All posts by nagaraj11081993

ಸರ್ಕಾರಿ ಇಲಾಖೆಗಳೇ ಹೀಗೆ ಮಾಡೋದು ಸರೀನಾ? ತುಮಕೂರಿನ ಕಚೇರಿಗಳಲ್ಲಿ 44 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಾಕಿ – Kannada News | Tumakuru Govt Depts Owe Rs.44 Cr Electricity Bills: BESCOM Warns Power Disconnection

44 ಕೋಟಿ ರೂಪಾಯಿಗೂ ಹೆಚ್​ಚು ವಿದ್ಯುತ್ ಬಿಲ್ ಬಾಕಿ
Image Credit source: Tv9

ತುಮಕೂರು, ಜನವರಿ 30: ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ತುಮಕೂರಿನ (Tumakuru) ವಿವಿಧ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿಸದೇ ಬರೋಬ್ಬರಿ 44 ಕೋಟಿ 05 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷವೇ ಈ ಬಿಲ್​ಗಳನ್ನು ಪಾವತಿಸುವಂತೆ ಬೆಸ್ಕಾಂ ಹೇಳಿದ್ದರೂ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿಬಂದಿದೆ. ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿ ಇನ್ನೂ ಹಲವು ಇಲಾಖೆಗಳು ಕೋಟ್ಯಂತರ ರೂ.ಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ.

ಬೆಸ್ಕಾಂನಿಂದ ಖಡಕ್ ವಾರ್ನಿಂಗ್

ಕಳೆದ ನವೆಂಬರ್ ಅಂತ್ಯದೊಳಗಾಗಿ ವಿದ್ಯುತ್ ಬಿಲ್ ಪಾವತಿಸುವಂತೆ ತುಮಕೂರಿನ ಹಲವು ಸರ್ಕಾರಿ ಇಲಾಖೆಗಳಿಗೆ ಬೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬರುತ್ತಿದೆ. ತಿಂಗಳಗಟ್ಟಲೆ ಬಿಲ್ ಕಟ್ಟದೇ ಇರುವುದರಿಂದ ಬಾಕಿ ಹಣ ವಸೂಲಿಗೆ ಬೆಸ್ಕಾಂ ಅಧಿಕಾರಿಗಳು ಸುಸ್ತಾಗಿದ್ದು, ಇದೀಗ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಶಾಲಾ ಶಿಕ್ಷಣ, ಕಂದಾಯ, ಸಮಾಜ ಕಲ್ಯಾಣ, ತೋಟಗಾರಿಕೆ ಸೇರಿ ಹಲವು ಇಲಾಖೆಗಳು ಕೋಟಿಗಟ್ಟಲೆ ಹಣದ ವಿದ್ಯುತ್ ಬಿಲ್ ಭರಿಸದ ಹಿನ್ನೆಲೆ ಬೆಸ್ಕಾಂ ಖಡಕ್ ವಾರ್ನಿಂಗ್ ನೀಡಿದೆ. ಸರ್ಕಾರಿ ಕಚೇರಿಗಳೇ ನಿಯಮ ಉಲ್ಲಂಘಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡ ಜಿಲ್ಲೆಯ ಇಲಾಖೆಗಳು

  • ಜಲಸಂಪನ್ಮೂಲ ಇಲಾಖೆ – 17.73 ಕೋಟಿ ರೂ.
  • ಸಣ್ಣ ನೀರಾವರಿ ಇಲಾಖೆ- 12.72 ಕೋಟಿ ರೂ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- 3.63 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ- 2.65 ಕೋಟಿ ರೂ.
  • ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ- 1.85 ಕೋಟಿ ರೂ.
  • ಶಾಲಾ ಶಿಕ್ಷಣ ಇಲಾಖೆ – 1.10 ಕೋಟಿ ರೂ.
  • ಕಂದಾಯ ಮತ್ತು ಮುಜರಾಯಿ ಇಲಾಖೆ- 1.44 ಕೋಟಿ ರೂ.
  • ಸಮಾಜ ಕಲ್ಯಾಣ ಇಲಾಖೆ -1.09 ಕೋಟಿ ರೂ.
  • ತೋಟಗಾರಿಕೆ ಇಲಾಖೆ – 37 ಲಕ್ಷ ರೂ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ- 34 ಲಕ್ಷ ರೂ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- 31 ಲಕ್ಷ ರೂ.
  • ಗೃಹ ಇಲಾಖೆ- 23 ಲಕ್ಷ ರೂ.
  • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ-11.97 ಲಕ್ಷ ರೂ.
  • ಕೃಷಿ ಇಲಾಖೆ- 2.69 ಲಕ್ಷ ರೂ.
  • ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ- 3.16 ಲಕ್ಷ ರೂ.
  • ಲೋಕೋಪಯೋಗಿ ಇಲಾಖೆ- 7.56 ಲಕ್ಷ ರೂ.
  • ಕಾನೂನು ಇಲಾಖೆ – 6.11 ಲಕ್ಷ ರೂ.
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- 2.98 ಲಕ್ಷ ರೂ.
  • ಅರಣ್ಯ ಇಲಾಖೆ- 8 ಲಕ್ಷ ರೂ.
  • ಸಾರಿಗೆ- 3.18 ಲಕ್ಷ ರೂ.

ಈ ಎಲ್ಲಾ ಇಲಾಖೆಗಳು ಸೇರಿ ಒಟ್ಟು 44.05 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೊಡ್ಡಬಳ್ಳಾಪುರದಲ್ಲೊಬ್ಬಳು ಖತರ್ನಾಕ್ ಮಹಿಳೆ: 3 ಮದುವೆಯಾಗಿ ಲಕ್ಷಾಂತರ ರೂ. ಲೂಟಿ, ಠಾಣೆ ಮೆಟ್ಟಿಲೇರಿದ ಗಂಡಂದಿರು! – Kannada News | Doddaballapura: Woman Marries Three Times, Accused of Looting Lakhs from Husbands

ವಂಚನೆ ಆರೋಪ ಎದುರಿಸುತ್ತಿರುವ ಮಹಿಳೆImage Credit source: tv9

ದೇವನಹಳ್ಳಿ, ಜನವರಿ 30: ಪ್ರೀತಿ, ಮದುವೆ ಎಂಬ ನಾಟಕವಾಡಿ ಪುರುಷರನ್ನು ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ದೋಚುತ್ತಿದ್ದ ಕಿರಾತಕ ಮಹಿಳೆಯೊಬ್ಬಳ ಅಸಲಿ ಮುಖ ಇದೀಗ ದೊಡ್ಡಬಳ್ಳಾಪುರದಲ್ಲಿ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ (Bangalore Rural) ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಆರೋಪ ಕೇಳಿಬಂದಿದ್ದು, ಮೊದಲ ಹಾಗೂ ಎರಡನೇ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸುಧಾರಾಣಿ ಹಣವಿರುವವರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಳು ಎನ್ನಲಾಗಿದೆ.

ಈಗಾಗಲೇ ಮೂವರನ್ನು ಮದುವೆಯಾಗಿರುವ ಈಕೆ, ತನ್ನ ಇಬ್ಬರು ಪತಿಯರಿಗೆ ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ.

ಬುಲೆಟ್ ಓಡಿಸಲು ಬರಲ್ಲ ಎಂದು ಮೊದಲ ಪತಿಗೆ ಕೈಕೊಟ್ಟಿದ್ದ ಸುಧಾರಾಣಿ!

ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳೂ ಜನಿಸಿದ್ದರು. ಆದರೆ, ದಾಂಪತ್ಯ ಜೀವನದ ನಡುವೆಯೇ ಪತಿಗೆ ‘ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ’ ಎಂಬ ಕ್ಷುಲ್ಲಕ ಕಾರಣ ನೀಡಿ, ಮಕ್ಕಳನ್ನು ಹಾಗೂ ವೀರೆಗೌಡರನ್ನು ತೊರೆದು ಹೋಗಿದ್ದಳು.

ಎರಡನೇ ಪತಿಗೆ 20 ಲಕ್ಷ ರೂ. ಪಂಗನಾಮ!

ಮೊದಲ ಪತಿಯಿಂದ ದೂರಾದ ಸುಧಾರಾಣಿ, ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅನಂತಮೂರ್ತಿ ಎಂಬುವವರನ್ನು ಸಂಪರ್ಕಿಸಿದ್ದಳು. ಗಂಡ ತೀರಿಹೋಗಿದ್ದಾರೆ ಎಂದು ಸುಳ್ಳು ಹೇಳಿ ಆತನನ್ನು ನಂಬಿಸಿ, ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಳು. ಸುಮಾರು ಒಂದೂಕಾಲು ವರ್ಷಗಳ ಕಾಲ ಅನಂತಮೂರ್ತಿ ಜೊತೆ ಸಂಸಾರ ಮಾಡಿದ್ದಳು. ಈ ಅವಧಿಯಲ್ಲಿ ವಿವಿಧ ಕಾರಣಗಳನ್ನು ನೀಡಿ ಸುಮಾರು 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಳು ಎಂದು ಆರೋಪಿಸಲಾಗಿದೆ.

ಅನಂತಮೂರ್ತಿಗೆ ಪಂಗನಾಮ ಹಾಕಿದ ನಂತರ ಮೂರನೇ ಮದುವೆ!

ಅನಂತಮೂರ್ತಿಯಿಂದ ಹಣ ಪಡೆದ ನಂತರ ಆತನನ್ನೂ ತೊರೆದಿರುವ ಸುಧಾರಾಣಿ, ಇದೀಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮೊದಲ ಪತಿ ವೀರೆಗೌಡ ಮತ್ತು ಎರಡನೇ ಪತಿ ಅನಂತಮೂರ್ತಿ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಹಲವಾರು ಯುವತಿಯರ ಜತೆ ಯುವಕನ ಕಾಮಕೇಳಿ: ವಿಡಿಯೋ ವೈರಲ್ ಬೆನ್ನಲ್ಲೇ ಆರೋಪಿ ಮೊಹಮ್ಮದ್ ಸವದ್ ಬಂಧನ

ಈಕೆ ಕೇವಲ ಹಣಕ್ಕಾಗಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ. ಇಂತಹ ಮಹಿಳೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಪತಿಯರು ಒತ್ತಾಯಿಸಿದ್ದಾರೆ. ಸದ್ಯ ದೊಡ್ಡಬಳ್ಳಾಪುರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ: ಕಿಮ್ಸ್ ಆಡಳಿತಾಧಿಕಾರಿ ಬಿ ಕಲ್ಲೇಶ್ ಮನೆ ಸೇರಿ 6 ಕಡೆ ರೇಡ್ – Kannada News | Lokayukta Raids KIMS Administrator Kallesh’s homes in Koppal Over Disproportionate Assets Case

ಕೊಪ್ಪಳ, ಜನವರಿ 30: ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಕಿಮ್ಸ್‌ (KIMS) ಆಡಳಿತಾಧಿಕಾರಿ ಬಿ. ಕಲ್ಲೇಶ್ ನಿವಾಸ ಹಾಗೂ ಅವರ ಆಪ್ತ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ವಿವಿಧೆಡೆ ಒಟ್ಟು ಆರು ಸ್ಥಳಗಳಲ್ಲಿ ಏಕಕಾಲಕ್ಕೆ ರೇಡ್ ನಡೆಸಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿರುವ ಬಿ. ಕಲ್ಲೇಶ್ ನಿವಾಸ, ಅವರ ಅತ್ತೆಯ ಮನೆ, ನವಚೇತನ ಶಾಲೆ, ವಿಜ್ಞಾನ ಕಾಲೇಜು ಹಾಗೂ ಯಲಬುರ್ಗಾ ತಾಲೂಕಿನ ಚಿಕ್ಕಮನ್ನಾಪುರ ಗ್ರಾಮದಲ್ಲಿರುವ ಕಲ್ಲೇಶ್ ಸ್ವಗ್ರಾಮದ ಮನೆ ಮೇಲೂ ದಾಳಿ ನಡೆದಿದೆ. ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳನ್ನೊಳಗೊಂಡ ಲೋಕಾಯುಕ್ತ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ಲೋಕೇಶ್ ನೇತೃತ್ವದಲ್ಲಿ ಗದಗ, ಹಾವೇರಿ ಮತ್ತು ರಾಯಚೂರು ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳು, ಆಸ್ತಿ ವಿವರಗಳು ಮತ್ತು ಹಣಕಾಸು ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಬಿ. ಕಲ್ಲೇಶ್ ಈ ಹಿಂದೆ ವಾಲ್ಮೀಕಿ ನಿಗಮ ಹಗರಣದಲ್ಲಿ ಸುದ್ದಿಯಾಗಿದ್ದರು. ಆ ವೇಳೆ ಅವರನ್ನು ಅಮಾನತು ಮಾಡಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡದ ಹೊಸ ತಂಡಕ್ಕೆ ಬೆಂಬಲ ಕೊಟ್ಟ ರಾಕಿಂಗ್ ಸ್ಟಾರ್ ಯಶ್ – Kannada News | Yash Backs ‘Amruthaanjan: Pan India Star Boosts New Kannada Film and Young Talent

ರಾಕಿಂಗ್ ಸ್ಟಾರ್ ಯಶ್ ಅವರು ಪ್ಯಾನ್ ಇಂಡಿಯಾ ಹೀರೋ ಆದ ಬಳಿಕ ಕನ್ನಡಿಗರಿಗೆ ಸಿಗೋದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಅವರು ಆಗಾಗ ಅದನ್ನು ಸುಳ್ಳು ಮಾಡುತ್ತಾರೆ. ಈಗ ಅವರು ಕನ್ನಡದ ಹೊಸ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ. ಹೊಸಬರೇ ಮಾಡಿದ ‘ಅಮೃತ ಅಂಜನ್’ ಹೆಸರಿನ ಚಿತ್ರಕ್ಕೆ ಯಶ್ (Yash) ಶುಭ ಹಾರೈಸಿದ್ದಾರೆ. ಇದು ತಂಡದ ಖುಷಿ ಹೆಚ್ಚಿಸಿದೆ.

‘ಅಮೃತಾಂಜನ’ ಹೆಸರಿನ ಶಾರ್ಟ್ ಸಿನಿಮಾ ಬಂದಿತ್ತು. ಇದು ಸಖತ್ ಫೇಮಸ್ ಆಯಿತು. ಈಗ ಅದೇ ತಂಡ ‘ಅಮೃತ ಅಂಜನ್’ ಹೆಸರಿನ ಸಿನಿಮಾ ಮಾಡಿದೆ. ಪಾಯಲ್ ಚೆಂಗಪ್ಪ, ಗೌರವ್ ಶೆಟ್ಟಿ, ಸುಧಾಕರ್ ಗೌಡ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಜ್ಯೋತಿರಾವ್ ಮೋಹಿತ್ ಇದನ್ನು ನಿರ್ದೇಶನ ಮಾಡಿದ್ದಾರೆ. ಇಂದು (ಜನವರಿ 30) ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರಕ್ಕೆ ಯಶ್ ಶುಭ ಹಾರೈಸಿದ್ದಾರೆ.

‘ಅಮೃತಾಂಜನ ತಂಡದ ಕೆಲಸವನ್ನು ನಾನು ಯಾವಾಗಲೂ ಇಷ್ಟಪಡುತ್ತೇನೆ. ನೀವು ದೊಡ್ಡ ಕನಸು ಕಂಡಿದ್ದೀರಾ. ಸಣ್ಣ ಕಂಟೆಂಟ್ ಮಾಡುವುದರಿಂದ ಆರಂಭಿಸಿ, ಈಗ ಸಿನಿಮಾ ಮಾಡಿದ್ದೀರಾ. ಇದು ಕಂಟೆಂಟ್ ಮಾಡುವ, ಕಥೆ ಹೇಳುವ ಇನ್ನಷ್ಟು ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ಭಾವಿಸುತ್ತೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಯಶ್ ಇನ್​​ಸ್ಟಾಗ್ರಾಮ್​​ನಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾರೆ. ಇದು ತಂಡದ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಕನ್ನಡದ ಮಹಿಳಾ ನಿರ್ದೇಶಕಿ

ಯಶ್ ಅವರ ವಿಶ್​​ಗೆ ಇಡೀ ತಂಡ ಖುಷಿಪಟ್ಟಿದೆ. ಸ್ಟಾರ್ ಹೀರೋನಿಂದ ಯುವ ಪ್ರತಿಭೆಗಳಿಗೆ ಬೆಂಬಲ ಸಿಕ್ಕಿದ್ದರಿಂದ ಸಿನಿಮಾಗೆ ಒಂದಷ್ಟು ಮೈಲೇಜ್ ಸಿಗೋ ನಿರೀಕ್ಷೆ ಇದೆ. ಈ ಮೊದಲು ಹಾಸ್ಯ ಪ್ರಧಾನ ಶಾರ್ಟ್​ ಫಿಲ್ಮ್​​ಗಳನ್ನು ಈ ತಂಡದವರು ಮಾಡುತ್ತಿದ್ದರು. ಸಿನಿಮಾ ಕೂಡ ಅದೇ ರೀತಿ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕ್ಯೂಬಾಗೆ ತೈಲ ಪೂರೈಸುವ ದೇಶಗಳಿಗೆ ಟ್ರಂಪ್ ಬೆದರಿಕೆ – Kannada News | Donald Trump Threatens Tariffs on Cuba Oil Suppliers: US Ramps Up Pressure

