Headlines

nagaraj11081993

ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿದ ಪ್ರೇಮ್-ರಕ್ಷಿತಾ

ನಿರ್ದೇಶಕ ಪ್ರೇಮ್ (Director Prem) ಇತ್ತೀಚೆಗೆ ‘ಕೆಡಿ’ ಸಿನಿಮಾದ ಹಾಡಿನ ವಿವಾದದಿಂದ ಬಹಳ ಸುದ್ದಿಯಲ್ಲಿದ್ದರು. ಅವರು ಬರೆದಿರುವ ‘ಕೆಡಿ’ ಸಿನಿಮಾದ ಹಾಡಿನ ವಿರುದ್ಧ ತೀವ್ರ ಆಕ್ಷೇಪ ಎದ್ದಿತ್ತು. ಸ್ವತಃ ಪ್ರೇಮ್ ಸೇರಿದಂತೆ ಹಲವರಿಗೆ ನೊಟೀಸ್ ಸಹ ಜಾರಿ ಆಗಿತ್ತು. ಇದೀಗ ಆ ವಿವಾದದಿಂದ ಹೊರ ಬಂದಂತಿರುವ ಪ್ರೇಮ್ ಅವರು ತಮ್ಮ ಪತ್ನಿ ರಕ್ಷಿತಾ ಅವರೊಟ್ಟಿಗೆ ಸೇರಿ ಹೊಸ ಸ್ಟುಡಿಯೋ ಕಮ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಪ್ರತಿಭಾವಂತ ಹೊರಬರಿಗೆ ಅವಕಾಶ ಕೊಡುವ ಉದ್ದೇಶ ಈ ಸ್ಟುಡಿಯೋ ನಿರ್ಮಾಣದ ಹಿಂದೆ…

Read More

ಫಲಕೊಟ್ಟ ವಯಸ್ಕರ ಶಿಕ್ಷಣ ಅಭಿಯಾನ: ಉಡುಪಿ ಶೀಘ್ರವೇ ಪೂರ್ಣ ಸಾಕ್ಷರ ಜಿಲ್ಲೆ; ಘೋಷಣೆಯೊಂದೇ ಬಾಕಿ

ಉಡುಪಿ, ಮಾರ್ಚ್​​ 31: ಕರ್ನಾಟಕದ ಸಾಕ್ಷರತಾ ಪ್ರಮಾಣ ಶೇ. 82.7ರಷ್ಟಿರುವ ನಡುವೆ ಕರಾವಳಿ ಜಿಲ್ಲೆಗಳು ಪೂರ್ಣ ಸಾಕ್ಷರ ಜಿಲ್ಲೆಗಳಾಗುವತ್ತ ದಾಪುಗಾಲಿಟ್ಟಿವೆ. ಆ ಪೈಕಿ ಉಡುಪಿ ಶೀಘ್ರದಲ್ಲೇ ಪೂರ್ಣ ಸಾಕ್ಷರ ಜಿಲ್ಲೆಯಾಗಿ ಘೋಷಣೆಯಾಗಲಿದ್ದು, ಇದನ್ನು ಜಿಲ್ಲೆಯ ವಯಸ್ಕರ ಶಿಕ್ಷಣ ಅಭಿಯಾನದಲ್ಲಿನ ಮಹತ್ವದ ಮೈಲಿಗಲ್ಲೆಂದೇ ಪರಿಗಣಿಸಲಾಗಿದೆ. ಕಳೆದ ವರ್ಷ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಕ್ಷರಾಸಕ್ತರ ಗುರುತಿಸುವಿಕೆ ಹಾಗೂ ಶಿಕ್ಷಣ ನೀಡುವ ಕಾರ್ಯ ಆರಂಭವಾಗಿತ್ತು. ವಯಸ್ಕರ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ಮತ್ತು ಬೈಂದೂರು ತಾಲೂಕುಗಳಿಂದ…

Read More

ಬೆಂಗಳೂರಿನಲ್ಲಿ ಭರ್ಜರಿ ಡ್ರಗ್ ಬೇಟೆ: ಬಟ್ಟೆ ವ್ಯಾಪಾರದ ನೆಪದಲ್ಲಿ ಎಂಡಿಎಂಎ ಮಾರುತ್ತಿದ್ದ ನೈಜೀರಿಯಾ ಪ್ರಜೆ ಅಂದರ್!

