All posts by nagaraj11081993

ಜ. 21ರಂದು ಟಿವಿ9 ನೆಟ್ವರ್ಕ್​ನ ‘Auto9 Awards 2026’; ನಿತಿನ್ ಗಡ್ಕರಿ ಮುಖ್ಯ ಅತಿಥಿ – Kannada News | Auto9 Awards 2026: Nitin Gadkari to be Chief Guest at TV9 Network’s Biggest Celebration of Automotive Excellence

ನವದೆಹಲಿ, ಜನವರಿ 19: ಇಲ್ಲಿಯ ತಾಜ್ ಪ್ಯಾಲೇಸ್​ನಲ್ಲಿ ಟಿವಿ9 ನೆಟ್ವರ್ಕ್ ವತಿಯಿಂದ ಬುಧವಾರ (ಜ. 21) ‘Auto9 Awards 2026’ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ. ಭಾರತದ ವಾಹನೋದ್ಯಮದಲ್ಲಿನ (Automotive) ಪ್ರಗತಿ, ಶ್ರೇಷ್ಠತೆಯನ್ನು ಆಚರಿಸಲು ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮುಖ್ಯ ಅತಿಥಿಯಾಗಿದ್ದಾರೆ.

ಆಟೊ9 ಅಡಾರ್ಡ್ಸ್ ಬಗ್ಗೆ

ಟಿವಿ9 ನೆಟ್ವರ್ಕ್ ಕೈಗೊಂಡಿರುವ ಹಲವು ಉಪಕ್ರಮಗಳಲ್ಲಿ ಆಟೊ9 ಅವಾರ್ಡ್ಸ್ ಒಂದು. ಭಾರತದ ವಾಹನೋದ್ಯಮಕ್ಕೆ ಕೊಡುಗೆ ನೀಡಿರುವ ವಿಶೇಷ ಕಾರುಗಳು, ದ್ವಿಚಕ್ರ ವಾಹನಗಳು, ಸಂಘಟನೆಗಳು, ಇನ್ನೋವೇಟರ್​ಗಳು, ವ್ಯಕ್ತಿಗಳನ್ನು ಗೌರವಿಸುವ ಒಂದು ಪ್ರಶಸ್ತಿ ಸಮಾರಂಭವಾಗಿದೆ. ಈ ವರ್ಷ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ ಸಖತ್ ಫೀಚರ್ಸ್; ಟಿಕೆಟ್ ಕ್ಯಾನ್ಸಲೇಶನ್ ನಿಯಮಗಳೂ ಕಠಿಣ

  1. ಉತ್ಪನ್ನಗಳು (ಕಾರು ಮತ್ತು ಬೈಕು)
  2. ಮಾಧ್ಯಮ ಮತ್ತು ಸಂವಹನ
  3. ರಾಷ್ಟ್ರೀಯ ಪರಿಣಾಮ ಮತ್ತು ನಾಯಕತ್ವ
  4. ಬ್ಯುಸಿನೆಸ್, ಇಕೋಸಿಸ್ಟಂ ಮತ್ತು ವ್ಯಾಪಕತೆ
  5. ಇವಿ ಮತ್ತು ಇನ್ನೋವೇಶನ್

ಈ ಮೇಲಿನ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ. 2025ರ ಜನವರಿ 1ರಿಂದ ಡಿಸೆಂಬರ್ 31ರ ನಡುವೆ ಬಿಡುಗಡೆಯಾದ ಅಥವಾ ವಿತರಣೆ ಆರಂಭವಾದ ವಾಹನಗಳನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಪ್ರಶಸ್ತಿಗೆ ವಾಹನವೊಂದನ್ನು ಪರಿಗಣಿಸಲು ಅದರ ಜನಪ್ರಿಯತೆಯು ಮಾನದಂಡವಾಗಿರುವುದಿಲ್ಲ. ಅದು ನೈಜವಾಗಿ ಎಷ್ಟು ಕ್ಷಮತೆ ಹೊಂದಿದೆ, ಎಂತಹ ನಾವೀನ್ಯತೆ ಹೊಂದಿದೆ ಎಂಬುದು ಮುಖ್ಯವಾಗುತ್ತದೆ. ದೆಹಲಿಯ ಬುದ್ಧ್ ಇಂಟರ್ನ್ಯಾಷನಲ್ ಸರ್ಕ್ಯೂಟ್​ನಲ್ಲಿ ಈಗಾಗಲೇ ಸುಮಾರು 58 ಕಾರು ಮತ್ತು ದ್ವಿಚಕ್ರ ವಾಹನಗಳ ಸಮಗ್ರ ಪರೀಕ್ಷೆ ಮಾಡಲಾಗಿದೆ. ವಾಹನದ ಕ್ಷಮತೆ, ಸುರಕ್ಷತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಇತ್ಯಾದಿ ಮಾನದಂಡಗಳನ್ನು ಗಮನಿಸಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್

ವಾಹನೋದ್ಯಮದ ಅನುಭವಿಗಳು, ಪತ್ರಕರ್ತರು, ಎಂಜಿನಿಯರುಗಳು, ಸಂಸ್ಥಾಪಕರು, ಮೊಬಿಲಿಟಿ ತಜ್ಞರು ಇತ್ಯಾದಿ 30 ಜನರಿರುವ ತೀರ್ಪುಗಾರ ಮಂಡಳಿಯು ಈ 58 ವಾಹನಗಳ ಮೌಲ್ಯಪಾಪನ ಮಾಡುತ್ತಿದೆ.

