All posts by nagaraj11081993

ಪುರುಷರಲ್ಲಿ ವಯಸ್ಸಾದಂತೆ ಕಡಿಮೆಯಾಗುತ್ತಿರುವ ವೈ ಕ್ರೋಮೋಸೋಮ್ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆಯೇ? – Kannada News | Men’s Health Alert: Y Chromosome Vanishing

ಬಹುಕಾಲದಿಂದ ವಿಜ್ಞಾನಿಗಳು ವಯಸ್ಸಾದ ಹಾಗೆ ಪುರುಷರ ದೇಹದ ಕೆಲವು ಕೋಶಗಳಲ್ಲಿ ವೈ ಕ್ರೋಮೋಸೋಮ್ (Y Chromosome) ಅಥವಾ ವೈ ವರ್ಣತಂತು ಕಡಿಮೆಯಾಗುತ್ತಿರುವುದು ಯಾವುದೇ ರೀತಿಯ ದೊಡ್ಡ ಪರಿಣಾಮ ಉಂಟುಮಾಡುವುದಿಲ್ಲ ಎಂದು ಭಾವಿಸಿದ್ದರು. ಈ ವೈ ಕ್ರೋಮೋಸೋಮ್‌ನಲ್ಲಿ ಪುರುಷ ಲಿಂಗ ನಿರ್ಧಾರಕ್ಕೆ ಸಂಬಂಧಿಸಿದ ಕೆಲವು ಜೀನ್ ಗಳು ಮಾತ್ರ ಇರುವುದರಿಂದ, ಇದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಆಗಲಾರದು ಎಂದು ಅಂದುಕೊಂಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆದ ಅಧ್ಯಯನಗಳು ಇದಕ್ಕೆ ಬೇರೆ ರೀತಿಯ ಚಿತ್ರಣವನ್ನೇ ನೀಡುತ್ತಿವೆ. ಹೌದು, ವೈ ಕ್ರೋಮೋಸೋಮ್ ಕಡಿಮೆಯಾಗುವುದಕ್ಕೂ ಹೃದಯರೋಗ, ಕ್ಷಯ ರೋಗಗಳು, ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಕಾಣಿಸಿಕೊಳ್ಳುವುದಕ್ಕೂ ಸಂಬಂಧವಿದೇ ಎಂಬುದು ಸಾಕ್ಷ್ಯಗಳಿಂದ ದೃಢವಾಗಿದೆ. ಇದರಿಂದ ಪುರುಷರ ಆಯುಷ್ಯ ಕಡಿಮೆಯಾಗುವ ಸಾಧ್ಯತೆಯೂ ಇದೆ. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿಯುವುದು ಅನಿವಾರ್ಯವಾಗಿದೆ.

ಹೊಸ ತಂತ್ರಜ್ಞಾನಗಳ ಮೂಲಕ Y ಕ್ರೋಮೋಸೋಮ್‌ನ ಜೀನ್ ಗಳನ್ನು ಪತ್ತೆಹಚ್ಚುವಲ್ಲಿ ಪ್ರಗತಿ ಕಂಡುಬಂದಿದೆ. ಇದರ ಫಲವಾಗಿ ಪುರುಷರಿಗೆ ವಯಸ್ಸಾದಂತೆ ದೇಹಕೋಶಗಳಲ್ಲಿ Y ನಷ್ಟ ಹೆಚ್ಚಾಗಿರುವುದು ಕಂಡುಬಂದಿದೆ. 60 ವರ್ಷದ ಪುರುಷರಲ್ಲಿ ಸುಮಾರು 40% ಜನರಲ್ಲಿ Y ಕ್ರೋಮೋಸೋಮ್‌ ಕಣ್ಮರೆಯಾಗುತ್ತಿರುವುದು ಕಂಡುಬಂದಿದೆ. ಇನ್ನು 90 ವರ್ಷದವರಲ್ಲಿ ಇದು 57% ರಷ್ಟು ಹೆಚ್ಚುತ್ತದೆ. ಧೂಮಪಾನ ಮತ್ತು ಕಾರ್ಸಿನೋಜೆನ್‌ಗಳಿಗೆ (ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳು) ಒಡ್ಡಿಕೊಳ್ಳುವುದು ಈ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. Y ಕ್ರೋಮೋಸೋಮ್‌ ಕಡಿಮೆಯಾಗುವುದು ಎಲ್ಲಾ ಕೋಶಗಳಲ್ಲಿಯೂ ಆಗುವುದಿಲ್ಲ. ಕೆಲವು ಕೋಶಗಳು ಮಾತ್ರ Y ಕಳೆದುಕೊಳ್ಳುತ್ತವೆ. ಹೀಗಾಗಿ ದೇಹದಲ್ಲಿ Y ಇರುವ ಮತ್ತು ಇಲ್ಲದ ಕೋಶಗಳ ಮಿಶ್ರಣ (ಮೋಸಾಯಿಕ್ ಸ್ಥಿತಿ) ಉಂಟಾಗುತ್ತದೆ. ಆದರೆ ಪ್ರಯೋಗಾಲಯದಲ್ಲಿ Y ಇಲ್ಲದ ಕೋಶಗಳು ವೇಗವಾಗಿ ಬೆಳೆಯುವುದನ್ನು ಗಮನಿಸಲಾಗಿದ್ದು ಇದು ಗಡ್ಡೆಗಳು (ಟ್ಯೂಮರ್‌ಗಳು) ಬೆಳೆಯಲು ಸಹಾಯಕವಾಗಬಹುದು.

ಇದನ್ನೂ ಓದಿ: ಬಾಯಿಯ ಆರೋಗ್ಯಕ್ಕೂ ಹೃದಯಕ್ಕೂ ಸಂಬಂಧವಿದೆಯೇ; ಈ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ. ಅನುಪಮಾ ವಿ. ಹೆಗ್ಡೆ

ಈ ಹಿಂದೆ Y ಕ್ರೋಮೋಸೋಮ್‌ ಲಿಂಗ ನಿರ್ಧಾರ, ವೀರ್ಯ ಉತ್ಪಾದನೆಗಳಿಗೆ ಸಂಬಂಧಿಸಿದೆ. ಆದ್ದರಿಂದ ದೇಹದ ಇತರ ಕೋಶಗಳಿಗೆ ಇದು ಅಗತ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನಗಳು ಇವು ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದದೆ.

ಹೃದಯರೋಗ: ಜರ್ಮನಿಯಲ್ಲಿ ನಡೆದ ದೊಡ್ಡ ಅಧ್ಯಯನವು, 60 ವರ್ಷ ಮೇಲ್ಪಟ್ಟ ಪುರುಷರಲ್ಲಿ Y ನಷ್ಟ ಹೆಚ್ಚಿರುವವರಲ್ಲಿ ಹೃದಯಾಘಾತದ ಅಪಾಯ ಹೆಚ್ಚುತ್ತದೆ ಎಂದು ತೋರಿಸಿದೆ.

