All posts by nagaraj11081993

Video: ಇದೆಂಥಾ ಮದುವೆ? ಸ್ಟಾರ್ಟರ್​​ ಬದಲು ಅತಿಥಿಗಳಿಗೆ ಬೀಡಿ, ಗುಟ್ಕಾ, ಸಿಗರೇಟ್ ಕೊಟ್ರು

ಭಾರತದ ವಿವಾಹಗಳೆಂದರೆ ಒಂದು ವಿಶಿಷ್ಟವಾದ ಸಂಭ್ರಮ. ಅವು ತಮ್ಮ ಸಂಪ್ರದಾಯಗಳು, ದುಬಾರಿ ಉಡುಪುಗಳು, ಭವ್ಯವಾದ ಸ್ಥಳಗಳು ಮತ್ತು ರುಚಿಕರವಾದ ಆಹಾರಕ್ಕೆ ಹೆಸರುವಾಸಿಯಾಗಿವೆ. ಅತಿಥಿಗಳನ್ನು ಖುಷಿಪಡಿಸಲು ಹೆಚ್ಚಿನ ಕಾಳಜಿವಹಿಸಲಾಗುತ್ತದೆ. ಆದರೆ ಇದೆಂಥಾ ಮದುವೆಯಪ್ಪಾ, ಸ್ಟಾರ್ಟರ್​ಗೆ ಅತಿಥಿಗಳಿಗೆ ಬೀಡಿ, ಸಿಗರೇಟ್, ಗುಟ್ಕಾ ಕೊಟ್ಟಿರುವ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ವಿವಾಹದ ಅನಿರೀಕ್ಷಿತ ಆತಿಥ್ಯ ಎಲ್ಲರ ಗಮನಸೆಳೆದಿದೆ. ವಿಶಿಷ್ಟ ತಿಂಡಿಗಳು ಮತ್ತು ಪಾನೀಯಗಳ ಬದಲಿಗೆ, ಅತಿಥಿಗಳಿಗೆ ಸಿಗರೇಟ್, ಬೀಡಿ ಮತ್ತು ಗುಟ್ಕಾ ಸ್ಯಾಚೆಟ್‌ಗಳಿಂದ ತುಂಬಿದ ಟ್ರೇಗಳನ್ನು ನೀಡುತ್ತಿರುವುದನ್ನು ಕಾಣಬಹುದು. ವಂಶಿಕಾ ಎಂಬ ಬಳಕೆದಾರರು ಹಂಚಿಕೊಂಡ ಈ ಕ್ಲಿಪ್​ನಲ್ಲಿ ಅತಿಥಿಗಳು ತಂಬಾಕು ಉತ್ಪನ್ನಗಳನ್ನು ತೆಗೆದುಕೊಳ್ಳುವುದನ್ನು ಕಾಣಬಹುದು. ಕೆಲವು ವೀಕ್ಷಕರು ಆಘಾತಕ್ಕೊಳಗಾಗಿದ್ದಾರೆ, ಇತರರು ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ ಮತ್ತು ಗರ್ವಾಲ್ ಪ್ರದೇಶದ ಕೆಲವು ಭಾಗಗಳಲ್ಲಿ ಇದು ವಾಡಿಕೆ ಎಂದು ಹೇಳಿದ್ದಾರೆ. ಕೆಲವರು ಅಲ್ಲೇ ಸಿಗರೇಟ್ ಸೇದುತ್ತಾ ನಿಂತಿರುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೆನಡಾ ಶಾಲೆಯಲ್ಲಿ ಗುಂಡು ಹಾರಿಸಿ 9 ಜನರ ಕೊಲ್ಲುವ ಮುನ್ನ ಮನೆಯಲ್ಲಿ ತಾಯಿ, ಸಹೋದರನ ಕೊಂದು ಬಂದಿದ್ದ ಟ್ರಾನ್ಸ್​​ಜೆಂಡರ್ – Kannada News | Canada School Shooting: Transgender Shooter Killed Family Before Deadly Rampage

ಒಟ್ಟಾವಾ, ಫೆಬ್ರವರಿ 12: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ(Firing) ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಘಟನೆಯಲ್ಲಿ 9 ಮಂದಿ ಪ್ರಾಣ ಕಳೆದುಕೊಂಡಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಂದು ಅವರೆಲ್ಲರ ಮೇಲೆ ಗುಂಡು ಹಾರಿಸಿದ್ದು ಓರ್ವ ಮಂಗಳಮುಖಿ ಎಂಬುದು ತಿಳಿದುಬಂದಿದೆ. ಅದಕ್ಕಿಂತಲೂ ಭಯಾನಕ ವಿಚಾರವೇನೆಂದರೆ ಆಕೆ ಶಾಲೆಯ ಮೇಲೆ ದಾಳಿ ನಡೆಸುವ ಮುನ್ನ ತನ್ನ ತಾಯಿ ಹಾಗೂ ತನ್ನ ಸಹೋದರನ ಮೇಲೆ ಗುಂಡು ಹಾರಿಸಿ ಇಬ್ಬರನ್ನೂ ಕೊಂದು ಬಂದಿದ್ದಳು.

