All posts by nagaraj11081993

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 3ರ ದಿನಭವಿಷ್ಯ

ಈ ದಿನ ಭೂಮಿ ಸೂಕ್ತದ ಶ್ರವಣ ಮಾಡುವುದರಿಂದ ಹಲವು ರೀತಿಯ ಅನುಕೂಲಗಳು ಆಗಲಿವೆ. ಸೈಟು- ಜಮೀನು ಅಥವಾ ಬೇರೆ ಯಾವುದಾದರೂ ಭೂಮಿಗೆ ಸಂಬಂಧಿಸಿದ ವಿಷಯಗಳಲ್ಲಿನ ಅಡೆತಡೆಗಳು, ಸಮಸ್ಯೆಗಳು ದೂರವಾಗಲಿವೆ. ಇನ್ನು ಸೈಟು- ಜಮೀನು ಖರೀದಿಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅದರಲ್ಲೂ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಎಲ್ಲ ಸನ್ನಿವೇಶದಲ್ಲಿ ಹಾಕಿದ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ನಿರೀಕ್ಷೆ ಹೆಚ್ಚಾದಷ್ಟೂ ಬೇಸರ ಸಹ ಪಡುವಂತೆ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸುವಂತೆ ಆಗಲಿದೆ. ಚಿನ್ನ- ಬೆಳ್ಳಿ ಅಥವಾ ವಜ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡುವ ಯೋಗ ಇದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದಲ್ಲಿ ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮಗೇನೋ ಅತಿ ಉತ್ಸಾಹ ಇರುತ್ತದೆ. ಆದರೆ ಸುತ್ತಮುತ್ತಲಿನವರ ಪರಿಸ್ಥಿತಿ, ಮನಸ್ಥಿತಿಯನ್ನು ಸಹ ಅರ್ಥ ಮಾಡಿಕೊಂಡು ಮಾತುಕತೆ ಆಡುವುದು ಒಳ್ಳೆಯದು. ಹಣಕಾಸಿನ ವಿಚಾರ ಮಾತನಾಡುತ್ತೀರಿ ಅಂತಾದಲ್ಲಿ ಸಾಧ್ಯಾಸಾಧ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಇರಬೇಕು. ಮನೆ ನಿರ್ಮಾಣ, ಆಸ್ತಿ ಖರೀದಿಯ ಮಾತುಕತೆಗೆ ತೆರಳುತ್ತಿದ್ದೀರಿ ಅಂತಾದಲ್ಲಿ ಮನೆ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಮುಂದುವರಿಯಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಶ್ರಮ ಹಾಗೂ ಶಿಸ್ತಿನ ಜೀವನಕ್ಕೆ ಪ್ರಾಮುಖ್ಯ ನೀಡುವ ದಿನ ಇದಾಗಿರುತ್ತದೆ. ನೀವು ಕೈಗೆತ್ತಿಕೊಂಡಿರುವ ಕೆಲಸ- ಕಾರ್ಯಗಳು ನಿಧಾನವಾಗಿ ಮುಂದಕ್ಕೆ ಸಾಗಿದರೂ ದೃಢವಾಗಿ ಗುರಿಯತ್ತ ತಲುಪುವ ಸೂಚನೆ ದೊರೆಯುತ್ತದೆ. ಸರ್ಕಾರಿ ಕೆಲಸಗಳು ಹಾಗೂ ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬ ಆಗಬಹುದು. ಆದರೆ ತಾಳ್ಮೆ- ಸಂಯಮದಿಂದ ಮುಂದುವರಿದಲ್ಲಿ ಯಶಸ್ವಿಯಾಗಿ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

ಜಾಗತಿಕ ಶಾಂತಿಗೆ ಟ್ರಂಪ್ ನಾಯಕತ್ವ ಅತ್ಯಗತ್ಯ; ಸುಂಕ ಕಡಿತದ ಬಳಿಕ ಅಮೆರಿಕಕ್ಕೆ ಪ್ರಧಾನಿ ಮೋದಿ ಧನ್ಯವಾದ – Kannada News | PM Modi thanks Donald Trump for reducing tariffs says His leadership vital for global peace

ನವದೆಹಲಿ, ಫೆಬ್ರವರಿ 2: ಭಾರತದ ಮೇಲಿನ ಶೇ. 25ರಷ್ಟು ಸುಂಕವನ್ನು ಶೇ. 18ಕ್ಕೆ ಇಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಅಲ್ಲದೆ, ಈ ಸುಂಕವನ್ನು ಶೂನ್ಯಕ್ಕೆ ಇಳಿಸುವ ಗುರಿ ನಮ್ಮ ಮುಂದಿದೆ ಎಂದು ಕೂಡ ಹೇಳಿದ್ದಾರೆ. ಇದಕ್ಕೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಿದ್ದಕ್ಕಾಗಿ ಭಾರತದ 1.4 ಬಿಲಿಯನ್ ಜನರ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಪ್ರಧಾನಿ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಭಾರತದಲ್ಲಿ ತಯಾರಾದ ಉತ್ಪನ್ನಗಳು ಈಗ ಶೇ. 18ರಷ್ಟು ಕಡಿಮೆ ಸುಂಕವನ್ನು ಹೊಂದಿರುವುದು ಸಂತೋಷದ ಸಂಗತಿಯಾಗಿದೆ” ಎಂದು ಪ್ರಧಾನಿ ಮೋದಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

“ನನ್ನ ಆತ್ಮೀಯ ಗೆಳೆಯರಾದ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಇಂದು ಮಾತನಾಡಿ ಸಂತೋಷವಾಯಿತು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಈಗ ಶೇ. 25ರ ಬದಲು ಶೇ. 18ರಷ್ಟು ಸುಂಕವನ್ನು ಮಾತ್ರ ಹೊಂದುತ್ತಿರುವುದು ಸಂತೋಷ ತಂದಿದೆ. ಈ ಅದ್ಭುತ ಘೋಷಣೆಗಾಗಿ ಭಾರತದ 1.4 ಶತಕೋಟಿ ಜನರ ಪರವಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್

“ಎರಡು ದೊಡ್ಡ ಆರ್ಥಿಕತೆಗಳು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಗಳು ಒಟ್ಟಾಗಿ ಕೆಲಸ ಮಾಡಿದಾಗ ಅದು ನಮ್ಮ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಅಲ್ಲದೆ ಪರಸ್ಪರ ಅಪಾರ ಅವಕಾಶಗಳನ್ನು ತೆರೆಯುತ್ತದೆ. ಅಧ್ಯಕ್ಷ ಟ್ರಂಪ್ ಅವರ ನಾಯಕತ್ವವು ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಅತ್ಯಗತ್ಯ. ಶಾಂತಿಗಾಗಿ ಅವರ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಯೂರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದಕ್ಕೆ ಸಹಿ; ಹೊಸ ಇತಿಹಾಸ

ವ್ಯಾಪಾರ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ರಷ್ಯಾದ ತೈಲ ಖರೀದಿಯನ್ನು ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಇಂದು ಟ್ರಂಪ್ ತಮ್ಮ ಘೋಷಣೆಯ ವೇಳೆ ಭಾರತದ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ವಿಷಯವನ್ನು ಮಾತ್ರವಲ್ಲದೆ ಭಾರತ ರಷ್ಯಾದ ಬದಲು ಅಮೆರಿಕ ಹಾಗೂ ವೆನೆಜುವೆಲಾದಿಂದ ತೈಲ ಖರೀದಿ ಮಾಡಲಿದೆ ಎಂದು ಕೂಡ ಹೇಳಿದ್ದರು. ಆದರೆ, ಈ ಬಗ್ಗೆ ಭಾರತ ಸರ್ಕಾರದಿಂದ ಯಾವುದೇ ಸ್ಪಷ್ಟನೆ ದೊರೆತಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತದ ಜೊತೆ ವ್ಯಾಪಾರ ಒಪ್ಪಂದ ಘೋಷಿಸಿದ ಅಮೆರಿಕ; ಸುಂಕವನ್ನು ಶೇ. 18ಕ್ಕೆ ಇಳಿಸಿದ ಟ್ರಂಪ್ – Kannada News | Donald Trump announces trade deal with India after talks with PM Modi tariffs lowered to 18 percent

ನವದೆಹಲಿ, ಫೆಬ್ರವರಿ 2: ತನ್ನ ಆಪ್ತ ಸ್ನೇಹಿತನಾದ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಫೋನ್​ನಲ್ಲಿ ಮಾತುಕತೆ ನಡೆಸಿದ ಅಮೆರಿಕ ಅಧ್ಯಕ್ಷ ಸರ್​ಪ್ರೈಸ್​ ನೀಡಿದ್ದಾರೆ. ಭಾರತ ಯುರೋಪ್ ಮತ್ತು ಅರಬ್ ಲೀಗ್ ಟ್ರೇಡ್ ಲೀಗ್ ಮಾಡಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಡೊನಾಲ್ಡ್ ಟ್ರಂಪ್ ಭಾರತದ ಜೊತೆಗೆ ವ್ಯಾಪಾರ ಒಪ್ಪಂದವನ್ನು ಘೋಷಿಸಿದ್ದಾರೆ. ಭಾರತದ ಮೇಲೆ ಹೇರಲಾಗಿದ್ದ ದುಬಾರಿ ಸುಂಕವನ್ನು ಕಡಿಮೆ ಮಾಡಿದ್ದು, ಶೇ. 25ರಷ್ಟಿದ್ದ ಸುಂಕವನ್ನು ಶೇ. 18ಕ್ಕೆ ಇಳಿಸಿದ್ದಾರೆ. ಭಾರತದ ಪಾಲಿಗೆ ಅಮೆರಿಕದ ಈ ನಿರ್ಧಾರ ಬಹಳ ಮಹತ್ವದ್ದಾಗಿದೆ.

Published On – 10:49 pm, Mon, 2 February 26

Source link

ಆ ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ – Kannada News | Yash mother Pushpa Arun Kumar talks about her land dispute in Hassan

ಹಾಸನದಲ್ಲಿ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ (Yash) ತಾಯಿ ಪಷ್ಪಾ ಅರುಣ್ ಕುಮಾರ್ ಅವರು ಕಾನೂನಿನ ಹೋರಾಟ ಮುಂದುವರಿಸಿದ್ದಾರೆ. ಯಶ್ ಅವರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಅವರಿಗೆ ಈ ಚಿಕ್ಕ ಸೈಟ್ ಏನೇನೂ ಅಲ್ಲ. ಹಾಗಿದ್ದರೂ ಕೂಡ ಪುಷ್ಪಾ ಅವರು ಹಠ ಹಿಡಿದಿರುವುದು ಯಾಕೆ ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಅದಕ್ಕೆ ಅವರೇ ಈಗ ಉತ್ತರ ನೀಡಿದ್ದಾರೆ. ‘ನಾನು ಅರುಣ್ ಕುಮಾರ್ ಹೆಂಡತಿ ಆಗಿ ಮಾತನಾಡುತ್ತಿದ್ದೇನೆ. ಯಶ್ ಅಮ್ಮನಾಗಿ ಮಾತನಾಡುತ್ತಿಲ್ಲ. ಯಶ್ ಇಂದು ಕೋಟಿಗಟ್ಟಲೆ ದುಡಿಯುತ್ತಿರಬಹುದು. ಅವನಿಗೆ ಇದು ಚಿಕ್ಕದು ಆಗಿರಬಹುದು. ಆದರೆ ಎಲ್ಲ ಸಾರ್ವಜನಿಕರಿಗೆ ಇದು ಗೊತ್ತಾಗಬೇಕು. ಯಾರೂ ಕೂಡ ಹೆದರಿಕೊಂಡು ಬಿಟ್ಟುಬರಬಾರದು. ನಾನು ಹೆದರಿಕೊಂಡು ಬಿಟ್ಟುಹೋದರೆ ಎಲ್ಲರೂ ಇದೇ ರೀತಿ ಹೆದರಿಕೊಂಡು ಬಿಟ್ಟು ಹೋಗಬೇಕಾಗುತ್ತದೆ’ ಎಂದು ಪುಷ್ಪಾ ಅರುಣ್​ ಕುಮಾರ್ (Pushpa Arun Kumar) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜೀ5 ಒಟಿಟಿಯಲ್ಲಿ ಪ್ರಸಾರ ಆಗಲಿದೆ ಕನ್ನಡ, ತುಳು ಭಾಷೆಯ ‘ಜೈ’ ಸಿನಿಮಾ – Kannada News | Suniel Shetty Roopesh Shetty starrer Kannada Tulu language Jai movie OTT release

‘ಬಿಗ್ ಬಾಸ್ ಕನ್ನಡ 9’ ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಅವರ ನಟ ಮತ್ತು ನಿರ್ದೇಶಕ ಕೂಡ ಹೌದು. ಅವರು ಅಭಿನಯಿಸಿ, ನಿರ್ದೇಶನ ಮಾಡಿರುವ ‘ಜೈ’ ಸಿನಿಮಾ (Jai Movie) ಇತ್ತೀಚೆಗೆ ಬಿಡುಗಡೆ ಆಗಿತ್ತು. ತುಳು ಮತ್ತು ಕನ್ನಡ ಭಾಷೆಯಲ್ಲಿ ಈ ಸಿನಿಮಾ ಮೂಡಿಬಂದಿತ್ತು. ಚಿತ್ರಮಂದಿರದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾದ ಈ ಸಿನಿಮಾ ಈಗ ಒಟಿಟಿ ಅಂಗಳಕ್ಕೆ ಬರುತ್ತಿದೆ. ಆ ಬಗ್ಗೆ ಮಾಹಿತಿ ಸಿಕ್ಕಿದೆ. ಫೆಬ್ರವರಿ 6ರಿಂದ ಜೀ5 ಒಟಿಟಿ (OTT) ಮೂಲಕ ‘ಜೈ’ ಸಿನಿಮಾ ಪ್ರಸಾರ ಆಗಲಿದೆ. ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಅವರು ನಟಿಸಿದ್ದಾರೆ ಎಂಬುದು ವಿಶೇಷ.

‘ಜೈ’ ಸಿನಿಮಾದಲ್ಲಿ ನಾಯಕನಾಗಿ ರೂಪೇಶ್ ಶೆಟ್ಟಿ ಅಭಿನಯಿಸಿದ್ದಾರೆ. ಅವರ ಜೊತೆ ರಾಜ್ ದೀಪಕ್ ಶೆಟ್ಟಿ, ಅದ್ವಿತಿ ಶೆಟ್ಟಿ, ದೇವದಾಸ್ ಕಾಪಿಕಾಡ್, ಅರವಿಂದ್ ಬೋಲಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಮಂಜೂರ್ ಮುಂತಾದ ಕಲಾವಿದರು ನಟಿಸಿದ್ದಾರೆ. ಹಿಂದಿ ಚಿತ್ರರಂಗದ ಸ್ಟಾರ್ ನಟ ಸುನೀಲ್ ಶೆಟ್ಟಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುನೀಲ್ ಶೆಟ್ಟಿ ಅವರ ಮಾತೃಭಾಷೆ ಕೂಡ ತುಳು. ಆ ಭಾಷೆಯ ಮೇಲಿನ ಪ್ರೀತಿಯಿಂದಾಗಿ ಅವರು ‘ಜೈ’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ಅವರಿಂದಾಗಿ ಚಿತ್ರತಂಡಕ್ಕೆ ದೊಡ್ಡ ಬಲ ಬಂದಿತ್ತು. ಅವರ ಪಾತ್ರದ ಎಂಟ್ರಿ ದೃಶ್ಯವನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿತ್ತು. ಸುನೀಲ್ ಶೆಟ್ಟಿ ಅವರು ಈ ಚಿತ್ರದಲ್ಲಿ ನಟಿಸಿದ್ದು ಮಾತ್ರವಲ್ಲದೇ ಪ್ರಚಾರದಲ್ಲಿ ಕೂಡ ಭಾಗಿ ಆಗಿದ್ದರು.

