All posts by nagaraj11081993

ಬೆಂಗಳೂರು ಚಲನಚಿತ್ರೋತ್ಸವ: ಜನವರಿ 31ರಂದು ಈ 10 ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ – Kannada News | Best movies on Jan 31 in 17th Bengaluru International Film Festival

ವಾರ್ತಾ ಇಲಾಖೆ, ಚಲನಚಿತ್ರ ಅಕಾಡೆಮಿ ಹಾಗೂ ಚಲನ‌ಚಿತ್ರ ವಾಣಿಜ್ಯ ಮಂಡಳಿ ಸಹಯೋಗದೊಂದಿಗೆ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (BIFfes) ನಡೆಯುತ್ತಿದೆ. ಫೆಬ್ರವರಿ 6ರವರೆಗೂ ಸಿನಿಮಾಗಳು ಪ್ರದರ್ಶನ ಆಗಲಿವೆ. ರಾಜಾಜಿನಗರದ ಲುಲು ಮಾಲ್‍ನ ಸಿನಿಪೊಲಿಸ್‍ ಮಲ್ಟಿಪ್ಲೆಕ್ಸ್, ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಫಿಲಂ ಸೊಸೈಟಿ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗುತ್ತಿದೆ. ಜನವರಿ 31ರಂದು ಲುಲು ಮಾಲ್​ನಲ್ಲಿ ಈ ಕೆಳಗಿನ 10 ಬೆಸ್ಟ್ ಸಿನಿಮಾಗಳನ್ನು ಸಿನಿಮಾಸಕ್ತರು ನೋಡಬಹುದು. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ..

1. ಕ್ಲಿಯೋ ಫ್ರಮ್ 5 ಟು 7: (ಸಮಯ: ಮಧ್ಯಾಹ್ನ 3:20, ಸ್ಕ್ರೀನ್ 1). ವಿವರ: ಅಗ್ನೆಸ್ ವಾರ್ದಾ ಅವರ ಈ ಅದ್ಭುತ ಚಿತ್ರವು ಕ್ಯಾನ್ಸರ್ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವ ಗಾಯಕಿಯೊಬ್ಬಳ ಜೀವನದ ಎರಡು ಗಂಟೆಗಳ ಆತಂಕವನ್ನು ನೈಜ ಸಮಯದಲ್ಲಿ ಚಿತ್ರಿಸುತ್ತದೆ. ಇದು ಅಸ್ತಿತ್ವದ ಪ್ರಶ್ನೆಗಳನ್ನು ಸುಂದರವಾಗಿ ಕಟ್ಟಿಕೊಡುವ ಫ್ರೆಂಚ್ ನವವಿಕಾಸದ ಪ್ರಮುಖ ಚಿತ್ರ.

2. ಒಂದಾನೊಂದು ಕಾಲದಲ್ಲಿ : (ಸಮಯ: ರಾತ್ರಿ 7. ಓಪನ್ ಏರ್ ಸ್ಕ್ರೀನಿಂಗ್ -ಮುಖ್ಯ ದ್ವಾರ). ವಿವರ: ಗಿರೀಶ್ ಕಾರ್ನಾಡ್ ನಿರ್ದೇಶನದ ಈ ಚಿತ್ರವು ಸಮುರಾಯ್ ಮಾದರಿಯ ಕನ್ನಡದ ಆ್ಯಕ್ಷನ್ ಸಿನಿಮಾ. ಮಧ್ಯಕಾಲೀನ ಯೋಧರ ಜೀವನ ಮತ್ತು ಸಂಘರ್ಷವನ್ನು ಬಿಂಬಿಸುವ ಈ ಚಿತ್ರ ರಾಷ್ಟ್ರ ಪ್ರಶಸ್ತಿ ಗೆದ್ದಿದೆ.

3. ದಿ ಮೇಡ್ಸ್ ಆಫ್ ವಿಲ್ಕೊ: (ಸಮಯ: ಬೆಳಿಗ್ಗೆ 10. ಸ್ಕ್ರೀನ್ 1). ವಿವರ: ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಆಂಡ್ರೆಜ್ ವಾಜ್ದಾ ಅವರ ಈ ಚಿತ್ರವು ಕಳೆದುಹೋದ ಯೌವನ ಮತ್ತು ಹಳೆಯ ಪ್ರೀತಿಯ ನೆನಪುಗಳ ಸುತ್ತ ಸಾಗುವ ಭಾವನಾತ್ಮಕ ಪಯಣ.

4. ತಾಯಿ ಸಾಹೇಬ: (ಸಮಯ: ಸಂಜೆ 4.50. ಸ್ಕ್ರೀನ್ ವಿಐಪಿ 2). ವಿವರ: ಗಿರೀಶ್ ಕಾಸರವಳ್ಳಿ ನಿರ್ದೇಶನದ ಈ ಚಿತ್ರವು ಭೂ ಸುಧಾರಣೆ ಮತ್ತು ಬದಲಾಗುತ್ತಿರುವ ಸಮಾಜದಲ್ಲಿ ಮಹಿಳೆಯೊಬ್ಬಳ ಜೀವನದ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಇದು ಹಲವು ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

5. ಮದರ್‌ಟಂಗ್ (ಸಮಯ: ರಾತ್ರಿ 7.40. ಸ್ಕ್ರೀನ್ 1). ವಿವರ: ಹೆಸರಾಂತ ನಿರ್ದೇಶಕ ಜಾಂಗ್ ಲು ಅವರ ಈ ಚಿತ್ರವು ಭಾಷೆ ಮತ್ತು ಮನುಷ್ಯರ ನಡುವಿನ ಭಾವನಾತ್ಮಕ ಸಂಬಂಧಗಳನ್ನು ಪರಿಶೋಧಿಸುತ್ತದೆ. ಸ್ವಂತ ಊರಿಗೆ ಮರಳುವ ನಟಿಯೊಬ್ಬಳ ಅಸ್ತಿತ್ವದ ಹುಡುಕಾಟ ಇದರ ಕಥೆ.

