All posts by nagaraj11081993

Vastu Tips: ಗಂಡ- ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು ಯಾಕೆ ಗೊತ್ತಾ? – Kannada News | Vastu Eating Rules: Avoid Shared Plates and Bed Eating for Home Harmony and Prosperity

ವಾಸ್ತು ಶಾಸ್ತ್ರದ ಪ್ರಕಾರ, ಆಹಾರವು ಕೇವಲ ದೇಹವನ್ನು ಪೋಷಿಸುವುದಷ್ಟೇ ಅಲ್ಲ, ಅದು ನಮ್ಮ ಜೀವನಶಕ್ತಿಯ ಮೂಲವೂ ಹೌದು. ನಾವು ತಿನ್ನುವ ಪ್ರತಿಯೊಂದು ಆಹಾರವೂ ನಮ್ಮ ಶಕ್ತಿಯನ್ನು, ಮನಸ್ಸಿನ ಸ್ಥಿತಿಯನ್ನು ಮತ್ತು ಮನೆಯ ವಾತಾವರಣವನ್ನು ಪ್ರಭಾವಿಸುತ್ತದೆ. ಆದರೆ ಅನೇಕರು ಆಹಾರ ಸೇವಿಸುವಾಗ ಕೆಲವು ನಿಯಮಗಳನ್ನು ಪಾಲಿಸುವುದಿಲ್ಲ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಉಂಟಾಗುವ ಸಾಧ್ಯತೆ ಇರುತ್ತದೆ. ಈ ನಕಾರಾತ್ಮಕ ಶಕ್ತಿಯ ಪರಿಣಾಮ ವ್ಯಕ್ತಿಗೆ ಮಾತ್ರವಲ್ಲ, ಇಡೀ ಕುಟುಂಬದ ಮೇಲೆ ಬೀಳುತ್ತದೆ ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಗಂಡ ಮತ್ತು ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡುವುದು ಶುಭಕರವಲ್ಲ. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಿ, ಅನಾವಶ್ಯಕ ಕಲಹಗಳು ಮತ್ತು ಅಸಮಾಧಾನಗಳು ಹೆಚ್ಚಾಗಬಹುದು ಎಂದು ನಂಬಲಾಗಿದೆ. ಕುಟುಂಬದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿಯಿರುತ್ತದೆ. ಕುಟುಂಬದ ಮುಖ್ಯಸ್ಥನು ತನ್ನ ಪತ್ನಿಯ ಜೊತೆಗೆ ಮನೆಯ ಎಲ್ಲ ಸದಸ್ಯರ ಕಲ್ಯಾಣವನ್ನು ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಹೊಂದಿರುತ್ತಾನೆ. ಆದರೆ ಗಂಡ-ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ, ಕುಟುಂಬದ ಮುಖ್ಯಸ್ಥನು ಪತ್ನಿಯ ಕಡೆಗೆ ಹೆಚ್ಚು ಗಮನ ನೀಡುತ್ತಾನೆ ಮತ್ತು ಇತರ ಕುಟುಂಬ ಸದಸ್ಯರನ್ನು ನಿರ್ಲಕ್ಷಿಸುವ ಪರಿಸ್ಥಿತಿ ಉಂಟಾಗಬಹುದು. ಇದರಿಂದ ಮನೆಮಾತುಗಳಲ್ಲಿ ಅಸಮತೋಲನ ಉಂಟಾಗಿ, ಕಾರಣವಿಲ್ಲದೆ ಜಗಳಗಳು ಮತ್ತು ಅಶಾಂತಿ ಕಾಣಿಸಿಕೊಳ್ಳಬಹುದು. ಆದ್ದರಿಂದ, ವಾಸ್ತು ಶಾಸ್ತ್ರ ಗಂಡ ಮತ್ತು ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು ಎಂದು ಸಲಹೆ ನೀಡುತ್ತದೆ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!

ಇದೇ ರೀತಿಯಲ್ಲಿ, ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದನ್ನೂ ವಾಸ್ತು ಶಾಸ್ತ್ರ ತಪ್ಪು ಎಂದು ಪರಿಗಣಿಸುತ್ತದೆ. ಆಹಾರವನ್ನು ದೇವರ ಪ್ರಸಾದದಂತೆ ಗೌರವದಿಂದ ಸೇವಿಸಬೇಕು ಎಂಬ ನಂಬಿಕೆ ಇದೆ. ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದನ್ನು ಆಹಾರಕ್ಕೆ ಅವಮಾನವೆಂದು ಭಾವಿಸಲಾಗುತ್ತದೆ. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗಿ, ಆಶೀರ್ವಾದಗಳ ಕೊರತೆ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಇದು ಆರ್ಥಿಕ ತೊಂದರೆಗಳು ಮತ್ತು ಅಸ್ಥಿರತೆಯಿಗೂ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಆದ್ದರಿಂದ, ಆಹಾರ ಸೇವಿಸುವಾಗ ಸರಿಯಾದ ಸ್ಥಳ, ಶಿಸ್ತು ಮತ್ತು ಗೌರವವನ್ನು ಪಾಲಿಸುವುದು ಬಹಳ ಮುಖ್ಯ. ಈ ಸಣ್ಣ ನಿಯಮಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿ, ಕುಟುಂಬದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷ ನೆಲೆಸುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:07 pm, Thu, 29 January 26

