All posts by nagaraj11081993

Asia Cup 2026: ಮುಂಬರುವ ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ – Kannada News | BCCI Announces India A Women’s Squad for 2026 Asia Cup Rising Stars Tournament

ಫೆಬ್ರವರಿ 13 ರಿಂದ ಆರಂಭವಾಗಲಿರುವ2026 ರ ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಮೆಂಟ್​ಗಾಗಿ ಬಿಸಿಸಿಐ ಭಾರತ ಎ ತಂಡವನ್ನು ಪ್ರಕಟಿಸಿದೆ. ಈ ಟೂರ್ನಮೆಂಟ್​ಗಾಗಿ ಆಯ್ಕೆ ಸಮಿತಿಯು 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಭಾರತೀಯ ಸೀನಿಯರ್ ತಂಡದ ಆಟಗಾರರ್ತಿಯರಿಗೂ ಆಯ್ಕೆ ಸಮಿತಿ ಅವಕಾಶ ನೀಡಿದೆ. ಮುಂಬೈಕರ್ ರಾಧಾ ಯಾದವ್ ಈ ಟೂರ್ನಮೆಂಟ್​ನಲ್ಲಿ ಭಾರತ ಎ ತಂಡವನ್ನು ಮುನ್ನಡೆಸಲಿದ್ದಾರೆ. ಇವರಲ್ಲದೆ, ತೇಜಲ್ ಹಸನ್ಬಿಸ್, ಮಿನ್ನು ಮಣಿ ಮತ್ತು ಸೈಮಾ ಠಾಕೋರ್ ಅವರಂತಹ ಸೀನಿಯರ್ ತಂಡದ ಆಟಗಾರರ್ತಿಯರು ಕೂಡ ಈ ತಂಡದಲ್ಲಿದ್ದಾರೆ.

ಏಷ್ಯಾಕಪ್ ಬಗ್ಗೆ ಪ್ರಮುಖ ಮಾಹಿತಿ

ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಮೆಂಟ್‌ನಲ್ಲಿ ಒಟ್ಟು 8 ತಂಡಗಳು ಸ್ಪರ್ಧಿಸಲಿವೆ. ಈ ಟೂರ್ನಮೆಂಟ್‌ ಫೆಬ್ರವರಿ 13 ರಿಂದ 22 ರವರೆಗೆ ನಡೆಯಲಿದೆ. ಈ 8 ತಂಡಗಳನ್ನು ತಲಾ 4 ರ ಪ್ರಕಾರ ಎ ಮತ್ತು ಬಿ ಎಂಬ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಟೂರ್ನಮೆಂಟ್‌ನಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿವೆ. ಅಲ್ಲದೆ, ಪ್ರತಿ ತಂಡಕ್ಕೆ ಗುಂಪು ಹಂತದಲ್ಲಿ 3 ಪಂದ್ಯಗಳನ್ನು ಆಡುವ ಅವಕಾಶ ಸಿಗುತ್ತದೆ. ಭಾರತ ಎ ತಂಡವನ್ನು ಗುಂಪು ಎ ನಲ್ಲಿ ಸೇರಿಸಲಾಗಿದೆ. ಭಾರತದ ಜೊತೆಗೆ, ಈ ಗುಂಪಿನಲ್ಲಿ ಪಾಕಿಸ್ತಾನ ಮಹಿಳಾ ಎ, ಯುಎಇ ಮತ್ತು ನೇಪಾಳ ಮಹಿಳಾ ತಂಡಗಳು ಸೇರಿವೆ.

ಭಾರತ ಎ ಮಹಿಳಾ ತಂಡದ ವೇಳಾಪಟ್ಟಿ

  • ಫೆಬ್ರವರಿ 13, ಯುಎಇ vs ಭಾರತ
  • ಫೆಬ್ರವರಿ 15, ಪಾಕಿಸ್ತಾನ vs ಭಾರತ
  • ಫೆಬ್ರವರಿ 17, ನೇಪಾಳ vs ಭಾರತ

ಭಾರತ ಎ ತಂಡ: ಹುಮೈರಾ ಕಾಜಿ, ವೃಂದಾ ದಿನೇಶ್, ಅನುಷ್ಕಾ ಶರ್ಮಾ, ದೀಯಾ ಯಾದವ್*, ತೇಜಲ್ ಹಸಬ್ನಿಸ್, ನಂದನಿ ಕಶ್ಯಪ್ [ವಿಕೆಟ್ ಕೀಪರ್], ಮಮತಾ ಎಂ [ವಿಕೆಟ್ ಕೀಪರ್], ರಾಧಾ ಯಾದವ್ [ನಾಯಕಿ], ಸೋನಿಯಾ ಮೆಂಧಿಯಾ, ಮಿನ್ನು ಮಣಿ, ತನುಜಾ ಕನ್ವೆರ್, ಪ್ರೇಮಾ ರಾವತ್, ಸೈಮಾ ಠಾಕೋರ್, ಜಿಂತಾಮಣಿ ಕಲಿತಾ, ನಂದನಿ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಾಲಿನಿಂದ ಅಲರ್ಜಿ ಇರುವವರು ಮೊಸರನ್ನು ಕೂಡ ತಿನ್ನಬಾರದೇ? ಇಲ್ಲಿದೆ ಸ್ಪಷ್ಟ ಮಾಹಿತಿ – Kannada News | Can You Eat Curd If You’re Allergic to Milk?

ಇತ್ತೀಚಿನ ದಿನಗಳಲ್ಲಿ, ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುವ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಅನೇಕರು ಹಾಲು (Milk) ಕುಡಿದ ನಂತರ ಹೊಟ್ಟೆ ನೋವು, ವಾಂತಿ, ಚರ್ಮದ ದದ್ದುಗಳು ಅಥವಾ ಉಸಿರಾಟದ ತೊಂದರೆ, ಹೀಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವಂತಾಗಿದೆ. ಇಂತಹ ಸಂದರ್ಭಗಳಲ್ಲಿ, ಹಾಲು ಸೇವನೆ ಮಾಡುವುದರಿಂದ ಅಲರ್ಜಿ ಉಂಟಾಗುತ್ತಿದ್ದರೆ ಮೊಸರು ತಿನ್ನುವುದನ್ನು ಕೂಡ ನಿಲ್ಲಿಸಬೇಕೇ ಎಂಬ ಗೊಂದಲ ಕೆಲವರಲ್ಲಿರುತ್ತದೆ. ವಾಸ್ತವವಾಗಿ, ಮೊಸರನ್ನು ಹಾಲಿನಿಂದ ತಯಾರಿಸಲಾಗುತ್ತದೆಯಾದರೂ ಅದನ್ನು ತಯಾರಿಸುವ ಪ್ರಕ್ರಿಯೆಯು ವಿಭಿನ್ನವಾಗಿರುತ್ತದೆ. ಆದರೂ ಕೂಡ ಹಾಲಿನಿಂದ ಅಲರ್ಜಿ ಇರುವವರು ಮೊಸರು ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಮೊಸರು ತಿನ್ನುವುದನ್ನು ಬಿಡಬೇಕೇ ಎಂಬ ಮಾಹಿತಿಯನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಾಲಿನಿಂದ ಅಲರ್ಜಿ ಇರುವವರು ಮೊಸರು ತಿನ್ನುವುದನ್ನು ಬಿಡಬೇಕೆ?

ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಅವರು ಹೇಳುವ ಪ್ರಕಾರ, ಈ ಪ್ರಶ್ನೆಗೆ ಉತ್ತರ ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಏಕೆಂದರೆ ಹಾಲಿನ ಅಲರ್ಜಿ ಸಾಮಾನ್ಯವಾಗಿ ಹಾಲಿನಲ್ಲಿರುವ ಪ್ರೋಟೀನ್‌ಗಳಿಂದ ಉಂಟಾಗುತ್ತದೆ, ಆದರೆ ಮೊಸರು ಸೇವನೆ ಮಾಡುವುದರಿಂದ ಹಾಗಾಗಬೇಕು ಎಂಬುದಿಲ್ಲ. ಅದಕ್ಕಾಗಿಯೇ ಅನೇಕರಿಗೆ ಹಾಲು ಕುಡಿಯುವುದರಿಂದ ಸಮಸ್ಯೆಯಾಗುತ್ತದೆ, ಆದರೆ ಮೊಸರು ಸೇವನೆಯಿಂದ ದೇಹದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗವುದಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಹಾಲಿನ ಪ್ರೋಟೀನ್‌ಗಳಿಂದ ತೀವ್ರ ಅಲರ್ಜಿ ಇರುವವರಿಗೆ, ಮೊಸರು ತಿನ್ನುವುದರಿಂದ ಅಲರ್ಜಿಯ ಪ್ರತಿಕ್ರಿಯೆಗಳು ಕಂಡುಬರಬಹುದು. ಹೊಟ್ಟೆ ನೋವು, ತುರಿಕೆ, ಊತ ಅಥವಾ ಉಸಿರಾಟದ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಹಾಲಿಗೆ ಅಲರ್ಜಿ ಇರುವ ಎಲ್ಲರಿಗೂ ಮೊಸರು ಸುರಕ್ಷಿತ ಎಂದು ಹೇಳುವುದು ತಪ್ಪು. ಮೊಸರು ಸೇವಿಸುವುದು ಪ್ರಯೋಜನಕಾರಿಯೇ ಅಥವಾ ಇಲ್ಲವೇ ಎಂಬುದನ್ನು ದೇಹದ ಪ್ರತಿಕ್ರಿಯೆಯನ್ನು ಗಮನಿಸುವ ಮೂಲಕ ಮಾತ್ರ ನಿರ್ಧರಿಸಬಹುದು.

ಇದನ್ನೂ ಓದಿ: ಹಾಲು ನಿಜವಾಗಿಯೂ ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುತ್ತದೆಯೇ? ಇಲ್ಲಿದೆ ಸ್ಪಷ್ಟ ಮಾಹಿತಿ

ಈ ಸಮಸ್ಯೆಯನ್ನು ತಡೆಯಲು ಏನು ಮಾಡಬಹುದು?

ಹಾಲಿನ ಅಲರ್ಜಿ ಇದ್ದರೆ, ನಿಮ್ಮ ಆಹಾರದಲ್ಲಿ ಮೊಸರನ್ನು ನೇರವಾಗಿ ಸೇವನೆ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಮೊದಲ ಬಾರಿಗೆ, ಮೊಸರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಿ, ಆ ಬಳಿಕ ದೇಹದ ಪ್ರತಿಕ್ರಿಯೆಯನ್ನು ಗಮನಿಸಿ. ಅಸ್ವಸ್ಥತೆ ಕಂಡುಬಂದರೆ, ತಕ್ಷಣ ಮೊಸರು ಸೇವನೆ ಮಾಡುವುದನ್ನು ನಿಲ್ಲಿಸಿ. ಸೋಯಾ ಅಥವಾ ತೆಂಗಿನಕಾಯಿಯಿಂದ ತಯಾರಿಸಿದ ಮೊಸರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದನ್ನು ಕೂಡ ಸೇವನೆ ಮಾಡಬಹುದು. ಹಾಲು ಅಥವಾ ಮೊಸರಿಗೆ ಸಂಬಂಧಿಸಿದ ಅಲರ್ಜಿಯನ್ನು ಲಘುವಾಗಿ ಪರಿಗಣಿಸಬಾರದು. ಹಾಗಾಗಿ ಸರಿಯಾದ ರೋಗನಿರ್ಣಯಕ್ಕೆ ಅಲರ್ಜಿ ಪರೀಕ್ಷೆ ಮತ್ತು ವೈದ್ಯರ ಸಲಹೆ ಅಗತ್ಯ. ವೈದ್ಯರು ನಿಮ್ಮ ಅಲರ್ಜಿಯ ಪ್ರಕಾರವನ್ನು ಅರ್ಥಮಾಡಿಕೊಳ್ಳಬಹುದು ಮತ್ತು ಸರಿಯಾದ ಆಹಾರ ಸೇವನೆಯ ಬಗ್ಗೆ ಸಲಹೆ ನೀಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಶಕಗಳ ಬಳಿಕ ಶಾಲೆಗೆ ಮರಳಿದ ಗಿಲ್ಲಿ: ಚಿತ್ರಗಳ ನೋಡಿ

Source link

ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ – Kannada News | Republic Day 2026: Karnataka tableau out from Delhi Republic Day parade

ನವದೆಹಲಿ/ಬೆಂಗಳೂರು,(ಜನವರಿ 24): ದೇಶದ 77ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಈ ಬಾರಿ ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಪಥಸಂಚಲನದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಕರ್ನಾಟಕದಿಂದ ‘ಮಿಲೆಟ್ಸ್ ಟು ಮೈಕ್ರೋಚಿಪ್’ (ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ) ಎಂಬ ಪರಿಕಲ್ಪನೆಯ ಸ್ತಬ್ಧಚಿತ್ರವನ್ನ ಸಿದ್ಧಪಡಿಸಲಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಕರ್ನಾಟಕದ ಟ್ಯಾಬ್ಲೋಗೆ ಪರೇಡ್‌ನಿಂದ ಹೊರಬಿದ್ದಿದೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದೆ.

ಮಿಲೆಟ್ಸ್‌ ಟು ಮೈಕ್ರೋ ಚಿಪ್‌’ ವಿಷಯಾಧಾರಿತ ಸ್ತಬ್ಧ ಚಿತ್ರ

ಆತ್ಮನಿರ್ಭರ ಭಾರತಕ್ಕೆ ಸಿರಿಧಾನ್ಯದಿಂದ ತಂತ್ರಜ್ಞಾನದವರೆಗೆ ರಾಜ್ಯದ ಸಮಗ್ರ ಕೊಡುಗೆಯ ಸಂಕೇತವಾಗಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ‘ಮಿಲೆಟ್ಸ್‌ ಟು ಮೈಕ್ರೋ ಚಿಪ್‌’ ವಿಷಯಾಧಾರಿತ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಸಿದ್ಧಪಡಿಸಲಾಗಿತ್ತು. ಮಿಲೆಟ್ಸ್ ಟು ಮೈಕ್ರೋಚಿಪ್ ಸ್ತಬ್ಧಚಿತ್ರದ ಮೂಲಕ ಕರ್ನಾಟಕದ ಬೆಳೆಗಳಾದ ರಾಗಿ, ಜೋಳ, ನವಣೆ, ಸಜ್ಜೆ ಬೆಳೆ ಹಾಗೂ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಬೆಳವಣಿಗೆ ಬಗ್ಗೆಯೂ ಟ್ಯಾಬ್ಲೋದಲ್ಲಿ ನಿರ್ಮಿಸಲಾಗಿತ್ತು.

ಇದನ್ನೂ ಓದಿ: ಮಿಲ್ಲೆಟ್ ಟು ಮೈಕ್ರೋಚಿಪ್: ಹೇಗಿರಲಿದೆ ಗೊತ್ತಾ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಭಾಗಿಯಾಗಲಿರುವ ಕರ್ನಾಟಕದ ಸ್ತಭ್ಧಚಿತ್ರ?

ಕರ್ನಾಟಕವು ಕೃಷಿ ಕೈಗಾರಿಕೆ, ನಾವೀನ್ಯತೆ ಮತ್ತು ಸಂಸ್ಕೃತಿಯಲ್ಲಿ ಸಮತೋಲಿತ ಪ್ರಗತಿ ಮೂಲಕ ರಾಷ್ಟ್ರವನ್ನು ಸಮೃದ್ಧ ಮತ್ತು ಸುಸ್ಥಿರ ಭವಿಷ್ಯದತ್ತ ಕೊಂಡೊಯ್ಯುತ್ತಿದೆ. ಆತ್ಮನಿರ್ಭರ ಭಾರತದ ದೃಷ್ಟಿಗೆ ಕರ್ನಾಟಕ ಸಮಗ್ರ ಕೊಡುಗೆ ನೀಡುತ್ತಿದೆ ಎಂಬುದು ಈ ಸ್ತಬ್ಧಚಿತ್ರದ ಸಂಕೇತವಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಈ ಸ್ತಬ್ಧಚಿತ್ರ ಪ್ರದರ್ಶಿಸುವ ಪ್ರಸ್ತಾಪ ಅಂಗೀಕೃತವಾಗದ ಹಿನ್ನೆಲೆಯಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ವರ್ಣರಂಜಿತ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ.

ಅವಕಾಶ ಸಿಗದಿರುವುದಕ್ಕೆ ಕಾರಣ ಕೊಟ್ಟ ಎಂಪಿ

ಈ ಬಗ್ಗೆ ಮೈಸೂರು ಬಿಜೆಪಿ ಸಂಸದ ಯದುವೀರ್ ಒಡೆಯರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಗಣರಾಜ್ಯೋತ್ಸವ ಪರೇಡ್​ನಲ್ಲಿ ರಾಜ್ಯದ ಸ್ತಬ್ಧಚಿತ್ರ ಭಾಗವಹಿಸುತ್ತಿಲ್ಲ. ಸರಿಯಾಗಿ ಪತ್ರ ವ್ಯವಹಾರ ನಡೆದಿಲ್ಲ, ಹಾಗಾಗಿ ಗೊಂದಲ ಆಗಿತ್ತು. ಈ ಬಾರಿ ಗಣರಾಜ್ಯೋತ್ಸವದಲ್ಲಿ ರಾಜ್ಯದ ಸ್ತಬ್ಧಚಿತ್ರ ಇರುವುದಿಲ್ಲ ಎಂದು ಕಾರಣ ಕೊಟ್ಟಿದ್ದಾರೆ.

ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ

ಕರ್ನಾಟಕದ ಪ್ರತಿಯೊಬ್ಬ ಮತದಾರು ಸೂಕ್ಷ್ಮವಾಗಿ ಯೋಚಿಸಬೇಕು. ಬಿಜೆಪಿಗೆ ಮತ ಹಾಕಿದವರು ಯೋಚನೆ ಮಾಡಿ. ನಾಲಾಯಕ್ ಸಂಸದರು ನೋಡಬೇಕಿದೆ. ರಾಜ್ಯದ ಪರ ಧ್ವನಿ ಎತ್ತದ ಸಂಸದರು ನೋಡಿ ಜನವರಿ 26 ರಂದು ರಿಪಬ್ಲಿಕ್ ಡೇ ನಡೆಯುತ್ತೆ. 30 ಟ್ಯಾಬ್ಲೋಗಳಿಗೆ ಅವಕಾಶ ನೀಡಲಾಗಿದೆ. 17 ಟ್ಯಾಬ್ಲೋ ಕರ್ತವ್ಯ ಪಥದಲ್ಲಿ ಹೋಗುತ್ತವೆ. ಕೇರಳದ ಟ್ಯಾಬ್ಲೋ ಹೋಗ್ತಿದೆ. ಯಾಕಂದ್ರೆ ಚುನಾವಣೆ ಇದೆ.ತಮಿಳುನಾಡಿನಲ್ಲಿ‌ ಚುನಾವಣೆ ಇದೆ ಅದರದ್ದು ಸಹ ಹೋಗುತ್ತಿದೆ. ಪುದುಚೇರಿಯಲ್ಲು ಚುನಾವಣೆ ಇದೆ. ಅಲ್ಲಿ ಚುನಾವಣೆಗಳು ಇರುವುದಿರಂದ ಈ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಆದರೆ ನಮ್ಮ ಟ್ಯಾಬ್ಲೋ ಸಿಕ್ಕಿಲ್ಲ. ಇದಾ ನೀವು ರಾಜ್ಯಕ್ಕೆ‌ಕೊಡುವ ಗೌರವ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ? ಮುಖ್ಯ ಅತಿಥಿಗಳ್ಯಾರು?

ಮಿಲೆಟ್ಸ್ ಟು ಮೈಕ್ರೋ ಚಿಪ್ ಟ್ಯಾಬ್ಲೋ ಇದೆ. ನಮ್ಮ ಕರ್ನಾಟಕದ್ದು,ಅದಕ್ಕೆ ಬಿಜೆಪಿಯವರು ಅಪಮಾನ ಮಾಡುತ್ತಿದ್ದಾರೆ. ಸೋಮಣ್ಣ ಬಿಜೆಪಿ ಅಧ್ಯಕ್ಷರಾಗೋಕೆ ನೋಡುತ್ತಿದ್ದಾರೆ. ಯತ್ನಾಳ್ ಅವರೇ ಓ ಅಂತ ಮಾತನಾಡುತ್ತೀರಲ್ಲ. ಇದರ ಬಗ್ಗೆ ನೀವು ಮಾತನಾಡಿ. ಅಶೋಕಣ್ಣ ನೀವು ಇದರ ಬಗ್ಗೆ ಮಾತನಾಡಿ. ತೇಜಸ್ವಿ ಸೂರ್ಯ ರನ್ನಿಂಗ್ ರೇಸ್ ನಲ್ಲಿದ್ದೀರ. ನಮ್ಮ ಟ್ಯಾಬ್ಲೋ‌ ಬಗ್ಗೆ ಹೇಳಿ. ಇದರ ಬಗ್ಗೆ ನಾಲಾಯಕ್ ಎಂಪಿಗಳು ಹೇಳಲಿ ಎಂದು ಕಿರಿಕಾರಿದರು.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:29 pm, Sat, 24 January 26

Source link

ಬೆಂಗಳೂರು: ಪಿಯುಸಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸಪ್ಪ ಅರೆಸ್ಟ್​​ – Kannada News | RT Nagar Police Constable Arrested For physical abuse to Student In Bengaluru

ಬೆಂಗಳೂರು, (ಜನವರಿ 24): ಪೊಲೀಸ್ ಕಾನ್ಸ್​​​​ಟೇಬಲ್​​ (Police Constable)  ಕಾಲೇಜು ವಿದ್ಯಾರ್ಥಿನಿಗೆ (College Student) ಲೈಂಗಿಕ ಕಿರುಕುಳ ನೀಡಿದ ಆರೋಪ ಬೆಳಕಿಗೆ ಬಂದಿದೆ. ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್​​​ನಲ್ಲಿ ಕರ್ತವ್ಯದಲ್ಲಿದ್ದ ವೇಳೆ R.T.ನಗರ ಠಾಣೆಯ ಕಾನ್ಸ್​​ಟೇಬಲ್ ಯಮುನಾ ನಾಯಕ್ ಎನ್ನುವಾತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಸದ್ಯ ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಪೊಲೀಸರು, ಯಮುನಾ ನಾಯಕ್ ನನ್ನು ಬಂಧಿಸಿದ್ದಾರೆ.

ಫ್ರೀಡಂಪಾರ್ಕ್​ನಲ್ಲಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ವೇಳೆ ಯಮುನಾ ನಾಯಕ್, ಪ್ರಥಮ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಸಂಬಂಧ ವಿದ್ಯಾರ್ಥಿನಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಈ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು, ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಅರೋಪಿ ಪೇದೆ ಯಮುನಾ ನಾಯಕ್​​ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್​​: ಪೊಲೀಸ್​​ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ

ಕರ್ನಾಟಕದ ಪೊಲೀಸರು ತಮ್ಮ ದಕ್ಷತೆ ಮತ್ತು ವೃತ್ತಿಪರತೆಗೆ ದೇಶದಲ್ಲೇ ಹೆಸರಾಗಿದ್ದರು. ಕಾನೂನು ಮೀರಿದವರನ್ನು ಕ್ಷಿಪ್ರವಾಗಿ ಬಂಧಿಸಿ ಜೈಲಿಗೆ ಕಳುಹಿಸುತ್ತಿದ್ದರು. ಆದ್ರೆ, ಈಗ ಪರಿಸ್ಥಿತಿ ಬದಲಾಗಿದ್ದು, ಪೊಲೀಸರೇ ಕೋರ್ಟ್​​ ಕಟಕಟೆಯಲ್ಲಿ ನಿಲ್ಲುತ್ತಿದ್ದಾರೆ. ಕೊಲೆ, ಸುಲಿಗೆ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಭೂ ಮಾಫೀಯಾ,  ಲಂಚ, ಹೀಗೆ ಅನೇಕ ಅಪರಾಧ ಚಟುವಟಿಕೆಗಳಲ್ಲಿ ಪೊಲೀಸರು ತೊಡಗಿಸಿಕೊಂಡು ಆರೋಪಿಗಳಾಗುವ ಸ್ಥಾನದಲ್ಲಿ ನಿಲ್ಲುವ ಪರಿಸ್ಥಿತಿ ತಂದುಕೊಳ್ಳುತ್ತಿದ್ದಾರೆ.

