All posts by nagaraj11081993

ಹಿಂದೂ ಸಮಾಜೋತ್ಸವದ ವೇಳೆ ಆತಂಕ ಮೂಡಿಸಿದ ಡ್ರೋನ್ ಪೊಲೀಸ್ ವಶಕ್ಕೆ – Kannada News | Doddaballapura unidentified drone found during hindu samajotsava locals alarmed

ದೇವನಹಳ್ಳಿ, ಜನವರಿ 29: ಅಪರಿಚಿತ ಡ್ರೋನ್​​ವೊಂದು (drone) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapura) ನಗರದ ಪಾಲನಜೋಗಹಳ್ಳಿಯಲ್ಲಿ ಪತ್ತೆ ಆಗಿದೆ. ಖಾಲಿ ಜಮೀನಿನಲ್ಲಿ‌‌ ಬಿದ್ದಿದ್ದ ಡ್ರೋನ್​ ಕಂಡು ಸ್ಥಳೀಯರಲ್ಲಿ ಆತಂಕ ಮೂಡಿದೆ. ಸದ್ಯ ಡ್ರೋನ್​ ಪರಿಶೀಲನೆ ಮಾಡಿದ ಪೊಲೀಸ್​ ಅಧಿಕಾರಿಗಳು, ಬಳಿಕ ವಶಕ್ಕೆ ಪಡೆದುಕೊಂಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸಿದ್ದಾರೆ.​​​​​

ವಿಮಾನ ಮಾದರಿಯ ಡ್ರೋನ್ ಪತ್ತೆ

ದೊಡ್ಡಬಳ್ಳಾಪುರ ನಗರದ ಪಾಲನಜೋಗಹಳ್ಳಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ನಡೆಯುತ್ತಿದ್ದ ವೇಳೆ ವಿಮಾನ ಮಾದರಿಯ ಡ್ರೋನ್ ಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಮನೆ ಸಮೀಪ ಡ್ರೋನ್ ಬಿದ್ದಿರುವುದನ್ನು ಕಂಡ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದುರಂತಗಳು ಸಂಭವಿಸಿದ್ರೂ ಎಚ್ಚೆತ್ತುಕೊಳ್ಳದ ಬಸ್​​ ಮಾಲೀಕರು: ಸ್ಲೀಪರ್ ಕೋಚ್​​​ನಲ್ಲಿ ಗೂಡ್ಸ್ ಸಾಗಾಟ, ಬಸ್ ಸೀಜ್

ಬ್ಯಾಟರಿಗಳು ಸೇರಿದಂತೆ ಎಲೆಕ್ಟ್ರಿಕ್ ವೈರ್‌ಗಳು ಜೋಡಿಸಲ್ಪಟ್ಟಿದ್ದ ಡ್ರೋನ್ ಪತ್ತೆಯಾಗಿದ್ದು, ಡ್ರೋನ್‌ನಲ್ಲಿ ಯಾವುದೇ ಸ್ಪೋಟಕ ವಸ್ತುಗಳಿವೆಯೇ ಎಂಬ ಬಗ್ಗೆ ಪೊಲೀಸ್ ಎಕ್ಸ್‌ಪರ್ಟ್ಸ್ ತಂಡ ಸ್ಥಳಕ್ಕೆ ಆಗಮಿಸಿ ಸುಮಾರು ಎರಡು-ಮೂರು ಗಂಟೆಗಳ ಕಾಲ ಸೂಕ್ಷ್ಮ ಪರಿಶೀಲನೆ ಮಾಡಿದ್ದಾರೆ. ಬಳಿಕ ಡ್ರೋನ್​​ ವಶಕ್ಕೆ  ಪಡೆದುಕೊಂಡಿದ್ದಾರೆ. ಡ್ರೋನ್ ಎಲ್ಲಿಂದ ಬಂತ್ತು, ಯಾರಿಗೆ ಸೇರಿದೆ ಮತ್ತು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ. ಸದ್ಯ ನಗರದಲ್ಲಿ ಹಿಂದೂ ಸಮಾಜೋತ್ಸವದ ಶೋಭಾಯಾತ್ರೆ ಹಿನ್ನೆಲೆ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಕಾರಿನ ಸನ್‌ರೂಫ್‌ ಓಪನ್ ಮಾಡಿ ಮಕ್ಕಳನ್ನು ಕೂರಿಸಿ ಚಾಲನೆ: 1000 ರೂ. ದಂಡ

ಕಾರಿನ ಸನ್‌ರೂಫ್‌ ಓಪನ್ ಮಾಡಿ ಮಕ್ಕಳನ್ನು ಕೂರಿಸಿ ಚಾಲನೆ ಮಾಡಿದ ಕಾರು ಚಾಲಕನಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸಂಚಾರಿ ಪೊಲೀಸರು 1000 ರೂ. ದಂಡ ವಿಧಿಸಿದ್ದಾರೆ. ಘಟನೆಯ ವಿಡಿಯೋ ವೈರಲ್​ ಆಗಿತ್ತು.

ಇದನ್ನೂ ಓದಿ: ಕಾರವಾರ ನೌಕಾನೆಲೆಗೆ ಹಾರಿಬಂದ ಸೀಗಲ್​ ಹಕ್ಕಿಯಲ್ಲಿ ಚೀನಾದ ಜಿಪಿಎಸ್​ ಟ್ರ್ಯಾಕರ್ ಪತ್ತೆ

ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸನ್‌ರೂಫ್‌ ಓಪನ್ ಮಾಡಿ ಕಾರು ಚಾಲನೆ ಮಾಡಲಾಗಿತ್ತು. ವಿಡಿಯೋ ವೈರಲ್​​ ಬೆನ್ನಲ್ಲೇ ಕಾರು ವಶಕ್ಕೆ ಪಡೆದು ದಂಡ ಹಾಕಿ ಕಳಿಸಿದ್ದಾರೆ. ಮತ್ತೊಮ್ಮೆ ಅಪಾಯಕಾರಿಯಾಗಿ ಕಾರು ಚಲಾಯಿಸದಂತೆ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