ಟಿವಿ9 ನೆಟ್ವರ್ಕ್​ನ ‘Auto9 Awards 2026’

ಆಟೊ9 ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾತ್ರವಲ್ಲ, ಉದ್ಯಮದ ಹೊಸ ಟ್ರೆಂಡ್​ಗಳ ಬಗ್ಗೆ ಪ್ಯಾನಲ್ ಡಿಸ್ಕಶನ್​ಗಳು, ಸಂವಾದ ಇತ್ಯಾದಿ ಕಾರ್ಯಕ್ರಮಗಳೂ ನಡೆಯಲಿವೆ. ಜನವರಿ 21ರಂದು ನಿತಿನ್ ಗಡ್ಕರಿ ಅವರಿಂದ ಮುಖ್ಯ ಭಾಷಣ ಇರುತ್ತದೆ. ದೇಶದ ವಾಹನೋದ್ಯಮದ ಬೆಳವಣಿಗೆ, ಮೂಲಸೌಕರ್ಯ ಅಭಿವೃದ್ದಿ ಇತ್ಯಾದಿ ಬಗ್ಗೆ ಅವರು ಬೆಳಕು ಚೆಲ್ಲಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ! – Kannada News | Caste Clash Erupts During Grama Devata Procession in Chikkaballapura

ಚಿಕ್ಕಬಳ್ಳಾಪುರ, ಜನವರಿ 19: ತಾಲೂಕಿನ ಎ. ಕೊತ್ತೂರು ಗ್ರಾಮದಲ್ಲಿ ಗ್ರಾಮ ದೇವತೆಯ ಮೆರವಣಿಗೆ ವೇಳೆ ದಲಿತರು ಮತ್ತು ಸವರ್ಣೀಯರ ನಡುವೆ ತೀವ್ರ ಗುಂಪು ಘರ್ಷಣೆ ಸಂಭವಿಸಿದೆ. ಗ್ರಾಮದ ಎಲ್ಲಾ ಜಾತಿ ಸಮುದಾಯದವರು ಒಟ್ಟಾಗಿ ಚಂದಾ ವಸೂಲಿ ಮಾಡಿ, ಗಂಗಮ್ಮ ದೇವರ ಜಾತ್ರೆ ಮತ್ತು ಮೆರವಣಿಗೆಯನ್ನು ಆಯೋಜಿಸಿದ್ದರು. ಬೆಳಗ್ಗೆ ಹತ್ತು ಗಂಟೆಯಿಂದ ಗ್ರಾಮ ದೇವತೆಯ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯು ಸಾಗುತ್ತಿದ್ದಾಗ, ಚಂದಾ ನೀಡಿದ್ದ ದಲಿತ ಯುವಕರು ಸಹ ತಾವು ದೇವರನ್ನು ಹೊರಬೇಕು, ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಆಗ್ರಹಿಸಿ ಉತ್ಸವ ಮೆರವಣಿಗೆಯನ್ನು ಹೊರುವುದಕ್ಕೆ ಮುಂದಾದರು. ಈ ಸಂದರ್ಭದಲ್ಲಿ ಕೆಲವು ಸವರ್ಣೀಯರು ಅಡ್ಡಪಡಿಸಿ, ನೀವು ದೇವರು ಮುಟ್ಟಬಾರದು ಮತ್ತು ದೇವರ ಉತ್ಸವವನ್ನು ಹೊರಬಾರದು ಎಂದು ತಡೆಯೊಡ್ಡಿದ್ದಾರೆ. ಇದು ದಲಿತ ಸಮುದಾಯದ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆದು, ಅದು ಘರ್ಷಣೆಯಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಎರಡೂ ಸಮುದಾಯದವರು ದೇವರ ವಿಗ್ರಹವನ್ನು ನಡು ರಸ್ತೆಯಲ್ಲೇ ಬಿಟ್ಟು ತೆರಳಿದ್ದಾರೆ. ಘಟನೆ ಮಾಹಿತಿ ತಿಳಿದ ತಕ್ಷಣವೇ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮೂರು ದಿನಗಳಿಂದ ದೆಹಲೀಲಿದ್ದರೂ ಡಿಕೆ ಶಿವಕುಮಾರ್​ಗೆ ಸಿಗುತ್ತಿಲ್ಲ ರಾಹುಲ್ ಗಾಂಧಿ ಭೇಟಿ ಅವಕಾಶ! – Kannada News | DK Shivakumar Delhi Visit: Rahul Gandhi Meeting Pending Amid Karnataka CM Power Tussle Speculations

