All posts by nagaraj11081993

Video: ಮಾವನಿಗೆ ಬೆಂಕಿ ಹಚ್ಚಿದ ಸೊಸೆ, ನೋವು ತಡೆಯಲಾರದೆ ಸಹಾಯಕ್ಕಾಗಿ ರಸ್ತೆಯ ತುಂಬೆಲ್ಲಾ ಓಡಿದ ವ್ಯಕ್ತಿ – Kannada News | 64 Year Old Man Attacked and Set on Fire in Cuddalore District Tamil Nadu

ಚೆನ್ನೈ, ಫೆಬ್ರವರಿ 02: ಸೊಸೆಯ ಅಕ್ರಮ ಸಂಬಂಧ ಬಯಲಿಗೆಳೆದಿದ್ದಕ್ಕೆ ಪ್ರಿಯಕರನ ಜತೆ ಸೇರಿ ಮಾವನಿಗೆ ಬೆಂಕಿ ಹಚ್ಚಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ. ಅಕ್ರಮ ಸಂಬಂಧ ಹೊಂದಿದ್ದಕ್ಕೆ ಗದರಿಸಿದ್ದಕ್ಕೆ ಆಕೆ ಮಾವ ರಾಜೇಂದ್ರನ್(64)ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಬೈಕ್ ಸವಾರಿ ಮಾಡುತ್ತಿದ್ದ ರಾಜೇಂದ್ರನ್ ಅವರನ್ನು ತಡೆದು ಅಲ್ಲೇ ಬೆಂಕಿ ಹಚ್ಚಲಾಗಿದೆ.

ಕೂಡಲೇ ಬೆಂಕಿಯ ಉರಿ ತಡೆಯಲಾರದೆ ರಾಜೇಂದ್ರನ್ ರಸ್ತೆಯ ತುಂಬೆಲ್ಲಾ ಓಡಾಡಿರುವ ವಿಡಿಯೋ ವೈರಲ್ ಆಗಿದೆ. ಅವರ ದೇಹದ ಮೇಲೆ ಶೇ.70ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊಸೆ ಜಯಪ್ರಿಯಾ ಮತ್ತು ಆಕೆಯ ಗೆಳೆಯ ಮಣಿಕಂದನ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್​​​ ನ್ಯೂಸ್​: ಇನ್ಮುಂದೆ ಈ ರೈಲಿನಲ್ಲಿ ಊಟ ಉಚಿತ – Kannada News | Train Delay Compensation: Get Free Meals on Premium Indian Trains and Full Ticket Refund

ಭಾರತೀಯ ರೈಲ್ವೆಯ ಪ್ರೀಮಿಯಂ ರೈಲುಗಳಾದ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್‌ಗಳಲ್ಲಿ ಪ್ರಯಾಣಿಸುವವರಿಗೆ ಒಂದು ವಿಶೇಷ ಸೌಲಭ್ಯವಿದೆ. ಇತ್ತೀಚೆಗೆ ರಾಜಧಾನಿ ಎಕ್ಸ್‌ಪ್ರೆಸ್ 6 ಗಂಟೆ ವಿಳಂಬವಾದಾಗ ಪ್ರಯಾಣಿಕರೊಬ್ಬರಿಗೆ ಉಚಿತ ಊಟ ದೊರೆತ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.ಭಾರತೀಯ ರೈಲ್ವೆಯ ಆಹಾರ ಪೂರೈಕೆ ನೀತಿಯ (IRCTC Catering Policy) ಅಡಿಯಲ್ಲಿ ಈ ಸೌಲಭ್ಯ ನೀಡುತ್ತದೆ. ನಿಮ್ಮ ರೈಲು (ರಾಜಧಾನಿ, ಶತಾಬ್ದಿ ಅಥವಾ ದುರಂತೋ) ಅದರ ನಿಗದಿತ ಸಮಯಕ್ಕಿಂತ 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ವಿಳಂಬವಾದರೆ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಉಚಿತವಾಗಿ ಉಪಾಹಾರ ನೀಡಬೇಕು.

ಇನ್ನು ಈ ನಿಯಮವು ಮುಖ್ಯವಾಗಿ ಟಿಕೆಟ್ ದರದೊಂದಿಗೆ ಆಹಾರದ ಶುಲ್ಕವನ್ನೂ ಒಳಗೊಂಡಿರುವ ಪ್ರೀಮಿಯಂ ರೈಲುಗಳಿಗೆ ಅನ್ವಯಿಸುತ್ತದೆ. ವಿಳಂಬವಾದ ಸಮಯಕ್ಕೆ ಅನುಗುಣವಾಗಿ ರೈಲಿನಲ್ಲಿ ನೀಡುವ ಊಟದಲ್ಲೂ ಬದಲಾವಣೆಗಳು ಆಗುತ್ತದೆ. ಮುಂಜಾನೆ ಅಥವಾ ಸಂಜೆ ರೈಲು ವಿಳಂಬವಾದರೆ, ಆ ಹೊತ್ತಿಗೆ ಚಹಾ ಅಥವಾ ಕಾಫಿ ಮತ್ತು ಬಿಸ್ಕತ್ತುಗಳನ್ನು ನೀಡಲಾಗುವುದು. ಬೆಳಗಿನ ಉಪಾಹಾರದಲ್ಲಿ ಬ್ರೆಡ್ ಸ್ಲೈಸ್‌ಗಳು, ಬೆಣ್ಣೆ ಮತ್ತು ಜ್ಯೂಸ್​​ ನೀಡಲಾಗುವುದು. ಮಧ್ಯಾಹ್ನ ಅಥವಾ ರಾತ್ರಿ ರೈಲು ವಿಳಂಬವಾದರೆ, ಅನ್ನ, ದಾಲ್ (ಬೇಳೆ ಸಾರು), ರಾಜ್ಮಾ ಅಥವಾ ಚೋಲೆ, ಮತ್ತು ಉಪ್ಪಿನಕಾಯಿ. ಕೆಲವು ಸಂದರ್ಭಗಳಲ್ಲಿ 7 ಪೂರಿ ಮತ್ತು ಮಿಕ್ಸ್ ವೆಜಿಟೆಬಲ್ ಸಾಗುವನ್ನು ನೀಡಲಾಗುತ್ತದೆ.

ಅನೇಕ ಬಾರಿ ರೈಲ್ವೆ ಸಿಬ್ಬಂದಿ ಸ್ವತಃ ಆಹಾರ ನೀಡದಿದ್ದರೆ, ಪ್ರಯಾಣಿಕರು ಈ ನಿಯಮವನ್ನು ನೆನಪಿಸಿ ಆಹಾರವನ್ನು ಕೇಳಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂದು ಇಲಾಖೆ ಹೇಳಿದೆ. ಒಂದು ವೇಳೆ ರೈಲು 3 ಗಂಟೆಗಿಂತ ಹೆಚ್ಚು ವಿಳಂಬವಾದರೆ ಅಥವಾ ಮಾರ್ಗ ಬದಲಾವಣೆಯಾದರೆ, ಪ್ರಯಾಣಿಕರು ತಮ್ಮ ಟಿಕೆಟ್ ರದ್ದುಗೊಳಿಸಿ ಪೂರ್ಣ ಹಣವನ್ನು ಮರಳಿ ಪಡೆಯಬಹುದು. ಇದರ ಜತೆಗೆ ವಿಳಂಬವಾದ ಸಂದರ್ಭದಲ್ಲಿ ನಿಲ್ದಾಣಗಳಲ್ಲಿರುವ ವೇಟಿಂಗ್ ರೂಮ್‌ಗಳನ್ನು ಪ್ರಯಾಣಿಕರು ಉಚಿತವಾಗಿ ಬಳಸಿಕೊಳ್ಳಬಹುದು. ಈ ನಿಯಮವು ರೈಲ್ವೆಯ ಈ ನೀತಿಯು ವಿಶೇಷವಾಗಿ ಚಳಿಗಾಲದಲ್ಲಿ ಮಂಜಿನಿಂದಾಗಿ ರೈಲುಗಳು ವಿಳಂಬವಾದಾಗ ಪ್ರಯಾಣಿಕರಿಗೆ ತುಂಬಾ ಸಹಕಾರಿಯಾಗುತ್ತದೆ.