ಅಲ್ಜೈಮರ್: ಈ ರೋಗಿಗಳಲ್ಲಿ Y ಕ್ರೋಮೋಸೋಮ್‌ ಕಡಿಮೆಯಾಗಿರುವ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ.

ಮೂತ್ರಪಿಂಡ ಸಮಸ್ಯೆ: Y ಕ್ರೋಮೋಸೋಮ್‌ ಕ್ಷೀಣಿಸಿದಾಗ ಮೂತ್ರಪಿಂಡ ಸಮಸ್ಯೆಗಳು ಹೆಚ್ಚಾಗಿ ಕಂಡುಬರಬಹುದು.

ಕ್ಯಾನ್ಸರ್: ಅನೇಕ ರೀತಿಯ ಕ್ಯಾನ್ಸರ್ ಕೋಶಗಳಲ್ಲಿ Y ಕ್ರೋಮೋಸೋಮ್‌ ಕಡಿಮೆಯಿರುವುದು ಕಂಡುಬರುತ್ತದೆ.

ಆದರೆ Y ಕ್ರೋಮೋಸೋಮ್‌ ಕಡಿಮೆಯಾಗಿರುವುದೇ ಕಾಯಿಲೆಗೆ ಕಾರಣವೇ? ಅಥವಾ ಕಾಯಿಲೆಯಿಂದಲೇ Y ನಷ್ಟವಾಗುತ್ತಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮುಂದೆ ಬರುವಂತಹ ವರ್ಷಗಳಲ್ಲಿ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುವುದು ಬಹಳ ಅವಶ್ಯಕವಾಗಿದೆ. ಆಗ ಹೃದಯ ಕಾರ್ಯ, ರೋಗನಿರೋಧಕ ಶಕ್ತಿ, ಕ್ಯಾನ್ಸರ್ ಅಪಾಯ ಇವುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಇನ್ನಷ್ಟು ಸ್ಪಷ್ಟವಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಲ್ಲು ಅರ್ಜುನ್ ಮೇಲೆ 42 ನಿಯಮಗಳ ಆರೋಪ ಮಾಡಿ ಕ್ಷಮೆ ಕೇಳಿದ ಮಹಿಳೆ – Kannada News | Kaveri Baruah apologies after making baseless allegations on Allu Arjun

ಟಾಲಿವುಡ್ ನಟ ಅಲ್ಲು ಅರ್ಜುನ್ ಬಗ್ಗೆ ಕೆಲವು ಆರೋಪಗಳನ್ನು ಮಾಡಲಾಗಿತ್ತು. ಇತ್ತೀಚೆಗೆ ಪಾಡ್​ಕಾಸ್ಟ್​​ನಲ್ಲಿ ಮಾತನಾಡಿದ್ದ ಕಾವೇರಿ (Kaveri Baruah) ಎಂಬ ಮಹಿಳೆಯೊಬ್ಬರು ಇಲ್ಲಸಲ್ಲದ ಆರೋಪ ಮಾಡಿದ್ದರು. ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡುವಾಗ 42 ನಿಮಯಗಳನ್ನು ಹಾಕಲಾಗುತ್ತದೆ ಎಂದು ಅವರು ಹೇಳಿದ್ದರು. ಆ ನಿಯಮಗಳು ತುಂಬ ವಿಚಿತ್ರವಾಗಿದ್ದವು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು. ಆದರೆ ಈಗ ಆರೋಪ ಮಾಡಿದ ಮಹಿಳೆಯೇ ಉಲ್ಟಾ ಹೊಡೆದಿದ್ದಾರೆ. ಅಲ್ಲು ಅರ್ಜುನ್ (Allu Arjun) ಬಳಿ ಆಕೆ ಕ್ಷಮೆ ಕೇಳಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪಾಡ್​ಕಾಸ್ಟ್​ಗಳು ಸಖತ್ ಜನಪ್ರಿಯವಾಗಿವೆ. ಆದರೆ ವೀವ್ಸ್ ಮತ್ತು ಲೈಕ್ಸ್ ಪಡೆಯುವ ಸಲುವಾಗಿ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಕಾವೇರಿ ಎಂಬ ಮಹಿಳೆ ಕೂಡ ಹಾಗಯೇ ಮಾಡಿದ್ದಾರೆ. ಯೂಟ್ಯೂಬ್​​ನಲ್ಲಿ ಸಂದರ್ಶನ ನೀಡಿದ ಅವರು ಅಸಂಬದ್ಧವಾಗಿ ಮಾತನಾಡಿದ್ದರು. ಅದರಿಂದ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಬೇಸರ ಆಗಿತ್ತು.

ಕಾವೇರಿ ಹೇಳಿದ್ದೇನು? ‘ದಕ್ಷಿಣದ ಸ್ಟಾರ್ ಹೀರೋಗಳ ಸುತ್ತ ಜನರು ತುಂಬಿಕೊಂಡಿರುತ್ತಾರೆ. ಅಲ್ಲು ಅರ್ಜುನ್ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ನಮಗೆ 42 ನಿಮಯಗಳ ಪಟ್ಟಿ ನೀಡಲಾಗಿತ್ತು. ಹಲವು ಮ್ಯಾನೇಜರ್ ಇದ್ದರು. ಅವರು ತುಂಬಾ ಕಟ್ಟುನಿಟ್ಟು. ಸರ್ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ, ಕೈ ಕುಲಕಬೇಡಿ, ಅವರ ಎದುರು ಮೊಬೈಲ್ ಫೋನ್ ಬಳಸಬೇಡಿ ಎಂಬಿತ್ಯಾದಿ ರೂಲ್ಸ್ ಪಟ್ಟಿ ನೀಡಿದ್ದರು’ ಎಂದಿದ್ದಾರೆ ಕಾವೇರಿ.

ಯಾವುದೇ ಆಧಾರ ಇಲ್ಲದೇ ಈ ರೀತಿ ಹೇಳಿಕೆ ನೀಡಿದ್ದರಿಂದ ಅಲ್ಲು ಅರ್ಜುನ್ ತಂಡದವರು ಕಾವೇರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಅದರಿಂದಾಗಿ ಕಾವೇರಿ ಎಚ್ಚೆತ್ತುಕೊಂಡಿದ್ದಾರೆ. ತಾವು ನೀಡಿದ್ದ ಹೇಳಿಕೆಗೆ ಯಾವುದೇ ಆಧಾರ ಇಲ್ಲ, ತಮ್ಮಿಂದ ತಪ್ಪಾಗಿದೆ ಎಂದು ಅವರು ಈಗ ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಅಲ್ಲು ಅರ್ಜುನ್ ಭೇಟಿ ಮಾಡಲು 42 ಷರತ್ತು: ನಿಜ ಏನೆಂದು ಹೇಳಿದ ಸಹ ನಟ

‘ನನ್ನ ಹೇಳಿಕೆ ತಪ್ಪಾಗಿದೆ. ಅದಕ್ಕೆ ಯಾವುದೇ ಆಧಾರ ಇಲ್ಲ. 42 ನಿಯಮಗಳು ಇರುವ ಯಾವುದೇ ಪಟ್ಟಿಯನ್ನು ನನಗೆ ಅಲ್ಲು ಅರ್ಜುನ್ ಕಡೆಯವರು ನೀಡಿರಲಿಲ್ಲ. ಮಾತಿನ ಭರದಲ್ಲಿ ನಾನು ಅದನ್ನೆಲ್ಲ ಹೇಳಿದೆ. ಆ ರೀತಿ ಮಾತನಾಡಿದ್ದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ. ಅಲ್ಲು ಅರ್ಜುನ್ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ’ ಎಂದು ಕಾವೇರಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆಯಲ್ಲಿ ಸಾಕುನಾಯಿ ಮೇಲೆ ಕಾರು ಹತ್ತಿಸಿ ಕೊಂದ ಚಾಲಕ; ವಿಡಿಯೋ ವೈರಲ್

ಕಾನ್ಪುರ, ಫೆಬ್ರವರಿ 17: ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಾಕು ನಾಯಿಗೆ ಸರಪಳಿ ಹಾಕಿ ಹಿಡಿದುಕೊಂಡು ಮಾಲೀಕ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಾ ಇದ್ದರು. ಈ ವೇಳೆ ಅವರು ರಸ್ತೆಬದಿಯಲ್ಲಿ ನಡೆಯುತ್ತಿದ್ದಾಗ, ಕಾರು ಆ ನಾಯಿಯ (Dog) ಮೇಲೆ ಹತ್ತಿಕೊಂಡು ಹೋಗಿದೆ. ಇದರಿಂದ ಆ ನಾಯಿಗೆ ತೀವ್ರವಾಗಿ ಪೆಟ್ಟಾಗಿ ಸಾವನ್ನಪ್ಪಿದೆ. ಕಾರು ಚಾಲಕನ ವಿರುದ್ಧ ಮಾಲೀಕರು ದೂರು ದಾಖಲಿಸಿದ್ದಾರೆ. ಈ ದೃಶ್ಯ ಅಲ್ಲಿನ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆಯಲ್ಲಿ ಕಾರು ಚಾಲಕ ಹಾಗೂ ನಾಯಿಯ ಮಾಲೀಕ ಇಬ್ಬರದ್ದೂ ತಪ್ಪಿದೆ. ಕಾರು ಚಾಲಕ ನಿಧಾನವಾಗಿ ಎಚ್ಚರಿಕೆಯಿಂದ ಕಾರು ಚಲಾಯಿಸಬೇಕಿತ್ತು. ನಾಯಿಯ ಮಾಲೀಕ ಜನಸಂದಣಿ ಇರುವ ರಸ್ತೆಯಲ್ಲಿ ನಾಯಿಯನ್ನು ಕರೆದುಕೊಂಡು ಬರಬಾರದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಸನ ಎಸ್​ಪಿ ಕಚೇರಿ ಹೊರಗೆ ಕಾದು ಕುಳಿತ ಯಶ್ ತಾಯಿ ಪುಷ್ಪಾ – Kannada News | Yash mother Pushpa Arun Kumar arrives at Hassan SP office to give complaint

ಹಾಸನದಲ್ಲಿನ ನಿವೇಶನದ ಗಲಾಟೆಗೆ ಸಂಬಂಧಪಟ್ಟಂತೆ ಯಶ್ ತಾಯಿ (Yash mother) ಪುಷ್ಪಾ ಅರುಣ್ ಕುಮಾರ್ ಅವರು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ಎಸ್​​ಪಿ ಕಚೇರಿ ಹೊರಗೆ ಅವರು ಕಾದು ಕುಳಿತಿದ್ದಾರೆ. ಸೈಟ್ ಗಲಾಟೆಯಲ್ಲಿ ಸರಿಯಾಗಿ ತನಿಖೆ ಆಗಿಲ್ಲ ಎಂದು ದೂರು ನೀಡಲು ಅವರು ಬಂದಿದ್ದಾರೆ. ಕ್ರಯಪತ್ರಗಳ ದಾಖಲೆ ಸಮೇತವಾಗಿ ಅವರು ಎಸ್​ಪಿ ಕಚೇರಿಗೆ ಆಗಮಿಸಿದ್ದಾರೆ. ‘ಸೈಟ್ ಗಲಾಟೆಗೆ ಸಂಬಂಧಿಸಿದಂತೆ ತಕ್ಷಣ ದೂರು ನೀಡಿದ್ದೆ. ಹಾಸನ ಬಡಾವಣೆ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ. ರೌಡಿಸಂ ಮತ್ತು ಭೂ ಮಾಫಿಯಾದವರಿಗೆ ಸಹಕಾರ ನೀಡುತ್ತಿದ್ದಾರೆ. ಅತಿಕ್ರಮ ಪ್ರವೇಶ ಮಾಡಿ ಕಾಂಪೌಂಡ್ ಧ್ವಂಸ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ’ ಎಂದು ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ (Pushpa Arun Kumar) ಅವರು ದೂರು ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಡ್ತಿ ವಿಚಾರಕ್ಕೆ ವಿದ್ಯಾರ್ಥಿಗಳ ಮುಂದೆಯೇ ಹೊಡೆದಾಡಿಕೊಂಡ ಪ್ರಿನ್ಸಿಪಾಲ್, ಶಿಕ್ಷಕಿ – Kannada News | Bengaluru School Shocker: Principal Teacher Fight, Assault Allegations in Basavanagudi

ಬೆಂಗಳೂರು, ಫೆ.17: ಬಸವನಗುಡಿ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಶಿಸ್ತು ಕಲಿಸಬೇಕಾದ ಗುರುಗಳೇ ಕ್ಲಾಸ್​​ ರೂಮ್​​​ನಲ್ಲಿ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ. ಶಾಲೆಯ ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಮತ್ತು ಶಿಕ್ಷಕಿ ರೇಷ್ಮಾ ನಡುವೆ ಈ ಗಲಾಟೆ ನಡೆದಿದೆ. ಶಿಕ್ಷಕಿ ರೇಷ್ಮಾ ಅವರ ಕಾರ್ಯವೈಖರಿಯನ್ನು ಮೆಚ್ಚಿ ಶಾಲಾ ಆಡಳಿತ ಮಂಡಳಿಯು ಅವರಿಗೆ ಬಡ್ತಿ ಮತ್ತು ಪ್ರಶಂಸನಾ ಪತ್ರ ನೀಡಿತ್ತು. ಇದು ಪ್ರಿನ್ಸಿಪಾಲ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಪ್ರಿನ್ಸಿಪಾಲ್ ಕಡೆಯವರು ಹಾಗೂ ಶಿಕ್ಷಿಕಯ ಕಡೆಯವರು ವಿದ್ಯಾರ್ಥಿಗಳ ಸಮ್ಮುಖದಲ್ಲೇಹೊಡೆದಾಟದ ಹಂತಕ್ಕೆ ತಲುಪಿದ್ದಾರೆ. ಪ್ರಿನ್ಸಿಪಾಲ್ ಉಮ್ಮಿಯ ಕುಲಸುಂ ಅವರು ಹೊರಗಿನ ಜನರನ್ನು ಕರೆಸಿ ತನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಶಿಕ್ಷಕಿ ರೇಷ್ಮಾ ಗಂಭೀರವಾಗಿ ಆರೋಪಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐ ಸಮಿಟ್​​ನಲ್ಲಿ ರಾರಾಜಿಸಿದ ಜಿಯೋ ಸ್ಟಾಲ್; ವಿವಿಧ ಮಾಡಲ್​ಗಳನ್ನು ಪ್ರಧಾನಿಗಳೆದುರು ತೆರೆದಿಟ್ಟ ಆಕಾಶ್ ಅಂಬಾನಿ – Kannada News | Reliance Jio presents various AI models from Jio Stacks to Jio AI Home at India AI Summit