Source link

ಅಣ್ಣನಿಗೆ ಕೊನೆಯ ಕರೆ, ಕಿರುಚಾಟ, ಫೋನ್ ಕಟ್, ಮಹಿಳಾ ಪೊಲೀಸ್ ಅಧಿಕಾರಿಯ ಕೊನೇ ಕ್ಷಣ ಏನೇನಾಯ್ತು? – Kannada News | Delhi Cops Death: Husband Taken Into Custody After Confession

ನವದೆಹಲಿ, ಜನವರಿ 29: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಪತಿ ಲೋಹದ ಡಂಬಲ್​ನಿಂದ ಜಜ್ಜಿ ಕೊಲೆ(Murder) ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸಾಯುವ ಮುನ್ನ ಕಾಜಲ್ ಕೊನೆಯ ಕರೆಯನ್ನು ತನ್ನ ಸಹೋದರನಿಗೆ ಮಾಡಿದ್ದರು. ಕರೆ ಮಾಡಿದಾಗ ಆಕೆಯ ಕಿರುಚಾಟವೇ ಕೇಳುತ್ತಿತ್ತು. ಕೂಡಲೇ ಫೋನ್ ಸಂಪರ್ಕವೇ ಕಡಿತಗೊಂಡಿತ್ತು ಎಂದು ಆಕೆಯ ಸಹೋದರ ಮಾಹಿತಿ ನೀಡಿದ್ದಾರೆ.

ಸ್ವ್ಯಾಟ್(SWAT) ಕಮಾಂಡೋ ಆಗಿ ನೇಮಕಗೊಂಡಿದ್ದ 27 ವರ್ಷದ ಅಧಿ ಮಂಗಳವಾರ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪತಿ ಅವರ ಮೇಲೆ ಹಲ್ಲೆ ನಡೆಸಿದ ಬಳಿಕ ಕೆಲ ದಿನಗಳ ಕಾಲ ಅವರು ಬದುಕಿದ್ದರು.

ನೈಋತ್ಯ ದೆಹಲಿಯ ದ್ವಾರಕಾ ಮೋರ್‌ನಲ್ಲಿರುವ ಅವರ ಮನೆಯಲ್ಲಿ ಕಾಜಲ್ ಎಂಬ ಮಹಿಳೆಯ ಮೇಲೆ ಆಕೆಯ ಪತಿ ಅಂಕುರ್ ಚೌಧರಿ (28) ಲೋಹದ ಡಂಬಲ್​ನಿಂದ ಹಲ್ಲೆ ನಡೆಸಿದ್ದು, ಆಕೆಯ ತಲೆಯನ್ನು ಬಾಗಿಲಿನ ಚೌಕಟ್ಟಿಗೆ ಹೊಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಅಂದು ಕೌಟುಂಬಿಕ ವಿಚಾರ ಮತ್ತು ವರದಕ್ಷಿಣೆ ಬಗ್ಗೆ ನಡೆದ ಜಗಳದಲ್ಲಿ ಕಾಜಲ್ ಮೇಲೆ ಹಲ್ಲೆ ನಡೆಸಿದ ನಂತರ ಅಂಕುರ್ ಕಾಜಲ್ ಸಹೋದರ ನಿಖಿಲ್ ಗೆ ಕರೆ ಮಾಡಿದ್ದ ಎನ್ನಲಾಗಿದೆ. ಅಂಕುರ್ ತನ್ನ ಸಹೋದರಿಯನ್ನು ಕೊಂದಿರುವುದಾಗಿ ನಿಖಿಲ್‌ಗೆ ಹೇಳಿದ್ದಾನೆ ಎಂದು ಪೊಲೀಸರು ನಿಖಿಲ್ ಹೇಳಿಕೆಯನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಜನವರಿ 22 ರಂದು ರಾತ್ರಿ 10 ಗಂಟೆ ಸುಮಾರಿಗೆ ಅಂಕುರ್ ತನಗೆ ಕರೆ ಮಾಡಿ ತನ್ನ ಸಹೋದರಿ ತನ್ನೊಂದಿಗೆ ಜಗಳವಾಡುತ್ತಿದ್ದಾಳೆ ಎಂದು ಹೇಳಿದ್ದ,  ಏನಾಯಿತು ಎಂದು ವಿವರಿಸಲು ಕಾಜಲ್ ಫೋನ್ ತೆಗೆದುಕೊಂಡಳು ಆದರೆ ಅಂಕುರ್ ಅದನ್ನು ಕಸಿದುಕೊಂಡಿದ್ದ.

ಸುಮಾರು ಐದು ನಿಮಿಷಗಳ ನಂತರ, ಅಂಕುರ್ ಮತ್ತೆ ಕರೆ ಮಾಡಿ ನಿಖಿಲ್‌ಗೆ ತಂಗಿಯನ್ನು ಕೊಂದಿರುವುದಾಗಿ ತಿಳಿಸಿದ್ದ, ಅಂಕುರ್ ಶವವನ್ನು ತೆಗೆದುಕೊಂಡು  ಹೋಗಿ ಎಂದು ಕೇಳಿದ್ದ.