ಅದರಲ್ಲೂ ಇತ್ತೀಚಗೆ ಬೆಂಗಳೂರಿನಲ್ಲಿ ಪೊಲೀಸರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡುವ ಸಾಕಷ್ಟು ಪ್ರಕರಣಗಳು ಬಹಿರಂಗವಾಗಿದ್ದು, ಈ ಸಂಬಂಧ ಅನೇಕ ಪೊಲೀಸ್ ಪೇದೆಗಳು, ಇನ್ಸ್​​ಪೆಕ್ಟರ್​​ಗಳು ಕೆಲಸದಿಂದ ಅಮಾನತುಗೊಂಡಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಪೊಲೀಸರ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ. ಪೊಲೀಸರೇ ಅನ್ಯಾಯದ ಹಾದಿಯಲ್ಲಿ ನಡೆಯುತ್ತಿರುವಾಗ ನ್ಯಾಯ ಎಲ್ಲಿದೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು, ಎಲ್ಲಿ ನೋಡಬಹುದು?

Source link

ಕ್ಷಮೆ ಕೇಳುವುದಿಲ್ಲ, ಕಾಂಗ್ರೆಸ್​​​​​ ನಿಯಮವನ್ನು ಉಲ್ಲಂಘಿಸಿಲ್ಲ: ಈ ವಿಚಾರದಲ್ಲಿ ಕೇಂದ್ರವನ್ನು ಬೆಂಬಲಿಸುವೆ ಎಂದ ಶಶಿ ತರೂರ್ – Kannada News | Tharoor Defends ‘Operation Sindoor’ Stance Against Congress, Prioritizes India

ದೆಹಲಿ, ಜ.24: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ‘ಆಪರೇಷನ್ ಸಿಂಧೂರ್’ (Operation Sindoor) ಗೆ ಸಂಬಂಧಿಸಿದಂತೆ ತಮ್ಮ ನಿಲುವಿನ ಬಗ್ಗೆ ಯಾವುದೇ ವಿಷಾದವಿಲ್ಲ (Unapologetic) ಎಂದು ಹೇಳಿದ್ದಾರೆ. ಈ ಕುರಿತು ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವನ್ನು ಉಲ್ಲಂಘಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. 2025ರ ಮೇ ತಿಂಗಳಲ್ಲಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧ ನಡೆಸಿದ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಶಶಿ ತರೂರ್ ಅವರು ಸಮರ್ಥಿಸಿಕೊಂಡಿದ್ದರು, ಅವರ ಈ ನಿಲುವಿನ ಬಗ್ಗೆ ಅವರ ಪಕ್ಷದಲ್ಲೇ ಕೆಲವು ಅಪಸ್ವರಗಳು ಬಂತು, ಪಾಕಿಸ್ತಾನದ ಭಯೋತ್ಪಾದನೆ ಬಗ್ಗೆ ವಿಶ್ವಕ್ಕೆ ತಿಳಿಸುವ ನಿಟ್ಟಿನಲ್ಲಿ ಸರ್ವಪಕ್ಷದ ಸಂಸದರ ನಿಯೋಗವನ್ನು ಬೇರೆ ಬೇರೆ ದೇಶಕ್ಕೆ ಕೇಂದ್ರ ಸರ್ಕಾರ ಕಳಿಸಿತ್ತು. ಈ ಬಗ್ಗೆ ಪ್ರಶಂಸೆ ಕೂಡ ವ್ಯಕ್ತವಾಗಿತ್ತು. ಶಶಿ ತರೂರ್ ಅವರು ಕೂಡ ಈ ನಿಯೋಗದ ನೇತೃತ್ವವನ್ನು ವಹಿಸಿದರು. ಆದರೆ ಕಾಂಗ್ರೆಸ್​​ ಕೇಂದ್ರದ ಮಿಲಿಟರಿ ಕಾರ್ಯಚರಣೆ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಹೇಳಿತ್ತು, ಆದರೆ ಇದನ್ನು ಶಶಿ ತರೂರ್ ಅವರು ವಿರೋಧಿಸಿದರು. ಇದು ಪಕ್ಷದ ನಿಯಮ ಉಲ್ಲಂಘನೆ ಮಾಡಿದ್ದಂತೆ ಎಂದು ಕಾಂಗ್ರೆಸ್​​​ ಹೇಳಿದೆ. ಈ ಬಗ್ಗೆ ಇದೀಗ ಕೋಝಿಕ್ಕೋಡ್‌ನಲ್ಲಿ ನಡೆದ ಕೇರಳ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ್ದಾರೆ.

ನಾನು ಸಂಸತ್ತಿನಲ್ಲಿ ಕಾಂಗ್ರೆಸ್‌ನ ಯಾವುದೇ ನಿಲುವುಗಳನ್ನು ಯಾವುದೇ ಹಂತದಲ್ಲೂ ಉಲ್ಲಂಘಿಸಿಲ್ಲ, ಸಾರ್ವಜನಿಕವಾಗಿ ತತ್ವದ ಬಗ್ಗೆ ಭಿನ್ನಾಭಿಪ್ರಾಯವಿರುವ ಏಕೈಕ ವಿಷಯವೆಂದರೆ ಆಪರೇಷನ್ ಸಿಂಧೂರ್, ಅಲ್ಲಿ ನಾನು ಬಲವಾದ ನಿಲುವನ್ನು ತೆಗೆದುಕೊಂಡಿದ್ದೆ ಮತ್ತು ನಾನು ಅದರ ಬಗ್ಗೆ ಎಂದಿಗೂ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ. ಪಹಲ್ಗಮ್ ಘಟನೆ ನಡೆದ ನಂತರ, ನಾನು ಒಬ್ಬ ವೀಕ್ಷಕ ಮತ್ತು ನಿರೂಪಕ, ಬರಹಗಾರನಾಗಿ, ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಒಂದು ಅಂಕಣವನ್ನು ಬರೆದಿದ್ದೆ, ಅದಕ್ಕೆ ನಾನು ‘ಆಫ್ಟರ್ ಪಹಲ್ಗಮ್’ ಎಂಬ ಶೀರ್ಷಿಕೆಯನ್ನು ನೀಡಿದ್ದೇನೆ. ಅವರು ಅದಕ್ಕೆ ‘ಹಾರ್ಡ್ ಹಿಟ್, ಹಿಟ್ ಸ್ಮಾರ್ಟ್’ ಎಂಬ ಶೀರ್ಷಿಕೆಯನ್ನು ನೀಡಿದರು . ಅದರಲ್ಲಿ ನಾನು ದೇಶದ ಬಗ್ಗೆ ಹೇಳಿದ್ದೇನೆ. ನಾವು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ದೇಶ. ಪಾಕಿಸ್ತಾನದೊಂದಿಗೆ ಪೂರ್ಣ ಪ್ರಮಾಣದ ಸಂಘರ್ಷ ಮಾಡುವುದು ನಮ್ಮ ಉದ್ದೇಶವಲ್ಲ, ನಾವು ಬಾಹ್ಯ ಹೂಡಿಕೆಗಳ ಮೇಲೆ ಅವಲಂಬಿತ ದೇಶ, ಮತ್ತು ಹೂಡಿಕೆದಾರರು ಯುದ್ಧ ವಲಯಗಳನ್ನು ಇಷ್ಟಪಡುವುದಿಲ್ಲ, ಆದ್ದರಿಂದ ಭಾರತವನ್ನು ಯುದ್ಧ ವಲಯವನ್ನಾಗಿ ಪರಿವರ್ತಿಸುವ ಯಾವುದೇ ಹೆಜ್ಜೆಯನ್ನು ನಾವು ಇಡಲು ಸಾಧ್ಯವಿಲ್ಲ.

ಇದನ್ನೂ ಓದಿ: ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 350ಕ್ಕೆ ಹೆಚ್ಚಿಸುವ ಗುರಿ: ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣದ ಭರವಸೆ

ಹಾಗಾಗಿ ನಮ್ಮ ಯುದ್ಧ ಭಯೋತ್ಪಾದಕರ ಮೇಲೆ ಮಾತ್ರ, ಭಯೋತ್ಪಾದಕ ಗುರಿಗಳನ್ನು ಮಾತ್ರ ಹೊಡೆಯಿರಿ ಮತ್ತು ಭಾರತೀಯರು ಭಯೋತ್ಪಾದನೆಯನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ ಎಂದು ಹೇಳಿದರು. ನಾವು ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿಲ್ಲ. ಭಯೋತ್ಪಾದನೆಯನ್ನು ನಿಗ್ರಹಿಸಲು ಪಾಕಿಸ್ತಾನಕ್ಕೆ ಒತ್ತಡ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ. ಇನ್ನು ಈ ವೇಳೆ ಭಾರತ ಸರ್ಕಾರದ ನಿಯೋಗದ ನೇತೃತ್ವ ವಹಿಸಿರುವ ಬಗ್ಗೆ ನೆನೆಪಿಸಿಕೊಂಡರು. ಒಂದು ಒಳ್ಳೆಯ ಅನುಭವ ನೀಡಿದೆ. ಭಾರತ ಸತ್ತರೆ ಯಾರು ಬದುಕುತ್ತಾರೆ ಎಂಬ ನೆಹರು ಅವರ ಮಾತನ್ನು ಕೂಡ ನೆನಪಿಸಿಕೊಂಡರು. ಜಗತ್ತಿನಲ್ಲಿ ಭಾರತದ ರಾಷ್ಟ್ರೀಯ ಭದ್ರತೆಯು ಒಂದು ಸಮಸ್ಯೆಯಾಗಿದ್ದಾಗ, ಭಾರತವು ಮೊದಲು ಬರುತ್ತದೆ. ರಾಜಕೀಯ ಪಕ್ಷಗಳು ಮುಖ್ಯ, ಅವು ಉತ್ತಮ ಭಾರತವನ್ನು ರಚಿಸಲು ಒಂದು ವಾಹನ. ಅದನ್ನು ಮಾಡುವ ವಿಧಾನಗಳಲ್ಲಿ ನಾವು ಪರಸ್ಪರ ಭಿನ್ನಾಭಿಪ್ರಾಯ ಹೊಂದಬಹುದು, ಆದರೆ ಭಾರತದ ಹಿತಾಸಕ್ತಿಗಳು ತೊಡಗಿಸಿಕೊಂಡಾಗಲೆಲ್ಲಾ, ಭಾರತವು ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:47 pm, Sat, 24 January 26

Source link

ಕೊಲೆಯಾದ ಹುಬ್ಬಳ್ಳಿ ಅಂಜಲಿ ಅಂಬಿಗೇರ ಕುಟುಂಬಕ್ಕೆ ಮನೆ: ಸಿಎಂ ಮುಂದೆ ಕಣ್ಣೀರಿಟ್ಟ ಅಜ್ಜಿ – Kannada News | Hubballi Anjali Murder: CM Siddaramaiah Allocates House to Victim’s Family, Grandmother Emotional

ಅಜ್ಜಿ, ಮನೆ ವಿತರಣೆ ಕಾರ್ಯಕ್ರಮ, ಅಂಜಲಿ ಅಂಬಿಗೇರ

ಹುಬ್ಬಳ್ಳಿ, ಜನವರಿ 24: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಪುತ್ರಿ ನೇಹಾಳ ಬರ್ಬರ ಹತ್ಯೆ ಬಳಿಕ ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಅಂಜಲಿ ಅಂಬಿಗೇರ ಕೊಲೆ ಕೇಸ್​​. ಇದೇ ಪ್ರಕರಣ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿತ್ತು. ಅಂದು ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಸರ್ಕಾರ ಇಂದು ಮನೆ ನೀಡಿದೆ. ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah ಕೊಲೆಯಾಗಿರುವ ಅಂಜಲಿ ಅಂಬಿಗೇರ (Anjali Ambiger) ಪೋಷಕರಿಗೆ ಮನೆ ಹಂಚಿಕೆ ಮಾಡಲಾಗಿದ್ದು, ಈ ವೇಳೆ ಮೊಮ್ಮಗಳನ್ನು ನೆನೆದು ಅಜ್ಜಿ ಭಾವುಕರಾದರು.

ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ಅಂಜಲಿ ಅಂಬಿಗೇರ ಕೊಲೆ ನಡೆದಿತ್ತು. ದುಷ್ಕರ್ಮಿ ಮನೆಗೆ ನುಗ್ಗಿ ಅಂಜಲಿಯನ್ನ ಕೊಲೆ ಮಾಡಿದ್ದ. ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಸಂದರ್ಭದಲ್ಲಿ ಅಂಜಲಿಯ ಮನೆಗೆ ಭೇಟಿ ಮಾಡಿದ್ದ ಗೃಹ ಸಚಿವ ಜಿ ಪರಮೇಶ್ವರ್, ಅಜ್ಜಿ ಗಂಗಮ್ಮ ಮತ್ತು ಸಹೋದರಿಯರಿಗೆ ಸಾಂತ್ವನ ಹೇಳಿದ್ದರು. ಜೊತೆಗೆ ಗೌಪ್ಯವಾಗಿ ಹಲವು ಆಶ್ವಾಸನೆಗಳನ್ನೂ ನೀಡಿದ್ದರು. ಇದೀಗ ಆ ಪೈಕಿ ಕುಟುಂಬಕ್ಕೆ ಮನೆ ಹಂಚಿಕೆ ಮಾಡಲಾಗಿದೆ. ಕೊಲೆಯಾಗಿರುವ ಅಂಜಲಿ ಪೋಷಕರಿಗೆ ಸಿಎಂ ಸಿದ್ದರಾಮಯ್ಯ ಮನೆ ಹಂಚಿಕೆ ಮಾಡಿದ್ದಾರೆ. ಸಿಎಂ ಕೈಯಿಂದ ಮನೆ ಬೀಗ ಪಡೆಯುವಾಗ ಅಂಜಲಿ ಅಜ್ಜಿ ಮೊಮ್ಮಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಏನಿದು ಪ್ರಕರಣ?

ಅಂಜಲಿ ಅಂಬಿಗೇರ ಕೊಲೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಎರಡು ವರ್ಷಗಳ ಹಿಂದೆ ಅಂಜಲಿ ಕೊಲೆಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಅಂಜಲಿ ಸ್ನೇಹಿತ ವಿಶ್ವ ಅಲಿಯಾಸ್ ಗಿರೀಶ್​​, ಮುಂಜಾನೆ ಮನೆಯ ಬಾಗಿಲು ಬಡಿದಿದ್ದ. ಸ್ವತಃ ಅಂಜಲಿಯೇ ಬಂದು ಬಾಗಿಲು ತೆಗೆದಿದ್ದಳು. ಪರ್ಸನಲ್ ಆಗಿ ಮಾತನಾಬೇಕು ಬಾ ಅಂತ ಕರೆದೋನೇ ಏಕಾಏಕಿ ಚಾಕುವಿನಿಂದ ಇರಿದಿದ್ದ.

ಇದನ್ನೂ ಓದಿ: ಅಂಜಲಿ ಅಂಬಿಗೇರ ಕುಟುಂಬಕ್ಕೆ ಆಕಾಶ ತೋರಿಸಿದ್ದ ಪರಮೇಶ್ವರ್​ಗೆ ನೀಡಿದ ಭರವಸೆಗಳು ನೆನಪಿಲ್ಲ!

ಅಂಜಲಿ ಜೋರಾಗಿ ಕೂಗಿಕೊಳ್ತಿದ್ದಂತೆ ಕುತ್ತಿಗೆ ಹಿಡಿದು ಒಳಗೆ ಎಳೆದುಕೊಂಡು ಹೋಗಿದ್ದ. ಅಜ್ಜಿ ಹಾಗೂ ಅಂಜಲಿ ತಂಗಿ ತಡೆಯಲು ಬಂದರೂ ಅವರೇ ಎದುರೇ ಕ್ರೌರ್ಯ ಮೆರೆದಿದ್ದ. ಮನೆಯೆಲ್ಲಾ ಯುವತಿಯನ್ನ ಹಿಡಿದು ಎಳೆದಾಡಿ ಹತ್ತಾರು ಬಾರಿ ಚಾಕುವಿನಿಂದ ಚುಚ್ಚಿ ಕೊಂದಿದ್ದ. ಅಂಜಲಿ ಸತ್ತಿದ್ದು ಪಕ್ಕಾ ಮಾಡಿಕೊಂಡ ಬಳಿಕವೇ ಮನೆಯಿಂದ ಕಾಲ್ಕಿತ್ತಿದ್ದ.

ಇದನ್ನೂ ಓದಿ: ನೇಹಾ, ಅಂಜಲಿ ಕೊಲೆ: ಹುಬ್ಬಳ್ಳಿಯ ಕಾಲೇಜು, ಮನೆಗಳಲ್ಲಾದ ಬದಲಾವಣೆ ಕುರಿತು ಪ್ರಾಂಶುಪಾಲರ, ಪೋಷಕರ ಮಾತು ಟಿವಿ9 ಸಂದರ್ಶನದಲ್ಲಿ

ಅಂಜಲಿ ಹಾಗೂ ಗಿರೀಶ್ ಇಬ್ಬರೂ ಸಹಪಾಠಿಗಳಾಗಿದ್ದರು. ಲವ್ ಬ್ರೇಕಪ್ ಆಗಿತ್ತು. ಅಂಜಲಿ ತನ್ನ ಜೊತೆ ಕ್ಲೋಸ್ ಆಗಿರೋದನ್ನೇ ಅಪಾರ್ಥ ಮಾಡಿಕೊಂಡಿದ್ದ ಪಾಗಲ್, ಅಲ್ಲಿ ಇಲ್ಲಿ ಸುತ್ತಾಡಲು ಕರೆಯುತ್ತಿದ್ದ. ಒಲ್ಲೆ ಎಂದ ಒಂದೇ ಒಂದು ಕಾರಣಕ್ಕೆ ಮಸಣ ಸೇರಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:27 pm, Sat, 24 January 26

Source link

DHFWS Recruitment 2026: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞ ವೈದ್ಯರ ನೇಮಕಾತಿ – Kannada News | DHFWS Bangalore Specialist Doctor Recruitment 2026: Apply Offline for Medical Jobs by Jan 28

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬೆಂಗಳೂರು (DHFWS) ತನ್ನ ಅಧಿಕೃತ ಅಧಿಸೂಚನೆಯ ಮೂಲಕ ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಅಡಿಯಲ್ಲಿ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ವೈದ್ಯರಿಗೆ ಇದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಜನವರಿ 28 ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಶೈಕ್ಷಣಿಕ ಅರ್ಹತೆ:

DHFWS ಬೆಂಗಳೂರು ಬಿಡುಗಡೆ ಮಾಡಿದ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ GNM, B.Sc, MD/DNB/ಡಿಪ್ಲೊಮಾ ಅಥವಾ MS ವಿದ್ಯಾರ್ಹತೆಯನ್ನು ಹೊಂದಿರಬೇಕು. ಹುದ್ದೆಗಳಿಗೆ ಅನುಗುಣವಾದ ವೃತ್ತಿಪರ ಅರ್ಹತೆ ಮತ್ತು ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಆಫ್‌ಲೈನ್‌ನಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು. ಪೂರ್ಣಗೊಂಡ ಅರ್ಜಿ ನಮೂನೆಯನ್ನು ಅಗತ್ಯ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:

