ಸಣ್ಣ ಉದ್ದಿಮೆಗಳಿಗೆ ಅಡಮಾನರಹಿತ ಸಾಲದ ಮಿತಿ 20 ಲಕ್ಷ ರೂಗೆ ಏರಿಕೆ; ಸಣ್ಣ ಎನ್ಬಿಎಫ್ಸಿಗಳಿಗೆ ನೊಂದಣಿ ವಿನಾಯಿತಿ – Kannada News | RBI rises collateral free loan limit for MSMEs, exempts NBFCs with smaller asset size from registration
ನವದೆಹಲಿ, ಫೆಬ್ರುವರಿ 6: ಸಣ್ಣ ಉದ್ದಿಮೆಗಳಿಗೆ ಪುಷ್ಟಿ ನೀಡಲು ಆರ್ಬಿಐ (RBI) ತನ್ನ ಅಡಮಾನರಹಿತ ಸಾಲದ (Collateral-free loan) ಮಿತಿಯನ್ನು ಏರಿಸಿದೆ. ಆರ್ಬಿಐ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಎಂಎಸ್ಎಂಇಗಳಿಗೆ ಅಡಮಾನರಹಿತವಾಗಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. 10 ಲಕ್ಷ ರೂ ಇದ್ದ ಇಂಥ ಸಾಲದ ಮಿತಿಯನ್ನು 20 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಇದರೊಂದಿಗೆ, ಎಂಎಸ್ಎಂಇಗಳು ಯಾವುದೇ ಸೆಕ್ಯೂರಿಟಿ ಒದಗಿಸುವ ಅಗತ್ಯ ಇಲ್ಲದೇ 20…