ಇದನ್ನೂ ಓದಿ: ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಬಿಡುತ್ತಿಲ್ಲ: ಪ್ರಕಾಶ್ ರಾಜ್ ಅಸಮಾಧಾನ

6. ಗಮನ್ (ಸಮಯ: ಮಧ್ಯಾಹ್ನ 12.30. ಸ್ಕ್ರೀನ್ 1) ವಿವರ: ಮುಜಾಫರ್ ಅಲಿ ನಿರ್ದೇಶನದ ಈ ಚಿತ್ರವು ಮುಂಬೈಗೆ ವಲಸೆ ಬಂದ ವ್ಯಕ್ತಿಯೊಬ್ಬನ ಏಕಾಂತ ಮತ್ತು ಹೋರಾಟವನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಇದರ ಸಂಗೀತ ಮತ್ತು ನೈಜ ಚಿತ್ರಣಕ್ಕೆ ಇದು ಹೆಸರುವಾಸಿಯಾಗಿದೆ.

7. ಭವನಿ ಭವಾಯಿ (ಸಮಯ: ರಾತ್ರಿ 7.30. ಸ್ಕ್ರೀನ್ ವಿಐಪಿ 2). ವಿವರ: ಕೇತನ್ ಮೆಹ್ತಾ ಅವರ ಈ ಸಿನಿಮಾವು ಜಾನಪದ ನಾಟಕ ಶೈಲಿಯನ್ನು ಬಳಸಿಕೊಂಡು ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯನ್ನು ವಿಡಂಬನಾತ್ಮಕವಾಗಿ ಟೀಕಿಸುತ್ತದೆ.

8. ಆಕ್ಸಿಡೆಂಟ್ (ಸಮಯ: ರಾತ್ರಿ 8.30. ಸ್ಕ್ರೀನ್ 6). ವಿವರ: ಶಂಕರ್ ನಾಗ್ ನಿರ್ದೇಶನದ ಈ ಸಸ್ಪೆನ್ಸ್ ಡ್ರಾಮಾವು ರಾಜಕೀಯ ಭ್ರಷ್ಟಾಚಾರ ಮತ್ತು ಮಾಧ್ಯಮದ ಜವಾಬ್ದಾರಿಯನ್ನು ಎತ್ತಿ ತೋರಿಸುವ ಇಂದಿಗೂ ಪ್ರಸ್ತುತವಾಗಿರುವ ಚಿತ್ರ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

9. ವಾಸ್ತುಹಾರ (ಸಮಯ: ಸಂಜೆ 5.30. ಸ್ಕ್ರೀನ್ ವಿಐಪಿ 3). ವಿವರ: ಜಿ. ಅರವಿಂದನ್ ಅವರ ಕೊನೆಯ ಚಿತ್ರಗಳಲ್ಲಿ ಒಂದಾದ ಇದು, ವಿಭಜನೆಯ ನಂತರ ನಿರಾಶ್ರಿತರಾದ ಜನರ ನೋವು ಮತ್ತು ಮಾನವ ಸಂಬಂಧಗಳ ಸಂಕೀರ್ಣತೆಯನ್ನು ಚಿತ್ರಿಸುತ್ತದೆ.

10. ಎಲ್ಫ್ರೀಡ್ ಜೆಲಿನೆಕ್ – ಲ್ಯಾಂಗ್ವೇಜ್ ಅನ್ಲೀಶ್ಡ್ (ಸಮಯ: ಸಂಜೆ 5.20. ಸ್ಕ್ರೀನ್ 1). ವಿವರ: ನೋಬೆಲ್ ಪ್ರಶಸ್ತಿ ವಿಜೇತ ಲೇಖಕಿಯ ಜೀವನವನ್ನು ಆಧರಿಸಿದ ಈ ಚಿತ್ರವು ಭಾಷೆಯ ಶಕ್ತಿ ಮತ್ತು ಸಾಮಾಜಿಕ ವಿಮರ್ಶೆಯ ಮೇಲೆ ಬೆಳಕು ಚೆಲ್ಲುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Budget 2026: ಟ್ಯಾಕ್ಸ್ ಡಿಡಕ್ಷನ್, ಡೆವಲಪರ್ಸ್​ಗೆ ಕಡಿಮೆ ದರದಲ್ಲಿ ಭೂಮಿ ಇತ್ಯಾದಿ ಕ್ರಮಗಳ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ – Kannada News | Tax breaks, incentives, affordable land for developers, here are few expectations of Real Estate sector from Budget

ನವದೆಹಲಿ, ಜನವರಿ 30: ಕಳೆದ ಕೆಲ ವರ್ಷಗಳಿಂದ ಸರ್ಕಾರ ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಕ್ಕೆ ಮುತುವರ್ಜಿ ತೋರುತ್ತಾ ಬರುತ್ತಿದೆ. ವಸತಿ ಪ್ರಾಜೆಕ್ಟ್​ಗಳು, ಕೈಗಾರಿಕಾ ಕಾರಿಡಾರ್​ಗಳು ಸಾಕಷ್ಟು ನಿರ್ಮಾಣ ಆಗಿವೆ, ಆಗುತ್ತಿವೆ. ಇನ್​ಫ್ರಾಸ್ಟ್ರಕ್ಚರ್ ಉತ್ತಮಗೊಂಡಂತೆ ರಿಯಲ್ ಎಸ್ಟೇಟ್ (Real Estate  sector) ಉದ್ಯಮವೂ ಗರಿಗೆದರುತ್ತಾ ಬಂದಿದೆ. ಸರ್ಕಾರದ ಈ ಸುಧಾರಣಾ ಕ್ರಮಗಳು ಸ್ಥಗಿತಗೊಳ್ಳದೆ ಮುಂದುವರಿಯುತ್ತಾ ಹೋಗಲಿ ಎಂಬುದು ಈ ಉದ್ಯಮವು ಬಜೆಟ್​ನಿಂದ ಮಾಡುತ್ತಿರುವ ನಿರೀಕ್ಷೆ.

ಉದ್ಯೋಗ ಸೃಷ್ಟಿ, ಯೋಜಿತ ನಗರೀಕರಣ, ದೀರ್ಘಕಾಲೀನ ಆರ್ಥಿಕ ಕ್ಷಮತೆ ಇವುಗಳಿಗೆ ರಿಯಲ್ ಎಸ್ಟೇಟ್ ಸೆಕ್ಟರ್ ಶಕ್ತಿ ತುಂಬಬೇಕಾದರೆ, ಅಭಿವೃದ್ಧಿ ಪೂರಕವಾದ ಮತ್ತು ಸಮತೋಲಿತವಾದ ಬಜೆಟ್​ನಿಂದ ಸಾಧ್ಯ ಎಂದು ಬೆಂಗಳೂರಿನ ಮನ ಪ್ರಾಜೆಕ್ಟ್ಸ್​ನ (Mana Projects) ಸಿಎಂಡಿ ಡಿ. ಕಿಶೋರ್ ರೆಡ್ಡಿ ಹೇಳುತ್ತಾರೆ.

ಸರ್ಕಾರದ ನೀತಿಗಳು ಮುಂದುವರಿಯಬೇಕು. ವಿವಿಧ ಹೌಸಿಂಗ್ ಸೆಗ್ಮೆಂಟ್​ಗಳಲ್ಲಿ ಗ್ರಾಹಕರ ವಿಶ್ವಾಸ ಮೂಡಿಸುವಂತಹ ಮತ್ತು ಭವಿಷ್ಯದ ದೃಷ್ಟಿಯಿಂದ ಮಾಡಲಾಗುವ ಸುಧಾರಣೆಗಳೂ ಬರಬೇಕು. ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಳ ಮೇಲೆ ಜಿಎಸ್​ಟಿ ದರ ಇಳಿಸಬೇಕು. ಗೃಹ ಸಾಲದ ಬಡ್ಡಿ ಮೇಲೆ ಡಿಡಕ್ಷನ್ ಮಿತಿಯನ್ನು ಹೆಚ್ಚಿಸಬೇಕು ಎಂದು ಕಿಶೋರ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಈ ಬಾರಿಯ ಬಜೆಟ್​ನಿಂದ ಇನ್ನಷ್ಟು ಸೂಕ್ಷ್ಮ ಕ್ರಮ ಎದುರು ನೋಡುತ್ತಿರುವ ಇನ್ಷೂರೆನ್ಸ್ ಸೆಕ್ಟರ್

ಉದಯೋನ್ಮುಖವಾಗಿರುವ ಹಾಗೂ ಎರಡನೇ ಸ್ತರದ ನಗರಗಳಲ್ಲಿ (ಟಯರ್-2 ಸಿಟಿ) ಇನ್​ಫ್ರಾಸ್ಟ್ರಕ್ಚರ್ ಮತ್ತು ನಗರ ಸಂಪರ್ಕತೆಯಲ್ಲಿ ಸತತ ಹೂಡಿಕೆ ಮಾಡಬೇಕು. ಇದರಿಂದ ಹೊಸ ವಸತಿ ಕಾರಿಡಾರ್​ಗಳು ಹೊರಹೊಮ್ಮಲು ಸಾಧ್ಯ. ಸಮತೋಲಿತವಾದ ನಗರ ಬೆಳವಣಿಗೆ ಸಾಧ್ಯ. ಹಾಗೆಯೇ, ಏಕ ಗವಾಕ್ಷಿ ಸಿಸ್ಟಂ ಮೂಲಕ ವೇಗವಾಗಿ ಪ್ರಾಜೆಕ್ಟ್​ಗಳ ಅನುಮೋದನೆ ಆಗಬೇಕು. ಎಫ್​ಡಿಐ ನಿಯಮಗಳಲ್ಲಿ ಸ್ಪಷ್ಟತೆ ಬರಬೇಕು ಎಂದೂ ಮನ ಪ್ರಾಜೆಕ್ಟ್ಸ್​ನ ಸಿಎಂಡಿ ಸಲಹೆ ನೀಡಿದ್ದಾರೆ.

ರಿಯಲ್ ಎಸ್ಟೇಟ್ ಮಾರುಕಟ್ಟೆ ನಿಧಾನಗೊಳ್ಳುತ್ತಿದೆಯಾ?

ವಿಎಸ್ ರಿಯಾಲ್ಟರ್ಸ್ ಸಂಸ್ಥೆಯ ಸಿಇಒ ವಿಜಯ್ ಹರ್ಷ್ ಪ್ರಕಾರ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಂದಗೊಳ್ಳುತ್ತಿರುವ ಆರಂಭಿಕ ಸುಳಿವು ಇದೆ. ಪ್ರಾಪರ್ಟಿಗಳು ಮಾರಾಟವಾಗುತ್ತಿರುವ ಪ್ರಮಾಣ ಕಡಿಮೆ ಆಗುತ್ತಿದೆ. ಅದರಲ್ಲೂ ಅಧಿಕ ಬೇಡಿಕೆ ಇರುವ 1 ಕೋಟಿ ರೂ ಒಳಗಿನ ಮನೆಗಳ ಮಾರಾಟ ಕುಂಠಿತಗೊಳ್ಳುತ್ತಿದೆ ಎನ್ನುತ್ತಾರೆ ವಿಜಯ್ ಹರ್ಷ್.

ಇದನ್ನೂ ಓದಿ: ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ

ಲ್ಯಾಂಡ್ ಡೆಲವಪರ್​ಗಳಿಗೆ ಕಡಿಮೆ ದರದಲ್ಲಿ ಭೂಮಿ ಸಿಗುವಂತಹ ವ್ಯವಸ್ಥೆ ಮಾಡಬೇಕು. ಮನೆ ಖರೀದಿದಾರರಿಗೆ ಗೃಹ ಸಾಲಗಳಿಗೆ ಡಿಡಕ್ಷನ್ ಇತ್ಯಾದಿ ತೆರಿಗೆ ರಿಯಾಯಿತಿ ಸೌಲಭ್ಯ ಕೊಟ್ಟರೆ ಈ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಚುರುಕು ಮುಟ್ಟಬಹುದು ಎನ್ನುತ್ತಾರೆ ವಿಎಸ್ ರಿಯಾಲ್ಟರ್ಸ್​ನ ಸಂಸ್ಥಾಪಕರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Home Guard Recruitment 2026: ಶಿವಮೊಗ್ಗದಲ್ಲಿ ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ;10th ಪಾಸಾಗಿದ್ರೆ ಸಾಕು! – Kannada News | Shivamogga Home Guard Recruitment 2026: Apply Offline for 10th Pass Jobs

ಗೃಹರಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳವು ಅಧಿಕೃತ ಅಧಿಸೂಚನೆಯ ಮೂಲಕ ಗೃಹರಕ್ಷಕರ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಅಡಿಯಲ್ಲಿ ಸೇವೆ ಸಲ್ಲಿಸಲು ಆಸಕ್ತರಾಗಿರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 03 ರೊಳಗೆ ಅರ್ಜಿ ಸಲ್ಲಿಸಬೇಕು.

