All posts by nagaraj11081993

KSRTCಯಿಂದ ಉಚಿತ ಡ್ರೈವಿಂಗ್ ತರಬೇತಿ: ಅರ್ಜಿ ಸಲ್ಲಿಸುವುದು ಹೇಗೆ? – Kannada News | Karnataka SC Free LMV HMV Driving Training by KSRTC: Apply Now for Driver Jobs

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಉಚಿತ ಡ್ರೈವಿಂಗ್ ತರಬೇತಿ ನೀಡಲು ಮುಂದಾಗಿದೆ. ಇದು ಉದ್ಯೋಗಾಕಾಂಕ್ಷಿಗಳಿಗೆ ಬಹಳ ಉಪಯುಕ್ತವಾಗಿದೆ ಎಂದು ಹೇಳಲಾಗಿದೆ. ಲಘು ಮೋಟಾರು ವಾಹನ (LMV) ಮತ್ತು ಭಾರೀ ಮೋಟಾರು ವಾಹನ (HMV) ಎರಡ ತರಬೇತಿ ಕೂಡ ಇರುತ್ತದೆ. ಕರ್ನಾಟಕದ ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಮಾತ್ರ ಇದಕ್ಕೆ ಅರ್ಜಿ ಸಲ್ಲಿಸಬಹುದು. ಇದರ ಮುಖ್ಯ ಉದ್ದೇಶ, ಎಸ್‌ಸಿ ಸಮುದಾಯದ ಯುವಕರಿಗೆ ಉತ್ತಮ ತರಬೇತಿ ನೀಡಿ. ಸಾರಿಗೆ ಸಂಸ್ಥೆಗಳಲ್ಲಿ ಅಥವಾ ಖಾಸಗಿಯಾಗಿ ಉದ್ಯೋಗ ಪಡೆಯಲು ಸಜ್ಜುಗೊಳಿಸುವುದಾಗಿದೆ.

ಅರ್ಹತಾ ಮಾನದಂಡಗಳು:

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ತುಂಬಿರಬೇಕು ಮತ್ತು ಗರಿಷ್ಠ 45 ವರ್ಷ ಮೀರಿರಬಾರದು.

ವಿದ್ಯಾರ್ಹತೆ: ಕನಿಷ್ಠ 8ನೇ ತರಗತಿ ಅಥವಾ 10ನೇ ತರಗತಿ ಉತ್ತೀರ್ಣರಾಗಿರಬೇಕು (ತರಬೇತಿಯ ವಿಧಕ್ಕೆ ಅನುಗುಣವಾಗಿ).

ದಾಖಲೆಗಳು: ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಮತ್ತು ಫೋಟೋಗಳು ಅಗತ್ಯ

ಅರ್ಜಿ ಸಲ್ಲಿಸುವುದು ಹೇಗೆ?

ಸ್ಥಳ: ಆಸಕ್ತ ಅಭ್ಯರ್ಥಿಗಳು ತಮ್ಮ ಹತ್ತಿರದ KSRTC ವಿಭಾಗೀಯ ಕಚೇರಿ ಅಥವಾ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಫಾರಂ ಪಡೆಯಬಹುದು.

ಆಯ್ಕೆ ಪ್ರಕ್ರಿಯೆ: ಅರ್ಜಿಗಳನ್ನು ಪರಿಶೀಲಿಸಿದ ನಂತರ ಅರ್ಹ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗುತ್ತದೆ.

ಸೌಲಭ್ಯ: ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳಿಗೆ ಉಚಿತ ವಸತಿ ಅಥವಾ ಪ್ರೋತ್ಸಾಹಧನ ನೀಡುವ ಸಾಧ್ಯತೆಯೂ ಇರುತ್ತದೆ (ಇದು ಆಯಾ ವಿಭಾಗದ ನಿಯಮಕ್ಕೆ ಒಳಪಟ್ಟಿರುತ್ತದೆ).

ಈ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಅಧಿಕೃತ ಚಾಲನಾ ಪರವಾನಗಿ (Driving License) ಪಡೆಯಲು ಸಂಸ್ಥೆಯೇ ನೆರವು ನೀಡುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ ಹುದ್ದೆಗಳಿಗೆ ನೇಮಕಾತಿ ನಡೆದಾಗ ಈ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರು ಬಳಸಿಕೊಳ್ಳುತ್ತಿದ್ದಾರೆ ‘ಎಮರ್ಜೆನ್ಸಿ ಕೋಟಾ’: ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ: ಈಗಾಗಲೇ ಅರ್ಜಿ ವಿತರಣೆ ಪ್ರಕ್ರಿಯೆ ಆರಂಭವಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸಾಮಾನ್ಯವಾಗಿ ಈ ರೀತಿಯ ಅಧಿಸೂಚನೆಗಳು ಹೊರಬಂದ 15 ರಿಂದ 20 ದಿನಗಳ ಕಾಲಾವಕಾಶ ಇರುತ್ತದೆ. ಫೆಬ್ರವರಿ ತಿಂಗಳ ಮೂರನೇ ವಾರದೊಳಗೆ (ಅಂದಾಜು ಫೆಬ್ರವರಿ 20, 2026) ಅರ್ಜಿಗಳನ್ನು ಸಲ್ಲಿಸುವುದು ಉತ್ತಮ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಮಿಗಳ ದಿನಾಚರಣೆದಂದು ನಂದಿಬೆಟ್ಟಕ್ಕೆ ಹೋಗುವ ಮುನ್ನ ಇದನ್ನು ಓದಲೇಬೇಕು – Kannada News | Chikkaballapur: Nandi Hills Closed Feb 14 for Valentine’s Day; DC Orders

ಚಿಕ್ಕಬಳ್ಳಾಪುರ, ಫೆಬ್ರವರಿ 06: ಪ್ರೇಮಿಗಳ ವಿಶೇಷ ದಿನವಾದ ವ್ಯಾಲೆಂಟೈನ್ಸ್ ಡೇಗೆ (Valentine’s Day) ಸದ್ಯ ದಿನಗಣನೆ ಶುರುವಾಗಿದೆ. ಪ್ರೀತಿ ಪೇಮಕ್ಕೆ ಹೆಚ್ಚು ಹೆಸರು ವಾಸಿಯಾಗಿರುವ ತಾಣವೆಂದರೆ ನಂದಿಗಿರಿಧಾಮ (nandi hills). ಪ್ರೇಮಿಗಳ ದಿನದಂದು ಈ ತಾಣಕ್ಕೆ ಹೆಚ್ಚಾಗಿ ಪ್ರೇಮಿಗಳು ಆಗಮಿಸಿ ಕಾಲಕಳೆಯುತ್ತಾರೆ. ಆದರೆ ಈ ಭಾರಿಯ ವ್ಯಾಲೆಂಟೈನ್ಸ್ ಡೇಗೆ ಅಂದರೆ ಫೆಬ್ರವರಿ 14ರಂದು ವಿಶ್ವವಿಖ್ಯಾತ ನಂದಿಗಿರಿಧಾಮ ಬಂದ್​ ಆಗಲಿದೆ.

ನಂದಿಗಿರಿಧಾಮ ಬಂದ್

ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಅದರಲ್ಲೂ ವ್ಯಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಪ್ರಣಯ ಪಕ್ಷಿಗಳ ಕಲರವೇ ಹೆಚ್ಚಾಗಿರುತ್ತಿದೆ. ಈ ದಿನದಂದು ಕೆಲ ಜೋಡಿಗಳು ಪ್ರೇಮ ನಿವೇದನೆ ಮಾಡಿಕೊಂಡರೆ, ಮತ್ತೆ ಕೆಲವರು ಒಬ್ಬರಿಗೊಬ್ಬರು ತಬ್ಬಿ ಮುದ್ದಾಡುವ ಮೂಲಕ ಪ್ರೇಮಿಗಳ ದಿನ ಆಚರಿಸುತ್ತಾರೆ. ಆದರೆ ಈ ಭಾರಿ ಪ್ರೇಮಿಗಳ ದಿನಾಚರಣೆಗೆ ಅಂದರೆ ಫೆ.14ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಂದಿಗಿರಿಧಾಮ ಬಂದ್​ ಆಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದಿಂದ ಕ್ರಮಕೈಗೊಳ್ಳಲಾಗಿದ್ದು, ಡಿಸಿ ಜಿ.ಪ್ರಭು ಆದೇಶ ಹೊರಡಿಸಿದೆ.

ಆದೇಶದಲ್ಲೇನಿದೆ?