ನರೇಂದ್ರ ಮೋದಿ ಮತ್ತು ಆಕಾಶ್ ಅಂಬಾನಿ

ನವದೆಹಲಿ, ಫೆಬ್ರುವರಿ 17: ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಿಲಾಯನ್ಸ್ ಜಿಯೋ ಸಂಸ್ಥೆ (Reliance Jio) ಎಐ ಸೆಕ್ಟರ್​ನಲ್ಲಿ ಪ್ರಬಲ ಹೆಜ್ಜೆಗಳನ್ನು ಇಡುತ್ತಿದೆ. ಶಿಕ್ಷಣ, ಆರೋಗ್ಯ, ಡಿಜಿಟಲ್ ಹಾಗು ಇತರೆ ಸೆಕ್ಟರ್​ಗಳಲ್ಲಿ ವಿವಿಧ ಎಐ ಮಾಡಲ್​ಗಳನ್ನು ಜಿಯೋ ರೂಪಿಸಿದೆ. ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್​ನ (India AI Impact Summit) ಮೊದಲ ದಿನ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್​ನ ಛೇರ್ಮನ್ ಆಕಾಶ್ ಅಂಬಾನಿ (Akash Ambani) ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಯೋದ ವಿವಿಧ ಎಐ ಆವಿಷ್ಕಾರಗಳನ್ನು ಪರಿಚಯಿಸಿದರು. ಜಿಯೋ ಎಐ ಸ್ಟ್ಯಾಕ್​ನಿಂದ ಹಿಡಿದು ಜಿಯೋ ಆರೋಗ್ಯ ಎಐವರೆಗೆ ವಿವಿಧ ಎಐ ಮಾಡಲ್​ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ವಿವರಿಸಿದರು.

ಜಿಯೋ ಎಐ ಸ್ಟ್ಯಾಕ್

ಇದು ಎಐ ಫೌಂಡೇಶನಲ್ ಲೇಯರ್. ವಿವಿಧ ಆ್ಯಪ್​ಗಳು ಮತ್ತು ಸರ್ವಿಸ್​ಗಳಲ್ಲಿ ಎಐ ಅಳವಡಿಕೆ ಹೆಚ್ಚಿಸಲು ಸಾಧ್ಯವಾಗಿಸುವ ತಳಹದಿ ಇದು ಎನ್ನಲಾಗಿದೆ.

ಜಿಯೋ ಸಂಸ್ಕೃತಿ ಎಐ

ಇದು ಭಾರತದ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ನೆರವಾಗುತ್ತದೆ. ಪಾರಂಪರಿಕ ಗ್ರಂಥಗಳ ಡಿಜಿಟಲೀಕರಣ, ಭಾಷಾಂತರ ಇತ್ಯಾದಿ ಎಐ ಶಕ್ತ ಸಾಧನಗಳ ನಿಯೋಜನೆಗೆ ಒತ್ತು ಕೊಡಲಾಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್

ಜಿಯೋ ಆರೋಗ್ಯ ಎಐ

ಇದು ಹೆಲ್ತ್ ಸೆಕ್ಟರ್​ನಲ್ಲಿ ಕ್ರಾಂತಿ ತರಬಲ್ಲ ಎಐ ಮಾಡಲ್. ವಿಶೇಷವಾಗಿ ರೂಪಿಸಲಾದ ಸ್ಮಾರ್ಟ್ ಮಿರರ್ ಮುಂದೆ ವ್ಯಕ್ತಿ ನಿಂತಾಗ ಅವರ ಕಣ್ಣು, ಚರ್ಮ ಹಾಗು ಇತರೆ ಸೂಚನೆಗಳ ಆಧಾರದ ಮೇಲೆ ರೀಡಿಂಗ್ ತೆಗೆದುಕೊಳ್ಳುತ್ತದೆ. ಈ ದತ್ತಾಂಶವನ್ನು ವಿಶ್ಲೇಷಿಸಿ, ಆ ವ್ಯಕ್ತಿ ಪ್ರಾಥಮಿಕ ಹೆಲ್ತ್ ಅನಾಲಿಸಿಸ್ ಮಾಡಿ ರಿಪೋರ್ಟ್ ಕೊಡುತ್ತದೆ. ಅಗತ್ಯ ಬಿದ್ದರೆ ವ್ಯಕ್ತಿಯನ್ನು ವೈದ್ಯರ ಸಮಾಲೋಚನೆಗೆ ಶಿಫಾರಸು ಮಾಡುತ್ತದೆ ಈ ಎಐ ಮಾಡಲ್. ಪ್ರಾಥಮಿಕ ರೋಗ ತಪಾಸಣೆ ಮತ್ತು ಸಲಹೆಯ ಕಾರ್ಯವನ್ನು ಈ ಎಐ ಮಾಡಬಲ್ಲುದು. ಇದರಿಂದ ರೋಗಿಗೆ ಸಾಕಷ್ಟು ವೆಚ್ಚ ಉಳಿತಾಯ ಸಾಧ್ಯವಾಗುತ್ತದೆ.

ಜಿಯೋ ಶಿಕ್ಷಾ ಎಐ

ಇದು ಶಿಕ್ಷಣವನ್ನು ಎಲ್ಲರಿಗೂ ದಕ್ಕುವಂತೆ ಮಾಡಲು ನೆರವಾಗುವ ಎಐ ಮಾಡಲ್. ವಿದ್ಯಾರ್ಥಿಗೆ ವೈಯಕ್ತೀಕರಿಸಿದ ಕಲಿಕಾ ಮಾರ್ಗಗಳನ್ನು ಇದು ನೀಡುತ್ತದೆ. ಕಲಿಕೆಯನ್ನು ಸುಲಭವಾಗಿಸುತ್ತದೆ.

