ಮಡಿಕೇರಿ, ಮಾರ್ಚ್ 30: ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಮುಸ್ಲಿಂ ಯುವಕನೋರ್ವನ ವಿವಾಹದ ಹಿಂದಿನ ದಿನ ಮಧುಮಗನಿಗೆ ಎಲೆಗಳನ್ನ ಸುತ್ತಿ, ಮುಖಕ್ಕೆ ಬಣ್ಣ ಬಳಿದು ಹಾಡುತ್ತಾ ಎಂಜಾಯ್ ಮಾಡಿರೋದೀಗ ಹೊಸ ವಿವಾದ ಹುಟ್ಟುಹಾಕಿದೆ. ಇದು ದೈವ ನರ್ತನವನ್ನು ಹೋಲುತ್ತಿದ್ದು, ತುಳುನಾಡು ಮತ್ತು ಕೊಡಗಿನ ದೈವ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೈ ತುಂಬಾ ಸೊಪ್ಪು, ಬಾಳೆಕೊನೆ, ಮುಖದ ತುಂಬ ಬಣ್ಣ ಮತ್ತು ಕೈಯಲ್ಲಿ ದೊಣ್ಣೆ ಹಿಡಿದಿರೋ ಯುವಕನ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ.
ಈ ವಿಚಾರವೀಗ ಶಾಂತವಾಗಿದ್ದ ಕೊಡಗು ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದ್ದು, ಯುವಕರ ಹುಚ್ಚಾಟದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ದೈವ ನರ್ತನವನ್ನ ಅವಮಾನ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದ್ದು, ಕೊಡಗು ಜಿಲ್ಲಾ ದೈವ ನರ್ತಕರ ಮತ್ತು ದೈವ ಆರಾಧಕರ ಸಂಘ ಈ ಸಂಬಂಧ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಲಿಖಿತ ದೂರು ನೀಡಿದೆ. ಕೊರಗಜ್ಜ, ಪಂಜುರ್ಲಿ, ಪಾಶಣಮೂರ್ತಿ ಸೇರಿದಂತೆ ಹತ್ತಾರು ಬಗೆಯ ದೈವ ನರ್ತನ ಮತ್ತು ದೈವಾರಾಧನೆ ಜಿಲ್ಲೆಯಲ್ಲಿ ಆಚರಣೆಯಲ್ಲಿದೆ. ದೈವಗಳನ್ನ ನಂಬುವ ಭಕ್ತರ ಮನಸ್ಸಿಗೆ ಘಟನೆಯಿಂದ ಘಾಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಈ ತಿಂಗಳು ನಿಮ್ಮ ರಾಶ್ಯಾಧಿಪತಿ ಬುಧನ ಸಂಚಾರ ಮತ್ತು ಹಿಮ್ಮುಖ ಚಲನೆಯ ಗುರುವಿನ ಪ್ರಭಾವದಿಂದಾಗಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ಮಿಶ್ರಫಲಗಳು ಕಂಡುಬರಲಿವೆ. ಏಪ್ರಿಲ್ ಮಾಸದ ಮಿಥುನ ರಾಶಿಯ ಭವಿಷ್ಯದ ಸಮಗ್ರ ನೋಟ ಇಲ್ಲಿದೆ. ಇದರ ಆಧಾರದಲ್ಲಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು
ಉದ್ಯೋಗ ಮತ್ತು ವೃತ್ತಿಜೀವನ
ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ನಿಮಗೆ ಶುಭ ಫಲಗಳು ಹೆಚ್ಚಾಗಿವೆ. ದಶಮ ಸ್ಥಾನದ ಮೇಲೆ ಗ್ರಹಗಳ ಶುಭ ದೃಷ್ಟಿ ಇರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಸಹೋದ್ಯೋಗಿಗಳ ಮತ್ತು ಮೇಲಧಿಕಾರಿಗಳ ಸಂಪೂರ್ಣ ಸಹಕಾರ ಸಿಗಲಿದೆ. ವೃತ್ತಿಯಲ್ಲಿ ಬಡ್ತಿ ಅಥವಾ ವರ್ಗಾವಣೆಯನ್ನು ನಿರೀಕ್ಷಿಸುತ್ತಿರುವವರಿಗೆ ಈ ತಿಂಗಳು ಸಕಾರಾತ್ಮಕ ಸುದ್ದಿ ಸಿಗುವ ಸಾಧ್ಯತೆ ಇದೆ.
ವಿದ್ಯಾಭ್ಯಾಸ
ವಿದ್ಯಾರ್ಥಿಗಳಿಗೆ ಈ ತಿಂಗಳು ಮಧ್ಯಮ ಫಲದಾಯಕವಾಗಿದೆ. ಬುಧನ ಸ್ಥಾನ ಬದಲಾವಣೆಯಿಂದಾಗಿ ಏಕಾಗ್ರತೆಯಲ್ಲಿ ಸ್ವಲ್ಪ ಏರುಪೇರಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ತಾಂತ್ರಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿದೆ. ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುವುದು ಒಳಿತು.
ಹಣಕಾಸು ಸ್ಥಿತಿ
ಹಣಕಾಸಿನ ವಿಚಾರದಲ್ಲಿ ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಫಲ ನೀಡಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಹಳೆಯ ಹೂಡಿಕೆಗಳಿಂದ ಲಾಭ ಬರುವ ಸಾಧ್ಯತೆ ಇದೆ. ಐಷಾರಾಮಿ ವಸ್ತುಗಳ ಖರೀದಿಗಾಗಿ ಹಣ ವ್ಯಯವಾಗಬಹುದು, ಆದರೆ ಅದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರದು.
ವಿವಾಹ ಮತ್ತು ಕೌಟುಂಬಿಕ ಜೀವನ
ವಿವಾಹ ಮತ್ತು ವೈಯಕ್ತಿಕ ಜೀವನದಲ್ಲಿ ಮಧ್ಯಮ ಫಲಗಳು ಕಂಡುಬರುತ್ತಿವೆ. ವಿವಾಹ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಉತ್ತಮ ಪ್ರಸ್ತಾಪಗಳು ಬರಬಹುದು. ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ, ಸಂಗಾತಿಯೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ವಿದೇಶ ಪ್ರವಾಸ
ವಿದೇಶಕ್ಕೆ ಹೋಗುವ ಹಂಬಲ ಇರುವವರಿಗೆ ಈ ತಿಂಗಳು ಅತ್ಯಂತ ಆಶಾದಾಯಕವಾಗಿದೆ. ವೀಸಾ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿವೆ.ಉದ್ಯೋಗದ ನಿಮಿತ್ತ ಅಥವಾ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಗ್ರಹಗತಿಗಳು ಪೂರಕವಾಗಿವೆ. ಅನಿರೀಕ್ಷಿತವಾಗಿ ದೂರದ ಪ್ರಯಾಣ ಮಾಡುವ ಸಂದರ್ಭಗಳು ಎದುರಾಗಲಿವೆ.
ಸಾಲ ಮತ್ತು ಶತ್ರು ಬಾಧೆ
ಸಾಲದ ವಿಚಾರದಲ್ಲಿ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಅನಗತ್ಯ ಸಾಲ ಮಾಡುವುದನ್ನು ಈ ತಿಂಗಳು ತಪ್ಪಿಸಿ. ಹಳೆಯ ಸಾಲವನ್ನು ತೀರಿಸಲು ನಿಮಗೆ ಅವಕಾಶಗಳು ಸಿಗುತ್ತವೆ, ಆದರೆ ಹೊಸದಾಗಿ ಯಾರಿಗಾದರೂ ಹಣ ನೀಡುವಾಗ ಜಾಗರೂಕರಾಗಿರಿ.
ಗುಪ್ತ ಶತ್ರುಗಳ ಬಗ್ಗೆ ನಿಗಾ ಇರಲಿ, ನಿಮ್ಮ ಯೋಜನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ.
ಈ ತಿಂಗಳು ನಿಮ್ಮ ಸಂವಹನ ಕಲೆ ನಿಮಗೆ ಶ್ರೀರಕ್ಷೆಯಾಗಲಿದೆ. ಮಾತು ಮತ್ತು ತಾಳ್ಮೆಯಿಂದ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಬಹುದು. ಪ್ರತಿ ಬುಧವಾರ ವಿಷ್ಣು ಸಹಸ್ರನಾಮ ಪಠಿಸುವುದು ಅಥವಾ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ನಿಮ್ಮ ರಾಶಿಗೆ ಹೆಚ್ಚಿನ ಶುಭಫಲಗಳನ್ನು ನೀಡಲಿದೆ.
‘ಧುರಂಧರ್ 2’ (Dhurandhar 2) ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ನಟಿ ಸಾರಾ ಅರ್ಜುನ್ ಅವರಿಗೆ ಖ್ಯಾತಿ ಹೆಚ್ಚಾಗಿದೆ. ಸಾರಾ ಅರ್ಜುನ್ ಅವರಿಗೆ ಕ್ರಿಕೆಟ್ ಬಗ್ಗೆಯೂ ಕ್ರೇಜ್ ಇದೆ. ಭಾನುವಾರ (ಮಾರ್ಚ್ 29) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಅವರು ಆಗಮಿಸಿದ್ದರು. ಆದರೆ, ಪಂದ್ಯ ಮುಗಿದು ಹೊರಬರುವಾಗ ಸಾರಾ ಅರ್ಜುನ್ (Sara Arjun) ಅವರು ಅಭಿಮಾನಿಗಳ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ.
20 ವರ್ಷ ವಯಸ್ಸಿನ ಸಾರಾ ಅರ್ಜುನ್ ಅವರು ಮುಂಬೈ ಇಂಡಿಯನ್ಸ್ ತಂಡದ ಜೆರ್ಸಿ ಧರಿಸಿ, ತಮ್ಮ ಪೋಷಕರಾದ ನಟ ರಾಜ್ ಅರ್ಜುನ್ ಮತ್ತು ತಾಯಿ ಸನ್ಯಾ ಅರ್ಜುನ್ ಅವರೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದರು. ಕ್ರೀಡಾಂಗಣದಲ್ಲಿ ಪಂದ್ಯವನ್ನು ಪೂರ್ಣವಾಗಿ ಆನಂದಿಸಿದ ನಂತರ ಅವರು ಹೊರಬರುತ್ತಿದ್ದಂತೆ ಅಭಿಮಾನಿಗಳ ಗುಂಪು ಅವರನ್ನು ಸುತ್ತುವರಿಯಿತು.
ಸದ್ಯ ‘ಧುರಂಧರ್ 2’ ಚಿತ್ರದ ಭರ್ಜರಿ ಯಶಸ್ಸಿನಿಂದಾಗಿ ಸಾರಾ ಅವರ ಜನಪ್ರಿಯತೆ ಎಲ್ಲ ಕಡೆಗಳಲ್ಲಿ ಹಬ್ಬಿದೆ. ಸ್ಟೇಡಿಯಂನಿಂದ ಹೊರಬರುತ್ತಿದ್ದ ಸಾರಾ ಅವರನ್ನು ಗುರುತಿಸಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಮಗಳ ರಕ್ಷಣೆಗೆ ನಿಂತ ತಂದೆ ರಾಜ್ ಅರ್ಜುನ್ ಅವರು ಸ್ವತಃ ಬಾಡಿಗಾರ್ಡ್‌ನಂತೆ ಕಾರ್ಯನಿರ್ವಹಿಸಿದರು.
ಅಭಿಮಾನಿಗಳ ಗುಂಪನ್ನು ಸರಿಸುತ್ತಾ, ಸಾರಾ ಅವರನ್ನು ಸುರಕ್ಷಿತವಾಗಿ ಕಾರಿನವರೆಗೆ ಕರೆದೊಯ್ದರು ರಾಜ್ ಅರ್ಜುನ್. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳ ಜೊತೆ ಮಾತಾಡಬೇಕು ಎಂಬ ಆಸೆ ಸಾರಾ ಅವರಿಗೆ ಇದ್ದಂತೆ ಕಾಣುತ್ತದೆ. ಆದರೆ ತಂದೆಯಾಗಿ ರಾಜ್ ಅರ್ಜುನ್ ಅವರು ಆ ಕ್ಷಣದಲ್ಲಿ ಜಾಗ್ರತೆ ವಹಿಸಿದ್ದು ಕೂಡ ನೆಟ್ಟಿಗರ ಮೆಚ್ಚುಗೆಗೆ ಕಾರಣ ಆಗಿದೆ.
ವಾಂಖೆಡೆ ಸ್ಟೇಡಿಯಂ ಹೊರಗೆ ನಡೆದ ಈ ಗದ್ದಲದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಗಳನ್ನು ರಕ್ಷಿಸಲು ನಟ ರಾಜ್ ಅರ್ಜುನ್ ತೋರಿದ ಕಾಳಜಿಯನ್ನು ಕಂಡ ನೆಟ್ಟಿಗರು, ‘ತಂದೆ ಎಂದರೆ ಹೀಗಿರಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪಂದ್ಯ ಗೆದ್ದ ಸಂಭ್ರಮದ ನಡುವೆ ಸಾರಾ ಅವರ ಈ ವಿಡಿಯೋಗಳು ಕೂಡ ಗಮನ ಸೆಳೆಯುತ್ತಿವೆ.
ಶಿವಮೊಗ್ಗ, ಮಾರ್ಚ್ 30: ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮದ ಕಾಗೆಹಳ್ಳದಲ್ಲಿ ನಡೆದಿದೆ. ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ಗಾಯಾಳುಗಳಿಗೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಭದ್ರಾವತಿಗೆ ಬಸ್ ಹೊರಟ್ಟಿತ್ತು. ಮಾರ್ಗ ಮಧ್ಯೆ ಅವಘಡ ಸಂಭವಿಸಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು. ಮಾ.30: ಮುಂದಿನ ಒಂದು ವಾರ ರಾಜ್ಯದಾದ್ಯಂತ ಮಿಶ್ರ ಹವಾಮಾನ ಇರಲಿದ್ದು, ಸುಡು ಬಿಸಿಲಿನ ನಡುವೆಯೇ ವರುಣನ ಸಿಂಚನವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನದಲ್ಲಿ 2-3°C ಏರಿಕೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಿರಲಿದೆ. ಬೆಂಗಳೂರಿನ ಮುಂದಿನ 7 ದಿನ ಬೇಸಿಗೆಯ ತಾಪ ಏರುತ್ತಿದ್ದು, ಬಿಸಿಲಿನ ಬೇಗೆಯ ನಡುವೆಯೇ ಅಲ್ಲಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ಮಧ್ಯಾಹ್ನದ ನಂತರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಹವಾಮಾನದ ಸ್ಥಿತಿ ತೇವಾಂಶಭರಿತ ಉಷ್ಣಾಂಶ ಹಾಗೂ ಸೆಖೆ ಹೆಚ್ಚಿರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿರಲಿದೆ. ಹುಬ್ಬಳ್ಳಿ ಒಣ ಹವೆ ಇರಲಿದ್ದು, ಬಿಸಿಲು ತೀವ್ರವಾಗಲಿದ್ದು, ಮಧ್ಯಾಹ್ನದ ವೇಳೆ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಚಿಕ್ಕಮಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಏಪ್ರಿಲ್ 2ರ ನಂತರ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ.
