿಯಾಗಿ ಸ್ವಲ್ಪ ಹೊಸ ವಾತಾವರಣವನ್ನು ಕಾಣುವಿರಿ. ನಿಮ್ಮ ವಿಚಾರದಲ್ಲಿ ನಿಮ್ಮ ನೌಕರರ ಬಗ್ಗೆ ನಿಮಗೆ ಸಮಾಧಾನ ಇರಲಿದೆ. ಕೆಲಸದ ಆಯಾಸದಿಂದ ಆರೋಗ್ಯವು ಕೆಡಬಹುದು.
ಕನ್ಯಾ ರಾಶಿ:
ಪಾಲುದಾರಿಕೆಗೆ ಅನ್ಯರ ಸೇರ್ಪಡೆ ಸಾಧ್ಯತೆ. ಸಹೋದರಿಯರ ನಡುವೆ ಕಲಹವಾಗಬಹುದು. ಅಮೂಲ್ಯವಾದ ವಸ್ತುಗಳನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳ ಆರೋಪವನ್ನು ನೀವು ನಿರಾಕರಿಸುವಿರಿ. ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದ್ದು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ದುರಭ್ಯಾಸವನ್ನು ಹಿಡಿಸಿಕೊಳ್ಳುವ ಸಂದರ್ಭವು ಬರಬಹುದು. ಕಲಾವಿದರು ಇತರರ ಸಹಕಾರವನ್ನು ಪಡೆಯುವರು. ಆಸ್ತಿಯ ವಿಚಾರದಲ್ಲಿ ಜಗಳವು ತಾರಕಕ್ಕೆ ಹೋಗಬಹುದು.
ತುಲಾ ರಾಶಿ:
ದಾಂಪತ್ಯದಲ್ಲಿ ಶಾಂತಿಯು ಬೇಕಾದರೆ ಸುಮ್ಮನಿರುವುದು ಉತ್ತಮ. ಭೂಮಿಯಲ್ಲಿ ಹೊಸ ಸಸ್ಯಗಳ ಆರೋಪಣೆ ಮಾಡುವಿರಿ. ಕೋಪವನ್ನು ದೀರ್ಘಕಾಲ ಮುಂದುವರಿಸುವುದು ಬೇಡ. ಕಛೇರಿಯ ತುರ್ತು ಸ್ಥಿತಿಯು ನಿಮಗೆ ಗೊತ್ತಾಗದೇ ಆರಾಮಾಗಿ ಇರುವಿರಿ. ನಿಮ್ಮ ಸ್ವಭಾವಕ್ಕೆ ಯೋಗ್ಯವಾದ ವ್ಯಕ್ತಿಯ ಗೆಳೆತನವಾಗಲಿದೆ. ಸ್ವಂತ ಉದ್ಯಮವನ್ನು ಮಾಡುತ್ತಿದ್ದರೆ ನಿರೀಕ್ಷಿತ ಲಾಭವನ್ನು ತಲುಪುವುದು ಕಷ್ಟವಾದೀತು. ಸ್ತ್ರೀಯರ ಜೊತೆ ಇಂದು ನಿಮ್ಮ ವ್ಯವಹಾರವು ಬೇಡ.
ವೃಶ್ಚಿಕ ರಾಶಿ:
ದಿನ ಪೂರ್ತಿ ಬೆವರು ಹರಿಸಿ ಮಾಡಿದ ಕೆಲಸಕ್ಕೆ ದಿನದ ಕೊನೆಗೆ ಶುಭ ಫಲವು ಸಿಗುವುದು. ಉದ್ಯೋಗ ಶಿಸ್ತಿಗೆ ಮಹಿಳೆಯರನ್ನು ಜೋಡಿಸಿಕೊಳ್ಳುವಿರಿ. ಹೊಸ ಉದ್ಯೋಗವನ್ನು ಹುಡುಕುವವರಿಗೆ ಹೆಚ್ಚು ಗೊಂದಲವಾಗಬಹುದು. ದಾಂಪತ್ಯದಲ್ಲಿ ಅನುಮಾನದ ಹೊಗೆಯಾಡುವುದು. ಯಾರ ಸಹಾಯವನ್ನೂ ಪಡೆಯದೆ ಕಾರ್ಯವು ನಿಧಾನವಾಗುವುದು. ಉದ್ಯೋಗಕ್ಕಾಗಿ ಖಾಸಗಿ ಸಂಸ್ಥೆಯನ್ನು ಅಲೆಯಬೇಕಾಗುವುದು. ಮಾತನಾಡುವಾಗ ಸೂಕ್ಷ್ಮಸಂಗತಿಗಳನ್ನು ಮರೆಯಬಾರದು.