ವಿಳಾಸ: ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೆಯ ಟಿಬಿ ಆಸ್ಪತ್ರೆ, ಹಳೆಯ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು – 560038

ಇದನ್ನೂ ಓದಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕ ಹುದ್ದೆಗೆ ನೇಮಕಾತಿ

ಅರ್ಜಿ ಸಲ್ಲಿಸುವ ಪ್ರಮುಖ ಕ್ರಮಗಳು:

ಅರ್ಜಿಯನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗಳು DHFWS ಬೆಂಗಳೂರು ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಳ್ಳಬೇಕು. ಅರ್ಜಿ ಭರ್ತಿ ಮಾಡುವಾಗ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು ಹಾಗೂ ಗುರುತಿನ ಚೀಟಿ, ವಯಸ್ಸಿನ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆಗಳ ದಾಖಲೆಗಳು, ಇತ್ತೀಚಿನ ಛಾಯಾಚಿತ್ರ, ರೆಸ್ಯೂಮ್ ಮತ್ತು ಅನುಭವ ಪ್ರಮಾಣಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಬೇಕು. ಅರ್ಜಿ ಶುಲ್ಕ ಅನ್ವಯಿಸಿದಲ್ಲಿ, ವರ್ಗದ ಪ್ರಕಾರ ಪಾವತಿಸಬೇಕು. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸೂಚಿಸಿದ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಮಾನ್ಯ ಸೇವೆಯ ಮೂಲಕ ಕಳುಹಿಸಬೇಕು. ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಸೇವೆಯನ್ನು ಹುಡುಕುತ್ತಿರುವ ಅರ್ಹ ವೈದ್ಯರಿಗೆ ಈ ನೇಮಕಾತಿ ಒಂದು ಉತ್ತಮ ಅವಕಾಶವಾಗಿದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಣರಾಜ್ಯೋತ್ಸವ ಪೆರೇಡ್‌ಗೆ ಭಾರೀ ಭದ್ರತೆ; ಕಮಿಷನರ್ ಸಿಮಂತ್ ಕುಮಾರ್ ಸಿಂಗ್ ಹೇಳಿದ್ದೇನು? – Kannada News | Bengaluru Republic Day Parade: Police Commissioner Announces Traffic Restrictions and Security

ಗಣರಾಜ್ಯೋತ್ಸವ ಪೆರೇಡ್‌ಗೆ ಭಾರೀ ಭದ್ರತೆ

ಬೆಂಗಳೂರು, ಜನವರಿ 24: ಸೋಮವಾರ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್‌ಗೆ  (Republic Day parade) ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸಿಮಂತ್ ಕುಮಾರ್ ಸಿಂಗ್ ಮಹತ್ವದ ಮಾಹಿತಿ ನೀಡಿದ್ದಾರೆ. ಈ ಬಾರಿ ಪೆರೇಡ್‌ನಲ್ಲಿ ಒಟ್ಟು 516 ಜನ ಭಾಗವಹಿಸಲಿದ್ದು, ಭದ್ರತೆ ಸೇರಿದಂತೆ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾರ್ಯಕ್ರಮ ಬೆಳಿಗ್ಗೆ 8.58ಕ್ಕೆ ಆರಂಭವಾಗಲಿದ್ದು, ಸಾರ್ವಜನಿಕರು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಸ್ಥಳಕ್ಕೆ ಆಗಮಿಸಬೇಕೆಂದು ಕಮಿಷನರ್ ಮನವಿ ಮಾಡಿದ್ದಾರೆ.

ಬೆಳಗ್ಗೆ 8 ಗಂಟೆಗೆ ಹಾಜರಿರುವಂತೆ ಸಾರ್ವಜನಿಕರಿಗೆ ಸೂಚನೆ

ಭದ್ರತಾ ಪರಿಶೀಲನೆಗಾಗಿ ಬೆಳಿಗ್ಗೆ 8 ಗಂಟೆಯೊಳಗೆ ಎಲ್ಲಾ ಸಾರ್ವಜನಿಕರು ಸ್ಥಳಕ್ಕೆ ತಲುಪಬೇಕು. 8 ಗಂಟೆ ನಂತರ ಆಗಮಿಸಿದವರಿಗೆ ಪರಿಶೀಲನೆ ನಡೆಸಲು ಕಷ್ಟವಾಗುವ ಸಾಧ್ಯತೆ ಇರುವುದರಿಂದ ಬೇಗ ಬರುವಂತೆ ಸೂಚಿಸಲಾಗಿದೆ. ಈ ಬಾರಿ ತಮಿಳುನಾಡು ಪೊಲೀಸ್ ಪಡೆ, ಅಸ್ಸಾಂ ರೈಫಲ್ಸ್ (ASF), ಭಾರತೀಯ ಸೇನೆ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ಪೆರೇಡ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಕಮಿಷನರ್ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕಿಲ್ಲ ಅವಕಾಶ, ಭುಗಿಲೆದ್ದ ಆಕ್ರೋಶ

ಎಲ್ಲೆಲ್ಲಿ ಸಂಚಾರ ನಿರ್ಬಂಧ?

ಸಂಚಾರ ನಿರ್ಬಂಧಗಳ ಕುರಿತು ಮಾಹಿತಿ ನೀಡಿದ ಸಿಮಂತ್ ಕುಮಾರ್, ಜನವರಿ 26 ರಂದು ಬೆಳಿಗ್ಗೆ 8.30ರಿಂದ 10.30ರವರೆಗೆ ಕಬ್ಬನ್ ರಸ್ತೆಯಲ್ಲಿ ಬಿಆರ್ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕಿನ ಸಂಚಾರ ನಿರ್ಬಂಧಿಸಲಾಗುತ್ತದೆ ಎಂದು ಹೇಳಿದರು. ಸೆಂಟ್ರಲ್ ಸ್ಟ್ರೀಟ್ ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ ಹಾಗೂ ಕಬ್ಬನ್ ರಸ್ತೆ–ಸಿಟಿಒ ಸರ್ಕಲ್‌ನಿಂದ ಕೆಆರ್ ರಸ್ತೆ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧವಿರಲಿದೆ. ಅಲ್ಲದೆ ಎಂಜಿ ರಸ್ತೆ, ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್‌ವರೆಗೆ ಎಲ್ಲಿಯೂ ಪಾರ್ಕಿಂಗ್ ಮಾಡದಂತೆ, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link