All posts by nagaraj11081993

ಪುಟ್ಟ ಅಭಿಮಾನಿ ಕೊಟ್ಟ ಗಿಫ್ಟ್ ಸ್ವೀಕರಿಸಿದ ಗಿಲ್ಲಿ ನಟ – Kannada News | Gilli Nata Happily Took Fans Gift in Anekal

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ ಅವರು ಹೋದಲ್ಲಿ, ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಅವರು ವಿವಿಧ ಕಾರ್ಯಕ್ರಮಗಳಿಗೆ ತೆರಳಿ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾರೆ. ಈಗ ಆನೇಕಲ್​​ನಲ್ಲಿ ನಡೆದ ಈವೆಂಟ್​​​ನಲ್ಲಿ ಗಿಲ್ಲಿ ಭಾಗಿ ಆಗಿದ್ದರು. ಅಲ್ಲಿ ಅಭಿಮಾನಿಗಳು ಕೊಟ್ಟ ಗಿಫ್ಟ್​​ನ ಅವರು ಸ್ವೀಕರಿಸಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್-ರಶ್ಮಿಕಾ ಮದುವೆಗೆ ಬರೋ ಅತಿಥಿಗಳಿಗೆ ಇರಲಿದೆ ಕಠಿಣ ನಿಯಮ – Kannada News | Vijay Rashmika Wedding: Udaipur Dates, Strict Mobile Ban and Reception Details Revealed

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandannna) ಫೆಬ್ರವರಿ 26ರಂದು ಮದುವೆ ಆಗೋದು ಬಹುತೇಕ ಖಚಿತವಾಗಿದೆ. ಉದಯಪುರದಲ್ಲಿ ಇವರ ವಿವಾಹ ನಡೆಯುತ್ತಿದೆ. ಈಗಾಗಲೇ ದಂಪತಿಯ ವಿವಾಹ ಆಮಂತ್ರಣದ ಫೋಟೋಗಳು ವೈರಲ್ ಆಗಿವೆ. ಹೀಗಿರುವಾಗಲೇ ಈ ದಂಪತಿ ಮದುವೆ ನಡೆಯೋ ಜಾಗದಲ್ಲಿ ತೆಗೆದುಕೊಂಡು ಬಂದ ನಿಯಮದ ಬಗ್ಗೆ ಸುದ್ದಿ ಹರಿದಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಟೀಂ ಒಂದನ್ನು ಆಯ್ಕೆ ಮಾಡಿದೆ. ಈ ತಂಡ ತಮ್ಮ ಕ್ಯಾಮೆರಾ ಮೂಲಕ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಮಾಡಲಿದೆ. ಈ ಫೋಟೋಗನ್ನು ಎಲ್ಲಿಯೂ ರಿವೀಲ್ ಮಾಡುವುದಿಲ್ಲ ಮತ್ತು ಹಂಚಿಕೊಳ್ಳುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡು ಸಹಿ ಹಾಕಿಸಿಕೊಳ್ಳಲಾಗಿದೆ.

ಇನ್ನು, ವಿಜಯ್ ಮದುವೆಗೆ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ ಎಂದು ವರದಿ ಆಗಿದೆ. ಹೀಗಾಗಿ, ಅವರ್ಯಾರು ಮೊಬೈಲ್ ತರದಂತೆ ಕಠಿಣ ನಿಯಮವನ್ನು ಮಾಡಲಾಗಿದೆ. ಮದುವೆಗೆ ಬರೋ ಅತಿಥಿಗಳು ಮೊಬೈಲ್​​​ ಅನ್ನು ತರುವಂತಿಲ್ಲ. ಮೊಬೈಲ್ ಬಳಕೆ ತಡೆಯಲು ಚೆಕಿಂಗ್ ಇರುತ್ತದೆ. ವಿವಾಹ ನಡೆಯೋ ಜಾಗದಲ್ಲಿಯೂ ಈ ಬಗ್ಗೆ ಕಣ್ಣಿಡಲು ಜನರನ್ನು ನೇಮಿಸಲಾಗಿದೆ.

ಈ ರೀತಿಯ ಫೋಟೋ-ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳುವುದು ರಶ್ಮಿಕಾ-ವಿಜಯ್​​ಗೆ ಇರೋ ದೊಡ್ಡ ಚಾಲೆಂಜ್. ಈ ಮೊದಲು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ದಂಪತಿ, ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಮೊಬೈಲ್ ತರದಂತೆ ನಿಯಮ ತಂದಿದ್ದರು. ಆ ತಂತ್ರ ಕೆಲಸ ಮಾಡಿತ್ತು. ಈಗ ರಶ್ಮಿಕಾ-ವಿಜಯ್ ಕೂಡ ಇದೇ ಪಾಲಿಸಿ ಅಳವಡಿಸಿಕೊಳ್ಳುತ್ತಿದ್ದಾರೆ.

ಚಿತ್ರರಂಗದ ಯಾರನ್ನೂ ಮದುವೆಗೆ ಆಮಂತ್ರಿಸಿಲ್ಲ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಅವರು ಹಲವು ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದಾರೆ. ಅವರೆಲ್ಲರನ್ನೂ ಹೈದರಾಬಾದ್​​ನ ಆರತಕ್ಷತೆಗೆ ಆಮಂತ್ರಿಸಲಾಗುತ್ತಿದೆ. ಮದುವೆ ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯುತ್ತಿದೆ ಎಂಬುದು ವಿಶೇಷ.

ಇದನ್ನೂ ಓದಿ: ಮದುವೆಗೂ ಮುನ್ನ ಮ್ಯಾಚಿಂಗ್ ಡ್ರೆಸ್ ಹಾಕಿ ಮುಂಬೈನಿಂದ ಹಾರಿದ ವಿಜಯ್-ರಶ್ಮಿಕಾ

ವಿಜಯ್ ಹಾಗೂ ರಶ್ಮಿಕಾ ಅವರ ವಿವಾಹ ಆಮಂತ್ರಣ ಪತ್ರ ವೈರಲ್ ಆಗಿದೆ. ಇದರಲ್ಲಿ ವಿವಾಹ ದಿನಾಂಕ ಫೆಬ್ರವರಿ 26 ಎಂದಿದೆ. ಮಾರ್ಚ್​ 4ರಂದು ಹೈದರಾಬಾದ್​​​ನ್ಲಿ ಆರತಕ್ಷತೆ ಇದೆ ಎಂಬ ಮಾಹಿತಿಯೂ ರಿವೀಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಐ ಸಮಿಟ್​ನಿಂದ ಬಿಲ್ ಗೇಟ್ಸ್ ಹೊರಕ್ಕೆ; ಎಪ್​ಸ್ಟೀನ್ ಫೈಲ್ಸ್ ಕಾರಣವಾ? – Kannada News | AI Impact Summit, Bill Gates name dropped from global visionaries list

ನವದೆಹಲಿ, ಫೆಬ್ರುವರಿ 17: ದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುತ್ತಿರುವ ಎಐ ಸಮಿಟ್​ನಲ್ಲಿ (AI Impact Summit 2026) ಬಿಲ್ ಗೇಟ್ಸ್ ಪಾಲ್ಗೊಳ್ಳುತ್ತಿಲ್ಲ. ವಿಶ್ವದ ಶ್ರೀಮಂತರಲ್ಲಿ ಒಬ್ಬರಾಗಿರುವ, ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕರಾಗಿರುವ ಬಿಲ್ ಗೇಟ್ಸ್ (Bill Gates) ಅವರ ಹೆಸರನ್ನು ಈ ಸಮಾವೇಶದ ‘ಜಾಗತಿಕ ದ್ರಷ್ಟಾರರು’ (ಗ್ಲೋಬಲ್ ವಿಶನರೀಸ್) ಪಟ್ಟಿಯಿಂದ ಕೈಬಿಡಲಾಗಿದೆ. ಕಾರಣಾಂತರಗಳಿಂದ ಬಿಲ್ ಗೇಟ್ಸ್ ಅವರು ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.

