WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ಸತತ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಆರ್ಸಿಬಿ ತಂಡದ ಫೈನಲ್ ಲೆಕ್ಕಾಚಾರ ಕೂಡ ಬದಲಾಗಿದೆ.
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ಸತತ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಆರ್ಸಿಬಿ ತಂಡದ ಫೈನಲ್ ಲೆಕ್ಕಾಚಾರ ಕೂಡ ಬದಲಾಗಿದೆ.
ಅಂತೂ ಇಂತೂ ಸುಧಾರಿಸುತ್ತಿದೆ ಬೆಂಗಳೂರಿನ ವಾಯು ಗುಣಮಟ್ಟ!
ಬೆಂಗಳೂರು, ಜನವರಿ 25: ರಾಜ್ಯದೆಲ್ಲೆಡೆ ಏರ್ ಕ್ವಾಲಿಟಿ (Bengaluru Air Quality) ಆತಂಕಕಾರಿ ಮಟ್ಟದಲ್ಲಿದ್ದರೂ ಇಂದಿನ ಮಟ್ಟಿಗೆ ಬೆಂಗಳೂರಿನ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.ಕೆಲ ತಿಂಗಳ ಹಿಂದೆಯೂ ಒಮ್ಮೆ ಬೆಂಗಳೂರಿನ ವಾಯ ಗುಣಮಟ್ಟ 200ಕ್ಕೇರಿತ್ತು. ನಂತರ ಕೆಲ ದಿನ ಸುಧಾರಿಸಿದಂತೆ ಕಂಡರೂ ಮತ್ತೊಮ್ಮೆ ಏರ್ ಕ್ವಾಲಿಟಿ ಕಳಪೆಯಾಗಿತ್ತು. ಆದರೆ ಇಂದು ಕಳೆದ 2-3 ತಿಂಗಳಿಗೆ ಹೋಲಿಸಿದರೆ ಬೆಂಗಳೂರಿನ ಏರ್ ಕ್ವಾಲಿಟಿಯಲ್ಲಿ ಸುಧಾರಣೆ ಬಂದಿದೆ.
ಬೆಂಗಳೂರಿನ ಏರ್ ಕ್ವಾಲಿಟಿ 144 ಇದ್ದು, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಇಂದಿನ ಮಟ್ಟಿಗೆ ವಾಯು ಗುಣಮಟ್ಟ ಚೇತರಿಸಿಕೊಂಡಿದೆ. ಆದರೂ ಇಂದಿಗೂ ಗಾಳಿಯು ಕಲುಷಿತವಾಗಿಯೇ ಇದ್ದು, ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಬೆಳಗಾವಿ, ಜನವರಿ 25: ಬೆಳಗಾವಿಯ ಗಡಿ ಭಾಗದ ಮೂಲಕ ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್ಗಳನ್ನು ಹೈಜಾಕ್ ಮಾಡಲಾಗಿದೆ ಎನ್ನಲಾಗುತ್ತಿದೆ. 2025 ಅಕ್ಟೋಬರ್ 16ರಂದು ನಡೆದಿರುವ ದೇಶದ ಅತಿ ದೊಡ್ಡ ರಾಬರಿ ಪ್ರಕರಣ ಸದ್ಯ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಪೊಲೀಸ್ಗೆ ಪ್ರಕರಣ ದೊಡ್ಡ ಸವಾಲಾಗಿದೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.
ನೈಜ ಘಟನೆ ಆಧಾರಿತ ‘ಲವ್ ಯೂ ಮುದ್ದು’ (Love You Muddu) ಸಿನಿಮಾ 2025ರಲ್ಲಿ ತೆರೆಕಂಡಿತ್ತು. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ಕುಮಾರ್ ಅವರು ‘ಲವ್ ಯೂ ಮುದ್ದು’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಭಾರಿ ಸದ್ದು ಮಾಡಿದ್ದ ಪ್ರೇಮಿಗಳ ನೈಜ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಭಾಷೆಯ ಗಡಿಯನ್ನು ಮೀರಿ ಈ ಸಿನಿಮಾ ಎಲ್ಲರಿಗೂ ಇಷ್ಟ ಆಯಿತು. ಈಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಅಮೇಜಾನ್ ಪ್ರೈಮ್ ವಿಡಿಯೋ’ (Amazon Prime Video) ಮೂಲಕ ಪ್ರಸಾರ ಆಗುತ್ತಿದೆ. ಈ ಸಿನಿಮಾವನ್ನು ಶಿವರಾಜ್ಕುಮಾರ್ (Shivarajkumar) ನೋಡಿದ್ದಾರೆ.
ಒಟಿಟಿಯಲ್ಲಿ ‘ಲವ್ ಯೂ ಮುದ್ದು’ ಸಿನಿಮಾ ನೋಡಿದ ಶಿವರಾಜ್ಕುಮಾರ್ ಅವರಿಗೆ ಈ ಚಿತ್ರ ಸಖತ್ ಇಷ್ಟ ಆಗಿದೆ. ಹೊಸ ತಂಡಗಳಿಗೆ, ಒಳ್ಳೆಯ ಸಿನಿಮಾಗಳಿಗೆ ಶಿವಣ್ಣ ಯಾವಾಗಲೂ ಬೆಂಬಲ ನೀಡುತ್ತಾರೆ. ಈಗ ಅವರು ‘ಲವ್ ಯೂ ಮುದ್ದು’ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಸಿನಿಮಾದ ನಾಯಕ ನಟ ಸಿದ್ದು ಮೂಲಿಮನಿ ಅವರಿಗೆ ಶಿವಣ್ಣ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರೆ ಮಾಡಿ ಮಾತನಾಡಿದ್ದು ಮಾತ್ರವಲ್ಲದೇ ಚಿತ್ರತಂಡದ ಸಮೇತ ತಮ್ಮನ್ನು ಭೇಟಿ ಆಗುವಂತೆ ಆಹ್ವಾನವನ್ನೂ ನೀಡಿದ್ದಾರೆ. ಇದರಿಂದ ಖುಷಿಯಾದ ಹೀರೋ ಸಿದ್ದು ಮೂಲಿಮನಿ, ಹೀರೋಯಿನ್ ರೇಷ್ಮಾ, ನಿರ್ದೇಶಕ ಕುಮಾರ್, ನಿರ್ಮಾಪಕ ನರಸಿಂಹ ಮೂರ್ತಿ, ವಿತರಕ ಜಗದೀಶ್ ಗೌಡ ಸೇರಿದಂತೆ ತಂಡದ ಹಲವರು ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ ಶಿವರಾಜ್ಕುಮಾರ್ ಅವರನ್ನು ‘ಲವ್ ಯೂ ಮುದ್ದು’ ಚಿತ್ರತಂಡ ಭೇಟಿ ಮಾಡಿದೆ. ಚಿತ್ರೀಕರಣದ ನಡುವೆಯೂ ಬಿಡುವು ಮಾಡಿಕೊಂಡ ಶಿವಣ್ಣ ಅವರು ಈ ಸಿನಿಮಾದ ಬಗ್ಗೆ ಮಾತನಾಡಿದರು. ಸಿನಿಮಾ ಮೂಡಿ ಬಂದಿರುವ ಬಗೆಯನ್ನು ಕೊಂಡಾಡಿದರು. ಇದರಿಂದ ಚಿತ್ರತಂಡದ ಖುಷಿ ಡಬಲ್ ಆಗಿದೆ. ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರಿಗೂ ಇಷ್ಟ ಆಗುತ್ತಿದೆ.
ಇದನ್ನೂ ಓದಿ: ‘ಲವ್ ಯೂ ಮುದ್ದು’ ಗೆದ್ದಿದ್ದಕ್ಕೆ ಕನ್ನಡದಲ್ಲೇ ಧನ್ಯವಾದ ಹೇಳಿದ ಮರಾಠಿ ರಿಯಲ್ ಜೋಡಿ
‘ಕಿಶನ್ ಎಂಟರ್‌ಟೈನ್ಮೆಂಟ್’ ಬ್ಯಾನರ್ ಮೂಲಕ ಕಿಶನ್ ಟಿ.ಎನ್. ಅವರು ‘ಲವ್ ಯೂ ಮುದ್ದು’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಲಕ್ಷ್ಮಿಕಾಂತ್ ಟಿ.ಎಸ್. ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಕೃಷ್ಣ ದೀಪಕ್ ಅವರ ಛಾಯಾಗ್ರಹಣ, ಅನಿರುದ್ಧ್ ಶಾಸ್ತ್ರಿ ಅವರ ಸಂಗೀತ ನಿರ್ದೇಶನ, ಸಿ.ಎಸ್. ದೀಪು ಅವರ ಸಂಕಲನ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
WPL 2026: ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-4 ರಲ್ಲಿ ಸತತ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಕೊನೆಗೂ ಸೋಲುಣಿಸುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಯಶಸ್ವಿಯಾಗಿದೆ. ಈ ಸೋಲಿನೊಂದಿಗೆ ಆರ್ಸಿಬಿ ತಂಡದ ಫೈನಲ್ ಲೆಕ್ಕಾಚಾರ ಕೂಡ ಬದಲಾಗಿದೆ.
ಡಲ್ಲಾಸ್ (ಎಪಿ), ಜನವರಿ 25: ಅಮೆರಿಕದ ಹಲವೆಡೆ ದಟ್ಟ ಮಂಜು ಮತ್ತು ಭಾರಿ ಹಿಮಪಾತ (Winter Storm) ಹಿನ್ನೆಲೆ ನಿಗದಿಯಾಗಿದ್ದ 9000ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ (Flights Cancelled). ಈ ಚಂಡಮಾರುತದಿಂದ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಅಸ್ತವ್ಯಸ್ತತೆ ಉಂಟಾಗುವ ನಿರೀಕ್ಷೆಯಿದೆ. ಅಲ್ಲದೆ, 15 ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಮಾತನಾಡಿ, ತಮ್ಮ ಆಡಳಿತವು ರಾಜ್ಯ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿಗೆ ತ್ವರಿತವಾಗಿ ಸ್ಪಂದಿಸಲು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿ (ಫೀಮಾ) ಸಂಪೂರ್ಣ ಸಿದ್ಧತೆಯಲ್ಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮದುವೆ ಮನೆಗೆ ಸೂತಕ ತಂದ ದಾಳಿಕೋರ: ಆತ್ಮಾಹುತಿ ಬಾಂಬ್ ದಾಳಿಗೆ 7 ಜನ ಸಾವು
ರಾಷ್ಟ್ರೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಉತ್ತರ ಟೆಕ್ಸಾಸ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಪೂರ್ತಿ ಹಿಮ ಹಾಗೂ ಮಳೆಯಾಗಿದೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ತೀವ್ರ ಶೀತ ಅಲೆ ಅಪಾಯಕಾರಿ ಮಟ್ಟದಲ್ಲಿ ವ್ಯಾಪಿಸುತ್ತಿದ್ದು, ಇದು ಸೋಮವಾರದವರೆಗೆ ಮುಂದುವರಿಯಲಿದೆ ಎಂದು ಇಲಾಖೆ ಎಚ್ಚರಿಸಿದೆ. ಮುಂದಿನ ಕೆಲವು ರಾತ್ರಿಗಳಲ್ಲಿ ತಾಪಮಾನ ಮೈನಸ್ 24 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಸಿಎನ್‌ಎನ್ ವರದಿಯ ಪ್ರಕಾರ, ಅಮೆರಿಕದ ಒಟ್ಟು ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಭಾಗವು ಭಾರೀ ಹಿಮಪಾತದ ಚಂಡಮಾರುತ ಹಾಗೂ ತೀವ್ರ ಶೀತ ಅಲೆಯನ್ನು ಎದುರಿಸುವ ಪರಿಸ್ಥಿತಿ ಎದುರಾಗಿದೆ. ಈ ಚಂಡಮಾರುತದಿಂದ ಉಂಟಾಗುವ ಹಿಮವು ಟೆಕ್ಸಾಸ್‌ನಿಂದ ನ್ಯೂ ಇಂಗ್ಲೆಂಡ್‌ವರೆಗೆ 2,000 ಮೈಲುಗಳಿಗಿಂತ ಹೆಚ್ಚು ವ್ಯಾಪ್ತಿಯಲ್ಲಿ ಹರಡುವ ಸಾಧ್ಯತೆ ಇದೆ. ಈ ನಡುವೆ, ಶುಕ್ರವಾರ ಒಕ್ಲಹೋಮಾ ರಾಜ್ಯದ ಹಲವು ಭಾಗಗಳಲ್ಲಿ ನಿರಂತರವಾಗಿ ಹಿಮಪಾತ ಹಾಗೂ ಮಳೆ ಸುರಿದಿದೆ.
