All posts by nagaraj11081993

U19 World Cup: ಫೈನಲ್​ನಲ್ಲಿ ಸಿಡಿಲಬ್ಬರದ ಶತಕ ಬಾರಿಸಿ ವಿಶ್ವ ದಾಖಲೆ ಸೃಷ್ಟಿಸಿದ ವೈಭವ್ – Kannada News | Vaibhav Suryavanshi: Youngest to Smash Fastest U19 World Cup Century at 14!

ವೈಭವ್ ಸೂರ್ಯವಂಶಿ.. ವಯಸ್ಸು ಕೇವಲ 14 ವರ್ಷವಾಗಿದ್ದರೂ, ನನ್ನಲ್ಲಿರುವ ಪ್ರತಿಭೆ ಸಾಗರದಷ್ಟು ಆಳವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಕಳೆದ ಐಪಿಎಲ್​ನಲ್ಲಿ ಘಟಾನುಘಟಿ ಬೌಲರ್​ಗಳನ್ನೇ ಬೆಂಡೆತ್ತಿ ಸ್ಫೋಟಕ ಶತಕ ಸಿಡಿಸಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದ ವೈಭವ್ ಸೂರ್ಯವಂಶಿ ಇದೀಗ ಅಂಡರ್ 19 ವಿಶ್ವಕಪ್​ನಲ್ಲೂ ಸಿಡಿಲಬ್ಬರದ ಶತಕ ಸಿಡಿಸಿ ವಿಶ್ವದಾಖಲೆ ಸೃಷ್ಟಿಸಿದ್ದಾರೆ. ಹರಾರೆಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 19 ವರ್ಷದೊಳಗಿನವರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ 55 ಎಸೆತಗಳಲ್ಲಿ ಈ ಟೂರ್ನಿಯ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ವೈಭವ್ ಅಂಡರ್ 19 ವಿಶ್ವಕಪ್​ನಲ್ಲಿ ಶತಕ ಬಾರಿಸಿದ ಅತಿ ಕಿರಿಯ ಹಾಗೂ ಎರಡನೇ ಅತಿ ವೇಗದ ಶತಕ ಬಾರಿಸಿದ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

Source link

ಸೇನೆಗೆ ಡ್ರೋನ್ ಪೂರೈಸುವ ಸಂಸ್ಥೆಗೆ ಕರ್ನಾಟಕ ಪೊಲೀಸರ ಕಿರುಕುಳ; ಹೈಕೋರ್ಟ್​ ಗರಂ! – Kannada News | Karnataka HC Slams Police for Harassing Bengaluru Drone Firm; Seeks Explanation

ಸೇನೆಗೆ ಡ್ರೋನ್ ಪೂರೈಸುವ ಸಂಸ್ಥೆಗೆ ಕರ್ನಾಟಕ ಪೊಲೀಸರ ಕಿರುಕುಳ

ಬೆಂಗಳೂರು, ಫೆಬ್ರುವರಿ 06: ಸೇನೆಗೆ ಡ್ರೋನ್ ಪೂರೈಸುವ ಬೆಂಗಳೂರಿನ ನ್ಯೂ ಸ್ಪೇಸ್ ರಿಸರ್ಚ್ ಟೆಕ್ ಸಂಸ್ಥೆಗೆ ಪೊಲೀಸರಿಂದ ಕಿರುಕುಳ ನೀಡಲಾಗಿದೆ ಎಂದು ಆರೋಪದ ಸಂಬಂಧ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ಇದಕ್ಕೆ ಹೈಕೋರ್ಟ್​, ಪೊಲೀಸರಿಂದ ವಿವರಣೆ ಕೇಳಿದೆ. ಡ್ರೋನ್ ಮಾದರಿಯ ಪರೀಕ್ಷಾ ಹಾರಾಟದ ವಿಷಯದಲ್ಲಿ ಸಂಸ್ಥೆಯನ್ನು ಸತಾಯಿಸಿದ್ದ  ಕಾರಣ ಸಂಸ್ಥೆ ಕರ್ನಾಟಕ ಹೈಕೋರ್ಟ್‌ನಲ್ಲಿ (High Court) ರಿಟ್ ಅರ್ಜಿ ಸಲ್ಲಿಸಿತ್ತು. ಈ ವಿಚಾರವಾಗಿ ನ್ಯಾ. ನಾಗಪ್ರಸನ್ನ ಅವರ ಪೀಠ,  ಸರಿಯಾದ ವಿವರಣೆ ನೀಡದೇ ಇದ್ದಲ್ಲಿ ಪೊಲೀಸರ ವಿರುದ್ಧ ಕ್ರಮ  ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದೆ.

ಎಫ್‌ಐಆರ್ ಪ್ರತಿಯನ್ನೂ ಸಂಸ್ಥೆಗೆ ನೀಡಿಲ್ಲ!

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಡ್ರೋನ್ ಮಾದರಿಯ ಪರೀಕ್ಷಾ ಹಾರಾಟ ನಡೆಸುವ ವೇಳೆ, ಡ್ರೋನ್ ಕಂಪೌಂಡ್ ದಾಟಿ ಬೇರೆ ಸ್ಥಳಕ್ಕೆ ಇಳಿದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಆದರೆ ಎಫ್‌ಐಆರ್ ಪ್ರತಿಯನ್ನು ನೀಡದೇ, ಅಕ್ರಮ ಪ್ರವೇಶ ಪ್ರಕರಣ ದಾಖಲಿಸಿ ಸಂಸ್ಥೆಯ ಎಂಡಿಯನ್ನು ಠಾಣೆಗೆ ಕರೆಸಿಕೊಂಡಿದ್ದರು. ಅದಲ್ಲದೆ ಎಂಡಿ ಬಳಿ ಲಾಭ–ನಷ್ಟ ಹಾಗೂ ವ್ಯವಹಾರದ ವಿವರಗಳ ಬಗ್ಗೆ ಪ್ರಶ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

6 ಗಂಟೆಗಳ ಕಾಲ ಸಂಸ್ಥೆಯ ಅಧಿಕಾರಿಗಳನ್ನು ಠಾಣೆಯಲ್ಲಿ ಕೂರಿಸಿದ್ದ ಪೊಲೀಸರು

ಪರೀಕ್ಷಾ ಹಾರಾಟಕ್ಕೆ ಡಿಜಿಸಿಎ ಅನುಮತಿ ತೋರಿಸಿದರೂ ಕಿರುಕುಳ ನೀಡಲಾಗಿದ್ದು, ಸುಮಾರು 6 ಗಂಟೆಗಳ ಕಾಲ ಸಂಸ್ಥೆಯ ಅಧಿಕಾರಿಗಳನ್ನು ಠಾಣೆಯಲ್ಲಿ ಕೂರಿಸಿಕೊಂಡಿದ್ದಾರೆ ಎಂದು ಡ್ರೋನ್ ಕಂಪೆನಿ ಪರ ವಕೀಲ ಅಂಗದ್ ಕಾಮತ್ ವಾದ ಮಂಡಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ, ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ಅವರಿಂದ ಪ್ರಮಾಣಪತ್ರದ ಮೂಲಕ ವಿವರಣೆ ನೀಡುವಂತೆ ಸೂಚಿಸಿದೆ. ವಿವರಣೆ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Pariksha Pe Charcha 2026: ತಂತ್ರಜ್ಞಾನ ಶಾಪ ಎಂದು ಭಾವಿಸುವ ಬದಲು “ವರದಾನ” ಎಂದು ಸ್ವೀಕರಿಸಿ – Kannada News | Pariksha Pe Charcha 2026: Modi Urges Students to be Responsible Citizens, Embrace Tech

ದೆಹಲಿ, ಫೆ. 6: ಪ್ರಧಾನಿ ನರೇಂದ್ರ ಮೋದಿ ಅವರು ‘ಪರೀಕ್ಷಾ ಪೇ ಚರ್ಚಾ’ (Pariksha Pe Charcha 2026) ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ಕೇವಲ ಪರೀಕ್ಷೆ ಮಾತ್ರವಲ್ಲದೆ ಸುಸ್ಥಿರ ಭವಿಷ್ಯದ ನಿರ್ಮಾಣದ ಬಗ್ಗೆಯೂ ಮಹತ್ವದ ಕರೆ ನೀಡಿದ್ದಾರೆ. ವಿದ್ಯಾರ್ಥಿಗಳನ್ನು “ಜವಾಬ್ದಾರಿಯುತ ನಾಗರಿಕರು” ಆಗುವಂತೆ ಕರೆ ನೀಡಿದರು. ‘ವಿಕಸಿತ ಭಾರತ’ದ ಗುರಿಯನ್ನು ತಲುಪಲು ಸ್ವಚ್ಛತೆ (Cleanliness) ಮೂಲಭೂತ ಅವಶ್ಯಕತೆ ಎಂದು ಅವರು ತಿಳಿಸಿದರು. ವಿದ್ಯಾರ್ಥಿಗಳು ಕೇವಲ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾತ್ರವಲ್ಲದೆ, ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಬೇಕು ಎಂದು ಆಶಿಸಿದರು. ತಂತ್ರಜ್ಞಾನವನ್ನು ಶಾಪ ಎಂದು ಭಾವಿಸುವ ಬದಲು ಅದನ್ನು “ವರದಾನ” ಎಂದು ಸ್ವೀಕರಿಸಬೇಕು ಎಂದು ಮೋದಿ ಹೇಳಿದರು. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದಿಂದ ದೂರವಿರುವುದು ಸಾಧ್ಯವಿಲ್ಲ, ಬದಲಿಗೆ ಅದನ್ನು ನಮ್ಮ ಬೆಳವಣಿಗೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಕಲೆ ನಮಗೆ ತಿಳಿದಿರಬೇಕು ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವು ಫೇಮಸ್ ಆಗಲು ನ್ಯಾಯಾಂಗವನ್ನು ವೇದಿಕೆಯಾಗಿ ಬಳಸುತ್ತಿದ್ದೀರಿ: ಜನ್​ ಸುರಾಜ್​ ಪಕ್ಷಕ್ಕೆ ಸುಪ್ರೀಂ ತರಾಟೆ – Kannada News | SC Rejects Jan Suraaj Plea on Bihar Elections, Calls Out Judiciary Misuse for Popularity

ನವದೆಹಲಿ, ಫೆಬ್ರವರಿ 06: ಬಿಹಾರ ವಿಧಾನಸಭಾ ಚುನಾವಣೆಯನ್ನು ಪ್ರಶ್ನಿಸಿ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್(Jan Suraaj) ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂಕೋರ್ಟ್​ ಶುಕ್ರವಾರ ನಿರಾಕರಿಸಿದೆ. ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸಿ ಹೊಸ ಚುನಾವಣೆಗೆ ಆದೇಶಿಸುವ ಕೋರಿಕೆಯ ಕುರಿತು ಯಾವುದೇ ನಿರ್ದೇಶನ ನೀಡಲು ಸಿಜೆಐ ಸೂರ್ಯಕಾಂತ್ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ನಿರಾಕರಿಸಿದೆ.

ನಿಮ್ಮ ರಾಜಕೀಯ ಪಕ್ಷ ಎಷ್ಟು ಮತಗಳನ್ನು ಪಡೆದುಕೊಂಡಿತ್ತು, ಜನರು ನಿಮ್ಮನ್ನು ತಿರಸ್ಕರಿಸುತ್ತಾರೆ ನಂತರ ನೀವು ಜನಪ್ರಿಯತೆ ಪಡೆಯಲು ನ್ಯಾಯಾಂಗ ವೇದಿಕೆ ಬಳಸುತ್ತೀರಿ ಎಂದು ಹೇಳಿದ್ದಾರೆ. ರಾಜಕೀಯ ಪಕ್ಷದ ಒತ್ತಾಯದ ಮೇರೆಗೆ ನಾವು ಇಡೀ ರಾಜ್ಯಕ್ಕೆ ಸರ್ವವ್ಯಾಪಿ ನಿರ್ದೇಶನ ನೀಡಲು ಸಾಧ್ಯವಿಲ್ಲ, ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ 10,000 ರೂ.ಗಳನ್ನು ವರ್ಗಾಯಿಸುವ ಮೂಲಕ ಬಿಹಾರ ಸರ್ಕಾರ ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದೆ ಎಂದು ಆರೋಪಿಸಿ ಜನ್ ಸುರಾಜ್ ಪಕ್ಷ (ಜೆಎಸ್‌ಪಿ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಯೋಜನೆಯು ಮಹಿಳೆಯರಿಗೆ ಸ್ವ-ಉದ್ಯೋಗ ಮತ್ತು ಸಣ್ಣ ವ್ಯವಹಾರಳನ್ನು ಉತ್ತೇಜಿಸಲು 10 ಸಾವಿರ ರೂ.ಗಳ ಆರಂಭಿಕ ಆರ್ಥಿಕ ಅನುದಾನವನ್ನು ಒದಗಿಸುತ್ತದೆ. ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯವು ಚುನಾವಣೆಯ ಮುನ್ನಾದಿನ 15,600 ಕೋಟಿ ರೂ.ಗಳನ್ನು ವಿತರಿಸಿದೆ. ಸಂವಿಧಾನದ 324ನೇ ವಿಧಿ ಮತ್ತು ಜನಪ್ರಾಥಿನಿಧ್ಯ ಕಾಯ್ದೆಯ ಸೆಕ್ಷನ್ 123ರ ಉಲ್ಲಂಘನೆಯಾಗಿ ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಮತ್ತಷ್ಟು ಓದಿ: ಬಿಹಾರದಲ್ಲಿ ಅಂತಿಮ ಹಂತದ ಚುನಾವಣೆ, ಜನ್ ಸುರಾಜ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ

ಈ ವಿಷಯ ಕುರಿತು ರಿಟ್ ಅರ್ಜಿಯನ್ನು ಪರಿಗಣಿಸುವುದಿಲ್ಲ ಎಂದು ಪೀಠ ಹೇಳಿದೆ.243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 202 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡರೆ ಇಂಡಿ ಒಕ್ಕೂಟ 35 ಸ್ಥಾನಗಳನ್ನು ಗಳಿಸಿತ್ತು. ಜನ್ ಸುರಾಜ್ ಪಕ್ಷವು ಒಂದೇ ಒಂದು ಸ್ಥಾನವನ್ನು ಗೆಲ್ಲಲು ವಿಫಲವಾಯಿತು, ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:25 pm, Fri, 6 February 26

Source link

ಹೊಸ ರೂಪದಲ್ಲಿ ಬರ್ತಿದೆ ‘ಸರಿಗಮಪ ಲಿಟ್ಲ್ ಚಾಂಪ್ಸ್’; ಆಡಿಷನ್ ಕೊಡೋಕೆ ರೆಡಿ ಆಗಿ – Kannada News | Saregamapa Little Champ Is Coming soon Zee Kannada Released Promo

ಜೀ ಕನ್ನಡ ವಾಹಿನಿಯು ಹೊಸ ಹೊಸ ರಿಯಾಲಿಟಿ ಶೋಗಳನ್ನು ನೀಡುತ್ತಾ ಬರುತ್ತಿದೆ. ಈಗಾಗಲೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಿಲಾಡಿ ಜೂನಿಯರ್ಸ್ ಪ್ರಸಾರ ಕಾಣುತ್ತಿದೆ. ಇದಾದ ಬಳಿಕ ಸರಿಗಮಪ ಲಿಟ್ಲ್​ ಚಾಂಪ್ಸ್ ಪ್ರಸಾರ ಕಾಣಲಿದೆ. ಈ ಪ್ರೋಮೋನ ರಿಲೀಸ್ ಮಾಡಲಾಗಿದೆ. ಮಕ್ಕಳ ಶೋ ಆಗಿರೋದ್ರಿಂದ ವೀಕ್ಷಕರು ಕಾಯುತ್ತಿದ್ದಾರೆ. ಶೀಘ್ರದಲ್ಲೇ ಆಡಿಷನ್ ನಡೆಯಲಿದೆ ಎಂದು ಜೀ ಕನ್ನಡ ವಾಹಿನಿ ಮಾಹಿತಿ ನೀಡಿದೆ. ಇದನ್ನು ಕೇಳಿ ವೀಕ್ಷಕರು ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಸಣ್ಣ ಉದ್ದಿಮೆಗಳಿಗೆ ಅಡಮಾನರಹಿತ ಸಾಲದ ಮಿತಿ 20 ಲಕ್ಷ ರೂಗೆ ಏರಿಕೆ; ಸಣ್ಣ ಎನ್​ಬಿಎಫ್​ಸಿಗಳಿಗೆ ನೊಂದಣಿ ವಿನಾಯಿತಿ – Kannada News | RBI rises collateral free loan limit for MSMEs, exempts NBFCs with smaller asset size from registration

ನವದೆಹಲಿ, ಫೆಬ್ರುವರಿ 6: ಸಣ್ಣ ಉದ್ದಿಮೆಗಳಿಗೆ ಪುಷ್ಟಿ ನೀಡಲು ಆರ್​ಬಿಐ (RBI) ತನ್ನ ಅಡಮಾನರಹಿತ ಸಾಲದ (Collateral-free loan) ಮಿತಿಯನ್ನು ಏರಿಸಿದೆ. ಆರ್​ಬಿಐ ಎಂಪಿಸಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಈ ನಿರ್ಧಾರ ಪ್ರಕಟಿಸಿದ್ದಾರೆ. ಎಂಎಸ್​ಎಂಇಗಳಿಗೆ ಅಡಮಾನರಹಿತವಾಗಿ ನೀಡಲಾಗುವ ಸಾಲದ ಮಿತಿಯನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. 10 ಲಕ್ಷ ರೂ ಇದ್ದ ಇಂಥ ಸಾಲದ ಮಿತಿಯನ್ನು 20 ಲಕ್ಷ ರೂಗೆ ಹೆಚ್ಚಿಸಲಾಗಿದೆ.

ಇದರೊಂದಿಗೆ, ಎಂಎಸ್​ಎಂಇಗಳು ಯಾವುದೇ ಸೆಕ್ಯೂರಿಟಿ ಒದಗಿಸುವ ಅಗತ್ಯ ಇಲ್ಲದೇ 20 ಲಕ್ಷ ರೂವರೆಗೆ ಸಾಲ ಪಡೆಯಲು ಅವಕಾಶ ಇರುತ್ತದೆ. ಈ ಕ್ರಮವು ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಸುಲಭ ಸಾಲಕ್ಕೆ ಅವಕಾಶ ಕೊಡುತ್ತದೆ. ಎಂಎಸ್​ಎಂಇಗಳು ದೇಶದ ಅರ್ಥ ವ್ಯವಸ್ಥೆಯ ಪ್ರಮುಖ ಭಾಗವಾಗಿರುವುದರಿಂದ, ಅವುಗಳ ಆರೋಗ್ಯ ಕಾಪಾಡಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳಲ್ಲಿ ಇದೂ ಒಂದು.

ಇದನ್ನೂ ಓದಿ: ರಿಪೋ ಬಡ್ಡಿದರ ಶೇ. 5.25ರಲ್ಲಿ ಮುಂದುವರಿಸಿದ ಆರ್​ಬಿಐ

ಸಣ್ಣ ಎನ್​ಬಿಎಫ್​ಸಿಗಳಿಗೆ ನೊಂದಣಿಯಿಂದ ವಿನಾಯಿತಿ

1,000 ಕೋಟಿ ರೂಗಿಂತ ಕಡಿಮೆ ಫಂಡಿಂಗ್ ಹೊಂದಿರುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್​ಬಿಎಫ್​ಸಿ) ನೊಂದಾಯಿಸಿಕೊಳ್ಳುವುದು ಕಡ್ಡಾಯಾಗಿರುವುದಿಲ್ಲ. ಹೆಚ್ಚಿನ ಗಾತ್ರದ ಎನ್​ಬಿಎಫ್​ಸಿಗಳು ಮಾತ್ರವೇ ಕಡ್ಡಾಯವಾಗಿ ನೊಂದಣಿ ಮಾಡಿಸಬೇಕು.

ಹಾಗೆಯೇ, ಕೆಲ ಎನ್​ಬಿಎಫ್​ಸಿಗಳು 1,000ಕ್ಕಿಂತ ಹೆಚ್ಚು ಶಾಖೆಗಳನ್ನು ತೆರೆಯಲು ಮುಂಚಿತವಾಗಿ ಅನುಮತಿ ಪಡೆಯಬೇಕೆಂದ ನಿಯಮವನ್ನೂ ಸಡಿಲಿಸಲಾಗಿದೆ.

ಇದನ್ನೂ ಓದಿ: ವಾಣಿಜ್ಯಾತ್ಮಕವಾಗಿ ಲಾಭವಿದ್ದರೆ ವೆನೆಜುವೆಲಾದಿಂದಲೂ ತೈಲ ಪಡೆಯುತ್ತೇವೆ: ಭಾರತ ಸರ್ಕಾರದ ಹೇಳಿಕೆ

ಪೇಮೆಂಟ್ ವಂಚನೆಯಾದರೆ 25,000 ರೂವರೆಗೆ ಪರಿಹಾರ

ಇದೇ ವೇಳೆ, ಆರ್​ಬಿಐ ಗವರ್ನರ್ ಅವರು ಪೇಮೆಂಟ್ ವಂಚನೆಗೊಳಗಾದ ಗ್ರಾಹಕರಿಗೆ 25,000 ರೂವರೆಗೆ ಪರಿಹಾರ ಒದಗಿಸುವ ಒಂದು ವ್ಯವಸ್ಥೆ ತರುತ್ತಿರುವುದಾಗಿ ತಿಳಿಸಿದ್ದಾರೆ. ಇದು ಸಣ್ಣ ಮೊತ್ತದ ವಂಚನೆಗೆ ಸಿಗಬಹುದಾದ ಪರಿಹಾರ. ಎಂಥ ಟ್ರಾನ್ಸಾಕ್ಷನ್​ಗಳಿಗೆ ಇದು ಅನ್ವಯ ಆಗುತ್ತದೆ ಎಂಬಿತ್ಯಾದಿ ಮಾಹಿತಿ ಗೊತ್ತಾಗಬೇಕಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕಮಲಾಕರ ಭಟ್ ಮತ್ತೊಂದು ಸೀಕ್ರೆಟ್ ಬಯಲು! ಗೋಶಾಲೆ ಹೆಸರಿನಲ್ಲಿ ಕೋಟಿ ಕೋಟಿ ಆಸ್ತಿ ಗಳಿಸಿದ್ದ ಜ್ಯೋತಿಷಿ – Kannada News | Astrologer Kamalakar Bhat Under Scanner: Crores Worth Assets in Name of Goshala Surface Amid Murder Case Probe

ಶಿವಮೊಗ್ಗ, ಫೆಬ್ರವರಿ 6: ರೀಲ್ಸ್ ರಾಣಿ ಸುಚಿತ್ರಾ ಜತೆ ಅಕ್ರಮ ಸಂಬಂಧ ಹಾಗೂ ಕೊಲೆ ಪ್ರಕರಣದಲ್ಲಿ ಸುದ್ದಿಯಲ್ಲಿರುವ ಕಮಲಾಕರ ಭಟ್ ಮತ್ತೊಂದು ರಹಸ್ಯ ಈಗ ಬಯಲಾಗಿದೆ. ಕಡಿಮೆ ಅವಧಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಎಕರೆಗಟ್ಟಲೆ ಆಸ್ತಿ ಖರೀದಿಸಿದ ವಿಚಾರ ಈಗ ಬೆಳಕಿಗೆ ಬಂದಿದ್ದು, ಆಸ್ತಿಗಳ ಕುರಿತು ಕೂಡ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ ಕಮಲಾಕರ್ ಭಟ್ 10 ಎಕರೆಗೂ ಹೆಚ್ಚು ಭೂಮಿಯನ್ನು ಖರೀದಿಸಿದ್ದ. ಈ ಜಮೀನನ್ನು ಗೋಶಾಲೆ, ಮಠ ಮತ್ತು ದೇವಸ್ಥಾನ ನಿರ್ಮಿಸಲು ಬಳಸುವುದಾಗಿ ಹೇಳಲಾಗಿತ್ತು. ಆದರೆ, ಸ್ಥಳದಲ್ಲಿ ಗೋವುಗಳಾಗಲೀ, ಸಿಬ್ಬಂದಿಯಾಗಲೀ ಕಂಡುಬರುತ್ತಿಲ್ಲ. ಕೇವಲ ಕೆಲವು ಶೆಡ್‌ಗಳು ಮತ್ತು ದೇವಸ್ಥಾನದ ಕಾಮಗಾರಿ ಮಾತ್ರ ಗೋಚರಿಸುತ್ತಿದೆ.

