All posts by nagaraj11081993

100 ಸಿಕ್ಸರ್​ಗಳೊಂದಿಗೆ ವಿಶ್ವ ದಾಖಲೆ ಬರೆದ ವೈಭವ್ ಸೂರ್ಯವಂಶಿ – Kannada News | Vaibhav Suryavanshi Creates New World Record In Youth ODI

ಯೂತ್ ಒಡಿಐ ಕ್ರಿಕೆಟ್​ನಲ್ಲಿ ವೈಭವ್ ಸೂರ್ಯವಂಶಿಯ (Vaibhav Suryavanshi) ಸಿಡಿಲಬ್ಬರ ಮುಂದುವರೆದಿದೆ. ಈ ಹಲವು ದಾಖಲೆ ನಿರ್ಮಿಸಿದ್ದ ವೈಭವ್ ಇದೀಗ ಒಂದೇ ಪಂದ್ಯದ ಮೂಲಕ ಭರ್ಜರಿ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲೂ ಸಿಕ್ಸರ್​ಗಳ ಮೂಲಕವೇ ಹೊಸ ಇತಿಹಾಸವನ್ನು ಸಹ ನಿರ್ಮಿಸಿದ್ದಾರೆ.

Source link

ಜೀ5ನಲ್ಲಿ ಬರ್ತಿದೆ ‘ರಾಕ್ಷಸ’ ವೆಬ್ ಸೀರಿಸ್; ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ ಎಂಟ್ರಿ – Kannada News | Rakshasa Web Series: Vijay Raghavendra’s Crime Psychological Thriller Premieres on Zee5

ಪರಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿ ವೆಬ್ ಸೀರಿಸ್​​ಗಳ ಸಂಖ್ಯೆ ತುಂಬಾನೇ ಕಡಿಮೆ. ಆ ಕೊರತೆಯನ್ನು ನೀಗಿಸುವ ಕೆಲಸ ಜೀ5 ಕಡೆಯಿಂದ ಆಗುತ್ತಿದೆ. ‘ಅಯ್ಯನ ಮನೆ’, ‘ಮಾರಿಗಲ್ಲು’ (Marigallu) ಬಳಿಕ ಜೀ 5 ಕನ್ನಡ ಹೊಸದಾದ ಒರಿಜಿನಲ್ ಸಿರೀಸ್ ಘೋಷಿಸಿದೆ. ಈ ಸರಣಿಗೆ ‘ರಾಕ್ಷಸ’ ಎಂಬ ಟೈಟಲ್ ಇಟ್ಟಿದೆ. ಅಪರಾಧದ ಕಥೆಯ ಸುತ್ತ ಸಿನಿಮಾ ಸಾಗಲಿದೆ. ಟ್ರೇಲರ್ ವೆಬ್ ಸರಣಿ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ವಿಜಯ್ ರಾಘವೇಂದ್ರ ಅವರು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಕಿರುತೆರೆಯಲ್ಲೂ ಆ್ಯಕ್ಟೀವ್ ಆಗಿದ್ದು, ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದಾರೆ. ಈಗ ಅವರು ವೆಬ್ ಸರಣಿ ಲೋಕಕ್ಕೆ ಕಾಲಿಟ್ಟಿದ್ದಾರೆ. ‘ರಾಕ್ಷಸ’ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಮೊದಲಾದವರು ನಟಿಸಿದ್ದಾರೆ.

ಸುಹಾನ್ ಪ್ರಸಾದ್ ಮತ್ತು ಅಪೂರ್ವ ‘ರಾಕ್ಷಸ’ ಸರಣಿಗೆ ಕಥೆ ಬರೆದಿದ್ದಾರೆ. ಸುಹಾನ್ ಪ್ರಸಾದ್ ನಿರ್ದೇಶನ ಸರಣಿಗೆ ಇದೆ. ತರುಣ್‌ಸುಧೀರ್ ತಮ್ಮದೇ ‘ತರುಣ್ ಸುಧೀರ್ ಪ್ರೊಡಕ್ಷನ್ಸ್’ ಮೂಲಕ ಇದನ್ನು ನಿರ್ಮಿಸಿದ್ದಾರೆ.
ವೆಬ್ ಸೀರಿಸ್ ಲೋಕಕ್ಕೆ ಕಾಲಿಡುವುದಕ್ಕೆ ವಿಜಯ್​ಗೆ ಖುಷಿ ಇದೆ. ‘ಒಟಿಟಿ ಜಗತ್ತಿಗೆ ಇದು ನನ್ನ ಮೊದಲ ಹೆಜ್ಜೆ. ಒಟಿಟಿ ಪ್ರಯಾಣ ಆರಂಭಿಸಲು ಇದು ಸೂಕ್ತ ಕಥೆ’ ಎಂದು ವಿಜಯ್ ಹೇಳಿದ್ದಾರೆ. ಕನ್ನಡಕ್ಕೆ ವೆಬ್ ಸರಣಿಗಳನ್ನು ತರುವ ಪ್ರಯತ್ನ ಮಾಡುತ್ತಿರುವ ಜೀ5 ಗೆ ಅವರು ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ‘ಮಾರಿಗಲ್ಲು’ ವೆಬ್ ಸರಣಿಯಲ್ಲಿ ಪುನೀತ್ ರಾಜ್​​ಕುಮಾರ್: ಜೀ5 ಒಟಿಟಿಯಲ್ಲಿ ಅ.31ರಿಂದ ಪ್ರಸಾರ

ಕ್ರೈಮ್ ಸೈಕಾಲಜಿಕಲ್ ಕಥಾಹಂದರ ಹೊಂದಿರುವ ರಾಕ್ಷಸ ‘ಸರಣಿ’ ಏಳು ಎಪಿಸೋಡ್​​ಗಳನ್ನು ಹೊಂದಿದೆ. ಫೆಬ್ರವರಿ 20ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ‘ಅಯ್ಯನ ಮನೆ’ ಹಾಗೂ ‘ಮಾರಿಗಲ್ಲು’ ಎರಡೂ ಸರಣಿಗಳು ಗಮನ ಸೆಳೆದವು. ಈಗ ಈ ಸರಣಿ ಮತ್ತಷ್ಟು ಜನರಿಗೆ ತಲುಪುತ್ತದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 7:41 am, Sat, 7 February 26

Source link

2 ಮುಹೂರ್ತ ಮಿಸ್, ಈ ಬಾರಿ ತಪ್ಪಲ್ಲ: ಯತೀಂದ್ರಗೆ ಡಿಕೆಶಿ ಆಪ್ತರ ಟಾಂಗ್ – Kannada News | Karnataka Congress Power Struggle: DK Shivakumar Camp Hits Back After Yathindra’s ‘5 Years CM’ Statement

ಡಿಕೆ ಶಿವಕುಮಾರ್, ಸಿದ್ದರಾಮಯ್ಯImage Credit source: tv9

ಬೆಂಗಳೂರು, ಫೆಬ್ರವರಿ 7: ಕಾಂಗ್ರೆಸ್​ನಲ್ಲಿ (Congress) ಅಧಿಕಾರದ ಪಗಟೆಯಾಟ ನಿಂತಿಲ್ಲ. ಗದ್ದುಗೆ ಏರಲು ಒಂದು ಬಣ ರಣತಂತ್ರ ಹೆಣೆಯುತ್ತಿದ್ದರೆ, ಪಟ್ಟ ಬಿಟ್ಟುಕೊಡದಿರಲು ಮತ್ತೊಂದು ಬಣ ಪಟ್ಟು ಹಿಡಿದು ಕುಳಿತಿದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ (Siddaramaiah) ಪುತ್ರ ಯತೀಂದ್ರ ಆಡಿದ ಮಾತು ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ಕಿಚ್ಚು ಹೊತ್ತಿಸಿದೆ. ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ, 5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದಿದ್ದಾರೆ. ಯತೀಂದ್ರ ಮತ್ತೆ ಈ ಮಾತು ಹೇಳುವುದಕ್ಕೂ ಕಾರಣವಿದೆ. ದಾವಣಗೆರೆಯಲ್ಲಿ ಮಾತನಾಡಿದ್ದ ಶಾಸಕ ಬಸವರಾಜ್ ಶಿವಗಂಗಾ, ಅಧಿಕಾರ ಹಂಚಿಕೆ ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಬಿಡಿ ಎಂದಿದ್ದರು. ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಆಪ್ತ ಈ ಮಾತು ಹೇಳುತ್ತಿದ್ದಂತೆಯೇ ಯತೀಂದ್ರ ನೇರವಾಗಿಯೇ ಕಣಕ್ಕಿಳಿದಿದ್ದಾರೆ. ಕೆಲವರು ಬದಲಾವಣೆಗೆ ಪ್ರಯತ್ನ ಪಟ್ಟರು. ಆದರೆ ಅದು ಸಕ್ಸಸ್ ಆಗಲಿಲ್ಲ. ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಯಾವಾಗ ಯತೀಂದ್ರ ಈ ಮಾತುಗಳನ್ನಾಡಿದರೋ ಡಿಸಿಎಂ ಬಣದ ಶಾಸಕರು ಕೂಡ ಹೇಳಿಕೆಗಳನ್ನು ನೀಡಲು ಆರಂಭಿಸಿದರು. ಹಿಂದೆ ಇಟ್ಟಿದ್ದ ಎರಡು ಮುಹೂರ್ತ ಮಿಸ್ ಆಗಿದೆ. ಈ ಬಾರಿ ತಪ್ಪೋ ಮಾತೇ ಇಲ್ಲ ಎಂದು ಡಿಕೆ ಶಿವಕುಮಾರ್ ಆಪ್ತ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.