ಆಕೆಗಿನ್ನೂ 18 ವರ್ಷ ವಯಸ್ಸು, ಆಕೆ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಜೆಸ್ಸಿ ವ್ಯಾನ್ ರೂಟ್‌ಸೆಲಾರ್ ಆಕೆಯ ಹೆಸರು ತಾನು ಓದಿದ ಶಾಲೆಯ ಮೇಲೆಯೇ ಗುಂಡು ಹಾರಿಸಿದ್ದಾಳೆ. ಆದರೆ ಕೆನಡಾದ ಇತಿಹಾಸದಲ್ಲಿ ನಡೆದ ಅತ್ಯಂತ ಕೆಟ್ಟ ಸಾಮೂಹಿಕ ಹತ್ಯಾಕಾಂಡ ಇದಾಗಿದ್ದು ಆದರೆ ಈ ಘಟನೆಗೆ ಕಾರಣವೇ ಇಲ್ಲ.

ಬ್ರಿಟಿಷ್ ಕೊಲಂಬಿಯಾದ ಪೆಸಿಫಿಕ್ ಪ್ರಾಂತ್ಯದ 2,400 ಜನರಿರುವ ದೂರದ ಸಮುದಾಯವಾದ ಟಂಬ್ಲರ್ ರಿಡ್ಜ್‌ನಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೂಟ್‌ಸೆಲಾರ್ ಒಬ್ಬ ಟ್ರಾನ್ಸ್‌ಜೆಂಡರ್ ಆಗಿದ್ದು, ಆಕೆ ಮೊದಲು ಗಂಡಾಗಿ ಜನಿಸಿ ಬಳಿಕ ಹೆಣ್ಣಾಗಿ ಬದಲಾಗಿದ್ದಳು. ನಾಲ್ಕು ವರ್ಷಗಳ ಹಿಂದೆ ಶಾಲೆಯಿಂದ ಹೊರಗುಳಿದಿದ್ದಳು ಎಂದು ಪೊಲೀಸ್ ಕಮಾಂಡರ್ ಡ್ವೇನ್ ಮೆಕ್‌ಡೊನಾಲ್ಡ್ ಹೇಳಿದ್ದಾರೆ.

ಗುಂಡು ಹಾರಿಸಿದ ಮಹಿಳೆ ಈ ಹಿಂದೆ ಬಂದೂಕು ಪರವಾನಗಿಯನ್ನು ಹೊಂದಿದ್ದರು, ಆದರೆ ಅದು ಅವಧಿ ಮೀರಿತ್ತು ಮತ್ತು ಆಯುಧಗಳನ್ನು ಆಕೆಯ ನಿವಾಸದಿಂದ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು . ಆದರೆ ನಂತರ ಅವುಗಳನ್ನು ಹಿಂತಿರುಗಿಸಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತಷ್ಟು ಓದಿ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು

ರೂಟ್‌ಸೆಲಾರ್‌ ಮಾನಸಿಕ ಅಸ್ವಸ್ಥತೆಯಿದ ಬಳಲುತ್ತಿದ್ದ ಕಾರಣ, ಪೊಲೀಸರು ಆಕೆಯ ಮನೆಗೆ ಹವು ಬಾರಿ ಭೇಟಿ ನೀಡಿ ವಿಚಾರಸುತ್ತಲೇ ಇದ್ದರು. ದಾಳಿ ನಡೆದ ಶಾಲೆಗೆ ಒಮ್ಮೆ ಅವರು ಹಾಜರಾಗಿದ್ದರು ಆದರೆ ನಾಲ್ಕು ವರ್ಷಗಳ ಹಿಂದೆ ಶಾಲೆಯನ್ನು ತೊರೆದಿದ್ದಳು. ಕೆನಡಾದಲ್ಲಿ ನಡೆದ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿಯಲ್ಲಿ ಶೂಟರ್ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದರು ಮತ್ತು 24 ಜನರು ಗಾಯಗೊಂಡಿದ್ದರು.

ರೂಟ್‌ಸೆಲಾರ್ ಮೊದಲು ತನ್ನ ತಾಯಿ, 39, ಮತ್ತು 11 ವರ್ಷದ ಮಲಸಹೋದರನನ್ನು ಕುಟುಂಬದ ಮನೆಯಲ್ಲಿ ಕೊಂದಿದ್ದಳು. ನಂತರ ನಾಲ್ಕು ವರ್ಷಗಳ ಹಿಂದೆ ಅವಳು ಓದುತ್ತಿದ್ದ ಹತ್ತಿರದ ಶಾಲೆಯ ಮೇಲೆ ದಾಳಿ ಮಾಡಿದ್ದಾಳೆ. ಈ ಹಂತದಲ್ಲಿ ಯಾರನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದ್ದಳ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಉದ್ದನೆಯ ಬ್ಯಾರೆಲ್ ಗನ್ ಮತ್ತು ಪಿಸ್ತೂಲ್ ಹೊಂದಿದ್ದ ಶೂಟರ್, ಹತ್ಯಾಕಾಂಡದ ನಂತರ ತಾನೂ ಗುಂಡು ಹಾರಿಸಿಕೊಂಡು ಪ್ರಾಣಬಿಟ್ಟಿದ್ದಾಳೆ.