ರಾಹುಲ್ ಗಾಂಧಿ ಹಾಗೂ ಡಿಕೆ ಶಿವಕುಮಾರ್​Image Credit source: DK Shivakumar X Handle

ಬೆಂಗಳೂರು, ಜನವರಿ 19: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಜತೆ ‘ನಿಮ್ಮನ್ನು ದೆಹಲಿಗೆ ಕರೆಸಿ ಮಾತನಾಡುತ್ತೇನೆ’ ಎಂದಿದ್ದ ರಾಹುಲ್ ಗಾಂಧಿ (Rahul Gandhi) ಇದೀಗ ಭೇಟಿಗೆ ಅವಕಾಶವೇ ನೀಡುತ್ತಿಲ್ಲವೇ? ಇಂಥದ್ದೊಂದು ಪ್ರಶ್ನೆಗೆ ಇತ್ತೀಚಿನ ಬೆಳವಣಿಗೆಗಳು ಕಾರಣವಾಗಿವೆ. ಅಸ್ಸಾಂ ವಿಧಾನಸಭಾ ಚುನಾವಣೆಯ ವೀಕ್ಷಕರಾಗಿ ನೇಮಕಗೊಂಡಿರುವ ಶಿವಕುಮಾರ್, ಅದಕ್ಕೆ ಸಂಬಂಧಿಸಿದ ಪಕ್ಷದ ಕಾರ್ಯಗಳಿಗಾಗಿ ದೆಹಲಿಗೆ ತೆರಳಿದ್ದರೂ ಕರ್ನಾಟಕ ರಾಜಕಾರಣ ಸಂಬಂಧ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದೇ ಹೇಳಲಾಗಿತ್ತು. ಅಧಿಕಾರ ಹಂಚಿಕೆ ವಿಚಾರವಾಗಿಯೂ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಶುಕ್ರವಾರ ಅಸ್ಸಾಂ ಚುನಾವಣೆ ಸಂಬಂಧ ನಡೆದ ಸಭೆಯ ನಂತರ ಒಂದು ಬಾರಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು ಬಿಟ್ಟರೆ ಮತ್ತೆ ಅವಕಾಶ ಸಿಗಲೇ ಇಲ್ಲ.

ರಾಹುಲ್ ಗಾಂಧಿ ಇತರ ಕಾರ್ಯಕ್ರಮಗಳಲ್ಲಿ ವ್ಯಸ್ತರಾಗಿರುವುದರಿಂದ ಭೇಟಿ ಇನ್ನೂ ಖಚಿತವಾಗಿಲ್ಲ. ಹೀಗಾಗಿ ಡಿಕೆ ಶಿವಕುಮಾರ್ ಇಂದು (ಸೋಮವಾರ) ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ.

ಮೂಲಗಳ ಪ್ರಕಾರ, ರಾಜ್ಯದಲ್ಲಿ ಅಧಿಕಾರ ಹಂಚಿಕೆ ಒಪ್ಪಂದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದಲಾವಣೆ ಕುರಿತು ಚರ್ಚಿಸಲು ಶಿವಕುಮಾರ್ ಅವರು ರಾಹುಲ್ ಗಾಂಧಿಯವರ ಭೇಟಿಗೆ ಆಸಕ್ತಿ ತೋರಿದ್ದಾರೆ ಎನ್ನಲಾಗಿತ್ತು. ಅದಕ್ಕಾಗಿಯೇ ಶಿವಕುಮಾರ್ ದಾವೋಸ್ (ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸುವ) ಪ್ರವಾಸವನ್ನೂ ರದ್ದುಗೊಳಿಸಿ ದೆಹಲಿಯಲ್ಲಿ ಕಾದಿದ್ದರು.

ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶಿವಕುಮಾರ್ ಭೇಟಿಯಾಗಿ ಚರ್ಚೆ ನಡೆಸಿದ್ದರು. ಬಳಿಕ ಮಾತನಾಡಿದ್ದ ಡಿಕೆಶಿ, ಇತರ ರಾಜಕಾರಣಿಗಳಂತೆ ನಾನೂ ರಾಜಕಾರಣ ಮಾಡುತ್ತೇನೆ. ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲು ಸಮಯ ಕೇಳುವುದು ಸಹಜ. ಈ ಭೇಟಿಗಳ ಬಗ್ಗೆ ಮಾಧ್ಯಮಗಳ ಮುಂದೆ ಚರ್ಚಿಸಲು ಇಷ್ಟಪಡುವುದಿಲ್ಲ. ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರಿಸಲಿದೆ ಎಂದಿದ್ದರು.

ಅದಾದ ನಂತರ ಪಕ್ಷದ ಹಿರಿಯ ನಾಯಕ ಭೀಮಣ್ಣ ಖಂಡ್ರೆ ಅವರ ನಿಧನದ ಬೆನ್ನಲ್ಲೇ ಅವರ ಅಂತಿಮ ದರ್ಶನಕ್ಕಾಗಿ ಬೀದರ್​​ಗೆ ಶನಿವಾರ ಆಗಮಿಸಿದ್ದ ಡಿಕೆ ಶಿವಕುಮಾರ್ ತರಾತುರಿಯಲ್ಲಿ ಮತ್ತೆ ದೆಹಲಿಗೆ ತೆರಳಿದ್ದರು. ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಮಾಲೋಚನೆ ನಡೆಸುವುದಕ್ಕೆಂದೇ ದೆಹಲಿಯಲ್ಲಿ ಡಿಕೆಶಿ ಬೀಡುಬಿಟ್ಟಿದ್ದಾರೆ ಎಂದು ಮೂಲಗಳು ಹೇಳಿದ್ದವು. ಆದಾಗ್ಯೂ ಇದೀಗ ಅವರಿಗೆ ಮತ್ತೆ ರಾಹುಲ್ ಭೇಟಿಗೆ ಅವಕಾಶವೇ ಸಿಕ್ಕಿಲ್ಲ.

