All posts by nagaraj11081993

IPL 2026: ಬೆಂಗಳೂರಿನಲ್ಲೇ ನಡೆಯಲಿವೆ ಆರ್​ಸಿಬಿ ಪಂದ್ಯಗಳು; ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ – Kannada News | Karnataka Govt Approves Chinnaswamy for RCB IPL 2026 Home Matches, Ends Dispute

2026 ರ ಐಪಿಎಲ್ ಮಾರ್ಚ್​ ಅಂತ್ಯದಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಇದುವರೆಗು ಖಚಿತವಾಗಿರಲಿಲ್ಲ. ಇದಕ್ಕೆ ಕಾರಣ ಆರ್​ಸಿಬಿ ಫ್ರಾಂಚೈಸಿ ಹಾಗೂ ರಾಜ್ಯ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ. ಇದೀಗ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಂಡಿರುವಂತೆ ಕಾಣುತ್ತಿದ್ದು, ಆರ್​ಸಿಬಿ ತಂಡ ತನ್ನ ತವರು ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಇಂದು ನಡೆದ ಸಚಿವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಸರ್ಕಾರದ ಈ ನಿರ್ಧಾರ ಆರ್​ಸಿಬಿ ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ಮಿಂದೇಳುವಂತೆ ಮಾಡಿದೆ.

Source link

‘ಟಾಕ್ಸಿಕ್’ಗಾಗಿ ಒಂದಾದ ‘ಕೆಜಿಎಫ್’ ಜೋಡಿ: ಉತ್ತರದ ಹಕ್ಕು ಭಾರಿ ಮೊತ್ತಕ್ಕೆ ಡೀಲ್ – Kannada News | Toxic movie North India distribution right sold to AA Films

ರಾಕಿಂಗ್ ಸ್ಟಾರ್ ಯಶ್ (Yash) ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಇದೀಗ ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ವಿತರಣೆ ಹಕ್ಕುಗಳ ಮಾರಾಟದಲ್ಲಿ ಸಿನಿಮಾದ ಸಹ ನಿರ್ಮಾಪಕ ಯಶ್ ಮತ್ತು ಮತ್ತೊಬ್ಬ ನಿರ್ಮಾಪಕ ಕೆವಿಎನ್ ಅವರು ತೊಡಗಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಆಂಧ್ರ ಮತ್ತು ತೆಲಂಗಾಣ ವಿತರಣೆ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ ಆಗಿದೆ. ಇದೀಗ ಬಹು ಮುಖ್ಯವಾದ ಉತ್ತರ ಭಾರತದ ಹಕ್ಕು ಮಾರಾಟ ಪ್ರಕ್ರಿಯೆ ನಡೆದಿದ್ದು, ಯಶ್ ತಮ್ಮ ಹಳೆಯ ಗೆಳೆಯರೊಟ್ಟಿಗೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ.

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾವನ್ನು ಉತ್ತರ ಭಾರತದಲ್ಲಿ ಅನಿಲ್ ತಡಾನಿ ಅವರ ‘ಎಎ ಫಿಲ್ಮ್ಸ್’ ಯಶಸ್ವಿಯಾಗಿ ವಿತರಣೆ ಮಾಡಿತ್ತು. ‘ಕೆಜಿಎಫ್’ ಸಿನಿಮಾ ಸರಣಿಯ ಯಶಸ್ವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು. ಇದೇ ಕಾರಣಕ್ಕೆ ಇದೀಗ ‘ಟಾಕ್ಸಿಕ್’ ಸಿನಿಮಾವನ್ನು ಸಹ ಎಎ ಫಿಲಮ್ಸ್ ಅವರಿಗೇ ನೀಡಿದ್ದಾರೆ ಯಶ್.

ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರಗಳನ್ನು ಉತ್ತರ ಭಾರತ ಮತ್ತು ನೇಪಾಳದ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ಅನಿಲ್ ತಡಾನಿ ಅವರದ್ದು. ಈಗ ‘ಟಾಕ್ಸಿಕ್’ ಚಿತ್ರದ ವಿತರಣೆಯನ್ನು ಸಹ ಅವರೇ ವಹಿಸಿಕೊಂಡಿರುವುದರಿಂದ, ಉತ್ತರ ಭಾರತದಲ್ಲಿ ಈ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ. ಈ ಮೂಲಕ ಯಶ್ ಮತ್ತು ಅನಿಲ್ ತಡಾನಿ ಜೋಡಿ ಹ್ಯಾಟ್ರಿಕ್ ಯಶಸ್ಸಿನ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ:ಯಶ್, ರಣ್​​ಬೀರ್ ನಟನೆಯ ‘ರಾಮಾಯಣ’ಕ್ಕೆ ಯುವ ಸ್ಟಾರ್ ಎಂಟ್ರಿ

ಉತ್ತರ ಭಾರತ ಮತ್ತು ನೇಪಾಳದಲ್ಲಿ ‘ಟಾಕ್ಸಿಕ್’ ಸಿನಿಮಾವನ್ನು ಎಎ ಫಿಲ್ಮ್ಸ್ ನ ಅನಿಲ್ ತಡಾನಿ ಮಾಡಲಿದ್ದಾರೆ. ತೆಲುಗು ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಲ್ಲಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ನ ದಿಲ್ ರಾಜು ವಿತರಣೆ ಮಾಡಲಿದ್ದಾರೆ. ಇನ್ನು ವಿದೇಶದ ವಿತರಣೆ ಹಕ್ಕನ್ನು ಫಾರ್ಸ್ ಫಿಲ್ಮ್ಸ್ ಗೆ ಮಾರಾಟ ಮಾಡಲಾಗಿದೆ. ಮೂರು ಕಡೆಯು ದಾಖಲೆಯ ಮೊತ್ತಕ್ಕೆ ಸಿನಿಮಾದ ವಿತರಣೆ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ ಎನ್ನಲಾಗುತ್ತಿದೆ.

‘ಟಾಕ್ಸಿಕ್’ ಸಿನಿಮಾವು ಮಾರ್ಚ್ 19 ರಂದು ಬಿಡುಗಡೆ ಆಗಲಿದೆ. ಅದೇ ದಿನ ‘ಧುರಂಧರ್ 2’ ಸಿನಿಮಾ ಸಹ ಬಿಡುಗಡೆ ಆಗಲಿದೆ. ಹಾಗಿದ್ದರೂ ಸಹ ಉತ್ತರ ಭಾರತದ ವಿತರಣೆ ಹಕ್ಕುಗಳು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವುದು ವಿತರಕರಿಗೆ ‘ಟಾಕ್ಸಿಕ್’ ಮೇಲಿರುವ ನಂಬಿಕೆಯನ್ನು ತೋರಿಸುತ್ತಿದೆ. ಗೀತು ಮೋಹನ್​ದಾಸ್ ನಿರ್ದೇಶನ ಮಾಡಿರುವ ಯಶ್ ಜೊತೆಗೆ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಕನ್ನಡಿಗರಿಗೆ ಪ್ರಿಯರಾದ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಳ್ಳುತ್ತಿರುವ ಈ ಸಿನಿಮಾ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ತೆರೆಕಾಣಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:53 pm, Thu, 12 February 26

Source link

ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು: ಎಕ್ಸ್ ಕ್ಲೂಸಿವ್​ ದೃಶ್ಯ

ಬೆಂಗಳೂರು, ಫೆಬ್ರವರಿ 12: ಬಿಕ್ಲು ಶಿವ ಮರ್ಡರ್‌ ಕೇಸ್‌ನ ಬಲೆಯಲ್ಲಿ ಸಿಲುಕಿದ್ದ ಶಾಸಕ ಭೈರತಿ ಬಸವರಾಜ್ ಲಾಕ್ ಆಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ನಿರಾಕರಣೆಯಾಗ್ತಿದ್ದಂತೆ ಬೇರೆ ದಾರಿಯಿಲ್ಲದೇ ಶರಣಾಗಲು ಬರ್ತಿದ್ದ ಬಿಜೆಪಿ ಶಾಸಕನನ್ನ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯ ದೇವನಹಳ್ಳಿ ಪೊಲೀಸರು ಭೈರತಿ ಬಸವರಾಜ್​ರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಬಂದಿದ್ದು, ಅರೆಸ್ಟ್​ ಪ್ರಕ್ರಿಯೆಗಳು ನಡೆದಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಕ್ಕಳು ಮೊಬೈಲ್, ಟಿವಿ ಮುಂದೆ ಕುಳಿತುಕೊಳ್ಳುವುದನ್ನು ತಡೆಯಲು ಈ ರೀತಿ ಮಾಡಿ – Kannada News | Phone Addiction: How Screen Time Affects Development

ಮಕ್ಕಳಿಗೆ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮೊಬೈಲ್ (Phone Addiction) ಕೊಡುವುದರಿಂದ ಅವರ ಮಾನಸಿಕ ಹಾಗೂ ಶಾರೀರಿಕ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಅದರಲ್ಲಿಯೂ ಕೆಲ ಮಕ್ಕಳು ಈ ಮೊಬೈಲ್‌ಗಳಿಗೆ ಎಷ್ಟು ಅಡಿಕ್ಟ್ ಆಗಿಬಿಬಿಟ್ಟಿದ್ದಾರೆ ಎಂದರೆ ತಾಯಿ, ತಂದೆಗೂ ಸಮಯ ಕೊಡುತ್ತಿಲ್ಲ. ಮೊಬೈಲ್ ಕಸಿದರೆ ಕೋಪ, ಅಸಹನೆ ಹಾಗೂ ಮಾನಸಿಕ ಒತ್ತಡ ತೋರಿಸುತ್ತಿದ್ದಾರೆ. ಈ ಮೊಬೈಲ್ ಫೋನ್ ಮತ್ತು ಟಿವಿ ಮಕ್ಕಳಿಂದ ಬಾಲ್ಯವನ್ನೇ ಕಸಿದುಕೊಳ್ಳುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಈಗಿನ ಮಕ್ಕಳು ಹೊರಗೆ ಆಟವಾಡುವ ಬದಲು, ಟಿವಿ ನೋಡುತ್ತಾ, ಫೋನ್‌ ಬಳಸುತ್ತಾ ಸಮಯ ಕಳೆಯುತ್ತಾರೆ. ಇದು ಅವರ ಮಾನಸಿಕ (Mental Health) ಮತ್ತು ದೈಹಿಕ ಬೆಳವಣಿಗೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಹಾಗಾದರೆ ಈ ಸಮಸ್ಯೆಯನ್ನು ತಡೆಯುವುದು ಹೇಗೆ, ಈ ಬಗ್ಗೆ ವೈದ್ಯರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನ್ಯೂರೋ ಕೇರ್ ಸೆಂಟರ್‌ನ ಡಾ. ಜೋಲಿ ಜೈನ್ ಗುಪ್ತಾ ಹೇಳುವ ಪ್ರಕಾರ, ಸಾಮಾನ್ಯವಾಗಿ ಈಗಿನ ತಾಯಿ, ತಂದೆ ಮಕ್ಕಳಿಗೆ ಸಾಕಷ್ಟು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಮಕ್ಕಳನ್ನು ಶಾಂತವಾಗಿರಿಸಲು ಮೊಬೈಲ್ ಅಥವಾ ಟಿವಿ ಮುಂದೆ ಕೂರಿಸುತ್ತಾರೆ. ಇದರಿಂದ ಮಕ್ಕಳ ಮಾನಸಿಕ ಸಮತೋಲನ ಹದಗೆಡುತ್ತದೆ. ಅಷ್ಟು ಮಾತ್ರವಲ್ಲ, ಸಾಮಾಜಿಕ ಮತ್ತು ದೈಹಿಕ ಬೆಳವಣಿಗೆ ಕೂಡ ಕುಂಠಿತವಾಗಬಹುದು. ಆಟ, ಕ್ರೀಡೆಗಳಂತಹ ಸ್ವಾಭಾವಿಕ ಚಟುವಟಿಕೆ ಕೂಡ ಕಡಿಮೆಯಾಗುತ್ತಿವೆ. ಹಾಗಾಗಿ ಮಕ್ಕಳ ಜೊತೆಗೆ ಪೋಷಕರಾದವರು ತಮಗೆ ತಾವೇ ಕಟ್ಟುನಿಟ್ಟಿನ ಬೆಲಿ ಹಾಕಿಕೊಂಡು ಕೆಲವು ಸಲಹೆಗಳನ್ನು ಪಾಲಿಸುವುದು ಉತ್ತಮ.

ಇದನ್ನೂ ಓದಿ: 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮಾನಸಿಕ ಕಾಯಿಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು?

ಮಕ್ಕಳಿಗೆ ಕಟ್ಟುನಿಟ್ಟಿನ ಸಲಹೆ:

2 ವರ್ಷದವರೆಗಿನ ಮಕ್ಕಳನ್ನು ಪೂರ್ಣವಾಗಿ ಮೊಬೈಲ್‌ನಿಂದ ದೂರವಿಡಬೇಕು. ವೀಡಿಯೋ ಕಾಲ್ ಕೂಡ ಮಾಡಿಸಬಾರದು. ಈ ವಯಸ್ಸಿನಲ್ಲಿ ಸ್ಕ್ರೀನ್ ಬಳಕೆ ಮೆದುಳಿನ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. 2 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಸ್ಕ್ರೀನ್ ಟೈಮ್ ಬಹಳ ಕಡಿಮೆ ಇರಬೇಕು. ಓದಿಗಾಗಿ ಬಳಸಿದರೂ ದಿನಕ್ಕೆ 15 ನಿಮಿಷಕ್ಕಿಂತ ಹೆಚ್ಚು ಕೊಡಬಾರದು. ಗೇಮ್‌, ವೀಡಿಯೊ ಮತ್ತು ರೀಲ್ಸ್‌ಗಳಿಂದ ದೂರವಿಡಬೇಕು. ಇದೆಲ್ಲದರ ಜೊತೆಗೆ ಮೊಬೈಲ್ ಬಳಸುವ ಸಮಯವನ್ನು ನಿಗದಿಪಡಿಸಬೇಕು.