ಧನು ರಾಶಿ:
ಹಳೆಯ ಮನೆಯನ್ನು ಸುಂದರೀಕರಣ ಮಾಡುವ ಚಿಂತನೆ ನಡೆಸುವಿರಿ. ಪರಿಚಿತರ ಹೊಸ ಮುಖಗಳು ಅನಾವರಣವಾಗುವುದು. ನಿಮ್ಮ ಧಾರ್ಮಿಕ ನಂಬುಗೆಗೆ ಯಾರಿಂದಲಾದರೂ ಘಾಸಿ ಉಂಟಾದೀತು. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಸೋಲುವಿರಿ. ನಿಮ್ಮ ಬಗ್ಗೆ ತಪ್ಪು ಕಲ್ಪನೆ ಬರಬಹುದು. ಬಂಧುಗಳ ಆಗಮನವನ್ನು ಇಂದು ನಿರೀಕ್ಷಿಸುವಿರಿ. ವಾಹನದಲ್ಲಿ ಸಂಚಾರ ಮಾಡುವುದಕ್ಕೆ ಕೆಲವು ತೆಡೆಗಳು ಬರಬಹುದು. ದೈಹಿಕಶ್ರಮವು ಇಂದು ಹೆಚ್ಚಿದ್ದು, ಲಾಭವೂ ಸಮಾಧಾನವನ್ನು ತರುವುದು.
ಮಕರ ರಾಶಿ:
ಇಂದಿನ ಪ್ರಯಾಣದಲ್ಲಿ ಬಂಧುಗಳು ಅನಿರೀಕ್ಷಿತವಾಗಿ ಸಿಗುವರು. ನಿಮ್ಮ ಗುಣವನ್ನು ದುರುಪಯೋಗ ಮಾಡಿಕೊಂಡಾರು. ಇಷ್ಟಪಟ್ಟಿದ್ದನ್ನು ಪಡೆಯಲು ನೀವು ಏನಾದರೂ ಮಾತನಾಡಬೇಕಾಗುವುದು. ವಿವಾಹದ ಮಾತುಕತೆ ನಿಮಗೆ ಖುಷಿ ತಂದರೂ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ಹಳೆಯ ಸ್ನೇಹವನ್ನು ನೀವು ಗುರುತಿಸಲಾರಿರಿ. ನಿಮ್ಮ ಉತ್ಸಾಹದ ಕಾರಣ ಜವಾಬ್ದಾರಿಯೂ ಅಧಿಕವಾಗುವುದು. ಆಗಬೇಕಾದ ಕಾರ್ಯವು ಆಗದೇ ಹಣವು ವ್ಯರ್ಥವನ್ನು ಮಾಡಿಕೊಂಡು ಸಂಕಟಪಡಬೇಕಾಗುವುದು.
ಕುಂಭ ರಾಶಿ:
ನೀವು ಯಾರ ಕೈಗೂ ಸುಲಭಕ್ಕೆ ಸಿಗದೇ, ಎಲ್ಲ ಜವಾಬ್ದಾರಿಗಳಿಂದ ದೂರವಿರುವಿರಿ. ಯಾರಾದರೂ ನಿಮ್ಮವರ ಬಗ್ಗೆ ಬಂದು ಕಿವಿಕಚ್ಚಬಹುದು. ಸಕಾಲಕ್ಕೆ ಬಂದ ಸ್ನೇಹಿತನ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುವುದು ಸೂಕ್ತ. ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ತೊಂದರೆ ಎದುರಾಗಬಹುದು. ವಿದೇಶದಿಂದ ಮರಳುವ ಯೋಚನೆ ಇರುವುದು. ಪ್ರಯಾಣವು ಆರಂಭದಲ್ಲಿ ಸುಖಕರ ಎನಿಸದರೂ ದೇಹಪೀಡೆ ಅಧಿಕವಾದೀತು. ಇನ್ನೊಬ್ಬರನ್ನು ಅವಲಂಬಿಸಿರವುದು ನಿಮಗೆ ಇಷ್ಟವಾಗದು.