WPL 2026: 8 ವಿಕೆಟ್​ಗಳಿಂದ ಗೆದ್ದು ನೇರವಾಗಿ ಫೈನಲ್​ಗೆ ಎಂಟ್ರಿಕೊಟ್ಟ ಆರ್​ಸಿಬಿ

ಮಹಿಳಾ ಪ್ರೀಮಿಯರ್ ಲೀಗ್ 2026 ರ 18 ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವೆ ನಡೆಯಿತು. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ತಂಡ ಏಕಪಕ್ಷೀಯ ಗೆಲುವು ದಾಖಲಿಸಿ ನೇರವಾಗಿ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಇತ್ತ ಆರ್​ಸಿಬಿ ವಿರುದ್ಧ ಸೋತ ಯುಪಿ ವಾರಿಯರ್ಸ್​ ಮೊದಲ ತಂಡವಾಗಿ ಅಧಿಕೃತವಾಗಿ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಯುಪಿ ತಂಡ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಆದರೆ ಅದು ಆಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಯುಪಿ ವಾರಿಯರ್ಸ್‌ ಕೇವಲ 143 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Source link

ಮದ್ವೆ ಆರತಕ್ಷತೆಗೆ ತೆರಳುತ್ತಿದ್ದ ವರನಿಗೆ ಚೂರಿ ಇರಿತ: ಯುವತಿಯ ಮಾಜಿ ಲವರ್​​ ಕೃತ್ಯ ಶಂಕೆ – Kannada News | Miscreants Attacks On groom Who Going to marriage reception at kollegal

ಚಾಮರಾಜನಗರ, (ಜನವರಿ 29): ಮದುವೆಯ ಆರತಕ್ಷತೆಗೆ (marriage reception) ತೆರಳುತ್ತಿದ್ದ ವರನ (groom) ಕಾರು ಅಡ್ಡಿಗಟ್ಟಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ (Chamarajnagar) ಜಿಲ್ಲೆ ಕೊಳ್ಳೇಗಾಲದಲ್ಲಿ ನಡೆದಿದೆ. ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್ ನಲ್ಲಿ ಆಯೋಜಿಸಿದ್ದ ಆರತಕ್ಷತೆ  ಕಾರ್ಯಕ್ಕೆ ವರ ರವೀಶ್ ತೆರಳುತ್ತಿದ್ದ ವೇಳೆ ಅಪರಿಚಿತರು ಏಕಾಏಕಿ ದಾಳಿ ಮಾಡಿದ್ದಾರೆ. ಕುಣಗಳ್ಳಿ ಗ್ರಾಮದಿಂದ ಹೋಗುತ್ತಿದ್ದ ವೇಳೆ ವರ ರವೀಶ್ ಕಾರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು, ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಡ್ರ್ಯಾಗರ್​​ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ರವೀಶ್ ಅಟ್ಟಾಡಿಸಿ ಬೆನ್ನಿಗೆ ಚೂರಿಯಿಂದ ಇರಿದು ಎಸ್ಕೇಪ್ ಆಗಿದ್ದಾರೆ.

ಕಲ್ಯಾಣ ಮಂಟಪ್ಪಕ್ಕೆ ಹೋಗುತ್ತಿದ್ದಾಗ ದಾಳಿ

6 ತಿಂಗಳ ಹಿಂದೆ ನಯನ ಎನ್ನುವ ಯುವತಿಯೊಂದಿಗೆ ರವೀಶನ ಮದುವೆ ನಿಶ್ಚಯವಾಗಿತ್ತು. ಅದರಂತೆ ಇಂದು (ಜನವರಿ 29) ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ವೆಂಕಟೇಶ್ವರ್ ಮಹಲ್ ನಲ್ಲಿ ಆಯೋಜಿಸಿದ್ದ ಆರತಕ್ಷತೆ ಆಯೋಜಿಸಲಾಗಿತ್ತು. ಹೀಗಾಗಿ ವರದ ರವೀಶ್,ಕುಣಗಳ್ಳಿ ಗ್ರಾಮದಿಂದಕಾರಿನಲ್ಲಿ ಹೋಗುವ ವೇಳೆ  ಸಿನೀಮಿಯಾ ರೀತಿಯಲ್ಲಿ ದುಷ್ಕರ್ಮಿಗಳು ಅಡ್ಡಹಾಕಿದ್ದಾರೆ. ಬಳಿಕ ನೀನು ಮದ್ವೆ ಮನೆಗಲ್ಲ ಸ್ಮಶಾನಕ್ಕೆ ತೆರಳಬೇಕೆಂದು ಚಾಕು, ಚೂರಿಯಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್​: ಕೊನೆಗೂ JDS ನಾಯಕಿಯ ಪುತ್ರ ಅರೆಸ್ಟ್​​

ಘಟನೆಯಲ್ಲಿ ಎಡಗೈಗೆ ಚಾಕು ತಾಕಿದ್ದರಿಂದ ಸದ್ಯ ರವೀಶ್ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಪಡೆದುತ್ತಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಇನ್ನು ವಧುವಿನ ಮಾಜಿ ಬಾಯ್ ಫ್ರೆಂಡ್ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಕೊಳ್ಳೇಗಾಲ ಪಟ್ಟಣ ಠಾಣಾ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಶೋಧಕಾರ್ಯ ನಡೆಸಿದ್ದಾರೆ.

ಹಲ್ಲೆಗೊಳಗಾದ ಮಧುಮಗ ಹೇಳಿದ್ದೇನು?