ಕುಟುಂಬದ ಮತ್ತೊಬ್ಬ ಸದಸ್ಯರು ನೆರೆಹೊರೆಯವರಿಗೆ ಮಾಹಿತಿ ನೀಡಿದ ನಂತರ ಮನೆಯಲ್ಲಿ ಕೊಲೆಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

Published On – 9:48 am, Thu, 12 February 26

Source link

ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ: 3 ಕೋಟಿ ರೂ. ವೆಚ್ಚದಲ್ಲಿ ಹಾಕಿದ ರಸ್ತೆ ಮೂರೇ ತಿಂಗಳಲ್ಲಿ ಮತ್ತೆ ಗುಂಡಿ – Kannada News | Commuters Struggle on Mandya Road as Potholes Reappear Despite Repeated Patchwork

ಮಂಡ್ಯ,ಫೆ.12: ರಾಜ್ಯಾದ್ಯಂತ ಗುಂಡಿಬಿದ್ದ ರಸ್ತೆಗಳನ್ನು ಮುಚ್ಚುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಇದೇ ನಿಟ್ಟಿನಲ್ಲಿ ಮಂಡ್ಯದಿಂದ ಪಾಂಡವಪುರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಗೆ ತೇಪೆ ಹಾಕುವ ಕೆಲಸವನ್ನು ಮಾಡಲಾಗಿತ್ತು. ಆದರೆ, ದುರಸ್ತಿ ಕಾರ್ಯ ಮುಗಿದ ಮೂರೇ ತಿಂಗಳಲ್ಲಿ ರಸ್ತೆಯಲ್ಲಿ ಮತ್ತೆ ಬೃಹತ್ ಗುಂಡಿಗಳು ಕಾಣಿಸಿಕೊಂಡಿರುವುದು ಸ್ಥಳೀಯರು ಮತ್ತು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ.ರಸ್ತೆಯ ಡಾಂಬರ್ ಪದೇ ಪದೇ ಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿಯ ಗುಣಮಟ್ಟವನ್ನು ಸ್ಪಷ್ಟವಾಗಿ ಇದು ತೋರಿಸುತ್ತದೆ. ಒಮ್ಮೆ ಡಾಂಬರ್ ಕಿತ್ತು ಹೋದ ನಂತರ, ಅದನ್ನು ಸರಿಪಡಿಸಲು ಮುಂದಾದರೂ, ಕೇವಲ ಹತ್ತು ದಿನಗಳಲ್ಲೇ ಮತ್ತೆ ಕಿತ್ತು ಬರುತ್ತದೆ. ಇದು “ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂಬಂತೆ ಕಂಟ್ರ್ಯಾಕ್ಟರ್‌ಗಳ ಜೇಬು ತುಂಬಿಸುವ ಕೆಲಸವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ರಸ್ತೆಗಳನ್ನು ಸುರಕ್ಷಿತವಾಗಿ ಮಾಡುವ ನಿಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ಪಡೆದುಕೊಂಡು ಇಂತಹ ಕಳಪೆ ಕೆಲಸ ಮಾಡುತ್ತಿರುವುದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ರಸ್ತೆ ಕೇವಲ ಒಂದು ಸ್ಥಳದಲ್ಲಿ ಹಾಳಾಗಿಲ್ಲ. ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಈ ರೀತಿಯ ಗುಂಡಿಗಳು ಬಿದ್ದಿವೆ. ಈ ರಸ್ತೆ ಮಂಡ್ಯ ಮತ್ತು ಪಾಂಡವಪುರ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಗುಂಡಿಗಳಿಂದಾಗಿ ವಾಹನ ಸವಾರರು, ವಿಶೇಷವಾಗಿ ಬೈಕ್ ಸವಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಸಡನ್ ಆಗಿ ಗುಂಡಿಗಳು ಕಾಣಿಸುವುದರಿಂದ ಹಲವರು ನಿಯಂತ್ರಣ ಕಳೆದುಕೊಂಡು ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಮೂರ್ನಾಲ್ಕು ಜನ ಈಗಾಗಲೇ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Solar Eclipse 2026: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ? – Kannada News | Dr. Basavaraj Gurujis Predictions for Aries During Rahugrasta Surya Grahan 2026

ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, 2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ಮೇಷ ರಾಶಿಯವರಿಗೆ 11ನೇ ಮನೆಯಲ್ಲಿ ಸಂಭವಿಸಲಿದ್ದು, ಇದು ಲಾಭ ಸ್ಥಾನವಾಗಿದೆ. ಈ ಗ್ರಹಣದ ಪ್ರಭಾವದಿಂದ ಮೇಷ ರಾಶಿಯವರು ಆರ್ಥಿಕವಾಗಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಾಣುವರು. ಕುಟುಂಬದಲ್ಲಿ ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಂಡು, ಕೈಗೊಂಡ ಕಾರ್ಯಗಳು ಯಶಸ್ವಿಯಾಗುತ್ತವೆ. ಭೂಮಿ ಲಾಭ ಮತ್ತು ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಆಸೆ ಆಕಾಂಕ್ಷೆಗಳು ಈಡೇರುತ್ತವೆ.

ಮಿಲಿಟರಿ, ಬ್ಯಾಂಕ್ ಉದ್ಯೋಗಿಗಳಿಗೆ ಹಾಗೂ ಈ ರಾಶಿಯವರಿಗೆ ಅಧಿಕಾರ ಪ್ರಾಪ್ತಿಯ ಯೋಗವಿದೆ. ಉದ್ಯೋಗದಲ್ಲಿನ ಕಿರಿಕಿರಿಗಳು ಕಡಿಮೆಯಾಗಲಿದ್ದು, ವ್ಯಾಪಾರದಲ್ಲಿ ಲಾಭ ಸಿಗಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥರಿಗೆ ವಿದೇಶ ಯೋಗವಿದೆ. ಈ ಗ್ರಹಣದ ಪ್ರಭಾವದಿಂದ ಒಂದು ತಿಂಗಳೊಳಗಾಗಿ ಸಾಕಷ್ಟು ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ತಾಳ್ಮೆ ಮತ್ತು ಸಹನೆಯಿಂದ ಇರುವುದು ಒಳಿತು ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೈವೇ ಪಕ್ಕದಲ್ಲಿ ಎಸೆದಿದ್ದ ಸೂಟ್​ಕೇಸ್​​ನಲ್ಲಿ ಯುವತಿಯ ಅರೆಬೆಂದ ದೇಹ ಪತ್ತೆ – Kannada News | Punjab Highway Burnt Body: Bathinda Police Investigate Amidst Operation Prahar 2

ಬಟಿಂಡಾ, ಫೆಬ್ರವರಿ 12: ಹೆದ್ದಾರಿಯಲ್ಲಿ ಸೂಟ್​ಕೇಸ್​​ನಲ್ಲಿ ಯುವತಿಯ ಅರೆಬೆಂದ ದೇಹ ಪತ್ತೆಯಾಗಿರುವ ಘಟನೆ ಪಂಜಾಬ್​(Punjab)ನ ಬಟಿಂಡಾದಲ್ಲಿ ನಡೆದಿದೆ. ಯುವತಿಯ ದೇಹ ತೀವ್ರವಾಗಿ ಸುಟ್ಟು ಹೋಗಿತ್ತು. ಬ್ರೀಫ್​ಕೇಸ್​ ಅನ್ನು ರಸ್ತೆಯ ಪಕ್ಕದಲ್ಲಿ ಎಸೆಯಲಾಗಿತ್ತು.ಪೊಲೀಸರು ಪಂಜಾಬ್‌ನಾದ್ಯಂತ ಶೋಧ ಕಾರ್ಯಾಚರಣೆ ಮತ್ತು ಆಪರೇಷನ್ ಪ್ರಹಾರ್ ನಡೆಸುತ್ತಿದ್ದಾರೆ, ಆದರೆ ಇಲ್ಲಿಯವರೆಗೆ, ಮೃತರ ಗುರುತು ಪತ್ತೆಯಾಗಿಲ್ಲ. ಆರೋಪಿಯೂ ಕೂಡ ಸಿಕ್ಕಿಬಿದ್ದಿಲ್ಲ.

ಬಟಿಂಡಾದ ಬೆಹ್ಮನ್ ದಿವಾನಾ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕೆಂಪು ಬ್ರೀಫ್‌ಕೇಸ್‌ನಲ್ಲಿ ಯುವತಿಯ ಭಾಗಶಃ ಸುಟ್ಟ ಶವ ಪತ್ತೆಯಾಗಿದೆ. ವಿಧಿವಿಜ್ಞಾನ ತಂಡ ಮತ್ತು ಬಟಿಂಡಾ ಪೊಲೀಸ್ ಅಧಿಕಾರಿಗಳು ಶವವನ್ನು ವಶಪಡಿಸಿಕೊಂಡ ಸ್ಥಳವನ್ನು ಪರಿಶೀಲಿಸಿದ್ದಾರೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಪೊಲೀಸರ ಪ್ರಕಾರ, ಮೃತ ಯುವತಿ ಯಾರೆಂದು ಇನ್ನೂ ತಿಳಿದುಬಂದಿಲ್ಲ, ಆದರೆ ಪೊಲೀಸರು ಅಪರಾಧದ ಬಗ್ಗೆ ಹೇಳಿಕೆ ನೀಡಿದ್ದು, ಗುರುತಿಸುವಿಕೆಗೆ ಅನುಕೂಲವಾಗುವಂತೆ ಶವವನ್ನು 72 ಗಂಟೆಗಳ ಕಾಲ ಶವಾಗಾರದಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ ಎಂದು ನಗರ ಸಾರ್ವಜನಿಕ ಸೇವಾ ಕಾರ್ಯಕರ್ತ ಸಂದೀಪ್ ಸಿಂಗ್ ಡಿಎಸ್ಪಿ ಹರ್ವಿಂದರ್ ಸಿಂಗ್ ತಿಳಿಸಿದ್ದಾರೆ.

ಆಪರೇಷನ್ ಪ್ರಹಾರ್ ಎಂಬುದು ಪಂಜಾಬ್ ಸರ್ಕಾರವು ವಾಂಟೆಡ್ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಕೈಗೊಂಡಿರುವ ಒಂದು ಕಠಿಣ ಕ್ರಮವಾಗಿದೆ. ಈ ಅಪರಾಧ ವಿರೋಧಿ ಕಾರ್ಯಾಚರಣೆಯ ಭಾಗವಾಗಿ, ಪಂಜಾಬ್‌ನಲ್ಲಿ ವಾಂಟೆಡ್ ಕ್ರಿಮಿನಲ್‌ಗಳ ವಿರುದ್ಧ 72 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 3,200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಮತ್ತಷ್ಟು ಓದಿ: ಗಾಳಿಪಟಕ್ಕೆ ದಾರ ಕೊಡಿಸಲಿಲ್ಲವೆಂದು 11 ವರ್ಷದ ಬಾಲಕ ಆತ್ಮಹತ್ಯೆ

