ಬೆಂಗಳೂರು ಹೋಟೆಲ್ ಮಾಲೀಕರಿಗೆ ಗುಡ್ನ್ಯೂಸ್ ಕೊಟ್ಟ ಸಚಿವ ಮುನಿಯಪ್ಪ
ಬೆಂಗಳೂರು, ಮಾರ್ಚ್ 30: ನಗರದ ಹೋಟೆಲ್‌ಗಳಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕೊರತೆಯು ತೀವ್ರ ಆತಂಕ ಸೃಷ್ಟಿಸಿದೆ. ಈ ನಡುವೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದು, ನಾಳೆ ನಗರದ ಹೋಟೆಲ್‌ಗಳಿಗೆ 17,500 ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಆದೇಶದ ಅನ್ವಯ, ಇಂದು ವಿತರಕರಿಗೆ ಸಿಲಿಂಡರ್‌ಗಳು ತಲುಪಲಿದ್ದು, ನಾಳೆಯಿಂದ ಹೋಟೆಲ್ ಮಾಲೀಕರಿಗೆ ವಿತರಣೆ ಆರಂಭವಾಗಲಿದೆ. ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಹೋಟೆಲ್ ಮಾಲೀಕರ ಆತಂಕ ನಾಳೆಯಿಂದ ಬಗೆಹರಿಯಲಿದೆ ಎಂದು…