ಆನ್‌ಲೈನ್‌ನಲ್ಲಿ ಟಿಕೆಟ್ ರಿಫಂಡ್ (TDR) ಪಡೆಯುವುದು ಹೇಗೆ?

ರೈಲು ಅದರ ಪ್ರಾರಂಭದ ನಿಲ್ದಾಣದಿಂದ (Source Station) 3 ಗಂಟೆಗಿಂತ ಹೆಚ್ಚು ವಿಳಂಬವಾಗಿದ್ದರೆ ಮತ್ತು ನೀವು ಆ ರೈಲಿನಲ್ಲಿ ಪ್ರಯಾಣ ಮಾಡದಿದ್ದರೆ, ನೀವು ಪೂರ್ಣ ಹಣವನ್ನು (Full Refund) ಪಡೆಯಲು TDR ಸಲ್ಲಿಸಬಹುದು. ರೈಲು ಹೊರಡುವ ಮುನ್ನ ಅಥವಾ ರೈಲು ಹೊರಟ ಕೆಲವೇ ಗಂಟೆಗಳ ಒಳಗೆ (ಸಾಮಾನ್ಯವಾಗಿ 3-6 ಗಂಟೆ) TDR ಸಲ್ಲಿಸಬೇಕು.

ಇದನ್ನೂ ಓದಿ: ಬಜೆಟ್​​ನಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ; ಆಂಧ್ರ, ಜಮ್ಮು ಕಾಶ್ಮೀರದಲ್ಲಿ ಟ್ರೆಕಿಂಗ್ ತಾಣಗಳ ಅಭಿವೃದ್ಧಿ

ಆನ್‌ಲೈನ್‌ನಲ್ಲಿ TDR ಸಲ್ಲಿಸುವುದು ಹೇಗೆ?

ಮೊದಲು IRCTC ವೆಬ್‌ಸೈಟ್ ಅಥವಾ ಆಪ್‌ಗೆ ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.

ಮೆನುವಿನಲ್ಲಿರುವ ‘My Account’ ವಿಭಾಗಕ್ಕೆ ಹೋಗಿ, ಅಲ್ಲಿ ‘My Transactions’ ಮೇಲೆ ಕ್ಲಿಕ್ ಮಾಡಿ.

ಅಲ್ಲಿ ಕಾಣುವ ‘File TDR’ ಎಂಬ ಆಯ್ಕೆಯನ್ನು ಆರಿಸಿ.

ನೀವು ಯಾವ ಟಿಕೆಟ್‌ಗೆ ರಿಫಂಡ್ ಪಡೆಯಬೇಕೋ ಆ PNR ಸಂಖ್ಯೆಯನ್ನು ಆರಿಸಿ.

ಅಲ್ಲಿ ಹಲವು ಕಾರಣಗಳ ಆಯಕ್ಎ ಇರುತ್ತದೆ. ರೈಲು ವಿಳಂಬವಾಗಿದ್ದರೆ “Train Late More Than Three Hours and Passenger Not Traveled” ಎಂಬ ಆಯ್ಕೆಯನ್ನು ಆರಿಸಿ.

ಫೈಲ್ ಮಾಡಿದ ನಂತರ ನಿಮಗೆ ಒಂದು ಕನ್ಫರ್ಮೇಷನ್ ಸಿಗುತ್ತದೆ.

ಹಣ ಯಾವಾಗ ವಾಪಸ್ ಬರುತ್ತದೆ?

TDR ಸಲ್ಲಿಸಿದ ನಂತರ ಅದನ್ನು ಪರಿಶೀಲಿಸಲು ರೈಲ್ವೆ ಇಲಾಖೆಯು 15 ರಿಂದ 90 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು.

ಹಣವು ನೀವು ಟಿಕೆಟ್ ಬುಕ್ ಮಾಡುವಾಗ ಬಳಸಿದ ಬ್ಯಾಂಕ್ ಅಕೌಂಟ್‌ಗೆ (Original Payment Method) ನೇರವಾಗಿ ಜಮೆಯಾಗುತ್ತದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:38 am, Mon, 2 February 26

Source link

Optical Illusion: ಆನೆಗಳ ಹಿಂಡಿನ ನಡುವೆ ಇರುವ ಘೇಂಡಾಮೃಗವನ್ನು ಕಂಡು ಹಿಡಿಯಬಲ್ಲಿರಾ – Kannada News | Optical Illusion: Can you identify the rhino in this picture in just 15 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಅಥವಾ ಒಗಟಿನ ಆಟಗಳು ಬಹಳಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಕಣ್ಣು ಹಾಯಿಸಿದ್ದಲೆಲ್ಲಾ ಈ ಒಗಟಿನ ಚಿತ್ರಗಳೇ ಕಾಣಸಿಗುತ್ತವೆ. ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರದಲ್ಲಿ ಆನೆಗಳ ಹಿಂಡಿನ ನಡುವೆ ಘೇಂಡಾಮೃಗವು ಅಡಗಿ ಕುಳಿತಿದೆ. 15 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ ಎಂದು ನೋಡಿ.

ಇಲ್ಯೂಷನ್ ಚಿತ್ರದಲ್ಲಿ ನಿಮಗೇನು ಕಾಣಿಸಿತು?

ಈ ಇಲ್ಯೂಷನ್ ಚಿತ್ರದಲ್ಲಿ ಮನೆಯ ಹಿತ್ತಲನ್ನು ಕಾಣಬಹುದು. ಇಲ್ಲಿ ವರ್ಣರಂಜಿತ ಹೂವಿನ ಕುಂಡಗಳು, ಹಸಿರು ಮರಗಳು ಮತ್ತು ನೈಸರ್ಗಿಕವಾಗಿ ಜೋಡಿಸಲಾದ ಸಸ್ಯಗಳು ಆಕರ್ಷಕವಾಗಿ ಕಾಣಿಸುತ್ತವೆ. ನೀವು ಈ ಚಿತ್ರ ನೋಡಿದಾಗ ನಿಮ್ಮ ಕಣ್ಣಿಗೆ ಪ್ರಶಾಂತವಾದ ಉದ್ಯಾನವನದಂತೆ ಕಾಣುತ್ತದೆ. ಆದರೆ ಇಲ್ಲಿ ಘೇಂಡಾಮೃಗವು ಅಡಗಿ ಕುಳಿತಿದ್ದು ನೋಡುಗರಿಗೆ ಕಠಿಣ ಸವಾಲನ್ನು ಒಡ್ಡುತ್ತಿದೆ. ಮೇಲೆ ನೀಡಿರುವ ನಿರ್ದಿಷ್ಟ ಸಮಯದೊಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಲು ಸಾಧ್ಯವೇ ಎಂದು ನೋಡಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಜೀಬ್ರಾಗಳ ನಡುವೆ ಅಡಗಿರುವ ಹುಲಿಯನ್ನು ಗುರುತಿಸಬಲ್ಲಿರಾ

ನಿಮ್ಮ ಕಣ್ಣಿಗೆ ಘೇಂಡಾಮೃಗ ಕಾಣಿಸಿತೇ?

ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಆನೆಗಳ ಹಿಂಡು ಕಾಣಿಸಿದರೂ ತೀಕ್ಷ್ಣ ಕಣ್ಣುಗಳನ್ನು ಹೊಂದಿರುವ ಮಾತ್ರ ಘೇಂಡಾಮೃಗವನ್ನು ಕಂಡು ಹಿಡಿಯಲು ಸಾಧ್ಯ. ಹೂವಿನ ಕುಂಡಗಳ ಅಂಚುಗಳು, ಸಸ್ಯಗಳ ಮೇಲ್ಭಾಗಗಳು ಮತ್ತು ನೆರಳಿನ ಪ್ರದೇಶಗಳನ್ನು ನೀವು ಎಚ್ಚರಿಕೆಯಿಂದ ಗಮನಿಸಿ. ನೀವು ಈ ಸುಳಿವುಗಳನ್ನು ಆಧರಿಸಿ ಘೇಂಡಾಮೃಗವನ್ನು ಗುರುತಿಸಿದ್ದೀರಿ ಎಂದು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಪ್​ಸ್ಟೀನ್ ಫೈಲ್ಸ್​​ನಲ್ಲಿ ನ್ಯೂಯಾರ್ಕ್​ ಮೇಯರ್ ಜೋಹ್ರಾನ್ ಮಮ್ದಾನಿ ತಾಯಿ ಹೆಸರು – Kannada News | Epstein Files Shockwave: Mira Nair, Elon Musk, Gates and Trump Names Emerge

ನ್ಯೂಯಾರ್ಕ್​, ಫೆಬ್ರವರಿ 02: ಅಮೆರಿಕದ ನ್ಯಾಯಾಂಗ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಎಪ್​ಸ್ಟೀನ್​ ಫೈಲ್ಸ್‌(Epstein files) ನ ಹೊಸ ದಾಖಲೆಗಳು ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ವಿವಾದವನ್ನು ಹುಟ್ಟುಹಾಕಿವೆ. ಈ ದಾಖಲೆಗಳಲ್ಲಿ ನ್ಯೂಯಾರ್ಕ್ ಮೇಯರ್ ಜೋಹ್ರಾನ್ ಮಮ್ದಾನಿ ಅವರ ತಾಯಿ ಮತ್ತು ಖ್ಯಾತ ಭಾರತೀಯ-ಅಮೆರಿಕನ್ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಹೆಸರು ಕೂಡ ಇದೆ. ಜೋಹ್ರಾನ್ ಬೆಂಬಲಿಗರು ಅವರ ಮನೆಯ ಗೇಟ್​​ನಲ್ಲಿ ನಿಂತು ವಿರುದ್ಧ ಘೋಷಣೆ ಕೂಗುವುದನ್ನು ಕಾಣಬಹುದು.  ಶುಕ್ರವಾರ, ಯುಎಸ್ ನ್ಯಾಯ ಇಲಾಖೆಯು ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಸುಮಾರು 3 ಮಿಲಿಯನ್ ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಇವುಗಳಲ್ಲಿ ಫೈಲ್‌ಗಳು ಮಾತ್ರವಲ್ಲದೆ 2,000 ವೀಡಿಯೊಗಳು ಮತ್ತು 180,000 ಛಾಯಾಚಿತ್ರಗಳು ಸೇರಿವೆ. ಈ ಫೈಲ್‌ಗಳು ಎಪ್ಸ್ಟೀನ್ ಮತ್ತು ಅವರ ಸಹವರ್ತಿ ಗ್ಲಿನ್ ಮ್ಯಾಕ್ಸ್‌ವೆಲ್‌ ಜೊತೆಗಿನ ಅನೇಕ ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನು ಬಹಿರಂಗಪಡಿಸಿವೆ. ಮೀರಾ ನಾಯರ್ ಅವರು 2009 ರಲ್ಲಿ ಶಿಕ್ಷೆಗೊಳಗಾದ ಗಿಸ್ಲೇನ್ ಮ್ಯಾಕ್ಸ್‌ವೆಲ್ ಅವರ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಮೀರಾ ನಾಯರ್ ಅವರ ಚಲನಚಿತ್ರ ಅಮೇಲಿಯಾ ಬಿಡುಗಡೆಯಾದ ನಂತರ ಈ ಪಾರ್ಟಿ ನಡೆದಿತ್ತು.

ಯುಎಸ್ ನ್ಯಾಯ ಇಲಾಖೆ ಶುಕ್ರವಾರ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಸುಮಾರು 3 ಮಿಲಿಯನ್ ಪುಟಗಳ ಫೈಲ್‌ಗಳನ್ನು ಬಿಡುಗಡೆ ಮಾಡಿದೆ. ಈ ಫೈಲ್‌ಗಳಲ್ಲಿ ಚಲನಚಿತ್ರ ತಾರೆಯರು ಮಾತ್ರವಲ್ಲದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ಹೆಸರೂ ಸೇರಿದೆ. ದಾಖಲೆಗಳ ಪ್ರಕಾರ, ಜೆಫ್ರಿ ಎಪ್ಸ್ಟೀನ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹಲವಾರು ಇಮೇಲ್ ಸಂಭಾಷಣೆಗಳನ್ನು ನಡೆಸಿದ್ದಾರೆ.

ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಬಿಐ (FBI) ಸಂಗ್ರಹಿಸಿದ ದೂರುಗಳ ಪಟ್ಟಿಯಲ್ಲಿ ಟ್ರಂಪ್ ಹೆಸರು ಕಂಡುಬಂದಿದೆ. ಇದರಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪಗಳನ್ನು ಸಾರ್ವಜನಿಕರು ಮತ್ತು ಸಂತ್ರಸ್ತರು ನೀಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.

ಮತ್ತಷ್ಟು ಓದಿ: ಎಪ್​ಸ್ಟೀನ್​ ಫೈಲ್ಸ್​ ಎಂದರೇನು? ಟ್ರಂಪ್ ಹೆಸರಿರುವುದು ನಿಜವೇ? ಎಲಾನ್ ಮಸ್ಕ್ ಆರೋಪವೇನು?

ಆದರೆ, ಈ ಆರೋಪಗಳು ಕೇವಲ ದೂರುಗಳಾಗಿದ್ದು, ಅವು ಸಾಬೀತಾಗಿಲ್ಲ ಎಂದು ನ್ಯಾಯಾಂಗ ಇಲಾಖೆ ಹೇಳಿದೆ. ಇವುಗಳಲ್ಲಿ ಕೆಲವು 2020ರ ಚುನಾವಣೆಗೆ ಮುನ್ನ ಸಲ್ಲಿಕೆಯಾದ ಆಧಾರರಹಿತ ಮತ್ತು ಸಂವೇದನಾಶೀಲ ಆರೋಪಗಳಾಗಿವೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಟ್ರಂಪ್ ಈ ಹಿಂದೆಯೇ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದರು.

ಮತ್ತಷ್ಟು ಓದಿ:

ದಾಖಲೆಗಳಲ್ಲಿ ಎಲೋನ್ ಮಸ್ಕ್, ಪ್ರಿನ್ಸ್ ಆಂಡ್ರ್ಯೂ ಮತ್ತು ರಿಚರ್ಡ್ ಬ್ರಾನ್ಸನ್ ಅವರ ಹೆಸರುಗಳೂ ಸೇರಿವೆ. ಎಲೋನ್ ಮಸ್ಕ್ ಅವರು ಎಪ್ಸ್ಟೀನ್ ದ್ವೀಪದಲ್ಲಿ ನಡೆಯುವ ಅತ್ಯಂತ ವೈಲ್ಡ್ ಪಾರ್ಟಿ ಬಗ್ಗೆ ವಿಚಾರಿಸಿದ್ದರು ಎಂದು ಇಮೇಲ್ ಸಂಭಾಷಣೆಗಳು ತೋರಿಸಿವೆ. ಆದರೂ, ಮಸ್ಕ್ ಅಲ್ಲಿಗೆ ಹೋಗಿದ್ದರು ಎಂಬುದಕ್ಕೆ ಸಾಕ್ಷ್ಯಗಳಿಲ್ಲ.

ಅಷ್ಟೇ ಅಲ್ಲದೆ, ಗೇಟ್ಸ್ ರಷ್ಯಾದ ಹುಡುಗಿಯರಿಂದ ಲೈಂಗಿಕವಾಗಿ ಹರಡುವ ಕಾಯಿಲೆಗೆ (STD) ತುತ್ತಾಗಿದ್ದರು ಮತ್ತು ಆ ವಿಚಾರವನ್ನು ಅಂದಿನ ಪತ್ನಿ ಮೆಲಿಂಡಾ ಗೇಟ್ಸ್ ಅವರಿಂದ ಮರೆಮಾಚಲು ಎಪ್ಸ್ಟೀನ್ ಸಹಾಯ ಕೋರಿದ್ದರು ಎಂದು ಈ ಫೈಲ್ಸ್ ಹೇಳಿವೆ. ಕಾಯಿಲೆ ಗುಣಪಡಿಸಲು ಎಪ್ಸ್ಟೀನ್ ಮೂಲಕ ಆಂಟಿಬಯೋಟಿಕ್ ಔಷಧಗಳನ್ನು ಗುಟ್ಟಾಗಿ ತರಿಸಿಕೊಳ್ಳಲು ಗೇಟ್ಸ್ ಪ್ರಯತ್ನಿಸಿದ್ದರು ಎಂದು ದಾಖಲೆಗಳು ವಿವರಿಸಿವೆ. ಈ ಆರೋಪಗಳನ್ನು ಗೇಟ್ಸ್ ವಕ್ತಾರರು ಸಂಪೂರ್ಣ ಸುಳ್ಳು ಮತ್ತು ಅರ್ಥಹೀನ ಎಂದು ಕರೆದಿದ್ದಾರೆ.

ಜೆಫ್ರಿ ಎಪ್ಸ್ಟೀನ್ ಯಾರು?

ಜೆಫ್ರಿ ಎಪ್ಸ್ಟೀನ್ ನ್ಯೂಯಾರ್ಕ್ ಜನಿಸಿದರು. ಡಾಲ್ಟನ್ ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಪ್ರಾರಂಭಿಸಿದರು. 1976 ರಲ್ಲಿ ಅವರನ್ನು ಶಾಲೆಯಿಂದ ಹೊರಹಾಕಲಾಯಿತು. ಇದರ ನಂತರ, ಅವರು ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು. ನಂತರ ಎಪ್ಸ್ಟೀನ್ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿದರು. ಇಲ್ಲಿಂದ ಎಪ್ಸ್ಟೀನ್ ಬಹಳ ವೇಗವಾಗಿ ಏರಿದರು ಮತ್ತು ಅನೇಕ ಗಣ್ಯ ಸಾಮಾಜಿಕ ವಲಯಗಳಲ್ಲಿ ತಮ್ಮ ಹಿಡಿತ ಸಾಧಿಸಿದರು. ಈ ಸಮಯದಲ್ಲಿ, ಅವರು ಮತ್ತು ಅವರ ಸಹಚರರು ಅನೇಕ ಯುವತಿಯರು ಮತ್ತು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:23 am, Mon, 2 February 26

Source link

Video: ಹಿಮಪಾತ, ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಏರ್​​ಲಿಫ್ಟ್​ ಮಾಡಿದ ವಾಯುಪಡೆ – Kannada News | IAF Evacuates 85 Year Old Paralysed Woman From Snowbound Himachal Village

ಹಿಮಾಚಲ ಪ್ರದೇಶ, ಫೆಬ್ರವರಿ 02: ಹಿಮಾಚಲ ಪ್ರದೇಶದಾದ್ಯಂತ ಹಿಮಪಾತ ವಿಪರೀತವಾಗಿತ್ತು, ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ದಂಧೇರ್ವಾರಿಯಲ್ಲಿ ಕೂಡ ಭಾರಿ ಹಿಮಪಾತವಾಗಿದ್ದು, ಪಾರ್ಶ್ವವಾಯು ಪೀಡಿತ ಮಹಿಳೆಯನ್ನು ಭಾರತೀಯ ವಾಯುಪಡೆಯ ಅಧಿಕಾರಿಗಳು ಏರ್​ಲಿಪ್ಟ್​ ಮಾಡಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆಯನ್ನು ಚೀತಾ ಹೆಲಿಕಾಪ್ಟರ್‌ನಲ್ಲಿ ಚಂಡೀಗಢಕ್ಕೆ ಸಾಗಿಸಲಾಯಿತು. ಅಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹಿಮಪಾತ ಮತ್ತು ಕಡಿಮೆ ಗೋಚರತೆಯ ನಡುವೆಯೂ ಸರಾಸರಿ ಸಮುದ್ರ ಮಟ್ಟದಿಂದ 9,000 ಅಡಿ ಎತ್ತರದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಧನಿಷ್ಠಾ ನಕ್ಷತ್ರದಲ್ಲಿ ಸಂಚರಿಸುವ ಸೂರ್ಯನಿಂದ ಯಾವ ರಾಶಿಗಳ ಅನಿಷ್ಟ ದೂರ? – Kannada News | Dhanishta Nakshatra Sun Transit: Which Rashis Face Fortune, Which Need Caution?

ಸೂರ್ಯನು‌ ಎಲ್ಲ ಗ್ರಹಗಳಿಗೂ ಮೂಲ. ಎಲ್ಲ ಬೆಳಕಿಗೂ ಮೂಲ. ಅಷ್ಟೇ ಅಲ್ಲ ಮನುಷ್ಯನಿಗೆ ಆತ್ಮಬಲ, ಆತ್ಮವಿಶ್ವಾಸ ಚೆನ್ನಾಗಿರಬೇಕಾದರೆ ಸೂರ್ಯನ ಅನುಗ್ರಹವಿಲ್ಲದೇ ಸಾಧ್ಯವಾಗದು. ಯಾರ ಬಳಿ ಎಂತಹ ಸಂಪತ್ತಿದ್ದರೂ ಅದನ್ನು ನಿರ್ವಹಣೆ ಮಾಡುವ ಆತ್ಮವಿಶ್ವಾಸ ಅವರಲ್ಲಿ ಇಲ್ಲವಾದರೆ ಪ್ರಯೋಜನವಾಗದು. ಹಾಗಾಗಿ ಸೂರ್ಯ ಗತಿ ಮುಖ್ಯ.

​ಸೂರ್ಯನು ಮಕರ ರಾಶಿಯ ಧನಿಷ್ಠ ನಕ್ಷತ್ರದಲ್ಲಿ ಫೆಬ್ರವರಿ ಆರರಿಂದ ಹತ್ತೊಂಬತ್ತರವರೆಗೆ ಸಂಚರಿಸುವನು. ಮಂಗಳನ ಅಧಿಪತ್ಯವಿರುವ ಈ ಧನಿಷ್ಠಾ ನಕ್ಷತ್ರವು ಸೂರ್ಯನ ತೇಜಸ್ಸಿನೊಂದಿಗೆ ಸೇರಿ ಮಿಶ್ರ ಫಲಗಳನ್ನು ನೀಡುತ್ತದೆ. ವಿವಿಧ ರಾಶಿಗಳ ಮೇಲೆ ಇದರ ಪ್ರಭಾವ ಹೀಗಿದೆ:

​ಶುಭ ಫಲ ರಾಶಿಗಳು

​ಮೇಷ:

ವೃತ್ತಿಜೀವನದಲ್ಲಿ ಅತ್ಯುನ್ನತ ಸ್ಥಾನ ಲಭಿಸಲಿದೆ. ಸರ್ಕಾರಿ ಕೆಲಸಗಳಲ್ಲಿ ಲಾಭ ಮತ್ತು ಸಮಾಜದಲ್ಲಿ ಗೌರವ ಹೆಚ್ಚುತ್ತದೆ.

​ಸಿಂಹ ರಾಶಿ :

ಶತ್ರುಗಳ ಮೇಲೆ ಜಯ ಸಿಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ದೊರೆತು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಿರಿ.

​ವೃಶ್ಚಿಕ ರಾಶಿ :

ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚಾಗುತ್ತದೆ. ಸಣ್ಣ ಪ್ರವಾಸಗಳಿಂದ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು.

​ಧನು ರಾಶಿ :

ಭಾಗ್ಯೋದಯದ ಕಾಲ. ಬಾಕಿ ಇದ್ದ ಹಣ ಕೈಸೇರಲಿದೆ ಮತ್ತು ಕುಟುಂಬದಲ್ಲಿ ಆರ್ಥಿಕ ಸ್ಥಿರತೆ ಕಂಡುಬರುತ್ತದೆ.
​ಅಶುಭ/ಎಚ್ಚರಿಕೆ ವಹಿಸಬೇಕಾದ ರಾಶಿಗಳು

​ಮಿಥುನ ರಾಶಿ :

ಅಷ್ಟಮ ಸ್ಥಾನದ ಪ್ರಭಾವದಿಂದ ಆರೋಗ್ಯದಲ್ಲಿ ಏರುಪೇರಾಗಬಹುದು. ವಾಹನ ಚಾಲನೆ ಮಾಡುವಾಗ ಮತ್ತು ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಅಗತ್ಯ.

​ಕರ್ಕಾಟಕ ರಾಶಿ :

ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿ.

​ಕುಂಭ ರಾಶಿ :

ಹನ್ನೆರಡನೇ ಮನೆಯಲ್ಲಿ ಸೂರ್ಯನಿರುವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ಕಣ್ಣಿನ ಆರೋಗ್ಯದ ಬಗ್ಗೆ ಗಮನಹರಿಸಿ.

​ತುಲಾ ರಾಶಿ :

ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ. ಆಸ್ತಿ ವಿಚಾರದಲ್ಲಿ ಗಡಿಬಿಡಿಯ ನಿರ್ಧಾರಗಳು ಬೇಡ.

ಇದನ್ನೂ ಓದಿ: ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಕೇತುವಿನಿಂದ ಯಾರಿಗೆ ಯಾವ ಫಲ?

​ಮಿಶ್ರ ಫಲ ರಾಶಿಗಳು

​ವೃಷಭ, ಕನ್ಯಾ, ಮಕರ ಮತ್ತು ಮೀನ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹೊಸ ಜವಾಬ್ದಾರಿಗಳು ಬಂದರೂ ಸರಿಯಾದ ಯೋಜನೆಯಿಂದ ಯಶಸ್ಸು ಗಳಿಸಬಹುದು.

ದೋಷ ​ಪರಿಹಾರಕ್ಕೆ ಈ ಅವಧಿಯಲ್ಲಿ ಪ್ರತಿ ದಿನ ಸೂರ್ಯಾಷ್ಟಕ ಪಠಿಸುವುದು ಅಥವಾ ಶಿವನಿಗೆ ಜಲಾಭಿಷೇಕ ಮಾಡುವುದು ಅಥವಾ ಮಾಡಿಸುವುದು ಅಶುಭ ಫಲಗಳನ್ನು ತಗ್ಗಿಸಲು ಸಹಕಾರಿ ಆಗುವುದು.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬ್ಬಾ ಎಷ್ಟು ಅದ್ದೂರಿಯಾಗಿರುತ್ತೆ ನೋಡಿ ರಶ್ಮಿಕಾ ಮದುವೆ; ಸಿದ್ಧತೆಯ ವಿಡಿಯೋ ಲೀಕ್ – Kannada News | Rashmika Mandanna and Vijay Deverakonda’s Secret Udaipur Wedding: Leaked Prep Video!

ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿಜಯ್ ದೇವರಕೊಂಡ ಜೊತೆ ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗುತ್ತಿದ್ದಾರೆ. ಈ ವಿಷಯದಲ್ಲಿ ಈ ಜೋಡಿ ಗುಟ್ಟು ಕಾಯ್ದುಕೊಳ್ಳುತ್ತಾ ಬರುತ್ತಿದೆ. ಈಗ ರಶ್ಮಿಕಾ ಮಂದಣ್ಣ ಅವರು ವಿವಾಹ ಆಗೋ ಹೋಟೆಲ್​ನ ಸಿದ್ಧತೆಯ ವಿಡಿಯೋ ಲೀಕ್ ಆಗಿದೆ. ಈ ವಿಡಿಯೋದಲ್ಲಿ ಮದುವೆ ಎಷ್ಟು ಅದ್ದೂರಿಯಾಗಿ ನೆರವೇರಲಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತುಂಬಾನೇ ಖಾಸಗಿಯಾಗಿ ಈ ವಿವಾಹ ನಡೆಯಲಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಪರಿಚಯ ಆಗಿ ಹಲವು ವರ್ಷಗಳು ಕಳೆದಿವೆ. ‘ಗೀತ ಗೋವಿಂದಂ’ ಸಿನಿಮಾ ಟೈಮ್ ಅಲ್ಲಿ ಸೆಟ್​ ಅಲ್ಲಿ ಇವರ ಪರಿಚಯ ಆಯಿತು. ಆ ಬಳಿಕ ಇಬ್ಬರ ಮಧ್ಯೆ ಸಾಕಷ್ಟು ಒಳ್ಳೆಯ ಬಾಂಡಿಂಗ್ ಬೆಳೆಯಿತು. ಪರಿಚಯ ಪ್ರೀತಿಗೆ ತಿರುಗಿದೆ. ಈಗ ಇವರು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ವಿಜಯ್ ನಿವಾಸದಲ್ಲಿ ಗುಟ್ಟಾಗಿಯೇ ನಿಶ್ಚಿತಾರ್ಥ ನಡೆದಿತ್ತು. ವಿವಾಹ ಕೂಡ ಸಾಕಷ್ಟು ರಹಸ್ಯವಾಗಿ ನಡೆಯುತ್ತಿದೆ.