ಅದಕ್ಕೆ ನಿಖಿಲ್  ಮಧ್ಯರಾತ್ರಿ ದೆಹಲಿಗೆ ಓಡಿ ಬಂದಿದ್ದರು, ಅಷ್ಟರಲ್ಲೇ  ಕುಟುಂಬದವರು ಅಲ್ಲಿಗೆ ಬಂದಿದ್ದರು ಮತ್ತು ಅವರು ಕಾಜಲ್​ರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಅಲ್ಲಿ ವೈದ್ಯರು ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದ್ದರು. ಜನವರಿ 25 ರಂದು, ಅವರನ್ನು ಗಾಜಿಯಾಬಾದ್‌ನ ನೆಹರು ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿ ನಿಧನರಾಗಿದ್ದಾರೆ.

Published On – 3:33 pm, Thu, 29 January 26

Source link

Ajit Pawar Funeral: ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ! – Kannada News | Uncontrolled crowd in Maharashra DCM ajit pawar funeral in Baramati

ಪುಣೆ, ಜನವರಿ 29: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್ (Ajit Pawar) ಅವರ ಅಕಾಲಿಕ ನಿಧನ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಇಂದು ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ವೇಳೆ ಹಿರಿಯ ರಾಜಕೀಯ ನಾಯಕರು, ಪವಾರ್ ಕುಟುಂಬಸ್ಥರು ಮಾತ್ರವಲ್ಲದೆ ಸಾವಿರಾರು ಜನರು ತಮ್ಮ ನೆಚ್ಚಿನ ದಾದಾ ಅಜಿತ್ ಪವಾರ್ ಅವರ ಅಂತ್ಯಕ್ರಿಯೆಯನ್ನು ನೋಡಲು ಆಗಮಿಸಿದ್ದರು. ಅಲ್ಲಿ ಸೇರಿದ್ದವರ ಕಣ್ಣುಗಳು ಕಣ್ಣೀರಿನಿಂದ ತುಂಬಿದ್ದವು. ಅಲ್ಲಿದ್ದ ಪ್ರತಿಯೊಬ್ಬರೂ ಅಜಿತ್ ಪವಾರ್​​ಗಾಗಿ ಕಂಬನಿ ಮಿಡಿಯುತ್ತಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಪವಾರ್ ಅಂತ್ಯಕ್ರಿಯೆ; ಕಣ್ಣೀರಿಡುತ್ತಾ ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ – Kannada News | Ajit Pawar Funeral Deputy CMs sons light the funeral pyre perform last rites

ಪುಣೆ, ಜನವರಿ 29: ಮಹಾರಾಷ್ಟ್ರದ ಡಿಸಿಎಂ ಹಾಗೂ ಎನ್​ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಅವರ ಅಂತ್ಯಕ್ರಿಯೆ ಇಂದು ನೆರವೇರಿದೆ. ನಿನ್ನೆ ಬಾರಾಮತಿಯಲ್ಲಿ ನಡೆದ ವಿಮಾನ ದುರಂತದಲ್ಲಿ ಅವರು ಮೃತಪಟ್ಟಿದ್ದರು. ಅಜಿತ್ ಪವಾರ್ ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಪುಣೆಯ ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಮೈದಾನದಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಅವರ ಪುತ್ರರಾದ ಪಾರ್ಥ್ ಮತ್ತು ಜೇ ತಮ್ಮ ತಂದೆಯ ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ನಡೆಸಿದರು. ಕೇಂದ್ರ ಸಚಿವ ಅಮಿತ್ ಶಾ, ನಿತಿನ್ ಗಡ್ಕರಿ, ಮಹಾರಾಷ್ಟ್ರದ ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ಹಲವರು ಅಂತಿಮ ನಮನ ಸಲ್ಲಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್ – Kannada News | Landlord movie actress Rachita Ram talks about marriage plan

ಖ್ಯಾತ ನಟಿ ರಚಿತಾ ರಾಮ್ ಅವರು ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾದ ಯಶಸ್ಸಿನ ಖುಷಿಯಲ್ಲಿ ಇದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಅದೇ ಖುಷಿಯಲ್ಲಿ ಅವರು ಮದುವೆ (Marriage) ಬಗ್ಗೆ ಮಾತನಾಡಿದ್ದಾರೆ. ‘ಲ್ಯಾಂಡ್​ಲಾರ್ಡ್’ ಸಿನಿಮಾದಲ್ಲಿ ರಚಿತಾ ರಾಮ್ ಅವರಿಗೆ ನಿಂಗವ್ವ ಎಂಬ ಪಾತ್ರ ಇದೆ. ಆ ಪಾತ್ರವನ್ನು ನೋಡಿದ ಮೇಲೆ ನಿಮಗೆ ಮದುವೆ, ಮಕ್ಕಳು ಮಾಡಿಕೊಳ್ಳಬೇಕು ಎನಿಸಿದೆಯಾ ಎಂಬ ಪ್ರಶ್ನೆಗೆ ರಚಿತಾ ಉತ್ತರಿಸಿದ್ದಾರೆ. ‘ಮದುವೆಗೆ ಈ ವರ್ಷ ಪ್ಲ್ಯಾನ್ ಮಾಡುತ್ತಿದ್ದೇನೆ. ಯಾವಾಗ ಆಗಬೇಕೋ ಆವಾಗಲೇ ಅದು ಆಗೋದು. ಯಾರು ನಮ್ಮ ಜೀವನದಲ್ಲಿ ಬರಬೇಕು ಅಂತ ಇರುತ್ತದೋ ಅವರೇ ಬರೋದು. ನಿಂಗವ್ವ ಪಾತ್ರ ತನ್ನ ಕುಟುಂಬವನ್ನು ನೋಡಿಕೊಳ್ಳುವ ಗುಣವನ್ನು ಎಲ್ಲ ಹೆಣ್ಮಕ್ಕಳು ಅಳವಡಿಸಿಕೊಳ್ಳಬೇಕು’ ಎಂದು ರಚಿತಾ ರಾಮ್ (Rachita Ram) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು? – Kannada News | Kj george Clarify about His resignation to Minister Post