ಬೆಂಗಳೂರು, ಮಾರ್ಚ್ 31: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bangalore) ಮಾದಕ ವಸ್ತುಗಳ ಜಾಲದ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಇದೀಗ ಯಲಹಂಕ ಪೊಲೀಸರು, ಸುಮಾರು 2 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಎಂಡಿಎಂಎ (MDMA) ಕ್ರಿಸ್ಟಲ್ಸ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ನೈಜೀರಿಯಾ ಮೂಲದ ಪೆಡ್ಲರ್ ಸ್ಯಾಮುಯೆಲ್ ಇಕ್ಕೆನಾ ಎಂಬಾತನನ್ನು ಬಂಧಿಸಿದ್ದಾರೆ. ಬಿಸಿನೆಸ್ ವೀಸಾದಡಿ ಬಂದು ಡ್ರಗ್ ಡೀಲಿಂಗ್ ಬಂಧಿತ ಆರೋಪಿ ಸ್ಯಾಮುಯೆಲ್ 2012ರಲ್ಲಿ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ. ದೆಹಲಿ ಮತ್ತು ಮುಂಬೈನಲ್ಲಿ…

Read More

Gold Rates: ಚಿನ್ನ, ಬೆಳ್ಳಿ ಬೆಲೆಗಳೆರಡೂ ಏರಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 31: ನಿನ್ನೆ ಕಡಿಮೆಗೊಂಡಿದ್ದ ಚಿನ್ನದ ಬೆಲೆ (Gold Rates) ಇವತ್ತು ಮಂಗಳವಾರ ಗ್ರಾಮ್​ಗೆ 185 ರೂಗಳಷ್ಟು ಏರಿಕೆಯಾಗಿದೆ. ವಿದೇಶಗಳಲ್ಲೂ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ ಹೆಚ್ಚಳ ಆಗಿದೆ. ಬೆಳ್ಳಿ ಬೆಲೆಯೂ ಮಂಗಳವಾರ ಹೆಚ್ಚಿದೆ. ಬೆಂಗಳೂರಿನಲ್ಲಿ ಇದರ ಬೆಲೆ ಮತ್ತೊಮ್ಮೆ 250 ರೂ ಗಡಿ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,850 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,49,290 ರುಪಾಯಿ ಆಗಿದೆ. 100 ಗ್ರಾಮ್…

Read More

Bihar Stampede: ಬಿಹಾರದ ಶೀತಲ ದೇವಸ್ಥಾನದಲ್ಲಿ ಕಾಲ್ತುಳಿತ, 8 ಮಹಿಳೆಯರು ಸಾವು

ಪಾಟ್ನಾ, ಮಾರ್ಚ್​ 31: ಬಿಹಾರದ ನಳಂದದಲ್ಲಿರುವ ಶೀತಲ ದೇವಸ್ಥಾನದಲ್ಲಿ ಕಾಲ್ತುಳಿತ ಉಂಟಾಗಿದ್ದು, 8 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. 6ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.ಚೈತ್ರ ಮಾಸದ ಕೊನೆಯ ಮಂಗಳವಾರದಂದು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಅಪಘಾತದಿಂದ ಮಹಿಳೆಯರು ಸೇರಿದಂತೆ ಅನೇಕ ಜನರು ತೊಂದರೆಗೀಡಾಗಿದ್ದಾರೆ. ದುರಂತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ, ಗ್ರಾಮಸ್ಥರೊಂದಿಗೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ನಡೆಸಿದರು. ಕಳೆದ ವರ್ಷ, ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿಯಂದು ಕಾಲ್ತುಳಿತ ಉಂಟಾಗಿ 9 ಮಂದಿ ಭಕ್ತರು…

Read More

‘ಒಂದು ಗಂಟೆ ಮಳೆ ಬಂದ್ರೆ 20 ಸಲ ಪವರ್ ಕಟ್ ಮಾಡ್ತಾರೆ’: ಬೆಂಗಳೂರಿನ ಖ್ಯಾತ ಹೃದಯ ತಜ್ಞರ ಎಕ್ಸ್ ಪೋಸ್ಟ್ ವೈರಲ್!