ವಲಯ
ನಿರೀಕ್ಷಿತ ಹವಾಮಾನ
ಜಿಲ್ಲೆಗಳು
ದಕ್ಷಿಣ ಒಳನಾಡು
ಹಗುರ ಮಳೆ / ಗುಡುಗು
ಬೆಂಗಳೂರು, ಮೈಸೂರು, ಕೊಡಗು, ಮಂಡ್ಯ, ಹಾಸನ
ಉತ್ತರ ಒಳನಾಡು
ಅತಿಯಾದ ಬಿಸಿಲು / ಒಣ ಹವೆ
ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು
ಕರಾವಳಿ
ಉಷ್ಣಾಂಶ ಮತ್ತು ತೇವಾಂಶ ಹೆಚ್ಚಳ
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ
ಮಲೆನಾಡು
ಸಾಧಾರಣ ಮಳೆ ಸಾಧ್ಯತೆ
ಶಿವಮೊಗ್ಗ, ಚಿಕ್ಕಮಗಳೂರು
ಎಕ್ಸ್ ಪೋಸ್ಟ್ ಇಲ್ಲಿದೆ ನೋಡಿ:
ಮುಂದಿನ 7 ದಿನಗಳ #ಹವಾಮಾನ#ಮುನ್ಸೂಚನೆ ಮತ್ತು #ಎಚ್ಚರಿಕೆಗಳು: (ಮೂಲ: IMD) #ಕರ್ನಾಟಕ ರಾಜ್ಯದಾದ್ಯಂತ ಒಣ ಹವೆ ಹಾಗೂ ಬಿಸಿಲಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ಮಧ್ಯಾಹ್ನ ನಂತರ, ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರುವ ಸಾಧ್ಯತೆಯಿದೆ. ಹಾಗೂ ಅಲ್ಲಲ್ಲಿ ಗುಡುಗು, ಸಿಡಿಲು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾದಾರಣ ಮಳೆಯಾಗುವ pic.twitter.com/TDubo4KHCN
— Karnataka State Natural Disaster Monitoring Centre (@KarnatakaSNDMC) March 30, 2026
ಬೆಳಗಾವಿಯಲ್ಲಿ ಭಾಗಶಃ ಮೋಡ ಹಾಗೂ ಒಣ ಹವೆ ಇರಲಿದೆ. ಬೆಳಗಾವಿಯ ಕೆಲವು ಭಾಗಗಳಲ್ಲಿ ಏಪ್ರಿಲ್ 4ರ ಸುಮಾರಿಗೆ ಸಿಡಿಲು ಸಹಿತ ಮಳೆಯಾಗಬಹುದು. ಹಾಸನದಲ್ಲಿ ಹಗುರ ಮಳೆ ಬರುವ ಸಾಧ್ಯತೆ ಇದೆ. ಸಂಜೆ ಅಥವಾ ರಾತ್ರಿ ಅವಧಿಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕಲಬುರಗಿ ತೀವ್ರ ಬಿಸಿಲು ಹಾಗೂ ಜಿಲ್ಲೆಯಲ್ಲಿ ತಾಪಮಾನ 41 ಡಿಗ್ರಿ ದಾಟುವ ಸಾಧ್ಯತೆವಿದೆ. ಹಾಸನ, ಚಿಕ್ಕಮಗಳೂರು ಮತ್ತು ಬೆಳಗಾವಿ ಭಾಗದಲ್ಲಿ ಗುಡುಗು ಕೇಳಿಸಿದಾಗ ವಿದ್ಯುತ್ ಉಪಕರಣಗಳಿಂದ ದೂರವಿರಿ ಮತ್ತು ಮರದ ಕೆಳಗೆ ಆಶ್ರಯ ಪಡೆಯಬೇಡಿ ಎಂದು ಹೇಳಲಾಗಿದೆ.
ಕಲಬುರಗಿ ಮತ್ತು ಹುಬ್ಬಳ್ಳಿ ಭಾಗದ ಜನರು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಜಾಗ್ರತೆ ವಹಿಸಿ. ಮಲೆನಾಡು ಮತ್ತು ದಕ್ಷಿಣ ಒಳನಾಡಿನ ರೈತರು ಕಟಾವು ಮಾಡಿದ ಬೆಳೆಗಳನ್ನು ಮಳೆಯಿಂದ ರಕ್ಷಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಶಿವಮೊಗ್ಗ, (ಮಾರ್ಚ್ 30): ಪ್ರೀತಿಸಿ (Love) ಕೇವಲ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ ದುರಂತ ಸಾವು ಕಂಡಿದೆ. ಹೌದು… ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಲಾರಿಗೆ ಬೈಕ್ ಡಿಕ್ಕಿಯಾಗಿದ್ದು, ಬೈಕ್ ನಲ್ಲಿ ಇದ್ದಂತಹ ದಂಪತಿಗಳಾದ ಬಾಬು (30) ಹಾಗೂ ಸಾವಿತ್ರಿ (26) ಸ್ಥಳದಲ್ಲಿ ಸಾವನಪ್ಪಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಆರು ತಿಂಗಳ ಹಿಂದೆ ಅಷ್ಟೇ ಸಪ್ತಪದಿ ತುಳಿದ್ದರು. ಆದ್ರೆ, ವಿಧಿ ಜೋಡಿಯನ್ನು ಬಾಳಲು ಬಿಟ್ಟಿಲ್ಲ. ಈ ಸಂಬಂಧ ಸಂಬಂಧಿಕ ಆಕ್ರಂದನ ಮುಗಿಲು ಮುಟ್ಟಿದೆ.
ಮನೆಗಳಲ್ಲಿ ಬಹುಮುಖ್ಯವಾಗಿ ಇರಲೇಬೇಕಾದ ಸಸ್ಯಗಳಲ್ಲಿ ತುಳಸಿ ಗಿಡವೂ ಒಂದು. ಧಾರ್ಮಿಕ ಮಹತ್ವ ಮತ್ತು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಈ ತುಳಸಿ ಗಿಡ ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಬೇಸಿಗೆಯ (summer) ವಿಪರೀತ ಶಾಖದ ಕಾರಣದಿಂದಾಗಿ ತುಳಸಿ ಗಿಡ ಬೇಗನೇ ಬಾಡಿ ಅಥವಾ ಒಣಗಿ ಹೋಗುವ ಕಾರಣ ಈ ಸಸ್ಯದ ಬಗ್ಗೆ ಬೇಸಿಗೆಯಲ್ಲಿ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಮನೆಯ ತುಳಸಿ ಗಿಡ ಕೂಡ ಈ ಉರಿ ಬಿಸಿಲಿಗೆ ಒಣಗಿ ಹೋಗ್ತಿದ್ಯಾ? ಹಾಗಿದ್ರೆ ಈ ಕೆಲವೊಂದು ತೋಟಗಾರಿಕೆ ಸಲಹೆಗಳನ್ನು ಪಾಲಿಸುವ ಮೂಲಕ ತುಳಸಿ ಗಿಡ ಒಣಗದಂತೆ ನೋಡಿಕೊಳ್ಳಿ. ಬೇಸಿಗೆಯಲ್ಲಿ ತುಳಸಿ ಗಿಡದ ಆರೈಕೆ ಹೇಗಿರಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಬೇಸಿಗೆಯಲ್ಲಿ ತುಳಸಿ ಗಿಡದ ಆರೈಕೆ ಹೀಗಿರಲಿ:
ಸಸ್ಯಕ್ಕೆ ಸರಿಯಾದ ರೀತಿಯಲ್ಲಿ ನೀರು ಹಾಕಿ: ಬೇಸಿಗೆಯಲ್ಲಿ, ಪ್ರತಿದಿನ ಸಸ್ಯಕ್ಕೆ ಸ್ವಲ್ಪ ನೀರು ಹಾಕುವುದು ಮುಖ್ಯ, ಬೆಳಿಗ್ಗೆ ಅಥವಾ ಸಂಜೆ ತುಳಸಿ ಗಿಡಕ್ಕೆ ನೀರು ಹಾಕುವುದು ಸಸ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ, ಏಕೆಂದರೆ ಆ ಸಮಯದಲ್ಲಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ, ಇದು ಗಿಡ ನೀರನ್ನು ಉತ್ತಮವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ಒಂದೇ ಬಾರಿಗೆ ಅತಿಯಾಗಿ ನೀರು ಹಾಕುವುದನ್ನು ತಪ್ಪಿಸಿ. ಏಕೆಂದರೆ ಇದು ಬೇರುಗಳಿಗೆ ಹಾನಿ ಮಾಡುತ್ತದೆ.