ಫೆಬ್ರವರಿ 14ರಂದು ಪ್ರೇಮಿಗಳ ದಿನದ ಆಚರಣೆ ಪ್ರಯುಕ್ತ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳವಾದ ನಂದಿಗಿರಿಧಾಮ ಠಾಣಾ ವ್ಯಾಪ್ತಿಯ ನಂದಿ ಬೆಟ್ಟಕ್ಕೆ ಪ್ರತಿ ವರ್ಷದಂತೆ ಪ್ರೇಮಿಗಳ ದಿನವನ್ನು ಆಚರಣೆ ಮಾಡುವ ಸಲುವಾಗಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರೇಮಿಗಳು, ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ನಂದಿಗಿರಿಧಾಮ ಪ್ರವಾಸ ಹೋಗ್ತೀರಾ? ಈ ವಿಚಾರ ತಿಳಿದಿರಲೇಬೇಕು: ಇಲ್ಲಾಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಅಂಕಿ-ಅಂಶಗಳ ಪ್ರಕಾರ ನಂದಿಗಿರಿಧಾಮಕ್ಕೆ ವಿಶೇಷ ದಿನಗಳಲ್ಲಿ (ಭಾನುವಾರ, ಶನಿವಾರ ಹಾಗೂ ರಜೆ ದಿನಗಳಲ್ಲಿ) ಸುಮಾರು 16-18 ಸಾವಿರ ಪ್ರವಾಸಿಗರು ಹಾಗೂ 3000-3500 ದ್ವಿಚಕ್ರ ವಾಹನಗಳು ಹಾಗೂ 1500-1700 ನಾಲ್ಕು ಚಕ್ರ (ಕಾರು) ಇತರೆ ವಾಹನಗಳು ಆಗಮಿಸುವುದರಿಂದ ಪೊಲೀಸ್ ಇಲಾಖೆಯ ವತಿಯಿಂದ ವಾಹನ ಸಂಚಾರ ನಿಯಂತ್ರಣ ಮಾಡಬೇಕಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಸುಮಾರು 5000-6000 ಪ್ರವಾಸಿಗರು, 1000-1500 ದ್ವಿಚಕ್ರವಾಹನಗಳು ಹಾಗೂ 500-700 ನಾಲ್ಕು ಚಕ್ರ (ಕಾರು) ಇತರೆ ವಾಹನಗಳು ಆಗಮಿಸುತ್ತವೆ.

ನಂದಿಗಿರಿಧಾಮಕ್ಕೆ ಹೋಗಲು ಮತ್ತು ಬರಲು ಒಂದೇ ರಸ್ತೆ ಇರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಪ್ರೇಮಿಗಳ ದಿನ ಶನಿವಾರವಾಗಿರುವುದರಿಂದ ನಿರೀಕ್ಷೆಗೆ ಮೀರಿ 15-20 ಸಾವಿರ ಪ್ರವಾಸಿಗರು, ಪ್ರೇಮಿಗಳು ಹಾಗೂ 05-06 ಸಾವಿರ ವಾಹನಗಳು ಆಗಮಿಸುವ ಸಂಭವವಿದೆ. ನಂದಿ ಗಿರಿಧಾಮದ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಅತೀ ಕಷ್ಟ. ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ಪ್ರವಾಸಿತಾಣ ನಂದಿಗಿರಿಧಾಮ 1 ತಿಂಗಳು ಬಂದ್: ವೀಕೆಂಡ್​​​ನಲ್ಲಿ ಮಾತ್ರ ಓಪನ್..!

ಪ್ರೇಮಿಗಳ ದಿನವನ್ನು ಆಚರಿಸುವ ಪ್ರಯುಕ್ತ ಹೊರಗಡೆಯಿಂದ ಬರುವ ಪ್ರೇಮಿಗಳು, ಸಾರ್ವಜನಿಕರು ರಾತ್ರಿ ವೇಳೆಯಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಅಸಭ್ಯ ವರ್ತನೆಗಳನ್ನು ಮಾಡಿ ಈ ಆಚರಣೆಯಲ್ಲಿ ಮಹಿಳೆಯರು ಮತ್ತು ಹುಡುಗಿಯರು ಭಾಗವಹಿಸುವುದರಿಂದ ಕುಡಿದ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸುವುದು, ಇತರ ಪ್ರವಾಸಿಗರಿಗೆ ತೊಂದರೆ ನೀಡುವುದು ಹಾಗೂ ಬೆಟ್ಟದ ಮೇಲೆ ನಿಷೇಧಿತ ಅಪಾಯಕರ ಸ್ಥಳಗಳಿಗೆ ಹೋಗುವ ಸಾಧ್ಯತೆಗಳು ಇರುತ್ತವೆ. ಈ ಸಮಯದಲ್ಲಿ ಹೆಚ್ಚಿನ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೂ ಸಹ ಯಾವುದೇ ಪ್ರಯೋಜನೆಗಳು ಆಗುವ ಸಾಧ್ಯತೆ ಇಲ್ಲ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಫೆಬ್ರವರಿ 14ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಮತ್ತು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:26 pm, Fri, 6 February 26

Source link

ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಅಪಘಾತ; 13 ಜನ ಸಾವು, 34 ಮಂದಿಯ ಸ್ಥಿತಿ ಗಂಭೀರ – Kannada News | Wedding bus accident in nepal 13 people killed over 30 injured Baitadi tragedy

ಕಠ್ಮಂಡು, ಫೆಬ್ರವರಿ 6: ಉತ್ತರಾಖಂಡದ ಗಡಿಯಲ್ಲಿರುವ ನೇಪಾಳದ ಬೈತಾಡಿ ಜಿಲ್ಲೆಯಲ್ಲಿ ಗುರುವಾರ ಭೀಕರ ಬಸ್ ಅಪಘಾತ (Accident) ಸಂಭವಿಸಿತ್ತು. ಮದುವೆಗೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಂದಕಕ್ಕೆ ಉರುಳಿತ್ತು. ಈ ಅಪಘಾತದ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. 34 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದ ಮಾಹಿತಿ ತಿಳಿದ ಕೂಡಲೇ ನೇಪಾಳದ ಅಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಾಳುಗಳನ್ನು ಬೈತಾಡಿ ಮತ್ತು ದಾದೇಲ್ಧುರಾದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ವರದಿಗಳ ಪ್ರಕಾರ, ನೇಪಾಳದ ಸುದುರ್ಪಾಶ್ಚಿಮ್ ಪ್ರದೇಶದಲ್ಲಿ ನಿನ್ನೆ ಈ ಅಪಘಾತ ಸಂಭವಿಸಿದ್ದು, 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಚಿಕಿತ್ಸೆಯ ಸಮಯದಲ್ಲಿ 5 ಜನರು ಸಾವನ್ನಪ್ಪಿದರು. ಈ ಮೂಲಕ ಸಾವಿನ ಸಂಖ್ಯೆ 13ಕ್ಕೆ ಏರಿದೆ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಬೈತಾಡಿ ಜಿಲ್ಲೆಯ ಪುರ್ಚೌರಿ ಪುರಸಭೆ ಪ್ರದೇಶದಿಂದ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಪರ್ವತದ ರಸ್ತೆಯಲ್ಲಿ ನಿಯಂತ್ರಣ ತಪ್ಪಿ 200 ಮೀಟರ್ ಆಳದ ಕಂದಕಕ್ಕೆ ಬಿದ್ದಾಗ ಈ ಅಪಘಾತ ಸಂಭವಿಸಿದೆ. ಪಶ್ಚಿಮ ನೇಪಾಳದ ಪುರ್ಚೌರಿ -7 ಪ್ರದೇಶದ ಬದ್ಗಾಂವ್ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಹನಿಮೂನ್ ಮರ್ಡರ್ 2.0: ಮದುವೆಯಾದ 3 ತಿಂಗಳಲ್ಲೇ ಗಂಡನನ್ನು ಕೊಂದು ಅಪಘಾತವೆಂದು ನಂಬಿಸಿದ ಹೆಂಡತಿ

ಸ್ಥಳೀಯ ನಿವಾಸಿಗಳು, ನೇಪಾಳದ ಪೊಲೀಸರು ಮತ್ತು ಸಶಸ್ತ್ರ ಪೊಲೀಸ್ ಪಡೆ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹಲವಾರು ಗಾಯಾಳುಗಳ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಭಾರ ಹೊತ್ತಿದ್ದ ಬಸ್ ಹತ್ತುತ್ತಿದ್ದಾಗ ಪ್ರೆಶರ್ ಪೈಪ್ ಒಡೆದ ನಂತರ ಅಪಘಾತ ಸಂಭವಿಸಿರಬಹುದು ಎನ್ನಲಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಗುರಿನಲ್ಲಿ ಕಂಡುಬರುವ ಈ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ! ಅವು ನಿಮ್ಮ ಜೀವ ಉಳಿಸಬಹುದು! – Kannada News | What Your Nails Reveal About Your Health

ಅನೇಕರು ಉಗುರುಗಳನ್ನು (Nails) ಕೇವಲ ಸೌಂದರ್ಯ ಮತ್ತು ಅಲಂಕಾರಕ್ಕಾಗಿ ಮಾತ್ರ ಬಳಕೆ ಮಾಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ, ನಮ್ಮ ಉಗುರುಗಳು ನಮ್ಮ ದೇಹದ ಆರೋಗ್ಯಕ್ಕೆ ಹಿಡಿದ ಕನ್ನಡಿ ಎನ್ನುತ್ತಾರೆ. ಹೌದು, ಕೆಲವರಿಗೆ ಈ ವಿಷಯ ಬಹಳ ಆಶ್ಚರ್ಯ ಮೂಡಿಸಬಹುದು ಅಥವಾ ಇನ್ನು ಕೆಲವರು ಇಂತಹ ವಿಷಯಗಳ ಬಗ್ಗೆ ಹೆಚ್ಚಿನ ಗಮನ ನೀಡದಿರಬಹುದು. ಆದರೆ ನಿಮಗೆ ಗೊತ್ತಿರಲಿ, ಹೃದಯ ಸಂಬಂಧಿ ಸಮಸ್ಯೆ, ಶ್ವಾಸಕೋಶದ ಸಮಸ್ಯೆ, ಯಕೃತ್ತಿನ ಅಸ್ವಸ್ಥತೆ ಮತ್ತು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳ ಆರಂಭಿಕ ಚಿಹ್ನೆಗಳು ಉಗುರುಗಳಲ್ಲಿ ಕಾಣಿಸಿಕೊಳ್ಳುತ್ತವೆ, ಇನ್ನು ಕೆಲವು ಮುಖದಲ್ಲಿ ಕಂಡುಬರುತ್ತದೆ. ಹಾಗಾದರೆ ಇದನ್ನು ಗುರುತಿಸುವುದು ಹೇಗೆ, ಯಾವ ರೀತಿ ಅದನ್ನು ತಿಳಿದುಕೊಳ್ಳಬೇಕು, ಯಾವ ಲಕ್ಷಣಗಳು ಯಾವ ಕಾಯಿಲೆಯ ಮುನ್ಸೂಚನೆಯಾಗಿರುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬಿಳಿ ಚುಕ್ಕೆಗಳು:

ಉಗುರುಗಳ ಮೇಲೆ ಕಾಣಿಸಿಕೊಳ್ಳುವ ಬಿಳಿ ಚುಕ್ಕೆಗಳನ್ನು ಲ್ಯುಕೋನಿಚಿಯಾ ಎಂದು ಕರೆಯಲಾಗುತ್ತದೆ. ಅವು ಸಣ್ಣಪುಟ್ಟ ಗಾಯಗಳು ಅಥವಾ ಅಲರ್ಜಿಗಳಿಂದ ಉಂಟಾಗಬಹುದು. ಆದರೆ, ಇಡೀ ಉಗುರು ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ, ಅದು ದೇಹದಲ್ಲಿ ಪೋಷಕಾಂಶಗಳ ಕೊರತೆ ಅಥವಾ ಇತರ ಸೋಂಕುಗಳನ್ನು ಸೂಚಿಸುತ್ತದೆ. ಹಾಗಾಗಿ ಈ ರೀತಿಯಾದಾಗ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ.

ಗಾಢ ಕೆಂಪು ಬಣ್ಣದ ಅರ್ಧಚಂದ್ರಾಕಾರಗಳು:

ಉಗುರುಗಳ ಬುಡದಲ್ಲಿರುವ ಅರ್ಧಚಂದ್ರಾಕಾರವು ಬಿಳಿ ಬಣ್ಣಕ್ಕೆ ಬದಲಾಗಿ ಗಾಢ ಕೆಂಪು ಬಣ್ಣದಲ್ಲಿದ್ದರೆ, ಬಹಳ ಎಚ್ಚರಿಕೆಯ ವಹಿಸುವ ಅಗತ್ಯವಿದೆ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಕಾರ, ಇದು ಹೃದಯ ಸಂಬಂಧಿ ಸಮಸ್ಯೆ, ಸಂಧಿವಾತ ಅಥವಾ ಲೂಪಸ್‌ನಂತಹ ಕಾಯಿಲೆಗಳ ಸಂಕೇತವಾಗಿರಬಹುದು.

ಇದನ್ನೂ ಓದಿ: ನಿಮ್ಮ ದೇಹದಲ್ಲಿ ಪ್ರೋಟೀನ್ ಕಡಿಮೆ ಇದೆ ಎಂಬುದನ್ನು ದೇಹ ನೀಡುವ ಈ 6 ಲಕ್ಷಣಗಳ ಮೂಲಕ ತಿಳಿಯಬಹುದು!

ಉಗುರುಗಳ ಮೇಲೆ ಕಪ್ಪು ಗೆರೆಗಳು:

ಯಾವುದೇ ರೀತಿಯ ಗಾಯವಿಲ್ಲದೆ ಉಗುರುಗಳ ಕೆಳಗೆ ಕಪ್ಪು ಬಣ್ಣದ ಗೆರೆಗಳು ಕಾಣಿಸಿಕೊಂಡರೆ, ಅದು ಚರ್ಮದ ಕ್ಯಾನ್ಸರ್‌ನ ಸಂಕೇತವಾಗಿರಬಹುದು. ಇದನ್ನು ತಕ್ಷಣ ವೈದ್ಯರಿಗೆ ತೋರಿಸುವುದು ಬಹಳ ಮುಖ್ಯ. ಜೊತೆಗೆ ಉಗುರು ಅಗಲವಾಗಿ ಊದಿಕೊಂಡಂತೆ ಕಾಣುವುದು ಕೂಡ ಒಳ್ಳೆಯದಲ್ಲ. ಇದು ಶ್ವಾಸಕೋಶದ ಕ್ಯಾನ್ಸರ್ ಅಥವಾ ದೀರ್ಘಕಾಲದ ಹೃದಯ ಸಂಬಂಧಿ ಸಮಸ್ಯೆಗಳನ್ನು ಸೂಚಿಸುತ್ತದೆ.

ಹಳದಿ ಕಣ್ಣುಗಳು:

ಉಗುರುಗಳು ಮಾತ್ರವಲ್ಲ ಕೆಲವೊಮ್ಮೆ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಅದು ಸಾಮಾನ್ಯವಾಗಿ ಶಿಲೀಂಧ್ರ ಸೋಂಕನ್ನು ಸೂಚಿಸುತ್ತದೆ. ಇದು ದೀರ್ಘಕಾಲದ ವರೆಗೆ ಮುಂದುವರಿದರೆ ಥೈರಾಯ್ಡ್ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಅಥವಾ ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು.

ನೀಲಿ ತುಟಿಗಳು:

ತುಟಿಗಳು ನೀಲಿ ಅಥವಾ ನೇರಳೆ ಬಣ್ಣಕ್ಕೆ ತಿರುಗುತ್ತಿದ್ದರೆ, ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯುತ್ತಿಲ್ಲ ಎಂದರ್ಥ. ಇದು ಹೃದಯ ಅಥವಾ ಶ್ವಾಸಕೋಶದ ಕಾಯಿಲೆಯ ಸಂಕೇತವಾಗಿದೆ. ಜೊತೆಗೆ ವಿಟಮಿನ್ ಬಿ 12 ಕೊರತೆ ಇದ್ದಾಗಲೂ ಕೂಡ ಈ ರೀತಿಯಾಗಬಹುದು. ಹಾಗಾಗಿ ಈ ರೀತಿಯ ಲಕ್ಷಣಗಳು ಬಹಳ ಅಪಾಯಕಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿರ್ದೇಶಕ ಆರ್. ಚಂದ್ರು ಇನ್ಮುಂದೆ ಡಾ. ಆರ್. ಚಂದ್ರು; ಸಿಕ್ತು ಗೌರವ ಡಾಕ್ಟರೇಟ್ – Kannada News | Manipur International University to confer honorary doctorate on Director R. Chandru

R. Chandru

‘ತಾಜ್ ಮಹಲ್’, ‘ಚಾರ್ಮಿನಾರ್’, ‘ಕಬ್ಜ’ ಸಿನಿಮಾಗಳ ನಿರ್ದೇಶಕ ಆರ್. ಚಂದ್ರು ಅವರಿಗೆ ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿಯು (MIU) ಗೌರವ ಡಾಕ್ಟರೇಟ್ (Honorary Doctorate) ನೀಡಿ ಗೌರವಿಸುವುದಾಗಿ ಘೋಷಿಸಿದೆ. ಸಿನಿಮಾ, ಕಲೆ, ಸಾಂಸ್ಕೃತಿಕ ಶ್ರೇಷ್ಠತೆ ಮತ್ತು ಸಮಾಜ ಸೇವೆಯಲ್ಲಿ ಆರ್. ಚಂದ್ರು ಅವರು ಮಾಡಿರುವ ಸಾಧನೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ. ಆರ್. ಚಂದ್ರು (R. Chandru) ಅವರಿಗೆ ಅಭಿಮಾನಿಗಳು ಮತ್ತು ಆಪ್ತರು ಅಭಿನಂದನೆ ತಿಳಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಕೇಶವವಾರ ಎಂಬ ಪುಟ್ಟ ಹಳ್ಳಿಯಿಂದ ಕೇವಲ ನೂರು ರೂಪಾಯಿ ಹಿಡಿದು ಬೆಂಗಳೂರಿಗೆ ಬಂದ ಒಬ್ಬ ಸಾಮಾನ್ಯ ರೈತನ ಮಗ, ಇಂದು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ನಿರ್ದೇಶಕ, ನಿರ್ಮಾಪಕನಾಗಿ ಬೆಳೆದಿದ್ದಾರೆ. ಆ ಮೂಲಕ ಯುವಜನತೆಗೆ ಪ್ರೇರಣೆಯಾಗಿದ್ದಾರೆ ಎಂದು ಮಣಿಪುರ ಇಂಟರ್ನ್ಯಾಷನಲ್ ವಿಶ್ವವಿದ್ಯಾಲಯವು ಶ್ಲಾಘಿಸಿದೆ.

ಆರ್. ಚಂದ್ರು ಅವರು ಸಾಮಾಜಿಕ ಕಳಕಳಿ ಹೊಂದಿದ್ದಾರೆ. ನಿರ್ದೇಶಕರಾಗಿ ಮಾತ್ರವಲ್ಲದೆ ‘ಆರ್‌ಸಿ ಸ್ಟುಡಿಯೋಸ್’ ಮೂಲಕ ನಿರ್ಮಾಪಕನಾಗಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಪರಿಸರ ಮತ್ತು ಕೃಷಿ ಸೇವೆಯಲ್ಲೂ ತೊಡಗಿಕೊಂದ್ದಾರೆ. ಶಿಡ್ಲಘಟ್ಟದಲ್ಲಿ ಮಳೆನೀರು ಕೊಯ್ಲು ಮತ್ತು ಆಧುನಿಕ ಕೃಷಿ ಪದ್ಧತಿಯ ಮೂಲಕ ಒಣ ಭೂಮಿಯನ್ನು ಹಸಿರಾಗಿಸಿರುವುದು, ಒಂದು ಲಕ್ಷ ಗಿಡಗಳನ್ನು ನೆಟ್ಟಿರುವುದು ಹಾಗೂ ಕೋವಿಡ್ ಸಮಯದಲ್ಲಿ ಅವರು ಮಾಡಿದ ಜನಪರ ಕಾರ್ಯಗಳನ್ನು ವಿಶ್ವವಿದ್ಯಾಲಯವು ವಿಶೇಷವಾಗಿ ಗುರುತಿಸಿದೆ.

ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಾ. ಹರಿಕುಮಾರ್ ಪಲ್ಲತಡ್ಕ ಅವರು, ‘ದಕ್ಷಿಣ ಭಾರತದ ಹೆಮ್ಮೆ ಮತ್ತು ಈಶಾನ್ಯ ಭಾರತದ ಚೈತನ್ಯವನ್ನು ಒಂದುಗೂಡಿಸುವ ಉದ್ದೇಶದಿಂದ ಈ ಗೌರವವನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಮುಂದಿನ ಘಟಿಕೋತ್ಸವ ಅಥವಾ ವಿಶೇಷ ಸಮಾರಂಭದಲ್ಲಿ ಆರ್. ಚಂದ್ರು ಅವರಿಗೆ ಈ ಪದವಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು.

ಇದನ್ನೂ ಓದಿ: ತಂದೆಯಿಂದಲೇ ‘ಫಾದರ್’ ಸಿನಿಮಾದ ಥೀಮ್ ವಿಡಿಯೋ ಬಿಡುಗಡೆ ಮಾಡಿಸಿದ ಆರ್. ಚಂದ್ರು

ಮಣಿಪುರ ಇಂಟರ್ನ್ಯಾಷನಲ್ ಯೂನಿವರ್ಸಿಟಿ ಇದು ಮಣಿಪುರ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಸ್ವಾಯತ್ತ ಶಾಸನಬದ್ಧ ಅಂತರಾಷ್ಟ್ರೀಯ ವಿಶ್ವವಿದ್ಯಾಲಯವಾಗಿದೆ. ಯುಜಿಸಿ (UGC) ಮಾನ್ಯತೆ ಪಡೆದಿದೆ. ಈ ಸಂಸ್ಥೆಯು ಈಶಾನ್ಯ ಭಾರತದ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಪ್ರಮುಖ ಸ್ಥಾನದಲ್ಲಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಾತ ದೋಷದಿಂದ ಏನು ಆರೋಗ್ಯ ಸಮಸ್ಯೆ, ನಿವಾರಣೆ ಹೇಗೆ? ಬಾಬಾ ರಾಮದೇವ್ ಸಲಹೆ ಕೇಳಿ – Kannada News | Baba Ramdev suggests foods to control health problems generated by Vata dosha

ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ (Baba Ramdev) ಅವರು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮತ್ತು ಆಯುರ್ವೇದ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಶಿಫಾರಸು ಮಾಡುತ್ತಾರೆ. ವೃದ್ಧಾಪ್ಯದಲ್ಲೂ ನೈಸರ್ಗಿಕವಾಗಿ ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು, ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಎಂದು ಹೇಳುತ್ತಾರೆ. ಯೋಗ ಗುರು ಎಂದೇ ಖ್ಯಾತರಾಗಿರುವ ಅವರು ಭಾರತದಲ್ಲಿ ಯೋಗಕ್ಕೆ ವಿಶಿಷ್ಟ ಗುರುತನ್ನು ನೀಡಿದ್ದಾರೆ. ಅವರ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿವೆ. ಮನೆಮದ್ದು, ಯೋಗ, ಪ್ರಾಣಾಯಾಮ, ಜೀವನಶೈಲಿ ಮೂಲಕ ವಿವಿಧ ರೋಗಗಳು ಮತ್ತು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಉಪಾಯಗಳನ್ನು ಈ ವಿಡಿಯೋಗಳಲ್ಲಿ ವಿವರಿಸುತ್ತಾರೆ. ವಾತಾ ರೋಗ ಉಲ್ಬಣದ ಸಮಸ್ಯೆಯನ್ನು ನೈಸರ್ಗಿಕವಾಗಿ ಕಡಿಮೆ ಮಾಡುವ ವಿಧಾನಗಳನ್ನು ಒಂದು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

ಅವರ ಪ್ರಕಾರ, ವಾತ ತೀವ್ರಗೊಂಡರೆ, ಕೀಲು ನೋವು, ಅಜೀರ್ಣ, ದೇಹದ ನಡುಕ, ಬೆರಳುಗಳಲ್ಲಿ ಜುಮ್ಮೆನಿಸುವಿಕೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲಿಯೇ ಬರಬಹುದು. ವಾತ ದೋಷ ಕಡಿಮೆ ಮಾಡಲು ಬಾಬಾ ರಾಮದೇವ್ ಕೆಲ ಮನೆಮದ್ದುಗಳನ್ನು ಉಲ್ಲೇಖಿಸಿದ್ದಾರೆ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಶೀತ ಕಡಿಮೆ ಮಾಡಿ ಆರೋಗ್ಯ ಕಾಪಾಡಬಲ್ಲ 10 ಸುಲಭ ಪರಿಹಾರಗಳನ್ನು ತಿಳಿಸಿದ ಬಾಬಾ ರಾಮದೇವ್

ವಾತ ದೋಷ ಎಂದರೇನು?

ವಾತ ದೋಷವು ದೇಹದಲ್ಲಿ ಗಾಳಿ ಮತ್ತು ಆಕಾಶದಿಂದ ಕೂಡಿದ ಒಂದು ಶಕ್ತಿಯಾಗಿದೆ. ಇದು ನಮ್ಮ ದೈಹಿಕ ಮತ್ತು ಮಾನಸಿಕ ಚಲನೆ, ಸಂವಹನ, ಉಸಿರಾಟ ಮತ್ತು ನರಮಂಡಲವನ್ನು ನಿಯಂತ್ರಿಸುತ್ತದೆ. ಈ ದೋಷವು ದುರ್ಬಲಗೊಂಡರೆ, ಅದು ಮನಸ್ಸು ಮತ್ತು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಾತ ದೋಷದ ಅಸಮತೋಲನಕ್ಕೆ ದೊಡ್ಡ ಕಾರಣವೆಂದರೆ ಕಳಪೆ ಆಹಾರ ಪದ್ಧತಿ. ತೀರಾ ತಣ್ಣಗಾದ ಆಹಾರ, ಹಸಿ ತರಕಾರಿ, ಚಹಾ ಕಾಫಿ ಸೇವನೆ, ಅನಿಯಮಿತವಾದ ಆಹಾರ ಸೇವನೆ ಇತ್ಯಾದಿ ಕಾರಣದಿಂದ ವಾತ ದೋಷ ಅಸಮತೋಲನಗೊಳ್ಳುತ್ತದೆ. ಇದಲ್ಲದೆ, ಅಸಮರ್ಪಕವಾದ ಜೀವನಶೈಲಿಯು ನಮ್ಮನ್ನು ಹಲವು ವಿಧಗಳಲ್ಲಿ ಅಸ್ವಸ್ಥಗೊಳಿಸುತ್ತದೆ. ತಡವಾಗಿ ಮಲಗುವುದು ಮತ್ತು ತಡವಾಗಿ ಏಳುವುದು, ಮತ್ತು ದೀರ್ಘಕಾಲದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಮುಂತಾದ ಅಭ್ಯಾಸಗಳು ವಾತ ರೋಗವನ್ನು ಉಲ್ಬಣಗೊಳಿಸುತ್ತವೆ. ಚಿಂತೆ, ಭಯ, ಒತ್ತಡ, ಚಡಪಡಿಕೆ ಮತ್ತು ಅತಿಯಾಗಿ ಯೋಚಿಸುವಂತಹ ಮಾನಸಿಕ ಅಂಶಗಳು ಸಹ ಇದಕ್ಕೆ ಕಾರಣವಾಗಿವೆ.

ವಾತ ದೋಷ ಅಸಮತೋಲನ ತಗ್ಗಿಸಲು ಬಾಬಾ ರಾಮದೇವ್ ಸಲಹೆ

ದೇಹದಲ್ಲಿ ವಾತ ದೋಷ ಹೆಚ್ಚಾದರೆ, ಅದನ್ನು ಸಮತೋಲನಗೊಳಿಸಲು ಆಹಾರ ಮತ್ತು ನೈಸರ್ಗಿಕ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ವಾತ ದೋಷ ಹದಗೆಟ್ಟರೆ, ಅಲೋವೆರಾ, ಗಿಲೋಯ್, ಪಾರಿಜಾತ ಅಥವಾ ಮೊರಿಂಗಾದ ತಾಜಾ ರಸವನ್ನು ಕುಡಿಯಿರಿ. ಅರಿಶಿನ, ಮೆಂತ್ಯ, ಒಣ ಶುಂಠಿ ಮತ್ತು ಸೆಲರಿಗಳನ್ನು ಒಳಗೊಂಡಿರುವ ಮನೆಮದ್ದುಗಳನ್ನು ಸಹ ನೀವು ಪ್ರಯತ್ನಿಸಬಹುದು. ಅಲೋವೆರಾ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿಂದ ಸಮೃದ್ಧವಾಗಿದೆ. ಸೆಲರಿ, ಅರಿಶಿನ ಮತ್ತು ಮೆಂತ್ಯ ಬೀಜಗಳಲ್ಲಿ ಆಯುರ್ವೇದ ಗುಣಗಳು ಇದ್ದು, ಅವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಆ್ಯಂಟಿ ಆಕ್ಸಿಡೆಂಟ್ಸ್ ಅನ್ನು ಹೊಂದಿರುತ್ತವೆ.

ಇದನ್ನೂ ಓದಿ: ನರನೋವು ಶಮನ ಮಾಡಬಲ್ಲ ‘ಪೀಡಾನಿಲ್ ಗೋಲ್ಡ್’; ಇದು ಪತಂಜಲಿ ಆಯುರ್ವೇದದ ಕೊಡುಗೆ

ವಾತ ದೋಷ ಹೆಚ್ಚಾದ ಜನರು ತಮ್ಮ ಆಹಾರದಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕು ಎಂದು ಹೇಳುವ ಬಾಬಾ ರಾಮದೇವ್ ಅವರ ಪ್ರಕಾರ, ಹುಳಿ ಮತ್ತು ತಣ್ಣನೆಯ ಆಹಾರಗಳು ವಾತ ದೋಷವನ್ನು ಉಲ್ಬಣಗೊಳಿಸುತ್ತವೆ. ಹೂಕೋಸು, ಸೋರೆಕಾಯಿ ರಸ, ಮೊಸರು, ಆಮ್ಲಾ ಮತ್ತು ಸೌತೆಕಾಯಿಯಂತಹ ಆಹಾರಗಳು ವಾತವನ್ನು ಉಲ್ಬಣಗೊಳಿಸುತ್ತವೆ. ನೀವು ಇವುಗಳನ್ನು ಸೇವಿಸುವುದೇ ಆದಲ್ಲಿ ಮಿತವಾಗಿ ಸೇವಿಸಿ.

ಅಡುಗೆಮನೆಯಲ್ಲಿರುವ ಈ ವಸ್ತುಗಳು ಉಪಯುಕ್ತವೆನಿಸಬಹುದು

ಆರೋಗ್ಯಕ್ಕೆ ಪುಷ್ಟಿ ನೀಡಬಲ್ಲ ಹಲವಾರು ಪದಾರ್ಥಗಳು ಭಾರತೀಯ ಅಡುಗೆಮನೆಗಳಲ್ಲೇ ಇರುತ್ತವೆ. ಅಡುಗೆಗೆ ಬಳಸುವ ವಸ್ತುಗಳೇ ಮನೆಮದ್ದಾಗಬಹುದು. ವಾತ ಚಿಕಿತ್ಸೆಗಾಗಿ ಅರಿಶಿನ, ಶುಂಠಿ, ತುಳಸಿ, ಲವಂಗ, ಏಲಕ್ಕಿ ಮತ್ತು ದಾಲ್ಚಿನ್ನಿ ಮುಂತಾದ ಪದಾರ್ಥಗಳನ್ನು ಸೇವಿಸಬಹುದು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಇದಲ್ಲದೆ, ಒಣ ಶುಂಠಿ, ಕರಿಮೆಣಸು ಮತ್ತು ತ್ರಿಕೂಟವು ಸಹ ಉಪಯುಕ್ತವೆಂದು ಸಾಬೀತುಪಡಿಸಬಹುದು. ಅರಿಶಿನ ಮತ್ತು ಜೇನುತುಪ್ಪದೊಂದಿಗೆ ಬೆರೆಸಿದ ಶುಂಠಿ ಮತ್ತು ತುಳಸಿ ರಸವನ್ನು ಕುಡಿಯಬಹುದು. ಇದು ಶೀತ ಮತ್ತು ಜ್ವರಕ್ಕೆ ಅತ್ಯುತ್ತಮ ಪರಿಹಾರವಾಗಿದೆ. ಹಾಗೆಯೇ, ವೀಳ್ಯದ ಎಲೆಯಲ್ಲಿ ಸುಣ್ಣ ಅಥವಾ ತಂಬಾಕು ಬಳಸುವುದನ್ನು ತಪ್ಪಿಸುವಂತೆ ಬಾಬಾ ರಾಮದೇವ್ ಸಲಹೆ ನೀಡುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುಚಿತ್ರಾಳ ಮೊಬೈಲ್ ರಹಸ್ಯ ಬಯಲು, ಈಕೆ ಸಂಪರ್ಕದಲ್ಲಿದ್ದವರಿಗೆ ಎಸ್ಪಿ ಮಹತ್ವದ ಕರೆ – Kannada News | Siddapur murder Case: Not Only Kamalakar Bhat Guruji, Suchitra Contact With Some Youths

ಕಾರವಾರ, (ಫೆಬ್ರವರಿ 06): ಕಲರ್​​ಫುಲ್​ ರೀಲ್ಸ್​ ಮಾಡಿಕೊಂಡು ಸಂಸಾರದಿಂದ ದೂರವಾಗಿ ನೌಟಂಕಿ ಆಡುತ್ತಿದ್ದ ಕಲಾಕರ್​ ಸುಚಿತ್ರಾ (Suchitra) ಕಥೆಗಳೇ ಬೆಚ್ಚಿ ಬೀಳಿಸುವಂತಿವೆ. ಗಂಡ, ಮಕ್ಕಳಿಗಿಂತ ಜ್ಯೋತಿಷಿ ಕಮಲಾಕರ್​ನೇ (Kamalakar bhat guruji) ಹೆಚ್ಚು ಅಂತಿದ್ದವಳಿಗೆ ಒಬ್ಬಿಬ್ಬರ ಸಹವಾಸ ಇರಲಿಲ್ವಂತೆ. ಸುಚಿತ್ರಾ ಮೊಬೈಲ್​ ಇಣಕಿದ ಪೊಲೀಸರಿಗೆ ಆಕೆಯ ಸಂಪರ್ಕ ಕ್ರಾಂತಿಯೇ ಅನಾವರಣ ಆಗಿವೆ. ಹೌದು.. ವಸಂತ್​ ನಾಯ್ಕ್​​ ಕೊಲೆ ಕೇಸ್​​ನಲ್ಲಿ ಜೈಲುಪಾಲಾಗಿರುವ ರೀಲ್ಸ್​ ರಾಣಿ ಸುಚಿತ್ರಾ ಕರಾಳ ಕಥೆಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ. ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಐನಾತಿಯ ಮೊಬೈಲ್​ ಪರಿಶೀಲನೆ ಮಾಡಿದ್ದು, ಪತಿ ಮಹೇಶ್​​ ನಾಯಕ್​ ಮಾಹಿತಿಯಿಂದ ಬೆಚ್ಚಿ ಬೀಳಿಸುವ ಸಂಗತಿಗಳು ಬಯಲಾಗಿವೆ. ಸುಚಿತ್ರಾಗೆ ಹಲವು ಯುವಕರ ಸಂಪರ್ಕ ಇರುವುದು ಮೊಬೈಲ್​ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಉತ್ತರ ಕನ್ನಡ, ಶಿವಮೊಗ್ಗ, ಕಲಬುರಗಿ ಭಾಗದ ಯುವಕರ ಈಕೆ ಜತೆ ಚಾಟ್​​ನಲ್ಲಿದ್ದಾರೆ ಎನ್ನುವ ಸಂಗತಿ ಬಯಲಾಗಿದೆ.

ಸಂಪರ್ಕದಲ್ಲಿದ್ದ ಹುಡುಗರು ಆತಂಕ

ರಾಣಿ ಸುಚಿತ್ರಾಳ ಮತ್ತಷ್ಟು ಕರ್ಮಕಾಂಡಗಳು ಬಯಲಾಗುತ್ತಿವೆ. ಕೇವಲ ಜ್ಯೋತಿಷಿ ಕಮಲಾಕರ್ ಭಟ್ ಮಾತ್ರವಲ್ಲ ಬೇರೆ ಬೇರೆ ಯುವಕರೊಂದಿಗೆ ಸಂಪರ್ಕದಲ್ಲಿದ್ದಾಳೆ ಎನ್ನುವ ಸ್ಫೋಟಕ ಮಾಹಿತಿ ಬಯಲಿಗೆ ಬಂದಿದೆ. ಸುಚಿತ್ರಾಳ ಮೊಬೈಲ್ ಪರಿಶೀಲನೆ ವೇಳೆ ಕಲಬುರಗಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲ ಹುಡುಗರ ಜೊತೆ ಸಂಪರ್ಕದಲ್ಲಿರುವುದು ಬೆಳಕಿಗೆ ಬಂದಿದೆ. ಸುಚಿತ್ರಾಳ ಪತಿ,ಮಗಳು ಬಾಯಿ ಬಿಡುತ್ತಿದ್ದಂತೆ ಯುವಕರು ದಂಗಾಗಿದ್ದಾರೆ. ಕೆಲವರು ಇನ್ಸ್ಟಾ ಅಕೌಂಟ್ ಡಿಲಿಟ್ ಮಾಡಿದ್ರೆ ಇನ್ನೂ ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬೇರೆ ಬೇರೆ ಹುಡುಗರ ಜೊತೆ ಇವಳು ನಿತ್ಯ ಸಂಪರ್ಕ ದಲ್ಲಿ ಇದ್ದಳು ಎಂದು, ಸುಚಿತ್ರಾಳ ಪತಿ ಹತ್ತಾರು ಆರೋಪಗಳನ್ನ ಮಾಡಿದ್ದ. ಈ ಬೆನ್ನಲ್ಲೇ ತಮ್ಮ ಬಂಡವಾಳ ಬಯಲಾಗುತ್ತಾ ಎಂಬ ಆತಂಕದಲ್ಲಿ, ಸಂಪರ್ಕದಲ್ಲಿದ್ದ ಹುಡುಗರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: ಜ್ಯೋತಿಷಿ ಕಮಲಾಕರ್‌‌ ಭಟ್‌‌, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್‌: ಅಸಲಿ ಮುಖ ಬಯಲು

ಯಾರಿಗಾದ್ರೂ ಮೋಸ ಮಾಡಿದ್ರೆ ದೂರು ಕೊಡಬಹುದು

ಇನ್ನು ಈ ಬಗ್ಗೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ದೀಪನ್ ಮಾತನಾಡಿದ್ದು, ಅವರಗುಪ್ಪ ಗ್ರಾಮದಲ್ಲಿ ವಸಂತ್ ನಾಯ್ಕ್ ಹತ್ಯೆ ಪ್ರಕರಣದ ಆರೋಪಿ ಸುಚಿತ್ರಾ ಜಾಲತಾಣ ಬೇರೆ ಹುಡುಗರ ಜೊತೆಗೆ ಸಂಪರ್ಕ ಇದ್ದಳೆಂದು ಪತಿ ಹೇಳಿದ್ದಾರೆ. ಹೀಗಾಗಿ ಸುಚಿತ್ರಾಳ ಸಾಮಾಜಿಕ ಜಾಲತಾಣಗಳ ಖಾತೆ, ಮೊಬೈಲ್​ ಪರಿಶೀಲನೆ ಮಾಡುತ್ತಿದ್ದೇವೆ. . ಸುಚಿತ್ರಾ ಯಾರಿಗಾದ್ರೂ ಮೋಸ ಮಾಡಿದ್ರೆ ದೂರು ಕೊಡಬಹುದು. ದೂರು ಕೊಟ್ಟವರಿಗೆ ಯಾವುದೇ ಸಮಸ್ಯೆ ಆಗಲ್ಲ. ದೂರು ಆಧರಿಸಿ ಸುಚಿತ್ರಾ ವಿರುದ್ಧ ತನಿಖೆಗೆ ಆದೇಶಿಸಲಾಗುವುದು. ಆದ್ರೆ. ಈವರೆಗೂ ಮೋಸ ಹೋದವರು ಯಾರೂ ದೂರು ಕೊಟ್ಟಿಲ್ಲ ಎಂದು ಹೇಳಿದರು.

ಇಬ್ಬರು ಪೊಲೀಸ್ ಸಿಬ್ಬಂದಿ ವರ್ಗಾವಣೆ

ವಸಂತ್ ನಾಯ್ಕ್ ಹತ್ಯೆಗೆ ಪೊಲೀಸರ ವೈಫಲ್ಯವೆ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಎಸ್​ಪಿ ದೀಪನ್​, ವೈಫಲ್ಯ ಮಾಹಿತಿ ಮೇರೆಗೆ ಸಿದ್ದಾಪುರ ಠಾಣೆಯ ಇಬ್ಬರನ್ನ ವರ್ಗಾವಣೆ ಮಾಡಿದ್ದಾರೆ. ಎಎಸ್​ಐ ಗಣಪತಿ ಭಟ್ ಹಾಗೂ ಹೆಡ್​​ಕಾನ್ಸ್​ಟೇಬಲ್ ಚಂದ್ರಶೇಖರ್​ನನ್ನ ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ನೋಡಿ: ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿ ಸುಚಿತ್ರಾಳ ಮತ್ತಷ್ಟು ಕಾಮಪುರಣ ಬಿಚ್ಚಿಟ್ಟ ಪತಿ

ಸುಚಿತ್ರಾ- ಮಹೇಶ್ ಲವ್ ಮ್ಯಾರೇಜ್

ಸುಚಿತ್ರಾ ಹಾಗೂ ಮಹೇಶ್ ಅವರದ್ದು ಲವ್ ಮ್ಯಾರೇಜ್. ಮಹೇಶ್​ ಅವರೇ ಸುಚಿತ್ರಾಳನ್ನು ಪ್ರೀತಿಸಿ ಮದ್ವೆಯಾಗಿದ್ದರು. ಆದ್ರೆ, ಇದೀಗ ಮಹೇಶನನ್ನು ಬಿಟ್ಟು ಕಮಲಾಕರ್ ಭಟ್ ನ ಹಿಂದೆ ಹೋಗಿದ್ದಾಳೆ. ಈ ಸಂಬಂಧ ಪತಿ ಮಹೇಶ್ ಮಾತನಾಡಿ, ಸುಚಿತ್ರಾಳನ್ನು ನಾನು ಪ್ರೀತಿಸಿ ಮದುವೆಯಾಗಿದ್ದೆ ಆರಂಭದಲ್ಲಿ ಇಬ್ಬರು ಚೆನ್ನಾಗಿ ಇದ್ದೇವು. ಬಳಿಕ ಒಂದು ಹೆಣ್ಣು ಮಗು ಆಯ್ತು. ಮಗಳು ದೊಡ್ಡವಳು ಆದ ಬಳಿಕ ಅವಳಿಗೆ ತಿಳಿವಳಿಕೆ ಬರಲು ಶುರು ಆಯ್ತು. ನಾನು ಬೆಂಗಳೂರಿನಲ್ಲಿ ಹೊಟೇಲ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದೆ. ಪ್ರತಿ ತಿಂಗಳು 20 ಸಾವಿರ ರೂ. ಅವಳಿಗೆ ಕಳುಹಿಸುತ್ತಿದ್ದೆ. ಈ ನಡುವೆ ಊರಿನಲ್ಲಿ ಇಬ್ಬರ ಯುವಕರ ಜೊತೆ ಸುಚಿತ್ರಾ ಸಂಬಂಧವಿತ್ತು. ಈ ವಿಷಯವನ್ನು ನನ್ನ ಮಗಳು ನನ್ನ ಗಮನಕ್ಕೆ ತಂದಿದ್ದಳು. ನಾನು ಪತ್ನಿಗೆ ಕೇಳಿದಾಗ ಯಾವುದು ಇಲ್ಲ ಎಂದು ಅಲ್ಲಗೆಳೆದಿದ್ದಳು. ಬಳಿಕ ಮತ್ತೊಂದು ಮಗುವಾಯ್ತು. ಎರಡು ಹೆಣ್ಣು ಮಕ್ಕಳಾದ ಮೇಲೆ ಅವಳು ದಾರಿ ತಪ್ಪಿದಳು ಎಂದು ತಿಳಿಸಿದ್ದಾರೆ.

ಸುಚಿತ್ರಾ ಹೇಳಿದಂತೆ ಜ್ಯೋತಿಷಿಯು ಕುಣಿದ

ಬರು ಬರುತ್ತಾ ಅವಳಿಗೆ ಮೊಬೈಲ್ ನಲ್ಲಿ ರೀಲ್ಸ್ ಹುಚ್ಚು ಜಾಸ್ತಿ ಆಗುತ್ತಾ ಹೋಯ್ತು. ಪೇಸ್ ಬುಕ್ ಇನಸ್ಟಾಗ್ರಾಂ ನಲ್ಲಿ ರೀಲ್ಸ್ ನೋಡಿ ನನಗೆ ಬೇಸರ ಆಗಿತ್ತು. ಸುಚಿತ್ರಾ ಸ್ನೇಹಿತೆ ಸುಮಾ ಮೂಲಕ ಕಮಲಾಕರ್ ಭಟ್ ಪರಿಚಯವಾಗಿದ್ದು, ಬಳಿಕ ಇಬ್ಬರು ಹತ್ತಿರವಾಗಿದ್ದರು.ಹೀಗೆ ಇಬ್ಬರು ಒಟ್ಟಿಗೆ ಇರುವುದನ್ನು ಪತ್ನಿ ಸುಚಿತ್ರಾ ವಿಡಿಯೋ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಮೂಲಕ ಜ್ಯೋತಿಷಿಯು ಅವಳ ಹೇಳಿದಂತೆ ಕುಣಿಯುತ್ತಿದ್ದಾನೆ. ಅವಳಿಗೆ ಕಾರು, ಬುಲೇಟ್ ಬೈಕ್ ,ಸೈಟ್ ಜಮೀನು ಕೊಡಿಸಿದ್ದಾನೆ. ಪತ್ನಿಗೆ ಗಂಡ ಮಕ್ಕಳಿಗಿಂತ ಅವಳಿಗೆ ಐಷಾರಾಮಿ ಜೀವನ ಬೇಕಾಗಿತ್ತು. ಈ ಹಿನ್ನಲೆಯಲ್ಲಿ ಅವಳು ಸ್ವಾಮೀಜಿ ಜೊತೆ ಹೋಗಿ ಸಂಸಾರ ಮಾಡುತ್ತಿದ್ದಳು. ಅವಳಿಗೆ ಕಾರ್ ಮತ್ತು ಬುಲೆಟ್ ಡ್ರೈವಿಂಗ್ ಬರುತ್ತಿರಲಿಲ್ಲ. ಅದನ್ನು ಸ್ವಾಮೀಜಿನೇ ಕಲಿಸಿಕೊಟ್ಟಿದ್ದಾನೆ.

ಸದ್ಯ ಎಸ್ ಸಿದ್ದಾಪುರ ಮೂಲದ ಜ್ಯೋತಿಷಿ ಕಮಲಾಕರ ಭಟ್ ಎರಡು ಮಕ್ಕಳ ತಾಯಿಯ ಸಂಗ ಮಾಡಿ ಕಾರವಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಆದ್ರೆ ಇತ್ತಿಚ್ಚಿಗೆ ಹಣ, ಆಸ್ತಿ ಮತ್ತು ಹೆಚ್ಚು ಪ್ರಚಾರ ಪಡೆದಿದ್ದ ಜ್ಯೋತಿಷಿ ವಿವಾಹಿತ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಆರೋಪ. ಪ್ರಾರಂಭದಲ್ಲಿ ಸತ್ಯನಾ ಎಂಬ ಪ್ರಶ್ನೆ ಮೂಡಿತ್ತು. ಒಂದೊಂದು ಫೋಟೋ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಆರೋಪ ಸತ್ಯ ಇರಬಹುದು ಎನ್ನಲಾಯ್ತು… ಇಂದು ಅದಕ್ಕೂ ಒಂದು ಹೆಜ್ಜೆ ಮುಂದೆ ಹೊಗಿದ್ದು, ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾ ಮಾತನಾಡಿದ್ದಾರೆ ಎನ್ನಲಾದ ರಾಸಲೀಲೇಯ ಆಡಿಯೋದ ಒಂದೋಂದು ಪದ ಪುಂಜವು ಕೇಳುವವರಿಗೆ ಅಸಹ್ಯ ಮೂಡಿಸುವಂತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:11 pm, Fri, 6 February 26

Source link

15 ಸಿಕ್ಸರ್, 175 ರನ್; ಹರಾರೆಯಲ್ಲಿ ವೈಭವ್ ಆರ್ಭಟಕ್ಕೆ ಇಂಗ್ಲೆಂಡ್ ಹೈರಾಣ

Source link

ಪಾಕಿಸ್ತಾನದ ಮಸೀದಿಯಲ್ಲಿ ಆತ್ಮಾಹುತಿ ಸ್ಫೋಟ ನಡೆದಿದ್ದು ಹೇಗೆ? – Kannada News | Suicide Bomb Blast Near Mosque In Pakistans Capital Islamabad

ಇಸ್ಲಮಾಬಾದ್, ಫೆಬ್ರವರಿ 6: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿರುವ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ (Bomb Blast) 24ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್​ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಶೆಹಜಾದ್ ಟೌನ್ ಪ್ರದೇಶದಲ್ಲಿರುವ ಶಿಯಾ ಮಸೀದಿ ತರ್ಲೈ ಇಮಾಮ್‌ಬರ್ಗಾದಲ್ಲಿ ಈ ಸ್ಫೋಟ ಸಂಭವಿಸಿದೆ. ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಅವರ ಎರಡು ದಿನಗಳ ಅಧಿಕೃತ ಭೇಟಿಯ ಸಮಯದಲ್ಲಿಯೇ ಈ ದಾಳಿ ನಡೆದಿದೆ.