ಶೈಕ್ಷಣಿಕ ಅರ್ಹತೆ:

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಯೋಮಿತಿ:

  • ಕನಿಷ್ಠ ವಯಸ್ಸು: 19 ವರ್ಷ
  • ಗರಿಷ್ಠ ವಯಸ್ಸು: 45 ವರ್ಷ

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯವಿರುವ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ಯಾವುದೇ ಸ್ಥಳಕ್ಕೆ ಸಲ್ಲಿಸಬಹುದು:

ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳದ ಪ್ರಧಾನ ಕಚೇರಿ ಅಥವಾ ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ಘಟಕ / ಉಪಘಟಕ

ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 312 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪದವೀಧರರು ಅರ್ಹರು

ಅರ್ಜಿ ಸಲ್ಲಿಸುವ ಕ್ರಮಗಳು:

  • ಮೊದಲಿಗೆ ಶಿವಮೊಗ್ಗ ಗೃಹರಕ್ಷಕ ದಳ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
  • ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯನ್ನು ಪಡೆದು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ.
  • ಅರ್ಜಿ ಶುಲ್ಕ ಇದ್ದಲ್ಲಿ, ನಿಮ್ಮ ವರ್ಗದ ಪ್ರಕಾರ ಪಾವತಿಸಿ. ಎಲ್ಲಾ ವಿವರಗಳು ಸರಿಯಾಗಿವೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ.
  • ಕೊನೆಗೆ, ಅರ್ಜಿ ನಮೂನೆಯನ್ನು ಅಧಿಸೂಚನೆಯಲ್ಲಿ ಸೂಚಿಸಿರುವ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ / ಸ್ಪೀಡ್ ಪೋಸ್ಟ್ ಅಥವಾ ನಿಗದಿತ ವಿಧಾನದಲ್ಲಿ ಕಳುಹಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:52 pm, Fri, 30 January 26

Source link

Union Budget 2026 Live: ಬಜೆಟ್ ಭಾಷಣ ಸಮಯ, ಲೈವ್ ಸ್ಟ್ರೀಮಿಂಗ್, ಪಿಡಿಎಫ್ ಕಾಪಿ ಡೌನ್​ಲೋಡ್ ಇತ್ಯಾದಿ ಮಾಹಿತಿ – Kannada News | Union Budget 2026 FM Nirmala Sitharaman Speech Live Streaming on TV9 Kannada

ಯೂನಿಯನ್ ಬಜೆಟ್ 2026-27: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರುವರಿ 1, ಭಾನುವಾರದಂದು 2026-27ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ. ಭಾನುವಾರ ಬೆಳಗ್ಗೆ 11ಗಂಟೆಗೆ ಸಂಸತ್​ನ ಜಂಟಿ ಅಧಿವೇಶನದಲ್ಲಿ ಸಚಿವೆ ಬಜೆಟ್ ಮಂಡನೆ ಆರಂಭಿಸುತ್ತಾರೆ. ಬಜೆಟ್ ಭಾಷಣ ಮುಗಿಯಲು ಮಧ್ಯಾಹ್ನ ಎರಡು ಗಂಟೆ ದಾಟಬಹುದು. ಇದು ಭಾರತದಲ್ಲಿ ಮಂಡಿಲಾಗುವ 88ನೇ ಬಜೆಟ್ ಆಗಿದೆ. ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್ ಮಂಡನೆ. ಅದೂ ಸತತವಾಗಿ. ಸತತ 9 ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಲಾ ಅವರದ್ದಾಗುತ್ತದೆ.

ಈ ಕೆಳಗಿನ ಯೂಟ್ಯೂಬ್​ನಲ್ಲಿ ಫೆಬ್ರುವರಿ 1ರಂದು ಬಜೆಟ್ ಭಾಷಣದ ಲೈವ್ ವೀಕ್ಷಿಸಬಹುದು
https://www.youtube.com/watch?v=g566v4ZRI4w
ಟ್ರಂಫ್ ಅವರ ಟ್ಯಾರಿಫ್ ಪ್ರತಾಪ, ವಿವಿಧ ದೇಶಗಳ ಮೇಲೆ ಅಮೆರಿಕದ ಧಮಕಿ, ರಷ್ಯಾ ಉಕ್ರೇನ್ ಯುದ್ಧ ಮುಂದುವರಿದಿರುವುದು, ಇವೇ ಮುಂತಾದ ಜಾಗತಿಕವಾಗಿ ಅನಿಶ್ಚಿತ ವಾತಾವರಣ ಒಂದೆಡೆ ಇದೆ. ಹಾಗೆಯೇ, ಯೂರೋಪ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿರುವುದು, ಜಿಡಿಪಿ ನಿರೀಕ್ಷೆಮೀರಿ ಬೆಳೆಯುತ್ತಿರುವುದು, ಹಣದುಬ್ಬರಕ್ಕೆ ಕಡಿವಾಣ ಬಿದ್ದಿರುವುದು ಇತ್ಯಾದಿ ಸಕಾರಾತ್ಮಕ ಅಂಶಗಳು ಇನ್ನೊಂದೆಡೆ ಇವೆ. ಇಂಥ ಮಿಶ್ರ ಸನ್ನಿವೇಶದಲ್ಲಿ ಬಜೆಟ್ ಮಂಡನೆ ಆಗುತ್ತಿದ್ದು, ನಿರೀಕ್ಷೆಗಳು ಹಲವಿವೆ.

ಬಜೆಟ್ ಭಾಷಣ ಎಲ್ಲಿ ವೀಕ್ಷಿಸುವುದು?

2026ರ ಫೆಬ್ರುವರಿ 1, ಭಾನುವಾರದಂದು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಆರಂಭವಾಗುತ್ತದೆ. ಟಿವಿ ಮತ್ತು ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ನೇರ ಪ್ರಸಾರ ಇರುತ್ತದೆ. ಟಿವಿ9 ಕನ್ನಡ ವಾಹಿನಿಯಲ್ಲಿ ನೇರ ಪ್ರಸಾರ ವೀಕ್ಷಿಸಬಹುದು. ಟಿವಿ9 ಕನ್ನಡ ಯೂಟ್ಯೂಬ್ ಮತ್ತು ವೆಬ್​ಸೈಟ್​ಗಳಲ್ಲೂ ಬಜೆಟ್ ಭಾಷಣದ ನೇರ ಪ್ರಸಾರ ವೀಕ್ಷಿಸಬಹುದು. ವೆಬ್​ಸೈಟ್​ನಲ್ಲಿ ಬಜೆಟ್ ಭಾಷಣ ಆರಂಭಕ್ಕೂ ಮುನ್ನ ಲೈವ್ ಬ್ಲಾಗ್ ಕೂಡ ಇರುತ್ತದೆ. ಬಜೆಟ್​ನ ಇಂಚಿಂಚೂ ಮಾಹಿತಿಯನ್ನು ಲೈವ್ ಬ್ಲಾಗ್​ನಲ್ಲಿ ಕಾಣಬಹುದು.

ಬಜೆಟ್ ಸಂಬಂಧಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಜೆಟ್ ಪ್ರತಿ ಡೌನ್​ಲೋಡ್ ಮಾಡುವುದು

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಗಿದ ಕೂಡಲೇ ಅದರ ಪ್ರತಿಯು ಆನ್​ಲೈನ್​ನಲ್ಲಿ ಲಭ್ಯವಾಗಿರುತ್ತದೆ. ಬಜೆಟ್ ಭಾಷಣದಿಂದ ಹಿಡಿದು ಬಜೆಟ್ ಹೈಲೈಟ್ಸ್​ವರೆಗೆ ವಿವಿಧ ಸಂಬಂಧಿತ ದಾಖಲೆಗಳು ಆನ್​ಲೈನ್​ನಲ್ಲೇ ದೊರಕುತ್ತವೆ. ಅದಕ್ಕೆಂದೇ ರೂಪಿಸಲಾಗಿರುವ indiabudget.gov.in ವೆಬ್​ಸೈಟ್​ನಲ್ಲಿ ಈ ದಾಖಲೆಗಳನ್ನು ನೋಡಬಹುದು, ಮಾತ್ರವಲ್ಲ, ಡೌನ್​ಲೋಡ್ ಕೂಡ ಮಾಡಬಹುದು. ಬಜೆಟ್ ಪ್ರತಿಯು ಪಿಡಿಎಫ್ ಫಾರ್ಮ್ಯಾಟ್​ನಲ್ಲಿ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:33 pm, Fri, 30 January 26

Source link

ತೆರೆಗೆ ಬರುತ್ತಿದೆ ಮೈಕಲ್ ಜಾಕ್ಸನ್ ಜೀವನ: ಬಿಡುಗಡೆ ಯಾವಾಗ? – Kannada News | Michael Jackson biopic Michael to release on April 24

ವಿಶ್ವ ಸಂಗೀತ ಮತ್ತು ಪಾಪ್ ಕ್ಷೇತ್ರದಲ್ಲಿ ದಂತಕತೆ. ಅವರ ನೃತ್ಯ ಮತ್ತು ಹಾಡು ಅಮೆರಿಕದ ಪಾಪ್ ಸಂಸ್ಕೃತಿಯನ್ನೇ ಬದಲಾಯಿಸಿತು. ಮೈಕಲ್ ಜಾಕ್ಸನ್ (michael jackson) ಅವರ ನೃತ್ಯ ಶೈಲಿ, ಅವರ ಥ್ರಿಲ್ಲರ್, ಬ್ಯಾಡ್ ಮತ್ತು ಡೇಂಜರಸ್ ಆಲ್ಬಂಗಳು ಇತಿಹಾಸವನ್ನೇ ನಿರ್ಮಿಸಿವೆ. ಮೈಕಲ್ ಜಾಕ್ಸನ್ ಇಂದಿಗೂ ಸಹ ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಭಾರತದ ಪ್ರಭುದೇವ ಸೇರಿದಂತೆ ಕೋಟ್ಯಂತರ ಕಲಾವಿದರಿಗೆ ಪ್ರೇರಣೆಯಾಗಿದ್ದಾರೆ. ಪಾಪ್ ರಾಜನೆಂಬ ಹೆಸರನ್ನು ಪಡೆದಿದ್ದ ಮೈಕಲ್ ಅವರ ಖಾಸಗಿ ಜೀವನ ಸಾಕಷ್ಟು ನೋವು, ಹೋರಾಟಗಳಿಂದ ಕೂಡಿತ್ತು. ಇದೀಗ ಮೈಕಲ್ ಜಾಕ್ಸನ್ ಜೀವನ ಸಿನಿಮಾ ರೂಪದಲ್ಲಿ ತೆರೆಗೆ ಬರಲು ಸಜ್ಜಾಗಿದ್ದು, ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದೆ.