ಇದನ್ನೂ ಓದಿ: ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ, ಇರಾನ್ಗೆ ಹೊಸ ಎಚ್ಚರಿಕೆ ಕೊಟ್ಟ ಡೊನಾಲ್ಡ್ ಟ್ರಂಪ್
ಚಂಡಮಾರುತ ಉತ್ತರ–ಪೂರ್ವ ದಿಕ್ಕಿನತ್ತ ಸಾಗಲಿದೆ. ಇದರ ಪರಿಣಾಮವಾಗಿ ವಾಷಿಂಗ್ಟನ್‌ನಿಂದ ನ್ಯೂಯಾರ್ಕ್ ಹಾಗೂ ಬೋಸ್ಟನ್‌ವರೆಗೆ ವ್ಯಾಪಿಸಿರುವ ಪ್ರದೇಶಗಳಲ್ಲಿ ಸುಮಾರು ಒಂದು ಅಡಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಹಲವು ದಿನಗಳ ಕಾಲ ಮುಂದುವರಿದ ಭಾರೀ ಹಿಮಪಾತದ ಹಿನ್ನೆಲೆಯಲ್ಲಿ, ಗ್ರಾಮೀಣ ಲೂಯಿಸ್ ಕೌಂಟಿ ಹಾಗೂ ಮೇಲಿನ ನ್ಯೂಯಾರ್ಕ್‌ನ ಇತರ ಭಾಗಗಳಲ್ಲಿ ಬೆಳಗಿನ ಜಾವ ತಾಪಮಾನ ಮೈನಸ್ 34 ಡಿಗ್ರಿ ಸೆಲ್ಸಿಯಸ್ ಮಟ್ಟಕ್ಕೆ ಇಳಿದಿದೆ ಎಂದು ಇಲಾಖೆ ತಿಳಿಸಿದೆ.
ಮತ್ತಷ್ಟು ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು ಇಂದು (ಜ.25) ನಡೆಯಲಿದೆ. ಗುವಾಹಟಿಯಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ಏಕೆಂದರೆ ಕಳೆದ ಮ್ಯಾಚ್ ವೇಳೆ ವಿಶ್ರಾಂತಿ ಪಡೆದಿದ್ದ ಜಸ್ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಈ ಪಂದ್ಯವು ಸರಣಿ ನಿರ್ಣಾಯಕವಾಗಿರುವುದರಿಂದ ಬುಮ್ರಾ ಹರ್ಷಿತ್ ರಾಣಾ ಅಥವಾ ಅರ್ಷದೀಪ್ ಸಿಂಗ್ ಸ್ಥಾನದಲ್ಲಿ ಕಣಕ್ಕಿಳಿಯಬಹುದು.
ಅದರಂತೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟ್ ಬೀಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ.
ಇನ್ನು ಐದನೇ ಕ್ರಮಾಂಕದಲ್ಲಿ ಶಿವಂ ದುಬೆ ಕಣಕ್ಕಿಳಿದರೆ, ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟ್ ಬೀಸಲಿದ್ದಾರೆ. ಹಾಗೆಯೇ ಏಳನೇ ಕ್ರಮಾಂಕದಲ್ಲಿ ರಿಂಕು ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.
ಇನ್ನುಳಿದಂತೆ ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್ ಹಾಗೂ ವರುಣ್ ಚಕ್ರವರ್ತಿ ಬೌಲರ್ಗಳಾಗಿ ಕಣಕ್ಕಿಳಿಯುವುದನ್ನು ಎದುರು ನೋಡಬಹುದು. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ 11 ಈ ಕೆಳಗಿನಂತಿರಲಿದೆ…
ಈ ಪಂದ್ಯವು ಸರಣಿ ನಿರ್ಣಾಯಕ. ಏಕೆಂದರೆ ಐದು ಪಂದ್ಯಗಳ ಮೊದಲೆರಡು ಮ್ಯಾಚ್ಗಳಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಭಾರತ ತಂಡವು ಗೆದ್ದರೆ ಸರಣಿಯನ್ನು ವಶಪಡಿಸಿಕೊಳ್ಳಬಹುದು. ಅತ್ತ ಸರಣಿ ಗೆಲುವಿನ ಆಸೆಯನ್ನು ಜೀವಂತವಿರಿಸಿಕೊಳ್ಳಬೇಕಿದ್ದರೆ ನ್ಯೂಝಿಲೆಂಡ್ ತಂಡವು ಇಂದಿನ ಮ್ಯಾಚ್ನಲ್ಲಿ ಗೆಲ್ಲಲೇಬೇಕು. ಹೀಗಾಗಿ ಈ ಪಂದ್ಯದಲ್ಲೂ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.
ಇದನ್ನೂ ಓದಿ: ನೇರವಾಗಿ ಫೈನಲ್ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ರಾಜ್ಯದಲ್ಲಿ ಇಂದೂ ಬಿಡದ ಮೈಕೊರೆಯುವ ಚಳಿ!
ಬೆಂಗಳೂರು, ಜನವರಿ 25: ಇಂದೂ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ (Weather Forecast) ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದೆಲ್ಲೆಡೆ ಕಳೆದ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದ್ದು, ಇನ್ನೂ ನಾಲ್ಕು ದಿನ ಇದೇ ಹವಾಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ.
ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು ಮೈಸೂರು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಇಂದು ನಗರದಲ್ಲಿ ಎಂದಿನಂತೆ ಚಳಿಯ ಜೊತೆಗೆ ಮಂಜು ಮುಸುಕಿದ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ. ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಸಿನಿಪ್ರಿಯರು ದೇಶಭಕ್ತಿ ಸಿನಿಮಾಗಳನ್ನು ಖಂಡಿತಾ ಇಷ್ಟಪಡುತ್ತಾರೆ. ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆದ ‘ಧುರಂಧರ್’ ಚಿತ್ರವೇ ಅದಕ್ಕೆ ಸಾಕ್ಷಿ. ಈಗ ‘ಬಾರ್ಡರ್ 2’ (Border 2) ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಈ ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿತು. ಎರಡನೇ ದಿನ ಕೂಡ ಒಳ್ಳೆಯ ಕಲೆಕ್ಷನ್ (Box Office Collection) ಆಗಿದೆ. ಮೂರೇ ದಿನಕ್ಕೆ 100 ಕೋಟಿ ರೂಪಾಯಿ ಕಲೆಕ್ಷನ್ ಆಗುವ ಸೂಚನೆ ಸಿಕ್ಕಿದೆ.
ಮೊದಲ ದಿನವಾದ ಜನವರಿ 23ರಂದು ‘ಬಾರ್ಡರ್ 2’ ಸಿನಿಮಾ 30 ಕೋಟಿ ರೂಪಾಯಿ ಗಳಿಸಿತು. 2ನೇ ದಿನ ಅಂದಾಜು 35 ಕೋಟಿ ರೂಪಾಯಿ ಗಳಿಸಿದೆ ಎಂದು sacnilk ವರದಿ ಮಾಡಿದೆ. ಗಳಿಕೆಯಲ್ಲಿ ಕೊಂಚ ಏರಿಕೆ ಕಂಡಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಭಾನುವಾರ (ಜನವರಿ 25) ಕೂಡ ಇದೇ ಪ್ರಮಾಣದಲ್ಲಿ ಕಲೆಕ್ಷನ್ ಆದರೆ 3 ದಿನದಲ್ಲಿ ಈ ಸಿನಿಮಾ ಸೆಂಚುರಿ ಬಾರಿಸಲಿದೆ.