ಇದು ಸುನೀಲ್ ಶೆಟ್ಟಿ ಅವರು ನಟಿಸಿದ ಮೊದಲ ತುಳು ಸಿನಿಮಾ ಎಂಬುದು ಇನ್ನೊಂದು ವಿಶೇಷ. ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಅವರು ಮಾತನಾಡಿದ್ದಾರೆ. ‘ಈ ಸಿನಿಮಾವನ್ನು ಒಪ್ಪಿಕೊಳ್ಳಲು ನನಗೆ ಪ್ರೇರಣೆ ಆಗಿದ್ದು ಈ ತಂಡದ ಪ್ರಾಮಾಣಿಕತೆ ಹಾಗೂ ಈ‌ ಕಥೆಗಿರುವ ಶಕ್ತಿ. ತುಳು ಸಿನಿಮಾ, ಸಂಸ್ಕೃತಿಯನ್ನು ಮೆರೆಯುತ್ತದೆ. ಇಂತಹ ಒಂದು ವಿಶೇಷವಾದ ಚಿತ್ರವು ಜೀ5ನಲ್ಲಿ ರಿಲೀಸ್ ಆಗುವುದರಿಂದ ಭಾಷೆಯ ಗೆರೆಯನ್ನು ದಾಟಿ ಎಲ್ಲರ ಗಮನ ಸೆಳೆಯಲಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ನಟ ವಿನ್ ಆಗಿದ್ದಕ್ಕೆ ರೂಪೇಶ್ ಶೆಟ್ಟಿಗೆ ಬೇಸರವಾಯ್ತಾ?

ನಿರ್ದೇಶಕ, ನಟ ರೂಪೇಶ್ ಶೆಟ್ಟಿ ಮಾತನಾಡಿ, ‘ಈ ಸಿನಿಮಾ ನಮ್ಮ ಮಣ್ಣಿನ ಕಥೆಯನ್ನು ಹೇಳುತ್ತದೆ. ದಕ್ಷಿಣ ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಮುಂತಾದವುಗಳನ್ನು ಈ ಸಿನಿಮಾ ಒಳಗೊಂಡಿದೆ. ಇದು ನನ್ನ ಬದುಕಿಗೆ ಬಹಳ ಹತ್ತಿರವಾದ ಕಥೆ ಆಗಿದೆ. ಇದು ಕನ್ನಡ ಹಾಗೂ ತುಳುವಿನಲ್ಲಿ ಜೀ5ನಲ್ಲಿ ಪ್ರಸಾರ ಆಗಲಿರುವುದು ಮತ್ತೊಂದು ಪ್ರಮುಖ ಸಂಗತಿ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral Video: ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್ – Kannada News | Wild buffalo forcefully entered bike showroom in kannur watch viral video

ತಿರುವನಂತಪುರಂ, ಫೆಬ್ರವರಿ 2: ಕೇರಳದಲ್ಲಿ ನಡೆದ ಘಟನೆಯ ಸಿಸಿಟಿವಿ ವಿಡಿಯೋವೊಂದು ಭಾರೀ ವೈರಲ್ (Viral Video) ಆಗಿದೆ. ಕಾಡುಕೋಣವೊಂದು ಬೈಕ್ ಶೋರೂಂನ ಗಾಜಿನ ಬಾಗಿಲನ್ನು ಒಡೆದು ಒಳಗೆ ನುಗ್ಗಿದೆ. ಅದು ಅಚಾನಕ್ಕಾಗಿ ಒಳಗೆ ನುಗ್ಗಿದ್ದಾ ಅಥವಾ ಬೇಕೆಂದೇ ಶೋರೂಂನೊಳಗೆ ನುಗ್ಗಿದ್ದಾ ಎಂಬುದು ಗೊತ್ತಿಲ್ಲ. ಆ ಕಾಡುಕೋಣ ನುಗ್ಗಿದ್ದರಿಂದ ಶೋರೂಂನ ಗಾಜುಗಳು ಪುಡಿ-ಪುಡಿಯಾಗಿವೆ. ಈ ಆಘಾತಕಾರಿ ಘಟನೆ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು – Kannada News | Charmadi Forest Fire: Western Ghats Grasslands Ablaze in Chickmagalur

ಚಿಕ್ಕಮಗಳೂರು, ಫೆಬ್ರವರಿ 02: ಚಾರ್ಮಾಡಿ ಅರಣ್ಯದಲ್ಲಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಪಶ್ಚಿಮ ಘಟ್ಟದ ಸೂಕ್ಷ್ಮ ಹುಲ್ಲುಗಾವಲು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ದಕ್ಷಿಣ ಕನ್ನಡ-ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿಘಾಟ್​ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಗಾಳಿ ವೇಗವಾಗಿ ಬೀಸುತ್ತಿರುವುದರಿಂದ ಜ್ವಾಲೆ ಹೆಚ್ಚುತ್ತಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಮತ್ತು ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮೋದಿ ದೇಶದ್ರೋಹಿ ಎಂದ ಕಾಂಗ್ರೆಸ್ ಶಾಸಕ: ಸಿಡಿದೆದ್ದ ಬಿಜೆಪಿ, ಸದನದಲ್ಲಿ ಕೋಲಾಹಲ – Kannada News | Heated Argument Between BJP And Congress Over MLC Naseer Ahmed calls Narendra Modi traitor In session

ಬೆಂಗಳೂರು, (ಫೆಬ್ರವರಿ 02): ವಿಧಾನಪರಿಷತ್ ಕಲಾಪದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ , ಪರಿಷತ್ ಸದಸ್ಯ ನಜೀರ್ ಅಹ್ಮದ್  (Congress MLC Naseer Ahmed ) ವಿವಾದ ಸೃಷ್ಟಿಸಿದ್ದಾರೆ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಿದ್ದ ವೇಳೆ ಕಾಂಗ್ರೆಸ್ ಪರಿಷತ್ ಸದಸ್ಯ ನಜೀರ್ ಅಹ್ಮದ್​ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ದೇಶದ್ರೋಹಿ ಎಂದು ಹೇಳಿ ವಿವಾದಕ್ಕೀಡಾಗಿದ್ದಾರೆ. ನಜೀರ್ ಅಹ್ಮದ್ ಅವರ ಮಾತಿಗೆ ಕೆರಳಿದ ಬಿಜೆಪಿ ಸದಸ್ಯರು, ಬಾವಿಗಿಳಿದು ಧರಣಿ ನಡೆಸಿದ್ದು, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೋಗಿ ಆಕ್ರೋಶ ಹೊರಹಾಕಿದರು.

ಅಲ್ಲದೇ ನಜೀರ್ ಅಹ್ಮದ್​​ ಕ್ಷಮೆ ಕೇಳಬೇಕು ಎಂದು ವಿಪಕ್ಷಗಳ ಸದಸ್ಯರು ಪಟ್ಟು ಹಿಡಿದಿದ್ದು, ಸದಸ್ಯರ ವಾಗ್ವಾದ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಕೂಡಲೇ ಎಚ್ಚೆತ್ತ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಕಲಾಪವನ್ನು ನಾಳೆ(ಫೆ.03) 11ಕ್ಕೆ ಮುಂದೂಡಿದರು. ಆದರೂ ಪಟ್ಟು ಸಡಿಸದ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದ್ದಾರೆ.

ಇದನ್ನೂ ನೋಡಿ: ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್

ನಜೀರ್ ಅಹ್ಮದ್ ಹೇಳಿದ್ದೇನು?

ಇನ್ನು ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಜೀರ್ ಅಹ್ಮದ್, ಸದನದಲ್ಲಿ ಅಂಥದ್ದೇನೂ ಮಾತಾಡಿಲ್ಲ. ಪರಿಷತ್​ನಲ್ಲಿ ಆಗಿದ್ದನ್ನೆಲ್ಲ ಹೊರಗೆ ಹೇಳೋಕೆ ಆಗುವುದಿಲ್ಲ ಎಂದಷ್ಟೇ ಹೇಳಿ ತೆರಳಿದರು. ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಹ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟು ಹೋದರು.

ಪ್ರಧಾನಿಗೆ ನಿಂದಿನೆ ಸಹಿಸುವುದಿಲ್ಲ

ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿಯನ್ನ ದೇಶ ದ್ರೋಹಿ ಅನ್ನೋ ರೀತಿ ನಿಂದಿಸಿದ್ದಾರೆ. ಸುಮಾರು 10 ಬಾರಿ ಹೇಳಿದ್ದಾರೆ. ಪ್ರಧಾನಿಯ ಕಾಲು ಧೂಳಿಗೂ ನಜೀರ್ ಅಹ್ಮದ್ ಸಮರಲ್ಲ. ಸಭಾಪತಿಗಳು ಅದನ್ನ ಕಡತದಿಂದ ತೆಗೆಯಿರಿ ಎಂದು ಹೇಳಿದ್ದಾರೆ. ಕ್ಷಮೆ ಕೇಳಿ ಅಂದ್ರೂ ಇನ್ನೂ 10 ಬಾರಿ ಘೋಷಣೆ ಕೂಗಿದ್ರು. ಅದೂ ಸಿಎಂ ಸಮ್ಮುಖದಲ್ಲೇ ಕೂಗಿದ್ದಾರೆ. ನಾಳೆ ಅವರನ್ನ ಸದನದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದೇವೆ. ಕ್ರಮ ಆಗಲೇಬೇಕು, ಇಲ್ಲವಾದ್ರೆ ಸದನ ನಡೆಯಲು ನಾವು ಬಿಡಲ್ಲ ಎಂದರು.

ನಮ್ಮನ್ನೂ ಬೇಕಿದ್ರೆ ಹೊರ ಹಾಕಲಿ. ಪ್ರಧಾನಿಗಳ ನಿಂದಿಸಿರುವುದನ್ನು ನಾವು ಸಹಿಸಲ್ಲ. ಏನು ಮಾತಾಡಿಲ್ಲ ಎಂದು ಮುಖ್ಯಮಂತ್ರಿಗಳೇ ಹೇಳಲಿ ನೋಡೋಣ. ಭ್ರಷ್ಟಾಚಾರ ವಿಚಾರ ಬಂದಾಗ ನಾವೂ ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತೇವೆ. ಆದ್ರೆ ನಿಂದಿಸುವ ಕೆಲಸ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮನೆಗಳ ನಡುವೆ ಹುದುಗಿ ಹೋದ ಐತಿಹಾಸಿಕ ದೇವಸ್ಥಾನ: ಲಕ್ಕುಂಡಿ ಗ್ರಾಮದಲ್ಲಿ ಒಕ್ಕಲೆಬ್ಬಿಸುವ ಆತಂಕ – Kannada News | Lakkundi Excavation: Over 50 Antiquities Found, Open Air Museum and Displacement Fears