ಮೈಕಲ್ ಜಾಕ್ಸನ್ ಜೀವನ ಆಧರಿಸಿದ ಸಿನಿಮಾ ಹಾಲಿವುಡ್​​ನಲ್ಲಿ ನಿರ್ಮಾಣಗೊಂಡಿದ್ದು ಸಿನಿಮಾಕ್ಕೆ ‘ಮೈಕಲ್’ ಎಂದು ಹೆಸರಿಡಲಾಗಿದೆ. ಈ ಹಿಂದೆ ಭಾರತೀಯ ಮೂಲದ ಪಾಪ್ ತಾರೆ ಫ್ರೆಡ್ಡಿ ಮರ್ಕ್ಯುರಿ ಜೀವನ ಆಧರಿಸಿದ ‘ಬೊಹಿಮಿಯನ್ ರಾಪ್ಸಡಿ’ ಸಿನಿಮಾ ನಿರ್ಮಾಣ ಮಾಡಿದ್ದ ಗ್ರಹಾಂ ಕಿಂಗ್, ಇದೀಗ ಮೈಕಲ್ ಜಾಕ್ಸನ್ ಜೀವನ ಆಧರಿಸಿದ ‘ಮೈಖಲ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಮೈಕಲ್’ ಸಿನಿಮಾವನ್ನು ಆಂಟೊನಿ ಫರುಖಾ ನಿರ್ದೇಶನ ಮಾಡಿದ್ದಾರೆ.

ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿದೆ. ಈ ಸಿನಿಮಾ ಮೈಖಲ್ ಜಾಕ್ಸನ್ ಅವರ ಬಾಲ್ಯ, ಯೌವ್ವನ ಅವರ ಜನಪ್ರಿಯತೆ, ಅವರ ಬಣ್ಣ ಬದಲಾವಣೆ ಅದಕ್ಕೆ ಕಾರಣ, ಮೈಕಲ್ ಅನ್ನು ಸುತ್ತಿಕೊಂಡ ವಿವಾದಗಳು, ಮೈಕಲ್​ ಆರೋಗ್ಯ ಸಮಸ್ಯೆ, ಅವರ ಸಾವು ಎಲ್ಲವನ್ನೂ ಒಳಗೊಂಡಿದೆ. ಸಿನಿಮಾದ ಟ್ರೈಲರ್ ಅಂತೂ ಅದ್ಭುತವಾಗಿ ಮೂಡಿ ಬಂದಿದೆ. ಮೈಕಲ್ ಅವರ ಒರಿಜಿನಲ್ ಹಾಡುಗಳನ್ನು ಹಾಗೆಯೇ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ:ಹಾಲಿವುಡ್ ಸ್ಟಾರ್ ನಟನಿಗೆ ಭಾರತದ ಈ ನಿರ್ದೇಶಕನೊಟ್ಟಿಗೆ ಕೆಲಸ ಮಾಡುವ ಆಸೆ

ಮೈಕಲ್ ಜಾಕ್ಸನ್ ಪಾತ್ರದಲ್ಲಿ ಅವರ ಸಹೋದರನ ಪುತ್ರ ಆಗಿರುವ ಜಾಫರ್ ಜಾಕ್ಸನ್ ಅವರೇ ನಟಿಸುತ್ತಿರುವುದು ವಿಶೇಷ. ಜಾಫರ್ ಜಾಕ್ಸನ್ ಸ್ವತಃ ಗಾಯಕ ಮತ್ತು ನಟರಾಗಿದ್ದು, ತಮ್ಮ ಅಂಕಲ್​ ಪಾತ್ರದಲ್ಲಿಯೇ ಅವರು ನಟಿಸುತ್ತಿದ್ದಾರೆ. ಜಾಫರ್ ಜಾಕ್ಸನ್​​ಗೆ ‘ಮೈಕಲ್’ ಮೊದಲ ಸಿನಿಮಾ ಆಗಿದೆ. ಟ್ರೈಲರ್​​ನಲ್ಲಿ ಮೈಕಲ್ ಆಗಿ ಅವರು ಗಮನ ಸೆಳೆಯುತ್ತಿದ್ದಾರೆ. 1300 ಕೋಟಿ ಬಜೆಟ್​​ನಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದ್ದು, ಸಿನಿಮಾದ ಮೊದಲ ಪ್ರೀಮಿಯರ್ ಏಪ್ರಿಲ್ 10 ರಂದು ಬರ್ಲಿನ್​​ನಲ್ಲಿ ನಡೆಯಲಿದೆ. ಬಳಿಕ ಏಪ್ರಿಲ್ 24 ರಂದು ವಿಶ್ವದಾದ್ಯಂತ ‘ಮೈಕಲ್’ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಿಕಲ್ ಬಾಲ್ ಲೀಗ್: ಉತ್ತಮ ಆಟ ಮುಂದುವರಿಸಿದ ಅಟ್ಲಿ ಒಡೆತನದ ‘ಬೆಂಗಳೂರು ಜವಾನ್ಸ್’ ತಂಡ – Kannada News | Priya Atlee team Bengaluru Jawans won first match in world pickleball league

ಪ್ರಿಯಾ ಅಟ್ಲೀ ಮತ್ತು ಖ್ಯಾತ ನಿರ್ದೇಶಕ ಅಟ್ಲೀ ಮಾಲೀಕತ್ವದ ಬೆಂಗಳೂರು ಜವಾನ್ಸ್ ತಂಡವು ವಿಶ್ವ ಪಿಕಲ್ ಬಾಲ್ ಲೀಗ್​ನ ಮೊದಲ ಸೀಸನ್​ನ ಚಾಂಪಿಯನ್ ತಂಡವಾಗಿದ್ದು, ಮತ್ತೆ ತನ್ನ ಉತ್ತಮ ಆಟ ಮುಂದುವರಿಸಿದೆ.

Source link

SA vs WI: ಬೃಹತ್ ಮೊತ್ತ ಬೆನ್ನಟ್ಟಿ ವಿಶ್ವ ದಾಖಲೆ ನಿರ್ಮಿಸಿದ ದಕ್ಷಿಣ ಆಫ್ರಿಕಾ – Kannada News | South Africa Creates History: De Kock’s Record Century Powers Historic T20 Chase vs WI

ಸೆಂಚೂರಿಯನ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 221 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆದಾಗ್ಯೂ, ಮಾರ್ಕ್ರಾಮ್ ಔಟಾದ ನಂತರ ಬಂದ ರಿಕಲ್ಟನ್, ಡಿ ಕಾಕ್‌ಗೆ ಉತ್ತಮ ಬೆಂಬಲ ನೀಡಿದರು.

Source link

ಐಟಿ ದಾಳಿ ವೇಳೆಯೇ ಶೂಟ್​ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿಜೆ ರಾಯ್​ ಆತ್ಮಹತ್ಯೆ – Kannada News | Confident Group Chairman C.J. Roy Dies by Suicide During IT Raid

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್Image Credit source: facebook profile

ಬೆಂಗಳೂರು, ಜನವರಿ 30: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಪಿಸ್ತೂಲ್​ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಲ್ಯಾಂಗ್​ಫೋರ್ಡ್ ರಸ್ತೆಯಲ್ಲಿರುವ ಬಂಗಲೆಯಲ್ಲಿ ನಡೆದಿದೆ. ಪದೇ ಪದೆ ಐಟಿ ಇಲಾಖೆ ಅಧಿಕಾರಿಗಳಿಂದ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ IT ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್​​ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಅಶೋಕ್​​ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Source link

ಧಮ್ಕಿ ಕೇಸ್: ರಾಜೀವ್ ಗೌಡಗೆ ಬಿಗ್ ರಿಲೀಫ್, ಪಟಾಕಿ ಹಚ್ಚಿ ಸಂಭ್ರಮಿಸದಂತೆ ತಾಕೀತು – Kannada News | Rajeev Gowda Gets Bail In Shidlaghatta Municipal Commissioner threat Case

ಚಿಕ್ಕಬಳ್ಳಾಪುರ, (ಜನವರಿ 30): ಶಿಡ್ಲಘಟ್ಟ ನಗರಸಭೆ ಆಯುಕ್ತೆಗೆ ಅಮೃತಾ ಗೌಡಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜೀವ್ ಗೌಡಗೆ (Rajeev Gowda) ಜಾಮೀನು ಸಿಕ್ಕಿದೆ. ಮಂಗಳೂರಿನಲ್ಲಿ ಸ್ಥಳ ಮಹಜರು ಮುಗಿಸಿ ಇಂದು (ಜನವರಿ 30) ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಈ ವೇಳೆ ಶಿಡ್ಲಘಟ್ಟದ ಜೆಎಂಎಫ್​ಸಿ ಕೋರ್ಟ್​, ರಾಜೀವ್ ಗೌಡನಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.  50 ಸಾವಿರ ರೂಪಾಯಿ ಶ್ಯೂರಿಟಿ ಬಾಂಡ್, ಪೊಲೀಸರ ತನಿಖೆಗೆ ಸಹಕರಿಸಲು ಸೂಚನೆ ನೀಡಿದೆ. ಅಲ್ಲದೇ ಪ್ರಮುಖವಾಗಿ ಜಾಮೀನು ಸಿಕ್ಕ ಖುಷಿಯಲ್ಲಿ ಪಟಾಕಿ ಹಚ್ಚಿ, ಸಂಭ್ರಮಾಚರಣೆ ಮಾಡದಂತೆ ಜಡ್ಜ್​ ಮೊಹಮ್ಮದ್ ರೋಷನ್ ಶಾ ತಾಕೀತು ಮಾಡಿದ್ದಾರೆ.

Source link

Vikalpa Film Review: ಸೈಕಲಾಜಿಕಲ್ ಥ್ರಿಲ್ಲರ್ ಕಥೆಯ ಅಚ್ಚುಕಟ್ಟು ಸಿನಿಮಾ ‘ವಿಕಲ್ಪ’ – Kannada News | Vikalpa Film Review: Vikalpa Kannada movie tells an interesting psychological thriller story

  • Time – 113 Minutes
  • Released – January 30, 2026
  • Language – Kannada
  • Genre – Mystery, Psychological, Thriller

Cast – ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್, ಗಣಪತಿ ಹೆಗಡೆ ವಡ್ಡಿನಗದ್ದೆ ಮುಂತಾದವರು.

Director – ಪೃಥ್ವಿರಾಜ್ ಪಾಟೀಲ್

ಕನ್ನಡದಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ (Psychological Thriller) ಸಿನಿಮಾಗಳ ಸಂಖ್ಯೆ ಕಡಿಮೆ. ಈ ಪ್ರಕಾರದ ಸಿನಿಮಾಗಳಿಗೆ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಗುಣ ಇರುತ್ತದೆ. ಕೊನೆಯ ತನಕ ಕುತೂಹಲ ಜಾಗೃತವಾಗಿಯೇ ಇರುತ್ತದೆ. ಅಂಥ ಸಿನಿಮಾಗಳ ಸಾಲಿಗೆ ‘ವಿಕಲ್ಪ’ (Vikalpa Movie) ಕೂಡ ಸೇರ್ಪಡೆ ಆಗಿದೆ. ಜನವರಿ 30ರಂದು ರಿಲೀಸ್ ಆಗಿರುವ ಈ ಸಿನಿಮಾದಲ್ಲಿ ಪೃಥ್ವಿರಾಜ್ ಪಾಟೀಲ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ, ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಾನಸಿಕ ಸಮಸ್ಯೆಗಳ ಒಂದಷ್ಟು ಆಯಾಮಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇಂದಿರಾ ಶಿವಸ್ವಾಮಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