ಈ ಕಾರ್ಯಾಚರಣೆಯ ಇತ್ತೀಚಿನ ಬೆಳವಣಿಗೆಯಲ್ಲಿ, ಸೋಮವಾರ ಪ್ರಾರಂಭವಾದ ಆಪರೇಷನ್ ಪ್ರಹಾರ್ 2 ಎಂಬ ಕಾರ್ಯಾಚರಣೆಯಲ್ಲಿ, ಪೊಲೀಸರು  ಅಪರಾಧಿಗಳು ಸಂಪರ್ಕ ಹೊಂದಿರುವ ಸ್ಥಳಗಳಲ್ಲಿ 8,278 ದಾಳಿಗಳನ್ನು ನಡೆಸಿದ್ದಾರೆ. ಪಂಜಾಬ್ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಅವರು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

ಹಿರಿಯ ಅಧಿಕಾರಿಗಳು ವಿವಿಧ ಪೊಲೀಸ್ ಜಿಲ್ಲೆಗಳಿಗೆ ಭೇಟಿ ನೀಡಿ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ. 12,000 ಸಿಬ್ಬಂದಿಯನ್ನು ಒಳಗೊಂಡ 2,000 ಕ್ಕೂ ಹೆಚ್ಚು ಪೊಲೀಸ್ ತಂಡಗಳು ಇದರಲ್ಲಿ ಭಾಗಿಯಾಗಿದ್ದವು. ಕಾರ್ಯಾಚರಣೆಯ ಒಟ್ಟಾರೆ ಫಲಿತಾಂಶಗಳನ್ನು ಹಂಚಿಕೊಂಡ ವಿಶೇಷ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅರ್ಪಿತ್ ಶುಕ್ಲಾ, ರಾಜ್ಯಾದ್ಯಂತ 7,498 ವ್ಯಕ್ತಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ 3,260 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಬಂಧಿತರಲ್ಲಿ 135 ಘೋಷಿತ ಅಪರಾಧಿಗಳು ಸೇರಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸ್ ತಂಡಗಳು 47 ಶಸ್ತ್ರಾಸ್ತ್ರಗಳು, 4.8 ಕೆಜಿ ಹೆರಾಯಿನ್, 3.6 ಕೆಜಿ ಅಫೀಮು, 42,797 ಮಾದಕ ದ್ರವ್ಯ ಮಾತ್ರೆಗಳು, 68 ಕೆಜಿ ಗಸಗಸೆ ಹಸ್ಕ್ ಮತ್ತು 30 ಲಕ್ಷ ರೂ. ನಗದು ವಶಪಡಿಸಿಕೊಂಡಿವೆ ಎಂದು ಅವರು ಹೇಳಿದರು. 72 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯು ನಿರೀಕ್ಷೆಗಳನ್ನು ಮೀರಿ ತನ್ನ ಉದ್ದೇಶಗಳನ್ನು ಸಾಧಿಸಿದೆ ಮತ್ತು ಪಂಜಾಬ್ ಅನ್ನು ಈ ಬೆದರಿಕೆಯಿಂದ ಮುಕ್ತಗೊಳಿಸುವವರೆಗೆ ‘ಗ್ಯಾಂಗ್‌ಸ್ಟರ್ ತೇ ವಾರ್’ ಅಭಿಯಾನ ಮುಂದುವರೆಯುತ್ತದೆ ಎಂದು ಯಾದವ್ ಹೇಳಿದರು.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮುದ್ದಾದ ಹೆಣ್ಣು ಮಗುವಿಗೆ ನಾಮಕರಣ ಮಾಡಿದ ಶಿವರಾಜ್​​ಕುಮಾರ್ – Kannada News | Shivarajkumar Named A girl who is a daughter Of Rajikanth Close Person

ಶಿವರಾಜ್​​ಕುಮಾರ್ ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. ಅವರು ಈಗ, ಕರ್ನಾಟಕ ರಾಜ್ಯ ರಜಿನಿಕಾಂತ್ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ. ರಜಿನಿ ಸಂತೋಷ್ ಅವರ ಮಗಳಿಗೆ ನಾಮಕರಣ ಮಾಡಿದ್ದಾರೆ. ಆದ್ಯಾ ಎಂಬುದು ಮಗುವಿನ ಹೆಸರು. ರಜನಿ ಟೈಟಲ್ ಕಾರ್ಡ್ ಓಪನ್ ಆಗುವ ರೀತಿಯಲ್ಲೇ ಮಗುವಿನ ಹೆಸರು ರಿವೀಲ್ ಆಗಿದೆ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇವರು ಶಾಲೆ ಮಕ್ಕಳಾ ಅಲ್ಲಾ ಸರಕುಗಳಾ? ಗೂಡ್ಸ್ ರೀತಿ ವಿದ್ಯಾರ್ಥಿಗಳ ಟಿಪ್ಪರ್ ಲಾರೀಲಿ ತುಂಬಿಕೊಂಡು ಹೋದ ಶಿಕ್ಷಕರು! – Kannada News | Students Transported in Tipper Like Goods! Outrage After Viral Video from Dakshina Kannada School

ಮಂಗಳೂರು, ಫೆಬ್ರವರಿ 12: ಶಾಲಾ ಮಕ್ಕಳನ್ನು ಟಿಪ್ಪರ್ ಹಾಗೂ ಪಿಕಪ್ ವಾಹನಗಳಲ್ಲಿ ಸಾಗಾಟ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಳೆಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಜೇನು ಕೃಷಿ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳನ್ನು ಸರಕುಗಳಂತೆ ವಾಹನಗಳಲ್ಲಿ ಕರೆದೊಯ್ಯಲಾಗಿದೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಬೇಕಾದ ಜವಾಬ್ದಾರಿ ಹೊಂದಿರುವ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕಿರಣ್ ಅವರೇ ಈ ವ್ಯವಸ್ಥೆ ಮಾಡಿಸಿದ್ದಾಗಿ ತಿಳಿದುಬಂದಿದೆ. ಟಿಪ್ಪರ್ ಹಾಗೂ ಪಿಕಪ್ ವಾಹನಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಸಾಗಾಟ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕಾನೂನು ಪ್ರಕಾರ, ಕೂಲಿ ಕಾರ್ಮಿಕರನ್ನೂ ಕೂಡ ಈ ರೀತಿಯ ವಾಹನಗಳಲ್ಲಿ ಕರೆದೊಯ್ಯುವಂತಿಲ್ಲ. ಹೀಗಿದ್ದೂ ವಿದ್ಯಾರ್ಥಿಗಳನ್ನೇ ಈ ರೀತಿಯಲ್ಲಿ ಕರೆದೊಯ್ದಿರುವುದು ಗಂಭೀರ ನಿರ್ಲಕ್ಷ್ಯವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಶತಮಾನೋತ್ಸವ ಸಂಭ್ರಮಾಚರಣೆ ನಡೆಸಿದ್ದ ಶಾಲೆಯಲ್ಲಿ ಇಂತಹ ಘಟನೆ ನಡೆದಿರುವುದು ಪ್ರಶ್ನೆಗಳನ್ನು ಹುಟ್ಟಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚುನಾವಣೆ ಹೊಸ್ತಿಲಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಯುವಕನ ಹತ್ಯೆ, ಕೈ-ಕಾಲುಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಶವ ಪತ್ತೆ – Kannada News | Bangladesh Election Eve: Another Hindu Youth Murdered, Sparks Minority Safety Fears

ಢಾಕಾ, ಫೆಬ್ರವರಿ 12: ಬಾಂಗ್ಲಾದೇಶ(Bangladesh)ದ ಸಾರ್ವತ್ರಿಕ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ. ಬಾಂಗ್ಲಾದೇಶದ ಮೌಲ್ವಿಬಜಾರ್ ಜಿಲ್ಲೆಯಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ. ಬುಧವಾರ 28 ವರ್ಷದ ಹಿಂದೂ ವ್ಯಕ್ತಿಯೊಬ್ಬನನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಆತನ ದೇಹವು ಪತ್ತೆಯಾಗಿದ್ದು, ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ಮತ್ತೆ ಆತಂಕ ಮೂಡಿದೆ.

ಮೃತರನ್ನು ರತನ್ ಸಾಹುಕರ್ ಎಂದು ಗುರುತಿಸಲಾಗಿದೆ. ರತನ್ ಚಂಪಾ ಪ್ರದೇಶದ ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಅವರ ಶವ ಪತ್ತೆಯಾಗಿದೆ. ಶವ ಪತ್ತೆಯಾದಾಗ, ರತನ್ ಅವರ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಲಾಗಿತ್ತು ಮತ್ತು ಅವರ ದೇಹದಲ್ಲಿ ತೀವ್ರ ಗಾಯಗಳಾಗಿದ್ದವು, ಅದರಿಂದ ವಿಪರೀತ ರಕ್ತಸ್ರಾವವೂ ಆಗುತ್ತಿತ್ತು.

ರತನ್ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇದು ಪೂರ್ವನಿಯೋಜಿತ ಕೊಲೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಕೈಕಾಲುಗಳನ್ನು ಕಟ್ಟಲಾಗಿದ್ದ ರೀತಿ ಮತ್ತು ಅವರ ದೇಹದ ಮೇಲಿನ ಗಾಯಗಳು ಇದು ಅಪಘಾತವಲ್ಲ.ಬದಲಾಗಿ ಪಿತೂರಿ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಕೊಲೆ ಚುನಾವಣೆಗೆ ಸಂಬಂಧಿಸಿದೆಯೇ ಅಥವಾ ಬೇರೆ ಯಾವುದಾದರೂ ಉದ್ದೇಶವಿದೆಯೇ ಎಂದು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಮಯದಲ್ಲಿ ಪೊಲೀಸರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಇದೊಂದೇ ಘಟನೆಯಲ್ಲ. ಕೆಲವು ದಿನಗಳ ಹಿಂದೆ, ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಮತ್ತೊಬ್ಬ ಹಿಂದೂ ಉದ್ಯಮಿ ಸುಶೇನ್ ಚಂದ್ರ ಸರ್ಕಾರ್ (62) ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು ಸುಶೇನ್ ಅಕ್ಕಿ ವ್ಯಾಪಾರ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ದಾಳಿಕೋರರು ಅವರ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ, ರಕ್ತಸ್ರಾವವಾಗುವ ಸ್ಥಿತಿಯಲ್ಲಿ ಅಂಗಡಿಯೊಳಗೆ ಬೀಗ ಹಾಕಿ ಪರಾರಿಯಾಗಿದ್ದರು.

ಮತ್ತಷ್ಟು ಓದಿ: Bangladesh Elections 2026: ಬಾಂಗ್ಲಾದೇಶದಲ್ಲಿ ಇಂದು ಸಾರ್ವತ್ರಿಕ ಚುನಾವಣೆ, ಅವಾಮಿ ಲೀಗ್ ಸ್ಪರ್ಧೆಯಿಂದ ಹೊರಕ್ಕೆ

ಅಂಗಡಿಯಿಂದ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಸಂಜೆ 4.30 ರವರೆಗೆ ಮುಂದುವರಿಯಲಿದೆ. ಮತ ಎಣಿಕೆ ನಂತರ ತಕ್ಷಣವೇ ಆರಂಭವಾಗಲಿದೆ. ಶೇಖ್ ಹಸೀನಾ ಅವರ 15 ವರ್ಷಗಳ ಆಡಳಿತ ಕೊನೆಗೊಂಡ 18 ತಿಂಗಳ ನಂತರ ಈ ಚುನಾವಣೆಗಳು ನಡೆಯುತ್ತಿವೆ.

ಪ್ರಸ್ತುತ, ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ದೇಶವನ್ನು ನಡೆಸುತ್ತಿದೆ. ಮೊಹಮ್ಮದ್ ಯೂನಸ್ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಪ್ರಜಾಪ್ರಭುತ್ವ ನಿಯಮಗಳನ್ನು ಅನುಸರಿಸಲು ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ ಕ್ಯಾಪ್ಟನ್ – Kannada News | Travis Head Leads Australia in T20 World Cup 2026

T20 World Cup 2026: ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡ ಅಭಿಯಾನ ಆರಂಭಿಸಿದೆ. ಅದು ಕೂಡ ಟ್ರಾವಿಸ್ ಹೆಡ್ ಮುಂದಾಳತ್ವದಲ್ಲಿ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಟಿ20 ವಿಶ್ವಕಪ್​ನ 14ನೇ ಪಂದ್ಯದಲ್ಲಿ ಐರ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದ ಟ್ರಾವಿಸ್ ಹೆಡ್.

ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಅಭ್ಯಾಸದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಗಾಯದ ಕಾರಣ ಅವರು ಐರ್ಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ. ಅಷ್ಟೇ ಅಲ್ಲದೆ ಗಾಯವು ಗಂಭೀರವಾಗಿರುವ ಕಾರಣ ಅವರು ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಯುವುದರ ಬಗ್ಗೆ ಖಚಿತತೆ ಇಲ್ಲ. ಹೀಗಾಗಿ ಮೀಸಲು ಆಟಗಾರನಾಗಿ ಸ್ಟೀವ್ ಸ್ಮಿತ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಇತ್ತ ಮಿಚೆಲ್ ಮಾರ್ಷ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಟ್ರಾವಿಸ್ ಹೆಡ್ ಮುನ್ನಡೆಸಿದ್ದಾರೆ. ಇನ್ನು ಮುಂದಿನ ಪಂದ್ಯದಿಂದಲೂ ಮಾರ್ಷ್ ಹೊರಗುಳಿಯುವ ಸಾಧ್ಯತೆಯಿದ್ದು, ಹೀಗಾಗಿ ಝಿಂಬಾಬ್ವೆ ವಿರುದ್ಧ ಕೂಡ ಹೆಡ್ ಸಾರಥ್ಯದಲ್ಲಿ ಆಸ್ಟ್ರೇಲಿಯಾ ಕಣಕ್ಕಿಳಿಯಲಿದೆ.

ಇನ್ನು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ 16.5 ಓವರ್​ಗಳಲ್ಲಿ 115 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವು ತನ್ನ ಮೊದಲ ಪಂದ್ಯದಲ್ಲಿ 67 ರನ್​ಗಳ ಭರ್ಜರಿ ಜಯ ಸಾಧಿಸಿದೆ.

 

Source link

45 ವರ್ಷಗಳ ಹಿಂದೆ 90 ಕೆಜಿ ಗೋಧಿ ಕದ್ದಿದ್ದ ಕಳ್ಳ ಈಗ ಅರೆಸ್ಟ್​ – Kannada News | 45 Years Later Madhya Pradesh Man Arrested Over Alleged Wheat Theft from 1980

ಭೋಪಾಲ್, ಫೆಬ್ರವರಿ 12: ನಲವತ್ತೈದು ವರ್ಷಗಳ ಹಿಂದೆ 90 ಕೆಜಿ ಗೋಧಿ(Wheat) ಕದ್ದಿದ್ದ ವ್ಯಕ್ತಿಯನ್ನು ಈಗ ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 1980ರಲ್ಲಿ ಈ ಘಟನೆ ನಡೆದಿತ್ತು. ಅದಾದ ಬಳಿಕ ವ್ಯಕ್ತಿ ತಲೆ ಮರೆಸಿಕೊಂಡಿದ್ದ. ಈ ಘಟನೆ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಸಲೀಂ(59)ಎಂದು ಗುರುತಿಸಲಾಗಿದ್ದು,ಪಕ್ಕದ ಧಾರ್ ಜಿಲ್ಲೆಯ ಬಾಗ್ ಪಟ್ಟಣದಲ್ಲಿ ಬಂಧಿಸಲಾಗಿದೆ. ಆತ ರಹಸ್ಯವಾಗಿ ವಾಸಿಸುತ್ತಿದ್ದ ಮತ್ತು ತನ್ನ ಮಗನೊಂದಿಗೆ ಸಣ್ಣ ದಿನಸಿ ಅಂಗಡಿ ನಡೆಸುತ್ತಿದ್ದ. ಕಳ್ಳತನ ನಡೆದ ಸಮಯದಲ್ಲಿ ಗೋಧಿಯ ಮೌಲ್ಯ 184 ರೂ. ಆಗಿದ್ದು, ಪ್ರತಿ ಕಿಲೋಗ್ರಾಂಗೆ 2.05 ರೂ. ದರ ಇತ್ತು.

