All posts by nagaraj11081993

‘ನಿಮ್ಮ ಕೆಟ್ಟತನ ನಿಮ್ಮ ಅವನತಿಗೆ ಕಾರಣ’; ಕೆಟ್ಟ ಕಮೆಂಟ್ ಹಾಕುವವರಿಗೆ ಜಗ್ಗೇಶ್ ತಿರುಗೇಟು – Kannada News | Jaggesh Slams Abusive Online Comments: A Strong Message to Trolls and Youth

ನಟ ಜಗ್ಗೇಶ್ (Jaggesh) ಅವರು ಅಭಿಮಾನಿಗಳನ್ನು ತುಂಬಾನೇ ಪ್ರೀತಿಸುತ್ತಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಅದೇ ರೀತಿ ಕೆಟ್ಟದನ್ನು ಬಯಸುವವರನ್ನು ಅವರು ದೂರ ಇಡಲು ಪ್ರಯತ್ನಿಸುತ್ತಾರೆ. ಈಗ ಅಶ್ಲೀಲ ಕಮೆಂಟ್ ಹಾಕುವ ವ್ಯಕ್ತಿಗಳಿಗೆ ಜಗ್ಗೇಶ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅವರು ಈಗ ಫೇಸ್​​ಬುಕ್ ಅಲ್ಲಿ ಉದ್ದನೆಯ ಪೋಸ್ಟ್ ಹಂಚಿಕೊಂಡು, ಕೆಟ್ಟ ಕಮೆಂಟ್ ಹಾಕುವವರನ್ನು ಹಲವು ಹಂತಗಳಲ್ಲಿ ತಿದ್ದುವ ಕೆಲಸ ಮಾಡಿದ್ದಾರೆ. ಅವರು ಬರೆದ ಪೋಸ್ಟ್​​ನ ಯಥಾವತ್ತು ವಿವರ ಕೆಳಗಿದೆ.

‘ನನ್ನ ಬದುಕಿನ ಕಷ್ಟ ಕಾಲದಲ್ಲಿ ನನ್ನ ಜೊತೆ ನಿಂತವರು ಜಯಮಾಲ. ಅದು 1994 (ಅಂದು ಹುಟ್ಟದ ಹಾಗು ಹುಟ್ಟಿದರು ಜಗ ಅರಿಯದ ಮಕ್ಕಳು ಇಂದು ನನ್ನ ಜೀವನ ಬಲ್ಲವರಂತೆ ಕಾಮೆಂಟ್ಸ್ ಹಾಕಿದ್ದಾರೆ). ಮಕ್ಕಳೆ ನಾನು ದೇಹ ಚನ್ನಾಗಿ ಇಟ್ಟು ತಲೆಗೆ ಡೈ ಹಾಕಿಕೊಂಡ ಮಾತ್ರಕ್ಕೆ ನಿಮ್ಮ ವಯಸ್ಸಿನವನು ಎಂಬಂತೆ ತಿಳಿಯದಿರಿ’ ಎಂದು ಅವರು ಬರೆದುಕೊಂಡಿದ್ದಾರೆ.

‘ನನ್ನ ಮಾಹಿತಿ ಬೇಕಾದರೆ ನಿಮ್ಮ ಅಜ್ಜ, ಅಜ್ಜಿ, ತಂದೆ-ತಾಯಿ ಕೇಳಿ. ಒಬ್ಬ ಹಳ್ಳಿ ಹುಡುಗ ಹೇಗೆ ನವರಸನಾಯಕ ಆದ ಎಂದು ಕಥೆ ಹೇಳುತ್ತಾರೆ. ಸಂಸಾರ, ಮಕ್ಕಳು, ಜಗತ್ತು ಭಾರದ ನೇಗಿಲು ಮೈಮೇಲೆ ಬಿದ್ದಾಗ ನಿಮ್ಮ ಕಾಮೆಂಟ್ಸ್ ಹಾಕುವ ಕೈ ಸವೆದು, ಜೀವನ ನರಕವಾಗಿರುತ್ತದೆ. ಆಗ ಪಶ್ಚಾಪ ಕಾಡುತ್ತೆ ಸಮಯ ವ್ಯೆರ್ಥಕ್ಕೆ’ ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

‘ನಾನು ಮಾತಾಡಿದ್ದು ಜಯಮಾಲ ಅವರ ಜೊತೆ ಸಿನಿಮಗಾಗಿ ದುಡಿದ ಸಹಸ್ರಾರು ಕಾರ್ಮಿಕರು ಹಾಗು ಸಿನಿಮಗಾಗಿ ಜೀವನ ಸವೆಸಿದ ಜೀವಗಳ ಮುಂದೆ. ಜೊತೆಗೆ ನನ್ನ 45ವರ್ಷ ಚಿತ್ರರಂಗದಲ್ಲಿ ವೈಯಕ್ತಿಕವಾಗಿ ಕಂಡ ಮಹನೀಯರ ಮುಂದೆ ಹಾಗು ಹೆಮ್ಮೆಯಿಂದ ರಾಜಣ್ಣ ನನ್ನ ಜೊತೆ 17 ವರ್ಷ ಇದ್ದ ಕಥೆ. ಇಂದಿನ ಮಕ್ಕಳಿಗೆ ಏನು ಗೊತ್ತು? ಅಂದಿನ ಅದ್ಭುತ ಸಂಬಂಧಗಳ ಬಗ್ಗೆ.

‘ಯಾರು ಏನು ಅಂದರು ನನ್ನ ಸಾಧನೆ ನನ್ನ ಶ್ರಮ ನನ್ನದೆ ಅದನ್ನ ಮುಟ್ಟಲು ಬಿಡಿ, ನೋಡಲು ಆಗದು. ಎರಡನೆಯದು ಶಿವಣ್ಣ ಬಂದಾಗ ನನ್ನ ಊಟ ಮುಗಿದು ಕೈ ತೊಳೆದು ಅವರ ಕಂಡಾಗ ಅಣ್ಣನಂತೆ ಗೌರವಿಸುವ ನಾನು ಎದ್ದು ನಿಂತು ಗೌರವ ನೀಡಿದೆ. ಬದಲಾಗಿ ಊಟ ಬಿಟ್ಟು ನಿಲ್ಲಲಿಲ್ಲ! ಅವರು ನನ್ನ “ದೇವರ ಮಗ” ಜೊತೆಗೆ ನನ್ನ ಕಷ್ಟಕಾಲದಲ್ಲಿ ಅವರ ಜೊತೆ ನಟಿಸಲು ರಣರಂಗ ಚಿತ್ರದಲ್ಲಿ ಇನ್ನೊಬ್ಬ ನಟನ ಬದಲಿಗೆ ನಾನು ಬೇಕೆ ಬೇಕು ಎಂದು ಅವಕಾಶ ಕೊಡಿಸಿದ ಬಂಧು’ ಎಂದು ಶಿವಣ್ಣನ ಹೊಗಳಿದ್ದಾರೆ.

‘ನಮಗೆ ಆದವರನ್ನು ದೇವರಂತೆ ಕಾಣಬೇಕು ಎಂಬ ನೀತಿಪಾಠವನ್ನು ನಮ್ಮ ತಂದೆತಾಯಿ ಕಲಿಸಿದ್ದಾರೆ ವಿನಃ, ಕಂಡಕಂಡವರಿಗೆ ಮೊಬೈಲ್ ಹಿಡಿದು ಕೆಟ್ಟ ಕಾಮೆಂಟ್ಸ್ ಹಾಕಿ ವಿಕೃತ ಆನಂದ ಪಡಿ ಎಂದು ಹೇಳಿಕೊಟ್ಟಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ನಾವು ಒಬ್ಬರ ಬಗ್ಗೆ ಮಾತಾಡ ಬೇಕಾದರೆ ಅವರು ತಿಳಿದವರೋ, ಹಿತರೋ,ಬಂಧುಗಳೋ ಆಗಿರಬೇಕು ಆಗ ನಿಮ್ಮ ಅಣಕದ ಮಾತಿಗೆ ಅರ್ಥವಿರುತ್ತದೆ’ ಎಂದಿದ್ದಾರೆ ಜಗ್ಗೇಶ್.

ನಾನು ಕಲಾವಿದ ನನ್ನ ಸಿನಿಮ ಜೀವನ ಬಿಟ್ಟರೆ ಇನ್ಯಾವ ವೈಯಕ್ತಿಕ ವಿಷಯ ಯಾರಿಗು ಗೊತ್ತಿಲ್ಲ. ನಾನು ಏಕಾಂಗಿ,ಕಾಯಕಪ್ರಿಯ, ದೇವರ ಕಾರ್ಯದಲ್ಲಿ ಮಗ್ನ, ಅನವಶ್ಯಕ ಯಾವ ವಿಷಯಕ್ಕೂ ಬರದವ ನನ್ನ ಗುಣದ ಬಗ್ಗೆ ನನ್ನ ಮನೆಯವರಿಗೆ ಸರಿಯಾದ ಅರಿವಿಲ್ಲ ಅಂತಹದರಲ್ಲಿ ಸಂಬಂಧ ಇಲ್ಲದವರು, ಬಾಳಿ ಬದುಕ ಬೇಕಾದವರು,ನನ್ನ ಮಕ್ಕಳಿಗಿಂತ ಕಿರಿಯರು ಜಾಲತಾಣದಲ್ಲಿ ಕೆಟ್ಟ ಮಾತು ಪ್ರಯೋಗ ಹಾಕೋದು ಯಾವ ಪುರುಷಾರ್ಥಕ್ಕೆ ಅರಿವಾಗಲಿಲ್ಲ’ ಎಂದು ಜಗ್ಗೇಶ್ ಬೇಸರ ಮಾಡಿಕೊಂಡಿದ್ದಾರೆ.

‘ಹಿರಿಯರ ಮಾತು ಸತ್ಯವಾಗುತ್ತೆ. ತನ್ನ ಕೇಡು ತನ್ನ ತಿಂದು ಅರಗು ಬಂಗಾರತಿನ್ನುತ್ತೆ. ಅರ್ಥಾತ್ ನೀವು ಇನ್ನೊಬರಿಗೆ ಅಣಕ ಕೇಡು ಕೆಟ್ಟ ಮಾತು ಬಳಸಿದರೆ ಬರೆದಿಟ್ಟುಕೊಳ್ಳಿ ನಿಮ್ಮ ಅದೃಷ್ಟ ಕರಗಿ ಕಷ್ಟದ ಸರಮಾಲೆ ಆವರಿಸಿ ನಿಮ್ಮ ಬೆಳವಣಿಗೆ ಸುಟ್ಟುಹಾಕುತ್ತೆ. ಯಾರನ್ನು ನೋಯಿಸದಿರಿ ಕಾಲಭೈರವ ನಿಮ್ಮ ಗಮನಿಸುತ್ತಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ‘ಸಂಘಕ್ಕೆ ಭೇಟಿ ಕೋಡಿ’; ಪ್ರಕಾಶ್ ರಾಜ್​​​ಗೆ ಜಗ್ಗೇಶ್ ಆಹ್ವಾನ