ಬೆಂಗಳೂರು, (ಜನವರಿ 29): ಕರ್ನಾಟಕ ಕಾಂಗ್ರೆಸ್ (Karnataka Congress)​ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ವಾ? ಮೊದಲೇ ನಾಯಕತ್ವ ಬದಲಾವಣೆ ವಿಚಾರವಾಗಿ ಎದ್ದಿರುವ ಗೊಂದಲದ ಮಧ್ಯೆ ಸಿಎಂ ಆಪ್ತ ಸಚಿವ ಕೆ.ಜೆ.ಜಾರ್ಜ್ (kj george) ರಾಜೀನಾಮೆ ನೀಡಿದ್ದಾರೆ ಎನ್ನುವ ವಿಚಾರ ಭಾರಿ ಸಂಚಲನ ಮೂಡಿಸಿದೆ. ಹೌದು… ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ಇಂಥಾದ್ದೊಂದು ಅತಿದೊಡ್ಡ ಬೆಳವಣಿಗೆಯನ್ನ ಟಿವಿ9 ಇಂದು ಬ್ರೇಕ್ ಮಾಡಿದೆ. ಈ ವರದಿ ರಾಜ್ಯ ರಾಜಕಾರಣದಲ್ಲಷ್ಟೇ ಅಲ್ಲ ರಾಷ್ಟ್ರದಲ್ಲೂ ದೊಡ್ಡ ಸಂಚಲನ ಎಬ್ಬಿಸಿದೆ. ವಿಧಾನಸಭೆಯಲ್ಲೂ ಟಿವಿ9 ವರದಿ ದೊಡ್ಡ ಸದ್ದು ಮಾಡಿದೆ. ತಮ್ಮ ಇಂಧನ ಇಲಾಖೆಯಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹಸ್ತಕ್ಷೇಪ ಮಾಡ್ತಿದ್ದಾರೆ ಎಂದು ಬೇಸರಗೊಂಡು ಸಚಿವ ಕೆ.ಜೆ.ಜಾರ್ಜ್ ಬೇಸರಗೊಂಡಿದ್ದು, ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್​ನ ಮೂಲಗಳು ಟಿವಿ9ಗೆ ತಿಳಿಸಿವೆ. ಆದ್ರೆ, ಇದನ್ನು ಸಚಿವ ಜಾರ್ಜ್ ಅಲ್ಲಗಳೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಂಧನ ಇಲಾಖೆಯಲ್ಲಿ ಡಾ.ಯತೀಂದ್ರ ಹಸ್ತಕ್ಷೇಪ ಮಾಡಿಲ್ಲ. ವಿಧಾನಸಭೆಯಲ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದೇನೆ. ಒಬ್ಬ ಸಚಿವರು ರಾಜೀನಾಮೆ ನೀಡುವುದು ಅಷ್ಟು ಸುಲಭವೇ? ನಾನು ಯಾವುದೇ ಅಧಿಕಾರಿ ವಿಚಾರದಲ್ಲಿ ಪಟ್ಟು ಹಿಡಿಯಲ್ಲ. ಡಾ.ಯತೀಂದ್ರ ಒಳ್ಳೆಯವರು. ಅವರಿಗೆ ಯಾಕೆ ಕೆಟ್ಟ ಹೆಸರು? ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್ಥಿಕ ಸಮೀಕ್ಷೆ 2026; ಜಿಡಿಪಿ, ಹಣದುಬ್ಬರ, ಎಫ್​ಡಿಐ, ಇನ್ಷೂರೆನ್ಸ್ ಇತ್ಯಾದಿ ಬಗ್ಗೆ ವರದಿಯಲ್ಲಿ ಹೇಳಿದ್ದಿದು – Kannada News | Economic Survey 2026, key highlights from GDP projection to Infrastructure importance