ಮೀನ ರಾಶಿ:
ಉದ್ಯಮಿಗಳ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಕುಟುಂಬ ಹಾಗೂ ಪ್ರೇಮದ ನಡುವೆ ಸಿಕ್ಕಿಬಿದ್ದು ಗೊಂದಲ ಕಾಡುವುದು. ಯಾವುದನ್ನು ಉಳಿಸಿಕೊಳ್ಳಬೇಕು ಎಂಬ ಭ್ರಮೆಯಲ್ಲಿ ಇರುವಿರಿ. ನಿಮ್ಮ ವ್ಯವಹಾರವನ್ನು ಕಾನೂನಾತ್ಮಕವಾಗಿ ನಡೆಸಿದರೆ ಉತ್ತಮ. ಆದಾಯದ ಮೂಲಗಳನ್ನು ನೀವು ಉಳಿಸಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ನೋವನ್ನು ನಿಮ್ಮದೇ ಆದ ವಿಧಾನದಿಂದ ಸರಿ ಮಾಡುವಿರಿ. ಬಂಧುಗಳ ಜೊತೆ ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕತೆಯೇ ಇರಲಿ.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಧನಿಷ್ಠಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಶತಭಿಷಾ, ಯೋಗ : ಶಿವ, ಕರಣ : ಬವ, ಸೂರ್ಯೋದಯ – 06 – 47 am, ಸೂರ್ಯಾಸ್ತ – 06 – 28 pm, ಇಂದಿನ ಶುಭಾಶುಭ ಕಾಲ : ರಾಹು 12:38 – 14:06, ಯಮಗಂಡ ಕಾಲ 08:16 – 09:43, ಗುಳಿಕ ಕಾಲ 11:11 – 12:38
ಮುಕುಂದ ಮಾಲಾ ಸ್ತೋತ್ರದ ಶ್ರವಣ ಅಥವಾ ಪಠಣವನ್ನು ಮಾಡಿ. ದೂರವಾದ ಸ್ನೇಹ- ಸಂಬಂಧ ಮತ್ತೆ ಸರಿಹೋಗುವುದಕ್ಕೆ ಹಾಗೂ ಉದ್ಯೋಗ, ವ್ಯಾಪಾರ- ವ್ಯವಹಾರಗಳಲ್ಲಿ ಯಶಸ್ಸು ಕಾಣುವುದಕ್ಕೆ ಸಹಕಾರಿ ಆಗುತ್ತದೆ.
ಪ್ರಾಪಂಚಿಕ ವಿಚಾರಗಳ ಬಗ್ಗೆ ಒಂದು ರೀತಿಯ ನಿರಾಸಕ್ತಿ ನಿಮ್ಮನ್ನು ಕಾಡಬಹುದು. ಯಾರಿಗೋ ಮುಖ್ಯ ಎಂದೆನಿಸಿದ್ದು ನನಗೂ ಮುಖ್ಯ ವಿಷಯ ಏಕಾಗಿರಬೇಕು ಎಂಬಂಥ ಧೋರಣೆ ಈ ದಿನ ಇರುತ್ತದೆ. ವೃತ್ತಿಯೋ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಂಗತಿಗಳ ಚರ್ಚೆಯೋ ಇದ್ದಲ್ಲಿ ಅನಿಸಿದ್ದನ್ನೆಲ್ಲ ಹೇಳಿಬಿಡುತ್ತೇನೆ ಎಂಬ ಮನಸ್ಥಿತಿಯಿಂದ ಆಚೆ ಬನ್ನಿ. ಈಗ ನಿಮಗೆ ಅನಿಸುತ್ತಿರುವುದು ತಾತ್ಕಾಲಿಕ ಮಾತ್ರ.
ನಿಮ್ಮಲ್ಲಿ ಕೆಲವರು ಡಿಷ್ ವಾಷರ್, ಮನೆಯನ್ನು ಕಸ ಗುಡಿಸುವಂಥ ರೋಬೋಟ್ ಅಥವಾ ಹೀಗೆ ಮನೆಯ ಸ್ವಚ್ಛತೆಗಾಗಿಯೇ ಯಂತ್ರಗಳನ್ನು ಖರೀದಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನೂ ಕೆಲವರು ಇಎಂಐ ಮಾಡಿಸಿ, ಖರೀದಿಸಿಯೇ ಬಿಡುವ ಸಾಧ್ಯತೆ ಸಹ ಇದೆ. ಸ್ನೇಹಿತರು ಯಾವುದಾದರೂ ಆಫರ್ ಗಳನ್ನು ತಂದರೆ ಏಕಾಏಕಿ ಒಪ್ಪಿಕೊಂಡು ಬಿಡಬೇಡಿ.
ನಿಮಗೆ ಬಂದಿದ್ದ ಅವಕಾಶವೊಂದು ಅಥವಾ ಈಗಾಗಲೇ ಕೆಲಸ ಅರಂಭಿಸಿಯಾಗಿದೆ ಎಂಬುದೊಂದನ್ನು ಮಧ್ಯದಲ್ಲಿ ನಿಲ್ಲಿಸಬೇಕಾದ ಸನ್ನಿವೇಶ ಎದುರಾಗಲಿದೆ. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ಕಮಿಟ್ ಆಗಿದ್ದಲ್ಲಿ, ಅಂದರೆ ಮಾತು ನೀಡಿದ್ದಲ್ಲಿ ಗಾಂಭೀರ್ಯ ಕಾಪಾಡಿಕೊಳ್ಳಿ. ಹೇಗೋ ಸಂಭಾಳಿಸುತ್ತೀನಿ ಎಂಬ ಧೋರಣೆ ಬೇಡ. ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ.
ಈ ದಿನ ಹಯಗ್ರೀವ ಸೋತ್ರವನ್ನು ಶ್ರವಣ ಮಾಡಿ. ಒಂದು ವೇಳೆ ನಿಮಗೆ ಸಾಧ್ಯವಿದ್ದಲ್ಲಿ ಪಠಣ ಮಾಡಿ. ಪದೇಪದೇ ನಿಮ್ಮ ವಿರುದ್ಧ ದೂರು ಬರುತ್ತಿದೆ ಎಂಬ ಆಕ್ಷೇಪದಿಂದ ಹೊರಗೆ ಬರುವುದಕ್ಕೆ ಇದರಿಂದ ಸಹಾಯ ಆಗಲಿದೆ.
ವಿವಾಹಿತರಿಗೆ ಸಂಗಾತಿ ಜೊತೆಗೆ ಸ್ವಲ್ಪ ಮಟ್ಟಿಗೆ ಅಭಿಪ್ರಾಯ ಭೇದಗಳು ತಲೆದೋರಬಹುದು. ಅದರಲ್ಲೂ ನಿಮ್ಮ ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿಯಿಂದ ಈ ಹಿಂದೆ ಯಾವಾಗಲೋ ಆಗಿದ್ದ ಸಮಸ್ಯೆಗಳನ್ನು ಈಗ ಎತ್ತಾಡಬಹುದು. ಆದ್ದರಿಂದ ಸಣ್ಣ- ಪುಟ್ಟ ವಿಚಾರಗಳಿಗೆ ಹೆಚ್ಚಿಗೆ ಗಮನ ನೀಡುವುದಕ್ಕೆ ಹೋಗಬೇಡಿ. ಆಹಾರ- ನೀರು ಸೇವನೆ ಮಾಡುವಾಗ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ಕೊಡಿ, ಇಲ್ಲದಿದ್ದರೆ ದಿನದ ಕೊನೆಗೆ ಹೊಟ್ಟೆ ಸಮಸ್ಯೆ ಕಾಡಬಹುದು.
ಸ್ನೇಹಿತರು ಅಥವಾ ಸಂಬಂಧಿಗಳ ಜೊತೆಗೆ ಅವರ ಕೆಲಸಕ್ಕಾಗಿ ನೀವು ಜೊತೆಗೆ ಹೋಗುವ ಸನ್ನಿವೇಶ ಎದುರಾಗಲಿದೆ. ಹಲವು ಜವಾಬ್ದಾರಿಗಳನ್ನು ಪೂರ್ಣಗೊಳಿಸಿದ ಸಮಾಧಾನವೊಂದು ನಿಮಗೆ ದೊರೆಯಲಿದೆ. ಹಣದ ಹೂಡಿಕೆ, ಉಳಿತಾಯ ಈ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿದ್ದೀರಿ. ಮನೆಯ ಮಟ್ಟಿಗೆ ನಿಮ್ಮ ಆಲೋಚನೆಗಳು ಫಲಿಸುತ್ತವೆ ಎಂಬ ಭಾವನೆ ನಿಮ್ಮದಾಗಿದಲ್ಲಿ ಅದನ್ನು ಮೀರಿದ ವ್ಯಾಪ್ತಿ ನಿಮಗಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ.
ಕ್ರೀಡೆಯೋ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳೋ ಅಥವಾ ಇವುಗಳ ಸ್ಪರ್ಧೆಯೋ ಇಂಥವುಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಅಂತಾದಲ್ಲಿ ಆಸಕ್ತಿ ವಹಿಸಿ ಪಾಲ್ಗೊಳ್ಳಿ. ಇದರಿಂದ ಭವಿಷ್ಯದಲ್ಲಿ ನಿಮಗೆ ದೊಡ್ಡ ಅನುಕೂಲ ಆಗುವಂಥ ಯೋಗ ಇದೆ. ಖಾದಿ ವಸ್ತ್ರಗಳ ಮಾರಾಟ ಮಾಡುವುದನ್ನೇ ವ್ಯವಹಾರವಾಗಿ ಮಾಡುತ್ತಿರುವವರಿಗೆ ಆ ವ್ಯಾಪಾರದ ಪ್ರಮಾಣ ಕಡಿಮೆ ಮಾಡಬೇಕಾಗಬಹುದು ಅಥವಾ ಸಂಪೂರ್ಣ ನಿಲ್ಲಿಸಿಬಿಡೋಣ ಎಂದೆನಿಸಲಿದೆ.
ಈ ದಿನ ಸಂಜೆ ಹೊತ್ತಿಗೆ ಹತ್ತು ನಿಮಿಷವಾದರೂ ಧ್ಯಾನ ಮಾಡುವುದಕ್ಕೆ ಪ್ರಯತ್ನಿಸಿ. ಸೂರ್ಯ ನಾರಾಯಣನ ಸ್ಮರಣೆ, ಆರಾಧನೆಯಿಂದಾಗಿ ನಿಮಗೆ ಪದೇಪದೇ ಕಾಡುತ್ತಿರುವ ಹಿನ್ನಡೆಯಿಂದ ಹೊರಗೆ ಬರುವುದಕ್ಕೆ ಸಹಾಯ ಆಗಲಿದೆ.
ಯಾರು ನಿಮ್ಮ ಕೆಲಸ, ಸೌಂದರ್ಯ, ನಿರ್ಧಾರಗಳನ್ನು ಹೊಗಳುತ್ತಿದ್ದರೋ ಅವರೇ ಈ ದಿನ ನಿಮ್ಮನ್ನು ಕಂಡೂ ಕಾಣದಂತೆ ಮುಂದಕ್ಕೆ ಸಾಗಿಬಿಡಬಹುದು. ನೀವು ಸಾಮಾನ್ಯ ದಿನಗಳಲ್ಲಿ ಯಾರ ಮಾತಿಗೆ ಬಹಳ ಖುಷಿಯಿಂದ ಇರುತ್ತಿದ್ದರೋ ಅದು ಈ ದಿನ ಸಾಧ್ಯವಾಗುವುದಿಲ್ಲ. ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆ ವಹಿಸುವುದು ಮುಖ್ಯ. ಬಿದ್ದು ಸಣ್ಣ- ಪುಟ್ಟ ಗಾಯವಾದರೂ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಯಾರೋ ನಿಮ್ಮನ್ನು ಮೂದಲಿಸಿದರು ಅಥವಾ ಹಂಗಿಸಿದರು ಎಂಬ ಕಾರಣಕ್ಕೆ ಅವರಿಗೆ ಏನೋ ಸಾಬೀತು ಮಾಡಬೇಕು ಎಂದು ಹೊರಟುಬಿಡಬೇಡಿ. ಇನ್ನು ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಇತರರಿಗೆ ವರ್ಗಾಯಿಸುವುದು ಕೂಡ ಸರಿಯಲ್ಲ. ನಿಮ್ಮಲ್ಲಿ ಕೆಲವರಿಗೆ ವೇರಿಕೋಸ್ ನಂಥ ಸಮಸ್ಯೆಗಳು ಉಲ್ಬಣಿಸಬಹುದು ಅಥವಾ ಕಾಣಿಸಬಹುದು. ಕೂಡಲೇ ವೈದ್ಯರ ಬಳಿ ಸೂಕ್ತ ಔಷಧೋಪಚಾರ ತೆಗೆದುಕೊಳ್ಳುವ ಕಡೆಗೆ ಗಮನ ನೀಡುವುದು ಕ್ಷೇಮ, ನೆನಪಿನಲ್ಲಿ ಇರಲಿ.
ಷೇರು, ಮ್ಯೂಚುವಲ್ ಫಂಡ್, ಡಿಬೆಂಚರ್, ಪರ್ಪೆಚುವಲ್ ಬಾಂಡ್, ಗೋಲ್ಡ್ ಹೀಗೆ ಯಾವುದಾದರೊಂದರಲ್ಲಿ ಹೂಡಿಕೆ ಮಾಡುವುದಕ್ಕೆ ನಿರ್ಧಾರ ಮಾಡುತ್ತೀರಿ. ಅಥವಾ ನಿಮಗೆ ಆಪ್ತರಾದವರು ಹಿಂತಿರುಗಿಸಬೇಕಾದ ಹಣದ ಬದಲಿಗೆ ಇಂಥದ್ದು ಯಾವುದಾದರೂ ಒಂದರ ಮೇಲೆ ನಿಮ್ಮ ಹೆಸರಲ್ಲಿ ಹಣ ಹೂಡಿಕೆ ಮಾಡಬಹುದು. ಇನ್ನು ನಿಮ್ಮಲ್ಲಿ ಕೆಲವರು ವಿಲಾಸಿ ಕಾರು ಖರೀದಿಗೆ ಮನಸ್ಸು ಮಾಡುವ ಯೋಗ ಇದೆ.