ಮನೆ, ಐತಿಹಾಸಿಕ ದೇವಸ್ಥಾನImage Credit source: tv9 kannada

ಗದಗ, ಫೆಬ್ರವರಿ 02: ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಭರದಿಂದ ಉತ್ಖನನ ಕಾರ್ಯ (Excavation) ನಡೆಯುತ್ತಿದೆ. ಇನ್ನೊಂದೆಡೆ ಐತಿಹಾಸಿ ದೇವಸ್ಥಾನ ಮನೆಗಳ ಕಟ್ಟಡದಲ್ಲಿ‌ ಮಾಯವಾಗಿದೆ. ಈ ದೇವಸ್ಥಾನದ ಅಕ್ಕಪಕ್ಕದಲ್ಲಿ ವಾಸ ಮಾಡುತ್ತಿರುವ ಕುಟುಂಬಸ್ಥರಿಗೆ ಸ್ಥಳಾಂತರದ ಆತಂಕ ಎದುರಾಗಿದೆ. ಪುರಾತನ ಕಾಲದ ಗತ ವೈಭವ ಹೊಂದಿರುವ ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ವಿದೇಶಿ ಎನ್​​ಜಿಒ ಆಸಕ್ತಿ ಹೊಂದಿದ್ದು, ಲಕ್ಕುಂಡಿ ಇನ್ನು ಮುಂದೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಣೆ ಕೇಂದ್ರವಾಗಲಿದ್ದು, ದೇಶ ಹಾಗೂ ವಿದೇಶ ಗಮನ ಸೆಳೆಯುತ್ತಿದೆ.

50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆ

ಕಲ್ಯಾಣ ಚಾಳುಕ್ಯರು, ವಿಜಯನಗರ ಅರಸರು ಆಳ್ವಿಕೆ ಐತಿಹಾಸಿಕ ನಾಡು ಲಕ್ಕುಂಡಿ ಗ್ರಾಮ. ಇಂತಹ ಲಕ್ಕುಂಡಿ ಗ್ರಾಮದಲ್ಲಿ ಮಣ್ಣಿನಲ್ಲಿ ಅಡಗಿರೋ ಸಂಪತ್ತು, ಲಕ್ಕುಂಡಿಯ ಗತವೈಭವದ ಕುರುಹುಗಳ ಹೊರ ತೆಗೆಯುವ ಕೆಲಸ ಆಗ್ತಾಯಿದೆ. ಇಂದು‌ 15ನೇ ದಿನದ ಉತ್ಖನನ ಕಾರ್ಯ ನಡೆದಿದ್ದು, ಈವರಿಗೆ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ಅಮೂಲ್ಯ ವಸ್ತುಗಳು ಸಿಗುತ್ತಾವೆ ಎನ್ನುವ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: Lakkundi Excavation: ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಜ್ಜು

ಒಂದು ಕಡೆ ಉತ್ಖನನ ನಡೆಯುತ್ತಿದ್ದರೆ, ಇನ್ನೊಂದೆಡೆ ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ. ಜನವರಿ 31ರಂದು ಗದಗ ಜಿಲ್ಲಾಧಿಕಾರಿ ಸಿ. ಎನ್ ಶ್ರೀಧರ್ ಅವರು ಲಕ್ಕುಂಡಿಯ ಪುರಾತನ ಕಾಲದ ಶ್ರೀ ಕುಂಬಾರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಗ ಕುಂಬಾರೇಶ್ವರ ದೇವಸ್ಥಾನದ ಅಕ್ಕಪಕ್ಕದ 18ಕ್ಕೂ ಹೆಚ್ಚು ಮನೆಗಳನ್ನು ಸ್ಥಳಾಂತರ ‌ಮಾಡಲು‌ ಸೂಚನೆ ನೀಡಿದ್ದರು. ಈ ಕುಟುಂಬಸ್ಥರಿಗೆ ಈ ಹಿಂದೆ ಕೇಂದ್ರ ಪುರಾತತ್ವ ಇಲಾಖೆಯಿಂದ ಪರಿಹಾರ ನೀಡಲಾಗಿದೆ. ಆದರೂ ಕೂಡ ಸ್ಥಳಾಂತರ ಕಾರ್ಯವಾಗಿಲ್ಲ. ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಶೀಘ್ರ ಕ್ರಮಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ಕುಂಬಾರೇಶ್ವರ ದೇವಸ್ಥಾನದ ಅಕ್ಕಪಕ್ಕದ ಕುಟುಂಬಸ್ಥರಿಗೆ ಸ್ಥಳಾಂತರ ಆತಂಕ ಎಂದುರಾಗಿದೆ.

ಕುಂಬಾರೇಶ್ವರ ದೇವಸ್ಥಾನದ ಅಕ್ಕಪಕ್ಕ ಮನೆಗಳು ನಿರ್ಮಾಣ ಮಾಡಿರುವುದರಿಂದ ದೇವಾಲಯವೇ ಸ್ಪಷ್ಟವಾಗಿ‌ ಕಾಣುತ್ತಿಲ್ಲ. ಇನ್ನು ಐತಿಹಾಸಿಕ ಲಕ್ಕುಂಡಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ವಿದೇಶಿ ಎನ್‌ಜಿಒ ಆಸಕ್ತಿ ತೋರಿಸಿದೆ. ಇಟಲಿ ಹಾಗೂ ಗ್ರೀಸ್ ದೇಶಗಳ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ತಂಡ ಲಕ್ಕುಂಡಿಗೆ ಭೇಟಿ ನೀಡಿ, ಪ್ರಾಚ್ಯಾವಶೇಷಗಳ ಬಯಲು ವಸ್ತು ಸಂಗ್ರಹಾಲಯ ಹಾಗೂ ಐತಿಹಾಸಿಕ ದೇವಸ್ಥಾನಗಳನ್ನು ಪರಿಶೀಲನೆ ನಡೆಸಿತು.

2 ಕೋಟಿ 25 ಲಕ್ಷ ರೂ ವೆಚ್ಚದಲ್ಲಿ ಯೋಜನೆ

ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಮುಖ್ಯಸ್ಥೆ ಡಾ. ಹೆಲೆನ್ ನೇತೃತ್ವದ ತಜ್ಞರ ತಂಡ, ಸುಮಾರು 3 ಎಕರೆ ವಿಸ್ತೀರ್ಣದಲ್ಲಿರುವ ಬಯಲು ವಸ್ತು ಸಂಗ್ರಹಾಲಯ ಪ್ರದೇಶದಲ್ಲಿ ಸಂಗ್ರಹಿಸಿರುವ ಅಪರೂಪದ ಪ್ರಾಚ್ಯಾವಶೇಷಗಳನ್ನು ವೀಕ್ಷಿಸಿ ಅಭಿವೃದ್ಧಿ ಸಾಧ್ಯತೆಗಳ ಕುರಿತು ಅಧ್ಯಯನ ಮಾಡಿತು. ಸರ್ಕಾರ ಈಗಾಗಲೇ ಸುಮಾರು 2 ಕೋಟಿ 25 ಲಕ್ಷ ರೂ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಟೆಂಡರ್ ಪಡೆದು ಅಭಿವೃದ್ಧಿ ಕಾರ್ಯ ಕೈಗೊಳ್ಳುವ ತಂಡದೊಂದಿಗೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಹಕಾರ ನೀಡಲು ಮುಂದಾಗಿದೆ. ಸ್ಥಳಪರಿಶೀಲನೆ ನಡೆಸಿದ ತಜ್ಞರು ಶೀಘ್ರದಲ್ಲೇ ಸಮಗ್ರ ಪ್ರಾಜೆಕ್ಟ್ ವರದಿ ಸಿದ್ಧಪಡಿಸಲಿದ್ದು, ನಂತರ ಬಯಲು ವಸ್ತು ಸಂಗ್ರಹಾಲಯದ ಅಭಿವೃದ್ಧಿ ಹಾಗೂ ಲಕ್ಕುಂಡಿ ಕುರಿತು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುವ ಗೈಡ್ ಪುಸ್ತಕ ತಯಾರಿಕೆಗೆ ಕ್ರಮಕೈಗೊಳ್ಳಲಾಗುತ್ತದೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಗೈಡ್ ಬುಕ್ ಸಿದ್ಧಗೊಳ್ಳಲಿದ್ದು, ಇದರಿಂದ ಲಕ್ಕುಂಡಿಯ ಐತಿಹಾಸಿಕ ಮಹತ್ವ ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿ ಅಪಾಯದಲ್ಲಿ! ಐತಿಹಾಸಿಕ ಲಕ್ಕುಂಡಿ ಬಳಿಯೇ ಇದ್ದರೂ ನಿರ್ಲಕ್ಷ್ಯ

ಐತಿಹಾಸಿಕ ಲಕ್ಕುಂಡಿ ಗ್ರಾಮದ ಉತ್ಖನನ ಶರವೇಗದಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯಾವೆಲ್ಲಾ ಸಂಪತ್ತು ಸಿಗುತ್ತೇ ಎನ್ನುವ ಕುತೂಹಲ ಹೆಚ್ಚಳವಾಗಿದೆ. ಪುರಾತನ ಕಾಲದ ದೇವಸ್ಥಾನ ಸೇರಿ ಲಕ್ಕುಂಡಿ ಸಮಗ್ರವಾದ ಅಭಿವೃದ್ಧಿ ಆಗ್ಬೇಕಾಗಿದೆ. ಅದರ ಜೊತೆಗೆ ಗ್ರಾಮಸ್ಥರ ಹಿತವನ್ನು ಸರ್ಕಾರ ಕಾಪಾಡಬೇಕಾಗಿದೆ. ಸರ್ಕಾರ ಸಾಕಷ್ಟು ಸೂಕ್ಷ್ಮ ‌ಹೆಜ್ಜೆ ಇಡ್ತಾಯಿದ್ದು, ಮುಂದಿನ ದಿನಗಳಲ್ಲಿ ಏನ್ನೆಲ್ಲಾ ಬೆಳವಣಿಗೆಗಳು ನಡೆಯುತ್ತಿವೆ ಕಾದುನೋಡ್ಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 9:31 pm, Mon, 2 February 26

Source link

ಖರ್ಜೂರ ಅಥವಾ ಬಾದಾಮಿ; ಈ ಋತುಮಾನಕ್ಕೆ ಯಾವುದರ ಸೇವನೆ ಆರೋಗ್ಯಕರ? – Kannada News | Winter Dry Fruits: Almonds vs Dates Showdown