ಇನ್​ಫ್ರಾಸ್ಟ್ರಕ್ಚರ್ ಅಗತ್ಯ: ಇನ್​ಫ್ರಾಸ್ಟ್ರಕ್ಚರ್ ಎಂದರೆ ರಸ್ತೆ, ರೈಲು ನಿರ್ಮಾಣ ಮಾತ್ರವಾಗೇ ಉಳಿದಿಲ್ಲ. ಡಿಜಿಟಲ್ ಸಿಸ್ಟಂ, ಕ್ಲೀನ್ ಎನರ್ಜಿ, ಜಲ ನಿರ್ವಹಣೆ, ಹೊಸ ತಂತ್ರಜ್ಞಾನಗಳು ಇತ್ಯಾದಿಯೆಲ್ಲವೂ ಇನ್​ಫ್ರಾಸ್ಟ್ರಕ್ಚರ್ ಎನಿಸಿಕೊಳ್ಳುತ್ತವೆ. ಭಾರತದ ಮುಂದಿನ ಬೆಳವಣಿಗೆಗೆ ಪ್ರಮುಖ ಆಧಾರ ಸ್ತಂಭಗಳಲ್ಲಿ ಇನ್​ಫ್​ರಾಸ್ಟ್ರಕ್ಚರ್ ಕೂಡ ಒಂದಾಗಿರುತ್ತದೆ ಎಂಬುದನ್ನು ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

Source link

ಸರ್ಕಾರದಿಂದ ಮಹತ್ವದ ಆದೇಶ: ಕರ್ನಾಟಕ ನೌಕರರು ಈ ಬಟ್ಟೆ ಧರಿಸುವುದು ಕಡ್ಡಾಯ – Kannada News | Khadi clothes is mandatory for Karnataka government employees: Important order from the government

ಬೆಂಗಳೂರು, ಜನವರಿ 29: ರಾಜ್ಯ ಸರ್ಕಾರಿ ನೌಕರರಿಗೆ (government employees) ಖಾದಿ (Khadi) ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಆ ಮೂಲಕ ಸರ್ಕಾರ ವಸ್ತ್ರಸಂಹಿತೆ ಜಾರಿಗೊಳಿಸಲು ಮುಂದಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​​ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ ಧರಿಸಲು ನಿರ್ಧರಿಸಲಾಗಿದೆ. ಏಪ್ರಿಲ್ 24ರಂದು ಈ ಯೋಜನೆಗೆ ಚಾಲನೆ ದೊರೆಯಲಿದೆ.

ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ, ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್​ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಸಭೆ ಮಾಡಲಾಗಿದೆ.

ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು

  • ಪ್ರತಿ ತಿಂಗಳ ಮೊದಲ ಶನಿವಾರದಂದು ಎಲ್ಲಾ ಅಧಿಕಾರಿ, ನೌಕರರು ಖಾದಿ ಬಟ್ಟೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸುವುದು.
  • ಸರ್ಕಾರಿ ಸ್ವಾಮ್ಯದ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಳಿಗೆಗಳಲ್ಲಿ ಖಾದಿ ಬಟ್ಟೆಗಳನ್ನು ಖರೀದಿಸುವುದು.

ಇದನ್ನೂ ಓದಿ: ಕರ್ನಾಟಕ ಪೊಲೀಸರಿಗೆ ಭರ್ಜರಿ ಗಿಫ್ಟ್, ಕುಟುಂಬಸ್ಥರ ಜತೆ ಕಾಲ ಕಳೆಯಲು ರಜೆ ಭಾಗ್ಯ

  • ಖಾದಿ ಗ್ರಾಮೋದ್ಯೋಗ ಮಂಡಳಿಯು ಹಾಲಿ ನೀಡುತ್ತಿರುವ ರಿಯಾಯಿತಿಯ ಹೊರತಾಗಿ ಅಧಿಕಾರಿ, ನೌಕರರಿಗೆ ಶೇ. 5% ಹೆಚ್ಚುವರಿ ರಿಯಾಯಿತಿ ನೀಡುವುದು.
  • ಪುರುಷ ನೌಕರರು ಖಾದಿ ಬಟ್ಟೆಯ ಶರ್ಟ್,ಪ್ಯಾಂಟ್, ಒವರ್ ಕೋಟ್ ಹಾಗೂ ಇತರೆ ಶಿಸ್ತಿನ ಉಡುಗೆಗಳು.
  • ಮಹಿಳಾ ನೌಕರರು ಖಾದಿ ಹಾಗೂ ಖಾದಿ ಸಿಲ್ಕ್ ಬಟ್ಟೆಯ ಸೀರೆ, ಚೂಡಿದಾರ್ ಇತರೆ ಶಿಸ್ತಿನ ಉಡುಗೆಗಳು.
  • ಎಂಎಸ್​ಐಎಲ್​ ಸಂಸ್ಥೆಯ ಮೂಲಕ ಸೇನಾ ಕ್ಯಾಂಟೀನ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ದಿನಬಳಕೆ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಪೂರೈಸಲು “ಸರ್ಕಾರಿ ನೌಕರರ ಕ್ಯಾಂಟೀನ್” ಪ್ರಾರಂಭಿಸಲು 2026-27ನೇ ಸಾಲಿನ ಆಯ-ವ್ಯಯದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡುವುದು.

