ಪ್ರಕಾಶ್ ರಾಜ್ಗೆ ಮಾತೃವಿಯೋಗ ; ಅಮ್ಮನ ದೇವತೆಯಂತೆ ನೋಡುತ್ತಿದ್ದ ನಟ
ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗ ಉಂಟಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ತಾಯಿ ಸ್ವರ್ಣಲತಾ ಹೈದರಾಬಾದ್ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ತಾಯಿಯನ್ನು ಪ್ರಕಾಶ್ ರಾಜ್ ಅವರು ದೇವತೆಯಂತೆ ನೋಡುತ್ತಿದ್ದರು. ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಗದಗದವರು. ಅವರ ಬಗ್ಗೆ ಈ ಮೊದಲು ಪ್ರಕಾಶ್ ರಾಜ್ ಮಾತನಾಡಿದ್ದರು. ‘ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ…