ದಿನ ಭವಿಷ್ಯ: ಇಂದು ಈ ರಾಶಿಯವರು ಯಾರನ್ನೂ ಯಾವುದನ್ನೂ ನಂಬಲಾರರು – Kannada News | Horoscope 08 February 2026; Dina Rashi Bhavishya Today, Checkout the details here
ಮೇಷ ರಾಶಿ: ಅನಿರೀಕ್ಷಿತ ಸುದ್ದಿಯು ನಿಮ್ಮ ಮನಸ್ಸಿಗೆ ಘಾಸಿಯನ್ನು ಮಾಡಬಹುದು. ಇನ್ನೊಬ್ಬರನ್ನು ದೂರುತ್ತ ನಿಮ್ಮ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ಬಡ್ತಿಯಲ್ಲಿ ಸುಧಾರಣೆ ಇರಲಿದೆ. ದಾಂಪತ್ಯ ಜೀವನವನ್ನು ಜೋಪಾನವಾಗಿ ನಡೆಸಬೇಕಾದೀತು. ಮಕ್ಕಳ ಕೆಲವು ಘಟನೆಗಳು ನಿಮ್ಮನ್ನು ಭ್ರಾಂತಗೊಳಿಸಬಹುದು. ಇಂದು ದೇಹಕ್ಕೂ ಮನಸ್ಸಿಗೂ ಸ್ವಲ್ಪ ವಿಶ್ರಾಂತಿಯನ್ನು ನೀಡಿ. ಆಗಬೇಕಾಗಿರುವ ಕೆಲಸವನ್ನು ನೀವು ಪಟ್ಟಿ ಮಾಡಿ. ಸ್ತ್ರೀಯರ ಸಹವಾಸವು ಅಧಿಕವಾಗಿರುವುದು. ವೃಷಭ ರಾಶಿ: ಸಂಗಾತಿಯ ನಡುವಿನ ಮಾತುಕತೆಗಳು ವಿಕೋಪಕ್ಕೆ ಹೋಗಬಹುದು. ಪ್ರೀತಿಯು ಇರಬೇಕಾದ ಸ್ಥಳದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳುವುದು. ನೀವು ಅಂದುಕೊಂಡಿದ್ದು ಮಾತ್ರವೇ ಸತ್ಯವಾಗದು….