ಚಳಿಗಾಲದಲ್ಲಿ, ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು ಸಾಮಾನ್ಯ. ಪರಿಣಾಮವಾಗಿ, ಕಾಲೋಚಿತ ಕಾಯಿಲೆಗಳಿಗೆ ದೇಹ ಬೇಗ ಒಡ್ಡಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ. ಹಾಗಾಗಿ, ಈ ಋತುಮಾನದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ದೇಹವನ್ನು ಒಳಗಿನಿಂದ ಬೆಚ್ಚಗಿಡುವ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಆರೋಗ್ಯ ತಜ್ಞರು ನಿಯಮಿತವಾಗಿ ಖರ್ಜೂರ (Dates) ಮತ್ತು ಬಾದಾಮಿಯಂತಹ ಒಣ ಹಣ್ಣುಗಳ ತಿನ್ನಿ ಎಂದು ಸಲಹೆ ನೀಡುತ್ತಾರೆ. ಇವೆರಡೂ ಆರೋಗ್ಯಕರ, ಆದರೆ ಅವುಗಳ ಪ್ರಯೋಜನಗಳು ವಿಭಿನ್ನವಾಗಿರುತ್ತದೆ. ಹಾಗಾದರೆ ಇವೆರಡರಲ್ಲಿ ಯಾವುದು ಒಳ್ಳೆಯದು, ಇವುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಖರ್ಜೂರ ತಿನ್ನುವುದರಿಂದಾಗುವ ಪ್ರಯೋಜನಗಳು:

ಖರ್ಜೂರವು ಗ್ಲೂಕೋಸ್ ಮತ್ತು ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ. ಇವುಗಳ ಸೇವನೆಯಿಂದ ತ್ವರಿತ ಶಕ್ತಿ ದೊರೆಯುತ್ತದೆ. ಬೆಳಿಗ್ಗೆ 2 ರಿಂದ 3 ಖರ್ಜೂರ ತಿನ್ನುವುದರಿಂದ ಆಯಾಸ ಕಡಿಮೆಯಾಗುತ್ತದೆ. ಅಷ್ಟೇಅಲ್ಲ, ಖರ್ಜೂರವು ಕಬ್ಬಿಣದ ಅಂಶದಿಂದ ಸಮೃದ್ಧವಾಗಿದ್ದು ಚಳಿಗಾಲದ ದೌರ್ಬಲ್ಯ ಮತ್ತು ಹಿಮೋಗ್ಲೋಬಿನ್ ಕೊರತೆಯನ್ನು ತಡೆಯುತ್ತದೆ. ಇವುಗಳಲ್ಲಿರುವ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಖರ್ಜೂರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಈ ಪ್ರಯೋಜನಗಳನ್ನು ಮಿತವಾಗಿ ಸೇವಿಸುವ ಮೂಲಕ ಪಡೆಯಬಹುದು.

ಇದನ್ನೂ ಓದಿ: ಬಾಳೆಹಣ್ಣು vs ಖರ್ಜೂರ: ಆಯಾಸ ಕಡಿಮೆ ಮಾಡಿ ತ್ವರಿತ ಶಕ್ತಿ ಪಡೆಯಲು ಇವೆರಡರಲ್ಲಿ ಯಾವುದು ಒಳ್ಳೆಯದು?

ಬಾದಾಮಿ ತಿನ್ನುವುದರ ಪ್ರಯೋಜನಗಳು:

ಬಾದಾಮಿ ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುವುದಿಲ್ಲ. ಆದರೆ ದೀರ್ಘಕಾಲದವರೆಗೆ ನಿರಂತರ ಶಕ್ತಿ ಒದಗಿಸಲು ಸಹಾಯ ಮಾಡುತ್ತವೆ. ಅವುಗಳಲ್ಲಿರುವ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಅಂಶ ಚಳಿಗಾಲದಲ್ಲಿ ದೇಹವನ್ನು ಬಲವಾಗಿ ಮತ್ತು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ, ಇದು ಶೀತ ವಾತಾವರಣದಲ್ಲಿ ಒಣ ಚರ್ಮದಿಂದ ಮುಕ್ತಿ ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಷ್ಟೇಅಲ್ಲ, ಬಾದಾಮಿ ಮೆದುಳಿನ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಖರ್ಜೂರ, ಬಾದಾಮಿ: ಚಳಿಗಾಲಕ್ಕೆ ಯಾವುದು ಒಳ್ಳೆಯದು?

ಚಳಿಗಾಲದಲ್ಲಿ ಖರ್ಜೂರ ಮತ್ತು ಬಾದಾಮಿ ಎರಡೂ ಕೂಡ ಆರೋಗ್ಯಕರ. ಶೀತ ಅಥವಾ ದಣಿದಿದ್ದವರಿಗೆ ಖರ್ಜೂರದ ಸೇವನೆ ಉತ್ತಮ ಏಕೆಂದರೆ ಅವು ತಕ್ಷಣಕ್ಕೆ ಶಕ್ತಿ ಮತ್ತು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಆದರೆ ದೀರ್ಘಕಾಲೀನ ಶಕ್ತಿ, ರೋಗನಿರೋಧಕ ಶಕ್ತಿ ಮತ್ತು ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳಲು, ಬಾದಾಮಿ ಹೆಚ್ಚು ಪ್ರಯೋಜನಕಾರಿಯಾಗಿದೆ. ಆಹಾರದಲ್ಲಿ ಎರಡನ್ನೂ ಸೇರಿಸಿಕೊಳ್ಳುವುದು ಒಳ್ಳೆಯದು. ರೋಗನಿರೋಧಕ ಶಕ್ತಿ ಮತ್ತು ಶಕ್ತಿಯನ್ನು ಹೆಚ್ಚಿಸಲು, ಬೆಳಿಗ್ಗೆ 10-12 ನೆನೆಸಿದ ಬಾದಾಮಿ ತಿನ್ನುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link