All posts by nagaraj11081993

ಪ್ರೇಮಿಗಳೇ ಹಿಂದೂ ಸಂಘಟನೆಗೆ ಭಯಪಡಬೇಡಿ: ನಿಮ್ಮ ರಕ್ಷಣೆಗೆ ‘ಪ್ರೀತಿಯ ಸೈನಿಕರಾಗಿ’ ನಿಲ್ಲುತ್ತೇವೆ ಎಂದ ಯುವ ಕಾಂಗ್ರೆಸ್ – Kannada News | Yuva Congress to Protect Lovers from Moral Policing on Valentine’s Day in Karnataka

ಬೆಂಗಳೂರು ಫೆ.13: ಫೆಬ್ರವರಿ 14ರ ಪ್ರೇಮಿಗಳ ದಿನದಂದು (Valentine’s Day) ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿಯನ್ನು ತಡೆಯಲು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ ಸನ್ನದ್ಧವಾಗಿದೆ. ವಿಶ್ವ ಹಿಂದೂ ಪರಿಷತ್‌, ಭಜರಂಗ ದಳದಂತಹ ಸಂಘಟನೆಗಳ ಪುಂಡಾಟಿಕೆಗೆ ಹೆದರಬೇಕಿಲ್ಲ, ಪ್ರೇಮಿಗಳ ರಕ್ಷಣೆಗೆ ನಾವು ‘ಪ್ರೀತಿಯ ಸೈನಿಕರಾಗಿ’ ನಿಲ್ಲಲಿದ್ದೇವೆ ಎಂದು ಯುವ ಕಾಂಗ್ರೆಸ್‌ ರಾಜ್ಯ ಅಧ್ಯಕ್ಷ ಎಚ್.ಎಸ್‌. ಮಂಜುನಾಥ್‌ ಗೌಡ ಘೋಷಿಸಿದ್ದಾರೆ. ಪ್ರತಿ ವರ್ಷ ಪ್ರೇಮಿಗಳ ದಿನದಂದು ಹಿಂದೂ ಪರ ಸಂಘಟನೆಗಳು ಪಾರ್ಕ್‌ಗಳು, ಮಾಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳಿಗೆ ಕಿರುಕುಳ ನೀಡುವ ದೂರುಗಳು ಕೇಳಿಬರುತ್ತವೆ. ಈ ಬಾರಿ ಅಂತಹ ಯಾವುದೇ ಸಮಾಜಘಾತುಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ಮಂಜುನಾಥ್ ಗೌಡ ಎಚ್ಚರಿಸಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ಬ್ಲಾಕ್ ಮಟ್ಟದ ಕಾರ್ಯಕರ್ತರಿಗೆ ಪ್ರೇಮಿಗಳ ಸುರಕ್ಷತೆಯ ಹೊಣೆ ನಿರ್ವಹಿಸಲು ಈಗಾಗಲೇ ನಿರ್ದೇಶನ ನೀಡಲಾಗಿದೆ.

ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೂ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಸಂಗಾತಿಯ ಆಯ್ಕೆ ಮತ್ತು ಪ್ರೀತಿ ಮಾಡುವುದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಹೀಗಾಗಿ, ಕಾನೂನುಬಾಹಿರವಾಗಿ ಪ್ರೇಮಿಗಳ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ಕೃತ್ಯಗಳನ್ನು ನಾವು ಸಹಿಸುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಫೆಬ್ರವರಿ 14 ರಂದೇ ಪ್ರೇಮಿಗಳ ದಿನ ಆಚರಿಸುವುದು ಏಕೆ? ಇಲ್ಲಿದೆ ಕಾರಣ

ವಿಶೇಷವಾಗಿ ಮಂಗಳೂರಿನಂತಹ ಸೂಕ್ಷ್ಮ ಪ್ರದೇಶಗಳಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚಾಗಿ ನಡೆಯುವ ಸಾಧ್ಯತೆ ಇರುವುದರಿಂದ, ಅಲ್ಲಿ ಹೆಚ್ಚಿನ ನಿಗಾ ವಹಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ. ಹೂವು ಮತ್ತು ಉಡುಗೊರೆ ಮಾರಾಟ ಮಾಡುವ ಬಡ ವ್ಯಾಪಾರಿಗಳ ಮೇಲಿನ ದಾಳಿಗಳನ್ನು ತಡೆಯಲು ಕೂಡ ಕಾರ್ಯಕರ್ತರು ಸಕ್ರಿಯರಾಗಿರಲಿದ್ದಾರೆ. ಪೊಲೀಸ್ ಇಲಾಖೆಯು ಇಂತಹ ಗೂಂಡಾಗಿರಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಇಲಾಖೆ ವಿಫಲವಾದರೆ ನಾವೇ ಪ್ರೇಮಿಗಳಿಗೆ ರಕ್ಷಣೆ ನೀಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ವರದಿ: ಟಿವಿ9 ಪ್ರಮೋದ್​ 

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಮಿಗಳ ದಿನಕ್ಕಾಗಿ ವ್ಯಾಪಾರಿಗಳ ಭರ್ಜರಿ ತಯಾರಿ: ಗುಲಾಬಿ, ಚಾಕೊಲೇಟ್, ಗಿಫ್ಟ್​​ಗಳದ್ದೇ ಕಾರುಬಾರು – Kannada News | Bengaluru valentines day celebrations and mixed reactions to pulwama remembrance

ಬೆಂಗಳೂರು, ಫೆಬ್ರವರಿ 13: ನಾಳೆ ಫೆಬ್ರವರಿ 14. ಈ ದಿನ ಸಮಸ್ತ ಪ್ರೇಮಿಗಳ ಪಾಲಿಗೆ (Valentine’s Day) ಎಂದಿಗೂ ಮರೆಯಲಾಗದಂತಹ ಒಂದು ಅವಿಸ್ಮರಣೀಯ ದಿನ. ಪ್ರೇಮಿಗಳ ದಿನಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಪ್ರಪಂಚದೆಲ್ಲೆಡೆ ಕಾವು ಪಡೆದುಕೊಳ್ಳುತ್ತಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ (bangaluru) ಸಹ ವ್ಯಾಲೆಂಟೆನ್ಸ್ ಡೇಗೆ ಪ್ರೇಮಿಗಳು ಸಜ್ಜಾಗಿದ್ದಾರೆ. ಪ್ರೇಮಿಗಳು ಜೊತೆಗೆ ವ್ಯಾಪಾರಿಗಳು ಭರ್ಜರಿ ತಯಾರಿ ನಡೆಸಿದ್ದಾರೆ.