ಖ್ಯಾತ ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ (Salim Khan) ಅವರ ಆರೋಗ್ಯ ಹದಗೆಟ್ಟಿದೆ. ಇಂದು (ಫೆಬ್ರವರಿ 17) ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಸದ್ಯದ ಪರಿಸ್ಥಿತಿ ಬಗ್ಗೆ ಆಸ್ಪತ್ರೆ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಹೆಲ್ತ್ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಸಲೀಂ ಖಾನ್ ಅವರ ಪರಿಸ್ಥಿತಿ ಗಂಭೀರವಾಗಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಲ್ಮಾನ್ ಖಾನ್ (Salman Khan) ಸೇರಿದಂತೆ ಕುಟುಂಬದ ಹಲವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಸಲೀಂ ಖಾನ್ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಅವರು ತಮ್ಮ ಎಲ್ಲ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಧಾವಿಸಿದರು. ಮಗಳು ಅಲ್ವಿರಾ ಖಾನ್ ಅಗ್ನಿಹೋತ್ರಿ, ಅಳಿಯ ಆಯುಷ್ ಶರ್ಮಾ ಮುಂತಾದವರು ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಸಲೀಂ ಖಾನ್ ಪತ್ನಿಯರಾದ ಸಲ್ಮಾ ಖಾನ್ ಮತ್ತು ಹೆಲೆನ್ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಈಗ ಐಸಿಯುನಲ್ಲಿ ಇರುವ ಸಲೀಂ ಖಾನ್ ಅವರ ಆರೋಗ್ಯದ ಮೇಲೆ ಬುಧವಾರ (ಫೆ.18) ಬೆಳಗ್ಗೆ 11 ಗಂಟೆವರೆಗೂ ನಿಗಾ ವಹಿಸಲಾಗುವುದು. ಆ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಮೂಲಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಪ್ರಾರ್ಥಿಸುತ್ತಿದ್ದಾರೆ.
ಸಲೀಂ ಖಾನ್ ಅವರಿಗೆ ಈಗ 90 ವರ್ಷ ವಯಸ್ಸು. ಬಾಲಿವುಡ್ನಲ್ಲಿ ಅವರು ಬಹುಬೇಡಿಕೆಯ ಚಿತ್ರಕಥೆ ಬರಹಗಾರನಾಗಿ ಗುರುತಿಸಿಕೊಂಡಿದ್ದರು. ‘ಶೋಲೆ’, ‘ಜಂಜೀರ್’, ‘ದೀವಾರ್’ ಮುಂತಾದ ಸಿನಿಮಾಗಳಿಗೆ ಅವರು ಚಿತ್ರಕಥೆ ಬರೆದಿದ್ದಾರೆ. ಆ ಕಾಲದಲ್ಲಿ ಸಲೀಂ-ಜಾವೇದ್ ಜೋಡಿ ಸೂಪರ್ ಹಿಟ್ ಎನಿಸಿಕೊಂಡಿತ್ತು.
ಸಲೀಂ ಖಾನ್ ಅವರನ್ನು ಏಕಾಏಕಿ ಆಸ್ಪತ್ರೆಗೆ ದಾಖಲಿಸಲು ಕಾರಣ ಏನು ಎಂಬುದನ್ನು ಕುಟುಂಬದವರು ಇನ್ನೂ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ, ಸಲೀಂ ಖಾನ್ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಅವರಿಗೆ 90 ವರ್ಷ ವಯಸ್ಸು ಆಗಿರುವುದರಿಂದ ಎಲ್ಲರಿಗೂ ಆತಂಕ ಆಗಿದೆ.
ಜ್ಯೋತಿಷ್ಯ ಶಾಸ್ತ್ರವು ಗ್ರಹಗಳ ಸಂಯೋಜನೆಯಿಂದ ಮಾರ್ಚ್ ತಿಂಗಳು ಸಿಂಹ ರಾಶಿಯವರಿಗೆ ಮಿಶ್ರ ಫಲಗಳಿಂದ ಕೂಡಿದ್ದು, ಗ್ರಹಗತಿಗಳ ಬದಲಾವಣೆಯು ಜೀವನದ ವಿವಿಧ ಆಯಾಮಗಳ ಮೇಲೆ ಬೇರೆ ಬೇರೆ ಪ್ರಭಾವಗಳನ್ನು ಬೀರಲಿದೆ. ಈ ತಿಂಗಳ ದಶೆ ಮತ್ತು ಫಲಗಳು ಇಂತಿವೆ.
ಉತ್ತಮ ಫಲಗಳು
ಈ ತಿಂಗಳು ನಿಮಗೆ ಕೆಲವು ಕ್ಷೇತ್ರಗಳಲ್ಲಿ ಅದೃಷ್ಟದ ಬೆಂಬಲ ಸಿಗಲಿದೆ.
ವೃತ್ತಿ ಮತ್ತು ಗೌರವ:
ಸೂರ್ಯನ ಸಂಚಾರವು ಹತ್ತನೇ ಮನೆಯಲ್ಲಿ ಪ್ರಬಲವಾಗಿರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆ ಹಾಗೂ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ.
ಧೈರ್ಯ ಮತ್ತು ಆತ್ಮವಿಶ್ವಾಸ:
ನೀವು ಎದುರಿಸುತ್ತಿದ್ದ ಹಳೆಯ ಸಮಸ್ಯೆಗಳನ್ನು ಬಗೆಹರಿಸಲು ಈ ಸಮಯ ಸೂಕ್ತವಾಗಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು ಉತ್ತಮವಾಗಿರುತ್ತದೆ.
ಸಾಮಾಜಿಕ ಸ್ಥಾನಮಾನ:
ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.
ಮಧ್ಯಮ ಫಲಗಳು
ಕೆಲವು ವಿಷಯಗಳಲ್ಲಿ ನೀವು ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ, ಆಗ ಮಾತ್ರ ಸಾಧಾರಣ ಯಶಸ್ಸು ಸಾಧ್ಯ.
ಆರ್ಥಿಕ ಸ್ಥಿತಿ:
ಆದಾಯದ ಮೂಲಗಳು ಇವೆಯಾದರೂ, ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸುವುದು ಒಳಿತು.
ಕುಟುಂಬ ಜೀವನ:
ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಆದರೆ ಸಂವಹನದ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದು.
ಶಿಕ್ಷಣ:
ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಕಾಡಬಹುದು, ಆದರೆ ಸತತ ಪ್ರಯತ್ನದಿಂದ ಮಧ್ಯಮ ಮಟ್ಟದ ಸಾಧನೆ ಮಾಡಬಹುದು.
ಅಧಮ ಫಲಗಳು
ಈ ಕೆಳಗಿನ ವಿಷಯಗಳಲ್ಲಿ ನೀವು ಹೆಚ್ಚಿನ ಜಾಗರೂಕತೆ ವಹಿಸುವುದು ಅತ್ಯಗತ್ಯ.
ಆರೋಗ್ಯ:
ರಾಹುವಿನ ಪ್ರಭಾವ ಅಥವಾ ಅಷ್ಟಮ ಶನಿಯ ದೃಷ್ಟಿಯಿಂದಾಗಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು, ವಿಶೇಷವಾಗಿ ಕಣ್ಣು ಅಥವಾ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಳ್ಳಬಹುದು. ಆಹಾರ ಕ್ರಮದ ಮೇಲೆ ನಿಯಂತ್ರಣವಿರಲಿ.
ಪ್ರೇಮ ಮತ್ತು ದಾಂಪತ್ಯ:
ಸಂಗಾತಿಯೊಂದಿಗೆ ಅನಗತ್ಯ ವಾದಗಳು ಮನಸ್ತಾಪಕ್ಕೆ ಕಾರಣವಾಗಬಹುದು. ತಾಳ್ಮೆ ಕಳೆದುಕೊಳ್ಳಬೇಡಿ.
ಗುಪ್ತ ಶತ್ರುಗಳು:
ನಿಮ್ಮ ಪ್ರಗತಿಯನ್ನು ಸಹಿಸದವರು ನಿಮ್ಮ ವಿರುದ್ಧ ಪಿತೂರಿ ನಡೆಸಬಹುದು. ಯಾರನ್ನೂ ಅತಿಯಾಗಿ ನಂಬಬೇಡಿ.
ಆದಿತ್ಯ ಹೃದಯ ಸ್ತೋತ್ರ ಪಠಿಸುವುದರಿಂದ ಆತ್ಮವಿಶ್ವಾಸ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ.ಶನಿವಾರದಂದು ದಾನ ಧರ್ಮ ಮಾಡುವುದು ಅಥವಾ ಹನುಮಾನ್ ಚಾಲೀಸಾ ಓದುವುದು ಅಶುಭ ಫಲಗಳನ್ನು ಕಡಿಮೆ ಮಾಡುತ್ತದೆ.
– ಲೋಹಿತ ಹೆಬ್ಬಾರ್