ಸಾವಯವ ಗೊಬ್ಬರದ ಬಳಕೆ: ತುಳಸಿ ಎಲೆಗಳು ಹಚ್ಚ ಹಸಿರಾಗಿ ಇರಬೇಕು ಮತ್ತು ಒಣಗಬಾರದು ಎಂದು ನೀವು ಬಯಸಿದರೆ, ಕಾಲಕಾಲಕ್ಕೆ ಗಿಡದ ಬುಡಕ್ಕೆ ಸಾವಯವ ಗೊಬ್ಬರವನ್ನು ಸೇರಿಸುವುದು ಮುಖ್ಯ. ನೀವು ಹಸುವಿನ ಸಗಣಿ ಅಥವಾ ವರ್ಮಿಕಾಂಪೋಸ್ಟ್ ಹಾಕಬಹುದು. ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ ಮತ್ತು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಲ್ಲದೆ ಬೇಸಿಗೆಯಲ್ಲಿ, ಸಣ್ಣ ಕೀಟಗಳು ಹೆಚ್ಚಾಗಿ ತುಳಸಿ ಎಲೆಗಳಿಗೆ ಹಾನಿ ಮಾಡುತ್ತವೆ. ಇದನ್ನು ತಡೆಗಟ್ಟಲು, ಬೇವಿನ ನೀರು ಅಥವಾ ಬೇವಿನ ಎಣ್ಣೆಯನ್ನು ಲಘುವಾಗಿ ಸಿಂಪಡಿಸಿ.
ಸರಿಯಾದ ಪೋಷಣೆ ಅತ್ಯಗತ್ಯ: ತುಳಸಿ ಗಿಡವನ್ನು ಪೋಷಿಸಲು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಮಣ್ಣಿಗೆ ಅಕ್ಕಿ ನೀರು ಅಥವಾ ಮಜ್ಜಿಗೆಯನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಸಸ್ಯಕ್ಕೆ ನೈಸರ್ಗಿಕ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ. ಅಲ್ಲದೆ ಬಾಳೆಹಣ್ಣಿನ ಸಿಪ್ಪೆಯ ಪುಡಿಯನ್ನು ಮಣ್ಣಿನಲ್ಲಿ ಬೆರೆಸುವುದರಿಂದ ಸಸ್ಯವು ಬಲಗೊಳ್ಳುತ್ತದೆ.
ಮಣ್ಣಿನ ಫಲವತ್ತತೆಯ ಬಗ್ಗೆ ಇರಲಿ ಗಮನ: ಬೇಸಿಗೆಯಲ್ಲಿ, ತುಳಸಿ ಗಿಡದ ಮಣ್ಣಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಣ್ಣು ತುಂಬಾ ಗಟ್ಟಿಯಾಗಿದ್ದರೆ, ಅದು ಬೇರುಗಳಿಗೆ ಸರಿಯಾದ ಗಾಳಿ ಮತ್ತು ನೀರಿನ ಹರಿವನ್ನು ತಡೆಯುತ್ತದೆ. ಆದ್ದರಿಂದ, ಕಾಲಕಾಲಕ್ಕೆ ಮಣ್ಣನ್ನು ಸ್ವಲ್ಪ ಸಡಿಲಗೊಳಿಸಿ. ಇದು ಗಾಳಿಯ ಪ್ರಸರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬೇರುಗಳನ್ನು ಬಲಪಡಿಸುತ್ತದೆ.
ನವದೆಹಲಿ, ಮಾರ್ಚ್ 30: ಹದಿನಾರು ವರ್ಷಗಳ ನಂತರ ಭಾರತದಲ್ಲಿ ಮೊದಲ ಬಾರಿಗೆ ಸೆನ್ಸಸ್ ನಡೆಯಲಿದೆ. 2027ರ ಸೆನ್ಸಸ್ಗೆ ಏಪ್ರಿಲ್ 1ರಂದು ಚಾಲನೆ ಸಿಗಲಿದೆ. ಇದು ಭಾರತದ ಮೊದಲ ಪೂರ್ಣ ಡಿಜಿಟಲ್ ಸೆನ್ಸಸ್ (Census 2027) ಆಗಿರಲಿದೆ. ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ ಇದು ವಿಶ್ವದಲ್ಲೇ ಅತಿದೊಡ್ಡ ಗಣತಿ ಕಾರ್ಯವಾಗಲಿದೆ.