ಕಮಲಾಕರ್ ಭಟ್, ಕೆಲವೇ ವರ್ಷಗಳಲ್ಲಿ ಅಪಾರ ಆಸ್ತಿ ಸಂಪಾದಿಸಿದ್ದಾರೆ. ಶಿವಮೊಗ್ಗದಲ್ಲಿ ಮನೆ ಹೊಂದಿದ್ದ ಇವರು, ಸುಚಿತ್ರಾ ಪರಿಚಯದ ನಂತರ ಆಕೆಯ ಪತಿಯ ಅಣ್ಣ ವಸಂತ್ ನಾಯಕ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಸುಚಿತ್ರಾ ಜೊತೆಗಿನ ಸಂಬಂಧವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಕಮಲಾಕರ್ ಭಟ್ ಅವರ ಅಕ್ರಮ ಆಸ್ತಿ ಸಂಪಾದನೆ ಕುರಿತು ಸಾರ್ವಜನಿಕ ವಲಯದಲ್ಲಿ ಈಗ ಪ್ರಶ್ನೆಗಳು ಮೂಡಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಆರ್​​ಆರ್​​ಆರ್’ ಸಿನಿಮಾ ರೀಮೇಕ್ ಆಗುತ್ತಿದೆ, ಆದರೆ ಬೇರೆ ರೂಪದಲ್ಲಿ – Kannada News | SS Rajamouli planning to remade RRR movie in Anime

ರಾಜಮೌಳಿ (Rajamouli) ಈಗ ಗ್ಲೋಬಲ್ ಐಕಾನ್ ಆಗಿದ್ದಾರೆ. ಅವರನ್ನು ಗ್ಲೋಬಲ್ ಐಕಾನ್ ಆಗುವಂತೆ ಮಾಡಿದ್ದು ಅವರ ಈ ಹಿಂದಿನ ಸಿನಿಮಾ ‘ಆರ್​​ಆರ್​​ಆರ್’. ಈ ಸಿನಿಮಾ ಭಾರಿ ಯಶಸ್ಸು ಗಳಿಸುವ ಜೊತೆಗೆ ವಿದೇಶದ ಬಾಕ್ಸ್ ಆಫೀಸ್​​ನಲ್ಲೂ ದೊಡ್ಡ ಯಶಸ್ಸು ಗಳಿಸಿತು. ಜೇಮ್ಸ್ ಕ್ಯಾಮೆರಾನ್, ಸ್ಟಿವನ್ ಸ್ಪೀಲ್​​ಬರ್ಗ್ ಇನ್ನೂ ಹಲವು ಖ್ಯಾತನಾಮ ನಿರ್ದೇಶಕರು ಸಿನಿಮಾ ನೋಡಿ ರಾಜಮೌಳಿಯ ಪ್ರತಿಭೆಯನ್ನು ಕೊಂಡಾಡಿದರು. ಇದೀಗ ಈ ಸಿನಿಮಾವನ್ನು ಇನ್ನೊಂದು ರೂಪದಲ್ಲಿ ಹೊರ ತರಲು ರಾಜಮೌಳಿ ಸಜ್ಜಾಗಿದ್ದಾರೆ.

ರಾಜಮೌಳಿ ಅವರು ತಮ್ಮ ಬ್ಲಾಕ್‌ಬಸ್ಟರ್ ಸಿನಿಮಾ ‘RRR’ ಅನ್ನು ಅನಿಮೆ (Anime) ರೂಪದಲ್ಲಿ ತರುವ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇದು ಸಿನಿಮಾ ಪ್ರೇಮಿಗಳಲ್ಲಿ ಮತ್ತು ವಿಶೇಷವಾಗಿ ಅನಿಮೆ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಅನಿಮೆ ಭಾರಿ ಜನಪ್ರಿಯ ಆಗಿರುವ ಹಾಗೂ ಅತಿ ಹೆಚ್ಚು ಅನಿಮೆ ಸಿನಿಮಾಗಳು ರೂಪುತಳೆಯುವ, ಜಪಾನ್‌ನಲ್ಲಿ ‘RRR’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ರಾಜಮೌಳಿ ಅವರಿಗೆ ‘ಆರ್​​ಆರ್​​ಆರ್’ ಸಿನಿಮಾವನ್ನು ಅನಿಮೆ ರೂಪದಲ್ಲಿ ರೀಮೇಕ್ ಮಾಡುವ ಐಡಿಯಾ ಬಂದಿದೆ.