ವಾಷಿಂಗ್ಟನ್, ಜನವರಿ 30: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಜಗತ್ತಿಗೆ ಮತ್ತೊಂದು ಹೊಸ ಬೆದರಿಕೆಯನ್ನು ಹಾಕಿದ್ದಾರೆ. ಕ್ಯೂಬಾಗೆ ತೈಲ ಸರಬರಾಜು ಮಾಡದಂತೆ ಎಲ್ಲಾ ದೇಶಗಳಿಗೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಕ್ಯೂಬಾಗೆ ತೈಲ ಮಾರಾಟ ಮಾಡುವ ದೇಶಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಲಾಗುವುದು. ಇದಕ್ಕೆ ಸಂಬಂಧಿಸಿದ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ.

ಟ್ರಂಪ್ ಅವರ ಈ ಕ್ರಮವು ಕ್ಯೂಬಾದ ಮೇಲೆ ಒತ್ತಡ ಹೆಚ್ಚಿಸುವ ಅವರ ಹೊಸ ತಂತ್ರವಾಗಿದೆ.ಈ ತಿಂಗಳ ಆರಂಭದಲ್ಲಿ, ಯುಎಸ್ ಮಿಲಿಟರಿ ವೆನೆಜುವೆಲಾದ ಮೇಲೆ ದಾಳಿ ಮಾಡಿ ಅಂದಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿತು. ಅಂದಿನಿಂದ, ನಿಕೋಲಸ್ ಮಡುರೊ ಅವರ ಆಪ್ತ ಮಿತ್ರ ಕ್ಯೂಬಾ ನಾಯಕತ್ವದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಪದೇ ಪದೇ ಬೆದರಿಕೆ ಹಾಕಿದ್ದಾರೆ.
ಕ್ಯೂಬಾದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವ ಮತ್ತು ಕ್ಯೂಬಾಗೆ ತೈಲ ಮಾರಾಟ ಮಾಡುವ ದೇಶಗಳ ಸರಕುಗಳ ಮೇಲೆ ಸುಂಕ ವಿಧಿಸುವ ಕಾರ್ಯಕಾರಿ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಗುರುವಾರ ಸಹಿ ಹಾಕಿದ್ದಾರೆ ಎಂದು ಶ್ವೇತಭವನ ತಿಳಿಸಿದೆ .

ಆದಾಗ್ಯೂ, ಹೇಳಿಕೆಯಲ್ಲಿ ಸುಂಕ ದರಗಳು ಅಥವಾ ಯುಎಸ್ ಸುಂಕಗಳಿಗೆ ಒಳಪಡಬಹುದಾದ ದೇಶಗಳ ಹೆಸರನ್ನು ಇನ್ನೂ ತಿಳಿಸಿಲ್ಲ. ಡೊನಾಲ್ಡ್ ಟ್ರಂಪ್ ಆಡಳಿತವು ಕ್ಯೂಬಾವನ್ನು ಏಕಾಂಗಿಯಾಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಕ್ಯೂಬಾದ ಮೇಲಿನ ಅಮೆರಿಕದ ಆರ್ಥಿಕ ದಿಗ್ಬಂಧನವು ಪರಿಣಾಮಕಾರಿ ಎಂದು ಸಾಬೀತಾಗಿದೆ. ಇತ್ತೀಚೆಗೆ, ಮೆಕ್ಸಿಕನ್ ಸರ್ಕಾರವು ಕ್ಯೂಬಾಗೆ ತೈಲ ರಫ್ತುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿತು. ವೆನೆಜುವೆಲಾದಲ್ಲಿ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ತೆಗೆದುಹಾಕಿದ ನಂತರ, ಟ್ರಂಪ್ ಈಗ ಕ್ಯೂಬಾ ಸರ್ಕಾರದ ಪತನದ ಬಗ್ಗೆ ಸುಳಿವು ನೀಡಿದ್ದಾರೆ.

ಮತ್ತಷ್ಟು ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ಈ ವರ್ಷದ ಆರಂಭದಲ್ಲಿ, ಅಮೆರಿಕದ ಸೇನೆಯು ವೆನೆಜುವೆಲಾವನ್ನು ಆಕ್ರಮಿಸಿ, ಆಗಿನ ಅಧ್ಯಕ್ಷರು ಮತ್ತು ಅವರ ಪತ್ನಿಯನ್ನು ಸೆರೆ ಹಿಡಿಯಿತು. ಅಂದಿನಿಂದ ಡೊನಾಲ್ಡ್​ ಟ್ರಂಪ್ ಕ್ಯೂಬಾದ ಮೇಲೆ ದಾಳಿಯ ಬಗ್ಗೆ ಸುಳಿವು ನೀಡುತ್ತಿದ್ದಾರೆ. ಟ್ರಂಪ್ ಕ್ಯೂಬಾಗೆ ಹೊಸ ಬೆದರಿಕೆ ಹಾಕಿದ್ದಲ್ಲದೆ ತಮ್ಮ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಕ್ಯೂಬಾದ ಹೊಸ ಅಧ್ಯಕ್ಷರನ್ನಾಗಿ ನೇಮಿಸುವ ಆಲೋಚನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಿಕೋಲಸ್ ಮಡುರೊ ಅಮೆರಿಕದ ವಶದಲ್ಲಿರುವುದರಿಂದ ವೆನೆಜುವೆಲಾದಿಂದ ಕ್ಯೂಬಾಗೆ ತೈಲ ಮತ್ತು ಹಣದ ಹರಿವು ನಿಲ್ಲುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಕ್ಯೂಬಾ ತನ್ನ ಮಿತ್ರ ರಾಷ್ಟ್ರವಾದ ವೆನೆಜುವೆಲಾದಿಂದ ಬಹಳ ಹಿಂದಿನಿಂದಲೂ ತೈಲವನ್ನು ಪಡೆಯುತ್ತಿದೆ. ವೆನೆಜುವೆಲಾದ ಮೇಲಿನ ಅಮೆರಿಕದ ನಿಯಂತ್ರಣದ ಲಾಭವನ್ನು ಪಡೆದುಕೊಂಡು ಟ್ರಂಪ್ ಈಗ ನಿರಂತರವಾಗಿ ಕ್ಯೂಬಾಗೆ ಬೆದರಿಕೆ ಹಾಕುತ್ತಿದ್ದಾರೆ. ಅವರು ಕ್ಯೂಬಾವನ್ನು ಅಮೆರಿಕದ ಪ್ರಭಾವಕ್ಕೆ ಒಳಪಡಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:55 am, Fri, 30 January 26

Source link

ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಆತಂಕ – Kannada News | KFD Outbreak in Karnataka: Monkey Fever Cases Rise in Chikkamagaluru and Shivamogga, First Death Reported

ಚಿಕ್ಕಮಗಳೂರಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ

ಚಿಕ್ಕಮಗಳೂರು, ಜನವರಿ 30: ಮಲೆನಾಡು ಭಾಗದಲ್ಲಿ ಚಳಿ ಕಡಿಮೆಯಾಗುತ್ತಿದ್ದಂತೆಯೇ ಈ ಭಾಗದ ಜನರನ್ನು ಪ್ರತಿ ವರ್ಷ ಕಾಡುವ ಮಂಗನಕಾಯಿಲೆ (KFD – Kyasanur Forest Disease) ಮತ್ತೆ ಆತಂಕ ಸೃಷ್ಟಿಸಿದೆ. ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ವರ್ಷದ ಮೊದಲ ಬಲಿ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿ ಹೆಚ್ಚಿಸಿದೆ.

ಕಾಫಿನಾಡಿನಲ್ಲಿ 9 ಪ್ರಕರಣಗಳು ಪತ್ತೆ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಾದ ಎನ್.ಆರ್. ಪುರ, ಶೃಂಗೇರಿ, ಕೊಪ್ಪ ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ಕೆ.ಎಫ್.ಡಿ ಲಕ್ಷಣಗಳು ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 9 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ 6 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಬ್ಬರು ಕೊಪ್ಪ ಸರ್ಕಾರಿ ಆಸ್ಪತ್ರೆಯ ಕೆ.ಎಫ್.ಡಿ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಮತ್ತು ಕೊಪ್ಪದ ಅರಳಿಕೊಪ್ಪದಲ್ಲಿ ಪ್ರತ್ಯೇಕ ಪ್ರಕರಣಗಳು ವರದಿಯಾಗಿವೆ. ವಿಶೇಷವೆಂದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರು ಎನ್.ಆರ್. ಪುರ ತಾಲೂಕಿನ ಮೇಗರಮಕ್ಕಿ ಗ್ರಾಮದವರಾಗಿದ್ದಾರೆ.

ಆರೋಗ್ಯ ಇಲಾಖೆ ಕಟ್ಟೆಚ್ಚರ

ರೋಗ ಹರಡದಂತೆ ತಡೆಯಲು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಈಗಾಗಲೇ ಸುಮಾರು 595ಕ್ಕೂ ಹೆಚ್ಚು ಜನರ ರಕ್ತದ ಮಾದರಿಯನ್ನು ಸಂಗ್ರಹಿಸಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ.

ಮಂಗನಕಾಯಿಲೆ ಲಕ್ಷಣಗಳೇನು? ಮುನ್ನೆಚ್ಚರಿಕೆ ಹೇಗೆ?

ಜ್ವರ ಅಥವಾ ವಿಪರೀತ ಮೈ ಕೈ ನೋವು ಪ್ರಮುಖ ಲಕ್ಷಣವಾಗಿದ್ದು, ಕಾಣಿಸಿಕೊಂಡರೆ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಸಲಹೆ ನೀಡಲಾಗಿದೆ. ಅಲ್ಲದೆ, ಕಾಡು ಅಥವಾ ತೋಟಗಳಿಗೆ ತೆರಳುವ ಮುನ್ನ ಮೈ ಪೂರ್ತಿ ಮುಚ್ಚುವಂತಹ ಬಟ್ಟೆ ಧರಿಸಬೇಕು. ಅರಣ್ಯ ಇಲಾಖೆ ಸೂಚಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಇದನ್ನೂ ಓದಿ: ಶಿವಮೊಗ್ಗ: ಮಲೆನಾಡಿನಲ್ಲಿ ಮತ್ತೆ ಶುರುವಾದ ಮಂಗನಕಾಯಿಲೆ ಆತಂಕ, ಕೆಎಫ್​ಡಿ ವೈರಸ್ ಪತ್ತೆ

ಒಟ್ಟಿನಲ್ಲಿ, ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಕೆಎಫ್​ಡಿಯಿಂದಾಗಿ ಸಾವು ಸಂಭವಿಸಿರುವುದು ನೆರೆಯ ಜಿಲ್ಲೆಯಾದ ಚಿಕ್ಕಮಗಳೂರಿನ ಜನರಲ್ಲಿ ಆತಂಕ ಇಮ್ಮಡಿಗೊಳಿಸಿದೆ. ಹೀಗಾಗಿ ತೋಟದ ಕೆಲಸಕ್ಕೆ ತೆರಳುವಾಗ ಕಾರ್ಮಿಕರು ಹೆಚ್ಚಿನ ಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್

ಚಿತ್ರಮಂದಿರಗಳ ಎದುರು ಸಾಮಾನ್ಯವಾಗಿ ದೊಡ್ಡದಾಗಿ ಹೀರೋಗಳ ಕಟೌಟ್ ಹಾಕಲಾಗುತ್ತದೆ. ಹೀರೋಯಿನ್​​ಗಳ ಕಟೌಟ್ ನಿಲ್ಲಿಸಲಾಗೋದಿಲ್ಲ. ‘ಲ್ಯಾಂಡ್​ ಲಾರ್ಡ್’ ಸಿನಿಮಾಗಾಗಿ ರಚಿತಾ ಕಟೌಟ್ ನಿಲ್ಲಿಸಲಾಗಿದೆ. ಹೀರೋಗಳ ಪಕ್ಕದಲ್ಲಿ ಹೀರೋಯಿನ್​​​ಗಳ ಕಟೌಟ್ ನಿಲ್ಲಿಸಬೇಕು ಎಂಬುದು ಅವರ ಕೋರಿಕೆ. ‘ಎಲ್ಲಾ ಹೀರೋಯಿನ್​​​ಗಳು ಕಟೌಟ್ ಬೇಕು. ಅವರ ಕಟೌಟ್ ನಿಲ್ಲಿಸಬೇಕು. ಇದು ಚಿತ್ರತಂಡಕ್ಕೆ ನನ್ನ ಮನವಿ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಉತ್ತರಾಖಂಡ: ದೇಹ ವಿರೂಪಗೊಂಡ ಸ್ಥಿತಿಯಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆ – Kannada News | Uttarakhand Horror: Minor Girl Found Mutilated, Cousin Suspected in Brutal Murder

ವಿಕಾಸನಗರ, ಜನವರಿ 30: ಉತ್ತರಾಖಂಡ(Uttarakhand)ದ ವಿಕಾಸನಗರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯನ್ನು ಬರ್ಬರವಾಗಿ ಹತ್ಯೆ(Murder) ಮಾಡಲಾಗಿದ್ದು, ಈ ಪ್ರದೇಶದಲ್ಲಿ ಆತಂಕವನ್ನು ಹುಟ್ಟುಹಾಕಿದೆ. ವಿಕಾಸನಗರ ಕೊತ್ವಾಲಿ ಮಿತಿಯ ಧಾಲಿಪುರದ ಶಕ್ತಿ ಕಾಲುವೆಯ ಬಳಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೇಹದ ತುಂಬಾ ಹರಿತವಾದ ಆಯುಧದಿಂದ ಮಾಡಿದ ಹಲವು ಗಾಯಗಳಿದ್ದವು. ಬಾಲಕಿಯ ಬೆರಳುಗಳು ಮತ್ತು ಮೂಗನ್ನು ಕತ್ತರಿಸಲಾಗಿತ್ತು.

ಮತ್ತು ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಲಾಗಿತ್ತು. ಪೊಲೀಸರು ಸ್ಥಳದಿಂದ ಕೊಲೆಗೆ ಬಳಸಲಾಗಿದೆ ಎಂದು ಹೇಳಲಾದ ಹರಿತವಾದ ಕತ್ತಿ ತರಹದ ಆಯುಧ ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದದ್ಆರೆ. ಮೃತದೇಹದ ಸುತ್ತಲಿನ ಪ್ರದೇಶವು ರಕ್ತದಿಂದ ಕೂಡಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಮೃತಳನ್ನು 12 ನೇ ತರಗತಿ ವಿದ್ಯಾರ್ಥಿನಿ ಮತ್ತು ಧಲಿಪುರ ನಿವಾಸಿ ಮನೀಷಾ ತೋಮರ್ ಎಂದು ಗುರುತಿಸಲಾಗಿದೆ. ಪೊಲೀಸ್ ತನಿಖೆಯ ಪ್ರಕಾರ, ಔಷಧಿ ಖರೀದಿಸಲು ತನ್ನ ಸೋದರಸಂಬಂಧಿ ಸುರೇಂದ್ರ ಜೊತೆ ಬೈಕ್​ನಲ್ಲಿ ಮನೆಯಿಂದ ಹೊರಟಿದ್ದಳು ಆದರೆ ಹಿಂತಿರುಗಲಿಲ್ಲ.

ತನಿಖೆಯ ಸಮಯದಲ್ಲಿ, ಪೊಲೀಸರು ಪೆಟ್ರೋಲ್ ಪಂಪ್‌ನಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಮನಿಷಾ ಮತ್ತು ಸುರೇಂದ್ರ ಬೈಕ್​ನಲ್ಲಿ ಒಟ್ಟಿಗೆ ಇರುವುದು ಕಂಡುಬಂದಿದೆ. ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಹರಿತವಾದ ಆಯುಧವನ್ನು ಸುರೇಂದ್ರ ಇತ್ತೀಚೆಗೆ ಖರೀದಿಸಿದ್ದಾನೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

ಮತ್ತಷ್ಟು ಓದಿ: ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ‌ ಹತ್ಯೆ: ಕಾರಣವೇನು?

ಕೊಲೆಯ ನಂತರ, ಸುರೇಂದ್ರ ನಾಪತ್ತೆಯಾಗಿದ್ದ.ಅಪರಾಧ ಸ್ಥಳದಲ್ಲಿ ಬೈಕ್ ಮತ್ತು ಆಯುಧ ಪತ್ತೆಯಾದ ನಂತರ, ಪೊಲೀಸರು ಎಸ್‌ಡಿಆರ್‌ಎಫ್‌ಗೆ ಕರೆ ಮಾಡಿ ಶಕ್ತಿ ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಕೊಲೆ ಮಾಡಿದ ನಂತರ ಸುರೇಂದ್ರ ಕಾಲುವೆಗೆ ಹಾರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ, ಆದರೆ ಇಲ್ಲಿಯವರೆಗೆ ಅವನ ಯಾವುದೇ ಕುರುಹು ಪತ್ತೆಯಾಗಿಲ್ಲ.

ಕೊಲೆಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಪೊಲೀಸರು ಎಲ್ಲಾ ಸಂಭಾವ್ಯ ಕೋನಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಗ್ರಾಮೀಣ ಎಸ್ಪಿ ಪಂಕಜ್ ಗೈರೋಲಾ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮತ್ತು ನಡೆಯುತ್ತಿರುವ ವಿಚಾರಣೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜಾನ್ ಅಬ್ರಹಾಂ ಎಷ್ಟೆಲ್ಲ ಕಟ್ಟುನಿಟ್ಟಿನ ಡಯಟ್ ಮಾಡ್ತಾರೆ ಗೊತ್ತಾ? ಆದರೂ ಏಕೀ ಸ್ಥಿತಿ? – Kannada News | John Abraham’s Strict Diet: 25 Yrs No Sweets, Vegetarian – Yet Fans Worry About His Health

ಜಾನ್ ಅಬ್ರಹಾಂ (John Abraham) ಎಂದಾಕ್ಷಣ ನೆನಪಿಗೆ ಬರೋದು ಕಟ್ಟುಮಸ್ತಾದ ದೇಹ, ಸಿಕ್ಸ್ ಪ್ಯಾಕ್. ಅವರು ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಜಾನ್ ಅಬ್ರಹಾಂ ಅವರು ಫಿಟ್ನೆಸ್​ಗೆ ಹೆಸರು ವಾಸಿ. ಏನೇ ಮರೆತರೂ ಅವರು ಜಿಮ್​ನಲ್ಲಿ ವರ್ಕೌಟ್ ಮಾಡೋದನ್ನು ಮರೆಯಲ್ಲ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನಟನ ಫಿಟ್ನೆಸ್​​ಗೆ ಮೆಚ್ಚುಗೆ ಸೂಚಿಸುತ್ತಾರೆ. ಅದೇ ರೀತಿ ಸಿಹಿಯನ್ನು ಮುಟ್ಟಲ್ಲ. ಅವರು ತಮ್ಮಿಷ್ಟದ ಸಿಹಿ ತಿನ್ನದೇ ಅದೆಷ್ಟೋ ವರ್ಷಗಳು ಕಳೆದಿವೆ. ಈಗ ಅವರ ಹೊಸ ಲುಕ್ ಅನೇಕರಿಗೆ ಭಯ ಮೂಡಿಸಿದೆ.

ಜಾನ್ ಅಬ್ರಹಾಂ ಅವರಿಗೆ ಈಗ 53 ವರ್ಷ. ಈ ವಯಸ್ಸಲ್ಲೂ ಅವರು ಸಾಕಷ್ಟು ಫಿಟ್ ಆಗಿದ್ದಾರೆ. ಅವರು ಸಿಹಿ ಪದಾರ್ಥ ತಿನ್ನದೆ 25 ವರ್ಷಗಳೇ ಕಳೆದು ಹೋಗಿವೆ ಎಂದರೆ ನೀವು ನಂಬೇಲೇಬೇಕು. ಅವರು ಫಿಟ್ನೆಸ್​ಗೆ ಹಾಗೂ ಆರೋಗ್ಯಕ್ಕೆ ಕೊಡುವ ಪ್ರಾಮುಖ್ಯತೆ ಇದು ಸಿಹಿ ಪದಾರ್ಥ ಎಂದರೆ ಎಲ್ಲರೂ ತಿನ್ನಲು ಮುಂದೆ ಬರುತ್ತಾರೆ. ಹಬ್ಬ-ಹರಿದಿನಗಳಲ್ಲಿ ಸಿಹಿ ತಿನ್ನುತ್ತಾರೆ. ಕೆಲವು ಸೆಲೆಬ್ರಿಟಿಗಳು ಸಿಹಿಯಿಂದ ದೂರ ಇರುತ್ತಾರೆ. ಜಾನ್ ಅಬ್ರಹಾಂ ಮಾತ್ರ ಈ ರೀತಿ ಅಲ್ಲ. ಈಗಲೂ ಫಿಟ್ನೆಸ್ ಬಗ್ಗೆ ಗಮನ ನೀಡುವ ಅವರು, ಇದಕ್ಕೆ ತಕ್ಕಂತೆ ಆಹಾರ ಕ್ರಮ ಫಾಲೋ ಮಾಡುತ್ತಾರೆ.

ನಟಿ ಆಲಿ ಖಾನ್ ಅವರು ಜಾನ್ ಅಬ್ರಹಾಂ ಅವರ ಬಗ್ಗೆ, ಅವರ ಆಹಾರ ಕ್ರಮದ ಬಗ್ಗೆ ಮಾತನಾಡಿದ್ದರು. ‘ಜಾನ್ ಅಬ್ರಹಾಂ ಅವರು ಈ ಕಾಲದಲ್ಲೂ ಸಖತ್ ಫಿಟ್ ಆಗಿದ್ದಾರೆ. ಅದಕ್ಕೆ ಕಾರಣ ಅವರು ಕಳೆದ 25 ವರ್ಷಗಳಿಂದ ಸಿಹಿ ಪದಾರ್ಥ ಸೇವನೆ ಮಾಡೇ ಇಲ್ಲ’ ಎಂದಿದ್ದರು. ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದರು.

