Video: ಪ್ರಯಾಗ್‌ರಾಜ್‌ನಲ್ಲಿ ವಾಯುಪಡೆಯ ಸಣ್ಣ ವಿಮಾನ ಪತನ – Kannada News | Close Call in the Skies: IAF Microlight Goes Down in Prayagraj, Crew Walks Away Safe
ಪ್ರಯಾಗ್ರಾಜ್, ಜನವರಿ 21: ಭಾರತೀಯ ವಾಯುಪಡೆಯ (ಐಎಎಫ್) ಮೈಕ್ರೋಲೈಟ್ ವಿಮಾನವು ಬುಧವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪತನಗೊಂಡಿದೆ. ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಪ್ರಯಾಗ್‌ರಾಜ್‌ನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಕೆ.ಪಿ. ಕಾಲೇಜು ಬಳಿ ವಿಮಾನವು ಕೆರೆಗೆ ಅಪ್ಪಳಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.. ವಿಮಾನ ಪತನಗೊಳ್ಳುತ್ತಿದ್ದಂತೆ ಸ್ಥಳೀಯರಿಗೆ ದೊಡ್ಡ ಶಬ್ದ ಕೇಳಿಬಂದಿದೆ. ಈ ಘಟನೆಯಿಂದ ಆ ಪ್ರದೇಶದಲ್ಲಿ ಭಯd ವಾತಾವರಣ ನಿರ್ಮಾಣವಾಗಿತ್ತು….