ಬೆಂಗಳೂರು, ಮಾರ್ಚ್​ 31: ಮಾರ್ಚ್​ನಲ್ಲಿ ಬಿಸಿಲಿನ ಬೇಗೆ ಅನುಭವಿಸಿದ ನಿವಾಸಿಗಳಿಗೆ ಭಾನುವಾರ ಸುರಿದ ಸಾಧಾರಣ ಮಳೆಯೊಂದಿಗೆ (weather) ಸ್ವಲ್ಪ ಮಟ್ಟಿಗಿನ ತಂಪಿನ ಅನುಭವ ಸಿಕ್ಕಿತು. ಗುಡುಗು ಸಹಿತ ಮಳೆಯು ನಗರವನ್ನು ತಂಪುಗೊಳಿಸಿದರೂ, ವಿದ್ಯುತ್ ವ್ಯತ್ಯಯ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ಈ ಬಗ್ಗೆ ತಮ್ಮ ಅಸಮಾಧಾನ ಹಂಚಿಕೊಂಡ ಬೆಂಗಳೂರಿನ ಖ್ಯಾತ ಹೃದಯ ತಜ್ಞ ಡಾ. ದೀಪಕ್ ಕೃಷ್ಣಮೂರ್ತಿ, X ಪೋಸ್ಟ್ ಹಂಚಿಕೊಂಡಿದ್ದಾರೆ. ಪೋಸ್ಟ್​ನಲ್ಲೇನಿದೆ? ಒಂದು ಗಂಟೆಯ ಮಳೆ ಸುರಿದರೆ 20 ಬಾರಿ ವಿದ್ಯುತ್ ಹೋಗಿ ಬಂದಿದೆ ಎಂದು ತಮ್ಮ…

Read More

ವಿವಿಧ ಪೋಸ್ಟ್ ಆಫೀಸ್ ಸ್ಕೀಮ್ಸ್; ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಬಡ್ಡಿದರ ಘೋಷಣೆ; ಇಲ್ಲಿದೆ ಪಟ್ಟಿ

ನವದೆಹಲಿ, ಮಾರ್ಚ್ 31: ಸರ್ಕಾರದಿಂದ ನಡೆಸಲಾಗುವ ಸಣ್ಣ ಉಳಿತಾಯ ಯೋಜನೆಗಳಿಗೆ (Small Savings Schemes) ಬಡ್ಡಿದರವನ್ನು ಪ್ರತೀ ಕ್ವಾರ್ಟರ್​ಗೆ ಪರಿಷ್ಕರಿಸುತ್ತದೆ. 2026ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಗೆ (April-June quarter) ಬಡ್ಡಿದರ ಪರಿಷ್ಕರಿಸಿದೆ. ಹಿಂದಿನ ಕ್ವಾರ್ಟರ್ ಆದ ಜನವರಿ-ಮಾರ್ಚ್ ಅವಧಿಯಲ್ಲಿ ಇದ್ದ ದರಗಳನ್ನೇ ಮುಂದುವರಿಸಲಾಗಿದೆ. ಸತತ ಎಂಟು ಕ್ವಾರ್ಟರ್​ಗಳಿಂದಲೂ ಬಡ್ಡಿದರ ಯಥಾಸ್ಥಿತಿಯಲ್ಲಿದೆ. ಕೊನೆಯ ಬಾರಿ ಬಡ್ಡಿದರದಲ್ಲಿ ಬದಲಾವಣೆ ಆಗಿದ್ದು 2024ರ ಜನವರಿ-ಮಾರ್ಚ್ ಕ್ವಾರ್ಟರ್​ನಲ್ಲಿ. 2026ರ ಏಪ್ರಿಲ್-ಜೂನ್ ಕ್ವಾರ್ಟರ್​ಗೆ ಸಣ್ಣ ಉಳಿತಾಯ ಯೋಜನೆಗಳ ವಾರ್ಷಿಕ ಬಡ್ಡಿದರ ಸುಕನ್ಯಾ ಸಮೃದ್ಧಿ…

