ಇಬ್ಬರೂ ಕುಡಿದ ಮತ್ತಿನಲ್ಲಿದ್ರು, ಸ್ನೇಹಿತ ಮ್ಯಾನ್‌ಹೋಲ್‌ಗೆ ಬಿದ್ರೂ ಗೊತ್ತಾಗಲಿಲ್ಲ – Kannada News | Man Dies After Falling Into Open Drain Near Rohini Temple in Delhi
ನವದೆಹಲಿ, ಫೆಬ್ರವರಿ 11: ವ್ಯಕ್ತಿಯೊಬ್ಬರು ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ ರೋಹಿಣಿ ಸೆಕ್ಟರ್ 32 ರ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿಯಲ್ಲಿ ಕಾರ್ಮಿಕ ಬಿರ್ಜು ಕುಮಾರ್ ಮತ್ತು ಅವರ ಸ್ನೇಹಿತ ಮನೆಗೆ ಹೋಗುತ್ತಿದ್ದಾಗ ಕುಮಾರ್ಕ್ತಿ ಮ್ಯಾನ್‌ಹೋಲ್‌ಗೆ ಬಿದ್ದಿದ್ದರು. ಘಟನೆ ನಡೆದ ಸಮಯದಲ್ಲಿ ಕುಮಾರ್ ಮತ್ತು ಅವರ ಸ್ನೇಹಿತ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು, ಸ್ನೇಹಿತನಿಗೆ ಕುಮಾರ್ ಬಿದ್ದಿರುವ ಪರಿವೇ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ನೇಹಿತ ಮರುದಿನ ಕುಮಾರ್‌ಗೆ ಕರೆ ಮಾಡಲು…