‘ವಿಕಲ್ಪ’ ಚಿತ್ರದ ಕಥಾನಾಯಕ ಚಿಕ್ಕ ವಯಸ್ಸಿನಲ್ಲಿ ಏನನ್ನೋ ನೋಡಿ ಹೆದರಿಕೊಂಡಿರುತ್ತಾನೆ. ಆ ಭಯ 33ನೇ ವಯುಸ್ಸಿನ ತನಕವೂ ಕಾಡುತ್ತಲೇ ಇರುತ್ತದೆ. ಹಗಲು-ರಾತ್ರಿ, ನಗರ-ಹಳ್ಳಿ, ದೇಶ-ವಿದೇಶ ಎನ್ನದೇ ಎಲ್ಲ ಜಾಗದಲ್ಲೂ ಎಲ್ಲ ಸಮಯದಲ್ಲೂ ಆತನಿಗೆ ವಿಚಿತ್ರವಾದ ಅನುಭವ ಆಗುತ್ತದೆ. ಅದರಿಂದ ಅವನ ಜೀವನದಲ್ಲಿ ಹಲವು ತೊಂದರೆಗಳು ಉಂಟಾಗುತ್ತವೆ. ಅಂತಿಮವಾಗಿ ಅದಕ್ಕೆ ಯಾವ ರೀತಿಯ ಪರಿಹಾರ ಸಿಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಬೆಂಗಳೂರು ಮತ್ತು ಮಲೆನಾಡಿನ ಹಲವು ಪ್ರದೇಶಗಳಲ್ಲಿ ‘ವಿಕಲ್ಪ’ ಸಿನಿಮಾವನ್ನು ಚಿತ್ರಿಸಲಾಗಿದೆ. ಆಯಾ ಪ್ರದೇಶ ಮತ್ತು ಆ ಪ್ರದೇಶದ ಪಾತ್ರಗಳಿಗೆ ತಕ್ಕಂತೆ ಸಂಭಾಷಣೆಯನ್ನು ಬರೆಯಲಾಗಿದೆ. ಆ ಮೂಲಕ ಸಿನಿಮಾ ಹೆಚ್ಚು ನೈಜವಾಗಿ ಮೂಡಿಬರುವಂತೆ ನೋಡಿಕೊಳ್ಳಲಾಗಿದೆ. ಕಥೆಯ ಶುರುವಿನಿಂದ ಅಂತ್ಯದ ತನಕ ಸಸ್ಪೆನ್ಸ್ ಕಾಪಾಡಿಕೊಳ್ಳಲಾಗಿದೆ.

ಸಿನಿಮಾದ ಆರಂಭದಲ್ಲಿ ಹಾಸ್ಯ ಮತ್ತು ಹಾರರ್ ಅಂಶಗಳಿಗೆ ಒತ್ತು ನೀಡಲಾಗಿದೆ. ಕಥಾನಾಯಕನ ಅನುಭವಕ್ಕೆ ಬರುತ್ತಿರುವ ವಿಚಿತ್ರ ಘಟನೆಗಳನ್ನು ತೋರಿಸುವಾಗ ಹಾರರ್ ಸಿನಿಮಾ ನೋಡಿದ ಅನುಭವ ಆಗುತ್ತದೆ. ಆ ಘಟನೆಗಳಿಗೆ ಕಾರಣ ಏನಿರಬಹುದು ಎಂಬ ಕುತೂಹಲ ಪ್ರತಿ ಹಂತದಲ್ಲೂ ಮೂಡುತ್ತದೆ. ಜೊತೆಗೆ ಒಂದು ಲವ್ ಸ್ಟೋರಿ ಕೂಡ ಈ ಸಿನಿಮಾದಲ್ಲಿದೆ. ತಾಯಿ ಸೆಂಟಿಮೆಂಟ್ ಕೂಡ ಜಾಗ ಪಡೆದುಕೊಂಡಿದೆ. ಈ ಎಲ್ಲ ಅಂಶಗಳನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಯಕ್ಷಗಾನವನ್ನು ಒಂದು ಮುಖ್ಯ ಅಂಶವಾಗಿ ಬಳಸಿಕೊಳ್ಳಲಾಗಿದೆ.

‘ವಿಕಲ್ಪ’ ಕ್ಲೈಮ್ಯಾಕ್ಸ್​​ನಲ್ಲಿ ಒಂದಷ್ಟು ಮನೋವೈಜ್ಞಾನಿಕ ಅಂಶಗಳನ್ನು ಪ್ರೇಕ್ಷಕರಿಗೆ ತಿಳಿಸಲಾಗಿದೆ. ಆ ಮೂಲಕ ಮುಖ್ಯವಾದ ಸಂದೇಶ ನೀಡಲಾಗಿದೆ. ದೆವ್ವ-ಭೂತ ಎಂಬ ಮೌಢ್ಯ ಬಿತ್ತುವ ಸಿನಿಮಾಗಳ ನಡುವೆ ‘ವಿಕಲ್ಪ’ ಚಿತ್ರ ಒಂದು ಉತ್ತಮ ಪ್ರಯತ್ನವಾಗಿ ಇಷ್ಟ ಆಗುತ್ತದೆ. ಒಟ್ಟಾರೆ ಈ ಚಿತ್ರದ ಕಥೆ ಸಿಂಪಲ್ ಆಗಿದ್ದರೂ ಕೂಡ ಅದನ್ನು ಫ್ಲ್ಯಾಶ್​ಬ್ಯಾಕ್ ತಂತ್ರದ ಮೂಲಕ ಹೇಳಿದ್ದರಿಂದ ಕೊನೆವರೆಗೂ ಕುತೂಹಲ ಉಳಿಸಿಕೊಳ್ಳುತ್ತದೆ. ಆದರೆ ಕಥೆಯನ್ನು ಇನ್ನಷ್ಟು ರೋಚಕವಾಗಿಸಿದ್ದರೆ ‘ವಿಕಲ್ಪ’ ಸಿನಿಮಾ ಹೆಚ್ಚು ಆಪ್ತವಾಗಬಹುದಿತ್ತು.

ಇದನ್ನೂ ಓದಿ: Chowkidar Review: ಅಪ್ಪನ ಅಗಾಧ ಪ್ರೀತಿಯ ಪ್ಲಸ್, ಮೈನಸ್ ತೋರಿಸುವ ‘ಚೌಕಿದಾರ್’

ಪೃಥ್ವಿರಾಜ್ ಪಾಟೀಲ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನುಳಿದ ಕಲಾವಿದರಾದ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಾಮಿಡಿ ಪಾತ್ರದಲ್ಲಿ ಗಣಪತಿ ಹೆಗಡೆ ವಡ್ಡಿನಗದ್ದೆ ಅವರು ಸಖತ್ ರಿಲೀಫ್ ನೀಡುತ್ತಾರೆ. ಸಂವತ್ಸರ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ. ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 5:23 pm, Fri, 30 January 26

Source link