ಭಾರತದಲ್ಲಿ ಇಲ್ಲಿಯವರೆಗೆ 15 ಸೆನ್ಸಸ್ಗಳು ನಡೆದಿವೆ. ಸ್ವಾತಂತ್ರ್ಯದ ನಂತರ 7 ಸೆನ್ಸಸ್ ಆಗಿವೆ. ಕಳೆದ ಬಾರಿ ಸೆನ್ಸಸ್ ನಡೆದದ್ದು 2011ರಲ್ಲಿ. ಸಾಮಾನ್ಯವಾಗಿ ಪ್ರತೀ ದಶಕಕ್ಕೊಮ್ಮೆ ಈ ಕಾರ್ಯ ನಡೆಯುತ್ತದೆ. ಈ ಬಾರಿ ಸ್ವಲ್ಪ ವಿಳಂಬವಾಗಿದೆ. 2027ರಲ್ಲಿ ನಡೆಯಲಿರುವುದು 16ನೇ ಸೆನ್ಸಸ್ ಆಗಿರುತ್ತದೆ. ಪೂರ್ಣ ಡಿಜಿಟಲ್ ವೇದಿಕೆ ಬಳಸಿ ನಡೆಯುವ ಮೊದಲ ಜನಗಣತಿ ಇದು ಎನ್ನುವ ದಾಖಲೆ ಆಗಲಿದೆ.
ಎರಡು ಹಂತಗಳಲ್ಲಿ ಜನಗಣತಿ
ಈ ಬಾರಿಯ ಜನಗಣತಿ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಆಗಲಿದೆ. ಮನೆಗಳ ಸ್ಥಿತಿ, ಸೌಲಭ್ಯ, ಆಸ್ತಿಪಾಸ್ತಿ ಇತ್ಯಾದಿ ಮಾಹಿತಿ ಕಲೆಹಾಕಲಾಗುತ್ತದೆ. ಮೊದಲ ಹಂತದ ಸೆನ್ಸಸ್ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರವರೆಗೂ ನಡೆಯುತ್ತದೆ.
ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಇಲ್ಲಿ ಜನರ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ದತ್ತಾಂಶವನ್ನು ಕಲೆಹಾಕಲಾಗುತ್ತದೆ. ಜನರ ಜಾತಿ, ಉಪಜಾತಿ ಇತ್ಯಾದಿ ಮಾಹಿತಿಯನ್ನೂ ಪಡೆಯಲಾಗುತ್ತದೆ.
ಜನಗಣತಿ ಹೇಗೆ ನಡೆಯುತ್ತದೆ?
ಈ ಡಿಜಿಟಲ್ ಗಣತಿ ಕಾರ್ಯದಲ್ಲಿ 30 ಲಕ್ಷದಷ್ಟು ಗಣತಿದಾರರು, ಮೇಲುಸ್ತುವಾರಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಗಣತಿಗೆಂದೇ ಮೊಬೈಲ್ ಆ್ಯಪ್ಗಳನ್ನು ಅಬಿವೃದ್ಧಿಪಡಿಸಲಾಗಿದೆ. ಗಣತಿದಾರರು ಈ ಆ್ಯಪ್ಗಳಲ್ಲಿ ದತ್ತಾಂಶವನ್ನು ತುಂಬಲಿದ್ದಾರೆ. ಹಾಗೆಯೇ, ಜನರು ಸ್ವಯಂ ಆಗಿ ತಮ್ಮ ದತ್ತಾಂಶ ನೀಡಲು ಆನ್ಲೈನ್ ಪೋರ್ಟಲ್ವೊಂದು ಇದೆ. ಇದು 16 ಭಾಷೆಗಳಲ್ಲಿರುತ್ತದೆ.
ಜನರು ತಮ್ಮ ಹಾಗೂ ತಮ್ಮ ಕುಟುಂಬದವರ ವಿವರವನ್ನು ಆನ್ಲೈನ್ನಲ್ಲೇ ತುಂಬಬಹುದು. ಆಗ ಒಂದು ಗಣತಿ ಐಡಿ ಸಿಗುತ್ತದೆ. ಮನೆಗಳಿಗೆ ಗಣತಿದಾರರು ಬಂದಾಗ ಈ ಐಡಿಯನ್ನು ಪರಿಶೀಲಿಸಿ, ಮಾಹಿತಿ ದೃಢಪಡಿಸುತ್ತಾರೆ.
ಕರ್ನಾಟಕ, ಮಿಜೋರಾಮ್, ದೆಹಲಿ, ಗೋವಾ, ಒಡಿಶಾ ಮೊದಲಾದ ಕೆಲ ರಾಜ್ಯಗಳಲ್ಲಿ ಏಪ್ರಿಲ್ 1ರಿಂದ 15ರವರೆಗೆ ಸ್ವ ಗಣತಿಗೆ ಕಾಲಾವಕಾಶ ಇರುತ್ತದೆ. ನಂತರ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆ ಮನೆಗಳಿಗೆ ತೆರಳಿ ಸೆನ್ಸಸ್ ಕಾರ್ಯ ಮಾಡಲಿದ್ದಾರೆ. ಇತರ ಕೆಲ ರಾಜ್ಯಗಳಲ್ಲಿ ಏಪ್ರಿಲ್ 16ರಿಂದ ಆರಂಭವಾಗಿ ಮೇ 30ರವರೆಗೂ ಗಣತಿ ಕಾರ್ಯ ನಡೆಯಲಿದೆ.
ಸರ್ಕಾರ ಈ ಗಣತಿ ಯೋಜನೆಗೆ 11,718.24 ಕೋಟಿ ರೂ ಹಂಚಿಕೆ ಮಾಡಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ನಗರ, ಪಟ್ಟಣ, ಗ್ರಾಮಗಳಲ್ಲಿ ಸರ್ವೆ ಮಾಡಲಾಗುತ್ತದೆ.
ಬೆಂಗಳೂರು, (ಮಾರ್ಚ್ 30): ಸ್ಮಾರ್ಟ್ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆ ಜಾರಿಗೆ ಕಾನೂನು ಸುವ್ಯವಸ್ಥೆ ಹಾಗೂ ಮೇಲ್ವಿಚಾರಣೆ ದೃಷ್ಟಿಯಿಂದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಬಾಡಿ ಕ್ಯಾಮೆರಾ (body worn camera) ಬಳಸುವುದು ಕಡ್ಡಾಯವಾಗಿದೆ. ಆದ್ರೆ, ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲಿಸ್ ಠಾಣೆಯ (Bengaluru High Grounds Traffic Police Station) ಮೂವರು ಸಿಬ್ಬಂದಿ ಬಾಡಿ ಕ್ಯಾಮೆರಾ ಆಫ್ ಮಾಡಿಕೊಂಡು ವಿನಾ ಕಾರಣ ಬೈಕ್ ನಿಲ್ಲಿಸಿ ಹಣ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಸಂಬಂಧ ಇದೀಗ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಹೈ ಗ್ರೌಂಡ್ ಸಂಚಾರಿ ಪೊಲೀಸ್ ಠಾಣೆಯ ಎಎಸ್ ಐ ಸುರೇಶ್ ,ಕಾನ್ಸ್ ಟೇಬಲ್ ಗಳಾದ ಪ್ರಶಾಂತ್ ಹಾಗೂ ಸಾದಿಕ್ ಅವರನ್ನ ಸಸ್ಪೆಂಡ್ ಮಾಡಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಏನಿದು ಪ್ರಕರಣ?
ಹೈ ಗ್ರೌಂಡ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಲಂಚ ಪಡೆದ ಆರೋಪ, ಕರ್ತವ್ಯ ಲೋಪ , ಬಾಡಿ ವಾರ್ನ್ ಕ್ಯಾಮೆರಾ ಆಪ್ ಮಾಡಿ ಕೆಲಸ ನಿರ್ವಹಣೆ ಹಾಗೂ ವಿನಾ ಕಾರಣ ಬೈಕ್ ತಡೆದು ಹಣ ವಸೂಲಿ ಮಾಡಿದ್ದ ಆರೋಪ. ಹೀಗೆ ಹಲವು ಆರೋಪಗಳು ಕೇಳಿಬಂದಿದ್ದವು.
ವಾಹನಗಳನ್ನು ತಡೆದು ಹಣ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯು ಆಂತರಿಕ ತನಿಖೆ ನಡೆಸಿತ್ತು. ತನಿಖೆಯ ವೇಳೆ ಈ ಮೂವರು ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರುವುದು ಮತ್ತು ಲಂಚ ಪಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ ಮೂವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಇಂದು (ಮಾರ್ಚ್ 30) ಆದೇಶಿಸಿದ್ದಾರೆ.
ಬಾಡಿ ಕ್ಯಾಮರಾ ಅಳವಡಿಸಿಕೊಳ್ಳುವುದರಿಂದ ಪೊಲೀಸ್ ಸಿಬ್ಬಂದಿ ಎಸಗುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು. ಸಿಬ್ಬಂದಿ ಕಾರ್ಯವೈಖರಿಯನ್ನು ಸಂಬಂಧಪಟ್ಟ ಠಾಣೆಗಳಿಂದಲೇ ಗಮನಿಸಿ ಮೇಲ್ವಿಚಾರಣೆ ನಡೆಸಬಹುದು. ಇದಲ್ಲದೆ, ಬಾಡಿ ಕ್ಯಾಮರಾ ಧರಿಸುವುದರಿಂದ ಪೊಲೀಸರ ಮೇಲೆ ಹಲ್ಲೆ ನಡೆಸುವವರಿಗೂ ಭಯ ಹುಟ್ಟುವುದರ ಜತೆಗೆ, ಪೊಲೀಸರಿಗೂ ರಕ್ಷಣೆ ಸಿಕ್ಕಂತಾಗುತ್ತದೆ. ಆದ್ದರಿಂದ ಸರ್ಕಾರ ಬಾಡಿ ಕ್ಯಾಮೆರಾ ಖರೀದಿಸಿ ಪೊಲೀಸರಿಗೆ ನೀಡಿ ಕಡ್ಡಾಯವಾಗಿ ಧರಿಸುವಂತೆ ಆದೇಶಿಸಿದೆ.ಆದ್ರೆ, ಕೆಲವರು ಬಾಡಿ ಕ್ಯಾಮೆರಾವನ್ನು ಆಫ್ ಮಾಡಿಕೊಂಡು ಕಳ್ಳಾಟದಲ್ಲಿ ತೊಡಿಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
3 ವರ್ಷಗಳಲ್ಲಿ 666 ಪೊಲೀಸರು ಸಸ್ಪೆಂಡ್
ಕರ್ತವ್ಯ ಲೋಪ, ನಿರ್ಲಕ್ಷ್ಯ, ದುರ್ನಡತೆ, ಸಂತ್ರಸ್ತರಿಂದ ಹಣ ಪಡೆದಿರುವುದು ಸೇರಿದಂತೆ ವಿವಿಧ ಅಪರಾಧವೆಸಗಿದ ಆರೋಪದಡಿ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಲ್ಲಿ 666 ಮಂದಿ ಪೊಲೀಸರು ಅಮಾನತುಗೊಂಡಿದ್ದಾರೆ. 2023ರಲ್ಲಿ 188, 2024ರಲ್ಲಿ 242 ಹಾಗೂ 2025ರಲ್ಲಿ 236 ಮಂದಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಬೆದರಿಕೆ, ಹಲ್ಲೆ, ಲಂಚ, ಆರೋಪಗಳು ಸೇರಿದಂತೆ ವಿವಿಧ ಅಪರಾಧಗಳಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯ ವಿರುದ್ಧ 88 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ಬಹಿರಂಗಗೊಂಡಿದೆ.