ಇದನ್ನೂ ಓದಿ: 2 ದಿನಗಳ ಕಾಲ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ: ರಾಹುಲ್ ಗಾಂಧಿ ಭೇಟಿಯಾಗ್ತಾರಾ, ಸಿಗುತ್ತಾ ಕುರ್ಚಿ ಅಭಯ?

ಮತ್ತೊಂದೆಡೆ, ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹರಿಯಾಣದಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದೂ ಕುತೂಹಲ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸತೀಶ್​​​ನ ಬೇರೆಯದೇ ಲೆವಲ್​​ ಅಲ್ಲಿ ರೋಸ್ಟ್ ಮಾಡಿದ ಸುದೀಪ್ – Kannada News | Kichcha Sudeep roasted Dog Satish Next Level on BBK Finale

ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಸತೀಶ್ ಮೂರನೇ ವಾರದ ಮಧ್ಯದಲ್ಲೇ ಹೊರ ಹೋದರು. ಅವರಿಗೆ ಸರ್ವೈವ್ ಆಗಲು ಸಾಧ್ಯವಾಗಿರಲಿಲ್ಲ. ಹೊರಗೆ ಅವರು ಸುದ್ದಿ ಆಗುತ್ತಿದ್ದಾರೆ. ವಿವಿಧ ರೀತಿಯ ಸಂದರ್ಶನ ನೀಡುತ್ತಿದ್ದಾರೆ. ಇದೆಲ್ಲವನ್ನೂ ಸುದೀಪ್ ಗಮನಿಸಿದಂತೆ ಇದೆ. ಈ ಕಾರಣದಿಂದಲೇ ಸುದೀಪ್ ಅವರು ರೋಸ್ಟ್​ ಮಾಡಿದ್ದಾರೆ. ಬಿಗ್ ಬಾಸ್ ವೇದಿಕೆ ಮೇಲೆ ಈ ರೋಸ್ಟಿಂಗ್ ನಡೆದಿದೆ. ಈ ಸಂದರ್ಭದ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪದವಿಪೂರ್ವ ಕಾಲೇಜುಗಳಲ್ಲಿ ಮೊಬೈಲ್​ ಬಳಕೆ ಸಂಪೂರ್ಣ ನಿಷೇಧ? ಮಹತ್ವದ ನಿರ್ಧಾರಕ್ಕೆ ಮುಂದಾದ ಇಲಾಖೆ – Kannada News | Mobile Phones to Be Completely Banned in Karnataka Pre University Colleges? Education Department Mulls Major Decision

ಬೆಂಗಳೂರು, ಜನವರಿ 19: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯು, ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕ್ರಮವು ಜನವರಿ 27ರಿಂದ ನಡೆಯಲಿರುವ ಎರಡನೇ ಹಂತದ ರಾಜ್ಯಮಟ್ಟದ ಪಿಯು ಪರೀಕ್ಷೆಗಳಿಂದ ಜಾರಿಗೆ ಬರಲಿದೆ. ಪರೀಕ್ಷಾ ಸಮಯದಲ್ಲಿ ಪ್ರಶ್ನೆಪತ್ರಿಕೆಗಳು ಮೊಬೈಲ್ ಮೂಲಕ ಸೋರಿಕೆಯಾಗುವುದನ್ನು ತಡೆಯಲು ಈ ನಿಷೇಧವನ್ನು ಹೇರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಪರೀಕ್ಷಾ ಕರ್ತವ್ಯದಲ್ಲಿರುವ ಶಿಕ್ಷಕರು, ಪ್ರಾಂಶುಪಾಲರು ಸೇರಿದಂತೆ ಎಲ್ಲ ಸಿಬ್ಬಂದಿಯ ಮೊಬೈಲ್ ಬಳಕೆಗೆ ಕಡಿವಾಣ ಹಾಕಲಾಗುತ್ತದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಗೆದ್ರೆ ಕಾಲ ಕೆಳಗೆ ನುಗ್ತೀನಿ ಎಂದಿದ್ದ ಸತೀಶ್; ನುಡಿದಂತೆ ನಡೀತಾರಾ? – Kannada News | Gilli Wins Bigg Boss Kannada 12! Will Satish Keep His “Bow Down” Promise

ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12 ) ಸ್ಪರ್ಧಿ ಸತೀಶ್ ಅವರು ಇದ್ದಿದ್ದು ಕೆಲವೇ ವಾರ. ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಸದ್ದು ಮಾಡಲೇ ಇಲ್ಲ. ಆದರೆ, ಬಿಗ್ ಬಾಸ್​​​ನಿಂದ ಹೊರ ಬಂದ ಬಳಿಕ ಅವರ ಹೆಸರು ಚರ್ಚೆ ಆಯಿತು. ಅವರನ್ನು ಎಲ್ಲರೂ ಟೀಕಿಸಿದರು. ಆದರೂ ಅವರು ಮಾತ್ರ ಇದಕ್ಕೆ ಹೆಚ್ಚು ತಲೆಕೆಡಸಿಕೊಳ್ಳಲೇ ಇಲ್ಲ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಸತೀಶ್ ಅವರು, ಗಿಲ್ಲಿ ಗೆಲ್ಲಬಾರದು ಎಂದು ಹಾರೈಸಿದ್ದರು. ಆದರೆ, ಅವರೇ ಗೆದ್ದಿದ್ದಾರೆ.