ಉದಯಪುರದ ಸಿಟಿ ಪ್ಯಾಲೇಸ್ ಹೋಟೆಲ್ ಅಲ್ಲಿ ಮದುವೆ ನಡೆಯುತ್ತಿದೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ. ವಿಡಿಯೋದಲ್ಲಿರುವವರು ಹೇಳುವ ಮಾಹಿತಿ ಪ್ರಕಾರ ಫೆಬ್ರವರಿ 2ರಂದೇ ಈ ಮದುವೆ ನಡೆಯಲಿದೆಯಂತೆ. ಫೆಬ್ರವರಿ 26ರಂದು ಇವರ ಮದುವೆ ಎಂದು ಹೇಳಲಾಗಿತ್ತು. ಆದರೆ, ಈಗ ದಿನಾಂಕ ಬದಲಾಯಿತೇ ಎಂಬ ಪ್ರಶ್ನೆಯೂ ಮೂಡಿದೆ. ಮದುವೆ ದಿನಾಂಕದ ಬಗ್ಗೆ ಸ್ಪಷ್ಟತೆ ಇಲ್ಲದಿರಲಿ ಎಂದು ಕೆಲವೊಮ್ಮೆ ಸೆಲಬ್ರಿಟಿಗಳು ತಪ್ಪು ದಿನಾಂಕ ಸುದ್ದಿಯಾಗುವಂತೆ ನೋಡಿಕೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಕೂಡ ಇದೇ ತಂತ್ರ ಉಪಯೋಗಿಸಿರಬಹುದು ಎಂಬುದು ಅನೇಕರ ವಾದ.

ಇದನ್ನೂ ಓದಿ: ಮದುವೆಗೂ ಮುನ್ನ ಗುಡ್ ನ್ಯೂಸ್ ನೀಡಿದ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಅವರು ಇಂದೇ ಮದುವೆ ಆದರೆ, ಸಂಜೆ ವೇಳೆ ಅವರ ವಿವಾಹದ ಫೋಟೋಗಳು ಅಪ್​​ಲೋಡ್ ಆಗಬಹುದು. ಮದುವೆ ವಿಷಯದಲ್ಲಿ ರಶ್ಮಿಕಾ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆ ಕನಸು ಈಗ ಈಡೇರುತ್ತಿದೆ. ವಿವಾಹ ಸಾಕಷ್ಟು ಖಾಸಗಿಯಾಗಿ ನಡೆಯುತ್ತಿದ್ದು, ಫೋಟೋಗಳು ವೈರಲ್ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಷ್ಟ್ರತಿಗಳ ಅಂಗಳ ತಲುಪಿದ ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲರು ಕೊಟ್ಟ ಕಾರಣಗಳೇನು ಗೊತ್ತೇ? – Kannada News | Hate Speech Bill Reaches President: Why Karnataka Governor Rejected the Bill Citing 29 Reasons

ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ Image Credit source: tv9

ಬೆಂಗಳೂರು, ಫೆಬ್ರವರಿ 2: ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಂಡಿಸಿದ್ದ ದ್ವೇಷ ಭಾಷಣ ಮಸೂದೆ (Hate Speech Bill) ಇದೀಗ ರಾಷ್ಟ್ರಪತಿಗಳ (President of India) ಅಂಗಳಕ್ಕೆ ತಲುಪಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಮಸೂದೆಗೆ ಅಂಕಿತ ಹಾಕಲು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ನಿರಾಕರಿಸಿದ್ದು, ತಮ್ಮ ನಿರ್ಧಾರಕ್ಕೆ ಸ್ಪಷ್ಟನೆಯಾಗಿ 29 ಪ್ರಮುಖ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ದ್ವೇಷ ಭಾಷಣ ಮಸೂದೆ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ. ಅಲ್ಲದೆ, ರಾಜ್ಯಪಾಲರು ಹಾಗೂ ಕಾಂಗ್ರೆಸ್ ಸರ್ಕಾರದ ನಡುವಣ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ಒಯ್ದಿದೆ.

ರಾಜ್ಯ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದ ದ್ವೇಷ ಭಾಷಣ ಮಸೂದೆಗೆ ಸಂಬಂಧಿಸಿ ರಾಜ್ಯಪಾಲರು ಸಹಿ ನಿರಾಕರಿಸಿದ್ದು, ಅದೀಗ ರಾಷ್ಟ್ರಪತಿಗಳಿಗೆ ವರ್ಗಾವಣೆಯಾಗಿದೆ. ಈ ಮಸೂದೆ ವಿರುದ್ಧ ಈಗಾಗಲೇ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಗಮನಾರ್ಹ.

ದ್ವೇಷ ಭಾಷಣ ಮಸೂದೆಗೆ ಸಹಿ ನಿರಾಕರಿಸಿ ರಾಜ್ಯಪಾಲರು ನೀಡಿದ ಪ್ರಮುಖ ಕಾರಣಗಳು

ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಈ ಅಸ್ಪಷ್ಟತೆಯಿಂದಾಗಿ ಧರ್ಮ, ಜಾತಿ, ಜನಾಂಗ, ವ್ಯಕ್ತಿಗಳ ಮೇಲೆ ಪೂರ್ವಾಗ್ರಹದಿಂದ ಕ್ರಮ ಜರುಗುವ ಸಾಧ್ಯತೆಯನ್ನು ಹೆಚ್ಚಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ಉಭಯ ಸದನಗಳಲ್ಲಿ ಅರ್ಥಪೂರ್ಣ ಮತ್ತು ಸಮಗ್ರ ಚರ್ಚೆಗೆ ಒಳಪಡಿಸದೇ ಅಂಗೀಕರಿಸಲಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಇದರ ಪರಿಣಾಮವಾಗಿ ಸಂವಿಧಾನಾತ್ಮಕವಾಗಿ ಸಂರಕ್ಷಿತ ಪ್ರಜಾಪ್ರಭುತ್ವದ ಚರ್ಚೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಮೂಲಭೂತ ಹಕ್ಕನ್ನು ಕಸಿಯುವ ಭೀತಿ

ಇದಲ್ಲದೆ, ಮಸೂದೆಯಲ್ಲಿ ಹಲವಾರು ಕಾನೂನು ತೊಡಕುಗಳು ಇರುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. ಇದು ಮಿತಿ ಮೀರಿದ ಭಯಾನಕ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಮೂಲಭೂತ ಹಕ್ಕನ್ನು ಕಸಿಯುವ ಭೀತಿ ಇದರಿಂದ ಉಂಟಾಗಬಹುದು ಎಂಬುದೂ ಅವರ ಪ್ರಮುಖ ಆಕ್ಷೇಪವಾಗಿದೆ.

ಆನ್‌ಲೈನ್ ವಿಷಯಗಳನ್ನು ಅನಿಯಂತ್ರಿತವಾಗಿ ನಿರ್ಬಂಧಿಸುವ ಸಾಧ್ಯತೆ, ಪೊಲೀಸ್ ವ್ಯವಸ್ಥೆಯಿಂದ ಕಾನೂನು ದುರುಪಯೋಗವಾಗುವ ಭೀತಿ ಹಾಗೂ ದೇಶದಲ್ಲಿ ಈಗಾಗಲೇ ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದ ಹಲವಾರು ಕಾನೂನುಗಳು ಜಾರಿಯಲ್ಲಿರುವುದನ್ನೂ ರಾಜ್ಯಪಾಲರು ತಮ್ಮ ಕಾರಣಗಳಲ್ಲಿ ಉಲ್ಲೇಖಿಸಿದ್ದಾರೆ.

ಬೌದ್ಧಿಕ ಚಿಂತನೆ ಮತ್ತು ಸ್ವತಂತ್ರ ಅಭಿವ್ಯಕ್ತಿಗೆ ಹೆಸರಾದ ಕರ್ನಾಟಕದಲ್ಲಿ, ಇಂತಹ ಮಸೂದೆ ಜಾರಿಯಾದರೆ ಚಿಂತನೆಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ರಾಜ್ಯಪಾಲರಿಂದ ವ್ಯಕ್ತವಾಗಿದೆ. ಈ ನಿರಾಕರಣೆಯ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ.

ಇದನ್ನೂ ಓದಿ: ದ್ವೇಷ ಭಾಷಣ ಕಾಯ್ದೆಯಾಗುವ ಮುನ್ನವೇ ಬಿಜೆಪಿಗರ ಮೇಲೆ ಪೊಲೀಸ್ ನೋಟಿಸ್ ಅಸ್ತ್ರ, ಶಾಸಕ ಕಿಡಿ

ರಾಜ್ಯಪಾಲರ ಸಹಿ ನಿರಾಕರಣೆ ಮತ್ತು ಮಸೂದೆ ರಾಷ್ಟ್ರಪತಿಗಳಿಗೆ ವರ್ಗಾವಣೆಗೊಂಡಿರುವುದರಿಂದ ದ್ವೇಷ ಭಾಷಣ ಮಸೂದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಮುಂದೆ ರಾಷ್ಟ್ರಪತಿಗಳು ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿ ಅಪಾಯದಲ್ಲಿ! ಐತಿಹಾಸಿಕ ಲಕ್ಕುಂಡಿ ಬಳಿಯೇ ಇದ್ದರೂ ನಿರ್ಲಕ್ಷ್ಯ – Kannada News | Karnataka’s Tallest Krishna Idol Near Lakkundi Faces Neglect: Why Jantli Shirur Temple Is Rarer Than Udupi Krishna

ಕರ್ನಾಟಕದಲ್ಲೇ ಅತಿ ಎತ್ತರದ ಶ್ರೀಕೃಷ್ಣ ಮೂರ್ತಿImage Credit source: tv9

ಗದಗ, ಫೆಬ್ರವರಿ 2: ಗದಗ (Gadag) ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿಶಿರೂರ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀಕೃಷ್ಣ ದೇವಾಲಯ ಅವ್ಯವಸ್ಥೆಯ ಆಗರವಾಗಿದ್ದು, ಆಡಳಿತದ ನಿರ್ಲಕ್ಷ್ಯದಿಂದ ನಲುಗಿ ಹೋಗಿದೆ. ಇದೀಗ ಗ್ರಾಮಸ್ಥರು ದೇಗುಲದ ಜೀರ್ಣೋದ್ಧಾರಕ್ಕೆ ಆಗ್ರಹಿಸಿದ್ದಾರೆ. ಇಡೀ ಕರ್ನಾಟಕದಲ್ಲೇ ಅತೀ ಎತ್ತರದ ಕೃಷ್ಣನ ಮೂರ್ತಿ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾದ ದೇವಸ್ಥಾನ ಇದಾಗಿದೆ. ಸುಮಾರು ಐದು ಅಡಿ ಎತ್ತರದ ಅಪರೂಪದ ಶ್ರೀ ಕೃಷ್ಣ ಮೂರ್ತಿಯನ್ನು ಹೊಂದಿರುವ ಈ ದೇವಾಲಯವನ್ನು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೂಕ್ಷ್ಮ ಕೆತ್ತನೆಯ ಕಿರೀಟ, ಕಿವಿಯೋಲೆ, ಹಾರ, ಉದರಬಂಧ, ವಸ್ತ್ರ ಅಲಂಕಾರಗಳು ಶಿಲ್ಪಕಲೆಯ ಅದ್ಭುತವನ್ನು ಸಾರುತ್ತವೆ. ಶಂಖ, ಚಕ್ರ, ಗದಾ, ಪದ್ಮ ಹಿಡಿದಿರುವ ಈ ಕೃಷ್ಣ ಮೂರ್ತಿ ವಿಷ್ಣುವಿನ ಅವತಾರ ರೂಪವೆಂದು ಇತಿಹಾಸಜ್ಞರು ಗುರುತಿಸಿದ್ದಾರೆ.

ಬೀಳುವ ಹಂತದಲ್ಲಿ ಅಪರೂಪದ ಕೃಷ್ಣ ಮೂರ್ತಿ

ಆದರೆ, ಇಷ್ಟೊಂದು ಅಪರೂಪದ ದೇವಾಲಯ ಇಂದು ಸಂಪೂರ್ಣ ಅವನತಿ ಹಾದಿಯಲ್ಲಿದೆ. ದೇವಾಲಯದ ಸುತ್ತಮುತ್ತ ಕಸ, ಗಿಡಗಂಟಿಗಳು ಬೆಳೆದಿದ್ದು, ಮಳೆಗಾಲದಲ್ಲಿ ದೇವಸ್ಥಾನ ಸೋರುತ್ತಿರುವುದು ಶಿಲ್ಪ ಮತ್ತು ವಾಸ್ತುಶಿಲ್ಪಕ್ಕೆ ಗಂಭೀರ ಹಾನಿಯಾಗುವ ಭೀತಿ ಹುಟ್ಟುಹಾಕಿದೆ. ಅತೀ ಸುಂದರವಾದ ಕೃಷ್ಣನ ಮೂರ್ತಿ ಬಿಳುವ ಹಂತಕ್ಕೆ ತಲುಪುತ್ತಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಐತಿಹಾಸಿಕ ಲಕ್ಕುಂಡಿ ಸಮೀಪದಲ್ಲೇ ಇದೆ ದೇಗುಲ

ಐತಿಹಾಸಿಕ ಲಕ್ಕುಂಡಿ ಗ್ರಾಮದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಈ ಕೃಷ್ಣ ದೇವಾಲಯವನ್ನು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮಗ್ರ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪಕ್ಕದಲ್ಲೇ ಲಕ್ಕುಂಡಿಯಲ್ಲಿ ಪುರಾತನ ಕಾಲದ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವಾಗ, ನಮ್ಮ ಗ್ರಾಮದ ಐತಿಹಾಸಿಕ ದೇವಸ್ಥಾನ ನಿರ್ಲಕ್ಷ್ಯಕ್ಕೆ ಒಳಗಾಗಿರುವುದಕ್ಕೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಅಪರೂಪದ ಕೃಷ್ಣ ಮೂರ್ತಿಗೆ ಮನಸೋತಿದ್ದ ಪೇಜಾವರ ಶ್ರೀಗಳು

ಈ ಹಿಂದೆ ಉಡುಪಿಯ ಪೇಜಾವರ ಶ್ರೀಗಳು ಜಂತ್ಲಿಶಿರೂರ ಗ್ರಾಮಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದೇವಾಲಯವನ್ನು ವೀಕ್ಷಿಸಿದ್ದರು. ಅಪರೂಪದ ಕೃಷ್ಣನ ಮೂರ್ತಿಯನ್ನು ನೋಡಿ ಪೇಜಾವರ ಶ್ರೀಗಳೇ ಬೆರಗಾಗಿದ್ದು, ಮೂರ್ತಿಯನ್ನು ಉಡುಪಿಯ ಕೃಷ್ಣ ಮಠಕ್ಕೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ ಮೂರ್ತಿಯ ಐತಿಹಾಸಿಕ ಮಹತ್ವವನ್ನು ಗಮನಿಸಿ ಗ್ರಾಮಸ್ಥರು ಅದನ್ನು ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.