ಇದನ್ನೂ ಓದಿ: ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್

ಜಿಯೋ ಎಐ ಹೋಮ್

ಮನೆಯೊಳಗಿನ ಪರಿಸರಕ್ಕೆ ಎಐ ಅನ್ನು ಅಳವಡಿಸಿ, ಸ್ಮಾರ್ಟ್ ಜೀವನ ನಡೆಸಲು ಅನುವು ಮಾಡಿಕೊಡುತ್ತದೆ ಜಿಯೋ ಎಐ ಹೋಮ್. ಮನೆಯೊಳಗಿನ ವಿವಿಧ ಸಾಧನಗಳು ಇಂಟರ್​ಕನೆಕ್ಟ್ ಆಗಿರುತ್ತವೆ. ಟಿವಿ, ಫ್ರಿಡ್ಜ್, ಲೈಟ್ ಇತ್ಯಾದಿ ಎಲ್ಲವನ್ನೂ ಸ್ಮಾರ್ಟ್ ಆಗಿ ನಿಯಂತ್ರಿಸಲು, ನಿಭಾಯಿಸಲು ಸಾಧ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಯೌವನದಲ್ಲಿ ಈ ಕೆಲಸಗಳನ್ನು ಮಾಡಿದರೆ ವೃದ್ಧಾಪ್ಯವು ಸಂತೋಷದಿಂದಿರುವುದು – Kannada News | Chanakya Niti: Do these things today to make old age happy

ಯೌವನದಲ್ಲಿರುವಾಗ ಮಾಡುವ ಕೆಲವೊಂದು ತಪ್ಪುಗಳು ವೃದ್ಧಾಪ್ಯವನ್ನು (old age) ನರಕ ಮಾಡುತ್ತಂತೆ. ಹೌದು ಇಂದು ಮಾಡುವ ತಪ್ಪಿನಿಂದ ಕೊನೆಗಾಲದಲ್ಲಿ ಮಕ್ಕಳ ಪ್ರೀತಿಯೂ ಸಿಗೋದಿಲ್ಲ, ನೆಮ್ಮದಿಯೂ ಇರೋಲ್ಲ, ಮುಖ್ಯವಾಗಿ ಆಹಾರಕ್ಕೂ ಪರದಾಡಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವೃದ್ಧಾಪ್ಯವು ಶಾಂತಿ ಮತ್ತು ಸಂತೋಷದಿಂದ ಕೂಡಿರಬೇಕೆಂದರೆ ಯೌನದಲ್ಲಿರುವಾಗ ಈ ಒಂದಷ್ಟು ಕೆಲಸಗಳನ್ನು ತಪ್ಪದೆ ಮಾಡಲೇಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಹಾಗಿದ್ರೆ ಕೊನೆಗಾಲದಲ್ಲಿ ನೆಮ್ಮದಿಯಾಗಿ ಜೀವನ ನಡೆಸಲು ಮುಂಚಿತವಾಗಿಯೇ ಏನೆಲ್ಲಾ ಮಾಡಬೇಕು ಎಂಬುದನ್ನು ತಿಳಿಯಿರಿ.

ವೃದ್ಧಾಪ್ಯವು ಸಂತೋಷದಿಂದ ಕೂಡಿರಲು ಈ ಕೆಲಸಗಳನ್ನು ಇಂದೇ ಮಾಡಿ:

ಹಣ ಉಳಿತಾಯ ಬಹಳ ಮುಖ್ಯ: ಯೌವನದ ಆಸೆಗಳನ್ನು ಅನುಸರಿಸಲು ನಿಮ್ಮ ಎಲ್ಲಾ ಗಳಿಕೆಯನ್ನು ವ್ಯರ್ಥ ಮಾಡುವುದು ಅತ್ಯಂತ ಮೂರ್ಖತನವೆಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನಿಮ್ಮ ಸ್ವಂತ ಮಗ ಕೂಡ ವೃದ್ಧಾಪ್ಯದಲ್ಲಿ ನಿಮ್ಮನ್ನು ಕೈಬಿಡಬಹುದು, ಇಂತಹ ಸಮಯದಲ್ಲಿ ನೀವು ಕೂಡಿಟ್ಟ ಹಣ, ನೀವು ಗಳಿಸಿದ ಆಸ್ತಿ ನಿಮ್ಮ ಸಹಾಯಕ್ಕೆ ಬರುತ್ತದೆ. ಹಾಗಾಗಿ ನಿಮಗಾಗಿ, ನಿಮ್ಮ ಸ್ವಂತಕ್ಕಾಗಿ ಒಂದಷ್ಟು ಹಣವನ್ನು ಕೂಡಿಡಿ. ಇದು ನೀವು ವೃದ್ಧಾಪ್ಯದಲ್ಲಿ ಇನ್ನೊಬ್ಬರ ಮುಂದೆ ಕೈ ಚಾಚುವುದನ್ನು ತಪ್ಪಿಸುತ್ತದೆ, ನೆಮ್ಮದಿಯ, ಸ್ವಾಭಿಮಾನದ ಜೀವನ ನಡೆಸಲಲು ಅನುವು ಮಾಡಿಕೊಡುತ್ತದೆ.

ನಿಮ್ಮ ಆರೋಗ್ಯದ ಬಗ್ಗೆ ಯಾವಾಗಲೂ ವಿಶೇಷ ಕಾಳಜಿ ವಹಿಸಿ: ನಮ್ಮ ಯೌವನದಲ್ಲಿ, ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸಬೇಕು ಅದಕ್ಕಾಗಿ ದೈಹಿಕ ವ್ಯಾಯಾಮ ಮಾಡಬೇಕು, ಸಮತೋಲಿತ, ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇಂದು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ ವೃದ್ಧಾಪ್ಯದಲ್ಲಿ ಆಸ್ಪತ್ರೆಯಲ್ಲೇ ಜೀವನವನ್ನು ಕಳೆಯಬೇಕಾಗುತ್ತದೆ ಎಚ್ಚರ.

ಇದನ್ನೂ ಓದಿ: ಗುಣಗಳು ವ್ಯಕ್ತಿಗೆ ಯಶಸ್ಸು, ಗೌರವವನ್ನು ತಂದುಕೊಡುತ್ತದೆ

ನಿಮ್ಮ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಿ: ನಿಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಅವರನ್ನೇ ಆಸ್ತಿ ಮಾಡಿ. ಒಳ್ಳೆಯ ಸಂಸ್ಕಾರಗಳನ್ನು ಕಲಿಸಿ. ಇಂತಹ ಮಕ್ಕಳು ಖಂಡಿತವಾಗಿಯೂ ಕೊನೆಗಾಲದಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಬರೀ ವಿದ್ಯೆ ಕಲಿಸಿ, ಸಂಸ್ಕಾರ, ಹೆತ್ತವರ ಮೌಲ್ಯ ಏನೆಂಬುದನ್ನು ಕಲಿಸದಿದ್ದರೆ, ಅಂತಹ ಮಕ್ಕಳಿಂದ ಕೊನೆಗಾದಲ್ಲಿ ಬರಿ ನೋವನ್ನೇ ತಿನ್ನಬೇಕಾಗುತ್ತದೆ. ಆದ್ದರಿಂದ ಮುಖ್ಯವಾಗಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸುತ್ತ ಗಮನ ನೀಡಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಧಾರ್ಮಿಕ ಯಾರ್ಯ ಮತ್ತು ದಾನ, ಸದ್ಗುಣ:  ಯೌವನದಲ್ಲಿ ಮಾಡುವ ದಾನ ಮತ್ತು ಒಳ್ಳೆಯ ಕಾರ್ಯಗಳು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಇದು ನಿಮಗೆ ಸಂತೋಷವನ್ನು ನೀಡುವುದು ಮಾತ್ರವಲ್ಲ ಕೊನೆಗಾಲದಲ್ಲಿ ಈ ದಾನ ಧರ್ಮ ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಸಹಾಯಕ್ಕೆ ಬರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಒಳ್ಳೆಯ ಕಾರ್ಯಗಳನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

30ರಲ್ಲಿ ಮೂಳೆಗಳು 50 ವರ್ಷದವರಂತಾಗಬಹುದು; ವಿಟಮಿನ್ ಡಿ, ಕ್ಯಾಲ್ಸಿಯಂ ಒಟ್ಟಿಗೆ ಸಿಗದಿದ್ದರೆ ಏನಾಗುತ್ತೆ ನೋಡಿ – Kannada News | Causes of Weak Bones: Deficiency Symptoms

ಇತ್ತೀಚಿನ ವರ್ಷಗಳಲ್ಲಿ 30 ರಿಂದ 40 ವರ್ಷ ವಯಸ್ಸಿನಲ್ಲಿಯೇ ಮೂಳೆಗಳು ದುರ್ಬಲಗೊಳ್ಳುತ್ತಿದ್ದು, ಬೆನ್ನು, ಭುಜ ಮತ್ತು ಮೊಣಕಾಲುಗಳಲ್ಲಿ ನೋವಿಗೆ ಕಾರಣವಾಗುತ್ತಿದೆ. ಈ ರೀತಿ ಮೂಳೆ ನೋವಿಗೆ ಪ್ರಮುಖ ಕಾರಣವೆಂದರೆ ವಿಟಮಿನ್ ಡಿ (Vitamin D) ಕೊರತೆ. ಇದನ್ನು ನೀಗಿಸಲು, ಕೆಲವರು ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ ಇನ್ನು ಕೆಲವರು ಇಂಜೆಕ್ಷನ್‌ಗಳ ಮೊರೆ ಹೋಗುತ್ತಾರೆ. ಇಷ್ಟಾದರೂ ಕೆಲವರಿಗೆ ಮೂಳೆ ನೋವು ವಾಸಿಯಾಗುವುದಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಸೂರ್ಯನ ಬೆಳಕು ಸಿಗದಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ಆದರೆ ಇದಕ್ಕೆ ವಿಟಮಿನ್ ಡಿ ಮಾತ್ರ ಮುಖ್ಯವಲ್ಲ, ಅದರ ಜೊತೆಗೆ ದೇಹದಲ್ಲಿ ಕ್ಯಾಲ್ಸಿಯಂ (Calcium) ಮಟ್ಟ ಕೂಡ ಸಾಕಷ್ಟು ಪ್ರಮಾಣದಲ್ಲಿ ಇರಬೇಕಾಗುತ್ತದೆ. ಕ್ಯಾಲ್ಸಿಯಂ ಪರೀಕ್ಷಿಸದೆಯೇ ಕೇವಲ ವಿಟಮಿನ್ ಡಿ ಮಟ್ಟವನ್ನು ಮಾತ್ರ ಪರಿಗಣಿಸಿ ಅದಕ್ಕೆ ಔಷಧಿಗಳನ್ನು ಸೇವನೆ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಹಾಗಾಗಿ ಇವೆರಡರ ಬಗ್ಗೆ ತಿಳಿದುಕೂಂಡು ಅವೆರಡು ದೇಹಕ್ಕೆ ಎಷ್ಟು ಮುಖ್ಯ, ಯಾರಲ್ಲಿ ಈ ರೀತಿಯ ಅಪಾಯ ಹೆಚ್ಚಾಗಿ ಕಂಡುಬರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ದೇಹಕ್ಕೆ ವಿಟಮಿನ್ ಡಿ ಯಷ್ಟೇ ಕ್ಯಾಲ್ಸಿಯಂ ಏಕೆ ಮುಖ್ಯ?

ಸಾಮಾನ್ಯವಾಗಿ ದೇಹದಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇದ್ದಾಗ ಮಾತ್ರ ವಿಟಮಿನ್ ಡಿ ಸರಿಯಾಗಿ ಕೆಲಸ ಮಾಡುತ್ತದೆ. ಕ್ಯಾಲ್ಸಿಯಂ ಕಡಿಮೆಯಿದ್ದರೆ, ವಿಟಮಿನ್ ಡಿ ತೆಗೆದುಕೊಂಡ ನಂತರ ಮೂಳೆಗಳು ಬಲಗೊಳ್ಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಅವುಗಳನ್ನು ಒಟ್ಟಿಗೆ ತೆಗೆದುಕೊಳ್ಳುವುದು ಅವಶ್ಯಕ. ಒಬ್ಬ ವ್ಯಕ್ತಿ ವಿಟಮಿನ್ ಡಿ ಜೊತೆಗೆ ಕ್ಯಾಲ್ಸಿಯಂ ತೆಗೆದುಕೊಳ್ಳದಿದ್ದರೆ, ಆಸ್ಟಿಯೊಪೊರೋಸಿಸ್ ಬರುವ ಅಪಾಯವಿರಬಹುದು. ಇದು ಚಿಕ್ಕ ವಯಸ್ಸಿನಲ್ಲಿಯೇ ಮೂಳೆ ತೆಳುವಾಗಿ ಮತ್ತು ದುರ್ಬಲವಾಗಲು ಕಾರಣವಾಗಬಹುದು, ಅಷ್ಟೇಅಲ್ಲ, ಮುರಿತದ ಅಪಾಯ ಹೆಚ್ಚಾಗಬಹುದು. ಇದು ಸ್ನಾಯು ನೋವು ಮತ್ತು ಆಯಾಸಕ್ಕೂ ಕಾರಣವಾಗಬಹುದು.

ಇದನ್ನೂ ಓದಿ: ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತೆ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ!

ಯಾರಲ್ಲಿ ಈ ಅಪಾಯ ಹೆಚ್ಚಾಗಿ ಕಂಡುಬರುತ್ತದೆ?

  • ಬಿಸಿಲಿಗೆ ಕಡಿಮೆ ಹೋಗುವವರಲ್ಲಿ
  • ಕಚೇರಿಯಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರಲ್ಲಿ
  • ಹೆಚ್ಚು ಜಂಕ್ ಫುಡ್ ತಿನ್ನುವವರು
  • ಮಹಿಳೆಯರಲ್ಲಿ, ವಿಶೇಷವಾಗಿ 30 ರ ನಂತರ ಈ ಸಮಸ್ಯೆ ಕಂಡುಬರಬಹುದು

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಕ್ಷಣಾ ಪಾಲುದಾರಿಕೆ, AI ಸಹಯೋಗ, ರಫೇಲ್ ಜೆಟ್ ಖರೀದಿ; ಫ್ರಾನ್ಸ್​ ಜೊತೆ 20 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ – Kannada News | From Defence partnership to AI collaboration India France signs 20 agreements PM Modi Macron joint presser

ಮುಂಬೈ, ಫೆಬ್ರವರಿ 17: ಮುಂಬೈನಲ್ಲಿ ನಡೆದ ವ್ಯಾಪಕ ದ್ವಿಪಕ್ಷೀಯ ಮಾತುಕತೆಗಳ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರಕ್ಷಣೆ, ಕೌಶಲ್ಯ, ತಂತ್ರಜ್ಞಾನ ಸಹಕಾರ, ವ್ಯಾಪಾರ ಮತ್ತು ಆರೋಗ್ಯ ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳನ್ನು ಘೋಷಿಸಿದರು. ಬಳಿಕ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮುಂಬೈನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಸಂಜೆ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಫ್ರಾನ್ಸ್ ಅನ್ನು ಯುರೋಪಿನ ಪ್ರಮುಖ ದ್ವಾರವೆಂದು ಬಣ್ಣಿಸಿದರು.

“2026ನೇ ವರ್ಷವು ಭಾರತ-ಯುರೋಪ್ ಸಂಬಂಧಗಳಲ್ಲಿ ಒಂದು ಮಹತ್ವದ ತಿರುವು. ಕೆಲವು ದಿನಗಳ ಹಿಂದೆ ಯುರೋಪಿಯನ್ ಒಕ್ಕೂಟವು ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು. ಭಾರತ ಮತ್ತು ಫ್ರಾನ್ಸ್ ಆಳವಾದ ಸಂಬಂಧವನ್ನು ಹಂಚಿಕೊಂಡಿವೆ” ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತ ಮತ್ತು ಫ್ರಾನ್ಸ್ ನಿರ್ಣಾಯಕ ಖನಿಜಗಳು, ಸುಧಾರಿತ ವಸ್ತುಗಳು ಮತ್ತು ಜೈವಿಕ ತಂತ್ರಜ್ಞಾನದಲ್ಲಿ ಸಹಕಾರವನ್ನು ಆಳಗೊಳಿಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಇಂಡೋ-ಫ್ರೆಂಚ್ ಸೆಂಟರ್ ಫಾರ್ ಎಐ ಇನ್ ಹೆಲ್ತ್, ಇಂಡೋ-ಫ್ರೆಂಚ್ ಸೆಂಟರ್ ಫಾರ್ ಡಿಜಿಟಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಸೆಂಟರ್ ಫಾರ್ ಸ್ಕಿಲ್ಲಿಂಗ್ ಇನ್ ಏರೋನಾಟಿಕ್ಸ್ ಸ್ಥಾಪನೆಯನ್ನು ಮೋದಿ ಹಾಗೂ ಮ್ಯಾಕ್ರನ್ ಘೋಷಿಸಿದರು. ಉಕ್ರೇನ್, ಪಶ್ಚಿಮ ಏಷ್ಯಾ ಮತ್ತು ಇಂಡೋ-ಪೆಸಿಫಿಕ್ ಸೇರಿದಂತೆ ಪ್ರದೇಶಗಳಲ್ಲಿ ಶಾಂತಿ ಪ್ರಯತ್ನಗಳಿಗೆ ಪ್ರಧಾನಿ ಮೋದಿ ಬೆಂಬಲವನ್ನು ದೃಢಪಡಿಸಿದರು. ಎಲ್ಲಾ ರೀತಿಯ ಭಯೋತ್ಪಾದನೆಯ ವಿರುದ್ಧ ಹೋರಾಡಲು ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು. ಫ್ರೆಂಚ್ ಮೂಲದ H125 ಸಿಂಗಲ್-ಎಂಜಿನ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳಿಗಾಗಿ ಭಾರತದಲ್ಲಿ ಅಸೆಂಬ್ಲಿ ಲೈನ್ ಅನ್ನು ಸ್ಥಾಪಿಸುವುದಾಗಿಯೂ ಮೋದಿ ಘೋಷಿಸಿದರು.

ಇದನ್ನೂ ಓದಿ: ಮುಂಬೈನ ಫುಟ್​ಪಾತ್​​ನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜಾಗಿಂಗ್; ಕಣ್ಣೆತ್ತೂ ನೋಡದ ಜನ!

ಜಂಟಿ ಪತ್ರಿಕಾಗೋಷ್ಠಿಯ ಸಮಯದಲ್ಲಿ, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಎರಡೂ ರಾಷ್ಟ್ರಗಳು ರಕ್ಷಣಾ ಕ್ಷೇತ್ರದಲ್ಲಿ ತಮ್ಮ ಸಹಯೋಗವನ್ನು ವಿಸ್ತರಿಸುತ್ತಿವೆ ಎಂದು ಒತ್ತಿ ಹೇಳಿದರು. ನಂಬಿಕೆ, ಮುಕ್ತತೆ ಮತ್ತು ಮಹತ್ವಾಕಾಂಕ್ಷೆಯನ್ನು ಹೊಂದಿರುವ ದ್ವಿಪಕ್ಷೀಯ ಸಂಬಂಧ ವಿಶಿಷ್ಟವಾದುದು ಎಂದು ಅವರು ವಿವರಿಸಿದರು. “ರಫೇಲ್ ಜೆಟ್‌ಗಳಿಂದ ಜಲಾಂತರ್ಗಾಮಿ ನೌಕೆಗಳವರೆಗೆ, ನಾವು ರಕ್ಷಣಾ ಸಹಕಾರವನ್ನು ವಿಸ್ತರಿಸುತ್ತಿದ್ದೇವೆ. ನಮ್ಮ ಸಹಯೋಗವನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ನಾವು ಇಂದು ನಿರ್ಧರಿಸಿದ್ದೇವೆ, ಅದಕ್ಕೆ ಹೊಸ ಸ್ಥಾನಮಾನವನ್ನು ನೀಡುತ್ತೇವೆ” ಎಂದು ಮ್ಯಾಕ್ರನ್ ಹೇಳಿದರು.

ಭಾರತ ಮತ್ತು ಫ್ರಾನ್ಸ್ ಪ್ರತಿ ವರ್ಷವೂ ಇಂಡೋ-ಪೆಸಿಫಿಕ್ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಹಾದಿಗಳನ್ನು ರೂಪಿಸುತ್ತಲೇ ಇವೆ ಎಂದು ಮ್ಯಾಕ್ರನ್ ಎತ್ತಿ ತೋರಿಸಿದರು. ಐಎಂಇಸಿ, ಕೃತಕ ಬುದ್ಧಿಮತ್ತೆ (ಎಐ) ಸಹಯೋಗ ಮತ್ತು ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಡಿಯಲ್ಲಿ ಪ್ರಗತಿಯಂತಹ ಉಪಕ್ರಮಗಳಿಗೆ ಕೈಜೋಡಿಸಲಾಗಿದೆ. ಎರಡೂ ದೇಶಗಳು ಪರಸ್ಪರ ಸಹಕಾರದಲ್ಲಿ ನಂಬಿಕೆ ಇಡುತ್ತವೆ ಎಂದು ಮ್ಯಾಕ್ರನ್ ಹೇಳಿದರು.