ಇದನ್ನೂ ಓದಿ: ಸರ್ಕಾರದಿಂದ ಮಹತ್ವದ ಆದೇಶ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದವರಿಗೆ ಬಿಗ್ ಶಾಕ್

  • ಕೆಎಸ್​ಐಸಿ ಸಂಸ್ಥೆಯು ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳು ಖರೀದಿಸುವ ರೇಷ್ಮೆ ಸೀರೆ ಮತ್ತು ರೇಷ್ಮೆ ವಸ್ತ್ರಗಳಿಗೆ ಹೆಚ್ಚುವರಿ ಶೇ.5% ವಿಶೇಷ ರಿಯಾಯಿತಿ ನೀಡುತ್ತಿರುವ ಮಾದರಿಯಲ್ಲೇ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ, ನೌಕರರಿಗೂ ಹೆಚ್ಚುವರಿ ಶೇ. 5% ವಿಶೇಷ ರಿಯಾಯಿತಿ ನೀಡುವುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Personality Test: ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ನಿಗೂಢ ವ್ಯಕ್ತಿತ್ವ, ಗುಣ ಸ್ವಭಾವ ಹೇಗಿರುತ್ತೆ ಗೊತ್ತಾ? – Kannada News | Personality Test: Do you know what the mysterious personality of those born in February?

ಪ್ರತಿಯೊಬ್ಬರ ವ್ಯಕ್ತಿತ್ವವೂ (Personality) ಭಿನ್ನ ವಿಭಿನ್ನವಾಗಿರುತ್ತದೆ. ಕೆಲವರು ತುಂಬಾ ಶಾಂತ ಸ್ವಭಾವದವರಾದರೇ ಇನ್ನೂ ಕೆಲವರು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುವವರಾಗಿರುತ್ತಾರೆ. ಅದರಲ್ಲೂ ಮಂಗಳವಾರ ಜನಿಸಿದವರೂ ಸಿಕ್ಕಾಪಟ್ಟೆ ಕೋಪಿಷ್ಟರು ಎನ್ನಲಾಗುತ್ತದೆ. ವ್ಯಕ್ತಿಯ ಈ ಎಲ್ಲಾ ಗುಣಸ್ವಭಾವಗಳನ್ನು ಹುಟ್ಟಿದ ದಿನ, ದಿನಾಂಕ, ಘಳಿಗೆಯ ಆಧಾರದ ಮೇಲೆ  ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರದ ಮುಖಾಂತರ ತಿಳಿಯಬಹುದಾಗಿದೆ. ಹುಟ್ಟಿದ ದಿನ ಮಾತ್ರವಲ್ಲದೆ ಹುಟ್ಟಿದ ತಿಂಗಳ ಆಧಾರ ಮೇಲೂ ವ್ಯಕ್ತಿಯ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಂತೆ. ಫೆಬ್ರವರಿ ತಿಂಗಳು ಇನ್ನೇನೂ ಆರಂಭವಾಗುವ ಈ ಹೊತ್ತಿನಲ್ಲಿ ಫೆಬ್ರವರಿ ತಿಂಗಳಿನಲ್ಲಿ ಹುಟ್ಟಿದವರ ನಿಗೂಢ ವ್ಯಕ್ತಿತ್ವ, ಗುಣ ಸ್ವಭಾವ ಹೇಗಿದೆ ಎಂಬುದನ್ನು ಪರೀಕ್ಷಿಸೋಣ.

ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ?

  • ಫೆಬ್ರವರಿಯಲ್ಲಿ ಜನಿಸಿದ ಜನರು ಇತರರನ್ನು ತಮ್ಮತ್ತ ಆಕರ್ಷಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಈ ಜನರು ತಮ್ಮ ಭಾವನೆಗಳನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ.
  • ಸಂಶೋಧನೆಯ ಪ್ರಕಾರ, ಈ ತಿಂಗಳಲ್ಲಿ ಜನಿಸಿದ ಜನರು ಸ್ವಭಾವತಃ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಈ ಜನರು ಯಾವಾಗಲೂ ಸಂತೋಷವಾಗಿರುತ್ತಾರೆ.
  • ಕುತೂಹಲದಿಂದ ಕೂಡಿದ ಇವರು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತಾರೆ ಮತ್ತು ತಮ್ಮ ಜೀವನದಲ್ಲಿ ಮುಕ್ತರಾಗಿರಲು ಬಯಸುತ್ತಾರೆ.
  • ಫೆಬ್ರವರಿಯಲ್ಲಿ ಜನಿಸಿದ ಜನರು ಬಹಳ ಆಕರ್ಷಕ ಮತ್ತು ಪ್ರಭಾವಶಾಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅವರು ತುಂಬಾ ಚುರುಕು ಮತ್ತು ಬುದ್ಧಿವಂತರು, ಇದು ಅವರನ್ನು ಪ್ರಶಂಸೆಗೆ ಪಾತ್ರರನ್ನಾಗಿ ಮಾಡುತ್ತದೆ. ಅವರು ತಮ್ಮ ಮಾತುಗಳಿಂದ ಎಲ್ಲರನ್ನೂ ಗೆಲ್ಲುತ್ತಾರೆ. ಇದಲ್ಲದೆ, ಅವರು ಬೇಗನೆ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ ಮತ್ತು ಎಲ್ಲರೊಂದಿಗೆ ಬೆರೆಯುವುದನ್ನು ಆನಂದಿಸುತ್ತಾರೆ.
  • ಫೆಬ್ರವರಿಯಲ್ಲಿ ಜನಿಸಿದ ಹುಡುಗಿಯರು ಸ್ವಾಭಿಮಾನಿಗಳು ಎಂದು ಹೇಳಲಾಗುತ್ತದೆ. ಅವರು ಎಂದಿಗೂ ತಮ್ಮ ಸಂಗಾತಿಗಳಿಗೆ ತಲೆಬಾಗುವುದಿಲ್ಲ. ಅಲ್ಲದೆ, ಈ ತಿಂಗಳಲ್ಲಿ ಜನಿಸಿದ ಜನರು ಎಂದಿಗೂ ಇತರರನ್ನು ನಂಬುವುದಿಲ್ಲ.