ಈ ಬಗ್ಗೆ ರವೀಶ್ ಮಾಧ್ಯಮದವರ ಜತೆ ಮಾತನಾಡಿ, 6 ತಿಂಗಳ ಹಿಂದೆಯಷ್ಟೇ ನನಗೆ ಹೊಸಅಣಗಳ್ಳಿ ಗ್ರಾಮದ ಯುವತಿಯ ಜತೆ ಎಂಗೇಜ್ಮೇಟ್ ಆಗಿತ್ತು. ಜನವರಿ 30 ರಂದು ಮದುವೆ ನಿಶ್ಚಯವಾಗಿದ್ದರಿಂದ ಕಾರಿನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುವಾಗ ಹಿಂಬದಿಯಿಂದ ಮತ್ತೊಂದು ಕಾರಿನಲ್ಲಿ ಬಂದವರು ನನಗೆ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವು ಯಾರು ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಸದ್ಯ ಮದ್ವೆಯಾಗಬೇಕಿದ್ದ ಯುವತಿಯ ಲವರ್​​​​ ಈ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯದ ಅಸಲಿಯತ್ತು ಬಯಲಿಗೆ ಬರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:16 pm, Thu, 29 January 26

Source link

ಮಹಾರಾಷ್ಟ್ರದ ಮುಂದಿನ ಉಪಮುಖ್ಯಮಂತ್ರಿಯಾಗುತ್ತಾರಾ ಸುನೇತ್ರಾ ಪವಾರ್? ಶುರುವಾಯ್ತು ಬಿಸಿ-ಬಿಸಿ ಚರ್ಚೆ – Kannada News | Ajit Pawar Wife Sunetra Pawar for Deputy CM praful Patel and Bhujbal meet adds to speculation

ಪುಣೆ, ಜನವರಿ 29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ವಿಮಾನ ಅಪಘಾತದಲ್ಲಿ ನಿಧನ ಹೊಂದಿದ ನಂತರ ಆ ಸ್ಥಾನಕ್ಕೆ ಯಾರ ನೇಮಕವಾಗುತ್ತದೆ ಎಂಬ ಚರ್ಚೆಗಳು ಶುರುವಾಗಿವೆ. ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಎನ್‌ಸಿಪಿಯ ನಾಯಕತ್ವ ವಹಿಸಿಕೊಳ್ಳುವುದರ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆಯನ್ನೂ ಅಲಂಕರಿಸಬೇಕೆಂದು ಎನ್‌ಸಿಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ.

ಮೂಲಗಳ ಪ್ರಕಾರ, ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಸ್ತಾಪವನ್ನು ಮಾಡಲಾಗುವುದು. ಸುನೇತ್ರಾ ಪವಾರ್ ಅವರು ಅಜಿತ್‌ ಪವಾರ್ ಅವರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಪ್ರಫುಲ್ ಪಟೇಲ್ ಎನ್‌ಸಿಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬಹುದು. ಈ ಪ್ರಸ್ತಾಪವನ್ನು ಚರ್ಚಿಸಲು ಎನ್‌ಸಿಪಿ ನಾಯಕರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಈ ಸಮಯದಲ್ಲಿ ಎನ್‌ಸಿಪಿಗಳ ವಿಲೀನದ ಬಗ್ಗೆಯೂ ಚರ್ಚಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಅಜಿತ್ ಪವಾರ್ ಪಕ್ಷದ ಚಿಹ್ನೆಯಾದ ಗಡಿಯಾರವೇ ಅವರ ಸಾವಿಗೆ ಸಾಕ್ಷಿಯಾಯ್ತು!

ಎನ್‌ಸಿಪಿ ನಾಯಕ ಮತ್ತು ಸಚಿವ ನರಹರಿ ಜಿರ್ವಾಲ್ ಕೂಡ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಅಜಿತ್‌ದಾದಾ ಅವರ ಎನ್​ಸಿಪಿ ಮಹಾಯುತಿಯಲ್ಲಿ ಪ್ರಮುಖ ಪಕ್ಷವಾಗಿದೆ. ಈ ಮೈತ್ರಿಕೂಟದಲ್ಲಿ ಏಕನಾಥ್ ಶಿಂಧೆ ಅವರ ಶಿವಸೇನೆ ಕೂಡ ಇದೆ.

ಅಜಿತ್ ಪವಾರ್ ನಂತರ ಸುನೇತ್ರಾ ಪವಾರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಅಜಿತ್‌ದಾದಾ ಅವರ ಬೆಂಬಲಿಗರು ಕೂಡ ಒತ್ತಾಯಿಸಿದ್ದಾರೆ. ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯ ನಂತರ, ಬಾರಾಮತಿಯಲ್ಲಿರುವ ಅಜಿತ್‌ದಾದಾ ಅವರ ಪ್ರೇಮಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುನೇತ್ರಾ ಪವಾರ್ ಇದೀಗ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಅಜಿತ್ ಪವಾರ್ ಅಂತ್ಯಕ್ರಿಯೆ; ಕಣ್ಣೀರಿಡುತ್ತಾ ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್​ಸಿಪಿ) ಮುಖ್ಯಸ್ಥ ಅಜಿತ್ ಪವಾರ್ ಜನವರಿ 28ರಂದು ನಿಧನರಾದರು. ಬಾರಾಮತಿ ವಿಮಾನ ನಿಲ್ದಾಣದ ಬಳಿ ನಡೆದ ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು. ಅಜಿತ್ ಪವಾರ್ ಸೇರಿದಂತೆ ಐವರು ಈ ವಿಮಾನದ ಅಪಘಾತದಲ್ಲಿ ಸಾವನ್ನಪ್ಪಿದರು. ಇಂದು ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ಮಾಡಲಾಯಿತು. ಈ ಸಮಯದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಗೃಹ ಸಚಿವ ಅಮಿತ್ ಶಾ ಮತ್ತು ಇತರ ಅನೇಕ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:55 pm, Thu, 29 January 26