ತಾಯಿ, ತಂದೆ ಈ ಸಲಹೆಗಳನ್ನು ಪಾಲಿಸಬೇಕು:

  • ಪ್ರತಿದಿನ ಆದಷ್ಟು ಮಕ್ಕಳೊಂದಿಗೆ ಸಮಯ ಕಳೆಯಿರಿ.
  • ಹೊರಾಂಗಣ ಆಟಗಳನ್ನು ಆಡುವುದಕ್ಕೆ ಪ್ರೋತ್ಸಾಹ ನೀಡಿ.
  • ಮನೆಯಲ್ಲಿ “ನೋ- ಫೋನ್ ಟೈಮ್” ನಿಗದಿಪಡಿಸಿ.
  • ನೀವು ಸಹ ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಶಾ ಫೌಂಡೇಷನ್​​ನಲ್ಲಿ ಸದ್ಗುರು ಜೊತೆ ಶಿವರಾತ್ರಿ ಆಚರಿಸಲಿದ್ದಾರೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ – Kannada News | Mahashivratri 2026 Defence Minister Rajnath Singh to be Chief guest at Sadhgurus Isha Foundation grand event

ಕೊಯಮತ್ತೂರು, ಫೆಬ್ರವರಿ 12: ಈ ವರ್ಷ ಫೆಬ್ರವರಿ 15ರಂದು ಮಹಾ ಶಿವರಾತ್ರಿ (Maha Shivaratri 2026) ನಡೆಯಲಿದೆ. ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ನಡೆಯುವ ಈ ಬಾರಿಯ ಉತ್ಸವದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂಸದೀಯ ವ್ಯವಹಾರಗಳ ಸಚಿವ ಎಲ್. ಮುರುಗನ್ ಮತ್ತು ಇತರ ಗಣ್ಯರು ಕೂಡ ಪಾಲ್ಗೊಳ್ಳಲಿದ್ದಾರೆ. ಮಹಾ ಶಿವರಾತ್ರಿ ಉತ್ಸವವು ಫೆ. 15ರಂದು ಸಂಜೆ 6 ಗಂಟೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದೆ. ಈ ವೇಳೆ ಧ್ಯಾನ, ಮಂತ್ರ ಪಠಣ, ಯೋಗೇಶ್ವರಲಿಂಗ ಮಹಾ ಅಭಿಷೇಕ ಮತ್ತು ಅತ್ಯುತ್ತಮ ಕಲಾವಿದರಿಂದ ಸಂಗೀತ ಪ್ರದರ್ಶನಗಳು ನಡೆಯಲಿವೆ.

ಈ ಮಹಾ ಶಿವರಾತ್ರಿ ಉತ್ಸವದ ಕುರಿತು ಇಂದು ಕೊಯಮತ್ತೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ದಕ್ಷಿಣ ಕೈಲಾಯ ಭಕ್ತಿ ಪೆರವೈ ಸ್ವಯಂಸೇವಕ ರವೀಂದ್ರನ್ ಮತ್ತು ಸ್ವಯಂಸೇವಕ ಸರವಣನ್ ಭಾಗವಹಿಸಿ ಮಾತನಾಡಿದರು. “32ನೇ ಮಹಾ ಶಿವರಾತ್ರಿ ಹಬ್ಬವನ್ನು ಫೆ. 15ರಂದು ಇಶಾ ಯೋಗ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಕ್ಷಾಂತರ ಜನರು ಸಹ ಇದರಲ್ಲಿ ಭಾಗವಹಿಸಲಿದ್ದಾರೆ” ಎಂದು ಅವರು ಹೇಳಿದರು.


ಇದನ್ನೂ ಓದಿ: Maha Shivratri: ಇಶಾ ಫೌಂಡೇಶನ್‌ನಲ್ಲಿ ಸದ್ಗುರು ಜೊತೆ ಶಿವರಾತ್ರಿಯಲ್ಲಿ ಅಮಿತ್ ಶಾ ಭಾಗಿ

“ಇದಲ್ಲದೆ, ಈ ವರ್ಷ ಮೊದಲ ಬಾರಿಗೆ, ಸದ್ಗುರು ಆದಿಯೋಗಿ ಈ ಹಿಂದೆ ಸ್ಥಾಪಿಸಲಾದ ಯೋಗೇಶ್ವರ ಲಿಂಗಕ್ಕೆ ಮಹಾ ಅಭಿಷೇಕದ ಆಧ್ಯಾತ್ಮಿಕ ಕಾರ್ಯವನ್ನು ಮಾಡಲಿದ್ದಾರೆ” ಎಂದು ಅವರು ತಿಳಿಸಿದರು.