ಅತ್ತ ಸಿಎಂ ಪುತ್ರನಿಗೆ ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ನೇರವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಯತೀಂದ್ರನೇ ನಮ್ಮ ಹೈಕಮಾಂಡ್. ಅವರು ಹೇಗೇ ಹೇಳ್ತಾರೋ ಹಾಗೇ ಕೇಳೋಣ ಎಂದು ವ್ಯಂಗ್ಯವಾಡಿದ್ದಾರೆ.

ಡಿಕೆ ಸಿಎಂ ಆಗಲು ಇನ್ನೊಂದು ಸ್ಟೆಪ್ ಬಾಕಿ ಎಂದ ಆಪ್ತರು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲೂ ಡಿಸಿಎಂ ಡಿಕೆಯದ್ದೇ ಜಪ ನಡೆದಿದೆ. ಡಿಕೆ ಶಿವಕುಮಾರ್ ಸಿಎಂ ಆಗಿ ಬಂದು ಕಾಂಗ್ರೆಸ್ ಭವನ ಉದ್ಘಾಟಿಸಲಿ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಇನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕೂಡ, ಡಿಕೆಶಿ ಸಿಎಂ ಆಗಲು ಇನ್ನೊಂದು ಸ್ಟೆಪ್ ಮಾತ್ರ ಬಾಕಿ ಎನ್ನುವ ಮೂಲಕ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.

ಪ್ರಯತ್ನ ವಿಫಲ ಆಗಬಹುದು, ಪ್ರಾರ್ಥನೆ ವಿಫಲ ಆಗಲ್ಲ: ಡಿಕೆ ಶಿವಕುಮಾರ್

ಅತ್ತ ಆಪ್ತರೆಲ್ಲರೂ ಮಾತನಾಡಿದ ಬಳಿಕ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬೆಂಬಲಿಗರ ‘ಪ್ರಾರ್ಥನೆ’ ವಿಫಲ ಆಗಲ್ಲ. ಪ್ರಯತ್ನ ವಿಫಲ ಆಗಬಹುದು, ಪ್ರಾರ್ಥನೆ ವಿಫಲ ಆಗಲ್ಲ ಎಂದಿದ್ದಾರೆ. ಹೊರಗೆ ಇಷ್ಟೆಲ್ಲಾ ಆಗುತ್ತಿದ್ದರೂ ಪುತ್ರನ ಮಾತಿಗೆ ಸಿಎಂ ಸಿದ್ದರಾಮಯ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಹಿರಿಯ ಸಚಿವರು ಸಿಎಂ-ಡಿಸಿಎಂ ಬಣದ ವಾಕ್ಸಮರಕ್ಕೆ ಬ್ರೇಕ್ ಹಾಕಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ, ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ

ಒಟ್ಟಿನಲ್ಲಿ, ಕಾಂಗ್ರೆಸ್ ಬಣಗಳಲ್ಲಿ ಕುರ್ಚಿ ಕದನದ ಚರ್ಚೆ ನಡೆಯುತ್ತಿದ್ದರೆ, ಸಿಎಂ ಸಿದ್ದರಾಮಯ್ಯ ಮಾತ್ರ ಶುಕ್ರವಾರವೂ ಬಜೆಟ್ ಸಿದ್ಧತೆಯ ಸಭೆಗಳನ್ನು ನಡೆಸಿದ್ದಾರೆ. ಆ ಮೂಲಕ ಯಾರಿಗೆ, ಎಲ್ಲಿ ಸಂದೇಶ ಮುಟ್ಟಿಸಬೇಕೋ ಅದನ್ನು ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB ತಂಡದ್ದು ಅಂತಿಂಥ ಗೆಲುವಲ್ಲ… ವಿಶ್ವ ದಾಖಲೆಯ ವಿಜಯ – Kannada News | RCB Creates New World Record In T20 Cricket

ಟಿ20 ಕ್ರಿಕೆಟ್ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ 200+ ರನ್​ಗಳನ್ನು ಬೆನ್ನತ್ತಿ ಗೆದ್ದಿರುವುದು ಕೇವಲ ಮೂರು ತಂಡಗಳು ಮಾತ್ರ. ಈ ಮೂರು ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಒಂದು. ಅದರಲ್ಲೂ ಈ ಸಾಧನೆ ಮಾಡಿದ ಏಕೈಕ ಮಹಿಳಾ ತಂಡ ಆರ್​ಸಿಬಿ.

 ವಡೋದರಾದ ಬಿಸಿಎ ಸ್ಟೇಡಿಯಂನಲ್ಲಿ ನಡೆದ WPL ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಆರ್​ಸಿಬಿ 2ನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ ಕಲೆಹಾಕಿತು.

ಈ ಕಠಿಣ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕಳಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ ಕೇವಲ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಜೊತೆಗೂಡಿ ಸ್ಮೃತಿ ಮಂಧಾನ (87) ಹಾಗೂ ಜಾರ್ಜಿಯಾ ವೊಲ್ (79) ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಎರಡು ಅರ್ಧಶತಕಗಳ ನೆರವಿನೊಂದಿಗೆ ಆರ್​​ಸಿಬಿ 19.4 ಓವರ್​ಗಳಲ್ಲಿ 204 ರನ್​ ಬಾರಿಸಿ 6 ವಿಕೆಟ್​ಗಳ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವು ಅಂತಿಂಥ ಗೆಲುವಲ್ಲ. ಬದಲಾಗಿ ವಿಶ್ವ ದಾಖಲೆಯ ವಿಜಯ. ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಫೈನಲ್​ ಮ್ಯಾಚ್​ನಲ್ಲಿ 200+ ಸ್ಕೋರ್ ಬೆನ್ನತ್ತಿ ಗೆದ್ದಿರುವುದು ಕೇವಲ 3 ತಂಡಗಳು ಮಾತ್ರ. ಈ ಸಾಧನೆ ಮಾಡಿದ ಮೊದಲ ತಂಡ ಕೊಲ್ಕತ್ತಾ ನೈಟ್ ರೈಡರ್ಸ್. ಇದಾದ ಬಳಿಕ ಲಾಹೋರ್ ಖಲಂದರ್ಸ್ ಕೂಡ ಭರ್ಜರಿ ಚೇಸಿಂಗ್​ನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ 200+ ಸ್ಕೋರ್​ ಬೆನ್ನತ್ತಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದೆ.

2014 ರಲ್ಲಿ ನಡೆದ ಐಪಿಎಲ್​ ಫೈನಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್​) ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 200 ರನ್​ಗಳನ್ನು ಬೆನ್ನತ್ತಿದ 3 ವಿಕೆಟ್​ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

2024 ರಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ ಫೈನಲ್ ಪಂದ್ಯದಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧ ಲಾಹೋರ್ ಖಲಂದರ್ಸ್ ತಂಡವು 19.5 ಓವರ್​ಗಳಲ್ಲಿ 204 ರನ್​ಗಳನ್ನು ಬೆನ್ನತ್ತಿ ಚಾಂಪಿಯನ್ ಪಟ್ಟಕ್ಕೇರಿದಿದ್ದರು.

ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್​ನ ಫೈನಲ್​​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 204 ರನ್​ಗಳ ಗುರಿಯನ್ನು ಕೇವಲ 19.4 ಓವರ್​ಗಳಲ್ಲಿ ಚೇಸ್ ಮಾಡಿ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ 200+ ರನ್ ಚೇಸ್ ಮಾಡಿ ಗೆದ್ದ ವಿಶ್ವದ ಮೊದಲ ಮಹಿಳಾ ತಂಡ ಎಂಬ ವಿಶ್ವ ದಾಖಲೆಯನ್ನು ಆರ್​ಸಿಬಿ ತಂಡ ತನ್ನದಾಗಿಸಿಕೊಂಡಿದೆ.

Published On – 7:34 am, Sat, 7 February 26

Source link

Horoscope Today 07 February​: ಇಂದು ಈ ರಾಶಿಯವರಿಗೆ ಡಬಲ್ ಅದೃಷ್ಟ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 06, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾಸನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಷಷ್ಠಿ, ಚಿತ್ತಾ ನಕ್ಷತ್ರ, ಶೂಲಯೋಗ, ಮತ್ತು ಗರಜಕರಣೆಗಳಿಂದ ಕೂಡಿದೆ.

ದಿನದ ರಾಹುಕಾಲವು ಬೆಳಿಗ್ಗೆ 9 ಗಂಟೆ 39 ನಿಮಿಷದಿಂದ 11 ಗಂಟೆ 6 ನಿಮಿಷದ ತನಕ ಇರುತ್ತದೆ. ಸಂಕಲ್ಪ ಕಾಲ, ಸರ್ವಸಿದ್ಧಿ ಕಾಲ, ಮತ್ತು ಶುಭಕಾಲವು ಮಧ್ಯಾಹ್ನ 2 ಗಂಟೆ 1 ನಿಮಿಷದಿಂದ 3 ಗಂಟೆ 28 ನಿಮಿಷದ ತನಕ ಇರುತ್ತದೆ. ಶನಿವಾರದ ಮಹತ್ವವನ್ನು ವಿವರಿಸುತ್ತಾ, ವೆಂಕಟೇಶ್ವರ, ಹನುಮ ಮತ್ತು ಶನೇಶ್ವರ ದೇವರ ಲಹರಿಗಳು ಈ ದಿನದ ಮೇಲೆ ಪ್ರಭಾವ ಬೀರುತ್ತವೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ತಿರುಪತಿ ಲಡ್ಡು ತಯಾರಿಸಲು ಬಳಸಿದ್ರಾ ಬಾತ್​ರೂಮ್ ಸ್ವಚ್ಛಗೊಳಿಸುವ ರಾಸಾಯನಿಕ? ಹಿಂದಿನ ಸರ್ಕಾರದ ವಿರುದ್ಧ ನಾಯ್ಡು ಸ್ಫೋಟಕ ಆರೋಪ – Kannada News | Tirupati Laddu Controversy: CM Chandrababu Naidu Alleges Adulterated Ghee With Cleaning Chemicals Under Jagan Govt

ತಿರುಪತಿ ಲಡ್ಡು (ಸಾಂದರ್ಭಿಕ ಚಿತ್ರ)Image Credit source: TV9 Network

ಹೈದರಾಬಾದ್, ಫೆಬ್ರವರಿ 7: ಜಗತ್​ಪ್ರಸಿದ್ಧ ತಿರುಪತಿ ತಿಮ್ಮಪ್ಪನ ಲಡ್ಡು  (Tirupati Laddu) ಲಡಾಯಿ ಮುಂದುವರಿದಿದೆ. ಸ್ನಾನಗೃಹ, ಶೌಚಗೃಹ ಸ್ವಚ್ಛಗೊಳಿಸಲು ಬಳಸುವ ರಾಸಾನಿಕ ಕಲಬೆರಕೆ ಮಾಡಿರುವ ತುಪ್ಪದಿಂದ ತಿರುಪತಿ ಲಡ್ಡು ತಯಾರಿಸಲಾಗುತ್ತಿತ್ತು ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಗಂಭೀರ ಆರೋಪ ಮಾಡಿದ್ದಾರೆ. ಯಮ್ಮಿಗನೂರು ವಿಧಾನಸಭಾ ಕ್ಷೇತ್ರದಲ್ಲಿ ಪಾಸ್​ಬುಕ್ ವಿತರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ವೈಎಸ್ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಡ್ಡುಗಳಲ್ಲಿ ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್‌ಗಳಿಂದ ತಯಾರಿಸಿದ ತುಪ್ಪ ಬಳಸಿದ್ದಾರೆ. ಆ ಮೂಲಕ ಪವಿತ್ರವಾದ ತಿರುಮಲ ದೇವಸ್ಥಾನದ ಪ್ರಸಾದದ ಪಾವಿತ್ರ್ಯತೆ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಘನತೆಯನ್ನು ಹಾಳುಮಾಡಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಸುಮಾರು 5 ವರ್ಷಗಳ ಕಾಲ ಇದೇ ರೀತಿ ಮೋಸ ಮಾಡಿದ್ದಾರೆ. ತುಪ್ಪದ ಕಲಬೆರಕೆಯು ದೇವರ ವಿರುದ್ಧ ಮಾಡಿದ ಮಹಾಪಾಪ. ಈ ಪ್ರಕರಣದಲ್ಲಿ ಶಾಮೀಲಾದ ಯಾರನ್ನೂ ನಾನು ಸುಮ್ಮನೆ ಬಿಡಲ್ಲ ಎಂದು ನಾಯ್ಡು ಗುಡುಗಿದ್ದಾರೆ.

ಲಡ್ಡು ತಯಾರಿಕೆಯಲ್ಲಿ ರಾಸಾಯನಿಕ ಬೆರೆಸಿದ ತುಪ್ಪವನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಸುಮಾರು ಐದು ವರ್ಷಗಳ ಕಾಲ ಈ ರೀತಿ ಮಾಡಲಾಗಿತ್ತು. ಅದೇ ಅವಧಿಯಲ್ಲಿ ಶ್ರೀಶೈಲಂ ದೇವಸ್ಥಾನಕ್ಕೂ ಇದೇ ರೀತಿಯ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಲಡ್ಡು ತಯಾರಿಸಲು ಬಳಸುತ್ತಿದ್ದ ತುಪ್ಪದಲ್ಲಿ ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು. ತರಕಾರಿ ಆಧಾರಿತ ಉತ್ಪನ್ನಗಳು ಹೆಚ್ಚು ದುಬಾರಿಯಾಗಿದ್ದು, ಪ್ರಾಣಿಗಳ ಕೊಬ್ಬು ಅಗ್ಗವಾಗಿರುವುದರಿಂದ ಹಾಗೆ ಮಾಡಿರಬಹುದು ಎಂದು ಅವರು ನಾಯ್ಡು ಹೇಳಿದ್ದಾರೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ವರದಿಯನ್ನು ಅವರು ಉಲ್ಲೇಖಿಸಿದ ಅವರು, ಪ್ರಾಣಿಗಳ ಕೊಬ್ಬಿನ ಅಂಶ ಇದ್ದುದು ವರದಿಯಿಂದ ತಿಳಿದುಬಂದಿದೆ ಎಂದಿದ್ದಾರೆ.

ತಿರುಪತಿ ಲಡ್ಡು ಬಗ್ಗೆ ಅಪಪ್ರಚಾರ: ಜಗನ್ ತಿರುಗೇಟು

ಚಂದ್ರಬಾಬು ನಾಯ್ಡು ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಗನ್ ಮೋಹನ್ ರೆಡ್ಡಿ, ಈಗ ಸಮ್ಮಿಶ್ರ ಸರ್ಕಾರದ ಜಂಗಲ್ ರಾಜ್ ನಡೆಯುತ್ತಿದೆ. ತಿರುಮಲ ಲಡ್ಡು ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲವನ್ನು ಬಯಲಿಗೆಳೆಯುತ್ತೇವೆ ಎಂದು ಶಪಥಗೈದಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡುವಿನ ಕಲಬೆರಕೆ ಆಗಿದೆ ಎಂಬುದಕ್ಕೆ ಸಾಕ್ಷಿ ನೀಡಿದ ಎಸ್‌ಐಟಿ! ನಾಲ್ವರ ಬಂಧನ

ಇನ್ನು ಜಗನ್ ವಿರುದ್ಧದ ಆರೋಪಕ್ಕೆ ನಟಿ ಮತ್ತು ಮಾಜಿ ಸಚಿವೆ ರೋಜಾ ಕೆರಳಿದ್ದಾರೆ. ಜಗನ್ ಅಣ್ಣ ಬಾಹುಬಲಿಯಂತೆ. ಎಷ್ಟೇ ಪಿತೂರಿ ಮಾಡಿದರೂ ಅವರಿಗೆ ಏನೂ ಆಗಲಾರದು. ಅವರನ್ನು ಗುರಿಯಾಗಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ತಿರುಪತಿ ಲಡ್ಡು ವಿಚಾರ ಆಂಧ್ರದಲ್ಲಿ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ನಾಲಿಗೆ ಮೇಲೆ ಮಚ್ಚೆ ಇದ್ರೆ ನಿಜಕ್ಕೂ ನುಡಿದಂತೆ ನಡೆಯುತ್ತಾ? – Kannada News | Daily Devotional: Do Words Spoken by Those with Tongue Moles Come True?

ಬೆಂಗಳೂರು, ಫೆಬ್ರುವರಿ​ 07: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನಾಲಿಗೆ ಮೇಲೆ ಮಚ್ಚೆ ಇರುವವರ ಕುರಿತಾದ ನಂಬಿಕೆಗಳನ್ನು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ಹಿರಿಯರ ಪ್ರಕಾರ, ನಾಲಿಗೆ ಮೇಲೆ ಮಚ್ಚೆ ಇರುವವರ ಮಾತುಗಳು ನಿಜವಾಗುತ್ತವೆ. ಇದು ನಿಜವೇ ಎಂಬ ಪ್ರಶ್ನೆಗೆ ಉತ್ತರವಾಗಿ, ಶಾಸ್ತ್ರಗಳು ಮತ್ತು ನಂಬಿಕೆಗಳ ಪ್ರಕಾರ ಇದು ಸತ್ಯವಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಸಾಮುದ್ರಿಕ ಶಾಸ್ತ್ರದ ಪ್ರಕಾರ, ನಾಲಿಗೆಯ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಪೂರ್ವಜನ್ಮದಲ್ಲಿ ಪುಣ್ಯ ಕಾರ್ಯಗಳನ್ನು ಮಾಡಿರುತ್ತಾರೆ. ಸಮಾಜಸೇವೆ, ದೀನದಲಿತರ ಸೇವೆ, ಅಶಕ್ತರಿಗೆ ಸಹಾಯ ಮಾಡುವುದು ಮುಂತಾದ ಸತ್ಕಾರ್ಯಗಳನ್ನು ಮಾಡಿದವರಿಗೆ ಇಂತಹ ಮಚ್ಚೆಗಳು ಇರುತ್ತವೆ. ಅವರಿಗೆ ಸೂಕ್ಷ್ಮ ಬುದ್ಧಿ, ವಿಶೇಷ ಶಕ್ತಿ ಮತ್ತು ಉತ್ತಮ ಆಲೋಚನಾ ಲಹರಿ ಇರುತ್ತದೆ. ಅವರು ನೋವಿನಲ್ಲಿದ್ದಾಗ ಅಥವಾ ಕೋಪದಿಂದ ಮಾತನಾಡುವಾಗ ಅವರ ಮಾತುಗಳು ಫಲಿಸಬಹುದು. ಆದ್ದರಿಂದ, ಅಂತಹವರೊಂದಿಗೆ ವ್ಯವಹರಿಸುವಾಗ ಜಾಗ್ರತೆಯಿಂದ ಇರಬೇಕು. ನಾಲಿಗೆಯ ಮೇಲ್ಭಾಗ, ಕೆಳಭಾಗ, ಮುಂಭಾಗದಲ್ಲಿ ಮಚ್ಚೆ ಇರುವುದಕ್ಕೆ ವಿಭಿನ್ನ ಅರ್ಥಗಳಿವೆ. ಇವೆಲ್ಲವೂ ನಮ್ಮ ಪುರಾತನ ನಂಬಿಕೆಗಳ ಭಾಗವಾಗಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 7ರ ದಿನಭವಿಷ್ಯ – Kannada News | Janamasankhye 7, 8, 9: Feb 7 Numerology Predictions and Stotra Guidance

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮಲ್ಲಿ ಇರುವಂಥ ನಾಯಕತ್ವದ ಗುಣಗಳು ಇತರರಿಗೂ ಅನುಭವಕ್ಕೆ ಬರುವಂಥ ದಿನ ಇದಾಗಿರುತ್ತದೆ. ಉದ್ಯೋಗಸ್ಥರಾಗಿದ್ದಲ್ಲಿ ನೀವು ಕೆಲಸ ಮಾಡುವ ಸ್ಥಳ- ಕಚೇರಿಯಲ್ಲಿ ನಿಮ್ಮ ನಿರ್ಧಾರಗಳು ಮತ್ತು ಸಲಹೆಗಳಿಗೆ ಮನ್ನಣೆ ಸಿಗಲಿದೆ. ಹೊಸ ಜವಾಬ್ದಾರಿಗಳನ್ನು ನೀವು ನಿರ್ವಹಿಸಬೇಕಾಗಲಿದ್ದು, ಆರ್ಥಿಕವಾಗಿಯೂ ಸದೃಢರಾಗುವಿರಿ. ದೀರ್ಘಕಾಲದ ಸಾಲವೊಂದು ತೀರಿಸುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಕೌಟುಂಬಿಕ ವಿಚಾರಗಳಲ್ಲಿ ನಡೆಯುವಂಥ ಮಾತುಕತೆಗಳಲ್ಲಿ ನೀವೇ ಮುಂದೆ ನಿಂತು ಸಮಸ್ಯೆಗಳನ್ನು ಬಗೆಹರಿಸುವಿರಿ. ಇನ್ನು ನಿಮ್ಮ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಆದರೆ ನೆನಪಲ್ಲಿ ಇರಬೇಕಾದದ್ದು ಏನೆಂದರೆ, ನಿಮ್ಮ ಆತ್ಮವಿಶ್ವಾಸ ಕೆಲವೊಮ್ಮೆ ಅಹಂಕಾರದಂತೆ ಅಥವಾ ಇತರರ ಮೇಲಿನ ಅತಿಯಾದ ನಿಯಂತ್ರಣದಂತೆ ಕಾಣಿಸಬಹುದು. ಬೇರೆಯವರ ಅಭಿಪ್ರಾಯಗಳನ್ನು ಸಹ ಮುಕ್ತ ಮನಸ್ಸಿನಿಂದ ಆಲಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಒಂದು ವಿಚಾರಕ್ಕೆ ಅದು ಆಗಲೇಬೇಕು ಎಂದು ವಿಪರೀತ ಪಟ್ಟು ಹಿಡಿದು ಕೂರುವುದು ಒಳ್ಳೆಯದಲ್ಲ. ಉದ್ಯೋಗ ಸ್ಥಳದಲ್ಲಿ ನೀವು ತರುವುದಕ್ಕೆ ಬಯಸಿದಂಥ ಬದಲಾವಣೆಗಳನ್ನು ಜಾರಿಗೆ ಸಾಧ್ಯವಾಗದೇ ಹೋಗಬಹುದು. ಇದರಿಂದಾಗಿ ಮನಸ್ಸಿಗೆ ಬೇಸರ ಆಗಲಿದೆ. ಹಳೇ ಸಾಲದ ವಸೂಲಿ ಮಾಡಬೇಕು ಎಂದಿದ್ದಲ್ಲಿ ಈ ದಿನ ಪ್ರಯತ್ನಿಸಿ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 7ರ ದಿನಭವಿಷ್ಯ – Kannada News | Daily Horoscope Feb 7: Numerology Insights for Birth Numbers 4, 5, 6 & Rahu Kala Tip

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ತಿಳಿವಳಿಕೆ- ಅನುಭವ- ಜ್ಞಾನಕ್ಕೆ ಹಾಗೂ ಅದರ ಸರಿಯಾದ ಬಳಕೆಗೆ ಉತ್ತಮವಾದ ಪ್ರತಿಫಲ ದೊರೆಯಲಿದೆ. ವ್ಯಾಪಾರದ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ನೀವು ಕೈಗೊಳ್ಳುವ ಪ್ರಯಾಣವು ಲಾಭದಾಯಕ ಆಗಲಿದೆ. ಅತಿಯಾದ ಖರ್ಚು ಮಾಡುವ ಪ್ರವೃತ್ತಿಯನ್ನು ನಿಯಂತ್ರಿಸಿಕೊಳ್ಳುವುದು ಮುಖ್ಯ. ಧಾರ್ಮಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚುತ್ತದೆ. ಗುರು ಸಮಾನರಾದ ವ್ಯಕ್ತಿಗಳನ್ನು ಈ ದಿನ ಭೇಟಿಯಾಗುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಯಾವುದೇ ವ್ಯಕ್ತಿ ಅಥವಾ ವಿಷಯವನ್ನು ತುಂಬ ಹಚ್ಚಿಕೊಳ್ಳಬೇಡಿ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ನೆಮ್ಮದಿ ಸಿಗುತ್ತದೆ. ಸಣ್ಣ ವಿಷಯಗಳಿಗೂ ಅತಿಯಾಗಿ ಚಿಂತಿಸುವುದನ್ನು ತಪ್ಪಿಸುವುದಕ್ಕಾಗಿ ನಿಮಗೆ ಬರುವಂಥ ಆಲೋಚನೆಗಳನ್ನು ಬರೆದಿಡುವ ಅಭ್ಯಾಸ ಮಾಡಿ. ಇದನ್ನು ಈ ದಿನದ ಮಟ್ಟಿಗೆ ಮಾಡಿದರೂ ಸಾಕು. ಶಿಕ್ಷಣ, ಬ್ಯಾಂಕಿಂಗ್ ಅಥವಾ ಕನ್ಸಲ್ಟಿಂಗ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಸುತ್ತಿದ್ದಲ್ಲಿ ಯಶಸ್ಸು ಸಿಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕ್ರಿಯೇಟಿವ್ ಮತ್ತು ಕಲೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಇಂದು ಉತ್ತಮ ದಿನವಾಗಿರುತ್ತದೆ. ಭಾವನಾತ್ಮಕ ನಿರ್ಧಾರಗಳಿಂದ ಸಾಧ್ಯವಾದಷ್ಟೂ ದೂರವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ದೊಡ್ಡ ಮೊತ್ತದ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ತೆಗೆದುಕೊಳ್ಳುವುದು ಅಗತ್ಯ ಎಂಬುದು ಗಮನದಲ್ಲಿ ಇರಲಿ. ನಿಮ್ಮ ಭಾವನೆಗಳಿಗೆ ಸಣ್ಣ ಸಣ್ಣ ಸಂಗತಿಗಳು ಸಹ ಘಾಸಿ ಮಾಡಬಹುದು.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 7ರ ದಿನಭವಿಷ್ಯ – Kannada News | Feb 7th Saturday Horoscope: Birth Numbers 1, 2, 3 Daily Forecast and Life Advice

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 7ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಭವಿಷ್ಯದ ಬಗ್ಗೆ ಆಲೋಚಿಸಿ, ಅದರ ಕಡೆಗೆ ನೀವು ಮಾಡಿದ ಕೆಲಸದ ಫಲವಾಗಿ ಈ ಹಿಂದಿನ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ತಾಂತ್ರಿಕ ಕ್ಷೇತ್ರ, ರಾಜಕೀಯ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಕಾರ್ಯ ನಿರ್ವಹಿಸುವವರು ಉತ್ತಮ ಯಶಸ್ಸು ಕಾಣುವಿರಿ. ಆದರೆ ಹಣಕಾಸಿನ ನಿರ್ವಹಣೆಯಲ್ಲಿ ಸ್ಪಷ್ಟತೆ ಇರಿಸಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ಅನಿರೀಕ್ಷಿತವಾಗಿ ಅಡೆತಡೆಗಳು ಎದುರಾಗಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸರ್ಕಾರದಿಂದ ನೋಟಿಸ್ ನೀಡುವ ಸಾಧ್ಯತೆ ಇದೆ. ಇನ್ನು ನಿಮ್ಮ ಆಪ್ತ ಸ್ನೇಹಿತರೊಂದಿಗೆ ಸಣ್ಣ ಮಟ್ಟದಲ್ಲಾದರೂ ವಿವಾದಗಳು ಉಂಟಾಗಬಹುದು. ಯಾವುದೇ ಕಾರಣಕ್ಕೂ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಏಕೆಂದರೆ ಇದೇ ವಿಚಾರಕ್ಕೆ ನಿಮ್ಮ ಮನಸ್ಸಿನ ಆತಂಕ ಹೆಚ್ಚಾಗಬಹುದು. ಅನಗತ್ಯವಾದ ಆತಂಕ ಮತ್ತು ಅಸುರಕ್ಷತೆ ಭಾವ ಕಾಡಬಹುದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಆಲೋಚನೆಗಳು ವಾಸ್ತವಕ್ಕೆ ಹತ್ತಿರವಾಗಿವೆಯೇ ಅಥವಾ ಕೇವಲ ಊಹೆಯೇ ಎಂಬುದನ್ನು ವಿಶ್ಲೇಷಣೆ ಮಾಡಿ. ಕುಟುಂಬದಲ್ಲಿ ಸೌಹಾರ್ದ ವಾತಾವರಣ ಇರುತ್ತದೆ. ನೀವು ಸಾಮಾನ್ಯವಾಗಿಯೇ ಇತರರಿಗೆ ಸಲಹೆಗಳನ್ನು ನೀಡಲು ಬಯಸುತ್ತೀರಿ. ಈ ದಿನ ಅವರಾಗಿಯೇ ಕೇಳಿದಾಗ ಮಾತ್ರ ಸಲಹೆ ನೀಡಿ ಮತ್ತು ಇತರರ ಪರ್ಸನಲ್ ಸ್ಪೇಸ್ ಅನ್ನು ಗೌರವಿಸಿ.

ಲೇಖನ- ಸ್ವಾತಿ ಎನ್.ಕೆ.

Source link