Source link

ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಟ್ಟಿದ್ದು ಸಾಕು ಎಂದ ಯುಜ್ವೇಂದ್ರ ಚಾಹಲ್ – Kannada News | Sanju Samson’s T20 WC Woes: Chahal Slams Poor Form; Ishan Kishan Awaits Opportunity

ಯುಜುವೇಂದ್ರ ಚಾಹಲ್ ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಬಗ್ಗೆ ಹೇಳಿಕೆ ನೀಡಿದ್ದು, ಸಂಜು ಸ್ಯಾಮ್ಸನ್ ಅವರ ವೈಫಲ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ‘ಒಂದು ಅಥವಾ ಎರಡು ಪಂದ್ಯಗಳಲ್ಲಿ ವಿಫಲರಾಗುವುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ, ಆದರೆ ನಾಲ್ಕು ಪಂದ್ಯಗಳಲ್ಲಿ ಅಲ್ಲ. ಸಂಜು ಸ್ಯಾಮ್ಸನ್ 10-12 ವರ್ಷಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಒತ್ತಡವು ಅವರಿಗೆ ಒಂದು ನೆಪವಾಗಬಾರದು’ ಎಂದು ಚಾಹಲ್ ಹೇಳಿದ್ದಾರೆ

Source link

ಬೆಂಗಳೂರು: 4 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌ – Kannada News | Bengaluru: KP Agrahara Inspector Caught by Lokayukta while accepting a bribe of Rs 4 lakh

ಇನ್ಸ್‌ಪೆಕ್ಟರ್ ಗೋವಿಂದರಾಜುImage Credit source: tv9 kannada

ಬೆಂಗಳೂರು, ಜನವರಿ 29: 4 ಲಕ್ಷ ರೂ. ಲಂಚ (bribe) ಸ್ವೀಕರಿಸುವಾಗ ಇನ್ಸ್‌ಪೆಕ್ಟರ್‌ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಕೆ.ಪಿ.ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್ ಗೋವಿಂದರಾಜು ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌. ಲೋಕಾಯುಕ್ತ ಎಸ್​ಪಿ ಶಿವಪ್ರಕಾಶ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಸದ್ಯ ಇನ್ಸ್‌ಪೆಕ್ಟರ್​​ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕೇಸ್‌ನಲ್ಲಿ ಸೇರಿಸುವುದಾಗಿ ಬೆದರಿಸಿ ಲಂಚಕ್ಕೆ ಬೇಡಿಕೆ

ಚೀಟಿ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಪ್ರಕರಣದಲ್ಲಿ ಸೇರಿಸುವುದಾಗಿ ಬೆದರಿಸಿ ಇನ್ಸ್‌ಪೆಕ್ಟರ್ ಗೋವಿಂದರಾಜು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ 4 ಲಕ್ಷ ರೂ. ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದ ಇನ್ಸ್‌ಪೆಕ್ಟರ್ ಗೋವಿಂದರಾಜು, ಮೈಸೂರು ರಸ್ತೆಯ ಸಿರಸಿ ಸರ್ಕಲ್ ಸಮೀಪದ ಸಿಎಆರ್ ಗ್ರೌಂಡ್ ಬಳಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಅಕ್ರಮವಾಗಿ ಗಾಂಜಾ ಸಾಗಾಟ: 8 ಲಕ್ಷ ರೂ ಮೌಲ್ಯದ ಗಾಂಜಾ ವಶಕ್ಕೆ

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಮುಳಬಾಗಿಲು ಉಪ ವಿಭಾಗದ ವಿಶೇಷ ಪೊಲೀಸ್ ತಂಡ ಯಶಸ್ವಿಯಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಹೊರವಲಯದ ಚಿಂತಾಮಣಿ ರಸ್ತೆಯ ಕೊಳ್ಳೂರು ಕಾಲೋನಿ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಬೆಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿಯ ಇಬ್ಬರು ಇಂಜಿನಿಯರ್​ಗಳು

ಆರೋಪಿಗಳಿಂದ ಸುಮಾರು 8 ಲಕ್ಷ ರೂ ಮೌಲ್ಯದ 10 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿತ್ತು. ಆಂಧ್ರ ಪ್ರದೇಶದಿಂದ ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಣೆಯಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಈ ದಾಳಿ ನಡೆಸಿ ಬಂಧಿಸಿದ್ದರು. ಬಂಧಿತರನ್ನು ಆಂಧ್ರ ಮೂಲದ ನಾಗರಾಜ, ಗಂಟಾ ಭಾಗ್ಯಮ್ಮ, ಪಿಡುಗು ನಾಗೇಂದ್ರ ಮತ್ತು ಚರಳ ರವಣಪ್ಪ ಎಂದು ಗುರುತಿಸಲಾಗಿತ್ತು. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Viral Video: ಇಂಜಿನಿಯರ್, ಡಾಕ್ಟರನ್ನೆಲ್ಲ ನೂಕಾಚೆ ದೂರ! ಮ್ಯಾಗಿ ಮಾಡಿ ದಿನಕ್ಕೆ 21,000 ರೂ. ಗಳಿಸಿದ ಯುವಕ – Kannada News | Content creator sells maggi in hill station earned 21000 rs for one Day netizens shocked watch video

