ಯಾವುದೇ ಆದರೂ ಅದು ಅತಿಯಾದರೆ ವಿಷವೇ. ಅದರಲ್ಲೂ ಅಭಿಮಾನ ಅತಿಯಾದರೆ ಅದು ಕಾರ್ಕೋಟಕ ವಿಷವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಸಿಕ್ಕಿದೆ. ಗಿಲ್ಲಿಗೆ (Gilli Nata) ಉಘೇ ಉಘೇ ಎಂದು, ಅದಕ್ಕೆ ಪ್ರತಿಯಾಗಿ ಏನೂ ಸಿಕ್ಕಿಲ್ಲ ಎಂದಾಗ ಅವರ ವಿರುದ್ಧವೇ ಅಪಪ್ರಚಾರ ಮಾಡುವ ಕೆಲಸ ಆಗುತ್ತಿದೆ. ಅಭಿಮಾನ ಅತಿಯಾದರೆ ಏನಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿಕೊಳ್ಳಾಗುತ್ತಿದೆ.
ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್. ಈ ಶೋನಲ್ಲಿ ಅವರಿಗೆ ದೊಡ್ಡ ಅಭಿಮಾನ ಬಳಗ ಸೃಷ್ಟಿ ಆಯಿತು. ಗಿಲ್ಲಿ ಮೇಲೆ ಜನರು ಎಷ್ಟು ಪ್ರೀತಿ ತೋರಿದರು ಎಂದರೆ ಕೆಲವರು ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ. ಈ ರೀತಿ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಿಲ್ಲಿಯಿಂದ ಬೆಟ್ಟದಷ್ಟು ನಿರೀಕ್ಷೆ ಮಾಡುತ್ತಿದ್ದಾರೆ.
ಬಿಗ್ ಬಾಸ್ ಮನೆಗೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಬಂದಿದ್ದರು. ಈ ವೇಳೆ ಮಾತನಾಡಿದ್ದ ಗಿಲ್ಲಿ, ‘ಬಿಗ್ ಬಾಸ್’ ಮನೆಯಿಂದ ಹೊರ ಹೋದ ಬಳಿಕ ಆ ವ್ಯಕ್ತಿಯನ್ನು ಭೇಟಿ ಮಾಡುತ್ತೇನೆ ಎಂದಿದ್ದರು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಗಿಲ್ಲಿ ವಿವಿಧ ಕಾರ್ಯಕ್ರಮಗಳಿಗೆ, ಶೂಟಿಂಗ್ಗೆ ತೆರಳುತ್ತಿದ್ದಾರೆ. ಈ ಕಾರಣದಿಂದ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಇದೆಲ್ಲವನ್ನೂ ಟ್ಯಾಟೂ ಅಭಿಮಾನಿ ಖಂಡಿಸಿದ್ದಾರೆ.
‘ಗಿಲ್ಲಿ ಭೇಟಿ ಮಾಡ್ತೀನಿ ಎಂದು ಹೇಳಿ ಭೇಟಿ ಮಾಡ್ತಿಲ್ಲ. ಇವರಿಗೋಸ್ಕರ ದೇವಸ್ಥಾನಕ್ಕೆ ಹೋಗಿ ಪ್ರಸಾದ ತೆಗೆದುಕೊಂಡು ಬಂದೆವು. ಅವರ ಅಣ್ಣನಿಗೆ ಕರೆ ಮಾಡಿ, ಗಿಲ್ಲಿಗೆ ಪ್ರಸಾದ ಕೊಡಬೇಕಿತ್ತು ಎಂದು ಹೇಳಿದೆ. ಆದರೆ, ಭೇಟಿಗೆ ಅವಕಾಶ ಸಿಗಲಿಲ್ಲ. ಗಿಲ್ಲಿ ದುಡ್ಡಿರೋ ವ್ಯಕ್ತಿಯನ್ನು ಮಾತ್ರ ಭೇಟಿ ಮಾಡುತ್ತಿದ್ದಾರೆ. ನಮ್ಮಂತಹ ಫ್ಯಾನ್ಸ್ನ ಅವರು ಭೇಟಿ ಮಾಡುತ್ತಿಲ್ಲ’ ಎಂದು ಆ ವ್ಯಕ್ತಿ ಆರೋಪಿಸಿದ್ದಾರೆ.
ಸದ್ಯ ಗಿಲ್ಲಿಗೆ ಸಿಕ್ಕಿರೋ ಅತಿಯಾದ ಅಭಿಮಾನವೇ ಅವರಿಗೆ ಮುಳುವಾಗುವ ಸೂಚನೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಗಿಲ್ಲಿ ಅವರನ್ನು ಭೇಟಿ ಮಾಡಬಹುದು ಅಥವಾ ಮಾಡದೇ ಇರಬಹುದು. ಆದರೆ, ಈ ರೀತಿ ಎಲ್ಲಾ ಅಭಿಮಾನಿಗಳು ನಾವು ಹಾಗೆ ಬೆಂಬಲ ನೀಡಿದ್ದೆವು, ಆದರೂ ಭೇಟಿಗೆ ಬಂದಿಲ್ಲ ಎಂದೆಲ್ಲ ಹೇಳಿದರೆ ಅದು ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ 8 ಮಂದಿಗೆ ಬಂಧನ ಭೀತಿImage Credit source: tv9
ದಾವಣಗೆರೆ, ಫೆಬ್ರವರಿ 2: ಗಿಡಮೂಲಿಕೆಗಳ ಮಾರಾಟಕ್ಕಾಗಿ ವಿದೇಶಗಳಿಗೆ ತೆರಳುವ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು (Hakki Pikki Tribe) ಜನಾಂಗದ ಎಂಟು ಮಂದಿ ಇದೀಗ ಸೆಂಟ್ರಲ್ ಆಫ್ರಿಕಾದಲ್ಲಿ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೀಸಾ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದಾರೆ. ದಾವಣಗೆರೆ (Davanagere), ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಮೂಲದ ಹಕ್ಕಿಪಿಕ್ಕಿ ಬುಡಕಟ್ಟು ಜನರು ಪ್ರತಿವರ್ಷ ಗಿಡಮೂಲಿಕೆಗಳ ವ್ಯಾಪಾರದ ನಿಮಿತ್ತ ವಿವಿಧ ದೇಶಗಳಿಗೆ ತೆರಳುತ್ತಾರೆ. ಅದರಂತೆ ಈ ಬಾರಿ ಸೆಂಟ್ರಲ್ ಆಫ್ರಿಕಾಗೆ ತೆರಳಿದ್ದ ಎಂಟು ಮಂದಿ ಹಕ್ಕಿಪಿಕ್ಕಿಗಳು ಇದೀಗ ವೀಸಾ ಸಮಸ್ಯೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ.
2025 ಡಿಸೆಂಬರ್ 22ರಂದು ಇವರ ವೀಸಾ ಅವಧಿ ಮುಕ್ತಾಯವಾಗಿದ್ದು, ಅದಾದ ಬಳಿಕ ಸ್ಥಳೀಯ ಪೊಲೀಸರು ವೀಸಾ ನವೀಕರಣಕ್ಕೆ ತಲಾ 1.5 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಸೂಚಿಸಿದ್ದಾರೆ. ದಂಡ ಪಾವತಿ ವಿಳಂಬವಾದರೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ಪೊಲೀಸರು ನೀಡಿದ್ದಾರೆ ಎನ್ನಲಾಗಿದೆ.
ಹಕ್ಕಿಪಿಕ್ಕಿಗಳ ಪಾಸ್‌ಪೋರ್ಟ್, ವೀಸಾ ವಶಕ್ಕೆ ಪಡೆದ ಪೊಲೀಸರು
ಆತಂಕಕಾರಿ ಸಂಗತಿಯೆಂದರೆ, ಹಕ್ಕಿಪಿಕ್ಕಿಗಳ ಪಾಸ್‌ಪೋರ್ಟ್ ಮತ್ತು ವೀಸಾಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದಾಗಿ ಅವರು ದೇಶ ಬಿಟ್ಟು ತೆರಳಲು ಸಾಧ್ಯವಾಗದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅವರು, ನೆರವಿಗೆ ಧಾವಿಸುವಂತೆ ವಿಡಿಯೋ ಸಂದೇಶದ ಮೂಲಕ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಕ್ಷಣ ಮಧ್ಯಪ್ರವೇಶಿಸಿ ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಈ ಕುರಿತು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಪುನೀತ್ ಕುಮಾರ್ ಮಾತನಾಡಿ, 8 ಮಂದಿ ಸದ್ಯ ಸೆಂಟ್ರಲ್ ಆಫ್ರಿಕಾದಲ್ಲೇ ಇದ್ದು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ. ಈ ಬಗ್ಗೆ ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಹಕ್ಕಿಪಿಕ್ಕಿ ಜನಾಂಗದವರು ವಿದೇಶಕ್ಕೆ ಹೋಗಿ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ
ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದವರು ವಿದೇಶಕ್ಕೆ ಹೋಗಿ ಸಿಕ್ಕಿಬಿದ್ದಿರುವುದು, ಸಂಕಷ್ಟಕ್ಕೆ ಸಿಲುಕಿರುವುದು ಇದೇ ಮೊದಲಲ್ಲ. 2023ರಲ್ಲಿ ಸುಡಾನ್‌ನಲ್ಲಿ ಆಂತರಿಕ ಸಂಘರ್ಷ ಭುಗಿಲೆದ್ದಾಗ, ಗಿಡಮೂಲಿಕೆಗಳ ಮಾರಾಟಕ್ಕಾಗಿ ತೆರಳಿದ್ದ ಕರ್ನಾಟಕದ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದ ಸುಮಾರು 150ಕ್ಕೂ ಹೆಚ್ಚು ಮಂದಿ ಅಲ್ಲಿ ಸಿಲುಕಿದ್ದರು. ನಂತರ, ಸುಡಾನ್‌ನಿಂದ ಭಾರತೀಯರನ್ನು ರಕ್ಷಿಸಿ ಕರೆತರಲು ಭಾರತ ಸರ್ಕಾರ ಆರಂಭಿಸಿದ್ದ ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ಮೂಲಕ ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರನ್ನೂ ವಾಪಸ್ ಕರೆಸಿಕೊಳ್ಳಲಾಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಟಿ20 ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ತಂಡವು 222 ಪಂದ್ಯಗಳನ್ನಾಡಿದೆ. ಈ ಇನ್ನೂರ ಇಪ್ಪೆರಡು ಮ್ಯಾಚ್ಗಳಲ್ಲಿ ಆಸೀಸ್ ಪಡೆ 122 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಸೋತಿರುವುದು ಕೇವಲ 90 ಪಂದ್ಯಗಳಲ್ಲಿ ಮಾತ್ರ. ಈ ತೊಂಬತ್ತು ಪಂದ್ಯಗಳಲ್ಲಿ ಅತ್ಯಂತ ಹೀನಾಯವಾಗಿ ಸೋತಿರುವುದು ಪಾಕಿಸ್ತಾನ್ ವಿರುದ್ಧ.
ಬೆಂಗಳೂರು, ಫೆಬ್ರುವರಿ 02: ಸಾಮಾನ್ಯವಾಗಿ ನಾವು ಹಿರಿಯರೊಂದಿಗೆ, ಕಾರ್ಯಕ್ರಮಗಳಲ್ಲಿ ಅಥವಾ ಸುಂದರ ಪ್ರಕೃತಿಯ ನಡುವೆ ಫೋಟೋಗಳನ್ನು ತೆಗೆದುಕೊಳ್ಳಲು ಬಯಸುತ್ತೇವೆ. ಆದರೆ ದೇವಾಲಯಗಳ ವಿಷಯದಲ್ಲಿ, ವಿಶೇಷವಾಗಿ ಮೂಲ ವಿಗ್ರಹ ಅಥವಾ ಗರ್ಭಗುಡಿಯೊಳಗೆ ಫೋಟೋಗಳನ್ನು, ಸೆಲ್ಫಿಗಳನ್ನು ತೆಗೆದುಕೊಳ್ಳುವುದು ಅಷ್ಟು ಶುಭವಲ್ಲ ಎಂದು ಹೇಳಲಾಗಿದೆ.
ಮೂಲ ವಿಗ್ರಹಗಳನ್ನು ವಾಸ್ತುಶಾಸ್ತ್ರದ ಪ್ರಕಾರ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಗಿರುತ್ತದೆ. ಅವು ಸತತವಾಗಿ ಅಭಿಷೇಕ, ಪೂಜೆಗಳಿಂದ ದೈವಿಕ ಶಕ್ತಿಯನ್ನು ಹೊಂದಿರುತ್ತವೆ. ಈ ವಿಗ್ರಹಗಳು ಪಂಚಭೂತಗಳ ನಿಯಂತ್ರಣದಲ್ಲಿರುತ್ತವೆ ಮತ್ತು ಪ್ರಬಲ ಆಧ್ಯಾತ್ಮಿಕ ಶಕ್ತಿಯನ್ನು ಹೊರಸೂಸುತ್ತವೆ. ಭಕ್ತರು ಭಕ್ತಿ ಅಥವಾ ಪ್ರೀತಿಯಿಂದ ಫೋಟೋ ತೆಗೆದರೂ, ಅವರ ದೇಹದಲ್ಲಿರುವ ನಕಾರಾತ್ಮಕ ಶಕ್ತಿಗಳು ದೈವಿಕ ಶಕ್ತಿಗೆ ಅಡ್ಡಿಪಡಿಸಬಹುದು. ದೇವರೊಂದಿಗೆ ಫೋಟೋ ತೆಗೆದಾಗ ಭಕ್ತರಲ್ಲಿದ್ದ ಧನಾತ್ಮಕ ಶಕ್ತಿ ಕಡಿಮೆಯಾಗಿ ನಕಾರಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸೂರ್ಯನ ಜೊತೆ ಸೇರಿದಾಗ ಗ್ರಹಗಳು ತಮ್ಮ ಬಲವನ್ನು ಕಳೆದುಕೊಳ್ಳುವಂತೆ, ಸರ್ವಶಕ್ತನಾದ ದೇವರ ಶಕ್ತಿಯ ಮುಂದೆ ನಮ್ಮ ಶಕ್ತಿ ಕುಗ್ಗುತ್ತದೆ. ಆದ್ದರಿಂದ, ಅಭಿಷೇಕ ಮತ್ತು ಅರ್ಚನೆಗೊಳ್ಳುವ ದೇವತಾ ಮೂರ್ತಿಗಳ ಜೊತೆ ಫೋಟೋ ತೆಗೆಯುವುದನ್ನು ತಪ್ಪಿಸಬೇಕು ಎಂದು ಗುರೂಜಿ ಹೇಳಿದ್ದಾರೆ.
ಲಕ್ನೋ, ಫೆಬ್ರವರಿ 02: ಐದನೇ ತರಗತಿ ವಿದ್ಯಾರ್ಥಿ(Student)ಯೊಬ್ಬನ ಮೇಲೆ ಸಹಪಾಠಿಗಳು ಹಲ್ಲೆ ನಡೆಸಿರುವ ಪರಿಣಾಮ ಆತ ದೃಷ್ಟಿಯನ್ನೇ ಕಳೆದುಕೊಂಡಿರುವ ಘಟನೆ ಲಕ್ನೋದ ಶಾಲೆಯೊಂದರಲ್ಲಿ ನಡೆದಿದೆ. ಲಕ್ನೋದ ಆರ್ಮಿ ಪಬ್ಲಿಕ್ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಾಲಾ ಆವರಣದಲ್ಲಿ ಇಬ್ಬರು ಸಹ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು, ಕಣ್ಣಿಗೆ ಗಾಯಗಳಾಗಿವೆ.
ಜನವರಿ 21ರಂದು ಮಧ್ಯಾಹ್ನ 12.30ರ ಸುಮಾರಿಗೆ ಶಾಲಾ ಮೈದಾನದಲ್ಲಿ ಈ ಘಟನೆ ನಡೆದಿದ್ದು, ಬಾಲಕನ ತಾಯಿ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಪ್ರಕಾರ, ತನ್ನ ಮಗನ ಮೇಲೆ ಬೇರೆ ವಿಭಾಗದ ಐದನೇ ಹಾಗೂ ಮೂರನೇ ತರಗತಿ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಮಕ್ಕಳು ವಿದ್ಯಾರ್ಥಿಯನ್ನು ನೆಲಕ್ಕೆ ಕೆಡವಿ , ಶೂನ ಹಿಮ್ಮಡಿಯಿಂದ ಕಣ್ಣು ಮತ್ತು ಮುಖದ ಮೇಲೆ ಉಜ್ಜಿದ್ದಾರೆ. ಇದರಿಂದ ಬಾಲಕನಿಗೆ ತೀವ್ರ ಹಾನಿಯುಂಟಾಗಿದೆ. ನಂತರ ಆತ ದೃಷ್ಟಿ ಕಳೆದುಕೊಂಡಿದ್ದಾನೆ.
ಈಗ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಶಾಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅವರು ಅದನ್ನು ಗಮನಿಸಿಲ್ಲ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳು ಮತ್ತ ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ದೂರು ಸ್ವೀಕರಿಸಲಾಗಿದ್ದು, ಜನವರಿ 30 ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಬಾಲಕನ ತಾಯಿ ಆರೋಪಿ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನಿರ್ಭಯ್ ವಿಹಾರ್ ನಿವಾಸಿಯೊಬ್ಬರು ನೀಡಿದ ದೂರಿನ ಪ್ರಕಾರ, ಅವರ ಮಗ 5 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಶಾಲೆಯ ಆಟದ ಮೈದಾನದಲ್ಲಿ ಬೇರೆ ವಿಭಾಗದ ವಿದ್ಯಾರ್ಥಿಗಳು ತನ್ನ ಮಗನ ಮೇಲೆ ಹಲ್ಲೆ ನಡೆಸಿ ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆರಂಭದಲ್ಲಿ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ತಾಯಿ ಆರೋಪಿಸಿದ್ದಾರೆ. ನಂತರ ಅವರು ಕಂಟೋನ್ಮೆಂಟ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ, ಘಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಗಳು ಮತ್ತು ಕೆಲವು ಶಾಲಾ ಸಿಬ್ಬಂದಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪದ ಮೇಲೆ ಔಪಚಾರಿಕ ದೂರು ದಾಖಲಿಸಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿನ್ನರ್ ಗಿಲ್ಲಿ ನಟ (Gilli Nata) ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಾಗಿ ಬೆಳೆದಿದೆ. ಅವರ ಫೋಟೋನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡವರೂ ಇದ್ದಾರೆ. ಈಗ ಅದೇ ವ್ಯಕ್ತಿ ಗಿಲ್ಲಿ ನಟನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ. ಹಲವು ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದು, ವಾಗ್ದಾಳಿ ಮುಂದುವರಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿರೋವಾಗ ಗಿಲ್ಲಿ ಸಾಕಷ್ಟು ಹಾಸ್ಯ ಮಾಡಿದರು. ಅಗತ್ಯ ಇದ್ದಾಗ ತಿರುಗೇಟು ನೀಡಿದರು. ಇದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಪ್ರತಿ ಬಾರಿ ಬಿಗ್ ಬಾಸ್ ಶುರುವಾದಾಗಲೂ ಓರ್ವ ಸ್ಪರ್ಧಿಗೆ ಸಾಕಷ್ಟು ಫ್ಯಾನ್ಸ್ ಸಿಗೋದು ಸಾಮಾನ್ಯ. ಆದರೆ, ಗಿಲ್ಲಿಗೆ ಸಿಕ್ಕಷ್ಟು ದೊಡ್ಡ ಅಭಿಮಾನಿ ಬಳಗ ಇನ್ಯಾರಿಗೂ ಸಿಕ್ಕಿರಲಿಲ್ಲ. ಆದರೆ, ಅಭಿಮಾನಿಗಳನ್ನು ಗಿಲ್ಲಿ ಗೌರವಿಸುತ್ತಿಲ್ಲ ಎಂಬುದು ಅಭಿಮಾನಿಗಳ ಆರೋಪ.
ಬಾಸ್ ಟಿವಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರೋ ಟ್ಯಾಟೂ ಅಭಿಮಾನಿ, ‘ಅವರಲ್ಲಿ ಟ್ಯಾಲೆಂಟ್ ಇತ್ತು. ಅದನ್ನು ನಾವು ಹೊರಗೆ ತಂದಿದ್ದೀವಿ. ಅವರು ಅಭಿಮಾನಿಗಳನ್ನು ಭೇಟಿ ಮಾಡಬೇಕಿತ್ತು, ಮಾಡುತ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿದ್ದಾಗ ನನ್ನನ್ನು ಹೊರ ಹೋದ ತಕ್ಷಣ ಭೇಟಿ ಮಾಡ್ತೀನಿ ಎಂದಿದ್ರು, ಆದರೆ ಭೇಟಿ ಮಾಡಿಲ್ಲ’ ಎಂದು ಆರೋಪಿಸಿದ್ದಾರೆ.
ಗಿಲ್ಲಿ ನಟ ಅವರು ಇನ್ಸ್ಟಾಗ್ರಾಮ್ನಲ್ಲಿ 20 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗೆ ಇಷ್ಟ ದೊಡ್ಡ ಮಟ್ಟದಲ್ಲಿ ಅಭಿಮಾನಿ ವರ್ಗ ಸಿಕ್ಕಿದ್ದು ಇದೇ ಮೊದಲು. ಆದರೆ, ಈಗ ಅವರಿಗೆ ಅಭಿಮಾನವೇ ಮುಳವಾಯಿತೇ ಎನ್ನುವ ಪ್ರಶ್ನೆ ಮೂಡಿದೆ. ಕೆಲ ನಿಜವಾದ ಫ್ಯಾನ್ಸ್, ‘ನಿನ್ನನ್ನು ಗಿಲ್ಲಿ ಭೇಟಿ ಮಾಡಲೇಬಾರದು’ ಎಂದಿದ್ದಾರೆ. ಗಿಲ್ಲಿ ಅವರು ಸದ್ಯ ನಿರ್ದೇಶನ ಮಾಡುವ ಆಲೋಚನೆ ಹೊಂದಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಫೆಬ್ರವರಿ 2: ಬೆಂಗಳೂರಿನಲ್ಲಿ (Bangalore) ಜನಸಂಖ್ಯೆಗಿಂತಲೂ ವಾಹನ ಸಂಖ್ಯೆ ಅತಿಯಾಗಿದ್ದು, ಟ್ರಾಫಿಕ್ ಜಾಮ್ (Traffic Jam) ತಲ್ಲಣ ಹುಟ್ಟಿಸುತ್ತಿದೆ. ಇನ್ನು ನಗರದಲ್ಲಿ ಅನೇಕ ಜಾಗಗಳಲ್ಲಿ ಬೇಕಾಬಿಟ್ಟಿ ಅನಧಿಕೃತ ಪಾರ್ಕಿಂಗ್ ಕೂಡ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ನಗರದಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಜಾರಿ ಮಾಡಲು ಜಿಬಿಎ ಹಾಗೂ ಸಂಚಾರ ಪೊಲೀಸ್ ನಿರ್ಧರಿಸಿದೆ.
ಬೆಂಗಳೂರಿನ ಅನಧಿಕೃತ ಪಾರ್ಕಿಂಗ್ ಜಾಲದ ಬಗ್ಗೆ ‘ಟಿವಿ9’ ಕನ್ನಡ ರಿಯಾಲಿಟಿ ಚೆಕ್ ನಡೆಸಿದೆ. ನಗರದ ರಾಜಾಜಿನಗರ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಗರದಲ್ಲಿ ರಸ್ತೆಗಳು ಪಾರ್ಕಿಂಗ್ಗೆ ಮಾತ್ರ ಸೀಮಿತವಾಗಿವೆ. ಪಾರ್ಕ್ ಮಾಡಿ ವರ್ಷಾನುಗಟ್ಟಲೆ ಆದರೂ ವಾಹನಗಳ ಮಾಲೀಕರು ಇತ್ತ ತಿರುಗಿ ನೋಡುತ್ತಿಲ್ಲ. ವಾಹನಗಳು ಧೂಳು ಹಿಡಿದು, ತುಕ್ಕು ಹಿಡಿದರೂ ಇಲ್ಲೇ ಬಿದ್ದಿವೆ.
ಇನ್ನು ಮಲ್ಲೇಶ್ವರಂ 8ನೇ ಮುಖ್ಯರಸ್ತೆ ಜನವಸತಿ ಪ್ರದೇಶಗಳೂ ಅನಾಮಿಕರ ವಾಹನಗಳ ಪಾರ್ಕಿಂಗ್ ಸ್ಪಾಟ್ ಆಗಿವೆ. 2019ರಲ್ಲಿ ನಿಲ್ಲಿಸಿಹೋಗಿದ್ದ ವಾಹನವೊಂದು ಇನ್ನೂ ಕದಲಲೇ ಇಲ್ಲ. ಸ್ಕ್ರಾಪ್ ಆದ ವಾಹನಕ್ಕೂ ಕೂಡ ಇದೇ ಆಶ್ರಯತಾಣ. ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸ್ಥಳೀಯರು ವಿಚಾರ ಮುಟ್ಟಿಸಿದರೂ ಏನೂ ಪ್ರಯೋಜನವಾಗಿಲ್ಲ.
ನಗರದ ಹಲವು ಕಡೆಗಳಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುವ ಕೆಟ್ಟ ಪ್ರವೃತ್ತಿ ಹೆಚ್ಚಾಗಿದೆ. ಹೀಗಾಗಿಯೇ ಟೋಯಿಂಗ್ ವ್ಯವಸ್ಥೆ ಮತ್ತೆ ಜಾರಿ ಮಾಡುತ್ತಿರುವುದು ಒಳ್ಳೆಯದೇ ಎಂದು ಸಾರ್ವಜನಿಕರು ಸಹಮತ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೇ, ಸಂಚಾರ ದಟ್ಟಣೆಯ ಕಾರಣಕ್ಕಾಗಿ ವಿಶ್ವಮಟ್ಟದಲ್ಲಿ ಬೆಂಗಳೂರು ಸುದ್ದಿಯಾಗಿತ್ತು. ನೆದರ್ಲೆಂಡ್ಸ್ ಮೂಲದ ‘ಟಾಮ್‌ಟಾಮ್’ ಸಂಸ್ಥೆ ಬಿಡುಗಡೆ ಮಾಡಿರುವ 2025ರ ಸಂಚಾರ ಸೂಚ್ಯಂಕ ವರದಿಯಲ್ಲಿ, ಟ್ರಾಫಿಕ್ ಸಮಸ್ಯೆಯಲ್ಲಿ ಬೆಂಗಳೂರು ವಿಶ್ವದಲ್ಲೇ ಟಾಪ್ 2 ನಗರವಾಗಿ ಹೊರಹೊಮ್ಮಿತ್ತು. 2025ರಲ್ಲಿ ಬೆಂಗಳೂರಿನ ಸರಾಸರಿ ಸಂಚಾರ ದಟ್ಟಣೆ ಶೇ 74.4ಕ್ಕೆ ತಲುಪಿದೆ. 2024ರಲ್ಲಿ ಇದು ಶೇ 72.7 ಆಗಿದ್ದು, ಒಂದೇ ವರ್ಷದಲ್ಲಿ ಶೇ 1.7ರಷ್ಟು ದಟ್ಟಣೆ ಹೆಚ್ಚಾಗಿದೆ ಎಂದು ವರದಿ ತಿಳಿಸಿತ್ತು.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಇಂದಿನ ನಿಮ್ಮ ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ದುಃಸ್ವಪ್ನದಿಂದ ಭಯಗೊಳ್ಳುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು. ಪ್ರೀತಿಯಲ್ಲಿ ನಿಮಗೆ ಸೋಲಾಗಬಹುದು. ಮನೋರಂಜನೆಯಿಂದ ಒತ್ತಡ ಕಡಿಮೆಯಗುವುದು.
ವೃಷಭ ರಾಶಿ:
ಬಹಳ ಶ್ರಮದಿಂದ ನಿಮ್ಮ ಭೂಮಿಯ ಮಾರಟವನ್ನು ಮಾಡುವಿರಿ. ವೃತ್ತಿಯಿಂದ ನೀವು ವಿದೇಶ ಪ್ರಯಾಣವನ್ನು ಮಾಡಬೇಕಾಗಬಹುದು. ಬಂಧುಗಳು ನಿಮ್ಮ ಬಳಿ ಬಂದು ನೋವನ್ನು ಹೇಳಿಕೊಳ್ಳುವರು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ಇಂದು ನೀವು ಮಕ್ಕಳಲ್ಲಿ ಸ್ಪರ್ಧೆಯ ಮನೋಭಾವವನ್ನು ಹೆಚ್ಚಿಸುವಿರಿ.
ಮಿಥುನ ರಾಶಿ:
ಉದ್ಯೋಗದ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕವಾಗಿ ಬರುವ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ.
ಕರ್ಕಾಟಕ ರಾಶಿ:
ಹೂಡಿಕೆಯಿಂದ ಸ್ವಲ್ಪ ನಷ್ಟವಾದಂತೆ ಕಾಣಬಹುದು. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಬಹುದು. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸುವುದು. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡಬಹುದು. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ಒಳ ಮನಸ್ಸು ಹೇಳುವುದನ್ನು ಕೇಳಿಸಿಕೊಂಡರೆ ಒಳ್ಳೆಯದು.
ಸಿಂಹ ರಾಶಿ:
ಸಾಮಾಜಿಕ ಗೌರವವನ್ನು ಪಡೆಯಲು ಆಸೆ ಇರುವುದು. ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ವಾಹನದಿಂದ ನಿಮಗೆ ಆದಾಯ ಸಿಗುವುದು. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗಬಹುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ಮಕ್ಕಳಿಲ್ಲದೇ ಬೇಸರವಾಗಲಿದೆ. ಏಕಾಂಗಿಯಾಗಿ ಇರುವುದು ಕಷ್ಟವಾಗುವುದು. ಅಚಾನಕ್ ತಿರುಗಾಟ ಮಾಡಬೇಕಾಗುವುದು.
ಕನ್ಯಾ ರಾಶಿ:
ನಿಮ್ಮನ್ನು ಎಲ್ಲರೆದುರಿಗೆ ಎದುರಿಗೆ ಮಾತ್ರ ಹೊಗಳುವರು. ಅಜಾಗರೂಕತೆಯಿಂದ ಬಿದ್ದು ಗಾಯ ಮಾಡಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳುವಿರಿ. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು.
ತುಲಾ ರಾಶಿ:
ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು. ನಿಮಗೆ ಇಷ್ಟವಾಗದ ಕಾರ್ಯವನ್ನು ಮಾಡಬೇಕಾಗಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ವಾತದೋಷದಿಂದ ನಿಮಗೆ ಕಷ್ಟವಾಗುವುದು. ನಿಮ್ಮನ್ನು ಚುಚ್ಚುವ ಹಾಗೆ ನಿಮ್ಮವರು ಮಾತನಾಡುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆ ನಿಮ್ಮ ಕನಸಾಗಲಿದೆ.
ವೃಶ್ಚಿಕ ರಾಶಿ:
ನಿಮ್ಮದಲ್ಲದ ವಸ್ತುವನ್ನು ಬಳಸಿಕೊಂಡು ಹಾಳು ಮಾಡುವಿರಿ. ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ಉದ್ಯೋಗದಲ್ಲಿ ಒತ್ತಡ ಸ್ವೀಕರಿಸುವುದು ಅಭ್ಯಾಸವಾಗಿ ಹೋಗುವುದು. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು. ಮನೆಯಿಂದ ದೂರವಿದ್ದವರು ಹತ್ತಿರವಾಗಬೇಕು ಎನಿಸಬಹುದು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ಯಾರನ್ನೋ ಹಿಮ್ಮೆಟ್ಟಿಸುವ ಆಸ್ತೆಯಿಂದ ಕೆಲಸ ಮಾಡುವಿರಿ.
ಧನು ರಾಶಿ:
ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು. ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ ಮಾಡಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಭವಿಷ್ಯದ ಅನೇಕ ದ್ವಂದ್ವಗಳು ಇರಬಹುದು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ.
ಮಕರ ರಾಶಿ:
ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಆದರೂ ಮಾತಿಗೆ ತಪ್ಪಲಾರಿರಿ. ಹಣದಲ್ಲಿ ಮೋಸವಾಗಬಹುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾಗುವುದು. ಪ್ರಾಮಾಣಿಕತೆಯಿಂದ ನಿಮಗೇ ಕಷ್ಟವಾಗುವುದು. ಶತ್ರುಗಳನ್ನು ಸೋಲಿಸುವುದಕ್ಕಿಂತ ಶತ್ರುಗಳೇ ಇಲ್ಲದಂತೆ ಮಾಡಿಕೊಳ್ಳುವಿರಿ.
ಕುಂಭ ರಾಶಿ:
ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು. ಕೆಲವು ಸಂಬಂಧಗಳು ಮತ್ತಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗುವುದು. ವಿದ್ಯಾಭ್ಯಾಸಕ್ಕೆ ಪ್ರೇರಣೆ ಸಿಗಬಹುದು.
ಮೀನ ರಾಶಿ:
ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವರ ನಂಬಿಕಗೆ ಘಾಸಿಯನ್ನು ಉಂಟುಮಾಡುವಿರಿ. ಗೃಹ ಬಳಕೆಯ ವಸ್ತುಗಳು ಹೆಚ್ಚು ಮಾರಾಟವಾಗುವುವು. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ. ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪೂರ್ಣಿಮಾ/ಪ್ರತಿಪತ್, ನಿತ್ಯನಕ್ಷತ್ರ : ಆಶ್ಲೇಷಾ/ಮಘಾ, ಯೋಗ : ಪ್ರೀತಿ, ಕರಣ : ಭದ್ರ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 23 pm, ಇಂದಿನ ಶುಭಾಶುಭ ಕಾಲ : ರಾಹು 08:19 – 09:46, ಯಮಗಂಡ ಕಾಲ 11:12 – 12:38, ಗುಳಿಕ ಕಾಲ 14:04 – 15:53
ಈ ದಿನ ಮನೆಯಿಂದ ಹೊರಡುವ ಮುನ್ನ ಶಿವಾಷ್ಟಕವನ್ನು ಕೇಳಿಸಿಕೊಳ್ಳಿ. ಅದಕ್ಕೆ ಮುಂಚೆ ಈಶ್ವರನ ಪಟದ ಮುಂದೆ ದೀಪವನ್ನು ಹಚ್ಚಿಟ್ಟು, ಇದನ್ನು ಕೇಳಿಸಿಕೊಳ್ಳಿ. ಇನ್ನು ಮನೆಯಿಂದ ಹೊರಡುವ ವೇಳೆಗೆ ಹಸಿ ಹಾಲಿಗೆ (ಬಿಸಿ ಮಾಡಿರಬಾರದು) ಸ್ವಲ್ಪ ಸಕ್ಕರೆ ಮತ್ತು ಅರಿಶಿನ ಹಾಕಿಕೊಂಡು, ಕುಡಿದು ಆ ನಂತರ ಹೊರಡಿ.
ಹಲವು ಶುಭ ಫಲಗಳು ಅನುಭವ ಬರಲಿವೆ. ದೈವಿಕವಾದ ಅನುಗ್ರಹ ನಿಮ್ಮ ಮೇಲಿದೆ ಎಂಬ ಭಾವನೆ ಗಟ್ಟಿಯಾಗಲಿದೆ. ಪ್ರೇಮಿಗಳಿಗೆ, ನವ ವಿವಾಹಿತರಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರು ಬಾಡಿಗೆ ಆದಾಯದಂಥದ್ದನ್ನು ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ನಿರೀಕ್ಷೆಯಂತೆ ಇರುವ ಆಸ್ತಿಗಳು ಖರೀದಿಗೆ ದೊರೆಯಲಿವೆ.
ನಿಮ್ಮ ಖರ್ಚಿನ ರೀತಿಯಲ್ಲಿ ಬಹಳ ದೊಡ್ಡ ಬದಲಾವಣೆ ಅಳವಡಿಸಿಕೊಳ್ಳಲು ಈ ದಿನ ತೀರ್ಮಾನ ಮಾಡಲಿದ್ದೀರಿ. ಸೈಟು ಖರೀದಿಯೋ ಅಥವಾ ಮನೆ ನಿರ್ಮಾಣವೋ ಅಥವಾ ಈಗಾಗಲೇ ಇರುವ ಮನೆ ರೆನೊವೇಷನ್ ಮಾಡಿಸಬೇಕೋ ಇಂಥ ವಿಚಾರದ ಬಗ್ಗೆ ತಂದೆಯ ಜೊತೆ ಅಥವಾ ಪಿತೃ ಸಮಾನರಾದವರ ಜೊತೆಗೆ ಚರ್ಚೆ ನಡೆಸಲಿದ್ದೀರಿ.
ಉದ್ಯೋಗಸ್ಥರಾಗಿದ್ದಲ್ಲಿ ನೀವು ಉದ್ಯೋಗ ಮಾಡುತ್ತಿರುವ ಸಂಸ್ಥೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಕೆಲಸದಿಂದ ತೆಗೆಯಲಿದ್ದಾರೆ ಅಂತಲೋ ನೀವು ಹೂಡಿಕೆ ಮಾಡಿದ್ದ ರಿಯಲ್ ಎಸ್ಟೇಟ್ ಅಥವಾ ಷೇರು ಮಾರ್ಕೆಟ್ ಹಣ ಭಾರೀ ಪ್ರಮಾಣದಲ್ಲಿ ಇಳಿಕೆ ಆಗಬಹುದು ಅಂತಲೋ ಹೀಗೆ- ಇಂಥವೇ ಮಾತುಗಳು ಕಿವಿ ಮೇಲೆ ಬೀಳುವುದರಿಂದ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ.
ಲಕ್ಷ್ಮಿದೇವಿಯ ಪಟದ ಮುಂದೆ ಸಕ್ಕರೆ, ಒಣದ್ರಾಕ್ಷಿ ಹಾಗೂ ಖರ್ಜೂರವನ್ನು ಎರಡೆರಡು ಇಟ್ಟು ನೈವೇದ್ಯ ಮಾಡಿ. ಇದನ್ನು ಬೆಳಗ್ಗೆ ಅಥವಾ ಸಂಜೆ ಮಾಡಬಹುದು. ದೀರ್ಘಾವಧಿಗೆ ಮಾಡಿದ್ದ ಹೂಡಿಕೆ ಹಿಂತೆಗೆದುಕೊಳ್ಳಬೇಕಾ ಬೇಡವಾ ಎಂಬ ಗೊಂದಲ ಇದ್ದಲ್ಲಿ ಅದು ನಿವಾರಣೆ ಆಗಲಿದೆ.
ನಿಮಗೆ ಗೊತ್ತಿರುವ ಕೌಶಲ, ವಿದ್ಯೆ ಹಾಗೂ ನಿಮಗೆ ಇರುವಂಥ ಈಗಿನ ಅನುಭವಕ್ಕೆ ಬೇಡಿಕೆ ಹೆಚ್ಚಲಿದೆ. ನಿಮ್ಮಲ್ಲಿ ಕೆಲವರಿಗೆ ಏಕಕಾಲಕ್ಕೆ ನಾಲ್ಕಾರು ಕಡೆಯಿಂದ ಉದ್ಯೋಗದ ಆಫರ್ ಗಳು ಬರಬಹುದು. ಸಂಬಳದ ಜೊತೆಗೆ ಲಾಭದಲ್ಲಿ ಸಹ ಇಂತಿಷ್ಟು ಪರ್ಸೆಂಟ್ ಎಂದು ಕೊಡುವುದಾಗಿ ಪ್ರತಿಷ್ಠಿತ ಸಂಸ್ಥೆಗಳಿಂದ ನಿಮಗೆ ಪ್ರಸ್ತಾವ ಬರುವಂಥ ಯೋಗ ಇದೆ.
ಬೇಡ ಅಂದುಕೊಂಡಿದ್ದನ್ನೇ ಮಾಡಬೇಕಾದ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಯಾವ ವ್ಯಕ್ತಿ ಜೊತೆಗೆ ಇನ್ನು ವ್ಯವಹಾರ ಮಾಡಬಾರದು, ಹಣಕಾಸಿನ ವಿಷಯ ಮಾತನಾಡಬಾರದು, ಸಾಲ ಕೇಳಬಾರದು, ಜೊತೆಯಾಗಿ ಕೆಲಸ ಮಾಡಬಾರದು ಹೀಗೆ ಅಂದುಕೊಂಡಿರುತ್ತೀರೋ ಅವುಗಳನ್ನು ಮಾಡಲೇಬೇಕಾದ ಸನ್ನಿವೇಶ ಸೃಷ್ಟಿ ಆಗುತ್ತದೆ. ನಿಮಗೆ ಸಂಪೂರ್ಣವಾಗಿ ಮಾಹಿತಿ ಇರುವ ವಿಷಯಗಳನ್ನು ಮಾತ್ರ ಮಾತನಾಡಿ.
ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಇನ್ನು ಯಾರು ವೈದ್ಯರ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡುತ್ತಾ ಇದ್ದೀರಿ ಅಂಥವರಿಗೆ ಆರೋಗ್ಯ ಸಮಸ್ಯೆಗಳು ಅಡೆತಡೆಯಾಗಿ ಇಲ್ಲಿಯವರೆಗೆ ಕಾಡುತ್ತಾ ಇದ್ದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ. ಪರ್ ಫ್ಯೂಮ್, ದುಬಾರಿ ಬ್ರ್ಯಾಂಡ್ ಗಳ ಬಟ್ಟೆ, ಶೂ ಇಂಥವುಗಳ ಮಾರಾಟ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಭಾರೀ ಪ್ರಮಾಣದ ಏರಿಕೆ ಆಗಲಿದೆ.