ಇಶಾದಲ್ಲಿ ನಡೆಯುವ ಮಹಾ ಶಿವರಾತ್ರಿ ಉತ್ಸವವನ್ನು ತಮಿಳುನಾಡಿನ 60 ಸ್ಥಳಗಳು ಮತ್ತು ಕೇರಳದ 29 ದೇವಾಲಯಗಳು ಸೇರಿದಂತೆ ಭಾರತದಾದ್ಯಂತ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಹಾಗೇ, ಇಶಾ ಫೌಂಡೇಷನ್​ನ ಯೂಟ್ಯೂಬ್ ಚಾನೆಲ್​ನಲ್ಲಿ ಕೂಡ ಇದರ ನೇರ ಪ್ರಸಾರ ಇರಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಊಟಕ್ಕೆ ಬಂದವರನ್ನು ಜೈಲಿಗೆ ಕಳಿಸುವ ಟಾಲಿವುಡ್ ನಟ ಧರ್ಮ ಮಹೇಶ್: ಏನಿದು ಕಥೆ? – Kannada News | Telugu actor Dharma Mahesh introduces Jismat Jail Mandi in Bengaluru

ತೆಲುಗು ಚಿತ್ರರಂಗದ ನಟ ಧರ್ಮ ಮಹೇಶ್ (Dharma Mahesh) ಅವರು ‘ಸಿಂಧೂರಂ’, ‘ಡ್ರಿಂಕರ್ ಸಾಯಿ’ ಮುಂತಾದ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಿನಿಮಾದ ಜೊತೆಗೆ ಉದ್ಯಮದಲ್ಲೂ ಅವರು ಆಸಕ್ತಿ ಹೊಂದಿದ್ದಾರೆ. ‘ಜಿಸ್ಮತ್’ ಹೆಸರಿನ ರೆಸ್ಟೋರೆಂಟ್ (Restaurant) ನಡೆಸುವ ಅವರು ಹೊಸ ರೀತಿಯ ಪ್ರಯೋಗದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಬೆಂಗಳೂರಿನಲ್ಲಿ ಕೂಡ ಧರ್ಮ ಮಹೇಶ್ ಒಡೆತನದ ‘ಜಿಸ್ಮತ್ ಜೈಲ್ ಮಂಡಿ’ (Jismat Jail Mandi) ರೆಸ್ಟೋರೆಂಟ್ ಇದೆ. ಇಲ್ಲಿಗೆ ಬಂದವರು ಜೈಲಿಗೆ ಹೋಗುವುದು ಗ್ಯಾರಂಟಿ!

ಅಸಲಿ ವಿಷಯ ಏನೆಂದರೆ, ಧರ್ಮ ಮಹೇಶ್ ಅವರು ನಡೆಸುತ್ತಿರುವ ಈ ರೆಸ್ಟೋರೆಂಟ್ ಥೀಮ್ ಈ ರೀತಿ ಆಗಿದೆ. ಸಂಪೂರ್ಣ ಜೈಲಿನ ರೀತಿಯಲ್ಲಿ ಈ ರೆಸ್ಟೋರೆಂಟ್ ವಿನ್ಯಾಸಗೊಂಡಿದೆ. ಇಲ್ಲಿಗೆ ಊಟಕ್ಕೆ ಬಂದವರನ್ನು ಜೈಲಿನ ಸೆಲ್​​ನಲ್ಲಿ ಕೂರಿಸಿ ಬಗೆಬಗೆಯ ನಾನ್-ವೆಜ್ ಊಟ ಬಡಿಸಲಾಗುತ್ತದೆ. ರೆಸ್ಟೋರೆಂಟ್ ಸಿಬ್ಬಂದಿ ಕೂಡ ಕೈದಿಗಳ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿರುತ್ತಾರೆ!

ಇಂಥ ವಿಭಿನ್ನ ಥೀಮ್ ಪರಿಚಯಿಸಿದ ಕಾರಣಕ್ಕೆ ನಟ ಧರ್ಮ ಮಹೇಶ್ ಅವರ ‘ಜಿಸ್ಮತ್ ಜೈಲ್ ಮಂಡಿ’ ಬೆಂಗಳೂರಿಗರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ‘ಜಿಸ್ಮತ್ ಜೈಲ್ ಮಂಡಿ’ ಹೊಸ ಖಾತೆ ಇತ್ತೀಚೆಗೆ ಆರಂಭ ಆಯಿತು. ಈ ಸಂಭ್ರಮದಲ್ಲಿ ಧರ್ಮ ಮಹೇಶ್ ಭಾಗಿ ಆಗಿದ್ದರು.

ಈ ಮೊದಲು ಗುಂಟೂರು ಮತ್ತು ಹೈದರಾಬಾದ್​​ನಲ್ಲಿ ಮಾತ್ರ ‘ಜಿಸ್ಮತ್ ಜೈಲ್ ಮಂಡಿ’ ಇತ್ತು. ಆಂಧ್ರ ಪ್ರದೇಶ ಮತ್ತು ತೆಲಂಗಾಣ ಮಾತ್ರವಲ್ಲದೇ ಬೇರೆ ರಾಜ್ಯಗಳ ಜನರಿಗೆ ಜೈಲೂಟದ ರುಚಿ ತೋರಿಸುವ ಸಲುವಾಗಿ ಧರ್ಮ ಮಹೇಶ್ ಅವರು ಬೇರೆ ಬೇರೆ ನಗರಗಳಲ್ಲಿ ಖಾತೆ ಆರಂಭಿಸುತ್ತಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಬೆಂಗಳೂರಿನಲ್ಲಿ ಶುರು ಮಾಡಿದ್ದಾರೆ.

ಇದನ್ನೂ ಓದಿ: ಈ ರೆಸ್ಟೋರೆಂಟ್​​ಗೆ ಹೋದರೆ ನಿಮ್ಮ ಮೊಬೈಲ್ ಬುಟ್ಟಿಗೆ ಹಾಕಬೇಕು!

ಧರ್ಮ ಮಹೇಶ್ ಅವರಿಗೆ ಬೆಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ನನ್ನ ಹೃದಯದಲ್ಲಿ ಈ ಊರಿಗೆ ವಿಶೇಷ ಸ್ಥಾನ ಇದೆ. 8ನೇ ತರಗತಿಯಲ್ಲಿ ಓದುತ್ತಿದ್ದಾಗ ನಾನು ನೋಡಿದ ಮೊದಲ ಮೆಟ್ರೋಪಾಲಿಟನ್ ಸಿಟಿ ಎಂದರೆ ಅದು ಬೆಂಗಳೂರು. ಆ ನೆನಪು ನನ್ನ ಮನಸ್ಸಿನಲ್ಲಿ ಹಸಿರಾಗಿದೆ’ ಎಂದು ಧರ್ಮ ಮಹೇಶ್ ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IND vs NAM: 6,6,6,6,6.. 24 ಎಸೆತಗಳಲ್ಲಿ 61 ಚಚ್ಚಿದ ಇಶಾನ್ ಕಿಶನ್

Source link

Valentine Day 2026: ಪ್ರೇಮಿಗಳ ದಿನದಂದು ಯಾವ ಬಣ್ಣದ ಬಟ್ಟೆಯನ್ನು ಧರಿಸಿದರೆ ಸೂಕ್ತ? – Kannada News | Valentine Day 2026: What does the color of clothes worn on Valentine’s Day signify?

ಪ್ರತಿವರ್ಷ ಫೆಬ್ರವರಿ 14 ರಂದು ವ್ಯಾಲೆಂಟೈನ್‌ ಡೇ (Valentine Day) ಆಚರಿಸಲಾಗುತ್ತದೆ. ಈ ದಿನ ಪ್ರೇಮಿಗಳ ಪಾಲಿಗೆ ತುಂಬಾನೇ ಸ್ಪೆಷಲ್.‌ ಹೌದು ಈ ದಿನ ಪ್ರೇಮಪಕ್ಷಿಗಳು ತಮ್ಮ ಮುದ್ದಿನ ಸಂಗಾತಿಗೆ ಐ ಲವ್‌ ಯೂ ಹೇಳಿ, ಒಂದು ಗಿಫ್ಟ್‌ ಕೊಟ್ಟು ವಿಶೇಷ ಭಾವನೆ ಮೂಡಿಸುತ್ತಾರೆ. ಇನ್ನೂ ಕೆಲವರು ಕೆಂಪು ಬಣ್ಣದ ಬಟ್ಟೆಯನ್ನು ತೊಟ್ಟು ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸುತ್ತಾರೆ. ಪ್ರೇಮಿಗಳ ದಿನದಂದು ಕೆಂಪು ಬಣ್ಣವೇ ಧರಿಸಬೇಕೆಂದಿಲ್ಲ, ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಈ ಕೆಲವು ಬಣ್ಣದ ಬಟ್ಟೆಗಳನ್ನೂ ಧರಿಸಬಹುದು. ಈ ಬಣ್ಣದ ಬಟ್ಟೆಗಳು ಒಂದೊಂದು ಅರ್ಥವನ್ನು ಹೊಂದಿದ್ದು, ಪ್ರೇಮಿಗಳ ದಿನದಂದು ಧರಿಸುವ ಯಾವ ಬಣ್ಣದ ಬಟ್ಟೆ ಯಾವ ಅರ್ಥವನ್ನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಪ್ರೇಮಿಗಳ ದಿನದಂದು ಯಾವ ಬಣ್ಣದ ಬಟ್ಟೆ ಧರಿಸಬೇಕು?

 ಕೆಂಪು – ಪ್ರೀತಿ ಮತ್ತು ಉತ್ಸಾಹ: ಈ ಬಣ್ಣವು ಪ್ರೀತಿ, ಉತ್ಸಾಹದ ಭಾವನೆಯನ್ನು ಸಂಕೇತಿಸುತ್ತದೆ. ಆದ್ದರಿಂದ, ಈ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಯನ್ನು ನೀವು ಎಷ್ಟು ಪ್ರೀತಿಸುತ್ತೀರಿ ಎಂದು ತೋರಿಸಲು ಬಯಸಿದರೆ, ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದು ಉತ್ತಮ ಆಯ್ಕೆಯಾಗಿದೆ. ಒಟ್ಟಾರೆಯಾಗಿ ಕೆಂಪು ಪರಸ್ಪರ ಪ್ರೀತಿಯ ಸಂಕೇತವಾಗಿದೆ.

ಗುಲಾಬಿ – ಸಿಹಿ ಮತ್ತು ಮಾಧುರ್ಯ: ಗುಲಾಬಿ ಬಣ್ಣವನ್ನು ಮೃದುತ್ವ, ಮಾಧುರ್ಯ ಮತ್ತು  ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ತಮ್ಮ ಪ್ರೀತಿ ಸೂಕ್ಷ್ಮ, ಸಿಹಿ ಮತ್ತು ನಿಜವಾದದ್ದು ಎಂದು ತಮ್ಮ ಸಂಗಾತಿಗೆ ತಿಳಿಸಲು ಬಯಸುವವರಿಗೆ  ಪ್ರೇಮಿಗಳ ದಿನದಂದು ಈ ಬಣ್ಣದ ಬಟ್ಟೆ ಧರಿಸುವುದು ಸೂಕ್ತವಾಗಿದೆ.

ಬಿಳಿ – ಶುದ್ಧತೆ ಮತ್ತು ಪ್ರಾಮಾಣಿಕತೆ: ಬಿಳಿ ಬಣ್ಣವು ಶುದ್ಧತೆ, ಪ್ರಾಮಾಣಿಕತೆ ಮತ್ತು ಹೊಸ ಆರಂಭಗಳನ್ನು ಸಂಕೇತಿಸುತ್ತದೆ. ನಿಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಅಥವಾ ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯನ್ನು ಪ್ರಾರಂಭಿಸಲು ನೀವು ಬಯಸಿದರೆ, ಬಿಳಿ ಬಣ್ಣದ ಬಟ್ಟೆಯನ್ನು ಪ್ರೇಮಿಗಳ ದಿನದಂದು  ಧರಿಸುವುದು ಉತ್ತಮ ಆಯ್ಕೆಯಾಗಿದೆ. ಈ ಬಣ್ಣವು ನಿಮ್ಮ ಪ್ರೀತಿಯ ಶುದ್ಧತೆ ಮತ್ತು ನಿಮ್ಮ ಜೀವನದ ಶಾಂತಿ ಮತ್ತು ನೆಮ್ಮದಿ, ಬದ್ಧತೆಯನ್ನು ಸಹ ಪ್ರತಿನಿಧಿಸುತ್ತದೆ.

ನೇರಳೆ – ಆಕರ್ಷಕ: ನೇರಳೆ ಬಣ್ಣವು ಐಷಾರಾಮಿ ಮತ್ತು ಆಕರ್ಷಣೆಯನ್ನು ಸಂಕೇತಿಸುತ್ತದೆ. ಈ ಬಣ್ಣವು ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡಿಯಾಗಿದ್ದು, ತಮ್ಮ ಪ್ರೀತಿ ಅಮೂಲ್ಯ ಮತ್ತು ವಿಶೇಷ ಎಂದು ತಮ್ಮ ಸಂಗಾತಿಗೆ ತಿಳಿಸಲು ಬಯಸುವವರಿಗೆ ಈ ಬಣ್ಣದ ಬಟ್ಟೆ ಧರಿಸುವುದು ಸೂಕ್ತವಾಗಿದೆ.

ಇದನ್ನೂ ಓದಿ: ಚುಂಬನದಲ್ಲಿ ಎಷ್ಟು ಪ್ರಕಾರಗಳಿವೆ, ಅವುಗಳ ಅರ್ಥವೇನು ಗೊತ್ತಾ?

ನೀಲಿ – ಶಾಂತಿ ಮತ್ತು ವಿಶ್ವಾಸ:ನೀಲಿ ಬಣ್ಣವು ಶಾಂತಿ, ವಿಶ್ವಾಸ ಮತ್ತು ಸ್ಥಿರತೆಯನ್ನು ಸಂಕೇತಿಸುತ್ತದೆ. ನಿಮ್ಮ ಸಂಗಾತಿಯನ್ನು ನೀವು ಸಂಪೂರ್ಣವಾಗಿ ನಂಬುತ್ತೀರಿ, ನಿಮ್ಮ ಸಂಬಂಧವು ಬಲವಾಗಿದೆ ಮತ್ತು ನಿಮ್ಮ ಸಂಬಂಧದಲ್ಲಿ ಸ್ಥಿರತೆಯನ್ನು ನಿರೀಕ್ಷಿಸುತ್ತೀರಿ ಎಂದು ಅವರಿಗೆ ತಿಳಿಸಲು ಬಯಸಿದರೆ, ನೀವು ನೀಲಿ ಬಣ್ಣದ ಬಟ್ಟೆಯನ್ನು ಧರಿಸಬಹುದು