ನವದೆಹಲಿ, ಜನವರಿ 29: ಯಾವುದೇ ಒಂದು ಬ್ಯುಸಿನೆಸ್ ಮಾಡಬೇಕೆಂದರೂ ಮೊದಲು ಆ ಜಾಗದಲ್ಲಿ ಯಾವುದರ ಅಗತ್ಯ ಜಾಸ್ತಿಯಿದೆ ಅಥವಾ ಯಾವುದರ ಪೂರೈಕೆ ಕಡಿಮೆಯಿದೆ ಎಂಬುದನ್ನು ಅಧ್ಯಯನ ಮಾಡುವುದು ಬಹಳ ಮುಖ್ಯ. ಇದು ಗೊತ್ತಾಯಿತೆಂದರೆ ಅರ್ಧ ಬ್ಯುಸಿನೆಸ್ ಗೆದ್ದಂತೆ. ಹಿಮಾಚಲ ಪ್ರದೇಶದಲ್ಲಿ ಪ್ರವಾಸಕ್ಕೆ ಹೋಗಿದ್ದ ಕಂಟೆಂಟ್ ಕ್ರಿಯೇಟರ್ ಒಬ್ಬ ಒಂದು ದಿನಕ್ಕೆ ಅಲ್ಲಿ ಎಷ್ಟು ಮ್ಯಾಗಿ (Maggi) ಮಾರಾಟವಾಗುತ್ತದೆ ಎಂದು ನೋಡುವ ಕುತೂಹಲದಿಂದ ಒಂದು ದಿನ ಮ್ಯಾಗಿ ಮಾಡಿ ಮಾರಾಟ ಮಾಡಿದ್ದಾನೆ.

ಕಂಟೆಂಟ್ ಕ್ರಿಯೇಟರ್ ಹಿಲ್ ಸ್ಟೇಷನ್​​ನಲ್ಲಿ ಮ್ಯಾಗಿ ಸ್ಟಾಲ್ ಸ್ಥಾಪಿಸುವುದರಿಂದ ಎಷ್ಟು ಹಣ ಗಳಿಸಬಹುದು ಎಂದು ತಿಳಿಯಲು, ಮ್ಯಾಗಿ ಸ್ಟಾಲ್ ಹಾಕಿದ್ದಾನೆ. ಆತ ಒಂದು ದಿನಕ್ಕೆ ಸಂಪಾದಿಸಿದ ಹಣವೆಷ್ಟು ಎಂದು ಕೇಳಿದರೆ ನೀವು ಶಾಕ್ ಆಗುತ್ತೀರಿ. ಹಿಮಾಲಯದಲ್ಲಿ ಮ್ಯಾಗಿ ಮಾರಾಟ ಮಾಡುವ ಮೂಲಕ ದಿನಕ್ಕೆ 21,000 ರೂ. ಗಳಿಸಿದ ಯುವಕ ಬಾದಲ್ ಠಾಕೂರ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ರೈಲಿನೊಳಗೆ ಮ್ಯಾಗಿ ಬೇಯಿಸಿ, ಚಹಾ ಮಾಡಿದ ಮಹಿಳೆ! ರೈಲ್ವೆ ಇಲಾಖೆ ಎಚ್ಚರಿಕೆ

ಪ್ರವಾಸಿಗರ ಬೇಡಿಕೆಯನ್ನು ಗುರುತಿಸಿ ಶೀತ ವಾತಾವರಣದಲ್ಲಿ ಬಿಸಿ ಮ್ಯಾಗಿಯನ್ನು ಮಾರಾಟ ಮಾಡಿದ ಆತನ ಪ್ರಯೋಗವು ಸೂಪರ್ ಸಕ್ಸಸ್ ಆಗಿದೆ. ಒಂದು ದಿನಕ್ಕೆ ಮ್ಯಾಗಿ ಮಾರಾಟ ಮಾಡಿ 21,000 ರೂ. ಸಂಪಾದಿಸಿದ್ದಾನೆಂದರೆ ಒಂದು ತಿಂಗಳಿಗೆ ಅಲ್ಲಿರುವ ಮ್ಯಾಗಿ ವ್ಯಾಪಾರಿಗಳ ಆದಾಯ ಇಂಜಿನಿಯರ್​​ಗಳಿಗಿಂತ ದುಪ್ಪಟ್ಟಾಯಿತಲ್ಲ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಬಾದಲ್ ಠಾಕೂರ್ ಪರ್ವತಗಳಲ್ಲಿ ಸಣ್ಣದೊಂದು ಮ್ಯಾಗಿ ಸ್ಟಾಲ್ ಹಾಕಿದ್ದ. ಕೇವಲ ಒಂದು ಟೇಬಲ್, ಒಂದು ಎಲ್‌ಪಿಜಿ ಸಿಲಿಂಡರ್, ಕೆಲವು ಪಾತ್ರೆಗಳನ್ನು ಇಟ್ಟುಕೊಂಡು ಒಂದು ಟಾರ್ಪಲ್ ಹಾಕಿಕೊಂಡು ಸ್ಟಾಲ್ ಹಾಕಿದ್ದ. ತಂಪಾದ ಸ್ಥಳದಲ್ಲಿ ಬಿಸಿ ಮ್ಯಾಗಿ ಎಷ್ಟು ಮಾರಾಟವಾಗುತ್ತದೆ ಎಂದು ನೋಡುವುದು ಅವನ ಉದ್ದೇಶವಾಗಿತ್ತು. ಈ ವೇಳೆ ಬಾದಲ್ ಠಾಕೂರ್ ಒಂದು ದಿನದಲ್ಲಿ 300ಕ್ಕೂ ಹೆಚ್ಚು ಮ್ಯಾಗಿ ಪ್ಲೇಟ್‌ಗಳನ್ನು ಮಾರಾಟ ಮಾಡಿದ್ದಾನೆ. ಕೇವಲ ನಾಲ್ಕೈದು ಗಂಟೆಗಳಲ್ಲಿ ಸುಮಾರು 200 ಪ್ಲೇಟ್‌ಗಳು ಮಾರಾಟವಾದವು. ಇಡೀ ದಿನದ ಒಟ್ಟು ಪ್ಲೇಟ್‌ಗಳು 300ರಿಂದ 350ರವರೆಗೆ ತಲುಪಿದವು.