ಗಿಲ್ಲಿ ನಟ ಗೆಲ್ಲಲೇಬಾರದು ಎಂಬುದು ಸತೀಶ್ ಆಸೆ ಆಗಿತ್ತು. ರಕ್ಷಿತಾ ಶೆಟ್ಟಿ ಅಥವಾ ಅಶ್ವಿನಿ ಗೌಡ ಗೆಲ್ಲಬೇಕು ಎಂಬುದು ಅವರ ಕೋರಿಕೆ ಆಗಿತ್ತು. ಗಿಲ್ಲಿ ಎರಡನೇ ಸ್ಥಾನಕ್ಕೆ ಕಾಲಿಟ್ಟರೂ ಅದು ಸೋತಂತೆಯೇ ಎಂಬುದು ಸತೀಶ್ ಅಭಿಪ್ರಾಯ ಆಗಿತ್ತು. ‘ಗಿಲ್ಲಿ ಗೆದ್ದರೆ ಏನು’ ಎಂದು ಕೇಳಿದಾಗ, ‘ನಾನು ಅವರ ಕಾಲ ಕೆಳೆಗೆ ನುಗ್ತೀನಿ’ ಎಂದು ಹೇಳಿದ್ದರು ಸತೀಶ್.

ಈಗ ಗಿಲ್ಲಿ ನಟ ಭಾರೀ ಮತಗಳಿಂದ ಗೆದ್ದಾಗಿದೆ. 40 ಕೋಟಿಗೂ ಹೆಚ್ಚು ವೋಟ್ ಸಿಗೋದು ಎಂದರೆ ಅದು ಸಣ್ಣ ಮಾತೇ ಅಲ್ಲ. ಗಿಲ್ಲಿಗೆ ಈ ಅಭೂತಪೂರ್ವ ಗೆಲುವು ಟೀಕಾಕಾರರ ಮುಂದೆಯೇ ಸಿಕ್ಕಿದೆ ಎಂಬುದು ವಿಶೇಷ. ಹೀಗಾಗಿ, ಈ ಗೆಲುವಿನ ಬಳಿಕ ಸತೀಶ್ ಅವರು ಹೇಳಿದಂತೆ ನಡೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದಕ್ಕೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಏರಿದ ಏಣಿಯನ್ನು ಒದೆಯಲಿಲ್ಲ ಗಿಲ್ಲಿ ನಟ; ಬಿಗ್ ಬಾಸ್ ವಿನ್ನರ್ ನಡೆಗೆ ಮೆಚ್ಚುಗೆ

ಗಿಲ್ಲಿ ನಟ ಅವರ ಮೇಲೆ ಸತೀಶ್​​ಗೆ ಕೋಪ ಬರಲೂ ಒಂದು ಕಾರಣವೂ ಇತ್ತು. ಗಿಲ್ಲಿ ತುಂಬಾನೇ ಟಾರ್ಚರ್ ಕೊಟ್ಟಿದ್ದಾರೆ ಎಂಬುದು ಸತೀಶ್ ಅಭಿಪ್ರಾಯ. ಈ ಕಾರಣದಿಂದಲೇ ಗಿಲ್ಲಿ ನಟ ಅವರನ್ನು ದ್ವೇಷಿಸುತ್ತಾ ಬಂದರು. ಆ ಬಳಿಕ ಟೀಕೆ ಎದುರಿಸಬೇಕಾಯಿತು. ಈಗ ಅವರು ಗಿಲ್ಲಿ ಗೆಲುವನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:12 pm, Mon, 19 January 26

Source link

ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಸ್ವಾಮೀಜಿ ಹೈಡ್ರಾಮಾ: ಗ್ರಾಮಸ್ಥರಿಗೆ ಬೆದರಿ ಓಡಿದ ಸ್ವಯಂಘೋಷಿತ ಪವಾಡ ಪುರುಷ! – Kannada News | Swamiji Creates Disturbance at Lakkundi Excavation Site, Flees After Locals Object

ಗದಗ, ಜನವರಿ 19: ಲಕ್ಕುಂಡಿಯಲ್ಲಿ ಇಂದು ನಾಲ್ಕನೇ ದಿನದ ಉತ್ಖನನ ನಡೆಯುತ್ತಿದ್ದು, ಗ್ರಾಮಕ್ಕೆ ಬಂದ ಸ್ವಾಮೀಜಿಯೊಬ್ಬರು ಫುಲ್​​ ಹೈಡ್ರಾಮಾ ನಡೆಸಿದ ಪ್ರಸಂಗ ನಡೆದಿದೆ. ತಾರಾಣಿಚೆನ್ನಮ್ಮ ವಂಶಸ್ಥ ಎಂದು ಪರಿಚಯಿಸಿಕೊಂಡಿರುವ ಎಸ್. ಸಿ. ಹಿರೇಮಠ ಹೆಸರಿನ ಸ್ವಾಮೀಜಿ, ತಾನೊಬ್ಬ ಪವಾಡ ಪುರುಷ. ತಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಾಮುಂಡಿ‌ ಮೂರ್ತಿ ಇದೆ ಎಂದು ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಡ್ರಾಮಾ ಮಾಡಿದ್ದಾರೆ. ಆರಂಭದಲ್ಲಿ ಎಲ್ಲವನ್ನೂ ತೀವ್ರ ಕುತೂಹಲದಲ್ಲಿ ವೀಕ್ಷಿಸಿದ ಗ್ರಾಮಸ್ಥರು ಬಳಿಕ ಸ್ವಯಂಘೋಷಿತ ಪವಾಡ ಪುರುಷನನ್ನು ಬೆನ್ನಟ್ಟಿ ಓಡಿಸಿದ್ದಾರೆ. ಲಕ್ಕುಂಡಿ ಹಾಗೂ ಚಾಮುಂಡಿ ಇತಿಹಾಸಕ್ಕೂ ಸಂಬಂಧವಿಲ್ಲ. ನಮ್ಮೂರಿಗೆ ಬಂದು ಸುಳ್ಳು ಹೇಳ್ತಿಯಾ ಎಂದು ತರಾಟೆಗೆ ಪಡೆದಿದ್ದಾರೆ. ಜನರ ಆಕ್ರೋಶಕ್ಕೆ ಹೆದರಿದ ಸ್ವಾಮೀಜಿ ಹಿಂಗಾಲಿನಲ್ಲಿ ಓಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