ಸೆಲೆಬ್ರಿಟಿಗಳು ಸಿಹಿ ಪದಾರ್ಥಗಳಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಇದರಿಂದ ದೇಹದ ತೂಕ ನಿಯಂತ್ರಿಸಬಹುದು. ಡಯಾಬಿಟಿಸ್ ನಿಂದ ದೂರ ಆಗಬಹುದು. ಅಲ್ಲದೆ ಕೊಲೆಸ್ಟ್ರಾಲ್ ಲೆವೆಲನ್​ ನಿಯಂತ್ರಣದಲ್ಲಿ ಇಡಬಹುದು. ಕೊಲೆಸ್ಟ್ರಾಲ್ ಇಲ್ಲ ಎಂದರೆ ಹೃದಯದ ಸಮಸ್ಯೆ ಇಲ್ಲ. ಹೊಟ್ಟೆಯ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಜಾನ್ ಅಬ್ರಹಾಂ ಅವರು ಇಷ್ಟೊಂದು ಒಳ್ಳೆಯ ಬಾಡಿ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರು ನಾನ್​ವೆಜ್ ತಿನ್ನುತ್ತಾರೆ ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ, ಅದು ಸುಳ್ಳು. ಅವರು ಸಸ್ಯಾಹಾರಿ. ಸಸ್ಯಾಹಾರ ಸೇವನೆಯಿಂದ ಇಷ್ಟು ಒಳ್ಳೆಯ ಬಾಡಿ ಮಾಡಿದ್ದಾರೆ. ಇದನ್ನು ಕೂಡ ಅವರು ಈ ಮೊದಲು ಹೇಳಿದ್ದರು.

ಇದನ್ನೂ ಓದಿ: ಗುರುತು ಸಿಗದಂತೆ ಬದಲಾದ ಜಾನ್ ಅಬ್ರಾಹಂ; ಆರೋಗ್ಯದ ಬಗ್ಗೆ ಮೂಡಿದೆ ಅನುಮಾನ

ಜಾನ್ ಅಬ್ರಹಾಂ ಅವರು ಹೀರೋ ಆಗಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಅವರು ಬಾಲಿವುಡ್​ನಲ್ಲಿ ವಿಲನ್ ಆಗಿಯೂ ಹೆಸರು ಮಾಡಿದ್ದಾರೆ. ಅವರ ಜನಪ್ರಿಯತೆ ಹೆಚ್ಚುತ್ತಿದೆ. ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಆರೋಗ್ಯದ ಬಗ್ಗೆ ಅಚ್ಚರಿ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬಳ್ಳಾರಿಗೂ ಬಂತು ವಾಯು ಮಾಲಿನ್ಯದ ಕಂಟಕ! ಬೆಂಗಳೂರಿಗಿಂತ ಕಳಪೆ ಏರ್ ಕ್ವಾಲಿಟಿ – Kannada News | Bangalore Air Pollution Crisis: Ballari’s Air quality is worse than Bengaluru’s AQI

ಬಳ್ಳಾರಿಗೂ ಬಂತು ವಾಯು ಮಾಲಿನ್ಯದ ಕಂಟಕ!

ಬೆಂಗಳೂರು, ಜನವರಿ 30: ರಾಜ್ಯದೆಲ್ಲೆಡೆ ವಾಯು ಗುಣಮಟ್ಟ ಸಾಕಷ್ಟು ಹದಗೆಟ್ಟಿರುವಾಗ, ಬೆಂಗಳೂರಿನಲ್ಲಿ AQI ನಿರಂತರ ಏರುಪೇರು ಕಾಣುತ್ತಿದೆ. ಅದರ ನಡುವೆ ಮಂಗಳೂರು, ಮೈಸೂರು ಹಾಗೂ ಬಳ್ಳಾರಿ, ಬೆಂಗಳೂರನ್ನೂ ಮೀರಿಸುವಂತಿದೆ. ಇದರಿಂದಾಗಿ ನಗರಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ದೆಹಲಿಯಂತಾಗುತ್ತಾ ಪರಿಸ್ಥಿತಿ?

ಕೆಲ ದಿನಗಳಿಂದಲೂ ಏರಿಕೆ ಕಾಣುತ್ತಿದ್ದ ಬಳ್ಳಾರಿಯ ಏರ್ ಕ್ವಾಲಿಟಿ, ಇಂದು 222ಕ್ಕೆ ಹೋಗಿ ತಲುಪಿದೆ. ಈ ಹದಗೆಟ್ಟ ವಾತಾವರಣ ಹೀಗೆ ಮುಂದುವರೆದರೆ ದೆಹಲಿಯಂತೆಯೇ ಆಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ. ಈ ಕಲುಷಿತ ಗಾಳಿಯಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲೂ ಕಡಿಮೆ ಆಗದ AQI, ಇಂದು 192ಕ್ಕೆ ತಲುಪಿದೆ.ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ಸೂಕ್ಷ್ಮಾಣುಗಳಿಂದಲೂ ಜೀವಕ್ಕೆ ಹಾನಿ

PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 84 ಆಗಿದ್ದು, PM10 109ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ.

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಆರೋಗ್ಯ ತಜ್ಞರು ಮಕ್ಕಳು, ವೃದ್ಧರು ಹಾಗೂ ಶ್ವಾಸಕೋಶ ಸಮಸ್ಯೆ ಇರುವವರು ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ. ಮಾಸ್ಕ್ ಬಳಕೆ, ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಸಿರು ಪ್ರದೇಶಗಳನ್ನು ಹೆಚ್ಚಿಸುವುದು ಈಗ ನಗರಕ್ಕೆ ಅನಿವಾರ್ಯವಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –192
  • ಮಂಗಳೂರು-170
  • ಮೈಸೂರು –140
  • ಬೆಳಗಾವಿ – 102
  • ಕಲಬುರ್ಗಿ-126
  • ಶಿವಮೊಗ್ಗ – 69
  • ಬಳ್ಳಾರಿ – 222
  • ಹುಬ್ಬಳ್ಳಿ- 148
  • ಉಡುಪಿ –168
  • ವಿಜಯಪುರ –153

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link