ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಶೀತದ ವಾತಾವರಣ, ಒಣ ಹವೆ – Kannada News | Bengaluru temperature: Dry weather all over the karnataka, Misty weather in Bengaluru
ರಾಜ್ಯದೆಲ್ಲೆಡೆ ಶೀತದ ವಾತಾವರಣ, ಒಣ ಹವೆ ಬೆಂಗಳೂರು, ಜನವರಿ 27: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ನಿನ್ನೆ ಮೋಡ ಕವಿದು, ಸಾಧಾರಣ ಪ್ರಮಾಣದ ಮಳೆಯಾಗಿತ್ತು. ಆದರೆ ಇಂದು ರಾಜ್ಯದ ಹವಾಮಾನ (Weather Forecast) ಯಥಾಸ್ಥಿತಿ ತಲುಪಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆಯಿರಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ….