‘ಟಾಕ್ಸಿಕ್’ ಸಿನಿಮಾ ಟೀಸರ್ ಬಗ್ಗೆ ಅನುರಾಗ್ ಕಶ್ಯಪ್ ಹೇಳಿದ್ದೇನು? – Kannada News | Anurag Kashyap defends Yash’s Toxic movie
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಕೆಲ ವಾರಗಳ ಹಿಂದೆ ಬಿಡುಗಡೆ ಆಗಿ ಭಾರಿ ವೈರಲ್ ಆಗಿತ್ತು. ಅತ್ಯಂತ ಕಡಿಮೆ ಅವಧಿಯಲ್ಲಿ ದಾಖಲೆ ಸಂಖ್ಯೆಯ ವೀಕ್ಷಣೆಗಳನ್ನು ‘ಟಾಕ್ಸಿಕ್’ ಸಿನಿಮಾ ಟೀಸರ್ ಗಳಿಸಿಕೊಂಡಿತ್ತು. ಸಿನಿಮಾದ ಟೀಸರ್ ನೋಡಿದವರು ಸಿನಿಮಾದ ರಿಚ್ಬೆಸ್, ಬೋಲ್ಡ್ನೆಸ್ ಅನ್ನು ಕೊಂಡಾಡಿದ್ದರು. ಆದರೆ ಇನ್ನು ಕೆಲವರು ಸಿನಿಮಾದ ಟೀಸರ್ನಲ್ಲಿರುವ ಕೆಲ ದೃಶ್ಯಗಳಿಗೆ ಆಕ್ಷೇಪ ಎತ್ತಿದ್ದರು. ‘ಟಾಕ್ಸಿಕ್’ ಸಿನಿಮಾದ ಟೀಸರ್ ಅಶ್ಲೀಲವಾಗಿದೆ, ಪುರುಷ ಅಹಂಕಾರದಿಂದ ತುಂಬಿದೆ ಎಂದೆಲ್ಲ ವಿಮರ್ಶೆ ಮಾಡಲಾಗಿತ್ತು. ಇದೀಗ ಬಾಲಿವುಡ್ನ ಜನಪ್ರಿಯ ನಿರ್ದೇಶಕ…