‘ನಿಮ್ಮ ಕೆಟ್ಟತನ ನಿಮ್ಮ ಅವನತಿಗೆ ಕಾರಣ. ಬದಲಾಗಿ ಬಂಗಾರದಂತ ಗುಣ ನಡತೆ ಜೀವನ ಕಟ್ಟಿಕೊಳ್ಳಿ ಇಲ್ಲವಾದರೆ ನಿಮ್ಮವರೆ ನಿಮ್ಮನ್ನ ದೂರ ತಳ್ಳುತ್ತಾರೆ. ಒಬ್ಬ ಹಿರಿಯನಾಗಿ ಬಾಳುವವರಿಗೆ ಒಂದು ಸಂದೇಶ ಎಂದು ಭಾವಿಸಿ. ನನ್ನ ಚಿಂತೆ ಬಿಡಿ ಯಾರ ಸಹಾಯವಿಲ್ಲದೆ ನನ್ನ ಗುಣ ನಡತೆ ಕಂಡು ಚಿತ್ರರಂಗದಲ್ಲಿ ನನ್ನ 45ವರ್ಷ ಬೆಳಸಿದರು, ಹಾಗು ರಾಜಕೀಯದಲ್ಲೂ ಹಳ್ಳಿಯಿಂದ ದಿಲ್ಲಿವರೆಗೆ ಆಶೀರ್ವಾದ ಮಾಡಿದ್ದಾರೆ. ನಮ್ಮ ತಂದೆತಾಯಿ ವಂಶಕ್ಕೆ ಒಳ್ಳೆ ಮಗನಾಗಿ ಗಂಡನಾಗಿ ತಂದೆಯಾಗಿ ತಾತನಾಗಿ ಸಾರ್ಥಕ ಜೀವನ ಸವೆಸಿರುವೆ. ಈ ಆದರ್ಶ ಛಲ ಚಿಂತನೆ ನಿಮಗೂ ಫಲಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ’ ಎಂದಿದ್ದಾರೆ ಜಗ್ಗೇಶ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL​ನಲ್ಲಿ ಇಲ್ಲ ಚಾನ್ಸ್​: ಪಾಕಿಸ್ತಾನ್​ ಸೂಪರ್​ ಲೀಗ್​ಗೆ 47 ವಿದೇಶಿ ಆಟಗಾರರು ಆಯ್ಕೆ

Source link

ಚಿನ್ನಸ್ವಾಮಿಯಲ್ಲಿ IPL ಪಂದ್ಯಗಳಿಗೆ ಷರತ್ತುಬದ್ಧ ಅನುಮತಿ? RCB ಅಭಿಮಾನಿಗಳಿಗೆ ಸರ್ಕಾರದಿಂದ ಸಿಗುತ್ತಾ ಸಿಹಿ ಸುದ್ದಿ? – Kannada News | Chinnaswamy Stadium IPL Matches: RCB Matches Almost Confirmed, Cabinet Decision Pending

ಬೆಂಗಳೂರು, ಫೆಬ್ರವರಿ 12: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬಹುತೇಕ ಅನುಮತಿ ದೊರೆತಿದೆ ಎಂದು ಮೂಲಗಳು ತಿಳಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಭಿಮಾನಿಗಳಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆಗಳು ಹೆಚ್ಚಾಗಿವೆ. ವಿಧಾನಸೌಧದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಅಧಿಕಾರಿಗಳು ಮೈದಾನ ಪರಿಶೀಲನಾ ವರದಿಯನ್ನು ಸಲ್ಲಿಸಿದ್ದು, ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳಿಗೆ ಷರತ್ತುಗಳೊಂದಿಗೆ ಸಹಮತ ನೀಡುವ ಸಾಧ್ಯತೆ ದಟ್ಟವಾಗಿದೆ. ಹಿಂದಿನ ದುರಂತದ ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ಇರಲಿಲ್ಲ. ಆದರೆ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧಿಕಾರಿಗಳು ನ್ಯಾಯಮೂರ್ತಿ ಕುನ್ನ ಅವರ ವರದಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಪಾಲಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಆಗಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಗೂಗಲ್​​ನಲ್ಲಿ ತಪ್ಪಿದೆ’; ನಿಜವಾದ ವಯಸ್ಸು ರಿವೀಲ್ ಮಾಡಿದ ಮಯೂರಿ – Kannada News | Kannada Actress Mayuri Reveals her real age says Google Shows Incorrect data

ವಿಚ್ಛೇದನದ ಬಗ್ಗೆ ಮಯೂರಿಗೆ ಕೇಳಲಾಯಿತು. ಆದರೆ, ಅವರು ಇದಕ್ಕೆ ಉತ್ತರಿಸೋದಿಲ್ಲ ಎಂದು ಹೇಳಿದರು. ‘ಈ ಮೊದಲು ಆ ಬಗ್ಗೆ ಮಾತನಾಡಲಿಲ್ಲ, ಮುಂದೂ ಮಾತನಾಡಲ್ಲ’ ಎನ್ನುತ್ತಾರೆ ಅವರು.

Source link

ಅಲ್ಲು ಅರ್ಜುನ್ ಹವಾ ತಗ್ಗಿಸಲು ನಡೆಯುತ್ತಿದೆಯೇ ಕುತಂತ್ರ? – Kannada News | Did Industry people trying to defame Allu Arjun

ಅಲ್ಲು ಅರ್ಜುನ್ (Allu Arjun) ಈಗ ಸ್ಟಾಪ್ ಪ್ಯಾನ್ ಇಂಡಿಯಾ ನಟ. ಅವರ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳು ಗ್ಲೋಬಲ್ ಮಟ್ಟದಲ್ಲಿ ಸೂಪರ್ ಹಿಟ್ ಆಗಿವೆ. ‘ಪುಷ್ಪ 2’ ಸಿನಿಮಾ ಅಂತೂ ಹಳೆಯ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲ ಪುಡಿಗಟ್ಟಿವೆ. ಅಲ್ಲು ಅರ್ಜುನ್ ಜನಪ್ರಿಯತೆ ಭಾರತವನ್ನು ದಾಟಿ ವಿಶ್ವಮಟ್ಟದಲ್ಲಿ ಹಬ್ಬಿದೆ. ಆದರೆ ಇದೀಗ ಅಲ್ಲು ಅರ್ಜುನ್ ಅವರ ಜನಪ್ರಿಯತೆಯನ್ನು ಕುಗ್ಗಿಸುವ, ಅಲ್ಲು ಅರ್ಜುನ್ ಅನ್ನು ಕೆಟ್ಟದಾಗಿ ಬಿಂಬಿಸುವ ಕುತಂತ್ರ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ.

ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಬಗ್ಗೆ ಸುದ್ದಿಯೊಂದು ವೈರಲ್ ಆಗಿತ್ತು. ಅಲ್ಲು ಅರ್ಜುನ್ ಅವರನ್ನು ಭೇಟಿ ಆಗುವ ವ್ಯಕ್ತಿಗಳಿಗೆ 42 ನಿಯಮಗಳನ್ನು ಹಾಕಲಾಗಿದೆ. ಅಲ್ಲು ಅರ್ಜುನ್ ಅನ್ನು ಭೇಟಿ ಆಗುವ ಅಭಿಮಾನಿಗಳು ಹಾಗೂ ಇತರರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸುದ್ದಿ ಹಬ್ಬಿಸಲಾಗಿತ್ತು. ಪಿಆರ್ ಸಂಸ್ಥೆಯೊಂದಕ್ಕೆ ಸೇರಿದ ಕಾವೇರಿ ಬರುವಾ ಎಂಬ ಬ್ರ್ಯಾಂಡ್ ಮ್ಯಾನೇಜರ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅದು ವೈರಲ್ ಆಗಿ, ಅಲ್ಲು ಅರ್ಜುನ್ ಬಗ್ಗೆ ನೆಗೆಟಿವ್ ಅಭಿಪ್ರಾಯ ಹಬ್ಬಿತ್ತು. ಬಳಿಕ ಅಲ್ಲು ಅರ್ಜುನ್ ಅವರ ತಂಡ ಈ ಬಗ್ಗೆ ಸ್ಪಷ್ಟನೆ ನೀಡಲಾಗಿ, ಇದೆಲ್ಲವೂ ಸುಳ್ಳು, ಅಲ್ಲು ಅರ್ಜುನ್ ಅವರು ಯಾವುದೇ ರೀತಿಯ ನಿಯಮಗಳನ್ನು ಯಾರ ಮೇಲೂ ಹೇರಿಲ್ಲ ಎಂದಿದ್ದರು.

ಆದರೆ ಹೀಗೆ ಅಲ್ಲು ಅರ್ಜುನ್ ಬಗ್ಗೆ ನೆಗೆಟಿವ್ ಸುದ್ದಿಗಳು ಹಬ್ಬುತ್ತಿರುವುದು ಹೇಗೆ? ಇದರ ಹಿಂದೆ ಯಾರಿದ್ದಾರೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ. ಇತ್ತೀಚೆಗೆ ನಡೆದಿರುವ ಘಟನೆಯನ್ನು ಉದಾಹರಣೆಯಾಗಿ ನೋಡುವುದಾದರೆ ಬಾಲಿವುಡ್​ನ ಪಿಆರ್​​​ ಸಂಸ್ಥೆಗೆ ಸೇರಿದ ಮಹಿಳೆಯೊಬ್ಬರು ಅಲ್ಲು ಅರ್ಜುನ್ ವಿರುದ್ಧ ಹೀಗೆ ಇಲ್ಲ-ಸಲ್ಲದ ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಅಲ್ಲು ಅರ್ಜುನ್ ವಿರುದ್ಧ ಹೀಗೆ ಸುಳ್ಳು ಆರೋಪಗಳು ಬರುತ್ತಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆಯೂ ಸಹ ಈ ರೀತಿಯ ಆರೋಪಗಳು ಬಂದಿದ್ದಿವೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?

ಚಿತ್ರರಂಗದವರೇ ಅಲ್ಲು ಅರ್ಜುನ್ ಅವರನ್ನು ತುಳಿಯಲು, ಅವರ ಬಗ್ಗೆ ನೆಗೆಟಿವ್ ಸುದ್ದಿಗಳನ್ನು ಹರಡುತ್ತಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮುಂದೆ ಈ ರೀತಿಯ ನೆಗೆಟಿವ್ ಅಪಪ್ರಚಾರ ಮಾಡುವುದು ಕಂಡು ಬಂದರೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲು ಅರ್ಜುನ್ ತಂಡದವರು ಎಚ್ಚರಿಕೆ ನೀಡಿದ್ದಾರೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಹ ಇದನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅಲ್ಲು ಅರ್ಜುನ್ ಅವರ ತೆಲುಗು ರಾಜ್ಯಗಳ ಅಭಿಮಾನಿಗಳು ದೊಡ್ಡ ಸಮಾವೇಶವನ್ನು ಆಯೋಜಿಸಲು ಸಜ್ಜಾಗಿದ್ದು, ಎರಡೂ ತೆಲುಗು ರಾಜ್ಯಗಳಲ್ಲಿ ಅಭಿಮಾನಿ ಸಂಘವನ್ನು ಬಲಗೊಳಿಸಲು ಯೋಜನೆ ಸಿದ್ಧವಾಗಿದೆ ಎನ್ನಲಾಗುತ್ತಿದೆ. ಸಮಾವೇಶಕ್ಕೆ ತಯಾರಿಗಳು ನಡೆಯುತ್ತಿರುವ ಸಮಯದಲ್ಲಿಯೇ ಅಲ್ಲು ಅರ್ಜುನ್ ವಿರುದ್ಧ ಈ ರೀತಿಯ ಅಪಪ್ರಚಾರ ಆರಂಭವಾಗಿರುವುದು ಸಹಜವಾಗಿಯೇ ಅನುಮಾನಗಳನ್ನು ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ತರಕಾರಿ ಕೊಳ್ಳುವ ನೆಪದಲ್ಲಿ ಬಂದು ಬಾಲಕಿಯ ಚಿನ್ನದ ಸರ ಕದ್ದು ಪರಾರಿಯಾದ ಯುವತಿ – Kannada News | Daylight Chain Snatching: Girl Caught on Camera Targeting Young Girl