25 ಲಕ್ಷ ರೂಪಾಯಿ ಹಣವನ್ನು ಏನ್​​ ಮಾಡ್ತೀರಾ? ಇದನ್ನು ಖರೀದಿಸುವುದು ನನ್ನ ಆಸೆ ಎಂದ ರಕ್ಷಿತಾ – Kannada News | Bigg Boss Kannada 12 Runner Up Rakshita Shetty Reflects on Her Journey and Future Endeavours

ಬಿಗ್ ಬಾಸ್ ಕನ್ನಡ ಸೀಸನ್ 12 ರ ಮೊದಲ ರನ್ನರ್-ಅಪ್ ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್‌ನಿಂದ ಪಡೆದ 25 ಲಕ್ಷ ರೂಪಾಯಿ ಬಹುಮಾನದ ಹಣದಲ್ಲಿ 20 ಹಸುಗಳನ್ನು ಖರೀದಿಸಲು ಯೋಜನೆ ಹಾಕಿಕೊಂಡಿದ್ದಾರೆ. ಹೆಚ್ಚುವರಿ 5 ಲಕ್ಷ ರೂಪಾಯಿಗಳನ್ನು ಹಸುಗಳ ಆರೈಕೆ, ಆಹಾರ ಮತ್ತು ನಿರ್ವಹಣೆಗೆ ಮೀಸಲಿಡುವುದಾಗಿ ಹೇಳಿದ್ದಾರೆ. ಬಿಗ್ ಬಾಸ್ ಮನೆಯೊಂದಿಗಿನ ತಮ್ಮ ಭಾವನಾತ್ಮಕ ಸಂಬಂಧದ ಬಗ್ಗೆ ರಕ್ಷಿತಾ ಶೆಟ್ಟಿ ಮಾತನಾಡಿದ್ದಾರೆ. ಮೂರು ತಿಂಗಳ ಕಾಲ ಮನೆಯಲ್ಲಿ ಕಳೆದ ನಂತರ ಆ ಮನೆ ಕೇವಲ ಮನೆಯಾಗಿರಲಿಲ್ಲ, ಅದೊಂದು ಕುಟುಂಬವಾಯಿತು ಎಂದು ಅವರು ವಿವರಿಸಿದರು. ಮನೆಯಲ್ಲಿನ ಸುಖ-ದುಃಖಗಳು, ನಗು, ಹಬ್ಬಗಳು ಮತ್ತು ವಿಭಿನ್ನ ಭಾವನೆಗಳು ಅವರನ್ನು ಅಲ್ಲಿನ ಸದಸ್ಯರೊಂದಿಗೆ ಬಲವಾಗಿ ಬಂಧಿಸಿದೆ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ರಾತ್ರಿ ಮಲಗಲು ಕೂಡ ಒದ್ದಾಡಿದ್ದೇನೆ. ಸುದೀಪ್ ಸರ್ ಅವರನ್ನು ಭೇಟಿಯಾಗಿ, ಅವರೊಂದಿಗಿನ ಮಾತುಕತೆ ಮತ್ತು ಸಮಾಧಾನದ ಬಗ್ಗೆಯೂ ರಕ್ಷಿತಾ ನೆನಪಿಸಿಕೊಂಡರು.

ಬಿಗ್​​ ಬಾಸ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Namma Metro: ಯೆಲ್ಲೋ ಲೈನ್​ಗೆ ಬಂತು ಎಂಟನೇ ಚಾಲಕರಹಿತ ಮೆಟ್ರೋ ರೈಲು ! – Kannada News | Bangalore Yellow Line Gets 8th Driverless Metro: Namma Metro Expands Operations

ಯೆಲ್ಲೋ ಲೈನ್​ಗೆ ಬಂತು ಎಂಟನೇ ಚಾಲಕರಹಿತ ಮೆಟ್ರೋ ರೈಲು !

ಬೆಂಗಳೂರು, ಜನವರಿ 19: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕೋಲ್ಕತ್ತಾದ ಟಿಟಾಘರ್‌ನಿಂದ ಹೊರಟಿದ್ದ ಎಂಟನೇ ಚಾಲಕರಹಿತ ಮೆಟ್ರೋ ರೈಲು ಇಂದು ಬೆಳಗ್ಗೆ ಬೆಂಗಳೂರಿನ ಹೆಬ್ಬಗೊಡಿ ಮೆಟ್ರೋ ಡಿಪೋಗೆ ಸುರಕ್ಷಿತವಾಗಿ ಆಗಮಿಸಿದೆ. ಆರು ಕೋಚ್‌ಗಳನ್ನು ಒಳಗೊಂಡ ಈ ಮೆಟ್ರೋ ರೈಲು ಜನವರಿ 10ರಂದು ಟಿಟಾಘರ್‌ನಿಂದ ಹೊರಟಿದ್ದು, ಇದೀಗ ಯೆಲ್ಲೋ ಲೈನ್ ಕಾರ್ಯಾಚರಣೆಗೆ ಸಿದ್ಧಗೊಳ್ಳುತ್ತಿದೆ.