ಗಿಫ್ಟ್​​ಗಳ ಮೊರೆಹೋಗುತ್ತಿರುವ ಪ್ರೇಮಿಗಳು 

ಫೆಬ್ರವರಿ 14 ನಾಳಿನ ವ್ಯಾಲೆಂಟೈನ್ಸ್ ಡೇಯನ್ನ ಅವಿಸ್ಮರಣೀಯ ಆಚರಿಸಲು ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ನೆಚ್ಚಿನ ಸಂಗಾತಿಯನ್ನ ಮೆಚ್ಚಿಸಲು ತರಹೇವಾರಿ ಗಿಫ್ಟ್​​ಗಳ ಮೊರೆಹೋಗುತ್ತಿದ್ದಾರೆ. ಎಂದಿನಂತೆ ರೋಸ್ ಡಿಮ್ಯಾಂಡ್​​​ ಹೆಚ್ಚಾಗಿದ್ದು, ಹೂಗಳ ವ್ಯಾಪಾರಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಫ್ಲವರ್ ಡೆಕೋರೇಷನ್​​ಗಳಲ್ಲಿ ತೊಡಗಿದ್ದಾರೆ. ಟೆಡ್ಡಿಬೇರ್‌, ಚಾಕೊಲೇಟ್, ರೆಡ್ ಥೀಮ್​ ಉಡುಗೆಗಳು ಕೂಡ ಮಾರಾಟ ಚುರುಕು ಪಡೆದುಕೊಂಡಿದೆ.

ಪ್ರೇಮಿಗಳ ದಿನ ಹಿನ್ನೆಲೆ ಯುವ ಜನಾಂಗ ಮಿಶ್ರ ಪ್ರತಿಕ್ರಿಯೆ: ಕರಾಳ ದಿನವನ್ನ ಸ್ಮರಿಸುತ್ತೇವೆ ಎಂದ ಕಾಲೇಜ್​​ ವಿದ್ಯಾರ್ಥಿಗಳು

ಇನ್ನು ವ್ಯಾಲೆಂಟೈನ್ಸ್ ಡೇಗಾಗಿ ನಾನಾ ರೀತಿಯ ತಯಾರಿಯಲ್ಲಿ ಒಂದಷ್ಟು ಮಂದಿ ತೊಡಗಿದ್ದರೆ, ನಗರದ ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಪುಲ್ವಾಮಾ ಅಟ್ಯಾಕ್​ನಲ್ಲಿ ಹುತಾತ್ಮರಾದ ವೀರಯೋಧರನ್ನ ಸ್ಮರಿಸುವ ಮೂಲಕ ಕರಾಳ ದಿನವನ್ನ ಆಚರಿಸುತ್ತೇವೆ ಅಂತಿದ್ದಾರೆ. ಇನ್ನು ಕೆಲ ಮಂದಿ ಅರ್ಥಪೂರ್ಣವಾಗಿ ಆಚರಿಸುವುದು ಸಮಂಜಸ ಎನ್ನುತ್ತಿದ್ದಾರೆ.

ಇದನ್ನೂ ಓದಿ: Nandi Hills: ವ್ಯಾಲೆಂಟೈನ್ಸ್ ಡೇಗೆ ಲವರ್ಸ್‌ಗೆ ಶಾಕ್; ನಾಳೆ ನಂದಿ ಬೆಟ್ಟಕ್ಕೆ ಹೋಗೂ ಪ್ಲಾನ್ ಇದ್ದರೆ ಈ ವಿಚಾರ ಗಮನಿಸಿ

ಒಟ್ಟಾರೆ ಫೆಬ್ರಬರಿ ಎನ್ನುವ ತಿಂಗಳೇ ಲವರ್ಸ್​​ಗಳಿಗೆ ಮೋಸ್ಟ್ ಫೇವರೆಟ್ ಎನ್ನಬಹುದು. ಅದರಲ್ಲೂ 14ರಂದು ಇನ್ನು ಪ್ರಿಯ. ವಿಶ್ವದೆಲ್ಲೆಡೆ ಈ ದಿನದಂದು ಆಚರಣೆ ಜೋರಾಗಿರುತ್ತದೆ. ಆದರೆ ಭಾರತದಲ್ಲಿ ಮಾತ್ರ ಈ ದಿನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು? – Kannada News | Jayamala Talks about Joe Simon death watch video

ಕನ್ನಡ ಚಿತ್ರರಂಗದ (Sandalwood) ಹಿರಿಯ ನಿರ್ದೇಶಕ ಮಾತ್ರವಲ್ಲದೆ ಸಿನಿಮಾ ರಂಗದ ಕೆಲವು ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯವಾಗಿದ್ದ ಜೋಸೈಮನ್ ಅವರು ಇಂದು (ಫೆಬ್ರವರಿ 13) ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್​ ಆಯೋಜಿಸಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದಾಗಲೇ ಅವರಿಗೆ ಹೃದಯಾಘಾತವಾಗಿತ್ತು. ಈ ಅಚಾನಕ್ ಘಟನೆ ಬಗ್ಗೆ ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಅವರು ಮಾತನಾಡಿದ್ದಾರೆ. ಅಗಲಿದ ಹಿರಿಯ ನಿರ್ದೇಶಕನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ನೆಹರು ಚೀನಾದೊಂದಿಗೆ ಪಂಚಶೀಲ ಒಪ್ಪಂದ ಬಯಸಿದ್ದೇಕೆ? ಸಿಡಿಎಸ್ ಅನಿಲ್ ಚೌಹಾಣ್ ಮಾಹಿತಿ – Kannada News | Nehru thought Panchsheel Agreement settled border issue but not CDS Anil Chauhan explains

ನವದೆಹಲಿ, ಫೆಬ್ರವರಿ 13: ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್ (Anil Chauhan) ಇಂದು ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಭಾರತ-ಚೀನಾ ಸಂಬಂಧಗಳ ಬಗ್ಗೆ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. “1954ರ ಪಂಚಶೀಲ ಒಪ್ಪಂದದ ಅಡಿಯಲ್ಲಿ ಭಾರತವು ಟಿಬೆಟ್ ಅನ್ನು ಚೀನಾದ ಭಾಗವೆಂದು ಗುರುತಿಸಿತು. ಪ್ರಾದೇಶಿಕ ಸ್ಥಿರತೆಯನ್ನು ಕಾಪಾಡಲು ಮತ್ತು ಎರಡು ರಾಷ್ಟ್ರಗಳ ನಡುವೆ ಸಹಕಾರಿ ಸಂಬಂಧವನ್ನು ಉತ್ತೇಜಿಸಲು ಉದ್ದೇಶಿಸಲಾಗಿತ್ತು. ಆದರೆ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಮಾಡಿಕೊಂಡು ಈ ಒಪ್ಪಂದವನ್ನು ಚೀನಾ ಬೇರೆಯದೇ ರೀತಿ ಬಳಸಿಕೊಂಡಿತು” ಎಂದು ಹೇಳಿದ್ದಾರೆ.

“ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಅಂದಿನ ಚೀನಾದ ಪ್ರಧಾನಿ ಝೌ ಎನ್ಲೈ ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಉತ್ತಮಗೊಳಿಸಲು ಶಾಂತಿಯುತ ಸಹಬಾಳ್ವೆ ಸೇರಿದಂತೆ 5 ತತ್ವಗಳನ್ನು ರೂಪಿಸಿತು. ಬ್ರಿಟಿಷರು ನಿರ್ಗಮಿಸಿದ ನಂತರ, ಭಾರತವು ತನ್ನದೇ ಆದ ಗಡಿಗಳನ್ನು ನಿರ್ಧರಿಸಬೇಕಾಗಿತ್ತು. ಆಗ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಪೂರ್ವದಲ್ಲಿರುವ ಮೆಕ್‌ಮಹಾನ್ ರೇಖೆ ಮತ್ತು ಲಡಾಖ್‌ನ ಕೆಲವು ಪ್ರದೇಶಗಳು ಸೇರಿದಂತೆ ಭಾರತದ ಹಕ್ಕುಗಳ ಬಗ್ಗೆ ತಿಳಿದಿತ್ತು. ಆದರೆ ಪಂಚಶೀಲ ಒಪ್ಪಂದ ಮಾಡಿಕೊಂಡರೆ ಅದು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದರು” ಎಂದು ಹೇಳಿದ್ದಾರೆ.

“ಸ್ವಾತಂತ್ರ್ಯದ ಬಳಿಕ ದೇಶ ಬಿಟ್ಟು ಬ್ರಿಟಿಷರು ಹೊರಟುಹೋದರು. ಆದರೆ, ಭಾರತಕ್ಕೆ ಮುಂಭಾಗ ಎಲ್ಲಿದೆ ಎಂಬುದನ್ನು ನಿರ್ಧರಿಸುವುದು ಭಾರತದ ಜವಾಬ್ದಾರಿಯಾಗಿತ್ತು. ಆಗ ಸುಮಾರು 890 ಕಿಮೀ ವಿಸ್ತರಿಸಿದ ಮೆಕ್‌ಮಹಾನ್ ರೇಖೆಯು ಪೂರ್ವ ವಲಯದಲ್ಲಿ ಬ್ರಿಟಿಷ್ ಭಾರತ ಮತ್ತು ಟಿಬೆಟ್ ನಡುವಿನ ಗಡಿಯಾಗಿ ಕಾರ್ಯನಿರ್ವಹಿಸಿತು” ಎಂದಿದ್ದಾರೆ.

ಇದನ್ನೂ ಓದಿ: ಸ್ವಜನಪಕ್ಷಪಾತವಿಲ್ಲದ ಏಕೈಕ ಸ್ಥಳವೆಂದರೆ ಸೇನೆ; ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಹೇಳಿಕೆ

“ನೆಹರು ಪೂರ್ವ ವಲಯದಲ್ಲಿರುವ ಮೆಕ್‌ಮಹಾನ್ ರೇಖೆ ಮತ್ತು ಲಡಾಖ್‌ನಲ್ಲಿ ಭಾರತದ ಹಕ್ಕುಗಳ ಬಗ್ಗೆ ತಿಳಿದಿದ್ದರು. ಆದರೆ ಆ ಬಗ್ಗೆ ಇನ್ನೂ ಅನಿಶ್ಚಿತತೆ ಇತ್ತು. ಅದಕ್ಕಾಗಿಯೇ ಅವರು ಪಂಚಶೀಲ ಒಪ್ಪಂದ ಮಾಡಿಕೊಳ್ಳಲು ಬಯಸಿದ್ದರು. 890 ಕಿ.ಮೀ ಮೆಕ್‌ಮಹಾನ್ ರೇಖೆಯು ಈಶಾನ್ಯದಲ್ಲಿ ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ಗಡಿಯಾಗಿದೆ. ಇದು ನಿರ್ದಿಷ್ಟವಾಗಿ ಅರುಣಾಚಲ ಪ್ರದೇಶ ಮತ್ತು ಟಿಬೆಟ್ ನಡುವಿನ ಗಡಿಯನ್ನು ಗುರುತಿಸುತ್ತದೆ. ಈ ಮಾರ್ಗದ ಬಗ್ಗೆ 1913ರ ಶಿಮ್ಲಾ ಸಮಾವೇಶದ ಸಮಯದಲ್ಲಿ ಮಾತುಕತೆ ನಡೆಸಲಾಯಿತು. ಅದಕ್ಕೆ ಬ್ರಿಟಿಷ್ ಸಮಾಲೋಚಕ ಸರ್ ಹೆನ್ರಿ ಮೆಕ್‌ಮಹಾನ್ ಅವರ ಹೆಸರಿಡಲಾಗಿದೆ. ಆದರೆ, ಚೀನಾ ಎಂದಿಗೂ ಗಡಿಯನ್ನು ಒಪ್ಪಿಕೊಳ್ಳಲಿಲ್ಲ. ಇದು ಬ್ರಿಟಿಷ್ ಭಾರತ ಮತ್ತು ಟಿಬೆಟ್‌ನಿಂದ ಹೇರಲ್ಪಟ್ಟಿದೆ ಎಂದು ಚೀನಾ ಹೇಳಿಕೊಂಡಿದೆ” ಎಂದು ಹೇಳಿದ್ದಾರೆ.