Read More

ಮದುವೆ ಸಂಭ್ರಮದ ವೇಳೆ ದೈವಕ್ಕೆ ಅವಮಾನ ಆರೋಪ: ಮುಸ್ಲಿಂ ಯುವಕನಿಂದ ಕ್ಷಮೆಯಾಚನೆ

ಮಡಿಕೇರಿ, ಮಾರ್ಚ್​​ 31: ಕೊಡಗು ಜಿಲ್ಲೆಯಲ್ಲಿ ದೈವ ಮತ್ತು ದೈವ ನರ್ತಕರನ್ನು ಅವಹೇಳನ ಮಾಡಿದ ಘಟನೆ ಸಂಬಂಧ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬೆನ್ನಲ್ಲೇ ಆರೋಪಿ ಫೈಜಲ್ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ. ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ವಿವಾಹವೊಂದರ ನಂತರ ಖಾಸಗಿಯಾಗಿ ಮಾತನಾಡಿದ ಮಾತುಗಳು ವೈರಲ್ ಆಗಿಬಿಟ್ಟವು. ಇದರಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ, ತಾವು ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಬೆಂಗಳೂರು ಕರಗ ಮಹೋತ್ಸವ: ಸಂಪಂಗಿಕೆರೆ ಶಕ್ತಿ ಪೀಠದಲ್ಲಿ ಹಸಿ ಕರಗ ನೋಡಲು ಭಕ್ತಸಾಗರ

ಬೆಂಗಳೂರು, ಮಾರ್ಚ್​​ 31: ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಇದರ ಮೊದಲ ಭಾಗವಾಗಿ ಇಂದು ಬೆಳಗ್ಗೆ ಸಂಪಂಗಿ ರಾಮನಗರದಲ್ಲಿರುವ ಸಂಪಂಗಿಕೆರೆಯ ಶಕ್ತಿಪೀಠದಲ್ಲಿ ಹಸಿ ಕರಗ ಶಕ್ತ್ಯೋತ್ಸವ ಅದ್ಧೂರಿಯಾಗಿ ಜರುಗಿದೆ. ಎ. ಜ್ಞಾನೇಂದ್ರ ಸ್ವಾಮಿಯವರು 16ನೇ ಬಾರಿಗೆ ಯಶಸ್ವಿಯಾಗಿ ಹಸಿ ಕರಗವನ್ನು ಹೊತ್ತಿದ್ದು, ರಾಜಬೀದಿಗಳಲ್ಲಿ ಸಂಚರಿಸಿ ಜಿಬಿಎ ಮುಖ್ಯ ಕಚೇರಿ ತಲುಪಿದರು. ಅಲ್ಲಿ ಪೂಜೆ ಸಲ್ಲಿಸಿ, ಕೆ.ಆರ್. ಮಾರುಕಟ್ಟೆ ರಸ್ತೆಯ ಮೂಲಕ ತಿಗಳರಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿದ್ದಾರೆ. ನಾಳೆ ಮಧ್ಯರಾತ್ರಿ ಚೈತ್ರ ಪೌರ್ಣಮಿಯಂದು ಹೂವಿನ…

Read More

Optical Illusion: ಈ ಚಿತ್ರದಲ್ಲಿ ಹುಲಿಗಳ ನಡುವೆ ಅಡಗಿರುವ ಜೀಬ್ರಾವನ್ನು ಕಂಡು ಹಿಡಿಯಬಲ್ಲಿರಾ

ಕೆಲವರಿಗೆ ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಸೇರಿದಂತೆ ಒಗಟುಗಳನ್ನು ಬಿಡಿಸುವುದೆಂದರೆ ಖುಷಿಯೋ ಖುಷಿ. ಸಮಯ ಸಿಕ್ಕಾಗಲೆಲ್ಲಾ ಇಂತಹ ಒಗಟುಗಳನ್ನು ಬಿಡಿಸುವತ್ತ ಆಸಕ್ತಿ ಹೆಚ್ಚಿನವರು ತೋರಿಸುತ್ತಾರೆ. ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರವು ಟ್ರಿಕ್ಕಿಯಾಗಿದೆ. ಹುಲಿಗಳ ನಡುವೆ ಇರುವ ಜೀಬ್ರಾವನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ನೀವು ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಿ. ಈ ಚಿತ್ರದಲ್ಲಿ ಏನು ಕಾಣಿಸುತ್ತದೆ? ಈ ಇಲ್ಯೂಷನ್ ಚಿತ್ರವು ಟ್ರಿಕ್ಕಿ ಒಗಟಿನ ಚಿತ್ರವಾಗಿದೆ. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು ಮೊದಲು…

Read More