All posts by nagaraj11081993

ಪ್ರಯಾಣಿಕರೇ ಗಮನಿಸಿ: ಫೆಬ್ರವರಿ 16ರಂದು ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ; ಇಲ್ಲಿದೆ ಮಾಹಿತಿ – Kannada News | Karnataka Train Alert: Mysuru–Arsikere Services Cancelled; Several Trains Delayed and Rescheduled on February 16

ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ

ಮೈಸೂರು, ಫೆಬ್ರವರಿ 12: ಹಬ್ಬನಘಟ್ಟ- ಅರಸೀಕೆರೆ ನಿಲ್ದಾಣಗಳ ಮಧ್ಯೆ ವಿಶ್ವೇಶ್ವರಯ್ಯ ಜಲ ನಿಗಮ್ ಲಿಮಿಟೆಡ್ (VJNL) ವತಿಯಿಂದ ಕಾಲುವೆ ಕ್ರಾಸಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆಬ್ರವರಿ 16ರ ಸೋಮವಾರದಂದು ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಹಲವು ರೈಲುಗಳು ರದ್ದಾಗಲಿದ್ದರೆ, ಕೆಲವು ಭಾಗಶಃ ಕ್ಯಾನ್ಸಲ್​​ ಆಗಲಿವೆ. ಇನ್ನು ಕೆಲ ರೈಲುಗಳ ಸಂಚಾರ ಸಮಯ ಮರು ನಿಗದಿಗೊಳ್ಳಲಿದ್ದರೆ, ಮತ್ತೆ ಕೆಲವು ಟ್ರೇನ್​​ಗಳನ್ನು ನಿಯಂತ್ರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸಂಚಾರ ರದ್ದುಗೊಂಡ ರೈಲುಗಳು

  • ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್
  • ರೈಲು ಸಂಖ್ಯೆ 16206 ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್
  • ರೈಲು ಸಂಖ್ಯೆ 16205 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್

ಇದನ್ನೂ ಓದಿ: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಗುಡ್​​​ ನ್ಯೂಸ್​​ ನೀಡಿದ ಸಚಿವ ಅಶ್ವಿನಿ ವೈಷ್ಣವ್

ಇನ್ನು ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಮೈಸೂರು–ಅರಸೀಕೆರೆನಡುವಿನ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದ್ದು, ಅರಸೀಕೆರೆಯಿಂದ ತನ್ನ ನಿಗದಿತ ವೇಳೆಗೆ ಪ್ರಯಾಣ ಆರಂಭಿಸಲಿದೆ. ರೈಲು ಸಂಖ್ಯೆ 56266 ಮೈಸೂರು–ಅರಸೀಕೆರೆ ಪ್ಯಾಸೆಂಜರ್ ರೈಲು 110 ನಿಮಿಷಗಳ ಕಾಲ ಮತ್ತು ರೈಲು ಸಂಖ್ಯೆ 16221 ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ ರೈಲನ್ನು 100 ನಿಮಿಷಗಳ ಕಾಲ ಮಾರ್ಗ ಮಧ್ಯೆ ನಿಯಂತ್ರಿಸಲಾಗುತ್ತದೆ.

ಈ ರೈಲುಗಳ ಸಂಚಾರದಲ್ಲಿ ವಿಳಂಬ

ರೈಲು ಸಂಖ್ಯೆ 56265 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಅರಸೀಕೆರೆಯಿಂದ 100 ನಿಮಿಷಗಳ ವಿಳಂಬದೊಂದಿಗೆ ಮತ್ತು ರೈಲು ಸಂಖ್ಯೆ 06269 ಮೈಸೂರು–ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ವಿಶೇಷ ರೈಲು ಮೈಸೂರಿನಿಂದ 100 ನಿಮಿಷಗಳ ವಿಳಂಬದೊಂದಿಗೆ ಸಂಚಾರ ನಡೆಸಲಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:14 pm, Thu, 12 February 26

Source link

Kiss Day 2026: ಚುಂಬನದಲ್ಲಿ ಎಷ್ಟು ಪ್ರಕಾರಗಳಿವೆ, ಅವುಗಳ ಅರ್ಥವೇನು ಗೊತ್ತಾ? – Kannada News | Kiss Day 2026: Every kiss has a meaning; here’s what it means

ಸಂಬಂಧವನ್ನು ಬಲಪಡಿಸಲು, ಪರಸ್ಪರ ಪ್ರೀತಿ, ವಿಶ್ವಾಸವನ್ನು ವ್ಯಕ್ತಪಡಿಸಲು ವ್ಯಾಲೆಂಟೈನ್‌ ವೀಕ್‌ನ ಏಳನೇ ದಿನ ಅಂದ್ರೆ ಪ್ರೇಮಿಗಳ ದಿನದ ಮುನ್ನಾ ದಿನ ಕಿಸ್ ಡೇಯನ್ನು (Kiss Day) ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜನರು ತಮ್ಮ ಸಂಗಾತಿಯನ್ನು ಚುಂಬಿಸುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಕೆಲವರು ತಮ್ಮ ಸಂಗಾತಿಯ ಕೈಗೆ ಸಿಹಿ ಮುತ್ತನ್ನು ನೀಡಿದರೆ, ಇನ್ನೂ ಕೆಲವು ಹಣೆಗೆ ಮುತ್ತನಿಟ್ಟು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ರೀತಿ ನೀಡುವ ಪ್ರತಿಯೊಂದು ಚುಂಬನಕ್ಕೂ ಅದರದ್ದೇ ಆದ ಅರ್ಥವಿದ್ದು, ಯಾವ ಚುಂಬನವನ್ನು ಯಾವ ರೀತಿಯ ಭಾವನೆಯನ್ನು ವ್ಯಕ್ತಪಡಿಸಲು ನೀಡಲಾಗುತ್ತದೆ ಎಂಬುದನ್ನು ತಿಳಿಯಿರಿ.

ಚುಂಬನದ ವಿಧಗಳು ಮತ್ತು ಅವುಗಳ ಅರ್ಥ:

ಹಣೆಯ ಮೇಲೆ ನೀಡುವ ಚುಂಬನ: ಇದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲಿರುವ ತುಂಬಾ ಪ್ರಾಮಾಣಿಕವಾದ ಮಾರ್ಗವಾಗಿದೆ.  ಮೆಚ್ಚುಗೆಯ ಭಾವನೆ ಮತ್ತು ಸದಾ ನಿನ್ನೊಂದಿಗೆ ಇರುತ್ತೇನೆ ಎಂದು ಭರವಸೆ ನೀಡುವ ಚುಂಬನವೇ ಹಣೆಯ ಮೇಲಿನ ಚುಂಬನ. ಅಲ್ಲದೆ ಈ ಚುಂಬನ ಆ ವ್ಯಕ್ತಿಯು ನಿಮ್ಮೊಂದಿಗೆ ಸುರಕ್ಷಿತವಾಗಿದ್ದಾರೆ ಎಂದು ಹೇಳುವ ಒಂದು ಮಾರ್ಗವಾಗಿದೆ.

ಕೆನ್ನೆಯ ಮುತ್ತು: ಇದು ಸಂಗಾತಿಗಳಿಬ್ಬರ ನಡುವಿನ ಪ್ರೀತಿಯ ಅತ್ಯಂತ ಸಾಮಾನ್ಯ ಅಭಿವ್ಯಕ್ತಿಯಾಗಿದೆ. ಒಟ್ಟಾರೆಯಾಗಿ ಪರಿಚಯ ಮತ್ತು ಪ್ರೀತಿಯನ್ನು ಈ ಚುಂಬನ ತಿಳಿಸುತ್ತದೆ. ಕೆನ್ನೆಯ ಚುಂಬನವನ್ನು ಸಂಗಾತಿಗಳಿಗೆ ಮಾತ್ರವಲ್ಲದೆ ಇತರ ಆಪ್ತರಿಗೂ ನೀಡಬಹುದು.

ಕೈಗೆ ಮುತ್ತು: ಕೈಗಳಿಗೆ ಮುತ್ತಿಡುವುದನ್ನು ಗೌರವದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಯಾರನ್ನಾದರೂ ಕಾಳಜಿ ವಹಿಸುತ್ತಿದ್ದರೆ ಅಥವಾ ಸಂಬಂಧವನ್ನು ಪ್ರಾರಂಭಿಸಲು ಬಯಸಿದರೆ, ಅವರ ಕೈಗಳಿಗೆ ಮುತ್ತಿಡುವ ಮೂಲಕ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ಈ ರೀತಿಯ ಮುತ್ತು ಸಂಬಂಧದಲ್ಲಿ ಭದ್ರತೆ ಮತ್ತು ಮೆಚ್ಚುಗೆಯನ್ನು ಪ್ರತಿಬಿಂಬಿಸುತ್ತದೆ.

ಫ್ರೆಂಚ್‌ ಕಿಸ್:‌ ಇದು ತುಂಬಾ ಆತ್ಮೀಯವಾದ ಚುಂಬನವಾಗಿದ್ದು, ಸಾಮಾನ್ಯವಾಗಿ ಉತ್ಸಾಹ ಮತ್ತು ಆಳವಾದ ಪ್ರೀತಿಯನ್ನು ಸಂಕೇತಿಸುತ್ತದೆ. ಸಂಗಾತಿಯೊಂದಿಗೆ ಹೆಚ್ಚು ಆರಾಮದಾಯಕವಾದಾಗ ಮತ್ತು ಸಂಬಂಧದಲ್ಲಿ ಅಂತರವು ಕಡಿಮೆಯಾಗಲು ಪ್ರಾರಂಭಿಸಿದಾಗ ಫ್ರೆಂಚ್‌ ಕಿಸ್‌ ನೀಡಿ ಭಾವನೆಗಳನ್ನು ವ್ಯಕ್ತಪಡಿಸಬಹುದು.

ಮೂಗಿನ ಮೇಲೆ ಚುಂಬನ: ಮೂಗಿನ ಮೇಲೆ ಚುಂಬಿಸುವುದು ಶುದ್ಧ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಇದು ಸಂಗಾತಿಯನ್ನು ಆಳವಾಗಿ ಪ್ರೀತಿಸುವುದನ್ನು ತೋರ್ಪಡಿಸುತ್ತದೆ ಮತ್ತು ಈ ಸಿಹಿ ಚುಂಬನ ಪ್ರೀತಿ, ಕಾಳಜಿಯನ್ನು ತೋರಿಸುತ್ತದೆ.

ಕುತ್ತಿಗೆ  ಚುಂಬನ: ಕುತ್ತಿಗೆಗೆ ಚುಂಬನ ನೀಡುವುದರಿಂದ ನಿಮ್ಮಲ್ಲಿರುವ ಉತ್ಸಾಹಭರಿತ ಭಾವನೆಗಳು ಬಹಿರಂಗಗೊಳ್ಳುತ್ತವೆ. ಈ ರೀತಿಯ ಚುಂಬನವು ತುಂಬಾ ರೊಮ್ಯಾಂಟಿಕ್‌ ಆಗಿದ್ದು, ಇದು ಆಳವಾದ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ರೊಮ್ಯಾಂಟಿಕ್‌ ಫೀಲ್‌ ಹುಟ್ಟುಹಾಕುವ ಈ ಚುಂಬನವು ಸಂಗಾತಿಗಳನ್ನು ಇನ್ನಷ್ಟು ಹತ್ತಿರ ಮಾಡುತ್ತದೆ.

ಇದನ್ನೂ ಓದಿ: ವ್ಯಾಲೆಂಟೈನ್‌ ವೀಕ್‌ನಲ್ಲಿ ಕಿಸ್‌ ಡೇ ಆಚರಿಸುವುದೇಕೆ? ದಿನದ ಹಿನ್ನೆಲೆಯನ್ನು ತಿಳಿಯಿರಿ

ಬಟರ್‌ಫ್ಲೈ ಕಿಸ್:‌ ಬಟರ್‌ ಫ್ಲೈ ಕಿಸ್‌  ಅತ್ಯಂತ ಸಿಹಿ ಮುತ್ತು. ಅದು ಸಂಗಾತಿಗಳಿಬ್ಬರ ನಡುವಿನ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುತ್ತದೆ.

ಕಿವಿಗೆ ನೀಡುವ ಚುಂಬನ: ಇಯರ್‌ಲೋಬ್ ಕಿಸ್ ಪ್ರೀತಿಯ ಆಳವಾದ ಭಾವನೆಯನ್ನು ಸಂಕೇತಿಸುತ್ತದೆ. ಕಿವಿಗಳನ್ನು ಚುಂಬಿಸುವುದು ಸಂಗಾತಿಗಳಿಬ್ಬರ ನಡುವಿನ ಕಾಮ ಭಾವನೆಯನ್ನು ಪ್ರಚೋದಿಸುವ ಕ್ರಿಯೆಯಾಗಿದೆ. ಪ್ರೇಮಿಗಳು ತಮ್ಮ ಸಂಗಾತಿಗೆ ರೋಮ್ಯಾಂಟಿಕ್ ಭಾವನೆ ಮೂಡಿಸಲು ಈ ರೀತಿ ಕಿಸ್‌ ಮಾಡುತ್ತಾರೆ.

ಫ್ಲೈಯಿಂಗ್ ಕಿಸ್: ಯಾರಾದರೂ ನಿಮ್ಮನ್ನು ಮುಟ್ಟದೆ ದೂರದಿಂದ ಚುಂಬಿಸಿದರೆ, ಅದನ್ನು ಫ್ಲೈಯಿಂಗ್ ಕಿಸ್ ಎಂದು ಕರೆಯಲಾಗುತ್ತದೆ. ಅದರರ್ಥ ಅವರು ನಿಮ್ಮನ್ನು ಅಪಾರವಾಗಿ ಪ್ರೀತಿಸುತ್ತಾರೆ ಮತ್ತು ನಿಮ್ಮಿಂದ ದೂರವಿರಲು ಬಯಸುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆ ಸ್ಟಾರ್ ನಟ ನನ್ನ ಜೀವನ ಹಾಳು ಮಾಡಿದ: ‘ಅಣ್ಣಯ್ಯ’ ನಟಿ ಆರೋಪ – Kannada News | Actress Aruna Irani talks about her relation with legendry actor Mehmood

ರವಿಚಂದ್ರನ್ (Ravichandran) ನಟಿಸಿರುವ ‘ಅಣ್ಣಯ್ಯ’ ಸಿನಿಮಾ ಯಾರಿಗೆ ನೆನಪಿಲ್ಲ. ಆ ಬ್ಲಾಕ್ ಬಸ್ಟರ್ ಸಿನಿಮಾನಲ್ಲಿ ನಾಯಕನಷ್ಟೆ ಪ್ರಮುಖವಾದ ಪಾತ್ರ ನಾಯಕನ ತಾಯಿಯದ್ದು. ಆ ಪಾತ್ರದಲ್ಲಿ ನಟಿಸಿದ್ದಿದ್ದು ಆಗಿನ ಸ್ಟಾರ್ ಬಾಲಿವುಡ್ ನಟಿ ಅರುಣಾ ಇರಾನಿ. ಬಾಲ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅರುಣಾ ಇರಾನಿ ಈ ವರೆಗೆ ಹಲವಾರು ಸಿನಿಮಾಗಳು ಮತ್ತು ಟಿವಿ ಶೋಗಳಲ್ಲಿ ನಟಿಸಿದ್ದಾರೆ. ಅರುಣಾ ಇರಾನಿ ಅವರ ಖಾಸಗಿ ಜೀವನ ಸಿನಿಮಾ ರೀತಿಯಲ್ಲಿಯೇ ಹಲವು ಏರಿಳಿತಗಳನ್ನು ಕಂಡಿದೆ. ಇದೀಗ ಅರುಣಾ ಇರಾನಿ ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದು, ಬಾಲಿವುಡ್​​ನ ದಂತಕತೆಗಳಲ್ಲಿ ಒಬ್ಬರು ಎನ್ನಲಾಗುವ ಸ್ಟಾರ್ ನಟರೊಬ್ಬರು ತಮ್ಮ ಜೀವನ ರೂಪಿಸಿದ ಜೊತೆಗೆ ಜೀವನ ಹಾಳು ಮಾಡಿದರು ಎಂದಿದ್ದಾರೆ. ತಮ್ಮ ಜೀವನದ ಬಗ್ಗೆ ಹಲವು ವಿಷಯಗಳನ್ನು ಅರುಣಾ ಇರಾನಿ ಹಂಚಿಕೊಂಡಿದ್ದಾರೆ.

ಮೆಹಮೂದ್ ಅಲಿ, ಬಾಲಿವುಡ್​ನ ಹೆಸರಾಂತ ಹಾಸ್ಯನಟ. ಅದರ ಜೊತೆಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮತ್ತು ಗಾಯನವನ್ನೂ ಮಾಡಿದ್ದಾರೆ. ಅರುಣಾ ಇರಾನಿ ಅವರು ಮೆಹಮೂದ್ ಅವರೊಟ್ಟಿಗೆ ಸಂಬಂಧ ಹೊಂದಿದ್ದರು. ಅರುಣಾ ಇರಾನಿ ಹೇಳಿಕೊಂಡಿರುವಂತೆ, ಅವರಿಗೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಮೆಹಮೂದ್ ಬಹಳ ಸಹಾಯ ಮಾಡಿದ್ದರು. ‘ನನಗೆ ಕೆಲಸವಿಲ್ಲದ ಸಮಯದಲ್ಲಿ ಮೆಹಮೂದ್ ಅವರು ತಮ್ಮ ಸಿನಿಮಾಗಳಲ್ಲಿ ಅವಕಾಶ ನೀಡಿದರು. ‘ಔಲಾದ್’, ‘ಹಮ್ಜೋಲಿ’ ಮತ್ತು ‘ನಯಾ ಜಮಾನಾ’ ಚಿತ್ರಗಳ ಮೂಲಕ ನನಗೆ ದೊಡ್ಡ ಬ್ರೇಕ್ ಸಿಕ್ಕಿತು. ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದರು ಮತ್ತು ನನಗೊಬ್ಬ ಮಾರ್ಗದರ್ಶಕನಂತಿದ್ದರು’ ಎಂದು ಅರುಣಾ ನೆನಪಿಸಿಕೊಂಡಿದ್ದಾರೆ.

ಆದರೆ, ಈ ಯಶಸ್ಸಿನ ನಡುವೆಯೇ ಇವರಿಬ್ಬರ ಸಂಬಂಧದ ಬಗ್ಗೆ ಹಬ್ಬಿದ ಒಂದು ವದಂತಿ ಅರುಣಾ ಅವರ ಕೆರಿಯರ್‌ಗೆ ಕೊಡಲಿ ಪೆಟ್ಟು ನೀಡಿತು. ‘ನಾನು ಮತ್ತು ಮೆಹಮೂದ್ ಮದುವೆಯಾಗಿದ್ದೇವೆ ಎಂಬ ಸುದ್ದಿಯು ಚಿತ್ರರಂಗದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ಆಗ ನಾನು ಯಾವುದೇ ಪತ್ರಿಕಾಗೋಷ್ಠಿ ನಡೆಸಿ ಇದನ್ನು ನಿರಾಕರಿಸುವಷ್ಟು ಧೈರ್ಯವಂತೆಯಾಗಿರಲಿಲ್ಲ. ಅಚ್ಚರಿಯೆಂದರೆ, ಮೆಹಮೂದ್ ಕೂಡ ಈ ಸುದ್ದಿಯನ್ನು ಎಲ್ಲೂ ನಿರಾಕರಿಸಲಿಲ್ಲ. ಇದರಿಂದಾಗಿ ಇತರ ನಿರ್ಮಾಪಕರು ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಅಥವಾ ಮೆಹಮೂದ್ ಅಪ್ಪಣೆ ಇಲ್ಲದೆ ಕೆಲಸ ಮಾಡುವುದಿಲ್ಲ ಎಂದು ಭಾವಿಸಿದರು. ಹೀಗಾಗಿ ನನಗೆ ಬರುತ್ತಿದ್ದ ಹಲವು ಅವಕಾಶಗಳು ಕೈತಪ್ಪಿದವು’ ಎಂದು ಅವರು ನೋವಿನಿಂದ ಹೇಳಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ನ ಸ್ಟಾರ್ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಸಿನಿಮಾ?

ಒಂದು ಹಂತದಲ್ಲಿ ಅರುಣಾ ಇರಾನಿ ಅವರಿಗೆ ಕೆಲಸವೇ ಇಲ್ಲದಂತಾಯಿತು. ಮೆಹಮೂದ್ ಅವರೇ ನನ್ನನ್ನು ಕೆಲಸ ಕೊಡಿಸಿ ಬೆಳೆಸಿದರು ಮತ್ತು ಅವರಿಂದಲೇ ನಾನು ಕೆಲಸ ಕಳೆದುಕೊಳ್ಳುವಂತಾಯಿತು ಎಂಬುದು ಅರುಣಾ ಹೇಳಿದ್ದಾರೆ. ‘ಅವರು ನನ್ನನ್ನು ಬಹಿರಂಗವಾಗಿ ಶೋಷಿಸಿದರು, ಇದರಲ್ಲಿ ಅವರದ್ದು ಮಾತ್ರವೇ ತಪ್ಪು ಎಂದು ನಾನು ಹೇಳಲಾರೆ, ಆದರೆ ನನ್ನ ಹೆಸರನ್ನು ಬಳಸಿ ಅವರು ಪಡೆದ ಲಾಭ ಅಥವಾ ಹಬ್ಬಿದ ಸುಳ್ಳು ಸುದ್ದಿಯಿಂದ ನನ್ನ ಜೀವನದ ಹಲವು ವರ್ಷಗಳು ವ್ಯರ್ಥವಾದವು’ ಎಂದು ಅವರು ತಿಳಿಸಿದ್ದಾರೆ.

ನಾನು ಮೆಹಮೂದ್ ಅವರೊಟ್ಟಿಗೆ ಮದುವೆ ಆಗುವ ಇಚ್ಛೆ ವ್ಯಕ್ತಪಡಿಸಿದ್ದೆ. ಅವರೂ ಸಹ ನನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಮದುವೆ ಆಗಲಿಲ್ಲ. ಅದು ನಂತರದ ದಿನಗಳಲ್ಲಿ ಒಳ್ಳೆಯದೇ ಆಯ್ತು. ಅದಾಗಲೇ ಎರಡು ಮದುವೆ ಆಗಿದ್ದ ಮೆಹಮೂದ್ ಅವರು ಮೂರನೇ ಮದುವೆ ಆಗಲು ಹಿಂಜರಿಯುತ್ತಿರಲಿಲ್ಲ. ಆದರೆ ಅದು ನನ್ನನ್ನು ಇನ್ನಷ್ಟು ಸಮಸ್ಯೆಗೆ, ಇಕ್ಕಟ್ಟಿಗೆ ಸಿಲುಕಿಸಬಹುದಾಗಿತ್ತು. ಆ ದಿನಗಳಲ್ಲಿ ನಾನು ಮೆಹಮೂದ್ ಅವರನ್ನು ಸೆಳೆಯಲು, ಖುಷಿ ಪಡಿಸಲು ಏನು ಬೇಕಾದರೂ ಮಾಡಲು ನಾನು ತಯಾರಿದ್ದೆ. ಬಡತನದಿಂದ ಬಂದಿದ್ದ ನಾನು ಹಣ, ಜನಪ್ರಿಯತೆ ನೋಡಿದ್ದೇ ಆ ಸಂದರ್ಭದಲ್ಲಿ ಅದು ನನ್ನ ಸ್ಥಿಮಿತಕಳೆದುಕೊಳ್ಳುವಂತೆ ಮಾಡಿತ್ತು’ ಎಂದಿದ್ದಾ ನಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಾಕಿಸ್ತಾನದಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೇರಿ ಇತಿಹಾಸ ಸೃಷ್ಟಿಸಿದ ಸಿಖ್ ಅಧಿಕಾರಿ ಹರ್ಚರಣ್ ಸಿಂಗ್ – Kannada News | Pakistan first Sikh officer Harcharan Singh promoted to Lieutenant Colonel rank

ಇಸ್ಲಮಾಬಾದ್, ಫೆಬ್ರವರಿ 12: ಪಾಕಿಸ್ತಾನಿ ಸೇನೆಯಲ್ಲಿ ಉನ್ನತ ಸ್ಥಾನ ಪಡೆಯುವ ಮೂಲಕ ಸಿಖ್ ಅಧಿಕಾರಿಯೊಬ್ಬರು ಇತಿಹಾಸ ನಿರ್ಮಿಸಿದ್ದಾರೆ. ಪಾಕಿಸ್ತಾನದ (Pakistan) ಸಿಖ್ ಸಮುದಾಯದ ಮೇಜರ್ ಹರ್ಚರಣ್ ಸಿಂಗ್ ಈಗ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ಈ ಮೂಲಕ ಈ ಹುದ್ದೆಗೇರಿದ ಮೊದಲ ಸಿಖ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುರುನಾನಕ್ ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್‌ನಲ್ಲಿ 1987ರಲ್ಲಿ ಜನಿಸಿದ ಹರ್ಚರಣ್ ಸಿಂಗ್ ಅವರಿಗೆ 2025ರಲ್ಲಿ ನಡೆದ ಬಡ್ತಿ ಮಂಡಳಿಯ ಮೌಲ್ಯಮಾಪನ ಪ್ರಕ್ರಿಯೆಯ ನಂತರ ಲೆಫ್ಟಿನೆಂಟ್ ಕರ್ನಲ್ ಆಗಿ ಬಡ್ತಿ ನೀಡಲಾಯಿತು.

ಅಲ್ಪಸಂಖ್ಯಾತರು ಹಅನೇಕ ಸವಾಲುಗಳನ್ನು ಎದುರಿಸುವ ದೇಶವಾದ ಪಾಕಿಸ್ತಾನದಲ್ಲಿ ಹರ್ಚರಣ್ ಸಿಂಗ್ ಅವರ ಈ ಬಡ್ತಿಯು ಅರ್ಹತೆ ಆಧಾರಿತ ಒಂದು ದೊಡ್ಡ ಪ್ರಬಲ ಉದಾಹರಣೆಯಾಗಿದೆ. ಪಂಜಾಬ್‌ನ ಅಲ್ಪಸಂಖ್ಯಾತ ವ್ಯವಹಾರಗಳ ಪ್ರಾಂತೀಯ ಸಚಿವ ರಮೇಶ್ ಸಿಂಗ್ ಅರೋರಾ ಈ ಬಗ್ಗೆ ಮಾಹಿತಿ ನೀಡಿದ್ದು, “ಅನೇಕ ಕ್ರಿಶ್ಚಿಯನ್ನರು ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರೂ, ಯಾವುದೇ ಹಿಂದೂ ಅಥವಾ ಸಿಖ್ ಈ ಹಿಂದೆ ಈ ಉನ್ನತ ಹುದ್ದೆಗೆ ಅರ್ಹತೆ ಪಡೆದಿರಲಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಿಂದ ವಲಸೆ ಬಂದ ದಲಿತ ಹಿಂದೂಗಳಿಗೆ ವಸತಿ ಕಲ್ಪಿಸಿ; ಸುಪ್ರೀಂ ಕೋರ್ಟ್ ಆದೇಶ

ಹರ್ಚರಣ್ ಸಿಂಗ್ 2007ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಕ್ಯಾಪ್ಟನ್ ಆಗಿ ಪಾಕಿಸ್ತಾನದ ಸಶಸ್ತ್ರ ಪಡೆಗಳನ್ನು ಸೇರಿದರು. ಅವರು ಆರ್ಡನೆನ್ಸ್ ಕಾರ್ಪ್ಸ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದು ಬಲೂಚ್ ರೆಜಿಮೆಂಟ್‌ನ 12ನೇ ಬೆಟಾಲಿಯನ್‌ಗೆ ವರ್ಗಾವಣೆಗೆ ಕಾರಣವಾಯಿತು. ಮೇಜರ್ ಹುದ್ದೆಯನ್ನು ಅಲಂಕರಿಸುವಾಗ ಅವರು ಅನೇಕ ಕಾರ್ಯಾಚರಣೆಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 6:02 pm, Thu, 12 February 26

Source link

ITA vs NEP: ನೇಪಾಳ ವಿರುದ್ಧ 10 ವಿಕೆಟ್​ ಜಯ; ಟಿ20 ವಿಶ್ವಕಪ್​ನಲ್ಲಿ ಇತಿಹಾಸ ಬರೆದ ಇಟಲಿ – Kannada News | Italy Makes History! Dominant 10 Wicket Victory vs Nepal in 2026 T20 World Cup

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2026 ರ ಟಿ20 ವಿಶ್ವಕಪ್​ನ 17ನೇ ಪಂದ್ಯದಲ್ಲಿ ಕ್ರಿಕೆಟ್ ಶಿಶು ದೇಶಗಳಾದ ನೇಪಾಳ ಹಾಗೂ ಇಟಲಿ ತಂಡಗಳು ಮುಖಾಮುಖಿಯಾಗಿದ್ದವು. ಇದೇ ವಿಶ್ವಕಪ್​ನಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನೇಪಾಳ ನೀಡಿದ ಕೆಚ್ಚೆದಯ ಹೋರಾಟವನ್ನು ನೋಡಿದ್ದವರು ಇಂದಿನ ಪಂದ್ಯದಲ್ಲಿ ಇಟಲಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದುಕೊಂಡಿದ್ದರು. ಆದರೆ ನೇಪಾಳ ವಿರುದ್ಧ ಅಚ್ಚರಿಯ ಪ್ರದರ್ಶನ ನೀಡಿದ ಇಟಲಿ ಬರೋಬ್ಬರಿ 10 ವಿಕೆಟ್​ಗಳ ಜಯ ದಾಖಲಿಸಿತು. ಇದು ಟಿ20 ವಿಶ್ವಕಪ್​ನಲ್ಲಿ ಇಟಲಿ ತಂಡದ ಚೊಚ್ಚಲ ಗೆಲುವಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನೇಪಾಳ 123 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಇಟಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 12.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು.

Source link

ನಾವು ಯಾರನ್ನೂ ನಿಂದಿಸಿಲ್ಲ; ಸಚಿವ ಕಿರಣ್ ರಿಜಿಜು ಹೇಳಿಕೆಗೆ ಪ್ರಿಯಾಂಕಾ ಗಾಂಧಿ ತಿರುಗೇಟು – Kannada News | We did not abuse anyone Priyanka Gandhi Vadra slams minister Kiren Rijiju

ನವದೆಹಲಿ, ಫೆಬ್ರವರಿ 12: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದರು ಅನುಚಿತವಾಗಿ ವರ್ತಿಸಿದ್ದಾರೆ, ಅದಕ್ಕೆ ನಾನು ಪ್ರೋತ್ಸಾಹ ನೀಡಿದ್ದೇನೆ ಎಂಬ ಕೇಂದ್ರ ಸಚಿವ ಕಿರಣ್ ರಿಜಿಜು (Kiren Rijiju) ಅವರ ಹೇಳಿಕೆಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸುಳ್ಳು ಎಂದು ತಳ್ಳಿಹಾಕಿದ್ದಾರೆ. “ನಾವು ಯಾರನ್ನೂ ನಿಂದಿಸಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ನಾವು ಯಾರನ್ನೂ ನಿಂದಿಸಿಲ್ಲ. ಸ್ಪೀಕರ್ ಕೊಠಡಿಯೊಳಗೆ ಹೋದಾಗ ಒಂದಿಬ್ಬರು ಸಂಸದರು ಉದ್ರೇಕಗೊಂಡರು. ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಈ ವೇಳೆ ನಾನು ಅವರಿಗೆ ಕುಮ್ಮಕ್ಕು ನೀಡಿದ್ದೇನೆ ಎಂಬುದು ಸುಳ್ಳು. ಆಗ ನಾನು ಮೌನವಾಗಿ ಕುಳಿತಿದ್ದೆ. ಕೊನೆಯಲ್ಲಿ, ನಾನು ಕೆಲವು ವಿಷಯಗಳನ್ನು ಸ್ಪೀಕರ್​ಗೆ ಶಾಂತಿಯುತವಾಗಿ ಹೇಳಿದೆ. ಅಲ್ಲಿ ಯಾವುದೇ ಗಲಾಟೆ ನಡೆಯಲಿಲ್ಲ. ಸ್ಪೀಕರ್ ಕೂಡ ಶಾಂತಿಯಿಂದಲೇ ನಮ್ಮ ಮಾತು ಕೇಳಿಸಿಕೊಂಡರು” ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ ಮಾರಾಟಕ್ಕಿಲ್ಲ; ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡುವುದಾಗಿ ಕಿರಣ್ ರಿಜಿಜು ಎಚ್ಚರಿಕೆ

20ರಿಂದ 25 ಕಾಂಗ್ರೆಸ್ ಸಂಸದರು ಸ್ಪೀಕರ್ ಅವರ ಕೊಠಡಿಗೆ ಪ್ರವೇಶಿಸಿ, ಅವರನ್ನು ನಿಂದಿಸಿ, ಪ್ರಧಾನಿಯವರಿಗೆ ಬೆದರಿಕೆ ಹಾಕಿದ್ದರು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಆರೋಪಿಸಿ ಹೊಸ ವಿಡಿಯೋವನ್ನು ಕೂಡ ರಿಲೀಸ್ ಮಾಡಿದ್ದರು. ಕಿರಣ್ ರಿಜಿಜು ಅವರ ಆರೋಪ ಸುಳ್ಳೆಂದು ಪ್ರಿಯಾಂಕಾ ಗಾಂಧಿ ನಿರಾಕರಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

HAL Recruitment 2026: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​​ನಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು! – Kannada News | HAL Recruitment 2026: 151 Fireman and Diploma Technician Jobs in Karnataka

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್

ಭಾರತದ ಪ್ರಮುಖ ಸಾರ್ವಜನಿಕ ವಲಯದ ರಕ್ಷಣಾ ಹಾಗೂ ಏರೋಸ್ಪೇಸ್ ಸಂಸ್ಥೆಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವನ್ನು ನೀಡಿದೆ. 2026ರ ಅಧಿಕೃತ ಅಧಿಸೂಚನೆಯ ಮೂಲಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಡಿಪ್ಲೊಮಾ ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕದಲ್ಲಿ ಸರ್ಕಾರಿ ವಲಯದಲ್ಲಿ ಸ್ಥಿರ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶವಾಗಿದೆ. ಆಸಕ್ತರು ಫೆಬ್ರವರಿ 25 ರೊಳಗೆ ಅರ್ಜಿ ಸಲ್ಲಿಸಬೇಕು.

ಈ ನೇಮಕಾತಿಯಡಿಯಲ್ಲಿ ಒಟ್ಟು 151 ಹುದ್ದೆಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕದಲ್ಲಿರುವ HAL ಘಟಕಗಳಲ್ಲಿ ನಿಯೋಜಿಸಲಾಗುತ್ತದೆ. ಅಗ್ನಿಶಾಮಕ ಸಿಬ್ಬಂದಿ ಮತ್ತು ಡಿಪ್ಲೊಮಾ ತಂತ್ರಜ್ಞ ಹುದ್ದೆಗಳಿಗಾಗಿ ಆಯ್ಕೆಯಾದವರಿಗೆ ತಿಂಗಳಿಗೆ 21,000 ರಿಂದ 23,000 ರೂ.ವರೆಗೆ ವೇತನ ನೀಡಲಾಗುತ್ತದೆ. ಜೊತೆಗೆ ಸಂಸ್ಥೆಯ ನಿಯಮಾನುಸಾರ ಇತರ ಸೌಲಭ್ಯಗಳೂ ದೊರೆಯಲಿವೆ.

ಶೈಕ್ಷಣಿಕ ಅರ್ಹತೆಯಾಗಿ ಅಭ್ಯರ್ಥಿಗಳು 10ನೇ ಅಥವಾ 12ನೇ ತರಗತಿ, ಐಟಿಐ ಅಥವಾ ಸಂಬಂಧಿತ ವಿಭಾಗದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆ ಪಡೆದಿರಬೇಕು ಎಂಬುದು ಕಡ್ಡಾಯ. ತಾಂತ್ರಿಕ ವಿದ್ಯಾಭ್ಯಾಸ ಹೊಂದಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ವಯೋಮಿತಿಯ ಪ್ರಕಾರ 2026 ಜನವರಿ 14ರಂತೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 28 ವರ್ಷವಾಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳವರೆಗೆ ಸಡಿಲಿಕೆ ಲಭ್ಯವಿದೆ. ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲದಿರುವುದು ಅಭ್ಯರ್ಥಿಗಳಿಗೆ ಮತ್ತೊಂದು ವಿಶೇಷ ಪ್ರಯೋಜನವಾಗಿದೆ.

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಆಯ್ಕೆ ಪ್ರಕ್ರಿಯೆ ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ನಡೆಯಲಿದೆ. ಅರ್ಹ ಅಭ್ಯರ್ಥಿಗಳನ್ನು ಈ ಹಂತಗಳ ಆಧಾರದ ಮೇಲೆ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ನಂತರ HAL ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಅಗತ್ಯ ದಾಖಲೆಗಳು, ಇತ್ತೀಚಿನ ಫೋಟೋ ಹಾಗೂ ಪ್ರಮಾಣಪತ್ರಗಳ ಸ್ಕ್ಯಾನ್ ಪ್ರತಿಗಳನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು. ಕೊನೆಯಲ್ಲಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆಯನ್ನು ಕ್ಯಾಪ್ಚರ್​ ಮಾಡಿ ಇಟ್ಟುಕೊಳ್ಳಿ. ಒಟ್ಟಾರೆ, ತಾಂತ್ರಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಕರ್ನಾಟಕದ ಯುವಕರಿಗೆ HAL ಇಂಡಿಯಾದ ಈ ನೇಮಕಾತಿ ಅತ್ಯುತ್ತಮ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಲೆಗೆ ಹೋಗಲು ಬೇಜಾರಾಗಿ ಊರು ಸುತ್ತಿ ಅಪಹರಣದ ಕತೆ ಹೇಳಿದ ಸಹೋದರಿಯರು: ಪೊಲೀಸ್​​ ತನಿಖೆ ವೇಳೆ ಸತ್ಯ ಬಹಿರಂಗ – Kannada News | Bengaluru Sisters Fake Abduction to Skip School: Police Uncover Truth

ಬೆಂಗಳೂರು, ಫೆಬ್ರವರಿ 12: ಶಾಲೆಗೆ ಹೋಗಲು ಮನಸ್ಸಿಲ್ಲದ ಬಾಲಕಿಯರು ಅಪಹರಣ ಕತೆ ಕಟ್ಟಿ ಸಿಕ್ಕಿಬಿದ್ದಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ. ಮನೆಯಿಂದ ಸ್ಕೂಲ್​​ಗೆಂದು ಹೋಗಿದ್ದ 14 ಮತ್ತು 8 ವರ್ಷದ ಇಬ್ಬರು ಸಹೋದರಿಯರು ನಾಪತ್ತೆಯಾಗಿದ್ದಾರೆ. ಶಾಲೆ ಬಳಿ ಹಾದುಹೋಗುತ್ತಿದ್ದ ಬಾಲಕಿಯರ ವಿಚಾರಿಸಿದಾಗ ಅವರು ತರಗತಿಗಳಿಗೆ ಹಾಜರಾಗಿಲ್ಲವೆಂಬ ವಿಷಯ ಗೊತ್ತಾಗಿದೆ. ಪರಿಶೀಲನೆ ನಡೆಸಿದ ವೇಳೆ ಶಾಲೆಯ ಕ್ಯಾಂಪಸ್​​ನಲ್ಲಿ ಅವರ ಬ್ಯಾಗ್​​ ದೊರೆತಿದ್ದು, ಬಾಲಕಿಯರ ಪತ್ತೆ ಮಾತ್ರ ಆಗಿಲ್ಲ. ಇದರಿಂದ ಭಯಗೊಂಡ ಕುಟುಂಬಸ್ಥರು ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಚಾಮರಾಜಪೇಟೆ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಇದೇ ವೇಳೆ ಬಾಲಕಿಯರ ತಂದೆಗೆ ಅಪರಿಚಿತ ಸಂಖ್ಯೆಯಿಂದ ದೂರವಾಣಿ ಕರೆ ಬಂದಿದೆ. ಹಿರಿಯ ಮಗಳು ಮಾತನಾಡಿ, ತಾವು ಮನೆ ಸಮೀಪದಲ್ಲಿದ್ದೇವೆ, ಪಾದಚಾರಿಯೊಬ್ಬರ ಫೋನ್‌ನಿಂದ ಕರೆ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ. ಕುಟುಂಬಸ್ಥರು ತಕ್ಷಣತೆರಳಿ ನೋಡಿದಾಗ ಇಬ್ಬರೂ ಸುರಕ್ಷಿತವಾಗಿರೋದು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಇಲ್ಲಿದೆ ಅಸಲಿ ಕಹಾನಿ

ಕತೆ ಹೆಣೆದಿದ್ದ ಸಹೋದರಿಯರು

ಎಲ್ಲಿ ಹೋಗಿದ್ದಿರಿ ಎಂದು ವಿಚಾರಿಸಿದಾಗ ಬಾಲಕಿಯರು ಅಪಹರಣದ ಕತೆ ಹೇಳಿದ್ದರು. ನಾಲ್ವರು ಸದಸ್ಯರ ಗ್ಯಾಂಗ್ ಕಾರಿನಲ್ಲಿ ತಮ್ಮನ್ನು ಕರೆದೊಯ್ದಿದ್ದರು. ನಮ್ಮನ್ನು ಬೆದರಿಸಿ, ಇಂಜೆಕ್ಷನ್ ನೀಡಿ ಪ್ರಜ್ಞೆ ತಪ್ಪಿಸಿದ್ದರು. ಜೊತೆಗೆ ಮುಂದಿನ ವಾರ ಮರಳಿ ಬರುವಾಗ ಸಹಕರಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಹಿರಿಯ ಬಾಲಕಿ ತಿಳಿಸಿದ್ದಾಳೆ. ಈ ಹೇಳಿಕೆಯನ್ನು ಆಧರಿಸಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಕಲಂ 123, 137 ಮತ್ತು 140 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಶಾಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಲಿಸಿದಾಗ ಯಾವುದೇ ಅನುಮಾನಾಸ್ಪದ ವಾಹನ, ಅನ್ಯ ವ್ಯಕ್ತಿಗಳ ಚಲನವಲನ ಪತ್ತೆಯಾಗಲಿಲ್ಲ. ಬದಲಾಗಿ ಪರಿಶೀಲನೆ ಮುಂದುವರಿಸಿದಾಗ ಸಿಸಿಟಿವಿಯಲ್ಲಿ ಇಬ್ಬರು ಸಹೋದರಿಯರು ಸಮೀಪದ ಬೀದಿಗಳಲ್ಲಿ ನಿರಾಳವಾಗಿ ಸಂಚರಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಮತ್ತೊಮ್ಮೆ ವಿಚಾರಣೆ ನಡೆಸಿದಾಗ ಬಾಲಕಿಯರು ನಿಜವನ್ನು ಒಪ್ಪಿಕೊಂಡಿದ್ದಾರೆ.  ಶಾಲೆಗೆ ಹೋಗದೆ ಸುತ್ತಾಡಲು ನಿರ್ಧರಿಸಿದ್ದ ಅವರು, ಸಮೀಪದ ಅಂಗಡಿಯಲ್ಲಿ ಲಸ್ಸಿ ಕುಡಿದು ಕಾಲ ಕಳೆದಿದ್ದರು ಎಂಬ ವಿಚಾರ ಬಯಲಾಗಿದೆ ಎಂದು ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:26 pm, Thu, 12 February 26

Source link

‘ಕಾಂತಾರ 1’ ಬಳಿಕ ಹೊಸ ಸಿನಿಮಾಕ್ಕೆ ರಿಷಬ್ ಸಜ್ಜು, ಮುಹೂರ್ತ ಎಲ್ಲಿ? ಎಂದು? – Kannada News | Rishab Shetty starrer Jai Hanuman Muhurtham is on February 22

ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ಮೂಲಕ ಭರ್ಜರಿ ಹಿಟ್ ನೀಡಿರುವ ರಿಷಬ್ ಶೆಟ್ಟಿ, ಇದೀಗ ಹೊಸದೊಂದು ಸಿನಿಮಾ ಪ್ರಾರಂಭ ಮಾಡತ್ತಿದ್ದಾರೆ. ‘ಕಾಂತಾರ’ದಂಥಹಾ ಪೌರಾಣಿಕ ಹಿನ್ನೆಲೆಯುಳ್ಳ ಸಿನಿಮಾ ಮಾಡಿದ್ದ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಪೌರಾಣಿಕ ಕತೆಯಲ್ಲಿಯೇ ನಾಯಕನಾಗಿ ನಟಿಸಲಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶುರುವಾಗುವ ಮುಂಚೆಯೇ ಘೋಷಣೆಯಾಗಿದ್ದ ‘ಜೈ ಹನುಮಾನ್’ ಸಿನಿಮಾ ಇದೀಗ ಪ್ರಾರಂಭ ಆಗುತ್ತಿದ್ದು, ಶೀಘ್ರವೇ ಮುಹೂರ್ತ ನಡೆಯಲಿದೆ.

ತೆಲುಗಿನ ಪ್ರಶಾಂತ್ ವರ್ಮಾ ನಿರ್ದೇಶನ ಮಾಡಲಿರುವ ‘ಜೈ ಹನುಮಾನ್’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಸಿನಿಮಾದ ಮುಹೂರ್ತ ಫೆಬ್ರವರಿ 22 ರಂದು ಹಂಪಿಯಲ್ಲಿ ನಡೆಯಲಿದೆ. ತೆಲುಗು ಪ್ಯಾನ್ ಇಂಡಿಯಾ ಸಿನಿಮಾ ಆದರೂ ಸಿನಿಮಾದ ಮುಹೂರ್ತವನ್ನು ಹಂಪಿಯಲ್ಲಿ ನಡೆಸುತ್ತಿರಲು ಪ್ರಮುಖ ಕಾರಣವೂ ಇದೆ.

ಹಂಪಿಯು ಹನುಮಂತನ ಜನ್ಮಸ್ಥಳ ಎಂದು ನಂಬಲಾಗಿದ್ದು, ಈ ಕಾರಣದಿಂದಲೇ ಚಿತ್ರತಂಡವು ಈ ಪವಿತ್ರ ಸ್ಥಳವನ್ನು ಚಿತ್ರದ ಅಧಿಕೃತ ಚಾಲನೆಗೆ ಆಯ್ಕೆ ಮಾಡಿಕೊಂಡಿದೆ. ಫೆಬ್ರವರಿ 22 ರಂದು ನಡೆಯಲಿರುವ ಈ ಪೂಜಾ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ, ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ರಿಷಬ್ ಶೆಟ್ಟಿ-ಪ್ರಗತಿ ದಾಂಪತ್ಯಕ್ಕೆ 9 ವರ್ಷ; ಮುದ್ದಾದ ವಿಡಿಯೋ ಹಂಚಿಕೊಂಡ ದಂಪತಿ

‘ಜೈ ಹನುಮಾನ್’ ಸಿನಿಮಾನಲ್ಲಿ ರಿಷಬ್ ಶೆಟ್ಟಿ ಹನುಮಂತ ದೇವರ ಪಾತ್ರದಲ್ಲಿ ನಟಿಸುತ್ತಿದ್ದು, ಈಗಾಗಲೇ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ‘ಪುಷ್ಪ’, ‘ಪುಷ್ಪ 2’ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅತ್ಯಂತ ದುಬಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದೆ. ಪ್ರಶಾಂತ್ ವರ್ಮಾ ನಿರ್ದೇಶಿಸಿ ಸೂಪರ್ ಹಿಟ್ ಆಗಿದ್ದ ‘ಹನುಮ್ಯಾನ್’ ಸಿನಿಮಾದ ಮುಂದುವರಿದ ಭಾಗ ಇದು ಎನ್ನಲಾಗುತ್ತಿದ್ದು, ಈ ಸಿನಿಮಾ ಸಂಪೂರ್ಣವಾಗಿ ಹನುಮಂತನ ಶಕ್ತಿ ಮತ್ತು ಸಾಹಸಗಳ ಮೇಲೆ ಕೇಂದ್ರೀಕೃತವಾಗಿರಲಿದೆ. ಕಲಿಯುಗದಲ್ಲಿ ಹನುಮಂತನ ಆಗಮನ ಹೇಗಿರುತ್ತದೆ ಎಂಬ ಕಲ್ಪನೆಯನ್ನು ನಿರ್ದೇಶಕ ಪ್ರಶಾಂತ್ ವರ್ಮ ತೆರೆಯ ಮೇಲೆ ತರಲಿದ್ದಾರೆ.

ಮೂಲಗಳ ಪ್ರಕಾರ, ಮುಹೂರ್ತ ಮುಗಿದ ಬಳಿಕ ಏಪ್ರಿಲ್ ತಿಂಗಳಿನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಪ್ರಶಾಂತ್ ವರ್ಮ ಈಗಾಗಲೇ ಸ್ಕ್ರಿಪ್ಟ್ ಮತ್ತು ವಿಎಫ್‌ಎಕ್ಸ್ ಕೆಲಸಗಳಿಗಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯ ವ್ಯಯಿಸಿದ್ದಾರೆ. ರಿಷಬ್ ಶೆಟ್ಟಿ ‘ಜೈ ಹನುಮಾನ್’ ಸಿನಿಮಾಕ್ಕಾಗಿ ದೇಹವನ್ನು ಇನ್ನಷ್ಟು ಹುರಿಗೊಳಿಸಿಕೊಂಡಿದ್ದು, ಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಬಳಿಕ ಛತ್ರಪತಿ ಶಿವಾಜಿ ಜೀವನ ಆಧರಿತ ಹಿಂದಿ ಸಿನಿಮಾನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಫಿ ಬಿಲ್​ ಕೇಳಿದ್ದಕ್ಕೆ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮೂವರು ಕಾನ್ಸ್​ಟೇಬಲ್ಸ್ – Kannada News | Bengaluru: Police Constables Assault Hotel staff Over Coffee Bill

ದೇವನಹಳ್ಳಿ, ಫೆಬ್ರವರಿ 12: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಫಿ ಬಿಲ್ ಕೇಳಿದ್ದಕ್ಕೆ ಮೂವರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಆಲ್ಫಾ ಕ್ಯಾಂಟೀನ್‌ನಲ್ಲಿ ರಾತ್ರಿ ಬೀಟ್ ಡ್ಯೂಟಿಯಲ್ಲಿದ್ದ ಗಂಗರಾಜು, ಬಾಳಪ್ಪ ಮತ್ತು ಕುಮಾರ್ ಎಂಬ ಮೂವರು ಪೊಲೀಸರು ಕಾಫಿ ಕುಡಿದ ನಂತರ ಕ್ಯಾಂಟೀನ್ ಸಿಬ್ಬಂದಿ ಬಿಲ್ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪೊಲೀಸರು, ನಾವು ಪೊಲೀಸರು, ನಮಗೆ ಬಿಲ್ ಏಕೆ ಎಂದು ದರ್ಪದಿಂದ ವರ್ತಿಸಿದ್ದಾರೆ. ಪೊಲೀಸರು ಕ್ಯಾಂಟೀನ್ ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link