ರಾಜಮೌಳಿ ಅವರಿಗೆ ಸಿನಿಮಾದ ವಿವಿಧ ತಂತ್ರಜ್ಞಾನಗಳ ಬಗ್ಗೆ ಬಹಳ ಆಸಕ್ತಿ. ಅವರ ನಿರ್ದೇಶನದ ‘ಬಾಹುಬಲಿ’ ಸಿನಿಮಾವನ್ನು ಕಾರ್ಟೂನ್ ರೂಪದಲ್ಲಿ ಈಗಾಗಲೇ ಹೊರ ತರುತ್ತಿದ್ದು, ಅದರ ಟ್ರೈಲರ್ ಸಹ ಈಗಾಗಲೇ ಬಿಡುಗಡೆ ಆಗಿದೆ. ಇದೀಗ ‘ಆರ್​​ಆರ್​​ಆರ್’ ಅನ್ನು ಅನಿಮೆ ರೂಪದಲ್ಲಿ ಹೊರತರುವ ಬಗ್ಗೆ ಆಲೋಚಿಸಿದ್ದಾರೆ. ರಾಜಮೌಳಿ ಅವರು ತಮ್ಮ ಕಳೆದ ಜಪಾನ್ ಪ್ರವಾಸದ ವೇಳೆ ಅವರು ಕಜುಟೊ ನಕಜಾವಾ ಹಾಗೂ ಇನ್ನೂ ಕೆಲವು ಖ್ಯಾತ ಅನಿಮೆ ನಿರ್ಮಾಪಕರನ್ನು ಭೇಟಿಯಾಗಿ, ಅನಿಮೇಷನ್ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದ್ದಾರೆ. “ಜಪಾನಿನ ಅನಿಮೆಗಳ ಮೇಕಿಂಗ್ ಬಗ್ಗೆ ನನಗೆ ಯಾವಾಗಲೂ ಕುತೂಹಲವಿತ್ತು” ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾ ಮನವಿಯನ್ನು ಪುರಸ್ಕರಿಸಿದ ರಾಜಮೌಳಿ, ಆದರೆ…

‘RRR’ ಸಿನಿಮಾದಲ್ಲಿರುವ ಅತಿಮಾನುಷ ಆಕ್ಷನ್ ದೃಶ್ಯಗಳು, ನಾಯಕರ ನಡುವಿನ ಸ್ನೇಹ ಮತ್ತು ದೃಶ್ಯ ವೈಭವವು ಅನಿಮೆ ಶೈಲಿಗೆ ಚೆನ್ನಾಗಿ ಹೊಂದಿಕೆ ಆಗುತ್ತದೆ. ಆದರೆ ‘ಆರ್​​ಆರ್​​ಆರ್’ ಸಿನಿಮಾದ ಅನಿಮೆ ರೂಪವು ಕೇವಲ ಸಿನಿಮಾದ ಯಥಾವತ್ ರೀಮೇಕ್ ಆಗಿರದೆ ಕೊಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮರಾಜು ಅವರ ಜೀವನದ ಇನ್ನಷ್ಟು ರೋಚಕ ಕಥೆಗಳನ್ನು ಒಳಗೊಂಡಿರುವ ಎನ್ನಲಾಗುತ್ತಿದೆ.

ಸದ್ಯ ರಾಜಮೌಳಿ ಅವರು ಮಹೇಶ್ ಬಾಬು ಅವರೊಂದಿಗೆ ದೊಡ್ಡ ಮಟ್ಟದ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆಯೇ, ತಮ್ಮ ನಿರ್ಮಾಣದ ‘ಬಾಹುಬಲಿ: ದಿ ಎಟರ್ನಲ್ ವಾರ್’ ಎಂಬ ಅನಿಮೇಟೆಡ್ ಸರಣಿಯನ್ನು ಘೋಷಿಸುವ ಮೂಲಕ ಅನಿಮೇಷನ್ ಜಗತ್ತಿಗೆ ಅಡಿ ಇಟ್ಟಿದ್ದಾರೆ. ಒಂದು ವೇಳೆ ‘RRR’ ಅನಿಮೆ ಅಧಿಕೃತಗೊಂಡರೆ, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಜಾಗತಿಕ ಮಟ್ಟದ ಅನಿಮೆ ಸರಣಿಯಾಗಿ ಗುರುತಿಸಿಕೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ, ನಾಯಕತ್ವ ಬದಲಾವಣೆ ಇಲ್ಲ: ಯತೀಂದ್ರ – Kannada News | No Leadership Change in Karnataka: High Command Gives Green Signal to Siddaramaiah to Continue Full Term, Says Yathindra

ಮೈಸೂರು, ಫೆಬ್ರವರಿ 6: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಪೂರ್ಣಾವಧಿ ಮುಂದುವರಿಯಲಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಕುರಿತು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದ್ದು, ರಾಜಕೀಯ ವಲಯದಲ್ಲಿ ಈ ಬಗ್ಗೆ ಗೊಂದಲವಿಲ್ಲ. ಹೈಕಮಾಂಡ್ ಕಡೆಯಿಂದ ಸ್ಪಷ್ಟ ಸೂಚನೆ ಲಭಿಸಿದ್ದು, ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಎಂದರು.

ಯಾರೋ ಕೆಲವರು ನಾಯಕತ್ವ ಬದಲಾವಣೆಗೆ ಪ್ರಯತ್ನಿಸಿದ್ದರು. ಆದರೆ, ಆ ಪ್ರಯತ್ನಕ್ಕೆ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಹೀಗಾಗಿ ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿ ಆಗಿ ಅಧಿಕಾರ ಮುನ್ನಡೆಸಲಿದ್ದಾರೆ ಎಂದು ಯತೀಂದ್ರ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಲಾರ ಜಾತ್ರೆಯಲ್ಲಿ ಬ್ಯಾಚುಲರ್ಸ್ ಬೇಡಿಕೊಂಡಿದ್ದೇನು ಗೊತ್ತಾ? ಕಲ್ಲಿನಲ್ಲಿ ಮಂಟಪ ಕಟ್ಟಿದ ಯುವಕರು – Kannada News | Huvina Hadagali’s Mylara Jatre: Youth Seek Kankana Bhagya with Stone Houses

ವಿಜಯನಗರ, ಫೆ.6: ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಲಿಂಗೇಶ್ವರನ ಜಾತ್ರೆ ಎಂದರೆ ಅದು ಕೇವಲ ಧಾರ್ಮಿಕ ಉತ್ಸವವಲ್ಲ, ಅದು ಲಕ್ಷಾಂತರ ಭಕ್ತರ ನಂಬಿಕೆಗಳ ಪ್ರತಿಬಿಂಬ. ಆದರೆ ಈ ಬಾರಿ ಮೈಲಾರ ಜಾತ್ರೆಯಲ್ಲಿ ಕಂಡುಬಂದ ಒಂದು ದೃಶ್ಯ ಮಾತ್ರ ಎಲ್ಲರ ಗಮನ ಸೆಳೆದಿದೆ ಮತ್ತು ಇಂದಿನ ಸಾಮಾಜಿಕ ಸ್ಥಿತಿಗತಿಯ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಕರಿಗೆ, ಅದರಲ್ಲೂ ವಿಶೇಷವಾಗಿ ಕೃಷಿಯನ್ನೇ ನಂಬಿಕೊಂಡಿರುವ ರೈತ ಯುವಕರಿಗೆ ಹೆಣ್ಣು ಸಿಗುವುದು ದೊಡ್ಡ ಸವಾಲಾಗಿದೆ. ಇದೇ ಕಾರಣಕ್ಕೆ ನೂರಾರು ಯುವಕರು ಮೈಲಾರಲಿಂಗೇಶ್ವರನ ಜಾತ್ರೆಯಲ್ಲಿ ವಿಶಿಷ್ಟವಾಗಿ ಬೇಡಿಕೊಂಡಿದ್ದಾರೆ. ಇನ್ನು ಮನೆ ಕಟ್ಟುವವರು ಮೈಲಾರ ಲಿಂಗೇಶ್ವರನ ಬಳಿ ಬೇಡಿಕೊಂಡ ನೂರಾರು ಯುವಕರು ಮೈಲಾರ ಕಾರ್ಣೀಕದ ವೇಳೆ ಅಲ್ಲೇ ಸಿಗೋ ಸಣ್ಣ ಸಣ್ಣ ಕಲ್ಲುಗಳಿಂದ ಮನೆ ಆಕೃತಿ ನಿರ್ಮಿಸಲಾಗುತ್ತಾರೆ. ಹೀಗೆ ಮನೆ ಆಕೃತಿ ಮಾಡಿ ಭಕ್ತಿಯಿಂದ ಬೇಡಿಕೊಂಡ್ರೆ, ಬಹುದಿನಗಳ ಕನಸು ನನಸಾಗುತ್ತೆ ಎಂಬ ನಂಬಿಕೆ ಭಕ್ತರದ್ದು. ಇದೇ ರೀತಿ ಮದುವೆ ಆಗದ ಯುವಕರು ಹುಲ್ಲಿನಲ್ಲಿ ಹಂದರ ಕಟ್ಟಿದರೆ (ಮದುವೆ ಮಂಟಪ) ಕಂಕಣ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ. ಹೀಗಾಗಿ ಕಾರ್ಣೀಕದ ದಿನವೇ ಮೈಲಾರದ ಡಂಕಣಮರಡಿ ಎಂಬಲ್ಲಿ ಕುಳಿತು ಹಂದಿರ ನಿರ್ಮಿಸಿದ್ದಾರೆ.

ವರದಿ: ಅಣ್ಣಪ್ಪ ಬರ್ಕಿ

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link