ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ
ಜೀ ಕನ್ನಡದ ‘ಅಮೃತಧಾರೆ’ (Amruthadhare) ಧಾರಾವಾಹಿಯಲ್ಲಿ ಹೊಸ ಹೊಸ ತಿರುವುಗಳು ಎದುರಾಗುತ್ತಾ ಇವೆ. ಈಗ ಮಲ್ಲಿ ಮದುವೆ ಸಂಭ್ರಮ. ಈ ಮಲ್ಲಿ ಮದುವೆಯಲ್ಲಿ ಹಲವು ಡ್ರಾಮಾಗಳು ನಡೆದಿವೆ ಎಂದರೂ ತಪ್ಪಾಗಲಾರದು. ಏಕೆಂದರೆ ಮಲ್ಲಿ ಮದುವೆ ಮಾಡಲು ಪ್ಲ್ಯಾನ್ ಮಾಡಿದ್ದು ಜೆಡಿ. ತಾನೇ ಛೂ ಬಿಟ್ಟ ವ್ಯಕ್ತಿ ಜೊತೆ ಮದುವೆ ನಡೆಸೋದು ಜೆಡಿ ಪ್ಲ್ಯಾನ್ ಆಗಿತ್ತು. ಕೊನೆ ಕ್ಷಣದಲ್ಲಿ ಮದುವೆಯಿಂದ ಆ ವ್ಯಕ್ತಿಯನ್ನು ಓಡಿಸೋದು ಪ್ಲ್ಯಾನ್ ಆಗಿತ್ತು. ಆದರೆ, ಪ್ಲ್ಯಾನ್ ಉಲ್ಟಾ ಆಗಿದೆ, ಅಷ್ಟೇ ಅಲ್ಲ, ದೊಡ್ಡ ಎಚ್ಚರಿಕೆ…