ಇದನ್ನೂ ಓದಿ: ಮಗನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕತ್ತಿಯಿಂದ ಕೊಚ್ಚಿ ಕೊಂದ ರೈತ

ಆತ ಒಂದು ಪ್ಲೇಟ್ ಪ್ಲೇನ್ ಮ್ಯಾಗಿಯನ್ನು 70 ರೂ.ಗೆ ಮಾರಾಟ ಮಾಡಿದ್ದರೆ, ಪನೀರ್ ಮ್ಯಾಗಿಯನ್ನು 100 ರೂ.ಗೆ ಮಾರಾಟ ಮಾಡಿದ್ದ. ಪ್ರತಿ ಪ್ಲೇಟ್‌ಗೆ ಸರಾಸರಿ 70 ರೂ. ಬೆಲೆ ಇದ್ದರೂ, ಒಟ್ಟು ದೈನಂದಿನ ಮಾರಾಟ ಸುಮಾರು 21,000 ಆಗಿತ್ತು. ಈ ಅಂಕಿ ಅಂಶವು ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಅತ್ಯಂತ ಆಶ್ಚರ್ಯಗೊಳಿಸಿದೆ. ಆತ ತನ್ನ ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವೀಡಿಯೊ ಈಗ ವೈರಲ್ ಆಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:33 pm, Thu, 29 January 26

Source link

ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್​: ಕೊನೆಗೂ JDS ನಾಯಕಿಯ ಪುತ್ರ ಅರೆಸ್ಟ್​​ – Kannada News | Karwar: Rishala DSouza Suicide Case; JDS Leader Son Chirag Kotharkar Arrested

ಆರೋಪಿ ಚಿರಾಗ್​​ ಕೊಠಾರಕರ್, ರಿಶೇಲ್ ಡಿಸೋಜಾImage Credit source: tv9 kannada

ಕಾರವಾರ, ಜನವರಿ 29: ಕಾರವಾರ ತಾಲೂಕಿನ ಕದ್ರಾ ಗ್ರಾಮದ ರಿಶೇಲ್ ಡಿಸೋಜಾ (Rishala D’Souza) ಆತ್ಮಹತ್ಯೆ ಪ್ರಕರಣ ಎರಡು ಗ್ರಾಮಗಳ ವೈಮನಸ್ಸಿಗೆ ಕಾರಣವಾಗಿದಲ್ಲದೇ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕ್ರಿಶ್ಚಿಯನ್ ಸಮುದಾಯ ಸಿಡಿದೆದ್ದಿತ್ತು. ಯುವಕನ ಬಂಧನಕ್ಕೆ ಆಗ್ರಹಿಸಿ ಕಾರವಾರದಲ್ಲಿ ಪ್ರತಿಭಟನೆ ನಡೆದಿತ್ತು. ಇದೀಗ ಕೊನೆಗೂ JDS ಸ್ಥಳೀಯ ನಾಯಕಿ ಚೈತ್ರಾ ಕೋಠಾರಕರ್​​ ಪುತ್ರ ಆರೋಪಿ ಚಿರಾಗ್​​ನನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ (Arrest).

ಘಟನೆ ಹಿನ್ನೆಲೆ 

ಉತ್ತರ ಕನ್ನಡದ ಕಾರವಾರದಲ್ಲಿ ಜೆಡಿಎಸ್ ಸ್ಥಳೀಯ ನಾಯಕಿ ಪುತ್ರ ಚಿರಾಗ್​ ಕಿರುಕುಳದಿಂದ ನೊಂದಿದ್ದ ರಿಶೇಲ್ ಡಿಸೋಜಾ ಜನವರಿ 9ರಂದು ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮಗಳನ್ನ ಪ್ರಿತಿಸುವಂತೆ ಚಿರಾಗ್ ಪಿಡಿಸುತ್ತಿದ್ದ ಎಂದು ಮೃತಳ ತಂದೆ ಕ್ರಿಸ್ತೋದ ಡಿಸೋಜಾ ಅವರು ಜನವರಿ 10 ರಂದು ಕದ್ರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ರಿಶೇಲ್ ಡಿಸೋಜಾ ಆತ್ಮಹತ್ಯೆ ಕೇಸ್​: ಶವ ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ; ಕಾರಣ ಇಲ್ಲಿದೆ

ಮಗಳ ದೇಹದ ಮೇಲೆ ಕಚ್ಚಿದ ಮಾರ್ಕ್ ಇರುವುದನ್ನು ಕಂಡು ತಂದೆ ಅತ್ಯಾಚಾರದ ಅನುಮಾನ ವ್ಯಕ್ತಪಡಿಸಿದ್ದರು. ಅತ್ತ ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದಂತೆ, ಇತ್ತ ಆರೋಪಿ ಚಿರಾಗ್ ತನ್ನ ತಂದೆ-ತಾಯಿ ಜೊತೆ ನಾಪತ್ತೆ ಆಗಿದ್ದ. 20 ದಿನಗಳಿಂದ ಆರೋಪಿಗಾಗಿ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ತನ್ನ ಅಂಕಲ್ ಜತೆ ಚೆನ್ನೈನಲ್ಲಿದ್ದ ಚಿರಾಗ್​​ನನ್ನು​ ಇದೀಗ ಬಂಧಿಸಿದ್ದಾರೆ.

ಇದನ್ನೂ ಓದಿ: JDS ಮುಖಂಡೆ ಪುತ್ರನ ಕಿರುಕುಳಕ್ಕೆ ರಿಶೇಲ ಡಿಸೋಜಾ ಆತ್ಮಹತ್ಯೆ: ಸಿಡಿದೆದ್ದ ಕ್ರಿಶ್ಚಿಯನ್ ಸಮುದಾಯ