1997ರಲ್ಲಿ ‘ಬಾರ್ಡರ್’ ಚಿತ್ರ ರಿಲೀಸ್ ಆಗಿತ್ತು. ಆ ಸಿನಿಮಾದ ಸೀಕ್ವೆಲ್ ಆಗಿ ಈಗ ‘ಬಾರ್ಡರ್ 2’ ತೆರೆಕಂಡಿದೆ. ಅನುರಾಗ್ ಸಿಂಗ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೊಸಾಂಜ್, ಅಹಾನ್ ಶೆಟ್ಟಿ, ಸೋನಂ ಭಾಜ್ವ, ಮೋನಾ ಸಿಂಗ್ ಮುಂತಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
1971ರಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ಆಧರಿಸಿ ‘ಬಾರ್ಡರ್ 2’ ಸಿನಿಮಾ ಮಾಡಲಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಈ ಸಿನಿಮಾ ರಿಲೀಸ್ ಆಗಿರುವುದು ಪ್ಲಸ್ ಪಾಯಿಂಟ್. ಈ ಬಾರಿ ವೀಕೆಂಡ್ ಜೊತೆಗೆ ಗಣರಾಜ್ಯೋತ್ಸವ ಬಂದಿದೆ. ಅಂದರೆ, ಶನಿವಾರ, ಭಾನುವಾರ ಹಾಗೂ ಸೋಮವಾರ ಸತತ ರಜೆ ಸಿಕ್ಕಿದೆ. ಇದರಿಂದ ಚಿತ್ರತಂಡಕ್ಕೆ ಅನುಕೂಲ ಆಗುತ್ತದೆ.
ಇದನ್ನೂ ಓದಿ: Border 2 Twitter Review: ಮಿಶ್ರ ಪ್ರತಿಕ್ರಿಯೆ ಪಡೆದ ‘ಬಾರ್ಡರ್ 2’ ಸಿನಿಮಾ
ಈ ಸಿನಿಮಾದ ಟ್ರೇಲರ್ ಮತ್ತು ಹಾಡು ಬಿಡುಗಡೆ ಆದಾಗ ವರುಣ್ ಧವನ್ ಅವರನ್ನು ಟ್ರೋಲ್ ಮಾಡಲಾಗಿತ್ತು. ಆದರೆ ವರುಣ್ ಧವನ್ ಅವರ ವೃತ್ತಿ ಜೀವನದಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಬಾರ್ಡರ್ 2’ ಪಾತ್ರವಾಗಿದೆ. ಈ ಸಿನಿಮಾದ ಟೋಟಲ್ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 25 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಭಾನುವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ಸಪ್ತಮಿಯ ಜೊತೆಗೆ ರೇವತಿ ನಕ್ಷತ್ರ ಮತ್ತು ಸಿದ್ಧ ಯೋಗವನ್ನು ಹೊಂದಿದ್ದು, ರಥಸಪ್ತಮಿಯ ಮಹಾವಿಶೇಷ ದಿನವಾಗಿದೆ. ಭಾನುವಾರದಂದು ರಥಸಪ್ತಮಿ ಬಂದಿರುವುದು ಜಪ, ತಪ, ಧ್ಯಾನಗಳಿಗೆ ಅತ್ಯಂತ ಶುಭಕರವಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ. ಆರೋಗ್ಯಕರ ಜೀವನಕ್ಕೆ ಭಾಸ್ಕರನು ನೀಡುವ ಶಕ್ತಿ ಮತ್ತು ಭಾನುವಾರದ ಮಹತ್ವವನ್ನು ವಿವರಿಸಿದ್ದಾರೆ. ಇಂದು ಬೆಳಗ್ಗೆ 12:39 ರಿಂದ ರಾತ್ರಿ 11:10 ರ ತನಕ ರಥಸಪ್ತಮಿ ಇರಲಿದ್ದು, ಎಕ್ಕದ ಏಳು ಎಲೆಗಳನ್ನು ಶರೀರದ ವಿವಿಧ ಭಾಗಗಳ ಮೇಲೆ ಇಟ್ಟು ಸ್ನಾನ ಮಾಡುವ ಪದ್ಧತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ, ಮೇಷದಿಂದ ಮೀನದವರೆಗೆ ದ್ವಾದಶ ರಾಶಿಗಳ ಆರ್ಥಿಕ, ವೈವಾಹಿಕ, ಉದ್ಯೋಗ, ಆರೋಗ್ಯ, ಹಾಗೂ ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಮಂತ್ರಗಳ ಕುರಿತು ವಿವರವಾದ ಫಲಾಫಲಗಳನ್ನು ನೀಡಿದ್ದಾರೆ.