ಫೆಬ್ರವರಿಯಲ್ಲಿ ಜನಿಸಿದವರ ವೃತ್ತಿ ಜೀವನ ಹೇಗಿರುತ್ತದೆ?

ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರು ಸೃಜನಶೀಲತೆ ಮತ್ತು ದೂರದೃಷ್ಟಿಯನ್ನು ಹೊಂದಿದ್ದು, ಇವರು  ಕಲೆ, ವಿಜ್ಞಾನ, ಸಾಹಿತ್ಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು. ಇವರ ವೃತ್ತಿಜೀವನದ ವಿಷಯಕ್ಕೆ ಬಂದರೆ, ಇವರಿಗೆ ಉಜ್ವಲ ಭವಿಷ್ಯವಿದೆ. ಈ ತಿಂಗಳಲ್ಲಿ ಜನಿಸಿದವರು ತಮ್ಮ ಕಠಿಣ ಪರಿಶ್ರಮದ ಮೂಲಕ, ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮನ್ನು ತಾವು ಸ್ಥಾಪಿಸಿಕೊಳ್ಳುತ್ತಾರೆ. ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಶ್ರೀಮಂತರಾಗುತ್ತಾರೆ. ಕೆಲವೊಮ್ಮೆ, ಇವರು ಭಾವನಾತ್ಮಕರಾಗುತ್ತಾರೆ, ಇದು ಇವರ ವೃತ್ತಿಜೀವನದಲ್ಲಿ ಗಮನಾರ್ಹ ಅಡೆತಡೆಗಳನ್ನು ಸೃಷ್ಟಿಸಬಹುದು. ಆದರೆ ಕಠಿಣ ಪರಿಶ್ರಮ ಮತ್ತು ಕೆಲಸದ ಮೇಲೆ ಗಮನ ಹರಿಸುವ  ಮೂಲಕ ಯಶಸ್ಸನ್ನು ಸಾಧಿಸುತ್ತಾರೆ.

ಇದನ್ನೂ ಓದಿ: ಫೆಬ್ರವರಿ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ ಇಲ್ಲಿದೆ

ಫೆಬ್ರವರಿಯಲ್ಲಿ ಜನಿಸಿದವರ ಪ್ರೀತಿ ಜೀವನ ಹೇಗಿರುತ್ತದೆ? 

ಫೆಬ್ರವರಿಯಲ್ಲಿ ಜನಿಸಿದ ಜನರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ. ಇವರು ಬಾಹ್ಯ ಸೌಂದರ್ಯಕ್ಕಿಂತ ವ್ಯಕ್ತಿಯ ಮುಗ್ಧತೆ ಮತ್ತು ನಿಜವಾದ ಪ್ರೀತಿ, ಹೃದಯವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ತಮ್ಮವರನ್ನು ಹೆಚ್ಚಾಗಿ ನಂಬುತ್ತಾರೆ. ಇದೇ ಕಾರಣದಿಂದ ಇವರು ನಂಬಿಕೆ ದ್ರೋಹಗಳಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೂತ-ಪ್ರೇತಗಳ ‘ರಕ್ಕಸಪುರ’ದಲ್ಲಿ ರಾಜ್ ಬಿ ಶೆಟ್ರು ರಕ್ಷಕನಾ-ರಾಕ್ಷಸನಾ? – Kannada News | Raj B Shetty starrer Rakkasapuradol movie trailer released

ರಾಜ್ ಬಿ ಶೆಟ್ಟಿ (Raj B Shetty) ಪ್ರಸ್ತುತ ಕನ್ನಡ ಚಿತ್ರರಂಗದ ಬಲು ವರ್ಸಟೈಲ್ ನಟ, ಭಿನ್ನ ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಹೀರೋ, ಕಮಿಡಿಕ್ ಹಿರೋ, ವಿಲನ್, ಸಾಮಾನ್ಯ ವ್ಯಕ್ತಿ, ಅಂಗವಿಕಲ ಹೀಗೆ ನಾನಾ ರೀತಿಯ ಪಾತ್ರಗಳಲ್ಲಿ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ. ಇದೀಗ ಶೆಟ್ಟರು ಮತ್ತೊಂದು ಭಿನ್ನ ರೀತಿಯ ಪಾತ್ರದಲ್ಲಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ‘ರಕ್ಕಸಪುರದೊಳ್’ ಹೆಸರಿನ ಮಾಸ್ ಥ್ರಿಲ್ಲರ್ ಸಿನಿಮಾನಲ್ಲಿ ನಾಯಕನಾಗಿ ರಾಜ್ ಬಿ ಶೆಟ್ಟಿ ನಟಿಸಿದ್ದು, ಸಿನಿಮಾದ ಟ್ರೈಲರ್ ಇಂದು (ಜನವರಿ 29) ಬಿಡುಗಡೆ ಆಗಿದೆ.