ಚಿನ್ನ, ಬೆಳ್ಳಿಯ ದರ ಹೆಚ್ಚಾದ ಬಳಿಕವಂತೂ ಕಳ್ಳತನವೂ ವಿಪರೀತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಎಷ್ಟು ಸಲೀಸಾಗಿ ಬಾಲಕಿಯ ಕುತ್ತಿಗೆಯಲ್ಲಿದ್ದ ಸರವನ್ನು ಕದ್ದು ಪರಾರಿಯಾಗಿರುವುದನ್ನು ಕಾಣಬಹುದು. ತಳ್ಳುವ ತರಕಾರಿ ಗಾಡಿ ಬಳಿ ಬಾಲಕಿ ತನ್ನ ಅಜ್ಜಿಯೊಂದಿಗೆ ತರಕಾರಿ ಖರೀದಿಸಲು ಬಂದಿದ್ದಾಳೆ. ಅಲ್ಲೇ ಪಕ್ಕಕ್ಕೆ ತರಕಾರಿ ಖರೀದಿಸುವ ನೆಪದಲ್ಲಿ ಯುವತಿಯೊಬ್ಬಳು ಕೂಡ ಬಂದಿದ್ದಾಳೆ. ಯಾರಿಗೂ ತಿಳಿಯದಂತೆ ಬಾಲಕಿಯ ಕುತ್ತಿಗೆಯಲ್ಲಿದ್ದ ಸರವನ್ನು ಕತ್ತರಿಸಿಕೊಂಡು ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆ ಓಡಿ ಹೋದ ಬಳಿಕ ಎಲ್ಲರಿಗೂ ನಡೆದಿದ್ದೇನೆ ಎಂಬುದು ಅರಿವಿಗೆ ಬಂದಿದೆ. ಈ ಘಟನೆ ನಡೆದಿದ್ದೆಲ್ಲಿ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು? – Kannada News | Which one is Rajamouli’s favorite movie

ಎಲ್ಲ ಸಿನಿಮಾ ಕರ್ಮಿಗಳು ಅವರಿಗೆ ಇಷ್ಟವಾದ ಸಿನಿಮಾಗಳು, ಅವರು ಸ್ಪೂರ್ತಿ ಪಡೆದ ಸಿನಿಮಾಗಳು, ಅವರು ಸಿನಿಮಾ ರಂಗಕ್ಕೆ ಕಾಲಿಡಲು ಸ್ಪೂರ್ತಿ ನೀಡಿದ ಸಿನಿಮಾಗಳು ಇದ್ದೇ ಇರುತ್ತವೆ. ರಾಜಮೌಳಿಯ (Rajamouli) ಸಿನಿಮಾಗಳನ್ನು ನೋಡಿ ಇಂದು ಹಲವಾರು ಮಂದಿ ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ರಾಜಮೌಳಿಗೆ ಇಷ್ಟವಾದ ಸಿನಿಮಾಗಳು ಯಾವುವು? ಯಾವ ಸಿನಿಮಾಗಳನ್ನು ನೋಡಿ ಅವರು ಸಿನಿಮಾ ರಂಗಕ್ಕೆ ಬಂದರು? ಯಾವ ಶೋಗಳು ಅವರಿಗೆ ಬಹಳ ಇಷ್ಟ? ಮಾಹಿತಿ ಇಲ್ಲಿದೆ…

ರಾಜಮೌಳಿ ಅವರೇ ಹೇಳಿಕೊಂಡಿರುವಂತೆ ಅವರು ಬಹಳ ಸಿನಿಮಾಗಳನ್ನು ನೋಡುತ್ತಾರಂತೆ. ಒಳ್ಳೆಯ ಸಿನಿಮಾಗಳನ್ನು ಖಂಡಿತ ನೋಡುತ್ತೀನಿ ಎಂದು ಹಿಂದೆ ಅವರು ಹೇಳಿದ್ದರು. ರಾಜಮೌಳಿ ಅವರಿಗೆ ಹಲವು ಇಷ್ಟದ ಸಿನಿಮಾಗಳು ಇವೆಯಂತೆ. ಭಾರಧ್ವಜ ರಂಗನ್ ಅವರ ಸಂದರ್ಶನದಲ್ಲಿ ಅವರು ಹೇಳಿರುವಂತೆ, ‘ಬೆನ್ ಹರ್’ ಸಿನಿಮಾ ರಾಜಮೌಳಿಯ ಆಲ್​​ಟೈಮ್ ಫೆವರೇಟ್ ಸಿನಿಮಾಗಳಲ್ಲಿ ಒಂದಂತೆ.

‘ಬೆನ್ ಹರ್’ 1959 ರಲ್ಲಿ ಬಿಡುಗಡೆ ಆಗಿದ್ದ ಹಾಲಿವುಡ್ ಸಿನಿಮಾ. ಈ ಸಿನಿಮಾದ ಆಕ್ಷನ್, ಸಿನಿಮಾನಲ್ಲಿರುವ ರಾಜಕೀಯ ರಾಜಮೌಳಿಗೆ ಬಹಳ ಇಷ್ಟವಂತೆ. ಹಲವು ಬಾರಿ ಅವರು ಅವರು ‘ಬೆನ್ ಹರ್’ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅದರ ಬಳಿಕ ತೆಲುಗಿನ ಹಳೆಯ ಸಿನಿಮಾ ‘ಮಾಯಾಬಜಾರ್’ ಸಹ ರಾಜಮೌಳಿಯ ಅಚ್ಚುಮೆಚ್ಚಿನ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ 1957 ರಲ್ಲಿ ಬಿಡುಗಡೆ ಆಗಿದ್ದು ಕೆವಿ ರೆಡ್ಡಿ ನಿರ್ದೇಶಿಸಿರುವ ಈ ಸಿನಿಮಾ ಭಾರತೀಯ ಸಿನಿಮಾ ಇತಿಹಾಸದ ಕಲ್ಟ್ ಸಿನಿಮಾಗಳಲ್ಲಿ ಒಂದಾಗಿದೆ.