ತಕ್ಷಣ ಪೊಲೀಸ್ ತಂಡಗಳು ಮತ್ತು ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ಸ್ಫೋಟದಲ್ಲಿ ಸುಮಾರು 80 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನಿ ಪತ್ರಿಕೆ ಡಾನ್ ವರದಿ ಮಾಡಿದೆ. ಸ್ಫೋಟದ ನಂತರ ಇಸ್ಲಮಾಬಾದ್​​ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ (PIMS) ಮತ್ತು ಪಾಲಿಕ್ಲಿನಿಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಇದನ್ನೂ ಓದಿ: Pakistan Mosque Blast: ಪಾಕಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟ, 10ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ

ಆನ್‌ಲೈನ್‌ನಲ್ಲಿ ಪ್ರಸಾರವಾಗುವ ಹಲವಾರು ವೀಡಿಯೊಗಳು ಸ್ಥಳದಲ್ಲಿ ಅವ್ಯವಸ್ಥೆಯ ದೃಶ್ಯಗಳನ್ನು ತೋರಿಸುತ್ತವೆ. ಜನರು ಭಯಭೀತರಾಗಿ ಓಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಸ್ಥಳದಲ್ಲಿದ್ದ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಗಾಯಾಳುಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಪ್ರಾರ್ಥನೆಗಾಗಿ ಜನರು ಮಸೀದಿಯಲ್ಲಿ ಸೇರಲು ಪ್ರಾರಂಭಿಸಿದರು. ಆತ್ಮಹತ್ಯಾ ಬಾಂಬರ್ ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿದನು, ಆದರೆ ಗೇಟ್ ಬಳಿ ಅವನನ್ನು ನಿಲ್ಲಿಸಲಾಯಿತು. ಅವನನ್ನು ಪರಿಶೀಲಿಸುತ್ತಿರುವಾಗ, ಅವನು ತನ್ನ ಸ್ಫೋಟಕಗಳನ್ನು ಸ್ಫೋಟಿಸಿದನು.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಬಾಂಬ್ ಬೆದರಿಕೆ ಹಾಕಿದ ಯುವಕನ ಬಂಧನ

ಸ್ಫೋಟದ ಫೋಟೋಗಳಲ್ಲಿ ದೇಹದ ಭಾಗಗಳು ಹರಡಿಕೊಂಡಿರುವುದು ಕಂಡುಬಂದಿದೆ. ಆರಂಭದಲ್ಲಿ ಇದನ್ನು ಆತ್ಮಹತ್ಯಾ ದಾಳಿ ಎಂದು ವರದಿ ಮಾಡಲಾಗುತ್ತಿದೆ. ಪೊಲೀಸರು ಮತ್ತು ಸೇನಾ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಸೇನೆಯು ಇಡೀ ಪ್ರದೇಶವನ್ನು ಸುತ್ತುವರೆದಿದೆ.

ಇನ್ನೂ ಯಾವುದೇ ಗುಂಪು ಬಾಂಬ್ ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲವಾದರೂ, ದೇಶದ ಅಲ್ಪಸಂಖ್ಯಾತರಾದ ಶಿಯಾ ಆರಾಧಕರ ಮೇಲೆ ಈ ಹಿಂದೆ ನಡೆದ ದಾಳಿಗಳಿಗೆ ಕಾರಣವಾಗಿರುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಥವಾ ಇಸ್ಲಾಮಿಕ್ ಸ್ಟೇಟ್ ಗುಂಪುಗಳ ಮೇಲೆ ಅನುಮಾನ ಹೆಚ್ಚಾಗಿದೆ. ಬಲೂಚ್ ಪ್ರತ್ಯೇಕತಾವಾದಿಗಳೊಂದಿಗೆ ಭದ್ರತಾ ಪಡೆಗಳು ಘರ್ಷಣೆ ನಡೆಸಿ ಸುಮಾರು 216 ಉಗ್ರರನ್ನು ಕೊಂದ ಸುಮಾರು 1 ವಾರದ ನಂತರ ಈ ದಾಳಿ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 4:34 pm, Fri, 6 February 26

Source link

ಇಂದಿನಿಂದ ಸಿದ್ಧಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವ: 15 ದಿನದ ಜಾತ್ರೆಯಲ್ಲಿ ಏನೆಲ್ಲಾ ವಿಶೇಷ ಗೊತ್ತಾ? – Kannada News | Tumakuru Siddaganga Jatre: Grand 15 Day Festival and Cattle Fair Begins

ಸಿದ್ದಗಂಗಾ ಮಠದಲ್ಲಿ ಜಾತ್ರಾ ಮಹೋತ್ಸವImage Credit source: tv9 kannada

ತುಮಕೂರು, ಫೆಬ್ರವರಿ 06: ಭಕ್ತಿ, ಸಂಸ್ಕೃತಿ, ವ್ಯಾಪಾರ ಮತ್ತು ಸಂಭ್ರಮ. ಈ ಎಲ್ಲದರ ಸಂಗಮವಾಗಿರುವ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ (siddaganga jatre) ಇಂದು ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ವಿಶೇಷವಾಗಿ ಜಾತ್ರೆಯ ಅಂಗವಾಗಿ ನಡೆಯುವ ದನದ ವ್ಯಾಪಾರ ಜನರ ಗಮನ ಸೆಳೆಯುತ್ತಿದೆ.

ಜಾತ್ರೆ ಪ್ರಯುಕ್ತ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ

ತುಮಕೂರು ಜಿಲ್ಲೆಯ ಸಿದ್ದಗಂಗಾ ಮಠದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಇಂದು ಸಂಭ್ರಮದಿಂದ ಆರಂಭವಾಗಿದೆ. ಜಾತ್ರೆ ಪ್ರಯುಕ್ತ ಇಂದಿನಿಂದ 15 ದಿನಗಳ ಕಾಲ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಕಳೆದ 60 ವರ್ಷಗಳಿಗೂ ಅಧಿಕ ಕಾಲದಿಂದ ಈ ವಸ್ತು ಪ್ರದರ್ಶನ ನಡೆದುಕೊಂಡು ಬರುತ್ತಿದ್ದು, ಜನರ ಗಮನ ಸೆಳೆಯುವ ಅಪಾರ ನಿರೀಕ್ಷೆ ಇದೆ.

ಇದನ್ನೂ ಓದಿ: ಕೊನೆಗೂ ಎಚ್ಚೆತ್ತ ಸರ್ಕಾರ: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಎದುರಾಗಿದ್ದ ನೀರಿನ ಆತಂಕ ದೂರ

ಇನ್ನು ಸಿದ್ದಗಂಗಾ ಜಾತ್ರೆ ಅಂದರೆ ಒಂದು ಸಂಭ್ರಮ. ಅದರಲ್ಲೂ ಭಕ್ತರು ಮತ್ತು ಜನರು ಕಾಯುವುದು ಒಂದೇ ಒಂದು ವಿಶೇಷಕ್ಕೆ, ಅದುವೇ ದನಗಳ ಜಾತ್ರೆ. ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದ ವಿವಿಧ ತಳಿಯ ಸಾವಿರಾರು ದನಗಳು ಜಾತ್ರೆಗೆ ಆಗಮಿಸಿವೆ. 60 ಸಾವಿರದಿಂದ 16 ಲಕ್ಷ ರೂ ಬೆಲೆ ಬಾಳುವ ವಿವಿಧ ತಳಿಯ ದನಗಳು ಇಲ್ಲಿ ವ್ಯಾಪಾರಕ್ಕೆ ಕರೆತರಲಾಗಿದ್ದು, ಈ 15 ದಿನಗಳ ಜಾತ್ರೆಯಲ್ಲಿ ದನಗಳ ಜಾತ್ರೆಗೆ ಹೆಚ್ಚಿನ ವ್ಯಾಪಾರ ನಡೆಯುವ ನಿರೀಕ್ಷೆ ಇದೆ.

13 ನಾಟಕಗಳ ಪ್ರದರ್ಶನ

ಸಿದ್ದಗಂಗಾ ಮಠದಲ್ಲಿ ದನದ ಜಾತ್ರೆ ಹೊರತು ಪಡಿಸಿ ಹಲವು ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ವಿಶೇಷವಾಗಿ ಮಠದ ಆವರಣದಲ್ಲಿ 1964ರಿಂದ ನಡೆದುಕೊಂಡು ಬಂದಿರುವ ವಸ್ತು ಪ್ರದರ್ಶನಕ್ಕೆ ತನ್ನದೇ ಆದ ಇತಿಹಾಸವಿದೆ. ಜಾತ್ರೆಯ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿ ಫೆಬ್ರವರಿ 16ರಂದು ರಥೋತ್ಸವ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಲು ಇಂದಿನಿಂದ 15 ದಿನಗಳ ಕಾಲ 31 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಇದರ ಜೊತೆಗೆ 13 ನಾಟಕಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ 7ನೇ ಪುಣ್ಯ ಸಂಸ್ಮರಣೆ: ನಾಳೆ ತುಮಕೂರಿಗೆ ಉಪರಾಷ್ಟ್ರಪತಿ

ಒಟ್ಟಾರೆ ಕೃಷಿ, ಕೈಗಾರಿಕಾ ವಸ್ತು ಪ್ರದರ್ಶನ ಜೊತೆಗೆ ಕಣ್ಮನ ಸೆಳೆಯುವ ದನಗಳ ಜಾತ್ರೆ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವ ಇಂದಿನಿಂದ 15 ದಿನಗಳ ಕಾಲ ನಡೆಯಲಿದ್ದು, ಲಕ್ಷಾಂತರ ಜನ ಸಿದ್ದಂಗಾಗ ಮಠಕ್ಕೆ ಹರಿದು ಬರುವ ನಿರೀಕ್ಷೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link