ಇದ್ನನೂ ಓದಿ: ಶಾಲಾ ಮಕ್ಕಳ ಮೇಲೆ ಲಕ್ಕುಂಡಿ ಉತ್ಖನನದ ಎಫೆಕ್ಟ್​​: ಧೂಳಿನ ಅಬ್ಬರಕ್ಕೆ ಪುಟಾಣಿಗಳು ಹೈರಾಣು

ಇಷ್ಟೊಂದು ಅಪರೂಪದ ಮತ್ತು ಐತಿಹಾಸಿಕ ಮಹತ್ವ ಹೊಂದಿರುವ ಶ್ರೀ ಕೃಷ್ಣ ದೇವಾಲಯವನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂದು ಗ್ರಾಮಸ್ಥರು ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ್ ಹಾಗೂ ಪ್ರವಾಸೋದ್ಯಮ ಸಚಿವ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಈ ಪುರಾತನ ಧಾರ್ಮಿಕ ಪರಂಪರೆಯನ್ನು ಉಳಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:32 am, Mon, 2 February 26

Source link

ಉಕ್ರೇನ್​ನಲ್ಲಿ ಬಸ್ ಮೇಲೆ ಇಸ್ರೇಲ್ ಡ್ರೋನ್ ದಾಳಿ, 15 ಮಂದಿ ಸಾವು, 7 ಜನರಿಗೆ ಗಾಯ – Kannada News | Fifteen Workers Killed in Russian Strike as Ukraine Sets Peace Talks Timeline

ಕೈವ್, ಫೆಬ್ರವರಿ 02: ರಷ್ಯಾ ಉಕ್ರೇನ್​(Ukraine) ಮೇಲೆ ಡ್ರೋನ್ ದಾಳಿ ನಡೆಸಿದ್ದು, ಘಟನೆಯಲ್ಲಿ 15 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಣಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಖಾಸಗಿ ಕಂಪನಿಯ ಬಸ್ ಅನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದೆ.

ಡ್ರೋನ್ ದಾಳಿಯ ನಂತರ ಬಸ್ ಬೆಂಕಿಗೆ ಹೊತ್ತಿಕೊಂಡಿತ್ತು, ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ಬೆಂಕಿ ನಂದಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆರಂಭದಲ್ಲಿ ಸಾವಿನ ಸಂಖ್ಯೆ 12 ಎಂದು ವರದಿಯಾಗಿತ್ತು, ಆದರೆ ನಂತರ ಅಧಿಕಾರಿಗಳು ಸಾವಿನ ಸಂಖ್ಯೆ 15 ಕ್ಕೆ ಏರಿದೆ ಎಂದು ದೃಢಪಡಿಸಿದರು. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪಾವ್ಲೋಹ್ರಾದ್ ಜಿಲ್ಲೆಯ ಡಿಟಿಇಕೆ ಕಲ್ಲಿದ್ದಲು ಸ್ಥಾವರದ ಬಳಿ ಈ ದಾಳಿ ನಡೆದಿದೆ. ಬಸ್ ಗಣಿಗಾರರನ್ನು ತಮ್ಮ ಕರ್ತವ್ಯಕ್ಕೆ ಕರೆದೊಯ್ಯುತ್ತಿತ್ತು.ಆಗ ದಾಳಿ ನಡೆದಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ದಾಳಿಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಡ್ನಿಪ್ರೊ ಪ್ರದೇಶದ ಟೆರ್ನಿವ್ಕಾ ಪ್ರದೇಶದಲ್ಲಿ ನಾಗರಿಕರನ್ನು ಸಾಗಿಸುತ್ತಿದ್ದ ಬಸ್ ಮೇಲೆ ರಷ್ಯಾದ ಡ್ರೋನ್ ಡಿಕ್ಕಿ ಹೊಡೆದು ಅನೇಕ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ದುರಂತ ಘಟನೆಯ ಮಧ್ಯೆ, ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳ ಕುರಿತು ಮಾಹಿತಿ ನೀಡಿದ್ದಾರೆ. ಉಕ್ರೇನ್, ರಷ್ಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಮುಂದಿನ ತ್ರಿಪಕ್ಷೀಯ ಸಭೆ ಫೆಬ್ರವರಿ 4 ಮತ್ತು 5 ರಂದು ಅಬುಧಾಬಿಯಲ್ಲಿ ನಡೆಯಲಿದೆ ಎಂದು ಅವರು ಘೋಷಿಸಿದರು.

ಮತ್ತಷ್ಟು ಓದಿ: ಉಕ್ರೇನ್​​ ಮೇಲಿನ ಯುದ್ಧಕ್ಕೆ ಭಾರತ-ಚೀನಾ ಮುಖ್ಯ ಹೂಡಿಕೆದಾರರು; ವಿಶ್ವಸಂಸ್ಥೆಯಲ್ಲಿ ಮತ್ತೆ ಹಳೇ ರಾಗ ಹಾಡಿದ ಟ್ರಂಪ್

ಉಕ್ರೇನ್ ಅರ್ಥಪೂರ್ಣ ಮಾತುಕತೆಗಳಿಗೆ ಸಂಪೂರ್ಣವಾಗಿ ಸಿದ್ಧವಾಗಿದೆ , ಈ ದಾಳಿಯು ಮತ್ತೊಮ್ಮೆ ಈ ಯುದ್ಧದಲ್ಲಿ ನಾಗರಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ಶಾಂತಿ ಪ್ರಯತ್ನಗಳ ಅಗತ್ಯವು ಎಂದಿಗಿಂತಲೂ ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ನೆನಪಿಸುತ್ತದೆ.

ರಷ್ಯಾ ತನ್ನ ನೆರೆಯವರ ಮೇಲೆ ನಡೆಸಿದ ಸಂಪೂರ್ಣ ಆಕ್ರಮಣವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿರುವ ಮಾತುಕತೆಗಳನ್ನು ಮುಂದುವರಿಸಲು ರಷ್ಯಾ, ಉಕ್ರೇನ್ ಮತ್ತು ಅಮೆರಿಕದ ರಾಯಭಾರಿಗಳು ಅಬುಧಾಬಿಯಲ್ಲಿ ಭೇಟಿಯಾಗುವ ನಿರೀಕ್ಷೆಯಿತ್ತು. ಝೆಲೆನ್ಸ್ಕಿ ಮುಂದಿನ ವಾರ ಅವು ನಡೆಯುವುದಾಗಿ ಘೋಷಿಸಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link