ಇವುಗಳ ಹೊರತಾಗಿ ರಾಜಮೌಳಿ ಅವರಿಗೆ ಸ್ಟಿಫನ್ ಸ್ಪೀಲ್​​ಬರ್ಗ್ ಅವರ ಇಂಡಿಯಾನಾ ಜೋನ್ಸ್ ಸರಣಿ ಇಷ್ಟವಂತೆ. ಬಹಳ ವರ್ಷಗಳ ಹಿಂದೆ ಬಂದಿದ್ದ ಸ್ಪೈಡರ್​ಮ್ಯಾನ್ ಸಿನಿಮಾ ಸಹ ಇಷ್ಟವಾಗಿತ್ತಂತೆ. ಇವೆಲ್ಲವೂ ಅವರು ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದ್ದವಂತೆ. ಇನ್ನು ರಾಜಮೌಳಿ ವೆಬ್ ಸರಣಿಗಳನ್ನು ಸಹ ಇಷ್ಟಪಟ್ಟು ನೋಡುತ್ತಾರಂತೆ.

ಇದನ್ನೂ ಓದಿ:ಜಪನೀಸ್​ ಸ್ಟುಡಿಯೋಗಳ ಜೊತೆ ದೊಡ್ಡ ಡೀಲ್​​​ಗೆ ಮುಂದಾದ ರಾಜಮೌಳಿ

ಕಾಲೇಜು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜಮೌಳಿ, ತಾವು ‘ಗೇಮ್ ಆಫ್ ಥ್ರೋನ್ಸ್’ ಮತ್ತು ‘ಬ್ರೇಕಿಂಗ್ ಬ್ಯಾಡ್’ ಎರಡೂ ಸರಣಿಗಳನ್ನು ವೀಕ್ಷಿಸಿದ್ದು, ಈ ಎರಡೂ ಸರಣಿಗಳ ಕೊನೆಯ ಸೀಸನ್ ತಮಗೆ ಇಷ್ಟವಾಗಲಿಲ್ಲವೆಂದು ಹೇಳಿದ್ದಾರೆ. ಅದರ ಜೊತೆಗೆ ಈ ಎರಡರಲ್ಲಿ ತಮಗೆ ‘ಗೇಮ್ ಆಫ್ ಥ್ರೋನ್ಸ್’ ಸರಣಿಯೇ ಹೆಚ್ಚು ಇಷ್ಟ ಎಂದಿದ್ದರು. ಇವುಗಳ ಜೊತೆಗೆ ಅವರಿಗೆ ‘ನಾರ್ಕೊಸ್’ ವೆಬ್ ಸರಣಿ ಸಹ ಬಹಳ ಇಷ್ಟವಾಗಿತ್ತಂತೆ.

ಅಸಲಿಗೆ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ‘ಬ್ಯಾಟಲ್ ಆಫ್ ದಿ ಬಾರ್ಸರ್ಡ್ಸ್’ ಎಪಿಸೋಡ್ ಅನ್ನು ಆಧರಿಸಿ ‘ಬಾಹುಬಲಿ 2’ ಸಿನಿಮಾದಲ್ಲಿ ಕೆಲವು ದೃಶ್ಯಗಳನ್ನು ಬರೆಯುವ ಪ್ರಯತ್ನ ಮಾಡಿದ್ದರಂತೆ. ಅದರಲ್ಲೂ ಎರಡನೇ ಬಾಹುಬಲಿ ಮತ್ತು ಬಲ್ಲಾಳ ದೇವನ ನಡುವಿನ ಕ್ಲೈಮ್ಯಾಕ್ಸ್ ದೃಶ್ಯವನ್ನು ‘ಬ್ಯಾಟಲ್ ಆಫ್ ದಿ ಬಾರ್ಸರ್ಡ್ಸ್’ ರೀತಿ ಮಾಡುವ ಆಸೆ ರಾಜಮೌಳಿಗೆ ಇತ್ತಂತೆ. ಅದನ್ನೇ ಆಧರಿಸಿ ಬರವಣಿಗೆ ಸಹ ಶುರು ಮಾಡಿದ್ದರಂತೆ. ಆದರೆ ಅದು ಸಾಧ್ಯವಾಗಲಿಲ್ಲ, ಕತೆ ನಮ್ಮನ್ನು ಬೇರೆ ಕಡೆಗೆ ಕೊಂಡೊಯ್ಯಿತು ಎಂದಿದ್ದಾರೆ ರಾಜಮೌಳಿ.

ರಾಜಮೌಳಿ ಪ್ರಸ್ತುತ ‘ವಾರಣಾಸಿ’ ಸಿನಿಮಾ ನಿರ್ದೇಶಿಸುತ್ತಿದ್ದು, ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡುವ ಮುಂಚೆ ನೀಡಿದ್ದ ಸಂದರ್ಶನದಲ್ಲಿ, ತಾವು ‘ಇಂಡಿಯಾನಾ ಜೋನ್ಸ್’ ಸಿನಿಮಾದಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದರು. ಆದರೆ ಕಾಲಾಂತರದಲ್ಲಿ ಸಿನಿಮಾದ ಚಿತ್ರಕತೆಯನ್ನು ಭಾರತೀಯ ಪುರಾಣಗಳಿಗೆ ಹೊಂದಿಕೆ ಆಗುವಂತೆ ಬದಲಾಯಿಸಿದಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಗೆ ಬಂದಿದ್ದೇ ರಾಜಕೀಯ ಮಾಡಲು, ಎಲ್ಲ ಮಾತಾಡದೆ ಸುಮ್ನೆ ಹೋಗ್ತೀನಾ? ಹೈಕಮಾಂಡ್ ಭೇಟಿ ಬಳಿಕ ಡಿಕೆಶಿ ಸ್ಫೋಟಕ ಮಾತು – Kannada News | DK Shivakumar’s Explosive Statement After Meeting Congress High Command I Came to Delhi for Politics, Won’t Stay Silent