ಬೆಂಗಳೂರು, ಮಾರ್ಚ್ 30: ಸಣ್ಣಪುಟ್ಟ ವೈವಾಹಿಕ ಜಗಳಗಳನ್ನು ಅಪರಾಧದ ಮಟ್ಟಕ್ಕೇರಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ (High Court) ಮಹತ್ವದ ತೀರ್ಪು ಪ್ರಕಟಿಸಿದೆ. ಆ ಮೂಲಕ 2018ರಲ್ಲಿ ಕೋರ್ಟ್ ಮೇಟ್ಟಿಲೇರಿದ್ದ ಮೈಸೂರಿನ ಅತ್ತೆ, ಮಾವ ಮತ್ತು ನಾದಿನಿ ವಿರುದ್ಧದ 498ಎ ಕೇಸ್ ಅನ್ನು ರದ್ದುಪಡಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಸೋಮವಾರ ಆದೇಶ ಹೊರಡಿಸಿದೆ.
ಅತ್ತೆ, ಮಾವ ಹಾಗೂ ನಾದಿನಿ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಬೇಕೆಂದು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯನ್ನು ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪುರಸ್ಕರಿಸಿ ವಿಚಾರಣೆಯನ್ನು ರದ್ದುಗೊಳಿಸಿದೆ.
ಮದುವೆಗೆ ಮುಂಚೆ ವಧು, ವರರ ಮನೆಯವರ ನಡುವೆ ವರದಕ್ಷಿಣೆ ಅಥವಾ ಮದುವೆಯ ಖರ್ಚುಗಳ ಕುರಿತು ನಡೆದ ಮಾತುಕತೆಯನ್ನಷ್ಟೇ ಆಧಾರವನ್ನಾಗಿಟ್ಟುಕೊಂಡು ಮದುವೆಯ ನಂತರ ಅತ್ತೆ, ಮಾವ ಮತ್ತು ನಾದಿನಿ ಕ್ರೌರ್ಯ ಎಸಗಿದ್ದಾರೆ ಎಂಬ ಆರೋಪವನ್ನು ಕಾನೂನಿನ ಪ್ರಕಾರ ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇಂತಹ ಆರೋಪಗಳನ್ನು ಮಾನ್ಯಗೊಳಿಸಲು ಮದುವೆಯ ನಂತರ ನಡೆದ ನಿಜವಾದ ಕಿರುಕುಳ, ಹಣ ಅಥವಾ ಆಸ್ತಿ ಕುರಿತ ಬೇಡಿಕೆ, ಒತ್ತಡ ಅಥವಾ ಹಿಂಸೆ ಎಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯಗಳಿರಬೇಕು ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ದೂರಿನಲ್ಲಿ, ಆರೋಪಪಟ್ಟಿಯಲ್ಲಿ ನಿಖರವಾದ ಸಾಕ್ಷ್ಯಗಳಿಲ್ಲ. ಸಾಮಾನ್ಯ ಜಗಳಗಳು, ದೂಷಣೆಗಳನ್ನು ಅಪರಾಧದ ಮಟ್ಟಕ್ಕೇರಿಸಲಾಗದು. ವೈವಾಹಿಕ ವಿವಾದದಲ್ಲಿ ಅತ್ತೆ, ಮಾವ, ನಾದಿಯನ್ನು ಎಳೆಯಲಾಗಿದೆ. ಪ್ರಕರಣ ಮುಂದುವರಿಯಲು ಬಿಟ್ಟರೆ ಕಾನೂನಿನ ದುರುಪಯೋಗವಾಗಲಿದೆ ಎಂದಿರುವ ಪೀಠ ಈ ಪ್ರಕರಣವನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ
ಮೈಸೂರಿನ ಗೋಕುಲಂ ನಿವಾಸಿ ತೇಜಸ್ನೊಂದಿಗೆ ವಿವಾಹ ಬೆಂಗಳೂರಿನ ವಧುವಿನೊಂದಿಗೆ 2018ರಲ್ಲಿ ಐಟಿಸಿ ಗಾರ್ಡೇನಿಯಾದಲ್ಲಿ ನಿಶ್ಚಿತಾರ್ಥ ಮತ್ತು ಲಲಿತಮಹಲ್ನಲ್ಲಿ ಮದುವೆ ಮಾಡಲಾಗಿತ್ತು. ವಿವಾಹವಾದ 19 ದಿನಗಳಲ್ಲಿ ಉದ್ಯೋಗಿ ಪತಿ ಅಮೆರಿಕಕ್ಕೆ ಹಾರಿದ್ದ. ಪತಿಯಿಂದ ಮಾನಸಿಕ ಹಿಂಸೆ, ಅತ್ತೆ, ಮಾವ, ನಾದಿನಿಯಿಂದ ಕಿರುಕುಳ ಆರೋಪಿಸಿ ಪತ್ನಿ ಆರೇ ತಿಂಗಳಲ್ಲಿ ಪತಿ ಮನೆ ತೊರೆದಿದ್ದರು. ಬಳಿಕ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು.