Headlines

nagaraj11081993

ಪ್ರಯಾಣಿಕರೇ ಗಮನಿಸಿ: ಫೆಬ್ರವರಿ 16ರಂದು ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ; ಇಲ್ಲಿದೆ ಮಾಹಿತಿ – Kannada News | Karnataka Train Alert: Mysuru–Arsikere Services Cancelled; Several Trains Delayed and Rescheduled on February 16

ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಮೈಸೂರು, ಫೆಬ್ರವರಿ 12: ಹಬ್ಬನಘಟ್ಟ- ಅರಸೀಕೆರೆ ನಿಲ್ದಾಣಗಳ ಮಧ್ಯೆ ವಿಶ್ವೇಶ್ವರಯ್ಯ ಜಲ ನಿಗಮ್ ಲಿಮಿಟೆಡ್ (VJNL) ವತಿಯಿಂದ ಕಾಲುವೆ ಕ್ರಾಸಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 16ರ ಸೋಮವಾರದಂದು ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಲವು ರೈಲುಗಳು ರದ್ದಾಗಲಿದ್ದರೆ, ಕೆಲವು ಭಾಗಶಃ ಕ್ಯಾನ್ಸಲ್​​ ಆಗಲಿವೆ. ಇನ್ನು ಕೆಲ ರೈಲುಗಳ ಸಂಚಾರ ಸಮಯ ಮರು ನಿಗದಿಗೊಳ್ಳಲಿದ್ದರೆ, ಮತ್ತೆ ಕೆಲವು ಟ್ರೇನ್​​ಗಳನ್ನು ನಿಯಂತ್ರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಸಂಚಾರ ರದ್ದುಗೊಂಡ ರೈಲುಗಳು ರೈಲು…

Read More

Kiss Day 2026: ಚುಂಬನದಲ್ಲಿ ಎಷ್ಟು ಪ್ರಕಾರಗಳಿವೆ, ಅವುಗಳ ಅರ್ಥವೇನು ಗೊತ್ತಾ? – Kannada News | Kiss Day 2026: Every kiss has a meaning; here’s what it means

ಸಂಬಂಧವನ್ನು ಬಲಪಡಿಸಲು, ಪರಸ್ಪರ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸಲು ವ್ಯಾಲೆಂಟೈನ್‌ ವೀಕ್‌ನ ಏಳನೇ ದಿನ ಅಂದ್ರೆ ಪ್ರೇಮಿಗಳ ದಿನದ ಮುನ್ನಾ ದಿನ ಕಿಸ್ ಡೇಯನ್ನು (Kiss Day) ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜನರು ತಮ್ಮ ಸಂಗಾತಿಯನ್ನು ಚುಂಬಿಸುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಕೆಲವರು ತಮ್ಮ ಸಂಗಾತಿಯ ಕೈಗೆ ಸಿಹಿ ಮುತ್ತನ್ನು ನೀಡಿದರೆ, ಇನ್ನೂ ಕೆಲವು ಹಣೆಗೆ ಮುತ್ತನಿಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ರೀತಿ ನೀಡುವ ಪ್ರತಿಯೊಂದು ಚುಂಬನಕ್ಕೂ ಅದರದ್ದೇ ಆದ ಅರ್ಥವಿದ್ದು, ಯಾವ ಚುಂಬನವನ್ನು…

Read More

ಆ ಸ್ಟಾರ್ ನಟ ನನ್ನ ಜೀವನ ಹಾಳು ಮಾಡಿದ: ‘ಅಣ್ಣಯ್ಯ’ ನಟಿ ಆರೋಪ – Kannada News | Actress Aruna Irani talks about her relation with legendry actor Mehmood

ರವಿಚಂದ್ರನ್ (Ravichandran) ನಟಿಸಿರುವ ‘ಅಣ್ಣಯ್ಯ’ ಸಿನಿಮಾ ಯಾರಿಗೆ ನೆನಪಿಲ್ಲ. ಆ ಬ್ಲಾಕ್ ಬಸ್ಟರ್ ಸಿನಿಮಾನಲ್ಲಿ ನಾಯಕನಷ್ಟೆ ಪ್ರಮುಖವಾದ ಪಾತ್ರ ನಾಯಕನ ತಾಯಿಯದ್ದು. ಆ ಪಾತ್ರದಲ್ಲಿ ನಟಿಸಿದ್ದಿದ್ದು ಆಗಿನ ಸ್ಟಾರ್ ಬಾಲಿವುಡ್ ನಟಿ ಅರುಣಾ ಇರಾನಿ. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅರುಣಾ ಇರಾನಿ ಈ ವರೆಗೆ ಹಲವಾರು ಸಿನಿಮಾಗಳು ಮತ್ತು ಟಿವಿ ಶೋಗಳಲ್ಲಿ ನಟಿಸಿದ್ದಾರೆ. ಅರುಣಾ ಇರಾನಿ ಅವರ ಖಾಸಗಿ ಜೀವನ ಸಿನಿಮಾ ರೀತಿಯಲ್ಲಿಯೇ ಹಲವು ಏರಿಳಿತಗಳನ್ನು ಕಂಡಿದೆ. ಇದೀಗ ಅರುಣಾ ಇರಾನಿ ತಮ್ಮ ಖಾಸಗಿ ಜೀವನದ…

Read More

ಪಾಕಿಸ್ತಾನದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿ ಇತಿಹಾಸ ಸೃಷ್ಟಿಸಿದ ಸಿಖ್ ಅಧಿಕಾರಿ ಹರ್ಚರಣ್ ಸಿಂಗ್ – Kannada News | Pakistan first Sikh officer Harcharan Singh promoted to Lieutenant Colonel rank

ಇಸ್ಲಮಾಬಾದ್, ಫೆಬ್ರವರಿ 12: ಪಾಕಿಸ್ತಾನಿ ಸೇನೆಯಲ್ಲಿ ಉನ್ನತ ಸ್ಥಾನ ಪಡೆಯುವ ಮೂಲಕ ಸಿಖ್ ಅಧಿಕಾರಿಯೊಬ್ಬರು ಇತಿಹಾಸ ನಿರ್ಮಿಸಿದ್ದಾರೆ. ಪಾಕಿಸ್ತಾನದ (Pakistan) ಸಿಖ್ ಸಮುದಾಯದ ಮೇಜರ್ ಹರ್ಚರಣ್ ಸಿಂಗ್ ಈಗ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ಮೊದಲ ಸಿಖ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುರುನಾನಕ್ ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್‌ನಲ್ಲಿ 1987ರಲ್ಲಿ ಜನಿಸಿದ ಹರ್ಚರಣ್ ಸಿಂಗ್ ಅವರಿಗೆ 2025ರಲ್ಲಿ ನಡೆದ ಬಡ್ತಿ ಮಂಡಳಿಯ ಮೌಲ್ಯಮಾಪನ ಪ್ರಕ್ರಿಯೆಯ ನಂತರ ಲೆಫ್ಟಿನೆಂಟ್ ಕರ್ನಲ್ ಆಗಿ…

Read More

ITA vs NEP: ನೇಪಾಳ ವಿರುದ್ಧ 10 ವಿಕೆಟ್​ ಜಯ; ಟಿ20 ವಿಶ್ವಕಪ್​ನಲ್ಲಿ ಇತಿಹಾಸ ಬರೆದ ಇಟಲಿ – Kannada News | Italy Makes History! Dominant 10 Wicket Victory vs Nepal in 2026 T20 World Cup

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್​ನ 17ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ದೇಶಗಳಾದ ನೇಪಾಳ ಹಾಗೂ ಇಟಲಿ ತಂಡಗಳು ಮುಖಾಮುಖಿಯಾಗಿದ್ದವು. ಇದೇ ವಿಶ್ವಕಪ್​ನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೇಪಾಳ ನೀಡಿದ ಕೆಚ್ಚೆದಯ ಹೋರಾಟವನ್ನು ನೋಡಿದ್ದವರು ಇಂದಿನ ಪಂದ್ಯದಲ್ಲಿ ಇಟಲಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದುಕೊಂಡಿದ್ದರು. ಆದರೆ ನೇಪಾಳ ವಿರುದ್ಧ ಅಚ್ಚರಿಯ ಪ್ರದರ್ಶನ ನೀಡಿದ ಇಟಲಿ ಬರೋಬ್ಬರಿ 10 ವಿಕೆಟ್​ಗಳ ಜಯ ದಾಖಲಿಸಿತು. ಇದು ಟಿ20 ವಿಶ್ವಕಪ್​ನಲ್ಲಿ ಇಟಲಿ ತಂಡದ ಚೊಚ್ಚಲ ಗೆಲುವಾಗಿತ್ತು….

Read More

ನಾವು ಯಾರನ್ನೂ ನಿಂದಿಸಿಲ್ಲ; ಸಚಿವ ಕಿರಣ್ ರಿಜಿಜು ಹೇಳಿಕೆಗೆ ಪ್ರಿಯಾಂಕಾ ಗಾಂಧಿ ತಿರುಗೇಟು – Kannada News | We did not abuse anyone Priyanka Gandhi Vadra slams minister Kiren Rijiju

ನವದೆಹಲಿ, ಫೆಬ್ರವರಿ 12: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಅನುಚಿತವಾಗಿ ವರ್ತಿಸಿದ್ದಾರೆ, ಅದಕ್ಕೆ ನಾನು ಪ್ರೋತ್ಸಾಹ ನೀಡಿದ್ದೇನೆ ಎಂಬ ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಅವರ ಹೇಳಿಕೆಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸುಳ್ಳು ಎಂದು ತಳ್ಳಿಹಾಕಿದ್ದಾರೆ. “ನಾವು ಯಾರನ್ನೂ ನಿಂದಿಸಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ನಾವು ಯಾರನ್ನೂ ನಿಂದಿಸಿಲ್ಲ. ಸ್ಪೀಕರ್ ಕೊಠಡಿಯೊಳಗೆ ಹೋದಾಗ ಒಂದಿಬ್ಬರು ಸಂಸದರು ಉದ್ರೇಕಗೊಂಡರು. ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಈ…

Read More

HAL Recruitment 2026: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​​ನಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು! – Kannada News | HAL Recruitment 2026: 151 Fireman and Diploma Technician Jobs in Karnataka

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಭಾರತದ ಪ್ರಮುಖ ಸಾರ್ವಜನಿಕ ವಲಯದ ರಕ್ಷಣಾ ಹಾಗೂ ಏರೋಸ್ಪೇಸ್ ಸಂಸ್ಥೆಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ. 2026ರ ಅಧಿಕೃತ ಅಧಿಸೂಚನೆಯ ಮೂಲಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಡಿಪ್ಲೊಮಾ ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ವಲಯದಲ್ಲಿ ಸ್ಥಿರ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶವಾಗಿದೆ. ಆಸಕ್ತರು ಫೆಬ್ರವರಿ 25 ರೊಳಗೆ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿಯಡಿಯಲ್ಲಿ ಒಟ್ಟು…

Read More

ಶಾಲೆಗೆ ಹೋಗಲು ಬೇಜಾರಾಗಿ ಊರು ಸುತ್ತಿ ಅಪಹರಣದ ಕತೆ ಹೇಳಿದ ಸಹೋದರಿಯರು: ಪೊಲೀಸ್​​ ತನಿಖೆ ವೇಳೆ ಸತ್ಯ ಬಹಿರಂಗ – Kannada News | Bengaluru Sisters Fake Abduction to Skip School: Police Uncover Truth

ಬೆಂಗಳೂರು, ಫೆಬ್ರವರಿ 12: ಶಾಲೆಗೆ ಹೋಗಲು ಮನಸ್ಸಿಲ್ಲದ ಬಾಲಕಿಯರು ಅಪಹರಣ ಕತೆ ಕಟ್ಟಿ ಸಿಕ್ಕಿಬಿದ್ದಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಮನೆಯಿಂದ ಸ್ಕೂಲ್​​ಗೆಂದು ಹೋಗಿದ್ದ 14 ಮತ್ತು 8 ವರ್ಷದ ಇಬ್ಬರು ಸಹೋದರಿಯರು ನಾಪತ್ತೆಯಾಗಿದ್ದಾರೆ. ಶಾಲೆ ಬಳಿ ಹಾದುಹೋಗುತ್ತಿದ್ದ ಬಾಲಕಿಯರ ವಿಚಾರಿಸಿದಾಗ ಅವರು ತರಗತಿಗಳಿಗೆ ಹಾಜರಾಗಿಲ್ಲವೆಂಬ ವಿಷಯ ಗೊತ್ತಾಗಿದೆ. ಪರಿಶೀಲನೆ ನಡೆಸಿದ ವೇಳೆ ಶಾಲೆಯ ಕ್ಯಾಂಪಸ್​​ನಲ್ಲಿ ಅವರ ಬ್ಯಾಗ್​​ ದೊರೆತಿದ್ದು, ಬಾಲಕಿಯರ ಪತ್ತೆ ಮಾತ್ರ ಆಗಿಲ್ಲ. ಇದರಿಂದ ಭಯಗೊಂಡ ಕುಟುಂಬಸ್ಥರು ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ…

Read More

‘ಕಾಂತಾರ 1’ ಬಳಿಕ ಹೊಸ ಸಿನಿಮಾಕ್ಕೆ ರಿಷಬ್ ಸಜ್ಜು, ಮುಹೂರ್ತ ಎಲ್ಲಿ? ಎಂದು? – Kannada News | Rishab Shetty starrer Jai Hanuman Muhurtham is on February 22

‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಮೂಲಕ ಭರ್ಜರಿ ಹಿಟ್ ನೀಡಿರುವ ರಿಷಬ್ ಶೆಟ್ಟಿ, ಇದೀಗ ಹೊಸದೊಂದು ಸಿನಿಮಾ ಪ್ರಾರಂಭ ಮಾಡತ್ತಿದ್ದಾರೆ. ‘ಕಾಂತಾರ’ದಂಥಹಾ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಪೌರಾಣಿಕ ಕತೆಯಲ್ಲಿಯೇ ನಾಯಕನಾಗಿ ನಟಿಸಲಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶುರುವಾಗುವ ಮುಂಚೆಯೇ ಘೋಷಣೆಯಾಗಿದ್ದ ‘ಜೈ ಹನುಮಾನ್’ ಸಿನಿಮಾ ಇದೀಗ ಪ್ರಾರಂಭ ಆಗುತ್ತಿದ್ದು, ಶೀಘ್ರವೇ ಮುಹೂರ್ತ ನಡೆಯಲಿದೆ. ತೆಲುಗಿನ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಲಿರುವ ‘ಜೈ ಹನುಮಾನ್’ ಸಿನಿಮಾನಲ್ಲಿ…

Read More

ಕಾಫಿ ಬಿಲ್​ ಕೇಳಿದ್ದಕ್ಕೆ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮೂವರು ಕಾನ್ಸ್​ಟೇಬಲ್ಸ್ – Kannada News | Bengaluru: Police Constables Assault Hotel staff Over Coffee Bill

ದೇವನಹಳ್ಳಿ, ಫೆಬ್ರವರಿ 12: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಫಿ ಬಿಲ್ ಕೇಳಿದ್ದಕ್ಕೆ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಆಲ್ಫಾ ಕ್ಯಾಂಟೀನ್‌ನಲ್ಲಿ ರಾತ್ರಿ ಬೀಟ್ ಡ್ಯೂಟಿಯಲ್ಲಿದ್ದ ಗಂಗರಾಜು, ಬಾಳಪ್ಪ ಮತ್ತು ಕುಮಾರ್ ಎಂಬ ಮೂವರು ಪೊಲೀಸರು ಕಾಫಿ ಕುಡಿದ ನಂತರ ಕ್ಯಾಂಟೀನ್ ಸಿಬ್ಬಂದಿ ಬಿಲ್ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು, ನಾವು ಪೊಲೀಸರು, ನಮಗೆ ಬಿಲ್ ಏಕೆ ಎಂದು ದರ್ಪದಿಂದ ವರ್ತಿಸಿದ್ದಾರೆ. ಪೊಲೀಸರು ಕ್ಯಾಂಟೀನ್…

Read More