ಹಳದಿ – ಸಂತೋಷ ಮತ್ತು ಸ್ನೇಹ: ಹಳದಿ ಬಣ್ಣವನ್ನು ಅದೃಷ್ಟದ ಬಣ್ಣವೆಂದು ಪರಿಗಣಿಸಲಾಗುತ್ತದೆ, ಇದು ಉತ್ಸಾಹ ಮತ್ತು ಸ್ನೇಹವನ್ನು ಸಂಕೇತಿಸುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಸದಾ  ಸಂತೋಷದಿಂದ ಇರಲು ಬಯಸಿದರೆ, ನೀವು ಹಳದಿ ಬಣ್ಣದ ಬಟ್ಟೆಯನ್ನು ಧರಿಸಬಹುದು. ಈ ಬಣ್ಣವು ನಿಮ್ಮ ಪ್ರೀತಿಯನ್ನು ಇನ್ನಷ್ಟು ರೋಮಾಂಚಕವಾಗಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲು ಮನವಿ – Kannada News | Request to organize Karnataka Rathna award giving ceremony for Vishnuvardhan

ಕನ್ನಡ ಚಿತ್ರರಂಗದ (Sandalwood) ಖ್ಯಾತ ನಟ, ದಿವಂಗತ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ಸರ್ಕಾರವು 2025 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ವಿಷ್ಣುವರ್ಧನ್ ಮತ್ತು ಬಿ ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು. ಇದೀಗ ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮತ್ತು ಇತರೆ ಸದಸ್ಯರು ಫಿಲಂ ಚೇಂಬರ್​​ನ ನೂತನ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿಯಾಗಿ ಫಿಲಂ ಚೇಂಬರ್ ವತಿಯಿಂದ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಬೇಕೆಂದು ಒತ್ತಾಯಿಸಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಉತ್ತರ ಸುಡಾನ್‌ನ ನೈಲ್ ನದಿಯಲ್ಲಿ ಹಡಗು ಮುಳುಗಿ 21 ಜನ ಸಾವು – Kannada News | Nile River boat capsize claims at least 21 lives in northern Sudan

ನವದೆಹಲಿ, ಫೆಬ್ರವರಿ 12: ಉತ್ತರ ಸುಡಾನ್‌ನ ನೈಲ್ ನದಿಯಲ್ಲಿ ಪ್ರಯಾಣಿಕರ ಹಡಗು ಮುಳುಗಿದ ನಂತರ 21 ಜನರು ಸಾವನ್ನಪ್ಪಿದ್ದಾರೆ. ಈ ಹಡಗು ತೈಬಾ ಅಲ್-ಖವಾದ್ ಮತ್ತು ಡೀಮ್ ಅಲ್-ಖರೈ ಗ್ರಾಮಗಳ ನಡುವೆ ಪ್ರಯಾಣಿಸುತ್ತಿತ್ತು. ಈ ಹಡಗು (Boat) ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಸೇರಿದಂತೆ ಸುಮಾರು 30 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. “ಇನ್ನೂ ಹೆಚ್ಚಿನ ಶವಗಳು ಇರಬಹುದು ಎಂಬ ಕಾರಣದಿಂದ ರಕ್ಷಣಾ ತಂಡಗಳು ತಮ್ಮ ಕೆಲಸವನ್ನು ಮುಂದುವರಿಸುತ್ತಿವೆ.

ನೈಲ್ ನದಿಯ ರಾಜ್ಯದ ಅಧಿಕಾರಿಗಳು ಇಂದು 21 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಬುಧವಾರ ಸಂಜೆ ಶೆಂಡಿ ಪ್ರದೇಶದಲ್ಲಿ ಹೆಚ್ಚಿನ ಅಲೆಗಳ ಕಾರಣದಿಂದಾಗಿ ಹಡಗು ಮಗುಚಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕ: ಪೊಲೀಸ್ ಅಧಿಕಾರಿ ಕಾರು ಗುದ್ದಿ ಭಾರತೀಯ ವಿದ್ಯಾರ್ಥಿನಿ ಸಾವು, ಕುಟುಂಬಕ್ಕೆ 260 ಕೋಟಿ ರೂ. ಪರಿಹಾರ

ನೈಲ್ ನದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಹಡಗುಗಳು ಖಾಸಗಿ ಒಡೆತನದ್ದಾಗಿದ್ದು, ಅಧಿಕಾರಿಗಳಿಗೆ ಸರಿಯಾದ ನಿಯಂತ್ರಕ ವ್ಯವಸ್ಥೆಗಳು ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿದೆ ಎನ್ನಲಾಗಿದೆ. ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಲಿಲ್ಲ. ಸುಡಾನ್‌ನಲ್ಲಿ ಸೇತುವೆಗಳು ವಿರಳವಾಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ನೈಲ್ ನದಿಯನ್ನು ದಾಟಲು ಬಳಸಲಾಗುವ ಸಾಂಪ್ರದಾಯಿಕ ಹಡಗುಗಳನ್ನು ಒಳಗೊಂಡ ಅಪಘಾತಗಳು ಹೆಚ್ಚಾಗಿ ಕಂಡುಬರುತ್ತವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link