ಕೊಟ್ಟೂರು ತ್ರಿಬಲ್ ಮರ್ಡರ್ಗೆ ಹೊಸ ಟ್ವಿಸ್ಟ್: ಮರ್ಯಾದಾ ಹತ್ಯೆಯೋ? ಹಣಕ್ಕಾಗಿ ಕೊಲೆಯೋ? – Kannada News | Vijaynagara Triple Murder: Honour Killing or Money Motive? Police Probe Continues
ಆರೋಪಿ ಅಕ್ಷಯ್ ಮತ್ತು ಮೃತ ಮೂವರುImage Credit source: Tv9 Kannada ಬೆಂಗಳೂರು, ಫೆ. 01: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ತ್ರಿವಳಿ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಆರೋಪಿ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದ್ರೆ ತನಿಖೆ ವೇಳೆ ತಂಗಿ ಗರ್ಭಿಣಿ ಎಂದು ಈತ ಕತೆ ಕಟ್ಟಿದ್ದಾನಾ ಎನ್ನುವ ಶಂಕೆಯೀಗ ಪೊಲೀಸರನ್ನು ಕಾಡ್ತಿದೆ. ಬೆಟ್ಟಿಂಗ್, ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದಿದ್ದ ಆರೋಪಿ ಅಕ್ಷಯ್, …