ನಾಳೆಯಿಂದ ಟೆಸ್ಟಿಂಗ್ ಆರಂಭ

ಸದ್ಯ ಬೆಂಗಳೂರು ಮೆಟ್ರೋದ ಯೆಲ್ಲೋ ಲೈನ್‌ನಲ್ಲಿ ಏಳು ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಹೊಸದಾಗಿ ಆಗಮಿಸಿದ ಎಂಟನೇ ರೈಲಿನ ತಾಂತ್ರಿಕ ಪರಿಶೀಲನೆಗಳನ್ನು ನಾಳೆಯಿಂದ (ಜನವರಿ 20) ಆರಂಭಿಸಲಾಗುತ್ತದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಸುರಕ್ಷತಾ ಹಾಗೂ ತಾಂತ್ರಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಲಾಗುವುದು.

16 ಚಾಲಕರಹಿತ ಮೆಟ್ರೋ ರೈಲುಗಳ ನಿರೀಕ್ಷೆ

ಆರ್.ವಿ. ರಸ್ತೆದಿಂದ ಬೊಮ್ಮಸಂದ್ರದವರೆಗೆ 19.15 ಕಿಲೋಮೀಟರ್ ವ್ಯಾಪ್ತಿಯ ಯೆಲ್ಲೋ ಲೈನ್‌ನಲ್ಲಿ ಒಟ್ಟು 16 ನಿಲ್ದಾಣಗಳಿವೆ. ಈ ಮಾರ್ಗದ ಸಮರ್ಪಕ ಕಾರ್ಯಾಚರಣೆಗೆ ಒಟ್ಟು 16 ಚಾಲಕರಹಿತ ಮೆಟ್ರೋ ರೈಲುಗಳನ್ನು ಆರ್ಡರ್ ಮಾಡಲಾಗಿದ್ದು, ಈಗಾಗಲೇ ಎಂಟು ರೈಲುಗಳು ಬೆಂಗಳೂರು ತಲುಪಿವೆ. ಉಳಿದ ಎಂಟು ರೈಲುಗಳು ಪ್ರತಿ 10ರಿಂದ 20 ದಿನಗಳಿಗೊಮ್ಮೆ ಹಂತ ಹಂತವಾಗಿ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ Namma Metro: ಮತ್ತೆ ಮೆಟ್ರೋ ದರ ಹೈಕ್ ಶಾಕ್? ದರ ಏರಿಕೆ ತಡೆಗೆ ತೇಜಸ್ವಿ ಸೂರ್ಯ ಪತ್ರ

ಪ್ರಸ್ತುತ ಯೆಲ್ಲೋ ಲೈನ್‌ನಲ್ಲಿ 10ರಿಂದ 12 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಸಂಚಾರ ನಡೆಯುತ್ತಿದ್ದು, ಹೊಸ ರೈಲಿನ ಪರೀಕ್ಷೆ ಮುಗಿಸಿ ವಾಣಿಜ್ಯ ಸಂಚಾರ ಆರಂಭವಾದ ಬಳಿಕ 8ರಿಂದ 10 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುವ ಸಾಧ್ಯತೆ ಇದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ ಸಖತ್ ಫೀಚರ್ಸ್; ಟಿಕೆಟ್ ಕ್ಯಾನ್ಸಲೇಶನ್ ನಿಯಮಗಳೂ ಕಠಿಣ – Kannada News | Vande Bharat Sleeper Train, speed, safety, technology, food, ticket cancellation rules

ನವದೆಹಲಿ, ಜನವರಿ 19: ಪ್ರಧಾನಿ ನರೇಂದ್ರ ಮೋದಿ ಮೊನ್ನೆ ಬಿಡುಗಡೆ ಮಾಡಿದ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ (Vande Bharat Sleeper Train) ಹಲವು ಫೀಚರ್​ಗಳು ಹಾಗೂ ನಿಯಮಗಳಿವೆ. ಕೋಲ್ಕತಾದ ಹೌರಾ ಮತ್ತು ಅಸ್ಸಾಮ್​ನ ಗುವಾಹತಿಯಲ್ಲಿರುವ ಕಾಮಾಖ್ಯ ಜಂಕ್ಷನ್ ಮಾರ್ಗದಲ್ಲಿ ಇದು ಸಾಗುತ್ತದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್ ನಡುವೆ ಹೈಸ್ಪೀಡ್ ರೈಲು ಹಳಿ ವ್ಯವಸ್ಥೆಯ ಒಂದು ಭಾಗವಾಗಿ ಈ ರೈಲು ಮಾರ್ಗ ಇದೆ.

ಟಿಕೆಟ್ ಕ್ಯಾನ್ಸಲೇಶನ್ ನಿಯಮ ಗಮನಿಸಿ….

ವಂದೇ ಭಾರತ್ ಸ್ಲೀಪರ್ ಟ್ರೈನ್​ಗಳಲ್ಲಿ ಟಿಕೆಟ್ ಕ್ಯಾನ್ಸಲೇಶನ್ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಟಿಕೆಟ್ ಕ್ಯಾನ್ಸಲ್ ಮಾಡಿದರೆ ಕನಿಷ್ಠವೆಂದರು ಶೇ. 25ರಷ್ಟು ಡಿಡಕ್ಷನ್ ಮಾಡಲಾಗುತ್ತದೆ. 72 ಗಂಟೆಗೂ ಹೆಚ್ಚು ಕಾಲ ಮುಂಚೆ ನೀವು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಶೇ. 25ರಷ್ಟು ಟಿಕೆಟ್ ಹಣ ಮುರಿದುಕೊಳ್ಳಲಾಗುತ್ತದೆ.

ಟ್ರೈನ್ ಹೊರಡುವ ಮುಂದಿನ 72 ಗಂಟೆಯಿಂದ 8 ಗಂಟೆವರೆಗೆ​ ಅವಧಿಯಲ್ಲಿ ಟಿಕೆಟ್ ರದ್ದುಗೊಳಿಸಿದರೆ ಶೇ. 50ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. ಟ್ರೈನ್ ಹೊರಡುವ 8 ಗಂಟೆ ಮುಂಚೆ ನೀವು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಯಾವುದೇ ರೀಫಂಡ್ ಇರುವುದಿಲ್ಲ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್

120 ಕಿಮೀ ವೇಗದಲ್ಲಿ ಹೋಗುವ ರೈಲು

ಈ ಟ್ರೈನ್ ಗಂಟೆಗೆ 180 ಕಿಮೀ ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿದೆ. ಆದರೆ, ಈಗಿರುವ ರೈಲು ಹಳಿ ವ್ಯವಸ್ಥೆಯಲ್ಲಿ ಇದು 120-130 ಕಿಮೀ ವೇಗದಲ್ಲಿ ಹೋಗಬಲ್ಲುದು. ಇದರ ಬರ್ತ್​ಗಳಲ್ಲಿ (ಸೀಟು) ವಿಶ್ವ ದರ್ಜೆಯ ಸಸ್ಪೆನ್ಸ್ ಸಿಸ್ಟಂ ಇದ್ದು, ಇದರ ಡಿಸೈನ್ ಕೂಡ ವಿಶೇಷವಾಗಿದೆ. ಕೂರಲು ಆರಾಮವಾಗಿರುವಂತೆ ವಿನ್ಯಾಸ ಮಾಡಲಾಗಿದೆ.

ವಂದೇ ಭಾರತ್​ನಲ್ಲಿ ಸ್ವಚ್ಛತೆ, ಸುರಕ್ಷತೆ

ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ ಹೊಸ ಹೊಸ ಸೋಂಕುನಿವಾರಕ ತಂತ್ರಜ್ಞಾನ ಹೊಂದಿದ್ದು, ಶೇ. 99ರಷ್ಟು ಸೂಕ್ಷ್ಮಜೀವಿಗಳನ್ನು ಕೊಲ್ಲಬಲ್ಲುದು. ಈ ಟ್ರೈನ್​ನಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಲಾಗಿದೆ.

ಇದನ್ನೂ ಓದಿ: ಗ್ರೀನ್​ಲ್ಯಾಂಡ್ ದಕ್ಕೋವರೆಗೂ ಅಮೆರಿಕದಿಂದ ಐರೋಪ್ಯ ರಾಷ್​ಟ್ರಗಳಿಗೂ ಟ್ರಂಪ್ ಟ್ಯಾರಿಫ್ ಧಮ್ಕಿ; ಭಾರತಕ್ಕೇನು ಪಾಠ?

ಈ ರೈಲಿನಲ್ಲಿ ಕವಚ್ ಎನ್ನುವ ಆಟೊಮ್ಯಾಟಿಕ್ ಪ್ರೊಟೆಕ್ಷನ್ ಸಿಸ್ಟಂ ಇರುತ್ತದೆ. ಇದರಲ್ಲಿ ಸ್ಲೈಡಿಂಗ್ ಡೋರ್ ಇದ್ದು, ನಿಲ್ದಾಣ ಬಂದಾಗ ಮಾತ್ರ ಇದು ತೆರೆಯುವಂತೆ ಪ್ರೋಗ್ರಾಮ್ ಮಾಡಲಾಗಿರುತ್ತದೆ.

ಹೌರಾದಿಂದ ಕಾಮಾಖ್ಯವರೆಗಿನ ಮಾರ್ಗದ ವಂದೇ ಭಾರತ್ ಸ್ಲೀಪರ್ ಟ್ರೈನ್​ನ ಟಿಕೆಟ್ ದರ 2,300 ರೂನಿಂದ 3,600 ರೂ ಇದೆ. ಪ್ರಯಾಣಿಕರಿಗೆ ಆಹಾರವೂ ಕೂಡ ಟಿಕೆಟ್ ದರದಲ್ಲೇ ಒಳಗೊಳ್​ಳಲಾಗುತ್ತದೆ. ಸ್ಥಳೀಯ ಶೈಲಿಯ ಆಹಾರವನ್ನು ಪ್ರಯಾಣಿಕರಿಗೆ ಒದಗಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link