‘ರಕ್ಕಸಪುರದೊಳ್’ ಸಿನಿಮಾದ ಹೆಸರೇ ಹೇಳುವಂತೆ ಇದು ಒಂದು ಊರಿನ ಕತೆ, ಆ ಊರಿನಲ್ಲಿ ನಡೆಯುವ ಅಪರಾಧಗಳ ಹಿಂದಿನ ಕತೆ. ರಾಜ್ ಬಿ ಶೆಟ್ಟಿ ಈ ವರೆಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಇಲ್ಲಿ ಮೊದಲ ಬಾರಿಗೆ ಸಖತ್ ಎಲಿವೇಷನ್ ದೃಶ್ಯಗಳುಳ್ಳ ಮಾಸ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರದ್ದು ಸಖತ್ ಮಾಸ್ ಪೊಲೀಸ್ ಅಧಿಕಾರಿಯ ಪಾತ್ರ.

‘ರಕ್ಕಸಪುರದೊಳ್’ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಆಕ್ಷನ್ ಮತ್ತು ಕಾಮಿಡಿಯನ್ನೂ ಹೊಂದಿದೆ ಎಂಬ ಸುಳಿವನ್ನು ಇಂದು ಬಿಡುಗಡೆ ಆಗಿರುವ ಟ್ರೈಲರ್ ನೀಡುತ್ತಿದೆ. ಟ್ರೈಲರ್​​ನಲ್ಲಿ ರಾಜ್ ಬಿ ಶೆಟ್ಟಿಯ ಎಂಟ್ರಿ ಹಾಗೂ ಕೆಲವು ಸಖತ್ ಆಕ್ಷನ್ ದೃಶ್ಯಗಳ ತುಣುಕುಗಳನ್ನು ತೋರಿಸಲಾಗಿದೆ. ಶೆಟ್ಟರಂತೂ ಪೊಲೀಸ್ ಪಾತ್ರದಲ್ಲಿ ಸಖತ್ ಮಿಂಚಿದ್ದಾರೆ. ಆದರೆ ಟ್ರೈಲರ್​​ನಲ್ಲೆಲ್ಲೂ ಅವರು ಸಮವಸ್ತ್ರ ಧರಿಸಿದ್ದು ಕಾಣುತ್ತಿಲ್ಲ!

ಇದನ್ನೂ ಓದಿ:ಅವರು ಯಾರನ್ನೂ ದೂರ ತಳ್ಳೋ ವ್ಯಕ್ತಿ ಅಲ್ಲ; ರಿಷಬ್ ಪರ ಬ್ಯಾಟ್ ಬೀಸಿದ ರಾಜ್ ಬಿ ಶೆಟ್ಟಿ

ಒಂದು ಊರಿನಲ್ಲಿ ಕೊಲೆಗಳು ನಡೆಯುತ್ತಿವೆ. ಆ ಕೊಲೆಗಳ ಹಿಂದೆ ದೆವ್ವ, ಪಿಶಾಚಿಯ ಕೈವಾಡ ಇದೆಯೆಂಬುದು ಊರಿನವರ ನಂಬಿಕೆ. ಆ ಕೊಲೆಗಳ ತನಿಖೆಯನ್ನು ನಡೆಸಲು ಬರುವ ಪೊಲೀಸ್ ಅಧಿಕಾರಿ ರಾಜ್ ಬಿ ಶೆಟ್ಟಿ. ಇವರ ಪಾತ್ರ ಆದರ್ಶಪ್ರಾಯ ಪೊಲೀಸನದ್ದಲ್ಲ, ಗಡ್ಡ ಬಿಟ್ಟ, ಸದಾ ಕುಡಿಯುವ, ಕೈಗೆ ಸಿಕ್ಕವರನ್ನು ಮುಖಾ-ಮೂತಿ ನೋಡದೆ ಚೆಚ್ಚುವ ಪೊಲೀಸ್ ಅವರು. ಇದೀಗ ಬಿಡುಗಡೆ ಆಗಿರುವ ಟ್ರೈಲರ್, ಸಿನಿಮಾ ನೋಡುವ ಕುತೂಹಲವನ್ನಂತೂ ಹುಟ್ಟುಹಾಕುತ್ತಿದೆ.

‘ರಕ್ಕಸಪುರದೊಳ್’ ಸಿನಿಮಾವನ್ನು ರವಿ ಸಾರಂಗ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಕೆಎನ್ ಎಂಟರ್ಪೈಸಸ್​​ನ ರವಿ ವರ್ಮಾ, ಕೆವಿಎನ್ ಪ್ರೊಡಕ್ಷನ್ಸ್​​ ನವರು ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾನಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಸ್ವಾತಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಫೆಬ್ರವರಿ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:47 pm, Thu, 29 January 26

Source link