“1954ರಲ್ಲಿ ಭಾರತವು ಟಿಬೆಟ್ ಅನ್ನು ಚೀನಾದ ಭಾಗವೆಂದು ಗುರುತಿಸಿತು. ಎರಡೂ ದೇಶಗಳು ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದವು. ಇದರೊಂದಿಗೆ, ಭಾರತವು ಉತ್ತರ ಗಡಿಯನ್ನು ಇತ್ಯರ್ಥಪಡಿಸಿದೆ ಎಂದು ಭಾವಿಸಿತ್ತು. ಆದರೆ, ನಮ್ಮ ದೇಶದಲ್ಲಿ ಇತ್ಯರ್ಥವಾಗದ ಏಕೈಕ ಗಡಿ ಪ್ರದೇಶ ಅದಾಗಿತ್ತು. ಆ ಗಡಿ ಭಾಗ ಅನೇಕ ಸವಾಲುಗಳನ್ನು ತಂದೊಡ್ಡಿತು” ಎಂದು ಅನಿಲ್ ಚೌಹಾಣ್ ಹೇಳಿದ್ದಾರೆ.

ಇದನ್ನೂ ಓದಿ: ಸ್ವಲ್ಪವಾದರೂ ರಾಷ್ಟ್ರೀಯತೆ, ದೇಶಭಕ್ತಿ ಇರಲಿ: ಭಾರತೀಯ ಉದ್ಯಮ ಕ್ಷೇತ್ರಕ್ಕೆ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಖಡಕ್ ಸಂದೇಶ

“ಪಂಚಶೀಲ ಒಪ್ಪಂದವನ್ನು ವ್ಯಾಪಾರಕ್ಕಾಗಿ ಮಾತ್ರ ಮಾತುಕತೆ ನಡೆಸಲಾಗಿದೆ. ಅದು ಗಡಿಯಲ್ಲಿ ಚೀನಾದ ನಿಲುವನ್ನು ಯಾವುದೇ ರೀತಿಯಲ್ಲಿ ಪ್ರತಿಬಿಂಬಿಸುವುದಿಲ್ಲ ಎಂಬುದು ಚೀನಾದ ನಿಲುವಾಗಿತ್ತು. ಕಳೆದ ವರ್ಷ ಪ್ರಧಾನಿ ಮೋದಿ ಬೀಜಿಂಗ್‌ನಲ್ಲಿ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡಿದಾಗ ಚೀನಾ ಅಧ್ಯಕ್ಷರು ಪಂಚಶೀಲ ಒಪ್ಪಂದವನ್ನು ಎರಡೂ ದೇಶಗಳು ಪಾಲಿಸಬೇಕು ಮತ್ತು ಉತ್ತೇಜಿಸಬೇಕು ಎಂದು ಒತ್ತಿ ಹೇಳಿದರು. ಭಾರತ ಮತ್ತು ಚೀನಾ ತಮ್ಮ ಸಂಬಂಧಗಳನ್ನು ಮರುಸ್ಥಾಪಿಸಿದ ನಂತರ, 7 ವರ್ಷಗಳ ಬಳಿಕ ಪ್ರಧಾನಿ ಮೋದಿ ಚೀನಾಕ್ಕೆ ಭೇಟಿ ನೀಡಿದಾಗ ಎರಡೂ ದೇಶಗಳು ತಮ್ಮ ಗಡಿ ಬಿಕ್ಕಟ್ಟನ್ನು ಕೊನೆಗೊಳಿಸಿದವು” ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು? – Kannada News | NM Suresh talks about what happened to Joe Simon in Film Chamber

ಕನ್ನಡ ಚಿತ್ರರಂಗದ (Sandalwood) ಹಿರಿಯ ನಿರ್ದೇಶಕ ಜೋ ಸೈಮನ್ ಇಂದು (ಫೆಬ್ರವರು 13) ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್​​ನಲ್ಲಿ ನಡೆದಿದ್ದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದ ವೇಳೆಯೇ ಅವರಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ ಅವರು ಕೊನೆ ಉಸಿರೆಳೆದರು. ಘಟನೆ ನಡೆದಾಗ ಫಿಲಂ ಚೇಂಬರ್​​ನಲ್ಲಿ ಹಾಜರಿದ್ದ ಮಾಜಿ ಅಧ್ಯಕ್ಷ, ನಿರ್ಮಾಪಕ ಎನ್​​ಎಂ ಸುರೇಶ್ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ. ಜೋ ಸೈಮನ್ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆಯ ಜೊತೆಗೆ ಇಂದು ಸಭೆಯಲ್ಲಿ ಜೋ ಸೈಮನ್ ಏನು ಮಾತನಾಡಿದರು ಎಂಬಿತ್ಯಾದಿ ವಿವರಗಳನ್ನು ಸಹ ಸುರೇಶ್ ಅವರು ನೀಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಹಂಪಿ ಉತ್ಸವದಲ್ಲಿ ಅವಘಡ: ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ – Kannada News | Hampi Utsav Inauguration: Fire Breaks Out During CM Puja, Quick Action Saves Day

ಹೊಸಪೇಟೆ ಫೆ.13: ವಿಶ್ವವಿಖ್ಯಾತ ಹಂಪಿ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೇದಿಕೆಯ ಮೇಲೆ ಪೂಜೆ ಸಲ್ಲಿಸುತ್ತಿದ್ದ ಸಂದರ್ಭದಲ್ಲೇ ಪಟಾಕಿ ಕಿಡಿ ತಾಗಿ ವೇದಿಕೆಯ ಬಲಭಾಗದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಅದ್ಧೂರಿ ‘ಹಂಪಿ ಉತ್ಸವ’ಕ್ಕೆ ಚಾಲನೆ ನೀಡಲಾಗುತ್ತಿತ್ತು. ಮುಖ್ಯ ವೇದಿಕೆಯ ಮೇಲೆ ಮುಖ್ಯಮಂತ್ರಿಗಳು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡುತ್ತಿದ್ದರು. ಈ ವೇಳೆ ಸಿಡಿಸಿದ ಪಟಾಕಿಯ ಕಿಡಿಯೊಂದು ವೇದಿಕೆಯ ಪಕ್ಕಕ್ಕೆ ಸಿಡಿದು, ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು, ದಟ್ಟ ಹೊಗೆ ಆವರಿಸಿಕೊಂಡಿತು. ವೇದಿಕೆಯ ಸಮೀಪವೇ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಹಾಗೂ ಗಣ್ಯರು ಆತಂಕಗೊಂಡಿದ್ದಾರೆ. ಆದರೆ, ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಸಕಾಲಕ್ಕೆ ಸಿಬ್ಬಂದಿ ಎಚ್ಚೆತ್ತಿದ್ದರಿಂದ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತಂಜಲಿ ಫುಡ್ಸ್​ನ ‘ಸೂಪರ್-ಫಾಸ್ಟ್’ ಗಳಿಕೆ! 9 ತಿಂಗಳಲ್ಲಿ ₹29,000 ಕೋಟಿ ಆದಾಯ – Kannada News | Patanjali Foods Q3 results, revenue increases, while profit gets a hit

ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ, ಬಾಬಾ ರಾಮ್‌ದೇವ್ ಅವರ ಪತಂಜಲಿ ಫುಡ್ಸ್ ಸಂಸ್ಥೆಯು ಗಳಿಕೆಯಲ್ಲಿ ದಾಖಲೆಯನ್ನು ಸ್ಥಾಪಿಸಿದೆ. ಮೊದಲ ಬಾರಿಗೆ, ಒಂಬತ್ತು ತಿಂಗಳ ಆದಾಯವು ₹29,000 ಕೋಟಿಗಳನ್ನು ಮೀರಿದೆ. ಇದು ಹಿಂದೆಂದೂ ನೋಡಿರದ ದಾಖಲೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (2025ರ ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಅವಧಿ), ಕಂಪನಿಯ ಆದಾಯವು ₹10,500 ಕೋಟಿಗಳನ್ನು ತಲುಪಿದೆ. ಕಂಪನಿಯ ಪ್ರಕಾರ, ಜಾಗತಿಕ ಸರಕುಗಳ ಬೆಲೆಗಳಲ್ಲಿನ ಏರಿಳಿತಗಳು, ರೂಪಾಯಿಯ ಗಮನಾರ್ಹ ಅಪಮೌಲ್ಯ ಮತ್ತು ಜಾಗತಿಕ ಆರ್ಥಿಕ ಸವಾಲುಗಳ ಹೊರತಾಗಿಯೂ, ಕಂಪನಿಯು ಅತ್ಯುತ್ತಮ ಆದಾಯ ಪ್ರಗತಿ ತೋರಿದೆ. EBITDA (ಟ್ಯಾಕ್ಸ್ ಕಳೆದ ನಂತರದ ಲಾಭ) ₹500 ಕೋಟಿಗಿಂತ ಕಡಿಮೆ ಇತ್ತು. ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಡುಬಂದ ಅಂಕಿಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪತಂಜಲಿ ಫುಡ್ಸ್ ತ್ರೈಮಾಸಿಕ ವರದಿಯ ಹೈಲೈಟ್ಸ್

  • ಆಪರೇಶನ್​ಗಳಿಂದ ಬಂದ ಆದಾಯ 10,483.71 ಕೋಟಿ ರೂ. ಆಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 16.53 ರಷ್ಟು ಹೆಚ್ಚು. ಮತ್ತು ಹಿಂದಿನ ತ್ರೈಮಾಸಿಕಕ್ಕಿಂತ ಶೇ. 7.23 ರಷ್ಟು ಹೆಚ್ಚಾಗಿದೆ.
  • ಹಣಕಾಸು ವರ್ಷದ ಮೊದಲ 9 ತಿಂಗಳ ಅವಧಿಯ ಆದಾಯ 29,013.98 ಕೋಟಿ ರೂ.ಗಳನ್ನು ತಲುಪಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 16.55 ರಷ್ಟು ಹೆಚ್ಚಾಗಿದೆ.
  • 2026 ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಒಟ್ಟು EBITDA 492.06 ಕೋಟಿ ರೂ.ಗಳಾಗಿದ್ದು, ಶೇ. 4.69 ರಷ್ಟು ಲಾಭಾಂಶವನ್ನು ಹೊಂದಿದೆ.
  • ತ್ರೈಮಾಸಿಕದಲ್ಲಿ ತೆರಿಗೆ ನಂತರದ ಲಾಭ (ಪಿಎಟಿ) 593.76 ಕೋಟಿ ರೂ. ಆಗಿದೆ.

ಇದನ್ನೂ ಓದಿ: ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಯುರ್ವೇದ ಪಾತ್ರ ಹೇಗೆ? ಬಾಬಾ ರಾಮದೇವ್ ವಿವರಣೆ ಇದು…

FMCG ವಿಭಾಗದಿಂದ ಅದ್ಭುತ ಗಳಿಕೆ

ಎಫ್​ಎಂಸಿಜಿ ವಿಭಾಗ: 2026 ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಎಫ್​ಎಂಸಿಜಿ ಸೆಗ್ಮೆಂಟ್ ₹3,248.35 ಕೋಟಿಗಳ ಒಟ್ಟಾರೆ ಮಾರಾಟವನ್ನು ದಾಖಲಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 38.93% ಹೆಚ್ಚಾಗಿದೆ. ಈ ವಿಭಾಗವು ಒಟ್ಟು ಆದಾಯಕ್ಕೆ 30.68% ಮತ್ತು EBITDA ಗೆ 66.33% ಕೊಡುಗೆ ನೀಡಿದೆ.

ಖಾದ್ಯ ತೈಲ ವಿಭಾಗ: 2026ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಪತಂಜಲಿ ಫುಡ್ಸ್​ನ ಖಾದ್ಯ ತೈಲ ಅಥವಾ ಅಡುಗೆ ಎಣ್ಣೆ ವಿಭಾಗವು ₹7,335.71 ಕೋಟಿ ಆದಾಯವನ್ನು ವರದಿ ಮಾಡಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 8.98 ರಷ್ಟು ಹೆಚ್ಚಾಗಿದೆ. ಒಟ್ಟು ತೈಲ ಮಾರಾಟದಲ್ಲಿ ಬ್ರ್ಯಾಂಡೆಡ್ ಎಣ್ಣೆಗಳ ಪಾಲು ಶೇ. 85ರಷ್ಟಿದೆ. ಸೆಗ್ಮೆಂಟಲ್ EBITDA ಮಾರ್ಜಿನ್ 2.39% ಆಗಿತ್ತು. ಏರ್ ಟರ್ಬೈನ್ ವಿದ್ಯುತ್ ಉತ್ಪಾದನೆಯು ತ್ರೈಮಾಸಿಕದಲ್ಲಿ ₹4.27 ಕೋಟಿ ಆದಾಯವನ್ನು ಗಳಿಸಿದೆ. ಒಟ್ಟಾರೆ, ಪತಂಜಲಿಯ ಮೂರನೇ ತ್ರೈಮಾಸಿಕ ಲಾಭದ ವಿಚಾರದಲ್ಲಿ ಅದರ ಬ್ಯುಸಿನೆಸ್ ಹೆಚ್ಚಿದೆಯಾದರೂ, ಲಾಭ ಕಡಿಮೆಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದಲ್ಲಿ ‘ಧುರಂಧರ್’ ಸಿನಿಮಾಕ್ಕೆ ಭಾರಿ ಬೇಡಿಕೆ: ಡಿವಿಡಿ ಬೆಲೆ ಎಷ್ಟು? – Kannada News | Pakistan people watching Dhurandhar movie, Dvds sold for 16 rs

ಬಾಕ್ಸ್ ಆಫೀಸ್​​ನಲ್ಲಿ ಹಲವು ಹೊಸ ದಾಖಲೆಗಳನ್ನೇ ಬರೆದಿರುವ 2025ರ ಬ್ಲಾಕ್ ಬಸ್ಟರ್ ಸಿನಿಮಾ ‘ಧುರಂಧರ್’ ಈ ವಾರ ಒಟಿಟಿಗೆ ಬಂದಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಸಿನಿಮಾ ಈಗಾಗಲೇ ಬಿಡುಗಡೆ ಆಗಿದ್ದು, ಚಿತ್ರಮಂದಿರಗಳ ರೀತಿಯೇ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ.

ಧುರಂಧರ್’ (Dhurandhar) ಸಿನಿಮಾ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕವೂ ಸಹ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಲೇ ಇದೆ. ಭಾರತೀಯ ಸೈನಿಕ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದಕರೊಟ್ಟಿಗೆ ಸೇರಿ ಅವರ ಮೇಲೆ ಗೂಢಚಾರಿಕೆ ಮಾಡುವ ಕತೆಯನ್ನು ‘ಧುರಂಧರ್’ ಸಿನಿಮಾ ಒಳಗೊಂಡಿದೆ. ಸಿನಿಮಾದ ಆಕ್ಷನ್, ಹಾಡುಗಳು, ನಟರ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಆದರೆ ಸಿನಿಮಾವನ್ನು ಮುಸ್ಲಿಂ ವಿರೋಧಿ, ನೆರೆ ರಾಷ್ಟ್ರ ವಿರೋಧಿ ಎಂಬಿತರ ಕಾರಣಗಳಿಂದ ಯುಎಇ ಮತ್ತು ಕೆಲ ರಾಷ್ಟ್ರಗಳಲ್ಲಿ ನಿಷೇಧ ಮಾಡಲಾಗಿದೆ. ಇನ್ನು ಪಾಕಿಸ್ತಾನದಲ್ಲಂತೂ ವರ್ಷಗಳಿಂದಲೂ ಭಾರತೀಯ ಸಿನಿಮಾಗಳ ಮೇಲೆ ನಿಷೇಧ ಇದ್ದೇ ಇದೆ. ಹಾಗಿದ್ದರೂ ಸಹ ಪಾಕಿಸ್ತಾನದಲ್ಲಿ ‘ಧುರಂಧರ್’ ಸಿನಿಮಾ ಭಾರಿ ವೈರಲ್ ಆಗಿದ್ದು, ಜನ ಮುಗಿಬಿದ್ದು ಸಿನಿಮಾದ ಪೈರಸಿ ಕಾಪಿಗಳನ್ನು ಖರೀದಿಸಿ ನೋಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ‘ಧುರಂಧರ್’ ಸಿನಿಮಾ ಪೈರೇಟೆಡ್ ರೂಪದಲ್ಲಿ ದೂಳೆಬ್ಬಿಸುತ್ತಿದೆ. ವಿದೇಶಿ ಪ್ರವಾಸಿಗರೊಬ್ಬರು ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಈ ಹಿಂದೆ ಭಾರತಕ್ಕೂ ಭೇಟಿ ನೀಡಿದ್ದ ಟ್ರಾವೆಲ್ ವ್ಲಾಗರ್ ಕರ್ಲ್ ರಾಕ್, ಇದೀಗ ಪಾಕಿಸ್ತಾನದ ಪ್ರವಾಸದಲ್ಲಿದ್ದು, ಅಲ್ಲಿನ ಕರಾಚಿ ನಗರದ ಮಾರುಕಟ್ಟೆಯಲ್ಲಿ ‘ಧುರಂಧರ್’ ಸಿನಿಮಾದ ಡಿವಿಡಿ ಮಾರುತ್ತಿರುವುದು ನೋಡಿ ಶಾಕ್ ಆಗಿದ್ದಾರೆ. ಸಿನಿಮಾದ ಡಿವಿಡಿ ಮಾರಾಟದ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:‘ಧುರಂಧರ್’ ನಟ ರಣವೀರ್ ಸಿಂಗ್​ಗೆ ಬೆದರಿಕೆ; ಭದ್ರತೆ ಹೆಚ್ಚಿಸಿದ ಪೊಲೀಸರು

ಪಾಕಿಸ್ತಾನದ ಮಾರುಕಟ್ಟೆಗಳಲ್ಲಿ ‘ಧುರಂಧರ್’ ಸಿನಿಮಾದ ಡಿವಿಡಿಗಳು ಕೇವಲ 16 ರೂಪಾಯಿಗೆ (50 ಪಾಕಿಸ್ತಾನಿ ರೂಪಾಯಿ) ಮಾರಾಟವಾಗುತ್ತಿವೆ. ಅದೂ, ಡಿವಿಡಿ ಅಂಗಡಿಗಳವರು ‘ಧುರಂಧರ್’ ಸಿನಿಮಾದ ಪೋಸ್ಟರ್​ಗಳನ್ನು ಜಾಹೀರಾತಿಗಾಗಿ ದೊಡ್ಡದಾಗಿ ಹಾಕಿರಿಸಿಕೊಂಡಿದ್ದಾರೆ.