ಇನ್ನು ಇಂದು ಕಾರವಾರ ಜಿಲ್ಲಾ ನ್ಯಾಯಲಯದಲ್ಲಿ ಪ್ರಕರಣದ ಅರ್ಜಿ ವಿಚಾರಣೆ ನಡೆದಿತ್ತು. ಆರೋಪಿ ಪರ ವಕೀಲ ನಾಗರಾಜ್ ನಾಯ್ಕ್​​ ಸುಮಾರು 2500 ಪುಟಗಳ ಚಾಟಿಂಗ್ ಲಿಸ್ಟ್ ಸೇರಿದಂತೆ ಹತ್ತಾರು ದಾಖಲೆಗಳನ್ನು ಕೋರ್ಟ್​ಗೆ ಸಲ್ಲಿಸಿದ್ದರು. ಆರೋಪಿ ಚಿರಾಗ್​​ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಆದರೆ ಅಷ್ಟರಲ್ಲಿ ತಿರ್ಪು ಕಾಯ್ದಿರಿಸಿ ಜನವರಿ 31ಕ್ಕೆ ಮುಂದೂಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೇಲ್ ಮೇಲೆ ಜೈಲಿನಿಂದ ಬಿಡುಗಡೆಗೊಂಡ ಕೈ ಶಾಸಕ ವಿರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್ – Kannada News | Illegal Betting Case: ED attaches Chitradurga Congress MLA KC Veerendra Puppy property worth Rs 177 crore

ಬೆಂಗಳೂರು/ಚಿತ್ರದುರ್ಗ, (ಜನವರಿ 29): ಅಕ್ರಮ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ (Illegal Betting Case) ಸಂಬಂಧಿಸಿದಂತೆ ಚಿತ್ರದುರ್ಗ ಕಾಂಗ್ರೆಸ್ ಶಾಸಕ  ಕೆ.ಸಿ. ವಿರೇಂದ್ರ ಪಪ್ಪಿಗೆ (KC Veerendra Puppy )ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ. ಈ ಹಿಂದೆ ದಾಳಿ ವೇಳೆ ಸಿಕ್ಕಿದ್ದ ಕೋಟ್ಯಾಂತರ ರೂಪಾಯಿ ನಗದು ಹಣ ಹಾಗೂ ಚಿನ್ನ, ಬೆಳ್ಳಿ ವಶಕ್ಕೆ ಪಡೆದುಕೊಂಡಿತ್ತು. ಇದೀಗ ವಿರೇಂದ್ರ ಪಪ್ಪಿಗೆ ಸೇರಿದ ಕೃಷಿ ಜಮೀನು, ನಿವೇಶನ ಸೇರಿ ಇತರೆ  ಒಟ್ಟು 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದೆ. ಈ ಮೂಲಜ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಖುಷಿಯಲ್ಲಿದ್ದ ವಿರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್ ಕೊಟ್ಟಿದೆ.

ಆನ್​ಲೈನ್​ ಬೆಟ್ಟಿಂಗ್ ಹಗರಣ ಸಂಬಂಧ ಇಡಿ ಅಧಿಕಾರಿಗಳು ವಿರೇಂದ್ರ ಪಪ್ಪಿ ಮನೆಗಳ ಮೇಲೆ ದಾಳಿ ಮಾಡಿತ್ತು. ಆಗ ವಿರೇಂದ್ರ ಪಪ್ಪಿ ಅವರನ್ನು ಬಂಧಿಸಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿತ್ತು. ಇದೀಗ ಮತ್ತೆ ಸಿ ಅಕ್ರಮ ಹಣದಿಂದ ಸಂಪಾದನೆ ಮಾಡಿದ ಕೃಷಿ ಜಮೀನು, ನಿವೇಶನ ಸೇರಿ 177.3 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ.

ಇದನ್ನೂ ಓದಿ: ಚಿತ್ರದುರ್ಗ ಕೈ ಶಾಸಕ ವಿರೇಂದ್ರ ಪಪ್ಪಿ ಖಜಾನೆಯನ್ನೇ ತೆರೆದಿಟ್ಟ ಇಡಿ: ಲಕ್ಸುರಿ ಕಾರು, ಚಿನ್ನಾಭರಣ ಪತ್ತೆ

ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಆನ್ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ತನಿಖೆ ವೇಳೆ ಹಗರಣದಲ್ಲಿ ಕೆ.ಸಿ.ವೀರೇಂದ್ರ ಮತ್ತು ಸಹಚರರು ಮಾಸ್ಟರ್ ಮೈಂಡ್ ಎನ್ನುವುದು ಗೊತ್ತಾಗಿದೆ. ಅಲ್ಲದೇ ನೂರಾರು ಮ್ಯೂಲ್ ಅಕೌಂಟ್ ಬಳಸಿ ಅಕ್ರಮ ಹಣ ವರ್ಗಾವಣೆ ಪತ್ತೆಯಾಗಿದೆ. ತನಿಖೆ ವೇಳೆ ಸಿಕ್ಕ ಈ ಎಲ್ಲಾ ಸಾಕ್ಷ್ಯಗಳ ಆಧಾರದ ಮೇಲೆ ಕೆ ಸಿ ವೀರೇಂದ್ರ ಆಸ್ತಿ ಜಪ್ತಿ ಮಾಡಲಾಗಿದೆ.

ಈ ಹಿಂದೆ ಪ್ರಕರಣ ಸಂಬಂಧ 60ಕ್ಕೂ ಹೆಚ್ಚು ಸ್ಥಳದಲ್ಲಿ ದಾಳಿ ನಡೆಸಿದ್ದ ಇಡಿ, ಚಿನ್ನ,ನಗದು,ಬೆಳ್ಳಿ, ವಾಹನಗಳನ್ನ ವಶಪಡಿಸಿಕೊಂಡಿತ್ತು. ಒಟ್ಟಾರೆ ಪ್ರಕರಣದಲ್ಲಿ ಇಲ್ಲಿವರೆಗೂ 320 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಇನ್ನು ಹಗರಣದಲ್ಲಿ 2,300 ಕೋಟಿ ರೂಪಾಯಿ ಅಧಿಕ ಅಕ್ರಮ ನಡೆದಿರುವುದು ಪತ್ತೆಯಾಗಿದ್ದು, ಈ ಸಂಬಂಧ ಇಡಿ ತನಿಖೆ ಮುಂದುವರೆಸಿದೆ.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PAK vs AUS: ಪಾಕಿಸ್ತಾನದ ವಿರುದ್ಧ ಸೋತ ಆಸ್ಟ್ರೇಲಿಯಾ – Kannada News | Pakistan Dominates Australia in 1st T20, Secures 1 0 Series Lead and Boosts World Cup Hopes

ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ (Pakistan vs Australia) ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಿದೆ. ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಭರ್ಜರಿ ಜಯ ಸಾಧಿಸಿದೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಪ್ರವಾಸಿ ತಂಡವನ್ನು 56 ರನ್‌ಗಳಿಂದ ಸೋಲಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಈ ಗೆಲುವು ಟಿ0 ವಿಶ್ವಕಪ್‌ಗೆ ಸಿದ್ಧತೆಯಲ್ಲಿರುವ ಪಾಕಿಸ್ತಾನದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪಾಕಿಸ್ತಾನ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಅದ್ಭುತ ಪ್ರದರ್ಶನ ನೀಡಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಿತು.

168 ರನ್ ಕಲೆಹಾಕಿದ ಪಾಕಿಸ್ತಾನ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ತಂಡದ ಪರ ಸ್ಯಾಮ್ ಅಯೂಬ್ 22 ಎಸೆತಗಳಲ್ಲಿ 40 ರನ್ ಗಳಿಸಿ, ನಾಯಕ ಸಲ್ಮಾನ್ ಆಘಾ ಅವರೊಂದಿಗೆ ಎರಡನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಸಲ್ಮಾನ್ ಆಘಾ ಕೂಡ 39 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ಮಧ್ಯಮ ಓವರ್‌ಗಳಲ್ಲಿ ರನ್ ವೇಗ ನಿಧಾನವಾಯಿತು. ಟಿ20 ತಂಡಕ್ಕೆ ಮರಳಿದ ಬಾಬರ್ ಆಝಂ 20 ಎಸೆತಗಳಲ್ಲಿ ಕೇವಲ 24 ರನ್ ಗಳಿಸಿದರೆ, ಉಸ್ಮಾನ್ ಖಾನ್ 18 ರನ್‌ಗಳ ಕೊಡುಗೆ ನೀಡಿದರು ಮತ್ತು ಮೊಹಮ್ಮದ್ ನವಾಜ್ 15 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು.

ಆಸ್ಟ್ರೇಲಿಯಾ ಪರ ಆಡಮ್ ಜಂಪಾ ಅದ್ಭುತ ಪ್ರದರ್ಶನ ನೀಡಿ 4 ಓವರ್‌ಗಳಲ್ಲಿ 24 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದರೆ, ಕ್ಸೇವಿಯರ್ ಬಾರ್ಟ್ಲೆಟ್ ಮತ್ತು ಮಹ್ಲಿ ಬಿಯರ್ಡ್‌ಮನ್ ತಲಾ 2 ವಿಕೆಟ್‌ಗಳನ್ನು ಪಡೆದು ಪಾಕಿಸ್ತಾನ ದೊಡ್ಡ ಮೊತ್ತವನ್ನು ದಾಖಲಿಸದಂತೆ ತಡೆದರು. ಆದಾಗ್ಯೂ, ಈ ಸ್ಕೋರ್ ಗೆಲುವಿನ ಮೊತ್ತವಾಗಿ ಸಾಬೀತಾಯಿತು.

ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸೊನ್ನೆ ಸುತ್ತಿದ ಪಾಕ್ ಆರಂಭಿಕರು

ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಫಲ

169 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾದ ಇನ್ನಿಂಗ್ಸ್ ಸಂಪೂರ್ಣವಾಗಿ ಕುಸಿಯಿತು. ಇಡೀ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ ಕೇವಲ 146 ರನ್‌ಗಳಿಸಲಷ್ಟೇ ಶಕ್ತವಾಗಿ ಪಂದ್ಯವನ್ನು 22 ರನ್‌ಗಳಿಂದ ಸೋತಿತು. ಕ್ಯಾಮರೂನ್ ಗ್ರೀನ್ ಆಸ್ಟ್ರೇಲಿಯಾ ಪರ ಗರಿಷ್ಠ ಸ್ಕೋರರ್ 36 ರನ್‌ಗಳಿಸಿದರೆ, ಕ್ಸೇವಿಯರ್ ಬಾರ್ಟ್ಲೆಟ್ 34 ರನ್‌ಗಳ ಕೊಡುಗೆ ನೀಡಿದರು. ಟ್ರಾವಿಸ್ ಹೆಡ್ ಕೂಡ ಕೇವಲ 23 ರನ್‌ ಬಾರಿಸಿದರು. ಆದಾಗ್ಯೂ, ಆಸ್ಟ್ರೇಲಿಯಾ ತಮ್ಮ ಇನ್ನಿಂಗ್ಸ್‌ನಲ್ಲಿ 48 ಡಾಟ್ ಬಾಲ್‌ಗಳನ್ನು ಮಾಡಿದ್ದು, ಸೋಲಿಗೆ ಪ್ರಮುಖ ಕಾರಣವಾಯಿತು.

ಪಾಕಿಸ್ತಾನ ಪರ ಅಬ್ರಾರ್ ಅಹ್ಮದ್ ಅದ್ಭುತ ಬೌಲಿಂಗ್ ಮಾಡಿ ನಾಲ್ಕು ಓವರ್‌ಗಳಲ್ಲಿ ಕೇವಲ 10 ರನ್ ನೀಡಿ ಎರಡು ವಿಕೆಟ್ ಪಡೆದರು. ಸ್ಯಾಮ್ ಅಯೂಬ್ ಕೂಡ ಎರಡು ವಿಕೆಟ್ ಪಡೆದರೆ, ಶದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಗಣನೀಯ ಕೊಡುಗೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:36 pm, Thu, 29 January 26

Source link