ಚರ್ಚ್ಗೆ ಹೋಗಿದ್ದಕ್ಕೆ ಟೀಕೆ: ಉತ್ತರಿಸಿದ ನಟ ಪ್ರಕಾಶ್ ರಾಜ್
ನಟ ಪ್ರಕಾಶ್ ರಾಜ್ (Prakash Raj) ಅವರ ತಾಯಿ ಸ್ವರ್ಣಲತಾ ಅವರು ತಮ್ಮ 89ನೇ ವಯಸ್ಸಿನಲ್ಲಿ ಇತ್ತೀಚೆಗಷ್ಟೆ ನಿಧನ ಹೊಂದಿದರು. ಸ್ವರ್ಣಲತಾ ಅವರ ಅಂತ್ಯಕ್ರಿಯೆ ಕ್ರಿಶ್ಚಿಯನ್ ಧರ್ಮದ ಅನ್ವಯ ನೆರವೇರಿತು. ಬೆಂಗಳೂರಿನ ಶಾಂತಿನಗರ ಚರ್ಚ್ನಲ್ಲಿ ಪ್ರಾರ್ಥನೆ, ಅಂತಿಮಕ್ರಿಯೆ ನಡೆಸಲಾಯ್ತು. ನಟ ಪ್ರಕಾಶ್ ರೈ ಸಹ ಶಾಂತಿನಗರ ಚರ್ಚ್ನಲ್ಲಿ ಹಾಜರಿದ್ದು, ಪ್ರಾರ್ಥನೆ, ಅಂತಿಮಕ್ರಿಯೆಯಲ್ಲಿ ಭಾಗಿ ಆಗಿದ್ದರು. ಆದರೆ ಇದೀಗ ಹಲವರು ಪ್ರಕಾಶ್ ರೈ ಚರ್ಚ್ಗೆ ಹೋಗಿದ್ದಕ್ಕೆ ಅವರನ್ನು ಟೀಕೆ ಮಾಡುತ್ತಿದ್ದಾರೆ. ಈ ಟೀಕೆಗಳಿಗೆ ನಟ ಪ್ರಕಾಶ್ ರೈ ಸಾಮಾಜಿಕ…