ದೆಹಲಿಯಲ್ಲಿ ಡಿಕೆ ಶಿವಕುಮಾರ್Image Credit source: tv9

ನವದೆಹಲಿ, ಫೆಬ್ರವರಿ 12: ‘ದೆಹಲಿಗೆ ಬಂದಿರುವುದೇ ರಾಜಕೀಯ ಮಾಡಲು, ಎಲ್ಲ ವಿಚಾರಗಳನ್ನು ಮಾತನಾಡದೆ ಸುಮ್ಮನೆ ವಾಪಸ್ ಹೋಗುತ್ತೇನಾ?’ ಇದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾಧ್ಯಮ ಪ್ರತಿನಿಧಿಗಳ ಬಳಿ ಕೇಳಿದ ಪ್ರಶ್ನೆ. ಕರ್ನಾಟಕ ಕಾಂಗ್ರೆಸ್​​​ನಲ್ಲಿ (Congress) ಅಧಿಕಾರ ಹಂಚಿಕೆ ಗುದ್ದಾಟ ತೀವ್ರಗೊಂಡಿರುವ ಸಂದರ್ಭದಲ್ಲೇ ದೆಹಲಿಯ ಜನಪಥದಲ್ಲಿರುವ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನಿವಾಸದಲ್ಲಿ ಹೈಕಮಾಂಡ್ ನಾಯಕರ ಜತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಅವರು ಮಾತುಕತೆ ನಡೆಸಿದ್ದಾರೆ. ನಂತರ ಹೊರಬಂದು ಮಾತನಾಡಿದ ಅವರು, ಅಸ್ಸಾಂ ಚುನಾವಣೆ ವಿಚಾರವಾಗಿ ಹೈಕಮಾಂಡ್ ಜತೆ ಮಾತನಾಡಿರುವುದಾಗಿ ತಿಳಿಸಿದರು. ಅಸ್ಸಾಂನ ಕೆಲವು ನಾಯಕರೂ ಡಿಕೆಶಿ ಜತೆ ಇದ್ದರು.

ಕರ್ನಾಟಕ ರಾಜಕೀಯದ ಕುರಿತು ಏನು ಮಾತುಕತೆ ನಡೆಯಿತು ಎಂಬ ಪ್ರಶ್ನೆಗೆ, ಏನು ಮಾತನಾಡಬೇಕೋ ಅದೆಲ್ಲವನ್ನೂ ಮಾತನಾಡಿದ್ದೇನೆ. ಏನೇನು ಚರ್ಚೆ ನಡೆಯಿತು ಎಂಬುದನ್ನೆಲ್ಲ ಇಲ್ಲಿ ಹೇಳಲಾಗದು ಎಂದರು. ಇದು ಸಾಕಷ್ಟು ಕುತೂಹಲ ಮೂಡಿಸಿದೆ.

ಡಿಕೆ ಶಿವಕುಮಾರ್ ಹೇಳಿದ್ದೇನು?


ಅಸ್ಸಾಂ ಚುನಾವಣಾ ಬಗ್ಗೆ ಚರ್ಚೆ ಮಾಡಲು ಸೋನಿಯಗಾಂಧಿ ನಿವಾಸಕ್ಕೆ ಆಗಮಿಸಿದ್ದೆವು. ಅಸ್ಸಾಂನಲ್ಲಿ ವಾಪಸ್ ಕಾಂಗ್ರೆಸ್ ಸರ್ಕಾರ ಬರಲಿದೆ. ಸೋನಿಯಗಾಂಧಿ ನಿವಾಸದ ಒಳಗೆ ಏನೇನು ಮಾತನಾಡಿದೆ, ಯಾರ ಜೊತೆಗೆಲ್ಲ ಮಾತನಾಡಿದೆ ಎಂದು ಇಲ್ಲಿ ಹೇಳುವುದಿಲ್ಲ. ಇಲ್ಲಿ ಬೀದಿಯಲ್ಲಿ ನಿಂತು ಎಲ್ಲ ಮಾತನಾಡುವ ಅಗತ್ಯ ಇಲ್ಲ. ಬಂದ ಮೇಲೆ ಏನೇನನು ಮಾತನಾಡಬೇಕೋ ಅದನ್ನೆಲ್ಲ ಮಾತನಾಡಿದ್ದೀನಿ ಎಂದು ಡಿಕೆ ಶಿವಕುಮಾರ್ ಹೇಳಿದರು.

ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ: ಡಿಕೆಶಿ ಮಾರ್ಮಿಕ ಮಾತು

ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಮಾರ್ಮಿಕವಾಗಿ ಮಾತನಾಡಿದ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಬಳಿ ಚರ್ಚೆ ಮಾಡಿದ್ದೆನೆ ಎಂಬುದನ್ನು ನಿಖರವಾಗಿ ಹೇಳಿಲ್ಲ. ಡಿಕೆ ಶಿವಕುಮಾರ್ ಮೊದಲು ಪ್ರಿಯಾಂಕಾ ಗಾಂಧಿ ಜೊತೆ ಅಸ್ಸಾಂ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದರು. ನಂತರ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದರು.

ಬುಧವಾರ ತಡರಾತ್ರಿ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಸಿ ವೇಣುಗೋಪಾಲ್ ಜತೆ ಮಾತುಕತೆ ನಡೆಸಿದ್ದರು. ಈ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೇ ಇದೀಗ ಅಸ್ಸಾಂ ಚುನಾವನೆ ನೆಪದಲ್ಲಿ ಹೈಕಮಾಂಡ್ ನಾಯಕರ ಜತೆ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಪಕ್ಷದಲ್ಲೇ ಅಸಮಾಧಾನ: ವರದಿ ಕೇಳಿದ ಹೈಕಮಾಂಡ್

ಏತನ್ಮಧ್ಯೆ, ಸೋನಿಯಾ ಗಾಂಧಿ ಅವರು ಡಿಕೆ ಶಿವಕುಮಾರ್ ಪರ ಒಲವು ಹೊಂದಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ. ಆದರೆ, ಮುಖ್ಯವಾದ ಜವಾಬ್ದಾರಿಗಳನ್ನು, ನಿರ್ಧಾರಗಳನ್ನು ರಾಹುಲ್ ಗಾಂಧಿ ಅವರೇ ತೆಗೆದುಕೊಳ್ಳುತ್ತಿರುವುದರಿಂದ, ನಾಯಕತ್ವ ಬದಲಾವಣೆ ವಿಚಾರವಾಗಿ ಅವರ ಮನವೊಲಿಸುವ ಅಗತ್ಯ ಡಿಕೆ ಶಿವಕುಮಾರ್​ಗೆ ಎದುರಾಗಿದೆ. ಇದೀಗ ಆ ಪ್ರಯತ್ನಕ್ಕೆ ಅವಕಾಶ ಸಿಕ್ಕಿದ್ದು, ಅದರಲ್ಲಿ ಡಿಕೆಶಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:43 am, Thu, 12 February 26

Source link

ಹಿಂದೆ ತಳ್ಳಿ ಐಸಾ.. ಇನ್ನೂ ತಳ್ಳಿ ಐಸಾ: ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ ಬಸ್ – Kannada News | Engine Failure of KSRTC Bus in Shiggaon Raises Maintenance Concerns.