ಇದನ್ನೂ ಓದಿ: ಮುಂಬೈನಲ್ಲಿ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್​​ಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ

ವ್ಯಾಪಾರ, ರಕ್ಷಣೆ, ಇಂಧನ ಮತ್ತು ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸಂಬಂಧಗಳನ್ನು ಹೆಚ್ಚಿಸುವತ್ತ ಮಾತುಕತೆಗಳು ಗಮನಹರಿಸಿದ್ದು, ಎರಡೂ ದೇಶಗಳ ನಾಯಕರು ಕಾರ್ಯತಂತ್ರದ ಪಾಲುದಾರಿಕೆಯನ್ನು ಗಾಢವಾಗಿಸಲು ತಮ್ಮ ಹಂಚಿಕೆಯ ಬದ್ಧತೆಯನ್ನು ಒತ್ತಿಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:31 pm, Tue, 17 February 26

Source link

‘ತ್ರಿಕಾರಂ’ ಚಿತ್ರತಂಡದಿಂದ ಮತ್ತೊಂದು ಲವ್ ಹಾಡು ರಿಲೀಸ್ – Kannada News | Seedanintru Lokayako song released from Trikaaram movie

ಈ ಮೊದಲು ಬಿಡುಗಡೆ ಆಗಿದ್ದ ಹಾಡಿಗೆ ಜನರಿಂದ ಸಿಕ್ಕ ಪ್ರತಿಕ್ರಿಯೆಗೆ ‘ತ್ರಿಕಾರಂ’ (Trikaaram) ಚಿತ್ರತಂಡ ಖುಷಿಯಾಗಿದೆ. ಅದರ ಬೆನ್ನಲ್ಲೇ ಇನ್ನೊಂದು ಹಾಡು (Kannada Song) ರಿಲೀಸ್ ಮಾಡಲಾಗಿದೆ. ಫೆಬ್ರವರಿ ಎಂದರೆ ಪ್ರೇಮಿಗಳ ತಿಂಗಳು. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಈ ಸಿನಿಮಾದ ಹೊಸ ಹಾಡನ್ನು ಅನಾವರಣ ಮಾಡಲಾಯಿತು. ಉತ್ಸವ್ ಲೆಗೆಸಿಯಲ್ಲಿ ಹಾಡಿನ ರಿಲೀಸ್ ಕಾರ್ಯಕ್ರಮ ನಡೆಯಿತು. ರವೀಂದ್ರ, ಶಿವರಾಜ್ ಕೆ.ಆರ್. ಪೇಟೆ, ಖದರ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ವಿಶ್ ಮಾಡಿದರು.

‘ತ್ರಿಕಾರಂ’ ಸಿನಿಮಾದ ಹೊಸ ಹಾಡು ಪಿನ್2ಪಿನ್ ಮ್ಯೂಸಿಕ್ ಸಂಸ್ಥೆಯಿಂದ ರಿಲೀಸ್ ಆಗಿದೆ. ‘ಸೀದಾ ನಿಂತರೂ ಲೋಕ ಯಾಕೆ ಉಲ್ಟ ಕಾಣ್ತದೆ’ ಎಂಬ ಸಾಲಿನೊಂದಿಗೆ ಈ ಹಾಡು ಶುರು ಆಗುತ್ತದೆ. ಕೇಶು-ಚೇತನ್ ಅವರು ಈ ಹಾಡನ್ನು ಬರೆದಿದ್ದಾರೆ. ರಾಜೇಶ್ ಕೃಷ್ಣನ್ ಅವರು ಧ್ವನಿ ನೀಡಿದ್ದಾರೆ. ಈ ಸಿನಿಮಾಗೆ ವಿವೇಕ್ ಚಕ್ರವರ್ತಿ ಅವರು ಸಂಗೀತ ಸಂಯೋಜಿಸಿದ್ದಾರೆ.

‘ಸದ್ಗುರು ಸಿನಿ ಪ್ರೊಡಕ್ಷನ್’ ಮೂಲಕ ನಾಟಕಪ್ರೇಮಿ ಆಗಿರುವ ಜಿ. ಗಣೇಶ್ ಮೂರ್ತಿ ಅವರು ‘ತ್ರಿಕಾರಂ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕನಾಗಿದ್ದು ಮಾತ್ರವಲ್ಲದೇ ವಿಲನ್ ಪಾತ್ರವನ್ನೂ ಅವರೇ ಮಾಡಿದ್ದಾರೆ. ಹಲವು ನಿರ್ದೇಶಕರ ಜೊತೆ ಕೆಲಸ ಮಾಡಿ ಅನುಭವ ಹೊಂದಿರುವ ಅಜ್ಜಂಪುರದ ದಿಲೀಪ್ ಕುಮಾರ್ ಜೆ.ಆರ್. ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

‘ತ್ರಿಕಾರಂ’ ಸಿನಿಮಾದ ಹೊಸ ಹಾಡು:

ಈ ಸಿನಿಮಾಗೆ ಹೊನ್ನಾಳಿ ಯಾಸಿನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸತೀಶ್ ಚಂದ್ರಯ್ಯ ಅವರು ಸಂಕಲನ ಮಾಡಿದ್ದಾರೆ. ಚಂದ್ರುಬಂಡೆ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಹೈಟ್‌ ಮಂಜು, ಕಂಬಿರಾಜ್ ಅವರ ನ್ಯೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ನಾಗೇಂದ್ರ ಪ್ರಸಾದ್, ಚೇತನ್‌ಕುಮಾರ್, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಹೊಸದುರ್ಗ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.

ಇದನ್ನೂ ಓದಿ: ಶಶಾಂಕ್ ಶೇಷಗಿರಿ ಕಂಠದಲ್ಲಿ ‘ತ್ರಿಕಾರಂ’ ಸಿನಿಮಾದ ಟೈಟಲ್ ಸಾಂಗ್

ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕರು ಮಾಹಿತಿ ಹಂಚಿಕೊಂಡರು. ‘ದೈವ ಮತ್ತು ದುಷ್ಟರ ನಡುವಿನ ಹೋರಾಟ ಕಥೆಯು ಸೆಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಅದು ಯಾವ ರೀತಿಯ ಹೋರಾಟ ಎಂಬುದನ್ನು ಸಿನಿಮಾದಲ್ಲಿ ನೋಡಬೇಕು’ ಎಂದು ಅವರು ಹೇಳಿದರು. ಈ ಚಿತ್ರದಲ್ಲಿ ಹರ್ಷವರ್ಧನ್, ನಿಶ್ಚಿತಾ ಶೆಟ್ಟಿ, ನಾಗೇಂದ್ರ ಅರಸ್, ಬಲರಾಜವಾಡಿ, ಮಂಜು ಪಾವಗಡ ಮುಂತಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link