ಕೆಲ ಮೂಲಗಳ ಪ್ರಕಾರ, ಎಪ್​ಸ್ಟೀನ್ ಫೈಲ್ಸ್​ನಲ್ಲಿ (Jeffrey Epstein files) ಬಿಲ್ ಗೇಟ್ಸ್ ಅವರ ಹೆಸರಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿರುವುದು ತಿಳಿದುಬಂದಿದೆ. ನೈತಿಕ ಕಾರಣಕ್ಕೆ ಬಿಲ್ ಗೇಟ್ಸ್ ಅವರೇ ಸ್ವತಹವಾಗಿ ಶೃಂಗಸಭೆಯಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ಧಾರೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಜೆಫ್ರೀ ಎಪ್​ಸ್ಟೀನ್ ಫೈಲ್​ಗಳಲ್ಲಿ ವಿಶ್ವದ ಹಲವು ನಾಯಕರು, ಉದ್ಯಮಿಗಳು, ಸೆಲಬ್ರಿಟಿಗಳ ಹೆಸರು ಕಂಡು ಬಂದಿವೆ. ಬಿಲ್ ಗೇಟ್ಸ್​ಗೆ ವಿವಾಹಬಾಹಿರ ಅನೈತಿಕ ಸಂಬಂಧ ಇತ್ತು. ರಷ್ಯನ ಹುಡುಗಿಯರ ಜೊತೆ ಲೈಂಗಿಕ ಸಂಬಂಧ ಇತ್ತು ಎಂಬಿತ್ಯಾದಿ ವಿಚಾರಗಳನ್ನು ಜೆಫ್ರೀ ಎಪ್​ಸ್ಟೀನನೇ ಹೇಳಿಕೊಂಡಿದ್ದು ಈ ಫೈಲ್​ಗಳಲ್ಲಿ ಇದೆ. ಈ ಬಗ್ಗೆ ಬಿಲ್ ಗೇಟ್ಸ್ ಪ್ರತಿಕ್ರಿಯೆ ಕೂಡ ಕೊಟ್ಟಿದ್ದಾರೆ.

‘ಆತನೊಂದಿಗೆ ಕಳೆದ ಪ್ರತೀ ನಿಮಿಷಕ್ಕೂ ವ್ಯಥೆ ಪಡುತ್ತೇನೆ. ಕ್ಷಮೆ ಕೇಳುತ್ತೇನೆ’ ಎಂದು ಬಿಲ್ ಗೇಟ್ಸ್ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಿಲ್ ಗೇಟ್ಸ್ ಅವರು ಪತ್ನಿ ಮೆಲಿಂದಾ ಗೇಟ್ಸ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಬಿಲ್ ಗೇಟ್ಸ್ ಹೊಂದಿದ್ದ ಅನೈತಿಕ ಸಂಬಂಧಗಳೇ ಈ ವಿಚ್ಛೇದನಕ್ಕೆ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

ಯಾರಿದು ಜೆಫ್ರೀ ಎಪ್​ಸ್ಟೀನ್?

ಜೆಫ್ರೀ ಎಪ್​ಸ್ಟೀನ್ ಅಮೆರಿಕದ ಶ್ರೀಮಂತ. ಅಪ್ರಾಪ್ತ ಮಹಿಳೆಯರ ವಿರುದ್ಧ ಲೈಂಗಿಕ ಶೋಷಣೆ ಎಸಗುತ್ತಿದ್ದ ಗುರುತರ ಆರೋಪ ಈತನ ಮೇಲಿತ್ತು. 2017ರಲ್ಲಿ ಈತನನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. 2019ರಲ್ಲಿ ನ್ಯೂಯಾರ್ಕ್ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಈ ಒಂದು ವಸ್ತುವನ್ನು ಅಕ್ಕಿ ಪಾತ್ರೆಯಲ್ಲಿ ಇರಿಸಿ, ಆಹಾರ, ಹಣದಕ್ಕೆಂದೂ ಕೊರತೆಯಾಗದು! – Kannada News | Rice in Hinduism: Symbol of Prosperity, Annapoorne Blessings and Vastu Tips