1980 ರ ಹಿಂದಿನ ಪ್ರಕರಣ ಇದಾಗಿದ್ದು, ಖಾರ್ಗೋನ್ ಜಿಲ್ಲೆಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಬಾಲ್ಸಮುದ್ ಪ್ರದೇಶದ ಬಳಿಯ ಹೊಲದಲ್ಲಿ ಗೋಧಿಯನ್ನು ಕದ್ದಿದ್ದಕ್ಕಾಗಿ ಏಳು ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು, ಆದರೆ ಅವರಲ್ಲಿ ಇಬ್ಬರು ತಲೆಮರೆಸಿಕೊಂಡಿದ್ದರು. ವರ್ಷಗಳಲ್ಲಿ, ಏಳು ಆರೋಪಿಗಳಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಇತರ ನಾಲ್ವರು ಜಾಮೀನು ಪಡೆದಿದ್ದಾರೆ. ಸಲೀಂ ಇಲ್ಲಿಯವರೆಗೆ ಪತ್ತೆಯಾಗಿರಲಿಲ್ಲ.

ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ, ಶಾಶ್ವತವಾಗಿ ತಲೆಮರೆಸಿಕೊಂಡಿರುವವರನ್ನು ಪತ್ತೆಹಚ್ಚಲು ತಂಡಗಳನ್ನು ಸಕ್ರಿಯಗೊಳಿಸಲಾಯಿತು. 1980 ರ ಹಳೆಯ ಕಳ್ಳತನ ಪ್ರಕರಣವನ್ನು ಪರಿಶೀಲಿಸುವಾಗ, ಒಬ್ಬ ಆರೋಪಿ ಇನ್ನೂ ಕಾಣೆಯಾಗಿದ್ದಾನೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ. ಆತನನ್ನು ಧಾರ್ ಜಿಲ್ಲೆಯ ಬಾಗ್‌ನಿಂದ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಎಸ್‌ಡಿಒಪಿ ಶ್ವೇತಾ ಶುಕ್ಲಾ ಹೇಳಿದ್ದಾರೆ.

ಮತ್ತಷ್ಟು ಓದಿ: ಕೃಷಿ ಕ್ಷೇತ್ರಕ್ಕೆ ತೊಂದರೆ ಇಲ್ಲ, ರೈತರು ಸೇಫ್; ಭಾರತ-ಅಮೆರಿಕ ಟ್ರೇಡ್ ಡೀಲ್​ನಲ್ಲಿ ಏನೇನಿದೆ?

ಪೊಲೀಸರ ಪ್ರಕಾರ, ಸಲೀಂ ತನ್ನ ಗುರುತನ್ನು ಬದಲಾಯಿಸಿಕೊಂಡು ಅಪರಾಧ ಸ್ಥಳದಿಂದ ಕೇವಲ 90 ಕಿ.ಮೀ ದೂರದಲ್ಲಿ ವಾಸವಿದ್ದ. ಕಿರಾಣಿ ಅಂಗಡಿ ನಡೆಸುತ್ತಿದ್ದ, ಬಂಧನದ ನಂತರ, ಆತನನ್ನು ಕಾಸ್ರಾವಾಡ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

ಇಷ್ಟು ವರ್ಷಗಳ ನಂತರ ಪೊಲೀಸರು ಇನ್ನು ಮುಂದೆ ಈ ಪ್ರಕರಣವನ್ನು ಮುಂದುವರಿಸುವುದಿಲ್ಲ ಎಂದು ಆತ ಭಾವಿಸಿದ್ದ. ಅದಕ್ಕಾಗಿ ಎಂದಿನಂತೆ ಕೆಲಸ ಮುಂದುವರೆಸಿದ್ದ. ಬಂಧನವು ಕುಟುಂಬದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಲೀಂ ಅವರ ಪತ್ನಿ ತಸ್ಲೀಂ ಅವರು ಕಳ್ಳತನ ನಡೆದಾಗ ಅವರು ಅಪ್ರಾಪ್ತರಾಗಿದ್ದರು ಎಂದು ಆರೋಪಿಸಿದ್ದಾರೆ.

ಆಗ ಅವರಿಗೆ ಕೇವಲ 13 ರಿಂದ 15 ವರ್ಷ ವಯಸ್ಸಾಗಿತ್ತು.5 ವರ್ಷಗಳ ನಂತರ ಅಪ್ರಾಪ್ತ ವಯಸ್ಕನ ವಿರುದ್ಧ ಪ್ರಕರಣ ಹೇಗೆ ನಡೆಯುತ್ತದೆ ಎಂದು ಪ್ರಶ್ನಿಸಿದ್ದಾರೆ. ಜಾಮೀನಿಗೆ 15 ಸಾವಿರ ರೂ ಮತ್ತು ದೂರುದಾರನಿಗೆ 6 ಸಾವಿರ ರೂ. ಪಾವತಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link