‘ಧುರಂಧರ್’ ಸಿನಿಮಾನಲ್ಲಿ ಪಾಕಿಸ್ತಾನ ವಿರೋಧಿ ಕಥಾವಸ್ತುವಿದ್ದರೂ ಸಹ ಅಲ್ಲಿನ ಜನರು ಮುಗಿಬಿದ್ದು ನೋಡುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಮಾತ್ರವಲ್ಲದೆ, ‘ಧುರಂಧರ್’ ಸಿನಿಮಾಧ ಹಾಡುಗಳು ಸಹ ಪಾಕಿಸ್ತಾನದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದು, ಅಲ್ಲಿನ ಮದುವೆ ಸಮಾರಂಭಗಳಲ್ಲಿ, ಇತರೆ ಸಮಾಂಭಗಳಲ್ಲಿ ಹಾಡುಗಳನ್ನು ಹಾಕಿಕೊಂಡು ಜನ ಡ್ಯಾನ್ಸ್ ಮಾಡುತ್ತಿದ್ದಾರೆ.

‘ಧುರಂಧರ್’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಇದರ ಮುಂದುವರಿದ ಭಾಗ ‘ಧುರಂಧರ್ 2’ ಬಿಡುಗಡೆಗೆ ಸಜ್ಜಾಗಿದೆ. ರಣವೀರ್ ಸಿಂಗ್ ನಟನೆಯ ಈ ಬಹುನಿರೀಕ್ಷಿತ ಆಕ್ಷನ್ ಚಿತ್ರವು **2026ರ ಮಾರ್ಚ್ 19ರಂದು** ವಿಶ್ವದಾದ್ಯಂತ ತೆರೆಕಾಣಲಿದೆ. ಮೊದಲ ಭಾಗಕ್ಕಿಂತಲೂ ಈ ಬಾರಿ ಹೆಚ್ಚಿನ ಸಾಹಸ ಮತ್ತು ರೋಚಕತೆ ಇರಲಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಐಎಂಡಿಬಿ ಪಟ್ಟಿಯಲ್ಲಿಯೂ ಇದು ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ, ಗಾಯಾಳು ಪತ್ನಿ ಹೇಳಿದ್ದಿಷ್ಟು – Kannada News | Bannerghatta Park Keeper Injured in Leopard Attack: What did Keeper wife said

ಆನೇಕಲ್​, ಫೆಬ್ರವರಿ 13: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ ಮಾಡಿರುವಂತಹ ಘಟನೆ ನಡೆದಿದೆ. ಉದ್ಯಾನವನದ ಪ್ರಾಣಿ ಪಾಲಕ ಶಾಂತಪ್ಪ ಮೇಲೆ ಚಿರತೆ ದಾಳಿ ಮಾಡಿದ್ದು, ಮುಖ, ಕತ್ತಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಸದ್ಯ ಶಾಂತಪ್ಪರನ್ನ ಜಿಗಣಿಯ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಬಗ್ಗೆ ಶಾಂತಪ್ಪ ಪತ್ನಿ ಜಯಮ್ಮ ಪ್ರತಿಕ್ರಿಯಿಸಿದ್ದು, ಬನ್ನೇರುಘಟ್ಟ ಝೂನಲ್ಲಿ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಡೆಮ್ಮೆ ದಾಳಿಯಿಂದ ಗಾಯಗೊಂಡಿದ್ದರು. ಇದೀಗ ಚಿರತೆ ದಾಳಿ ಮಾಡಿದೆ. ಮನೆಗೆ ಆಧಾರವಾಗಿದ್ದಾರೆ. ಅವರನ್ನ ಖಾಯಂ ನೌಕರರನ್ನಾಗಿ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗುಲಾಮಗಿರಿಯನ್ನು ಮೆಟ್ಟಿ ಹೊಸ ಇತಿಹಾಸ ಸೃಷ್ಟಿಸಿದ್ದೇವೆ; ಸೇವಾ ತೀರ್ಥದಲ್ಲಿ ಪ್ರಧಾನಿ ಮೋದಿ ಮೊದಲ ಭಾಷಣ – Kannada News | Seva Teerth to fulfill aspirations of 140 crore Indians not of any monarch PM Modis first Speech from new office

ನವದೆಹಲಿ, ಫೆಬ್ರವರಿ 13: ಇಂದು ಹೊಸದಾಗಿ ಉದ್ಘಾಟನೆಗೊಂಡ ‘ಸೇವಾ ತೀರ್ಥ’ ಕಟ್ಟಡದಲ್ಲಿ ತಮ್ಮ ಮೊದಲ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ (PM Modi) ಭಾರತ ದೇಶ ಹೊಸ ಇತಿಹಾಸದ ಸೃಷ್ಟಿಗೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದರು. “ನಾವೆಲ್ಲರೂ ಹೊಸ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಗುಲಾಮಗಿರಿಯ ಮನಸ್ಥಿತಿಯನ್ನು ತೊಡೆದುಹಾಕುವ ಮೂಲಕ ಹೊಸ ಹಾದಿಯತ್ತ ಹೆಜ್ಜೆ ಹಾಕುತ್ತಿದ್ದೇವೆ. ಇಂದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಹೊಸ ಆರಂಭಕ್ಕೆ ಸಾಕ್ಷಿಯಾಗಿದೆ. ನಾವೆಲ್ಲರೂ ‘ವಿಕಸಿತ ಭಾರತ’ ಸಾಧಿಸುವ ಸಂಕಲ್ಪದೊಂದಿಗೆ ಸೇವಾ ತೀರ್ಥ ಮತ್ತು ಕರ್ತವ್ಯ ಭವನವನ್ನು ಪ್ರವೇಶಿಸುತ್ತಿದ್ದೇವೆ” ಎಂದು ಪ್ರಧಾನಿ ಹೇಳಿದ್ದಾರೆ.

ರಾಷ್ಟ್ರಪತಿ ಭವನದ ಬಳಿಯ ರೈಸಿನಾ ಬೆಟ್ಟದಲ್ಲಿರುವ ವಸಾಹತುಶಾಹಿ ಯುಗದ ಸೌತ್ ಬ್ಲಾಕ್ ಅನ್ನು ತೊರೆದ ಪ್ರಧಾನಿ ಮೋದಿ ಸೇವಾ ತೀರ್ಥದಲ್ಲಿರುವ ತಮ್ಮ ಹೊಸ ಕಚೇರಿಯಿಂದ ಕಾರ್ಯಾರಂಭ ಮಾಡಿದರು. ರಾಷ್ಟ್ರ ರಾಜಧಾನಿಯಲ್ಲಿ ಇಂದು ಸೇವಾ ತೀರ್ಥ ಮತ್ತು ಕರ್ತವ್ಯ ಭವನ 1 ಮತ್ತು 2 ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ “ಹೊಸ ಕಟ್ಟಡಗಳು ನಾಗರಿಕ ಕೇಂದ್ರಿತ ಆಡಳಿತ ಮತ್ತು ರಾಷ್ಟ್ರೀಯ ಪ್ರಗತಿಗೆ ದೇಶದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಹೇಳಿದರು.

“ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಂತಹ ಕಟ್ಟಡಗಳನ್ನು ಬ್ರಿಟಿಷ್ ಸರ್ಕಾರದ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ನಿರ್ಮಿಸಲಾಗಿತ್ತು. ಸೇವಾ ತೀರ್ಥ ಮತ್ತು ಕರ್ತವ್ಯ ಭವನದಂತಹ ಹೊಸ ಸಂಕೀರ್ಣಗಳನ್ನು ಭಾರತದ ಜನರ ಆಕಾಂಕ್ಷೆಗಳನ್ನು ಪೂರೈಸಲು ನಿರ್ಮಿಸಲಾಗಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು 140 ಕೋಟಿ ನಾಗರಿಕರ ಆಕಾಂಕ್ಷೆಗಳನ್ನು ಆಧರಿಸಿರುತ್ತವೆಯೇ ಹೊರತು ಮಹಾರಾಜರ ದೃಷ್ಟಿಕೋನವನ್ನು ಆಧರಿಸಿರುವುದಿಲ್ಲ” ಎಂದು ಪ್ರಧಾನ ಮಂತ್ರಿ ಸೇವಾ ತೀರ್ಥದ ಸಭೆಯನ್ನುದ್ದೇಶಿಸಿ ಹೇಳಿದರು.

ಇದನ್ನೂ ಓದಿ: ಮಹಿಳೆಯರು, ರೈತರು, ಯುವಕರಿಗೆ ಗುಡ್ ನ್ಯೂಸ್; ಸೇವಾ ತೀರ್ಥ ಕಚೇರಿಯಲ್ಲಿ ಪ್ರಧಾನಿ ಮೋದಿ ಮೊದಲ ನಿರ್ಧಾರ

ಸೇವಾ ತೀರ್ಥವು ಪ್ರಧಾನ ಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಕ್ಯಾಬಿನೆಟ್ ಸಚಿವಾಲಯವನ್ನು ಹೊಂದಿದೆ. ಇವೆಲ್ಲವೂ ಈ ಮೊದಲು ವಿವಿಧ ಸ್ಥಳಗಳಲ್ಲಿ ನೆಲೆಗೊಂಡಿದ್ದವು. ಇದರಿಂದ ಇಲಾಖೆಗಳಲ್ಲಿ ಸಮನ್ವಯತೆಗೆ ಸವಾಲಾಗಿತ್ತು. ಕರ್ತವ್ಯ ಭವನ 1 ಮತ್ತು 2 ಕಟ್ಟಡ ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳನ್ನು ಒಳಗೊಂಡಿದೆ.

“ಸ್ವಾತಂತ್ರ್ಯದ ನಂತರ ಸೌತ್ ಬ್ಲಾಕ್ ಮತ್ತು ನಾರ್ತ್ ಬ್ಲಾಕ್‌ನಂತಹ ಕಟ್ಟಡಗಳು ದೇಶಕ್ಕೆ ಅನೇಕ ಪ್ರಮುಖ ನಿರ್ಧಾರಗಳು ಮತ್ತು ನೀತಿಗಳಿಗೆ ವೇಗವರ್ಧಕಗಳಾಗಿದ್ದವು. ಆದರೆ ಈ ಕಟ್ಟಡಗಳನ್ನು ಬ್ರಿಟಿಷ್ ಸಾಮ್ರಾಜ್ಯದ ಸಂಕೇತಗಳಾಗಿ ನಿರ್ಮಿಸಲಾಗಿದೆ ಎಂಬುದು ಸತ್ಯ. ಭಾರತವನ್ನು ಶತಮಾನಗಳ ಕಾಲ ಗುಲಾಮಗಿರಿಯ ಸಂಕೋಲೆಯಲ್ಲಿ ಬಂಧಿಸುವುದು ಅವರ ಉದ್ದೇಶವಾಗಿತ್ತು” ಎಂದು ಅವರು ಹೇಳಿದರು.

ಇದನ್ನೂ ಓದಿ: ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಪ್ರಧಾನಿ ಮೋದಿ

“ಈ 100 ವರ್ಷಗಳಷ್ಟು ಹಳೆಯದಾದ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಹೊಸದಾಗಿ ನಿರ್ಮಿಸಲಾದ ಸೇವಾ ತೀರ್ಥ ಮತ್ತು ಕರ್ತವ್ಯ ಭವನಗಳನ್ನು ಭಾರತದ ಜನರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸಲು ವಿನ್ಯಾಸಗೊಳಿಸಲಾಗಿದೆ ಎಂಬ ಅಂಶದ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದು ಹೇಳಿದರು. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ವಸಾಹತುಶಾಹಿ ಮನಸ್ಥಿತಿಯನ್ನು ತ್ಯಜಿಸುವುದು ಅತ್ಯಗತ್ಯ” ಎಂದು ಪ್ರಧಾನಿ ಒತ್ತಿ ಹೇಳಿದರು.

ಸ್ವತಂತ್ರ ಭಾರತದ ಪ್ರಮುಖ ರಸ್ತೆಗಳು ಮತ್ತು ಹೆಗ್ಗುರುತುಗಳು ದಶಕಗಳಿಂದ ವಸಾಹತುಶಾಹಿ ಯುಗದ ಹೆಸರುಗಳನ್ನು ಹೊಂದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು. “ಪ್ರಧಾನಿ ನಿವಾಸದ ಉದ್ದಕ್ಕೂ ಇರುವ ರಸ್ತೆಯನ್ನು ರೇಸ್ ಕೋರ್ಸ್ ರಸ್ತೆ ಎಂದು ಕರೆಯಲಾಗುತ್ತಿತ್ತು. ರಾಷ್ಟ್ರಪತಿ ಭವನಕ್ಕೆ ಹೋಗುವ ರಸ್ತೆಯನ್ನು ರಾಜಪಥ್ ಎಂದು ಕರೆಯಲಾಗುತ್ತಿತ್ತು. ಅದೆಲ್ಲವನ್ನೂ ಈಗ ಬದಲಾಯಿಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link