ಹಿಂದೂ ಧರ್ಮದಲ್ಲಿ ಅಕ್ಕಿ ಕೇವಲ ಒಂದು ಧಾನ್ಯವಲ್ಲ, ಅದು ಜೀವನದ ಆಧಾರ, ಸಮೃದ್ಧಿಯ ಸಂಕೇತ ಮತ್ತು ದೈವಿಕ ಆಶೀರ್ವಾದದ ರೂಪವಾಗಿದೆ. ನಮ್ಮ ಸಂಪ್ರದಾಯದಲ್ಲಿ ಅಕ್ಕಿಯನ್ನು ದೇವಿ ಅನ್ನಪೂರ್ಣೆ ಅವರ ಕೃಪೆಯಾಗಿ ಕಾಣಲಾಗುತ್ತದೆ. ಅನ್ನಪೂರ್ಣೆ ಎಂದರೆ ಅನ್ನವನ್ನು ನೀಡುವ ತಾಯಿ, ಮನೆಗಳಲ್ಲಿ ಅನ್ನದ ಕೊರತೆ ಬರದಂತೆ ಕಾಪಾಡುವ ಶಕ್ತಿ. ಅದಕ್ಕಾಗಿ ಅಡುಗೆಮನೆಯ ಅಕ್ಕಿ ಡಬ್ಬಿ ಯಾವಾಗಲೂ ತುಂಬಿರಬೇಕು ಎಂಬ ನಂಬಿಕೆ ಇದೆ. ಡಬ್ಬಿ ಸಂಪೂರ್ಣ ಖಾಲಿಯಾಗುವುದು ಜೀವನದಲ್ಲಿ ಕೊರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದರೆ ಸ್ವಲ್ಪವಾದರೂ ಅಕ್ಕಿ ಉಳಿದಿದ್ದರೆ ಮನೆಗೆ ಸದಾ ಆಹಾರ ಮತ್ತು ಹಣದ ಹರಿವು ನಿರಂತರವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಅಡುಗೆಮನೆ ಮನೆಯ ಹೃದಯವಾಗಿದ್ದು, ವಾಸ್ತು ಪ್ರಕಾರ ಅದು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತದೆ. ಈ ಸ್ಥಳ ಸ್ವಚ್ಛವಾಗಿದ್ದರೆ ಮತ್ತು ಧಾನ್ಯಗಳು ಸಮರ್ಪಕವಾಗಿ ಸಂಗ್ರಹವಾಗಿದ್ದರೆ, ಮನೆಯ ಆರ್ಥಿಕ ಸ್ಥಿತಿ ಸ್ಥಿರವಾಗುತ್ತದೆ ಎಂಬ ನಂಬಿಕೆ ಇದೆ. ಅಕ್ಕಿ ಡಬ್ಬಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ತೇವ ಅಥವಾ ಕೀಟಗಳಿಲ್ಲದಂತೆ ನೋಡಿಕೊಳ್ಳುವುದು ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದಲ್ಲ, ಆರೋಗ್ಯದ ದೃಷ್ಟಿಯಿಂದಲೂ ಮುಖ್ಯ.

ಕೆಲವು ಮನೆಗಳಲ್ಲಿ ಅಕ್ಕಿ ಕಾಳುಗಳೊಳಗೆ ಎರಡು ಬೆಳ್ಳಿ ನಾಣ್ಯಗಳನ್ನು ಅಥವಾ ಹಳದಿ ಅರಿಶಿನದ ಕೊಂಬು ಕೆಂಪು ಬಟ್ಟೆಯಲ್ಲಿ ಕಟ್ಟಿಟ್ಟು ಇಡುವ ಪದ್ಧತಿ ಇದೆ. ಕೆಂಪು ಬಣ್ಣ ಶಕ್ತಿ ಮತ್ತು ಲಕ್ಷ್ಮೀ ತತ್ವದ ಸಂಕೇತವಾಗಿದ್ದು, ಅರಿಶಿನ ಪವಿತ್ರತೆ ಮತ್ತು ಆರೋಗ್ಯವನ್ನು ಸೂಚಿಸುತ್ತದೆ. ಬೆಳ್ಳಿ ನಾಣ್ಯಗಳು ಶುದ್ಧತೆ ಮತ್ತು ಧನಾಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಣ್ಣ ಪರಿಹಾರದಿಂದ ಅಡುಗೆಮನೆಯಲ್ಲಿ ಅನ್ನಪೂರ್ಣೆಯ ನೆಲೆಸುವಿಕೆ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿ ಕಡಿಮೆಯಾಗುವುದಿಲ್ಲ ಎಂಬ ವಿಶ್ವಾಸ ಇದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಪೂರ್ವಜರು ಅಕ್ಕಿಯನ್ನು ಅತ್ಯಂತ ಗೌರವದಿಂದ ಬಳಕೆ ಮಾಡುತ್ತಿದ್ದರು. ಅಕ್ಕಿ ನೆಲಕ್ಕೆ ಬಿದ್ದರೆ ಅದನ್ನು ತುಳಿಯದೆ ಎತ್ತಿ ತಲೆಗೆ ಸ್ಪರ್ಶಿಸುವ ಸಂಸ್ಕಾರವೂ ಅದೇ ಗೌರವದ ಸೂಚನೆ. ಹೊಸ ಅಕ್ಕಿ ಮನೆಗೆ ಬಂದಾಗ ಮೊದಲು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಬಳಸುವ ಪದ್ಧತಿ ಇನ್ನೂ ಹಲವಾರು ಮನೆಗಳಲ್ಲಿ ಕಂಡುಬರುತ್ತದೆ. ಶುಭ ದಿನಗಳಲ್ಲಿ ಬಡವರಿಗೆ ಅಕ್ಕಿ ದಾನ ಮಾಡುವುದು ಧನಪ್ರವಾಹವನ್ನು ಹೆಚ್ಚಿಸುತ್ತದೆ ಮತ್ತು ಮನೆಗೆ ಪುಣ್ಯ ತರುತ್ತದೆ ಎಂದು ನಂಬಲಾಗುತ್ತದೆ. ಈ ಎಲ್ಲಾ ಆಚರಣೆಗಳು ಕೇವಲ ಅಂಧನಂಬಿಕೆಗಳಲ್ಲ; ಅವು ಸಂಗ್ರಹದ ಮಹತ್ವ, ಶಿಸ್ತಿನ ಜೀವನ ಮತ್ತು ಆಹಾರದ ಪಾವಿತ್ರ್ಯವನ್ನು ನೆನಪಿಸುವ ಸಾಂಸ್ಕೃತಿಕ ಮೌಲ್ಯಗಳಾಗಿವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೈಕ್​​ ಡಿಕ್ಕಿ ರಭಸಕ್ಕೆ ಮುರಿದುಬಿದ್ದ ವಿದ್ಯುತ್​​ ಕಂಬ: ಸವಾರರು ಬದುಕಿದ್ದೇ ಪವಾಡ! – Kannada News | Speeding Motorcycle Crashes into Electric Pole; Rider and Pillion Survive in Ullal, Mangaluru

ಮಂಗಳೂರು, ಫೆಬ್ರವರಿ 17: ವೇಗವಾಗಿ ಬಂದ ಬೈಕ್​​ ನಿಯಂತ್ರಣ ತಪ್ಪಿ ವಿದ್ಯುತ್​​ ಕಂಬಕ್ಕೆ ಗುದ್ದಿದ ಪರಿಣಾಮ ಕಂಬವೇ ತುಂಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕಿನ್ಯಾ ಸಂಕೇಶದಲ್ಲಿ ನಡೆದಿದೆ. ನಿನ್ನೆ ಸಂಜೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಅಪಘಾತದಲ್ಲಿ ವಿಜಯಪುರ ಮೂಲದ ಇಬ್ಬರು ವಿದ್ಯಾರ್ಥಿಗಳು ಪವಾಡಸದೃಶ ಎಂಬಂತೆ ಪಾರಾಗಿದ್ದಾರೆ.  ಕಂಬ ತುಂಡಾಗುತ್ತಲೇ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’ ಸಿನಿಮಾ ಟ್ರೈಲರ್ ಯಾವಾಗ? ಬಿಡುಗಡೆ ದಿನಾಂಕ ನಿಗದಿ – Kannada News | Toxic movie trailer will release in March first week

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಟೀಸರ್ ಈಗಾಗಲೇ ಜಾಗತಿಕ ಮಟ್ಟದಲ್ಲಿ ಹವಾ ಸೃಷ್ಟಿಸಿದೆ. ಕೆಲ ವಾರಗಳ ಹಿಂದೆ ಬಿಡುಗಡೆ ಆಗಿದ್ದ ಟೀಸರ್ ಈಗಲೂ ಚರ್ಚೆಯಲ್ಲಿದೆ. ಈ ನಡುವೆ ಸಿನಿಮಾದ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಟ್ರೈಲರ್ ಇನ್ನೂ ದೊಡ್ಡ ಟ್ರೆಂಡ್ ಸೃಷ್ಟಿಸುವ ಸಾಧ್ಯತೆ ಇದೆ. ಸಿನಿಮಾದ ಟ್ರೈಲರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಮಾರ್ಚ್ 19ರಂದು ಆಗಲಿದೆ, ಸಿನಿಮಾದ ಬಿಡುಗಡೆಗೆ ಒಂದು ವಾರದ ಹಿಂದಷ್ಟೆ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಮಾರ್ಚ್ ಮೊದಲ ವಾರದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಬಿಡುಗೆಡ ಆಗಿರುವ ಟೀಸರ್​​ಗಿಂತಲೂ ಸಖತ್ ಪವರ್​​ಫುಲ್ ಆಗಿರಲಿದೆಯಂತೆ ಸಿನಿಮಾದ ಟ್ರೈಲರ್.

‘ಟಾಕ್ಸಿಕ್’ ಸಿನಿಮಾದ ಹಕ್ಕುಗಳ ಮಾರಾಟ ಚಾಲ್ತಿಯಲ್ಲಿದ್ದು, ಆಂಧ್ರ-ತೆಲಂಗಾಣ, ಉತ್ತರ ಭಾರತ, ವಿದೇಶದ ಹಕ್ಕುಗಳು ಭಾರಿ ದೊಡ್ಡ ಮೊತ್ತಕ್ಕೆ ಮಾರಾಟವಾಗಿವೆ. ಆಂಧ್ರ-ತೆಲಂಗಾಣದಲ್ಲಂತೂ ‘ಟಾಕ್ಸಿಕ್’ ಸಿನಿಮಾ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಸಿನಿಮಾದ ಹಕ್ಕುಗಳ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:ಸೈಟ್ ವಿವಾದ; ಯಶ್ ತಾಯಿ ಪುಷ್ಪಾಗೆ ಮೊದಲ ಹಂತದ ಜಯ

‘ಟಾಕ್ಸಿಕ್’ ಸಿನಿಮಾದ ಪ್ರಚಾರವನ್ನು ಯಶ್ ಇನ್ನಷ್ಟೆ ಆರಂಭಿಸಬೇಕಿದೆ. ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದ ಪ್ರಚಾರಗಳಿಗೆ ದೇಶವೆಲ್ಲ ಸಂಚರಿಸಿ ಬಹಳ ಸಕ್ರಿಯಾಗಿ ಪರಚಾರ ಮಾಡಿದ್ದರು ಯಶ್. ಆದರೆ ‘ಟಾಕ್ಸಿಕ್’ ಸಿನಿಮಾಕ್ಕೆ ಬೇರೆಯದೇ ಮಾದರಿಯನ್ನು ಅನುಸರಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಮುಖ ನಗರಗಳಲ್ಲಿ ದೊಡ್ಡ ಪ್ರೀ ರಿಲೀಸ್​​ಗಳನ್ನು ಆಯೋಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ಸಾಸ್ ನಿರ್ದೇಶನ ಮಾಡಿದ್ದು, ಸಿನಿಮಾದ ಕತೆಯನ್ನು ಯಶ್ ಅವರೂ ಸಹ ಬರೆದಿದ್ದಾರೆ. ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅವರುಗಳು ನಾಯಕಿಯರುಗಳಾಗಿ ನಟಿಸಿದ್ದಾರೆ. ಯಶ್ ಅವರು ಗ್ಯಾಂಗ್​​ಸ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: 30 ನಿಮಿಮಿಷಗಳ ಕಾಲ ಸಿಪಿಆರ್ ಮಾಡಿ ರೋಗಿಯ ಜೀವ ಉಳಿಸಿದ ವೈದ್ಯೆ – Kannada News | Half an Hour of Relentless Effort of Doctor in ICU Brings Patient Back to Life

ಐಸಿಯುನಲ್ಲಿ ಯಮನ ವಿರುದ್ಧ ವೈದ್ಯೆ ಹೋರಾಡಿ ರೋಗಿಯ ಪ್ರಾಣ ಉಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ವೈದ್ಯೆಯೊಬ್ಬರು 30 ನಿಮಿಷಗಳ ಕಾಲ ಸಿಪಿಆರ್ ಮಾಡಿ ರೋಗಿಯನ್ನು ಬದುಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರೋಗಿಯನ್ನು ಬದುಕಿಸಲೇ ಬೇಕೆನ್ನುವ ದೃಢ ಸಂಕಲ್ಪಕ್ಕೆ ಎಲ್ಲರೂ ಧನ್ಯವಾದ ವ್ಯಕ್ತಪಡಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

VIDEO: ಅದ್ಭುತ, ಅತ್ಯದ್ಭುತ… ಇದು ವಿಶ್ವಕಪ್​ನ ಬೆಸ್ಟ್ ಕ್ಯಾಚ್! – Kannada News | Pathum nissanka’s Catch video

ಟಿ20 ವಿಶ್ವಕಪ್​ನ 30ನೇ ಪಂದ್ಯದಲ್ಲಿ ಶ್ರೀಲಂಕಾ ತಂಡದ ಆಟಗಾರ ಪಾತುಮ್ ನಿಸ್ಸಂಕಾ ಅತ್ಯದ್ಭುತ ಕ್ಯಾಚ್ ಹಿಡಿದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಈ ಪಂದ್ಯದ 17ನೇ ಓವರ್​ನ ಮೊದಲ ಎಸೆತದಲ್ಲಿ ಆಸ್ಟ್ರೇಲಿಯಾ ದಾಂಡಿಗ ಗ್ಲೆನ್ ಮ್ಯಾಕ್ಸ್​ವೆಲ್ ಸ್ವಿಚ್ ಹಿಟ್ ಶಾಟ್ ಬಾರಿಸಿದ್ದರು. ಈ ವೇಳೆ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಪಾತುಮ್ ನಿಸ್ಸಂಕಾ ಗಾಳಿಯಲ್ಲಿ ಹಿಂಬದಿಯಾಗಿ ಜಿಗಿದು ಅದ್ಭುತವಾಗಿ ಚೆಂಡನ್ನು ಹಿಡಿದಿದ್ದಾರೆ.

ಇದೀಗ ಪಾತುಮ್ ನಿಸ್ಸಂಕಾ ಅವರ ಈ ಅದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ಬಾರಿಯ ವಿಶ್ವಕಪ್​ನ ಬೆಸ್ಟ್ ಕ್ಯಾಚ್ ಎಂದು ವರ್ಣಿಸಲಾಗುತ್ತಿದೆ.

ಇನ್ನು ಈ  ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್​ಗಳಲ್ಲಿ 181 ರನ್​ಗಳಿಸಿ ಆಲೌಟ್ ಆಗಿತ್ತು. ಈ ಗುರಿಯನ್ನು ಶ್ರೀಲಂಕಾ ತಂಡ 18 ಓವರ್​ಗಳಲ್ಲಿ ಚೇಸ್ ಮಾಡಿ 8 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಜಯದೊಂದಿಗೆ ಲಂಕಾ ಪಡೆ ಟಿ20 ವಿಶ್ವಕಪ್​ನ ದ್ವಿತೀಯ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

 

Source link

ಮುಡಾ ಕೇಸ್​​ಗೆ ಸ್ಫೋಟಕ ಟ್ವಿಸ್ಟ್​​: ಆಡಿಯೋ ಬಾಂಬ್​​ ಸಿಡಿಸಿದ ಸ್ನೇಹಮಯಿ ಕೃಷ್ಣ – Kannada News | MUDA Site Scam: Snehamayi Krishna Accuses CS Shalini Rajaneesh of Bribery in D.B. Natesh Promotion

ಮೈಸೂರು, ಫೆಬ್ರವರಿ 17: ಮುಡಾ ಸೈಟ್ ಹಂಚಿಕೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಮುಡಾ ಆಯುಕ್ತ ಡಿ.ಬಿ. ನಟೇಶ್ ತಮ್ಮ ಮುಂಬಡ್ತಿಗಾಗಿ ಶಾಲಿನಿ ರಜನೀಶ್ ಅವರಿಗೆ 1 ಕೋಟಿ 60 ಲಕ್ಷ ರೂಪಾಯಿ ಲಂಚ ನೀಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದ್ದಾರೆ. ಈ ಕುರಿತು ತಮಗೆ ಫೆಬ್ರವರಿ 9 ರಂದೇ ಮಾಹಿತಿ ಲಭ್ಯವಾಗಿದ್ದು, ಇದಕ್ಕೆ ಪೂರಕವಾಗಿ ಸಾಕ್ಷಿಗಳೂ ಸಿಕ್ಕಿವೆ ಎಂದು ಹೇಳಿದ್ದಾರೆ. ಲಂಚದ ಬಗ್ಗೆ ಮಾಹಿತಿ ಬಂದ ಮರುದಿನವೇ ನಟೇಶ್‌ಗೆ ಮುಂಬಡ್ತಿ ನೀಡಿರುವುದು ಅನುಮಾನಕ್ಕೆ ಎಡೆಮಾಡಿದೆ. ಹೀಗಾಗಿ ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿರೋದಾಗಿ ಅವರು ತಿಳಿಸಿದ್ದಾರೆ. ಶಾಲಿನಿ ರಜನೀಶ್ ಅವರಿಂದ ಸ್ಪಷ್ಟೀಕರಣ ಕೋರಿ ಪತ್ರ ಬರೆದಿರುವ ಕೃಷ್ಣ, ಪ್ರಕರಣದಿಂದ ಹೊರಬರಲು ನಟೇಶ್ ತಮ್ಮನ್ನು ಸಂಪರ್ಕಿಸಲು ಯತ್ನಿಸಿದ್ದರು ಎನ್ನಲಾದ ಆಡಿಯೋ ಕ್ಲಿಪ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ – Kannada News | India’s Largest Railway Mega Coaching Terminal to Come Up in Bengaluru’s Yelahanka: V Somanna Announcement

ಬೆಂಗಳೂರು, ಫೆಬ್ರವರಿ 17: ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಮಹತ್ವದ ರೈಲ್ವೆ ಯೋಜನೆಗಳ ಕುರಿತು ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ನಾಯಂಡಹಳ್ಳಿ ರೈಲು ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯಲಹಂಕದಲ್ಲಿ 5754 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣವಾಗಲಿದ್ದು, ಇದು ಭಾರತದ ಅತಿದೊಡ್ಡ ಕೋಚಿಂಗ್ ಸೆಂಟರ್ ಆಗಲಿದೆ. ಆರಂಭದಲ್ಲಿ ದೇವನಹಳ್ಳಿಯಲ್ಲಿ ಪ್ರಸ್ತಾಪಿಸಲಾಗಿದ್ದ ಈ ಯೋಜನೆ, ದೂರದ ಕಾರಣ ಯಲಹಂಕಕ್ಕೆ ಸ್ಥಳಾಂತರಗೊಂಡಿದೆ. ರೈಲ್ವೆ ಮಂಡಳಿಯು ಯಲಹಂಕದಲ್ಲಿ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಅನುಮೋದನೆ ನೀಡಿದೆ ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ 1370 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಾಸ್ಟರ್ ಪ್ಲಾನ್ ಅನುಮೋದನೆ ಹಂತದಲ್ಲಿದೆ. ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳ ಆಧುನೀಕರಣಕ್ಕಾಗಿ ತಲಾ 485-500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ವೈಟ್‌ಫೀಲ್ಡ್‌ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದವರೆಗಿನ ನಾಲ್ಕು ಪಥದ ರೈಲ್ವೆ ಮಾರ್ಗ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ತುಮಕೂರು-ಬೆಂಗಳೂರು ನಾಲ್ಕು ಪಥದ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧಪಡಿಸಿ ಕ್ಯಾಬಿನೆಟ್‌ಗೆ ಸಲ್ಲಿಸಲಾಗಿದೆ. ವೈಟ್‌ಫೀಲ್ಡ್‌ನಿಂದ ಕೋಲಾರಕ್ಕೆ ನೇರ ರೈಲು ಸಂಪರ್ಕಕ್ಕಾಗಿ ಸಮೀಕ್ಷೆ ನಡೆಸಲು ಡಿಆರ್‌ಎಂ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link