ಹಾವೇರಿ, ಫೆ.12: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸವಣೂರು ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಒಂದು ನಡುರಸ್ತೆಯಲ್ಲೇ ಕೆಟ್ಟು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟು ಮಾಡಿದೆ. ಬಸ್ಸಿನ ಇಂಜಿನ್ ಸೀಜ್ ಆಗಿರುವ ಕಾರಣ ವಾಹನವು ಚಲಿಸದೆ ರಸ್ತೆ ಮಧ್ಯದಲ್ಲೇ ನಿಂತಿದೆ. ಇದರಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಯಾಣಿಕರು ಬಸ್ ಕೆಟ್ಟು ನಿಂತಿದ್ದರಿಂದ ಗಮ್ಯಸ್ಥಾನ ತಲುಪಲು ಪರದಾಡಬೇಕಾಯಿತು. ಕೆಲವರು ನಡೆದುಕೊಂಡೇ ಹೊರಟರೆ, ಇನ್ನೂ ಕೆಲವರು ಬಸ್ಸನ್ನು ತಳ್ಳುವ ಪ್ರಯತ್ನ ಮಾಡಿದರು. ಈ ಘಟನೆಯ ಸಂದರ್ಭದಲ್ಲಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಜೊತೆ ಸಾರ್ವಜನಿಕರು ಮಾತುಕತೆ ನಡೆಸಿದರು. ಬಸ್‌ನ ರಿಪೇರಿಗೆ ಹಣವಿಲ್ಲ ಎಂದು ಕೇಳಿಬಂದಿದ್ದು, ಇಂಜಿನ್ ಸೀಜ್ ಆಗಿದೆ ಎಂದು ಸಿಬ್ಬಂದಿ ಒಪ್ಪಿಕೊಂಡರು. ಇದು ಸವಣೂರು ಡಿಪೋಗೆ ಸೇರಿದ ಬಸ್ ಆಗಿದ್ದು, ಡಿಪೋದಲ್ಲಿ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕರ್ತವ್ಯದಲ್ಲಿದ್ದ ಚಾಲಕ ಬಾಲಪ್ಪ ಮತ್ತು ನಿರ್ವಾಹಕ ಜ್ಞಾನಪ್ಪ ಅವರು ತಾವು ಹೊಸಬರು, ಮೂರು ದಿನಗಳ ಹಿಂದೆ ನೇಮಕವಾಗಿದ್ದೇವೆ ಎಂದು ತಿಳಿಸಿದರು. ತಮ್ಮ ಹೆಸರು ಫಲಕಗಳೂ ಇರಲಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದರು. ಸರಕಾರಿ ಬಸ್‌ಗಳ ಕಳಪೆ ನಿರ್ವಹಣೆ ಮತ್ತು ಅದರಿಂದಾಗುವ ತೊಂದರೆಗಳ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ಫೆ.17 ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ; ವೃಷಭ ರಾಶಿಯ ಫಲಾಫಲ – Kannada News | Solar Eclipse 2026: Taurus Horoscope and Remedies by Dr. Basavaraj Guruji

ಖ್ಯಾತ ಜ್ಯೋತಿಷಿ ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ವೃಷಭ ರಾಶಿಯ ಮೇಲಿನ ಪ್ರಭಾವದ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಗ್ರಹಣವು ವೃಷಭ ರಾಶಿಯವರಿಗೆ ಹತ್ತನೇ ಮನೆಯಲ್ಲಿ, ಕರ್ಮ ಸ್ಥಾನದಲ್ಲಿ ಸಂಭವಿಸಲಿದೆ. ರಾಶ್ಯಾಧಿಪತಿ ಶುಕ್ರ ಮತ್ತು ಸೂರ್ಯನ ಪಾಲ್ಗೊಳ್ಳುವಿಕೆಯಿಂದ ಮಿಶ್ರ ಫಲಿತಾಂಶಗಳು ನಿರೀಕ್ಷಿತವಾಗಿವೆ.

ಕೃತ್ತಿಕಾ, ರೋಹಿಣಿ, ಮೃಗಶಿರಾ ನಕ್ಷತ್ರದವರಿಗೆ ವೃತ್ತಿಯಲ್ಲಿ ಅನುಮಾನಗಳು ಎದುರಾಗಬಹುದು. ಆದಾಗ್ಯೂ, ತಾಳ್ಮೆ ಇಟ್ಟುಕೊಂಡರೆ ಒಳ್ಳೆಯದು. ಆರೋಗ್ಯವು ಚೆನ್ನಾಗಿರಲಿದೆ ಹಾಗೂ ಹಿರಿಯರ ಪರಿಚಯದಿಂದ ಅನುಕೂಲವಾಗಲಿದೆ. ಮಂಗಳ ಕಾರ್ಯಗಳು ಸ್ವಲ್ಪ ಮುಂದೂಡಲ್ಪಡಬಹುದು. ನಿರೀಕ್ಷಿತ ಕಾರ್ಯಗಳಲ್ಲಿ ಶುಭವಾಗಲಿದೆ. ಆಸ್ತಿ, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಮತ್ತು ಹೋಟೆಲ್ ವ್ಯಾಪಾರದಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link